Tag: ಬಿಗ್‌ ಬಾಸ್‌ ಕನ್ನಡ 5

  • ಚಂದನ್‌ಗೆ ನಿವೇದಿತಾ ಜೀವನಾಂಶ ಕೇಳಿದ್ರಾ? ಕೊನೆಗೂ ಹೊರಬಿತ್ತು ಅಸಲಿ ಸಂಗತಿ

    ಚಂದನ್‌ಗೆ ನಿವೇದಿತಾ ಜೀವನಾಂಶ ಕೇಳಿದ್ರಾ? ಕೊನೆಗೂ ಹೊರಬಿತ್ತು ಅಸಲಿ ಸಂಗತಿ

    ಸ್ಯಾಂಡಲ್ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಡಿವೋರ್ಸ್ (Divorce) ಪಡೆದು ದೂರ ದೂರ ಆಗಿದ್ದಾರೆ. ಈ ಬೆನ್ನಲ್ಲೇ ಜೋಡಿಯ ಬಗ್ಗೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಸದ್ಯ ಚಂದನ್ ಶೆಟ್ಟಿಯಿಂದ ನಿವೇದಿತಾ ಗೌಡ ಜೀವನಾಂಶ ಪಡೆದ್ರಾ? ಎಂಬುದರ ಬಗ್ಗೆ ಚಂದನ್ ಅವರ ಲಾಯರ್‌ ಅನಿತಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಮೊದಲ ಟಿಕೇಟ್ ‘ಕಿಚ್ಚ’ನಿಗೆ

    ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರೂ ವೃತ್ತಿಜೀವನದಲ್ಲಿ ಬಿಜಿಯಾಗಿದ್ದಾರೆ. ಹೀಗಾಗಿ, ಯಾರೂ ಜೀವನಾಂಶ ಕೇಳಿಲ್ಲ. ತುಂಬಾ ಗೌರವಯುತವಾಗಿ ದಾಂಪತ್ಯ ಜೀವನದಿಂದ ಇಬ್ಬರೂ ಹೊರಗೆ ಬಂದಿದ್ದಾರೆ. ಇಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ತುಂಬಾ ಗೌರವ ಇದೆ ಎಂದು ಮಾಧ್ಯಮಗಳ ಮುಂದೆ ಲಾಯರ್ ಅನಿತಾ ಹೇಳಿದ್ದಾರೆ. ಡಿವೋರ್ಸ್ ಪ್ರಕ್ರಿಯೆ ವೇಳೆ, ಪತಿಯಿಂದ ಪತ್ನಿ ಜೀವನಾಂಶ ಕೇಳುವುದು ಸಾಮಾನ್ಯ. ಆದರೆ, ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ಗೌಡ ಜೀವನಾಂಶ ಕೇಳಿಲ್ಲ. ಹಾಗಂತ ಲಾಯರ್ ಅನಿತಾ (Lawyer Anitha) ಖಚಿತ ಪಡಿಸಿದ್ದಾರೆ.

    ಇನ್ನೂ ಒಂದು ವರ್ಷದ ಹಿಂದೆಯೇ ವಿಚ್ಛೇದನದ ಬಗ್ಗೆ ನಿವೇದಿತಾ ಮತ್ತು ಚಂದನ್ ಶೆಟ್ಟಿ ತೀರ್ಮಾನ ಮಾಡಿದ್ದರು. ಇಬ್ಬರ ಪೋಷಕರೂ ಇಬ್ಬರನ್ನೂ ಒಂದು ಮಾಡಲು ಪ್ರಯತ್ನಿಸಿದ್ದರು. ಆದರೆ, ರಾಜಿ ಸಂಧಾನ ಸಾಧ್ಯವಾಗಿಲ್ಲ ಎಂದು ಕೂಡ ಲಾಯರ್ ಅನಿತಾ ತಿಳಿಸಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ (Bigg Boss Kannada 5) ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

  • ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಬಗ್ಗೆ ರಾಗಿಣಿ ರಿಯಾಕ್ಷನ್

    ಚಂದನ್ ಶೆಟ್ಟಿ, ನಿವೇದಿತಾ ಡಿವೋರ್ಸ್ ಬಗ್ಗೆ ರಾಗಿಣಿ ರಿಯಾಕ್ಷನ್

    ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಡಿವೋರ್ಸ್ ಘೋಷಿಸುವ ಮೂಲಕ ಫ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಹೀಗಿರುವಾಗ ಚಂದನ್ ಮತ್ತು ನಿವೇದಿತಾ ವಿಚ್ಛೇದನದ ಬಗ್ಗೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮೃಣಾಲ್‌ಗೆ ಬೇಡಿಕೆ- ತಮಿಳಿನತ್ತ ‘ಸೀತಾರಾಮಂ’ ನಟಿ

    ಚಂದನ್ ಮತ್ತು ನಿವೇದಿತಾ ಕಾನೂನು ಬದ್ಧವಾಗಿ ಡಿವೋರ್ಸ್ ಪಡೆದ ಬೆನ್ನಲ್ಲೇ ರಾಗಿಣಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ವೈಯಕ್ತಿಕ ವಿಚಾರಕ್ಕೆ ನಾನು ಕಾಮೆಂಟ್ ಮಾಡಲ್ಲ. ಲೈಫ್ ಇಸ್ ನಾಟ್ ಈಸಿ ಜೀವನದಲ್ಲಿ ಏರಿಳಿತಗಳು ಇರುತ್ತವೆ. ನಾವೇನು ಕಾಂಟ್ರುಬ್ಯೂಟ್ ಮಾಡದೇ ಹೋದರೆ ನಾವೇನು ಕಾಮೆಂಟ್ ಮಾಡೋಕೆ ಹೋಗಬಾರದು ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ‘ಬಿಗ್ ಬಾಸ್ ಕನ್ನಡ ಸೀಸನ್ 5’ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

  • ಡಿವೋರ್ಸ್ ಬಳಿಕ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ

    ಡಿವೋರ್ಸ್ ಬಳಿಕ ಗೂಗಲ್ ಟಾಪ್ ಟ್ರೆಂಡಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ

    ಸ್ಯಾಂಡಲ್‌ವುಡ್‌ನ ಜೋಡಿಹಕ್ಕಿಗಳಾಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಜೂನ್ 7ರಂದು ಕಾನೂನು ಬದ್ಧವಾಗಿ (Divorce) ಪರಸ್ಪರ ಒಪ್ಪಿಗೆಯ ಮೇರೆಗೆ ಬೇರೆಯಾಗಿದ್ದಾರೆ. ಈ ವಿಚಾರ ಫ್ಯಾನ್ಸ್‌ಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಚಂದನ್‌ ಮತ್ತು ನಿವೇದಿತಾ ದಿಢೀರ್ ಡಿವೋರ್ಸ್ ಬಳಿಕ ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ‘ಕ್ಯಾಂಡಿ ಕ್ರಶ್’ ಸಿನಿಮಾದಲ್ಲಿ ಚಂದನ್, ನಿವೇದಿತಾ ನಟಿಸುತ್ತಾರಾ?

    ಪ್ರೀತಿಸಿ ಮದುವೆಯಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿಯು ಯಾವ ವಿಚಾರಕ್ಕೆ ಡಿವೋರ್ಸ್ ಪಡೆದಿದ್ದಾರೆ ಎಂಬುದು ಅನೇಕರಿಗೆ ಚಿಂತೆ ಶುರುವಾಗಿದೆ. ಅದಕ್ಕೆ ಕಾರಣವಾದ ಅಂಶಗಳು ಏನು ಎಂದು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಟ್ರೆಂಡಿಂಗ್‌ನಲ್ಲಿದ್ದಾರೆ.

    ಡಿವೋರ್ಸ್‌ ಘೋಷಣೆಯ ಬಳಿಕ ಜೂನ್ 7ರಿಂದ ಗೂಗಲ್‌ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಅವರನ್ನ ಇಂಟರ್‌ನೆಟ್‌ನಲ್ಲಿ ಜನ ಹೆಚ್ಚು ಹುಡುಕುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಕನ್ನಡಿಗರು, ಕರ್ನಾಟಕದವರು. ಹೀಗಾಗಿ, ಕರ್ನಾಟಕದಲ್ಲೇ ಇಬ್ಬರೂ ಟಾಪ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕರ್ನಾಟಕದಲ್ಲಿ ಶೇ.100ರಷ್ಟು ಇಂಟರ್‌ನೆಟ್ ಬಳಸುವ ಮಂದಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬಗ್ಗೆ ಹುಡುಕಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿವೇದಿತಾ ಗೌಡ, ಚಂದನ್ ಶೆಟ್ಟಿ, ಲವ್, ಡಿವೋರ್ಸ್, ಮದುವೆ ಬಗ್ಗೆ ಹೆಚ್ಚು ಸರ್ಚ್ ಆಗಿದೆ. ಈ ಮೂಲಕ ಇಬ್ಬರೂ ಟ್ರೆಂಡಿಂಗ್‌ನಲ್ಲಿದ್ದಾರೆ.


    ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ (Bigg Boss Kannada 5) ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ (Niveditha Gowda) ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.