Tag: ಬಿಗ್ ಬಾಸ್ ಕನ್ನಡ-6

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸೋನು ಪಾಟೀಲ್

    ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸೋನು ಪಾಟೀಲ್

    ‘ಬಿಗ್ ಬಾಸ್’ ಕನ್ನಡ 6ರ ಸ್ಪರ್ಧಿ ಸೋನು ಪಾಟೀಲ್ (Sonu Patil) ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿ ಸೋನು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ‘ಬಿಗ್ ಬಾಸ್’ ಕನ್ನಡ ಶೋ ಮೂಲಕ ಕನ್ನಡಿಗರಿಗೆ ಪರಿಚಿತರಾದ ಸೋನು ಪಾಟೀಲ್ ಇದೀಗ ಸಂಕೇತ್ (Sanketh) ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಈ ಮದುವೆ ಜರುಗಿದೆ. ಇದನ್ನೂ ಓದಿ:ಶಿವರಾತ್ರಿಗೆ ರಿಲೀಸ್ ಆಗಲಿದೆ ‘ಕರಟಕ ದಮನಕ’ ಸಿನಿಮಾ

    ಸೋನು ಅವರ ಹುಡುಗ ಯಾರು? ಏನು ಮಾಡ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದ್ದಕ್ಕಿದಂತೆ ಮದುವೆಯ ಫೋಟೋ ಶೇರ್‌ ಮಾಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ.

    ಸೋನು ಗೌಡ ಅವರು ಮೊಗ್ಗಿನ ಮನಸ್ಸು, ಗಾಂಧಾರಿ, ಅಮೃತವರ್ಷಿಣಿ, ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಧರ್ಮಸ್ಯ, ಕೆಲವು ದಿನಗಳ ನಂತರ, ಗೋಸಿ ಗ್ಯಾಂಗ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

  • ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದ ‘ಬಿಗ್‌ ಬಾಸ್‌’ ವಿನ್ನರ್‌ – ಶಶಿಗೆ ಪೆಟ್ಟು

    ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಸ್ಕಿಡ್‌ ಆಗಿ ಕೆಳಗೆ ಬಿದ್ದ ‘ಬಿಗ್‌ ಬಾಸ್‌’ ವಿನ್ನರ್‌ – ಶಶಿಗೆ ಪೆಟ್ಟು

    ‘ಬಿಗ್ ಬಾಸ್’ ಸೀಸನ್ 6 (Bigg Boss Kannada 6) ವಿನ್ನರ್ ಶಶಿ ಅವರಿಗೆ ಪೆಟ್ಟಾಗಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಮೆಹಬೂಬಾ’ ಚಿತ್ರೀಕರಣದ ವೇಳೆ ಶಶಿ ಪೆಟ್ಟು ಮಾಡಿಕೊಂಡಿದ್ದಾರೆ. ಫೈಟ್‌ ಸೀನ್‌ನಲ್ಲಿ ಮಹಡಿ ಹತ್ತುವಾಗ ಶಶಿ ಸ್ಕಿಡ್‌ ಆಗಿ ಕೆಳಗೆ ಬಿದ್ದಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್‌ ಆತಂಕಗೊಂಡಿದ್ದಾರೆ. ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ಶೂಟಿಂಗ್ ಎಲ್ಲಿಯವರೆಗೆ ಬಂತು? ಸುದೀಪ್ ಕೊಟ್ರು ಗುಡ್ ನ್ಯೂಸ್

    ಮಾಡ್ರನ್ ರೈತ ಎಂದೇ ಫೇಮಸ್ ಆಗಿದ್ದ ‘ಬಿಗ್ ಬಾಸ್’ ಶಶಿ ಅವರು ತಮ್ಮ ಮುಂಬರುವ ಸಿನಿಮಾ ‘ಮೆಹಬೂಬಾ’ (Mehabooba) ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ರಿಸ್ಕಿ ಸೀನ್ಸ್ ಶೂಟ್ ಮಾಡುವಾಗ ಬಿದ್ದು ಶಶಿ ಏಟು ಮಾಡಿಕೊಂಡಿದ್ದಾರೆ. ಸೂಕ್ತ ಚಿಕಿತ್ಸೆಯ ಬಳಿಕ ಶಶಿ ಇದೀಗ ಚೇತರಿಕೊಳ್ಳುತ್ತಿದ್ದಾರೆ.

    ಕಳೆದ ಸೀಸನ್ 6 ಬಿಗ್ ಬಾಸ್ ಶೋನಲ್ಲಿ ವಿಜೇತರಾಗಿದ್ದ ಶಶಿ ಕೃಷಿ ಮತ್ತು ಸಿನಿಮಾರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೊಂಬೆಗಳ ಲವ್’ ಖ್ಯಾತಿಯ ಪಾವನಾ ಜೊತೆ ‘ಮೆಹಬೂಬಾ’ ಎಂಬ ಲವ್‌ಸ್ಟೋರಿ ಹೇಳಲು ಶಶಿ ರೆಡಿಯಾಗಿದ್ದಾರೆ. ಸದ್ಯದಲ್ಲೇ ಚಿತ್ರದ ರಿಲೀಸ್ ಬಗ್ಗೆ ಅಪ್‌ಡೇಟ್ ಸಿಗಲಿದೆ.

  • `ಬಿಗ್ ಬಾಸ್ ಕನ್ನಡ -6’ನೇ ಆವೃತ್ತಿಯ ಪ್ರೋಮೋ ಶೂಟ್

    `ಬಿಗ್ ಬಾಸ್ ಕನ್ನಡ -6’ನೇ ಆವೃತ್ತಿಯ ಪ್ರೋಮೋ ಶೂಟ್

    ಬೆಂಗಳೂರು: ‘ಬಿಗ್ ಬಾಸ್ ಕನ್ನಡ 6’ನೇ ಆವೃತ್ತಿಗಾಗಿ ನಟ ಸುದೀಪ್ ಅವರ ಪ್ರೋಮೋ ಶೂಟ್ ಸದ್ದಿಲ್ಲದೆ ನಡೆದಿದೆ.

    ಬಿಗ್ ಬಾಸ್ ರಿಯಾಲಿಟಿ ಶೋ ಈಗಾಗಲೇ ಸಾಕಷ್ಟು ಜನಪ್ರಿಯತೆ ಕಂಡುಕೊಂಡಿದೆ. ಅದರಲ್ಲೂ ಕಳೆದ ಸೀಸನ್ ನಲ್ಲಿ ಜನ ಸಾಮಾನ್ಯರಿಗೂ ಅವಕಾಶ ಕೊಟ್ಟಿದ್ದರಿಂದ ಸಾಕಷ್ಟು ಮಂದಿ 6 ಸೀಸನ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಆರಂಭವಾಗಿದೆ.

    ಬಿಗ್ ಬಾಸ್ ಮನೆಯೊಳಗೆ ಹೋಗಲು ಇಚ್ಚಿಸುವವರು ವೂಟ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಆಡಿಷನ್ ಕಾರ್ಯ ನಡೆಯುತ್ತಿದೆ. ಈ ವೇಳೆ ಸುದೀಪ್ ಅವರ `ಬಿಗ್ ಬಾಸ್ ಕನ್ನಡ-6′ ನ ಪ್ರೋಮೋ ಶೂಟ್ ಮಾಡಿ ಮುಗಿಸಿದ್ದಾರೆ.

    ಈ ಶೂಟಿಂಗ್ ಭಾನುವಾರ ನಡೆದಿದ್ದು, ಪ್ರೋಮೋ ಶೂಟ್ ಆಗಿ ವಿಶೇಷವಾಗಿ ಸೆಟ್ ನಿರ್ಮಾಣ ಮಾಡಲಾಗಿದೆ. ಅಲ್ಲಿ ಸೋಫಾ ಮೇಲೆ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಜಾಕೆಟ್ ಧರಿಸಿ ಸುದೀಪ್ ಕುಳಿತುಕೊಂಡು ಫೋನ್ ಮತ್ತು ವೂಟ್ ಆ್ಯಪ್ ಬಗ್ಗೆ ಮಾತನಾಡಿದ್ದಾರೆ. ಪ್ರೋಮೋ ಶೂಟ್ ನಲ್ಲಿ ಸುದೀಪ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    ಮೆಸೇಜ್ ಗೆ, ಸೋಷಿಯಲ್ ಮೀಡಿಯಾಗೆ, ಫೋಟೋ ತೆಗೆಯೋಕೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗೂ ಫೋನ್, ಹೀಗೆ ಇಡೀ ಲೈಫ್ ಫೋನಿನಲ್ಲಿ ಇರಬೇಕಾದರೆ, ಬಿಗ್ ಬಾಸ್ ಫೋನ್ ನಲ್ಲಿ ಇಲ್ಲ ಅಂದ್ರೆ…. ಈಗಲೇ ವೂಟ್ ಡೌನ್ ಲೋಡ್ ಮಾಡಿಕೊಳ್ಳಿ, ಬಿಗ್ ಬಾಸ್ ನೋಡಿ….ವೂಟ್ ನಲ್ಲಿ ನೋಡಿಲ್ಲ ಅಂದ್ರೆ ನೀವು ಬಿಗ್ ಬಾಸೇ ನೋಡಿಲ್ಲ ಎಂಬ ಡೈಲಾಗನ್ನು ಸುದೀಪ್ ಹೇಳಿದ್ದಾರೆ.

    `ಬಿಗ್ ಬಾಸ್ ಕನ್ನಡ-6′ ಸೆಪ್ಟೆಂಬರ್ ಅಂತ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ ಸಿಟಿಯಲ್ಲಿ ಬಿಗ್ ಬಾಸ್ ಗಾಗಿ ಬೃಹತ್ ಮನೆ ನಿರ್ಮಾಣ ವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv