Tag: ಬಿಗ್ ಬಾಸ್ ಕನ್ನಡ 8

  • ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

    ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

    ‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಬ್ರೋ ಗೌಡ (Shamanth Bro Gowda) ಅವರು ಇಂದು (ಮೇ 18) ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ಮೇಘನಾ (Meghana) ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಪ್ರೀತಿಸಿದ ಹುಡುಗಿ ಮೇಘನಾಗೆ ಖುಷಿ ಖುಷಿಯಾಗಿ ಶಮಂತ್ ತಾಳಿ ಕಟ್ಟುತ್ತಿರುವ ಫೋಟೋ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ನಿನ್ನೆ ರಾತ್ರಿ ನಡೆದ ಆರತಕ್ಷತೆಗೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್, ಬಿಗ್ ಬಾಸ್ ನವಾಜ್, ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ನಿಮ್ಮದು ಕೋಳಿ ಕಾಲುಗಳು- ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ

    ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.

    ‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

  • ‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ‘ಲಕ್ಷ್ಮಿ ಬಾರಮ್ಮ’ ನಟನ ಅದ್ಧೂರಿ ಆರತಕ್ಷತೆ- ಸಿನಿ ತಾರೆಯರು ಭಾಗಿ

    ‘ಲಕ್ಷ್ಮಿ ಬಾರಮ್ಮ’ (Lakshmi Baramma) ನಟ ಶಮಂತ್ ಗೌಡ (Shamanth Bro Gowda) ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸದ್ಯ ಬೆಂಗಳೂರಿನಲ್ಲಿ ನಟನ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ.

    ಭಾವಿ ಪತ್ನಿ ಮೇಘನಾ (Meghana) ಜೊತೆ ಶಮಂತ್ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಡ್ಯಾನ್ಸ್ ಮಾಡುತ್ತಲೇ ವೇದಿಕೆ ಏರಿದ್ದಾರೆ. ವಧು ಮೇಘನಾ ಗಿಳಿ ಹಸಿರು ಡ್ರೆಸ್‌ನಲ್ಲಿ ಮಿಂಚಿದ್ರೆ, ವರ ಶಮಂತ್ ಕಪ್ಪು ಬಣ್ಣದ ಸೂಟ್ ಧರಿಸಿದ್ದಾರೆ. ಇಬ್ಬರೂ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

    ಈ ಮದುವೆ ಆರತಕ್ಷತೆಗೆ ರ‍್ಯಾಪರ್ ಆಲ್ ಓಕೆ, ನಟಿ ಮೌನ ಗುಡ್ಡೆಮನೆ, ‘ಭಾಗ್ಯಲಕ್ಷ್ಮಿ’ ಸೀರಿಯಲ್ ಬಾಲನಟ ಗುಂಡಣ್ಣ ಅಲಿಯಾಸ್ ನಿಹಾರ್, ತನ್ವಿ ಅಲಿಯಾಸ್ ಅಮೃತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ಕಾಲೇಜ್ ಕಾರ್ಯಕ್ರಮವೊಂದರಲ್ಲಿ ಶಮಂತ್ ಗೆಸ್ಟ್ ಆಗಿ ಆಗಮಿಸಿದ್ದರು. ಅಲ್ಲಿ ಮೇಘನಾ ಪರಿಚಯ ಆಗಿತ್ತು. ಅಲ್ಲಿಂದ ಶುರುವಾದ ಸ್ನೇಹ ಮದುವೆಗೆ ಮುನ್ನುಡಿ ಬರೆದಿದೆ. ಮನೆಯವರ ಸಮ್ಮತಿ ಪಡೆದು ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

    ಶಮಂತ್ ಮೂಲತಃ ಉತ್ತರ ಕರ್ನಾಟಕದವರು. ಶಮಂತ್ ಹಿರೇಮಠ ಅವರ ಪೂರ್ಣ ಹೆಸರು. ಇನ್ನೂ ಮೇಘನಾ ಮರಾಠಿಗರು. ಹೀಗಾಗಿ ಎರಡು ರೀತಿಯ ಪದ್ಧತಿಯಂತೆ ಮದುವೆ ಶಾಸ್ತ್ರಗಳು ನಡೆಯಲಿದೆ.

    ‘ಬಿಗ್ ಬಾಸ್ ಕನ್ನಡ 8’ರಲ್ಲಿ ಶಮಂತ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಮಂಜು ಪಾವಗಡ ಗೆದ್ದಿದ್ದರು. ಈ ಕಾರ್ಯಕ್ರಮ ಬಳಿಕ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಶಮಂತ್ ಲೀಡ್ ಹೀರೋ ಆಗಿ ನಟಿಸಿದ್ದರು.

  • ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ ಮಂಜು ಪಾವಗಡ (Manju Pavagada) ಅವರು ಹುಟ್ಟುರಾದ ಪಾವಗಡದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ದಾಂಪತ್ಯ  (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಾವಗಡದಲ್ಲಿ ನ.13ರಂದು ನಂದಿನಿ- ಮಂಜು ಅವರ ಆರತಕ್ಷತೆ ಕಾರ್ಯಕ್ರಮ ಜರುಗಿತು. ಇಂದು (ನ.14) ಅದ್ಧೂರಿಯಾಗಿ ನಟ ಮದುವೆಯಾಗಿದ್ದಾರೆ. ಈ ಸಂಭ್ರಮದಲ್ಲಿ ಶುಭ ಪೂಂಜಾ, ಮಾನಸಾ, ರಾಘವೇಂದ್ರ, ಜಗ್ಗಪ್ಪ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.

  • ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ- ಮದುವೆ ಡೇಟ್‌ ಫಿಕ್ಸ್

    ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್’ ವಿನ್ನರ್ ಮಂಜು ಪಾವಗಡ- ಮದುವೆ ಡೇಟ್‌ ಫಿಕ್ಸ್

    ‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ (Bigg Boss Kannada 8) ಮಂಜು ಪಾವಗಡ (Manju Pavagada) ಅವರು ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.‌ ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು

    ನಟ ಮಂಜು ಪಾವಗಡ ಅವರು ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಜೊತೆ ಸದ್ದಿಲ್ಲದೇ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ನವೆಂಬರ್ 13 ಮತ್ತು 14ರಂದು ಪಾವಗಡದಲ್ಲಿ ಮದುವೆ ನಡೆಯಲಿದೆ.

    ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.

  • ‘ಸೀತಾರಾಮ’ ವೈಷ್ಣವಿ ಗ್ಲ್ಯಾಮರಸ್ ಫೋಟೋಶೂಟ್

    ‘ಸೀತಾರಾಮ’ ವೈಷ್ಣವಿ ಗ್ಲ್ಯಾಮರಸ್ ಫೋಟೋಶೂಟ್

    ‘ಸೀತಾರಾಮ’ (Seetharama) ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ (Vaishnavi Gowda) ಅವರು ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಸೀತಾ ನಯಾ ಅವತಾರ ಪಡ್ಡೆಹುಡುಗರಿಗೆ ಖುಷಿ ಕೊಟ್ಟಿದೆ.

    ನೆಕ್‌ಲೆಸ್ ಡ್ರೆಸ್‌ನಲ್ಲಿ ವೈಷ್ಣವಿ ಗೌಡ (Vaishnavi Gowda) ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ವೈಷ್ಣವಿ ಪೋಸ್ ನೀಡಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ.

    ಪ್ರಸ್ತುತ ‘ಸೀತಾರಾಮ’ ಸೀರಿಯಲ್‌ನಲ್ಲಿ ಸೀತಾ ಆಗಿ ಮನಗೆಲ್ಲುತ್ತಿದ್ದಾರೆ. ಸಿಹಿ, ರಾಮ್, ಸೀತಾ ಪಾತ್ರಗಳು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಧಾರಾವಾಹಿಗೆ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ:ವರ್ಮಾ ಆಫೀಸಿಗೆ ಮುತ್ತಿಗೆ: ವ್ಯೂಹಂ ಪೋಸ್ಟರ್ ಗೆ ಬೆಂಕಿ

    ಅಂದಹಾಗೆ ವೈಷ್ಣವಿ ಗೌಡ ಈ ಹಿಂದೆ ದೇವಿ, ಅಗ್ನಿಸಾಕ್ಷಿ (Agnisakshi) ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದರು. ನಟಿಸಿದ ಮೊದಲ 2 ಸೀರಿಯಲ್‌ಗಳು ಸೂಪರ್ ಹಿಟ್ ಆಗಿದೆ. ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Kannada 8) ಕೂಡ ವೈಷ್ಣವಿ ಸ್ಪರ್ಧಿಯಾಗಿದ್ದರು. ಫೈನಲಿಸ್ಟ್ ಆಗಿ ಇತರೆ ಸ್ಪರ್ಧಿಗಳಿಗೆ ಠಕ್ಕರ್ ನೀಡಿದ್ದರು.

    ಸದ್ಯ ‘ಸೀತಾರಾಮ’ (Seetharama) ಸೀರಿಯಲ್ ಜೊತೆ ವೈಷ್ಣವಿ ಗೌಡ (Vaishnavi Gowda) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಮಹಿರ’ ಡೈರೆಕ್ಟರ್ ಮಹೇಶ್ ಗೌಡ ಜೊತೆ ವೈಷ್ಣವಿ ಸಿನಿಮಾ ಮಾಡ್ತಿದ್ದಾರೆ. ಇದರ ಜೊತೆ ಒಂದಿಷ್ಟು ಸಿನಿಮಾಗಳು ಮಾತುಕತೆಯಲ್ಲಿದೆ.

  • ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ದಿವ್ಯಾ ಹುಟ್ಟುಹಬ್ಬಕ್ಕೆ ಅರವಿಂದ್ ಸ್ವೀಟ್ ಸರ್ಪ್ರೈಸ್‌

    ಬಿಗ್ ಬಾಸ್ ಸೀಸನ್ 8 ಮತ್ತು 9ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯಾ ಉರುಡುಗ (Divya Uruduga) ಹುಟ್ಟುಹಬ್ಬಕ್ಕೆ ಅರವಿಂದ್ ಕೆಪಿ ಸರ್ಪ್ರೈಸ್‌ ನೀಡಿದ್ದಾರೆ. ವಿಶೇಷವಾಗಿ ದಿವ್ಯಾ ಬರ್ತ್‌ಡೇ ಆಚರಿಸುವುದರ ಜೊತೆಗೆ ವಿಶೇಷ ಪೋಸ್ಟ್‌ವೊಂದನ್ನ ಅರವಿಂದ್ (Aravind Kp) ಶೇರ್ ಮಾಡಿದ್ದಾರೆ.

    ದೊಡ್ಮನೆಯ ಆಟ ಸೀಸನ್ 8ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರೇಮ ಪಕ್ಷಿಗಳಾಗಿ (Love Birds) ಹೈಲೈಟ್ ಆಗಿದ್ದರು. ಇತ್ತೀಚೆಗಷ್ಟೇ ಮದುವೆಯ ಬಗ್ಗೆ ಅರವಿಂದ್ ಸಿಹಿಸುದ್ದಿ ಕೊಟ್ಟಿದ್ದರು. ಈಗ ದಿವ್ಯಾಗೆ ಬಿಗ್ ಸರ್ಪ್ರೈಸ್‌‌ ಕೊಟ್ಟಿದ್ದಾರೆ. ಹುಟ್ಟುಹಬ್ಬಕ್ಕೆ (Birthday) ಗ್ರ್ಯಾಂಡ್ ಪಾರ್ಟಿ ಅರೆಂಜ್ ಮಾಡಿ, ದಿವ್ಯಾ ಅವರ ಆಪ್ತರನ್ನ ಕರೆದಿದ್ದಾರೆ. ಈ ಮೂಲಕ ಭಾವಿ ಪತ್ನಿಗೆ ಖುಷಿಪಡಿಸಿದ್ದಾರೆ. ಇಬ್ಬರು ಬ್ಲ್ಯಾಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: `ಪುಷ್ಪ 2′ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ರು ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Aravind K P (@aravind_kp)

    ಇನ್ನೂ ಅರವಿಂದ್ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮೂಲಕ ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕೃತಿ ನಡುವೆ ದೀಪಗಳು, ಇಂಪಾದ ಸಂಗೀತ, ಆಹಾರ, ಕುಟುಂಬ ಮತ್ತು ಸ್ನೇಹಿತರು ಇದು ನನ್ನ ಪರಿಪೂರ್ಣವಾದ ಹುಟ್ಟುಹಬ್ಬ ಅವಿ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

    ಇನ್ನೂ ಇಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಇತ್ತೀಚೆಗೆ ಅರವಿಂದ್ ರಿವೀಲ್ ಮಾಡಿದ್ದರು. ಸದ್ಯದಲ್ಲೇ ದಿವ್ಯಾ ಜೊತೆ ಮದುವೆಯಾಗುವುದಾಗಿ (Wedding) ಅರವಿಂದ್ ಸಿಹಿಸುದ್ದಿ ನೀಡಿದ್ದರು. ದಿವ್ಯಾ, ಅರವಿಂದ್ ನಟನೆಯ `ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾ ರಿಲೀಸ್ ನಂತರ ಮದುವೆಯ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈಷ್ಣವಿ ಮನೆಯಲ್ಲಿ ಎಲ್ಲರೂ ರೇಷ್ಮೆನಾ?- ಅಣ್ಣ, ಅತ್ತಿಗೆ ಹೇಳಿದ್ದೇನು?

    ವೈಷ್ಣವಿ ಮನೆಯಲ್ಲಿ ಎಲ್ಲರೂ ರೇಷ್ಮೆನಾ?- ಅಣ್ಣ, ಅತ್ತಿಗೆ ಹೇಳಿದ್ದೇನು?

    ಅಂತೂ ಇಂತು ಬಿಗ್ ಬಾಸ್ ಮನೆ ಇಂದಿಗೆ ಕ್ಲೋಸ್ ಆಗುತ್ತಿದ್ದು, ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಇದೇ ವೇಳೆ ಬಿಗ್ ಬಾಸ್ ಸೀಸನ್ 8ರ ಟಾಪ್ 4 ಕಂಟೆಸ್ಟ್ ಆಗಿ ಎಲಿಮಿನೇಟ್ ಆಗಿರುವ ವೈಷ್ಣವಿ ಗೌಡ ಕಿಚ್ಚ ಸುದೀಪ್ ಜೊತೆ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ವೈಷ್ಣವಿ ಮಾತನಾಡುವಾಗಲೇ ಕಿಚ್ಚ ಸುದೀಪ್ ರೇಷ್ಮೆ ಟಾಪಿಕ್ ತೆಗೆದಿದ್ದಾರೆ. ವೈಷ್ಣವಿ ಅವರೆ ಎಷ್ಟು ವರ್ಷದಿಂದ ಈ ಕಣ್ಣಿಗೆ ಕಾಣದ ರೇಷ್ಮೆ ಸೀರೆಯನ್ನು ಎತ್ಕೊಂಡು ಓಡಾಡುತ್ತಿದ್ದೀರಿ ತಾವು ಎಂದು ಸುದೀಪ್ ಕೇಳಿದ್ದಾರೆ. ಆಗ ಉತ್ತರಿಸಿದ ವೈಷ್ಣವಿ ನಿಜ ಹೇಳಬೇಕೆಂದರೆ ನನಗೆ ಆ ರೀತಿ ಮಾತನಾಡಲು ತುಂಬಾ ಖುಷಿ ಆಗುತ್ತದೆ. ಆದರೆ ಆ ರೀತಿ ಮಾತನಾಡಿದರೆ ಯಾರಿಗೂ ಅರ್ಥ ಆಗಲ್ಲ, ಕನೆಕ್ಟ್ ಆಗಲ್ಲ. ಆದರೆ ನಾನು ಮಾತ್ರ ಒಳಗೊಳಗೇ ಎಂಜಾಯ್ ಮಾಡುತ್ತಿರುತ್ತೇನೆ ಎಂದಿದ್ದಾರೆ.

    ಎಷ್ಟು ವರ್ಷದಿಂದ ಈ ರೀತಿ ಎಂದು ಮತ್ತೆ ಸುದೀಪ್ ಕೇಳಿದ್ದು, ಆರೇಳು ವರ್ಷದಿಂದ ಇದು ಆರಂಭವಾಗಿದೆ ಎಂದಿದ್ದಾರೆ. ಬಳಿಕ ಇದು ವಂಶವಾಹವೇ, ಡಿಎನ್‍ಎ ವಿಷಯವೇ ಅಥವಾ ನಿಮ್ಮಿಂದ ಆರಂಭವಾಗುತ್ತಿದೆಯೆ ಮನೆಯಲ್ಲಿ ಎಂದು ಕೇಳಿದ್ದಾರೆ. ಆಗ ನನ್ನಿಂದಿಲೇ ಆರಂಭವಾಗಿದೆ ಸರ್, ಮನೆಯಲ್ಲಿ ಎಲ್ಲರೂ ನೇರವಾಗಿ ಮಾತನಾಡುತ್ತಾರೆ. ಆ ತರ ರೇಷ್ಮೆ ಎಲ್ಲಾ ಇಲ್ಲ ಎಂದಿದ್ದಾರೆ.

    ಬಳಿಕ ಕಿಚ್ಚ ಸುದೀಪ್ ವೈಷ್ಣವಿ ಅವರ ಅಣ್ಣನ ಬಳಿ ಕೇಳಿದ್ದು, ಇಲ್ಲ ಸರ್, ಈ ರೀತಿ ಮಾತನಾಡುವುದಿಲ್ಲ ಅವರು, ಏನೇ ಸಲಹೆ ಕೊಡುವುದಿದ್ದರೂ ನೇರವಾಗಿಯೇ ಕೊಡುತ್ತಾರೆ. ಎನೇ ತಪ್ಪು ಎದ್ದರೂ ಆಗಲೇ ಹೇಳುತ್ತಾರೆ ಎಂದಿದ್ದಾರೆ. ಅಲ್ಲದೆ ರೇಷ್ಮೆ ಎಂಬ ಹೆಸರನ್ನು ಎಷ್ಟು ಒಪ್ಪುತ್ತೀರಿ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ಆಗ ಅವರಿಗೆ ಶೇ.100ರಷ್ಟು ಒಪ್ಪುತ್ತದೆ. ಬಿಗ್ ಬಾಸ್ ಮನೆಯಲ್ಲಿ ಅವರು ಅದೇ ರೀತಿ ವರ್ತಿಸಿದ್ದಾರೆ. ಇದೂ ನಿಜವಾಗಿಯೂ ಒಳ್ಳೆಯದು ಎಂದು ನನಗೆ ಅನ್ನಿಸಿತು. ಅವರು ನಡೆದುಕೊಳ್ಳುವುದಕ್ಕೂ ಹೆಸರಿಗೂ ತುಂಬಾ ಮ್ಯಾಚ್ ಆಗುತ್ತಿದೆ ಎಂದಿದ್ದಾರೆ.

    ವೈಷ್ಣವಿಗೆ ರೇಷ್ಮೆ ಹೆಸರು ಬಂದಿದ್ದು ಹೇಗೆ?
    ಬಿಗ್ ಬಾಸ್ ಮನೆಯಲ್ಲಿದ್ದಾಗ ತುಂಬಾ ನಯವಾಗಿ, ಒಗಟಾಗಿ, ಪರೋಕ್ಷವಾಗಿ ಮಾತನಾಡುತ್ತಿದ್ದಕ್ಕೆ ಸುದೀಪ್ ಅವರು ವೈಷ್ಣವಿಗೆ ರೇಷ್ಮೆ ಎಂದು ಹೆಸರಿಟ್ಟಿದ್ದರು. ಅಲ್ಲಿಂದ ಪ್ರತಿ ವಾರ ವೀಕೆಂಡ್‍ನಲ್ಲಿ ರೇಷ್ಮೆ ಎಂದು ವೀಷ್ಣವಿಗೆ ಸುದೀಪ್ ರೇಗಿಸುತ್ತಿದ್ದರು. ರೇಷ್ಮೆ ಸೀರೆಯಲ್ಲಿ ಕಲ್ಲು ಕಟ್ಟಿ ಹೊಡೆಯುತ್ತೀರಿ ಎಂದು ಹೇಳುತ್ತಿದ್ದರು. ಹೀಗೆ ಈ ಹೆಸರು ಸೀಸನ್ ಮುಗಿಯುವವರೆಗೂ ಮುಂದುವರಿಯಿತು.

  • ಕಾಮಿಡಿಯನ್‍ಗಿಂತ ನೀನು ವಿಲನ್ ಆಗು ಮಂಜಾ- ಪ್ರಶಾಂತ್ ಸಂಬರಗಿ ಸಲಹೆ

    ಕಾಮಿಡಿಯನ್‍ಗಿಂತ ನೀನು ವಿಲನ್ ಆಗು ಮಂಜಾ- ಪ್ರಶಾಂತ್ ಸಂಬರಗಿ ಸಲಹೆ

    ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿಗಳು ಮಾತ್ರ ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಫುಲ್ ಬಿಂದಾಸ್ ಆಗಿ ಮಾತನಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಹೀಗೆ ಮಾತನಾಡುವಾಗ ಮಂಜು ಪಾವಗಡ ಅವರ ಸಿನಿಮಾ ಕರಿಯರ್ ಬಗ್ಗೆ ಪ್ರಶಾಂತ್ ಸಂಬರಗಿ ಸಲಹೆಯೊಂದನ್ನು ನೀಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿರುವಾಗ ಪ್ರಶಾಂತ್ ಸಂಬರಗಿ ಮಂಜು ಪಾವಗಡಗೆ ಈ ಸಲಹೆ ನೀಡಿದ್ದು, ನೀನು ಕಾಮಿಡಿಯನ್ ಆಗುವ ಬದಲು ವಿಲನ್ ಆಗು ಮಂಜಾ ಎಂದು ಹೇಳಿದ್ದಾರೆ. ಮಂಜಾ ನೀನು ನೆಗೆಟಿವ್ ಶೇಡ್ ಮಾಡಬಹುದು, ಕಾಮಿಡಿಯನ್‍ಗಿಂತ ನಿನ್ನ ಲುಕ್ ನೆಗೆಟಿವ್ ಪಾತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಮಂಜು ಮಧ್ಯೆ ಪ್ರವೇಶಿಸಿ ನನಗೆ ತುಂಬಾ ಇಷ್ಟ ಸರ್ ಎಂದಿದ್ದಾರೆ.

    ವಿಶೇಷವಾಗಿ ಗ್ರಾಮೀಣ ಸೊಗಡಿನ ಕಥೆ ಹಾಗೂ ಟೌನ್ ಬ್ಯಾಕ್‍ಡ್ರಾಪ್ ಸ್ಟೋರಿಗಳಲ್ಲಿ ನೀನು ವಿಲನ್ ಪಾತ್ರ ಮಾಡಬಹುದು ಎಂದು ಪ್ರಶಾಂತ್ ಹೇಳಿದ್ದಾರೆ. ವಾಸ್ತವವೆಂದರೆ ನನಗೆ ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡಲು ತುಂಬಾ ಆಸೆ, ಅಂತಹದ್ದೇ ಪಾತ್ರಗಳನ್ನು ಮಾಡಬೇಕು ಸರ್, ಅದು ನನ್ನ ದೊಡ್ಡ ಕನಸು. ನನಗೆ ನೆಗೆಟಿವ್ ಕ್ಯಾರೆಕ್ಟರ್ ತುಂಬಾ ಇಷ್ಟ ಸರ್, ನಾನು ಇಂಡಸ್ಟ್ರಿಗೆ ಬಂದಿದ್ದೇ ಅದಕ್ಕಾಗಿ. ಬಂದ ತಕ್ಷಣ ಆಸೆ ಹುಟ್ಟಿದ್ದೇ ಅದು, ಹಾಗೇ ಆಗಬೇಕು ಎಂದುಕೊಂಡಿದ್ದೇನೆ ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ.

    ಸೆಟ್ ಆಗುತ್ತೆ ನೆಗೆಟಿವ್ ಶೇಡ್ ಟ್ರೈ ಮಾಡು ಎಂದು ಮತ್ತೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಹೌದು ಸರ್ ಮಾಡಬೇಕು ಎಂದು ಮಂಜು ಹೇಳಿದ್ದಾರೆ. ಈ ಮೂಲಕ ಮಂಜು ಪಾವಗಡ ತಮ್ಮ ಸಿನಿಮಾ ಕರಿಯರ್ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ.

  • ಅರ್ಧ ವರ್ಷ ಆಯ್ತು ನಾನು ನಿಮಗೆ ಸಿಕ್ಕಿ

    ಅರ್ಧ ವರ್ಷ ಆಯ್ತು ನಾನು ನಿಮಗೆ ಸಿಕ್ಕಿ

    ಬಿಗ್ ಬಾಸ್ ಮನೆಯ ಪ್ರಣಯ ಪಕ್ಷಿಗಳು ತಮ್ಮ ಮೊದಲ ಭೇಟಿಯನ್ನು ನೆನೆದಿದ್ದು, ಇಬ್ಬರೂ ಒಬ್ಬರಿಗೊಬ್ಬರು ಮಾತನಾಡಿಕೊಂಡಿದ್ದಾರೆ. ದೊಡ್ಮನೆಯಲ್ಲಿಯೇ ಈ ಜೋಡಿ ಮೊದಲ ಬಾರಿಗೆ ಭೇಟಿಯಾಗಿದ್ದು, ಇದೀಗ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಸ್ನೇಹ ಬೆಳೆದಿದೆ.

    ಗಾರ್ಡನ್ ಏರಿಯಾದಲ್ಲಿ ಕೂತಾಗ ಇಬ್ಬರೂ ಇದೇ ವಿಚಾರವಾಗಿ ಮಾತನಾಡಿಕೊಂಡಿದ್ದು, ದಿವ್ಯಾ ಉರುಡುಗ ಮಾತು ಆರಂಭಿಸಿ, ನಾವು ಸೇರಿ 6 ತಿಂಗಳಾಯಿತು. ಅಂದರೆ ನೀವು ನನಗೆ ಸಿಕ್ಕು ಅರ್ಧ ವರ್ಷ ಆಯಿತು ಎಂದು ಹೇಳಿದ್ದಾರೆ. ಬಳಿಕ ಅರವಿಂದ್ ತಿಂಗಳುಗಳನ್ನು ಲೆಕ್ಕ ಹಾಕಿದ್ದಾರೆ. ಇದು ಜುಲೈ ಅಲ್ವಾ, ನಾನಿನ್ನು ಜುಲೈನಲ್ಲೇ ಇದ್ದೇನೆ ಎಂದು ಅರವಿಂದ್ ಹೇಳಿದ್ದಾರೆ. ಆಗ ದಿವ್ಯಾ ಉರುಡುಗ ನಕ್ಕಿದ್ದಾರೆ.

    ಆಗಸ್ಟ್ ನಲ್ಲಿದ್ದೇವೆ ಆಯ್ತಾ, ಆದರೆ ನಾವು ಸಿಕ್ಕು 6 ತಿಂಗಳಾಯಿತು ಎಂದು ಅನ್ನಿಸುವುದೇ ಇಲ್ಲ ಅಲ್ವಾ? ಮೊನ್ನೆ ಸಿಕ್ಕಂಗಿದೆ ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಬಳಿಕ ತುಂಬಾ ಯೋಚನೆನಾ ಎಂದು ಅರವಿಂದ್ ಪ್ರಶ್ನಿಸಿದ್ದು, ದಿವ್ಯಾ ಭಾವುಕರಾಗಿದ್ದಾರೆ. ಆಗ ಅರವಿಂದ್ ಯಾಕೆ ದುಃಖ ಬರ್ತಿದೆ ಎಂದು ಕೇಳಿ, ದಿವ್ಯಾರ ಮಂಡಿ ಸವರಿದ್ದಾರೆ.

    ನಂತರ ಅರವಿಂದ್‍ಗೆ ದಿವ್ಯಾ ಉರುಡುಗ ಪ್ರಶ್ನೆಗಳನ್ನು ಕೇಳಿದ್ದು, ಈ ಮನೆಯಲ್ಲಿ ಆಲ್‍ಔಟ್ ಯಾರು ಎಂದಿದ್ದಾರೆ, ಸನ್ನೆ ಮೂಲಕ ಅರವಿಂದ್ ನೀನು ಎಂದಿದ್ದಾರೆ, ಸ್ಮಾರ್ಟ್ ಯಾರು ಎಂದು ಕೇಳಿದ್ದಾರೆ. ಅದಕ್ಕೂ ನೀನೇ ಎಂದು ಸನ್ನೆ ಮಾಡಿದ್ದಾರೆ. ಇಂಟಲಿಜೆಂಟ್, ಬ್ಯೂಟಿಫುಲ್, ಕ್ಯೂಟೆಸ್ಟ್ ಯಾರು ಎಂದು ಕೇಳಿದ್ದಾರೆ. ಇದಕ್ಕೂ ದಿವ್ಯಾ ಉರುಡುಗ ಅವರನ್ನು ತೋರಿಸಿದ್ದಾರೆ. ಬಳಿಕ ಈ ಮನೆಯಲ್ಲಿ ಬೈಕ್ ಓಡಿಸುವವರು ಯಾರೆಂದು ಕೇಳಿದಾಗ ನಾನೇ ಎಂದು ಅರವಿಂದ್ ಸನ್ನೆ ಮಾಡಿದ್ದಾರೆ. ಹೀಗೆ ಇಬ್ಬರ ನಡುವೆ ಪ್ರಶ್ನೋತ್ತರಗಳು ನಡೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿರುವಾಗಲೇ ಜೋಡಿ ಫುಲ್ ಮಾತುಕತೆಯಲ್ಲಿ ತೊಡಗಿದೆ.

  • ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

    ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

    ದೊಡ್ಮನೆಯಿಂದ ಈ ವಾರ ಮತ್ತೊಬ್ಬರು ಹೊರ ಹೋಗಿದ್ದು, ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಶಮಂತ್ ಬ್ರೋ ಗೌಡ ಎಲಿಮಿನೇಟ್ ಆಗಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ.

    ಹೌದು ಶಮಂತ್ ಬ್ರೋ ಗೌಡ ಅವರ ಬರಹ, ಕವನ ರಚನೆ, ತಾವು ಬರೆದ ಕವನವನ್ನು ಉಲ್ಟಾ ಓದುವುದು ಹೀಗೆ ತಮ್ಮ ವಿಭಿನ್ನ ಟ್ಯಾಲೆಂಟ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಎಲಿಮಿನೇಟ್ ಆಗಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದೆ. ಲಕ್ಕಿ ಬಾಯ್ ಎಂದೇ ಕರೆಸಿಕೊಂಡಿದ್ದ ಶಮಂತ್, ಫಿನಾಲೆ ವೀಕ್‍ಗೆ ಎಂಟ್ರಿ ಕೊಡುವ ಮುನ್ನವೇ ಮನೆಯಿಂದ ಹೊರ ನಡೆದಿದ್ದಾರೆ. ಈ ಮೂಲಕ ಮನೆಯಲ್ಲಿ ಸದಸ್ಯರ ಸಂಖ್ಯೆ ಆರಕ್ಕೆ ಇಳಿಕೆಯಾಗಿದೆ.

    ನಿನ್ನೆಯಷ್ಟೇ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದರು. ಇಂದು ಶಮಂತ್ ಬ್ರೋ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಈಗ ಸದ್ಯ ಮನೆಯಲ್ಲಿ ಕೆ.ಪಿ.ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.

    ಶಮಂತ್ ಮೊದಲ ಇನ್ನಿಂಗ್ಸ್ ನಲ್ಲೇ ಎಲಿಮಿನೇಟ್ ಆಗಿದ್ದರು. ಆದರೆ ಅದೃಷ್ಟವೆಂಬಂತೆ ಬಚಾವ್ ಆಗಿದ್ದರು. ಬಳಿಕ ರಘು ಅವರು ಶಮಂತ್ ಅವರನ್ನು ಸೇವ್ ಮಾಡಿದ್ದರು. ಹೀಗೆ ಅವರ ಅದೃಷ್ಟದ ಫಲವಾಗಿ ಇಲ್ಲಿವರೆಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಫಿನಾಲೆಗೆ ಇನ್ನೊಂದು ವಾರ ಇರುವಾಗ ಎಲಿಮಿನೇಟ್ ಆಗಿದ್ದಾರೆ.

    ತಮ್ಮ ವಿಭಿನ್ನ ಕವನಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಮಂತ್ ಬ್ರೋ ಗೌಡ, ಸಖತ್ ಆ್ಯಕ್ಟಿವ್ ಆಗಿದ್ದರು. ಟಾಸ್ಕ್ ಗಳನ್ನು ಸಹ ಅಷ್ಟೇ ಆ್ಯಕ್ಟಿವ್ ಆಗಿ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಶಮಂತ್ ರಚಿಸಿದ ಹಾಡುಗಳನ್ನು ಮೆಚ್ಚಿ ಬಿಗ್ ಬಾಸ್ ಬೆಳಗ್ಗೆ ಇವರ ಹಾಡುಗಳನ್ನು ಪ್ರಸಾರ ಮಾಡಿರುವುದೂ ಇದೆ. ಅಲ್ಲದೆ ಕವನವನ್ನು ಉಲ್ಟಾ ಓದುವ ಮೂಲಕ ಸಹ ಗಮನ ಸೆಳೆದಿದ್ದರು. ಆದರೆ ಈ ವಾರ ಅವರು ದೊಡ್ಮನೆಯಿಂದ ಹೊರ ನಡೆದಿದ್ದಾರೆ.