‘ಬಿಗ್ ಬಾಸ್ ಕನ್ನಡ 10’ರ ಖ್ಯಾತಿಯ ವಿನಯ್ ಗೌಡ (Vinay Gowda) ಜೊತೆ ವೆಬ್ ಸೀರೀಸ್ ನಾಯಕಿಯಾಗಿ ಮೋಕ್ಷಿತಾ ನಟಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಧೃತಿ ಕ್ರಿಯೇಷನ್ಸ್‌ನಲ್ಲಿ ಇದನ್ನು ನಿರ್ಮಾಣ ಮಾಡುತ್ತಿದೆ. ಜೀ5 ಒಟಿಟಿಯಲ್ಲಿ ಇದು ಪ್ರಸಾರವಾಗಲಿದೆ.
‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಸಿನಿಮಾದಲ್ಲಿ ಮೋಕ್ಷಿತಾ ಪೈ ನಟಿಸುತ್ತಿದ್ದು, ಈ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಪ್ಪು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೋಕ್ಷಿತಾ ಪಾತ್ರವೇ ಚಿತ್ರದ ಹೈಲೆಟ್ ಆಗಿದ್ದು, ಈ ಸಿನಿಮಾ ರಿಲೀಸ್ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡುವ ನಿರೀಕ್ಷೆ ಇದೆ.
ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು ಎಂದ ಚೈತ್ರಾ ಕುಂದಾಪುರ
‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ (Chaithra Kundapura) ಮದುವೆ ಬಗ್ಗೆ ತಂದೆ ಬಾಲಕೃಷ್ಣ ನಾಯ್ಕ್ ಚಕಾರವೆತ್ತಿದ್ದಾರೆ. ಮದುವೆಗೆ ತನ್ನನ್ನು ಕರೆದಿಲ್ಲ ಮಾಧ್ಯಮದ ಮುಂದೆ ತಂದೆ ಕಿಡಿಕಾರಿದ್ದರು. ತಂದೆಯ ಆರೋಪಕ್ಕೆಲ್ಲಾ ಚೈತ್ರಾ ತಿರುಗೇಟು ನೀಡಿದ್ದಾರೆ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ ಎಂದು ಕುಡುಕ ತಂದೆಯ ಚಿತ್ರ ಹಿಂಸೆ ಎಂದು ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ
ಚೈತ್ರಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ ಅಂತ ಬರೆದುಕೊಳ್ಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ:ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು- ಮಗಳ ಮದುವೆಗೆ ತಂದೆ ಆಕ್ಷೇಪ
ಹೆತ್ತ ಮಗಳನ್ನು ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲ. ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡ್ತಿಗೆ ಹೊಡೆದು ಚಿತ್ರಹಿಂಸೆ ಮಾಡಿದ್ದು ಬಿಟ್ಟರೆ ಬೇರೆ ಏನು ಇಲ್ಲ. ಎಲ್ಲಾ ಮುಗಿದ್ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು ವಾವ್ ಎಂದು ತಂದೆಯ ವಾಗ್ದಾಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ ನೀಡಿದ್ದಾರೆ.
ಮೇ 9ರಂದು ಶ್ರೀಕಾಂತ್ ಜೊತೆ ಚೈತ್ರಾ ಅವರು ಕುಂದಾಪುರದಲ್ಲಿ ಹಸೆಮಣೆ ಏರಿದರು. 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ.
ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡ್ತಾಳೆ?- ತಂದೆ ಬಾಲಕೃಷ್ಣ ನಾಯ್ಕ್
ನನ್ನನ್ನು ಮನೆಯ ಜಗಲಿಯಲ್ಲಿ ಬಿಟ್ಟು ಬೀಗ ಹಾಕಿಕೊಂಡು ಬಿಗ್ ಬಾಸ್‌ಗೆ (Bigg Boss Kannada 11) ಹೋಗಿದ್ದಳು ಎಂದು ಚೈತ್ರಾ (Chaithra Kundapura) ಮತ್ತು ಪತ್ನಿಯ ವಿರುದ್ಧ ಬಾಲಕೃಷ್ಣ ನಾಯ್ಕ್ ಕಿಡಿಕಾರಿದ್ದಾರೆ. ತಂದೆಗೆ ಅನ್ನ ಹಾಕದವಳು ದೇಶ ಸೇವೆ ಏನು ಮಾಡುತ್ತಾಳೆ ಎಂದು ಚೈತ್ರಾ ತಂದೆ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ:ಚೈತ್ರ & ಆಕೆಯ ಪತಿ ಇಬ್ಬರೂ ಕಳ್ಳರು- ಮಗಳ ಮದುವೆಗೆ ತಂದೆ ಆಕ್ಷೇಪ
ಮಗಳು ಚೈತ್ರಾ ಬಗ್ಗೆ ತಂದೆ ಮಾತನಾಡಿ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆಯ ವಿಷಯವಾಗುತ್ತಿತ್ತು ಎಂದರು. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ಬಿಗ್ ಬಾಸ್‌ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ನಾನೇ ಅನಾಥನಾಗಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ
ಬಿಗ್ ಬಾಸ್ ವೇದಿಕೆಯಲ್ಲಿ ಎಲ್ಲಾ ಸತ್ಯ ಒಪ್ಪಿಕೊಳ್ಳಬಹುದಾಗಿತ್ತು. ನಾನೇ ಮನೆ ನಡೆಸುವವಳು ಎಂದು ಬಿಂಬಿಸಿಕೊಂಡಿದ್ದಾಳೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಈಕೆ ಹಣ ಹೊಡೆದಿರುತ್ತಾಳೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಪಡ್ಡೆ ಹುಡುಗರ ಹೆಸರಿನಲ್ಲೆಲ್ಲ ಡೆಪಾಸಿಟ್ ಮಾಡಿ ಬಾಂಡ್ ಮೇಲೆ ಸಾಲ ಪಡೆದಿದ್ದಳು. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ನನ್ನ ತಂದೆ ಬಾಲ ನಾಯ್ಕ್ ಗೌರವಾನ್ವಿತ ವ್ಯಕ್ತಿಯಾಗಿದ್ದರು. ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡುತ್ತಾಳೆ? ನನ್ನ ಹೆಂಡತಿಗೂ ಹಣ ಕೊಟ್ಟಿದ್ದಾಳೆ, ಅವಳಿಗೆ ಗಂಡ ಬೇಡ ಎಂದು ಪತ್ನಿ ವಿರುದ್ಧವು ಮಾತನಾಡಿದ್ದಾರೆ.
ಚೈತ್ರಾ ನನ್ನನ್ನು ಮದುವೆಗೆ ಆಹ್ವಾನಿಸಿಲ್ಲ, ನಾನು ಅವರ ವಿವಾಹ ಒಪ್ಪಲ್ಲ- ಬಾಲಕೃಷ್ಣ ನಾಯ್ಕ್
‘ಬಿಗ್ ಬಾಸ್’ ಖ್ಯಾತಿಯ ಚೈತ್ರ ಕುಂದಾಪುರ (Chiathra Kundapura) ಬಹುಕಾಲದ ಗೆಳೆಯ ಶ್ರೀಕಾಂತ್ (Srikanth) ಜೊತೆ ಮೇ 9ರಂದು ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ಚೈತ್ರಾ ವಿರುದ್ಧ ತಂದೆ ಬಾಲಕೃಷ್ಣ ನಾಯ್ಕ್ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ಮದುವೆಯನ್ನು ನಾನು ಒಪ್ಪಲು ಸಾಧ್ಯವಿಲ್ಲ. ನನ್ನನ್ನು ಮದುವೆಗೂ (Wedding) ಆಹ್ವಾನಿಸಿಲ್ಲ. ಆಕೆ ನನ್ನನ್ನು ಕರೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆಗೆ 20 ಕೋಟಿ ಸಂಭಾವನೆ!
ಮಗಳು ಚೈತ್ರಾ ಮದುವೆ ಬಗ್ಗೆ ತಂದೆ ಮಾತನಾಡಿ, ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ ಎಂದರು. ಉದ್ಯಮಿ ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆಯ ವಿಷಯವಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ
ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನನ್ನ ದೊಡ್ಡ ಮಗಳು ಗಾಯತ್ರಿ ನಿರಪರಾಧಿ. ನಾನು ಮತ್ತು ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕುತ್ತಿದ್ದೇವೆ. ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ಬಿಗ್ ಬಾಸ್‌ಗೆ ಹೋಗಿದ್ದಳು. ನಾನು ಕಟ್ಟಿದ ಮನೆಯಲ್ಲಿ ನಾನೇ ಅನಾಥನಾಗಿದ್ದೇನೆ ಎಂದು ನೊಂದು ನುಡಿದಿದ್ದಾರೆ.
ಆಕೆಗೆ ಯಾರು ದೊಡ್ಡ ಸ್ಥಾನಮಾನ ಕೊಡಬೇಡಿ. ತಂದೆಯನ್ನು ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ? ಆಕೆ ಸೈನಿಕರಿಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸ್ವಂತ ಹಣದಲ್ಲಿ ಕೊಟ್ಟಿದ್ದರೆ ಹೆಮ್ಮೆಯ ವಿಷಯ. ಮೋಸದ ಹಣದಲ್ಲಿ ಆಕೆ ಕೊಟ್ಟು ಪ್ರಯೋಜನ ಏನು? ಆಕೆಯ ಮದುವೆಯನ್ನು ನಾನು ಒಪ್ಪುವುದಿಲ್ಲ. ನನಗೆ ಸರಿಯಾಗಿ ಮದುವೆಗೆ ಆಮಂತ್ರಣ ಕೂಡ ನೀಡಿಲ್ಲ. ಚೈತ್ರ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳು. ನಾನು ಹೋಟೆಲ್‌ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ ಎಂದಿದ್ದಾರೆ.
ಚೈತ್ರ ಮತ್ತು ಆಕೆಯ ತಾಯಿ ಹಣಕ್ಕಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರಾ ಪತಿ ನಮ್ಮ ಮನೆಯಲ್ಲಿ ಇದ್ದವ, ಅವನು ಕೂಡ ಕಳ್ಳ. ನನ್ನ ಕುಟುಂಬದ ಮಾನ ಮರ್ಯಾದೆ ತೆಗೆದಿದ್ದಾರೆ. ನಾನು ಸತ್ಯ, ನ್ಯಾಯ, ಧರ್ಮದಲ್ಲಿರುವ ವ್ಯಕ್ತಿ. ನನ್ನ ದೊಡ್ಡ ಮಗಳು ಟೀಚರ್ ಆಗಿ, ಹೊಲಿಗೆ ಮಾಡಿಕೊಂಡು ಗೌರವಾನ್ವಿತ ರೀತಿಯಲ್ಲಿ ಬದುಕುತ್ತಿದ್ದಾಳೆ. ನನ್ನ ದೊಡ್ಡ ಮಗಳ ಮೇಲು ಚೈತ್ರ ಸುಳ್ಳು ಅಪವಾದ ಹಾಕಿದ್ದಳು ಎಂದು ಬೇಸರಿಸಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಎಲ್ಲಾ ಸತ್ಯ ಒಪ್ಪಿಕೊಳ್ಳಬಹುದಾಗಿತ್ತು. ನಾನೇ ಮನೆ ನಡೆಸುವವಳು ಎಂದು ಬಿಂಬಿಸಿಕೊಂಡಿದ್ದಾಳೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಈಕೆ ಹಣ ಹೊಡೆದಿರುತ್ತಾಳೆ. ಬೇರೆ ಬೇರೆ ಬ್ಯಾಂಕುಗಳಲ್ಲಿ ಡೆಪಾಸಿಟ್ ಇಟ್ಟಿದ್ದಳು. ಪಡ್ಡೆ ಹುಡುಗರ ಹೆಸರಿನಲ್ಲೆಲ್ಲ ಡೆಪಾಸಿಟ್ ಮಾಡಿ ಬಾಂಡ್ ಮೇಲೆ ಸಾಲ ಪಡೆದಿದ್ದಳು. ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ತಂದೆ ಇಲ್ಲದ ಮಗಳು ಎಂದು ಹೇಳಿಕೊಂಡು ಬರುತ್ತಾಳೆ. ನನ್ನ ತಂದೆ ಬಾಲ ನಾಯ್ಕ್ ಗೌರವಾನ್ವಿತ ವ್ಯಕ್ತಿಯಾಗಿದ್ದರು. ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡುತ್ತಾಳೆ? ನನ್ನ ಹೆಂಡತಿಗೂ ಹಣ ಕೊಟ್ಟಿದ್ದಾಳೆ, ಅವಳಿಗೆ ಗಂಡ ಬೇಡ ಎಂದಿದ್ದಾರೆ.
‘ಬಿಗ್ ಬಾಸ್’ ಬೆಡಗಿ ಗೌತಮಿ ಜಾಧವ್ (Gouthami Jadav) ದೊಡ್ಮನೆ ಆಟ ಮುಗಿದ್ಮೇಲೆ ಅದ್ಯಾವ ಪ್ರಾಜೆಕ್ಟ್ ಮೂಲಕ ಬರುತ್ತಾರೆ ಎಂದು ಕಾಯುತ್ತಿದ್ದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಲೇಡಿ ಪೊಲೀಸ್ ಆಫೀಸರ್ ಸಿಂಧೂರಿಯಾಗಿ ನಟಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್
‘ಸತ್ಯ’ ಸೀರಿಯಲ್, ‘ಬಿಗ್ ಬಾಸ್ ಕನ್ನಡ 11’ರ ಶೋ ಮುಗಿದ ಬಳಿಕ ಸಿನಿಮಾ ಅಥವಾ ಸೀರಿಯಲ್ ಬಗ್ಗೆ ಅಪ್‌ಡೇಟ್ ಸಿಕ್ಕಿರಲಿಲ್ಲ. ಈಗ ‘ಭಾರ್ಗವಿ LLB’ ಸೀರಿಯಲ್ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸೀರಿಯಲ್‌ನಲ್ಲಿ ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ನಾಯಕಿ ಭಾರ್ಗವಿಯ ರಕ್ಷಣೆಗೆ ಬರುವ ಸಿಂಧೂರಿ ಪಾತ್ರದಲ್ಲಿ ಗೌತಮಿ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ: ಟಾಲಿವುಡ್‌ನತ್ತ ನಟ- ‘ಪುಷ್ಪ 2’ ನಿರ್ಮಿಸಿದ್ದ ಸಂಸ್ಥೆ ಜೊತೆ ಕೈಜೋಡಿಸಿದ ಉಪೇಂದ್ರ
ಈ ಸೀರಿಯಲ್‌ನಲ್ಲಿ ಖಡಕ್ ಡೈಲಾಗ್ ಹೊಡೆಯುತ್ತಾ ಎಂಟ್ರಿ ಕೊಟ್ಟಿದ್ದಾರೆ. ನಾನು ಎಲ್ಲಿ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ ಎಂದು ಅವರು ವಿಲನ್‌ಗಳಿಗೆ ಸಖತ್ ಮಾಸ್ ಆಗಿ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಡೈಲಾಗ್ ಕೇಳಿದ್ರೆ ಅಭಿಮಾನಿಗಳಿಗೆ ‘ಸತ್ಯ’ ಸೀರಿಯಲ್‌ನ ಸತ್ಯಳ ಪಾತ್ರವನ್ನೇ ನೆನಪಿಸುವಂತೆ ಮಾಡಿದೆ. ಆದರೆ ಈ ಪಾತ್ರದಲ್ಲಿ ಅವರು ಸೀರೆಯಲ್ಲಿ ಮಿಂಚಿದ್ದಾರೆ. ಒಟ್ನಲ್ಲಿ ಗೌತಮಿ ಹೊಸ ಪಾತ್ರ, ಹೊಸ ಅವತಾರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
ಮೇ 9ರಂದು ನಡೆದ ಚೈತ್ರಾ ಮದುವೆಗೆ ಕಾರಣಾಂತರಗಳಿಂದ ಮಂಜು ಬರಲಾಗಿರಲಿಲ್ಲ. ಹೀಗಾಗಿ ನಿನ್ನೆ (ಮೇ 10) ಚೈತ್ರಾ ನಿವಾಸಕ್ಕೆ ಮಂಜು ಭೇಟಿ ನೀಡಿ ನವಜೋಡಿಗೆ ಶುಭಹಾರೈಸಿದ್ದಾರೆ. ಅದಷ್ಟೇ ಅಲ್ಲ, ಈ ಜೋಡಿಗೆ ವಿಶೇಷವಾದ ಗೋವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ:‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ
ದೊಡ್ಮನೆಯಲ್ಲಿ ಸದಾ ಮಂಜು ಮತ್ತು ಚೈತ್ರಾ ಕಿತ್ತಾಡುತ್ತಿದ್ದರು. ಈಗ ಮುನಿಸೆಲ್ಲಾ ಮರೆತು ಚೈತ್ರಾ ನಿವಾಸಕ್ಕೆ ಮಂಜು ತೆರಳಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಬಿಗ್ ಬಾಸ್ ಶೋ ಮುಗಿದ್ಮೇಲೆಯೂ ಕೋಪವನ್ನು ಮುಂದುವರೆಸದೇ ಸ್ನೇಹದಿಂದ ಇರೋದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೈತ್ರಾ ಮತ್ತು ಶ್ರೀಕಾಂತ್ 12 ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಸಮ್ಮತಿಯೊಂದಿಗೆ ಪ್ರೀತಿಸಿದ ಹುಡುಗನೊಂದಿಗೆ ಸರಳ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ವೈದಿಕ ಶಾಸ್ತçದಂತೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ಗೋಲ್ಡ್ ಸುರೇಶ್ ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದರು.
ಕಾಲೇಜಿನಲ್ಲಿ ಓದುತ್ತಿದ್ದಾಗ ಚೈತ್ರಾಗೆ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿತ್ತು. ಬಹುಕಾಲದ ಗೆಳೆಯನ ಜೊತೆ ಚೈತ್ರಾ ಮದುವೆಯಾಗಿದ್ದಾರೆ. ಆ್ಯನಿಮೇಷನ್ ಕೋರ್ಸ್ ಮಾಡಿರುವ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ.
ಮಾನಸ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ಇಂದು ಮದುವೆಯ ಮುದ್ರೆ ಒತ್ತಿದ್ದಾರೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಹೊನ್ನೇನಹಳ್ಳಿಯಲ್ಲಿ ರಂಜಿತ್ ಮದುವೆ ಜರುಗಿದೆ. ಈ ಜೋಡಿಗೆ ತುಕಾಲಿ ಸಂತೋಷ್ ಮತ್ತು ಮಾನಸಾ ದಂಪತಿ, ಗೋಲ್ಡ್ ಸುರೇಶ್, ಯಮುನಾ, ರಜತ್, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದಾರೆ.ಇದನ್ನೂ ಓದಿ:‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ
ಮಾನಸ ಗೌಡ ಅವರು ಫ್ಯಾಷನ್ ಸ್ಟುಡಿಯೋ ಹೊಂದಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪರಿಚಿತರಾದ ಮಾನಸ ಜೊತೆ ರಂಜಿತ್‌ಗೆ ಲವ್ ಆಗಿತ್ತು. ಇದೀಗ ಇಬ್ಬರ ಪ್ರೀತಿ ಮದುವೆಗೆ ಮುನ್ನುಡಿ ಬರೆದಿದೆ.
‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ (Chaithra Kundapura) ಇಂದು (ಮೇ 9) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ (Srikanth Kashyap) ಜೊತೆ ಹಸೆಮಣೆ ಏರಿದ್ದಾರೆ.ಇದನ್ನೂ ಓದಿ:Exclusive: ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಚೈತ್ರಾ ಕುಂದಾಪುರ
ಚೈತ್ರಾ ಮತ್ತು ಶ್ರೀಕಾಂತ್ 12 ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಸಮ್ಮತಿಯೊಂದಿಗೆ ಪ್ರೀತಿಸಿದ ಹುಡುಗನೊಂದಿಗೆ ಸರಳ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ (Rajath), ಗೋಲ್ಡ್ ಸುರೇಶ್ (Gold Suresh) ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:12 ವರ್ಷಗಳ ಪ್ರೀತಿ- ಮೇ 9ರಂದು ಚೈತ್ರಾ ಕುಂದಾಪುರ ಮದುವೆ
ಕಾಲೇಜಿನಲ್ಲಿ ಓದುತ್ತಿದ್ದಾಗ ಚೈತ್ರಾಗೆ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿತ್ತು. ಜಗಳದಿಂದ ಶುರುವಾದ ಸ್ನೇಹ ಈಗ ಮದುವೆಗೆ ಮುನ್ನುಡಿ ಬರೆದಿದೆ. ಆ್ಯನಿಮೇಷನ್ ಕೋರ್ಸ್ ಮಾಡಿರುವ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ.
ಇತ್ತೀಚೆಗೆ ‘ಮಜಾ ಟಾಕೀಸ್’ ಶೋಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧರ್ಮ ಕೀರ್ತಿರಾಜ್, ಅನುಷಾ ರೈ ಹಾಗೂ ಚೈತ್ರಾ ಎಂಟ್ರಿ ಕೊಟ್ಟಿದ್ದರು. ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಅಗಿದೆ ಎನ್ನುತ್ತಲೇ ಸೃಜನ್ ಲೋಕೇಶ್ ಮಾತು ಶುರು ಮಾಡಿದ್ದರು. ಚೈತ್ರಾಗೆ ಸೃಜನ್ ಲವ್ ಅಥವಾ ಅರೇಂಜ್ಡ್ ಮ್ಯಾರೇಜಾ ಎಂಬ ಪ್ರಶ್ನಿಸಿದ್ದರು. ಇದಕ್ಕೆ ಎರಡು ಎಂದು ಚೈತ್ರಾ ಉತ್ತರ ನೀಡಿದ್ದರು. ಈ ಮಧ್ಯೆ ಅವರದ್ದು 12 ವರ್ಷದ ಲವ್ ಸ್ಟೋರಿ ಎಂಬ ಅನುಷಾ ರೈ ಮಾತಿಗೆ, ಚೈತ್ರಾ ಯೆಸ್ ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಅನ್ನೋ ವಿಚಾರವನ್ನು ರಿವೀಲ್ ಮಾಡಿದ್ದರು.
‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ (Bigg Boss Kannada 11) ಚೈತ್ರಾ ಕುಂದಾಪುರ (Chaithra Kundapura) ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನೊಂದಿಗೆ ಹಸೆಮಣೆ (Wedding) ಏರಲು ರೆಡಿಯಾಗಿದ್ದಾರೆ. ಇದನ್ನು ಖುದ್ದು ‘ಪಬ್ಲಿಕ್ ಟಿವಿ’ಗೆ ಚೈತ್ರಾ ತಿಳಿಸಿದ್ದಾರೆ. ಇದನ್ನೂ ಓದಿ:ಯುದ್ಧವು ದೇಶದ ಖ್ಯಾತಿಗೆ ಒಳ್ಳೆಯದಲ್ಲ: ‘ಆಪರೇಷನ್ ಸಿಂಧೂರ’ ಬಗ್ಗೆ ಸಂಜನಾ ಗಲ್ರಾನಿ ಪೋಸ್ಟ್
ನಮ್ಮದು 12 ವರ್ಷಗಳ ಪ್ರೀತಿ. ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಪ್ರೀತಿಸಿದ ಹುಡುಗನೊಂದಿಗೆ ಮೇ 9ರಂದು ಕುಂದಾಪುರದಲ್ಲಿ ಮದುವೆ ಆಗುತ್ತಿದ್ದೇನೆ. ಈಗಾಗಲೇ ಮೆಹಂದಿ ಸೇರಿದಂತೆ ಮದುವೆ ಶಾಸ್ತ್ರಗಳು ಆರಂಭ ಆಗಿದೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನಿಸಿದ್ದೇವೆ. ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗುತ್ತಿದೆ. ವೈದಿಕ ಶಾಸ್ತ್ರದಂತೆ ಮದುವೆ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ ಚೈತ್ರಾ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ಇದುವರೆಗೂ ಮದುವೆಯಾಗುವ ಹುಡುಗನ ಫೋಟೋವನ್ನು ಚೈತ್ರಾ ರಿವೀಲ್ ಮಾಡಿಲ್ಲ. ಹೀಗಾಗಿ ಸಹಜವಾಗಿ ಫೈರ್ ಬ್ರ್ಯಾಂಡ್ ಚೈತ್ರಾ ಮದುವೆಯಾಗುತ್ತಿರುವ ವರ ಯಾರು ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಚೈತ್ರಾ ಅದ್ಯಾವಾಗ ರಿವೀಲ್ ಮಾಡ್ತಾರೆ ಎಂದು ಎದುರು ಮಾಡ್ತಿದ್ದಾರೆ.
ಇತ್ತೀಚೆಗೆ ‘ಮಜಾ ಟಾಕೀಸ್’ ಶೋಗೆ ಬಿಗ್ ಬಾಸ್ ಸ್ಪರ್ಧಿಗಳಾದ ಧರ್ಮ ಕೀರ್ತಿರಾಜ್, ಅನುಷಾ ರೈ ಹಾಗೂ ಚೈತ್ರಾ ಎಂಟ್ರಿ ಕೊಟ್ಟಿದ್ದರು. ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್ ಅಗಿದೆ ಎನ್ನುತ್ತಲೇ ಸೃಜನ್ ಲೋಕೇಶ್ ಮಾತು ಶುರು ಮಾಡಿದ್ದರು. ಚೈತ್ರಾಗೆ ಸೃಜನ್ ಲವ್ ಅಥವಾ ಅರೇಂಜ್ಡ್ ಮ್ಯಾರೇಜಾ ಎಂಬ ಪ್ರಶ್ನಿಸಿದ್ದರು. ಇದಕ್ಕೆ ಎರಡು ಎಂದು ಚೈತ್ರಾ ಉತ್ತರ ನೀಡಿದ್ದರು. ಈ ಮಧ್ಯೆ ಅವರದ್ದು 12 ವರ್ಷದ ಲವ್ ಸ್ಟೋರಿ ಎಂಬ ಅನುಷಾ ರೈ ಮಾತಿಗೆ, ಚೈತ್ರಾ ಯೆಸ್ ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಅನ್ನೋ ವಿಚಾರವನ್ನು ರಿವೀಲ್ ಮಾಡಿದ್ದರು.
‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಖ್ಯಾತಿಯ ಶೋಭಾ ಶೆಟ್ಟಿ (Shobha Shetty) ಮೊದಲ ವರ್ಷದ ಎಂಗೇಜ್‌ಮೆಂಟ್ ಆ್ಯನಿವರ್ಸರಿ ಸಂಭ್ರಮದಲ್ಲಿದ್ದಾರೆ. ಕಳೆದ ವರ್ಷ ಭಾವಿ ಪತಿಗೆ ರಿಂಗ್ ತೊಡಿಸಿದ ಫೋಟೋ ಶೇರ್ ಮಾಡಿ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ
ಇದೇ ದಿನಾಂಕ ಕಳೆದ ವರ್ಷ ಅವರು ಯಶವಂತ್ ರೆಡ್ಡಿ ಜೊತೆ ಶೋಭಾ ಎಂಗೇಜ್ ಆಗಿದ್ದರು. ಇಂದಿಗೆ ನಿಶ್ಚಿತಾರ್ಥವಾಗಿ ಒಂದು ವರ್ಷ ಕಳೆದಿದೆ. ಈ ಖುಷಿಯಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿ, ಹೇ ಪಾಪು ಮಾ, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವ. ನಾವು ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ. ಅಂತ್ಯವಿಲ್ಲದ ಪ್ರೀತಿ. ಮೊದಲ ವರ್ಷದ ನಿಶ್ಚಿತಾರ್ಥದ ವಾರ್ಷಿಕೋತ್ಸವದ ಶುಭಾಶಯಗಳು ಮೈ ಲವ್ ಎಂದು ಶೋಭಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಡಾ.ರಾಜ್ ಕುಮಾರ್ ಕನ್ನಡದ ಸಂಸ್ಕೃತಿಯ ಪ್ರತೀಕ – ಶಾಸಕ ರಿಜ್ವಾನ್ ಅರ್ಷದ್
ಮುದ್ದಾದ ಜೋಡಿ ಯಶವಂತ್ ರೆಡ್ಡಿ ಜೊತೆಗಿನ ಶೋಭಾ ಫೋಟೋ ನೋಡಿ ಫ್ಯಾನ್ಸ್ ಕೂಡ ಶುಭಕೋರಿದ್ದಾರೆ. ನೂರು ಕಾಲ ಜೊತೆಯಾಗಿ ಬಾಳಿ, ಮದುವೆ ಯಾವಾಗ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.
ಕಾರ್ತಿಕ ದೀಪಂ, ಹಲವು ಶಾರ್ಟ್ ಫಿಲ್ಮ್ಂಗಳಲ್ಲಿ ಶೋಭಾ ಮತ್ತು ಯಶವಂತ್ ರೆಡ್ಡಿ ಜೊತೆಯಾಗಿ ನಟಿಸಿದ್ದಾರೆ. ಈ ಸ್ನೇಹವೇ ಪ್ರೀತಿಗೆ ತಿರುಗಿದೆ. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಸಮ್ಮತಿಯೂ ಇದೆ. ಸದ್ಯದಲ್ಲೇ ಈ ಜೋಡಿ ಕಡೆಯಿಂದ ಮದುವೆ ಡೇಟ್ ಬಗ್ಗೆ ಅಪ್‌ಡೇಟ್ ಸಿಗಲಿದೆ.