Tag: ಬಿಗ್ ಬಾಸ್ ಕನ್ನಡ

  • BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    ಬಿಗ್‌ಬಾಸ್ ಮನೆಯ ರೆಬೆಲ್ ಕಂಟೆಸ್ಟೆಂಟ್‌ ಅಶ್ವಿನಿ ಗೌಡ (Ashwini Gowda) ಗಳಗಳನೆ ಅತ್ತಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವಮಾನ ಆಗ್ತಿದೆ. ಅದನ್ನ ಮರೆಯೋಕೆ ಸಾಧ್ಯವಿಲ್ಲ, ಮರೆತು ಮುಂದೆ ಹೋಗೋಕೂ ಸಾಧ್ಯವಿಲ್ಲ ಎಂದು ಬಿಕ್ಕಿದ್ದಾರೆ.

    ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಎಂದೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ತಿರಸ್ಕಾರ ಭಾವನೆ ಅನುಭವಿಸಿದ್ದಕ್ಕೆ ಬೇಸರದಿಂದ ಅತ್ತು ಕರೆದು ಗೋಳಾಡಿದ್ದಾರೆ.

    ಬಿಗ್‌ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನಡೆಯೋದಕ್ಕೆ ಘೋಷಣೆಯಾಗಿತ್ತು. ಆದರೆ ಈ ಟಾಸ್ಕ್‌ನಿಂದ ಒಬ್ಬ ಕಂಟೆಸ್ಟೆಂಟ್‌ನ್ನು ಕೈಬಿಡಲು ಸೂಚಿಸುವ ಅಧಿಕಾರವನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರೋ ಕಂಟೆಸ್ಟೆಂಟ್‌ಗಳಿಗೆ ನೀಡಲಾಗಿತ್ತು. ರಿಶಾ ಗೌಡ, ಸೂರಜ್ ಸಿಂಗ್ ಹಾಗೂ ಮ್ಯೂಟಂಟ್ ರಘು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಶ್ವಿನಿ ಗೌಡರನ್ನ ಟಾರ್ಗೆಟ್ ಮಾಡಿದ್ದಾರೆ.

    ʻಈಗಲೇ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಅಶ್ವಿನಿ ಗೌಡ ಕ್ಯಾಪ್ಟನ್ ಆಗ್ಬಿಟ್ರೆ ಉಳಿದ ಕಂಟೆಸ್ಟೆಂಟ್‌ಗಳಿಗೆ ಕಷ್ಟ ಆಗಬಹುದುʼ ಎಂಬ ಕಾರಣ ಕೊಟ್ಟು ಕ್ಯಾಪ್ಟೆನ್ಸಿ ಟಾಸ್ಕ್‌ನಕಿಂದ ಹೊರಗಿಟ್ಟಿದ್ದಾರೆ. ಈ ವಿರೋಧದಿಂದ ತೀವ್ರವಾಗಿ ಅಸಮಾಧಾನಗೊಂಡ ಅಶ್ವಿನಿ ನೊಂದು ಬಿಕ್ಕಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ʻಬಿಗ್‌ಬಾಸ್ ಮನೆಯಲ್ಲಿ ತಮಗೆ ಅವಮಾನ ಆಗುತ್ತಿದೆ. ಇದನ್ನ ಯಾವತ್ತೂ ಮರೆಯೋಕಾಗಲ್ಲ. ರೇಸ್‌ಗೆ ಬಿಡದಿದ್ದರೆ ಯಾವ್ ಕುದುರೆ ಸ್ಟ್ರಾಂಗ್‌ ಅಂತ ಹೇಗೆ ಡಿಸೈಡ್ ಮಾಡೋದುʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅಶ್ವಿನಿ.

    ಇದು ಮೊದಲ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಗಿದ್ದು ಇಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅಶ್ವಿನಿ ಆಸೆಯಾಗಿತ್ತು. ಇದ್ರಿಂದ ಬೇಸರವಾಗಿ ತಿರಸ್ಕಾರವನ್ನ ಮನಸ್ಸಿಗೆ ತೆಗೆದುಕೊಂಡು ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ.

  • ಅ.18, 19ಕ್ಕೆ ಬಿಗ್ ಬಾಸ್ ಕನ್ನಡ ಮಿಡ್ ಸೀಸನ್ ಫಿನಾಲೆ

    ಅ.18, 19ಕ್ಕೆ ಬಿಗ್ ಬಾಸ್ ಕನ್ನಡ ಮಿಡ್ ಸೀಸನ್ ಫಿನಾಲೆ

    ಬಿಗ್ ಬಾಸ್ ಕನ್ನಡ ಸೀಸನ್ 12, Expect The Unexpected ಎಂಬ ಥೀಮ್ ನಲ್ಲಿ ಅತ್ಯಂತ ರೋಚಕವಾಗಿ ಸಾಗುತ್ತಾ ಬಂದಿದೆ. ಈಗ ಇನ್ನೊಂದು ಅನಿರೀಕ್ಷಿತವನ್ನು ಕೊಡಲಿದೆ ಬಿಗ್ ಬಾಸ್! ಅದುವೇ ಮಿಡ್ ಸೀಸನ್ ಫಿನಾಲೆ.

    ಹೌದು. ಇದೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯಲಿದೆ. ಇದು ನಿರೀಕ್ಷೆಗೂ ಮೀರಿದ, ಕುತೂಹಲಕರ ತಿರುವುಗಳನ್ನು ತರಲಿದೆ.

    ಈ ಫಿನಾಲೆಯಲ್ಲಿ ಭಾರೀ `ಎಲಿಮಿನೇಷನ್’ ನಡೆಯಲಿದ್ದು, ಜೊತೆಗೆ ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯಲ್ಲಿ ಕಾಲಿಡುತ್ತಿದ್ದಾರೆ. ಇವರ ಆಗಮನದಿಂದ ಈಗಾಗಲೇ ಇರುವ ಸ್ಪರ್ಧಿಗಳ ಆಟಕ್ಕೆ ಹೊಸ ಉತ್ಸಾಹ ಮತ್ತು ತಿರುವು ಸಿಗಲಿದೆ. ಇದಲ್ಲದೆ, ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರೆಂದು ಘೋಷಿಸಲಾಗುವುದು ಮತ್ತು ಅವರಿಗೆ ಬಹುಮಾನ ಕೂಡಾ ನೀಡಲಾಗುತ್ತದೆ.

    ಈ ವಾರಾಂತ್ಯ ಪ್ರೇಕ್ಷಕರಿಗೆ ನೃತ್ಯ ಪ್ರದರ್ಶನ, ಹಾಸ್ಯಭರಿತ ಮಾತುಕತೆ ಹಾಗೂ ಅನಿರೀಕ್ಷಿತ ಸೆಲೆಬ್ರಿಟಿಗಳು ಕೂಡಾ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಅವರು ಮನೆಯಲ್ಲಿ ಆಟಗಳನ್ನು ಆಡುವುದಲ್ಲದೇ, ಸ್ಪರ್ಧಿಗಳೊಂದಿಗೆ ಬೆರೆಯುತ್ತಾ ಮರೆಯಲಾಗದ ಮನರಂಜನೆ ನೀಡಲಿದ್ದಾರಂತೆ. ಒಟ್ಟು 6 ಗಂಟೆಗಳ ಮನರಂಜನಾ ಸಂಭ್ರಮ ಇದಾಗಿದೆ. ಅಕ್ಟೋಬರ್ 18 ಮತ್ತು 19 ರಂದು ಕಲರ್ಸ್ ಕನ್ನಡದಲ್ಲಿ ರಾತ್ರಿ 8 ರಿಂದ 11 ಗಂಟೆಗಳವರೆಗೆ ಪ್ರಸಾರವಾಗುವ ಮಿಡ್ ಸೀಸನ್ ಫಿನಾಲೆ ಈಗಿನಿಂದಲೇ ಕುತೂಹಲ ಮೂಡಿಸಿದೆ.

  • ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್‌ ಬಾಸ್‌ ನಿಲ್ಲಲ್ಲ – ಮೌನ ಮುರಿದ ಕಿಚ್ಚ ಸುದೀಪ್‌

    ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್‌ ಬಾಸ್‌ ನಿಲ್ಲಲ್ಲ – ಮೌನ ಮುರಿದ ಕಿಚ್ಚ ಸುದೀಪ್‌

    – ಡಿಕೆ ಸಾಹೇಬ್ರು, ನಲಪಾಡ್‌ಗೆ ಧನ್ಯವಾದ ಎಂದ ಕಿಚ್ಚ

    ಜಾಲಿವುಡ್‌ ಸ್ಟುಡಿಯೋ ಮತ್ತೆ ತೆರೆಯಲು ಅನುಮತಿ ನೀಡಿದ ಬಳಿಕ ಬಿಗ್‌ ಬಾಸ್‌ ಶೂಟಿಂಗ್‌ ಮತ್ತೆ ಶುರುವಾಗಿದೆ. ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಎರಡನೇ ವಾರದ ಪಂಚಾಯಿತಿ ಇಂದು (ಅಕ್ಟೋಬರ್ 11) ನಡೆದಿದೆ. ಸುದೀಪ್ ಅವರು ಪ್ರತಿಬಾರಿಯಂತೆ ಈ ಬಾರಿಯೂ ಸಹ ಸ್ಪರ್ಧಿಗಳ ತಪ್ಪು-ಸರಿಗಳ ಪರಾಮರ್ಶೆ ಮಾಡಿದ್ರು. ಕಾಕ್ರೂಚ್ ಸುಧಿಗೆ ಕೊಟ್ಟಿದ್ದ ಅಸುರ ಟಾಸ್ಕ್​ ಬಗ್ಗೆ ಸುದೀಪ್ ಚರ್ಚೆ ಮಾಡಿದ್ರು.

    ಇದೇ ವೇಳೆ ವಿವಾದದ ಬಗ್ಗೆ ಕಿಚ್ಚ ಸುದೀಪ್‌ (Kichcha Sudeep) ಮೌನ ಮುರಿದು ಮಾತನಾಡಿದ್ರು. ಕನ್ನಡಿಗರ ಆಶೀರ್ವಾದ ಇರೋತನಕ ಬಿಗ್ ಬಾಸ್ ಸುಲಭವಾಗಿ ನಿಲ್ಲಲ್ಲ. ಇಲ್ಲಿ ಆಗಿದ್ದೇ ಬೇರೆ.. ಹೊರಗಡೆ ನಡಿತಾ ಇದ್ದಿದ್ದೆ ಬೇರೆ. ಇಲ್ಲಿ ನಡೆದಿರುವ ವಿಚಾರಕ್ಕೂ ಬಿಗ್‌ ಬಾಸ್‌ಗೂ, ಕಲರ್ಸ್‌ ಕನ್ನಡಕ್ಕೂ ಯಾವುದೇ ಸಂಬಂಧ ಇಲ್ಲ. ವಿವಾದ ಬಂದಿದ್ದು ನಾವು ಶೋ ನಡೆಸುತ್ತಿದ್ದ ಜಾಗದ್ದು. ಕೆಲವೊಮ್ಮೆ ಖಾಲಿ ಜಾಗಕ್ಕೆ ಒಂದು ಅಡ್ರೆಸ್‌ ಬೇಕಾಗುತ್ತೆ. ಆ ಅಡ್ರೆಸ್ಸೆ ಬಿಸ್‌ ಬಾಸ್‌ ಆಗಿ ಹೋಯ್ತು ಅಂತ ಕಿಚ್ಚ ಸ್ಪಷ್ಟನೆ ಕೊಟ್ರು.

    ಇಲ್ಲಿ ನಡೆದ ಘಟನೆಗೂ ಬಿಗ್‌ ಬಾಸ್‌ಶೋಗೂ ಯಾವುದೇ ಸಂಬಂಧ ಇಲ್ಲ. ಬಿಗ್ ಬಾಸ್ ಎಷ್ಟೋ ಜನಕ್ಕೆ ಅನ್ನಹಾಕಿದೆ, ದಾರಿದೀಪ ಆಗಿದೆ. ಅತಿದೊಡ್ಡ ಶೋ ಕೆಲವರ ಕಣ್ಣು ಕುಕ್ಕುತ್ತಾ ಇರುತ್ತೆ. ಖಾಲಿ ಜಾಗಕ್ಕೆ ಬಿಗ್ ಬಾಸ್ ಅನ್ನೋ ಹೆಸರಿಟ್ಟರೂ ಅದಕ್ಕೊಂದು ತೂಕ ಇದೆ ಎಂದು ಹೇಳಿದ್ರು.

    ಇಂತಹ ಸಂದರ್ಭದಲ್ಲಿ ಶೋ ಮತ್ತೆ ಶುರುವಾಗಲು ಕಾರಣರಾದ ಡಿಕೆ ಸಾಹೇಬ್ರಿಗೆ ಹಾಗೂ ನನ್ನ ಸ್ನೇಹಿತ ನಲಪಾಡ್‌ ಅವರಿಗೆ ಧನ್ಯವಾದ ಹೇಳಲೇಬೇಕು. ಹಾಗೆಯೇ ಸಪೋರ್ಟ್‌ ಮಾಡಿದ ಆಡಳಿತ ಮಂಡಳಿಯ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ರು.

  • ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್‌ನಲ್ಲಿ ಈ ವಾರ ಎಲಿಮಿನೇಷನ್ ಇರುತ್ತಾ?

    ಬಿಗ್ ಬಾಸ್ ಸೀಸನ್ 12 (Bigg Boss 12) ಎರಡನೇ ವಾರಕ್ಕೆ ಬಿಗ್ ಶಾಕ್‌ಗೆ ಒಳಗಾಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಗಕ್ಕೆ ಮಾಲಿನ್ಯ ನಿಯಂತ್ರ ಮಂಡಳಿಯಿಂದ ನೋಟಿಸ್ ನೀಡಿ ಬೀಗ ಜಡಿಯಲಾಗಿತ್ತು. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳನ್ನ ಎರಡು ದಿನಗಳ ಕಾಲ ಈಗಲ್‌ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ನಂತರ ಡಿಸಿಎಂ ಸೂಚನೆ ಮೆರೆಗೆ ಈಗ ಬಿಗ್ ಬಾಸ್ ಓಪನ್ ಆಗಿದೆ. ಆದರೆ ಶೋ ಶೂಟಿಂಗ್ ಪ್ರಾರಂಭ ಮಾಡಿಲ್ಲ.

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರಣದಿಂದ ಈ ವಾರದ ವೀಕೆಂಡ್ ಶೋ ಹೇಗಿರುತ್ತೆ? ಎಲಿಮಿನೇಷನ್ (Elimination) ಇರುತ್ತಾ? ಅಥವಾ ಎಲಿಮಿನೇಷನ್ ಪ್ರಕ್ರಿಯೆಯಿಂದ ನಾಮಿನೇಟ್ ಆದ ಸ್ಪರ್ಧಿಗಳು ಬಚಾವ್ ಆಗ್ತಾರಾ ಅನ್ನೋ ಕುತೂಹಲ ಮೂಡಿದೆ.

    ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್ ಹೊರ ಬಂದಿದ್ದರು. ಆದ್ರೆ ಬಿಗ್ ಬಾಸ್ ಮನೆಗೆ ಉಂಟಾದ ಈ ತೊಡಕುಗಳ ಮಧ್ಯೆ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗಿದೆ.

    ಆದರೆ ಈವರೆಗೂ ಬಿಗ್ ಬಾಸ್‌ನಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಬಿಗ್ ಬಾಸ್ ಮನೆ ಓಪನ್ ಆಗಿದೆ. ಒಳಗಡೆ ಇನ್ನೂ ಶೂಟಿಂಗ್ ಆರಂಭವಾಗಿಲ್ಲದ ಕಾರಣದಿಂದ ವೀಕೆಂಡ್ ಶೋ ಯಾವ ರೀತಿ ಇರುತ್ತೆ ಅನ್ನೋ ಪ್ರಶ್ನೆಗಳು ಎದುರಾಗಿವೆ. ಒಂದು ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಕ್ಕು ಶೂಟಿಂಗ್ ಶುರುವಾದ್ರೆ, ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಆಚೆ ಬರಲಿದ್ದಾರೆ ಕಾದು ನೋಡಬೇಕಿದೆ.

    ಸದ್ಯ ಒಂಟಿಗಳಲ್ಲಿ ಜಾಹ್ನವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ ನಾಮಿನೇಟ್ ಆಗಿದ್ರೆ, ಜಂಟಿಗಳ ಪೈಕಿ, ಸ್ಪಂದನಾ ಸೋಮಣ್ಣ-ಮಾಳು ನಿಪ್ಪನಾಳ, ಅಭಿಷೇಕ್-ಅಶ್ವಿನಿ ಎಸ್, ರಾಶಿಕಾ ಶೆಟ್ಟಿ-ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ.

  • ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ – ಲೀಗಲ್ ಆಕ್ಷನ್ ಬಗ್ಗೆ ಚರ್ಚೆ

    ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಆಟ ಶುರು ಮಾಡುವ ಹೊತ್ತಿಗೆ ಬಿಗ್ ಬಾಸ್‌ಗೆ ಶಾಕ್ ಕೊಟ್ಟಿದ್ದಾರೆ ಅಧಿಕಾರಿಗಳು. ಹೀಗಾಗಿ ಜಾಲಿವುಡ್ ಸ್ಟುಡಿಯೋ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ತಂಡ ಕೆಂಡಾಮಂಡಲವಾಗಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿ‌ ನೋಟೀಸ್ ಹಾಗೂ ಇತರೆ ವಿಚಾರಗಳನ್ನು ಗೌಪ್ಯವಾಗಿಟ್ಟಿರುವ ಜಾಲಿವುಡ್ ಆಡಳಿತ ಮಂಡಳಿ, ಎಲ್ಲಾ ಅನುಮತಿ ಇದೆ ಅಂತ ಸುಳ್ಳುಗಳನ್ನ ಹೇಳಿತ್ತು. ಇದರಿಂದ ಜಾಲಿವುಡ್ ತಂಡದ ವಿರುದ್ಧ ಬಿಗ್ ಬಾಸ್ ಆಡಳಿತ ಮಂಡಳಿ ಹರಿಹಾಯ್ದಿದೆ. ನಿನ್ನೆ ಜಾಲಿವುಡ್‌ಗೆ ಪೊಲೀಸ್ರು ಬರುವವರೆಗೂ ಗೌಪ್ಯತೆ ಕಾಪಾಡಿದ್ದ ಜಾಲಿವುಡ್, ಜಾಲಿವುಡ್ ಮ್ಯಾನೇಜ್ಮೆಂಟ್ ಎಡವಟ್ಟಿನಿಂದ 2 ದಿನ ಬಿಗ್ ಬಾಸ್ ಚಿತ್ರೀಕರಣ ಸ್ಥಗಿತವಾಗಿದೆ.

    ಈ ಎಲ್ಲಾ ಕಾರಣಗಳಿಂದ ಬಿಗ್ ಬಾಸ್ ಮುಂಬರುವ ಎಪಿಸೋಡ್ ಗಳಿಗೆ ತೊಂದರೆಯಾಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಬಿಗ್ ಬಾಸ್ ಗರಂ ಆಗಿದೆ. ಜಾಲಿವುಡ್ ಮ್ಯಾನೇಜ್ಮೆಂಟ್ ವಿರುದ್ಧ ಲೀಗಲ್ ಆಕ್ಷನ್ ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆಯಿತ್ತಿದೆ. ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಿಂದ ಹೊರ ತಂದಿರುವ ಕಾರಣ, ಎರಡು ವಾರದ ಪರಿಶ್ರಮ ವ್ಯರ್ಥವೆಂದು ಅಸಮಧಾನ ಹೊರಹಾಕಿದೆ ಬಿಗ್ ಬಾಸ್ ಆಯೋಜನಾ ಮಂಡಳಿ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.

  • ಬಿಗ್ ಬಾಸ್ ಸೀಸನ್-12ಗೆ ಆರಂಭದಲ್ಲೇ ವಿಘ್ನ – ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ

    ಬಿಗ್ ಬಾಸ್ ಸೀಸನ್-12ಗೆ ಆರಂಭದಲ್ಲೇ ವಿಘ್ನ – ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ

    – ಮಾಲೀನ್ಯ ನಿಯಂತ್ರಣ ಮಂಡಳಿಯಿಂದ ಆದೇಶ

    ರಾಮನಗರ: ಬಿಗ್ ಬಾಸ್ ಸೀಸನ್ 12ಕ್ಕೆ (BBK 12) ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರೋ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ (Jollywood Studios and Adventures) ಬಂದ್ ಮಾಡಲು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

    ಮಾಲೀನ್ಯ ನಿಯಂತ್ರಣ ಮಂಡಳಿ (Pollution Control Board) ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ಓಪನ್ ಮಾಡಿರೋ ಆರೋಪ ಕೇಳಿಬಂದಿದೆ. ಅಲ್ಲದೇ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯದ ನೀರನ್ನ ಪರಿಸರಕ್ಕೆ ಬಿಡುವ ಮೂಲಕ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನ ಉಲ್ಲಂಘನೆ ಮಾಡಿರೋ ಆರೋಪ ಕೂಟ ಕೇಳಿಬಂದಿದೆ.

    ಕರ್ನಾಟಕ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 31, ಕಾಯ್ದೆ 1983 ನಿಯಮ 20(ಎ) ಅನ್ವಯ ತಕ್ಷಣದಿಂದಲೇ ಸ್ಟುಡಿಯೋ ಬಂದ್ ಮಾಡಲು ಆದೇಶ ಹೊರಡಿಸಿದ್ದು, ಕೂಡಲೇ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ ಬಂದ್ ಮಾಡಸಿ ಕ್ರಮವಹಿಸಲು ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

    ಜೊತೆಗೆ ತಕ್ಷಣದಿಂದಲೇ ಮನರಂಜನಾ ಪಾರ್ಕ್‌ಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಬೆಸ್ಕಾಂಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ. ಬಿಗ್ ಬಾಸ್ ಸೀಸನ್ 12ರ ಶೂಟಿಂಗ್ ಸೆಟ್ ಕೂಡ ಜಾಲಿವುಡ್ ಸ್ಟುಡಿಯೋದಲ್ಲೇ ನಿರ್ಮಾಣ ಆಗಿರೋದ್ರಿಂದ ಬಿಗ್ ಬಾಸ್ ಶೂಟಿಂಗ್ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

  • ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

    ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

    ಹಲವಾರು ಸೀರಿಯಲ್‌ನಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆ ಮಾತಾಗಿರುವ ಮಂಜು ಭಾಷಿಣಿ ಇದೀಗ ಹೊಸ ಜರ್ನಿ ಆರಂಭಿಸಿದ್ದಾರೆ.

    ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿ ಎಂಟ್ರಿಕೊಡುತ್ತಿದ್ದಾರೆ ಮಂಜು ಭಾಷಿಣಿ. ಈ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಗೆ ಎಂಟ್ರಿಕೊಡುವ ಬಗ್ಗೆ ಸ್ವತಃ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಬಿಗ್‌ಬಾಸ್ ಸೀಸನ್-12 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಒಬ್ಬೊಬ್ಬರಾಗಿ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿಕೊಡುತ್ತಿದ್ದಾರೆ. ಈ ದಿನ ಸಂಜೆ ಯಾರೆಲ್ಲ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧೆ ನೀಡಲಿದ್ದಾರೆ ಅನ್ನೋ ಕ್ಯೂರಿಯಾಸಿಟಿಗೆ ತೆರೆಬೀಳಲಿದೆ. ಅಲ್ಲಿಯವರೆಗೂ ಬಿಗ್‌ಬಾಸ್ ಹೌಸ್‌ನಿಂದ ಬರುವನ ಒಂದೊಂದೇ ಸುದ್ದಿಯನ್ನ ನೋಡಿ ಎಂಜಾಯ್ ಮಾಡುತ್ತಾ ಇರಿ.

    ಬಿಗ್‌ಬಾಸ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧೀ ಎಂಟ್ರಿಕೊಡುತ್ತಿದ್ದಾರೆ. ಮಾಸ್ಕ್ ಧರಿಸಿಕೊಂಡು ಪಬ್ಲಿಕ್‌ನಲ್ಲಿ ಓಪಿನಿಯನ್ ಪಡೆದುಕೊಂಡಿದ್ದ ಸುಧೀ ಮೊದಲ ಸ್ಪರ್ಧಿಯಾಗಿ ಗ್ರ್ಯಾಂಡ್‌ ಆಗಿ ಎಂಟ್ರಿಕೊಡ್ತಿದ್ದಾರೆ. ಇನ್ನು ಸುದೀಪ್ ಮೊದಲ ದಿನ ಯಾವ ರೀತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹೇಗೆ ಮಾತಾಡಲಿದ್ದಾರೆ ಅಂತಾ ನೋಡಲು ಕಾದು ಕುಳಿತಿದೆ ಅಭಿಮಾನಿ ವರ್ಗ.

  • ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಕಂಟೆಸ್ಟೆಂಟ್‌ ಯಾರ್ ಗೊತ್ತಾ? – ಇಲ್ಲಿದೆ ನೋಡಿ ಫೈನಲ್ ಲಿಸ್ಟ್

    ನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 (Bigg Boss 12) ಶುರು ಆಗೋಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರ್ ಹೋಗಬಹುದು ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯಲ್ಲಿ ಮೂಡಿ ಬರ್ತಿರುವ ಬಿಗ್ ಬಾಸ್ ಮನೆಗೆ ಹೋಗುವ ಕೆಲವರ ಸಂಭಾವ್ಯ ಪಟ್ಟಿ ಸದ್ಯಕ್ಕೆ ಲಭ್ಯವಾಗಿದೆ.

    ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಓಪನಿಂಗ್‌ಗೆ ಕೆಲವೇ ಗಂಟೆಗಳು ಬಾಕಿ ಇವೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗೋ 18 ಕಂಟೆಸ್ಟೆಂಟ್‌ಗಳು ಯಾರಿರಬಹುದು ಅನ್ನೋ ಕುತೂಹಲ ಮತ್ತಷ್ಟು ಜಾಸ್ತಿಯಾಗಿದೆ. ಇದನ್ನೂ ಓದಿ: ಬಿಗ್‌ ಬಾಸ್‌ ಪ್ರೋಮೋ ರಿಲೀಸ್‌ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್‌

    ಬಿಗ್ ಬಾಸ್ ಸೀಸನ್ 12 ಸಂಭಾವ್ಯ ಪಟ್ಟಿಯಲ್ಲಿ ಖಳನಟ ಕಾಕ್ರೋಚ್ ಸುಧೀ ಹೆಸರು ಕೇಳಿಬಂದಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ನಟ ಶ್ರೇಯಸ್ ಕೆ. ಮಂಜು, ನಿರೂಪಕಿ ಹಾಗೂ ನಟಿ ಜಾಹ್ನವಿ ಕಾರ್ತಿಕ್, ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಹಾಸ್ಯನಟ ಗಿಲ್ಲಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರಂತೆ. ಇನ್ನು ಮನದ ಕಡಲು ನಟಿ ರಾಶಿಕ ಶೆಟ್ಟಿ, ಕರವೇ ರಾಜ್ಯ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ, ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯ ಶೈವ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ನಟಿ ಸ್ಪಂದನ ಸೋಮಣ್ಣ, ಆರ್.ಜೆ. ಅಮಿತ್, ನಟಿ ಮೌನ ಗುಡ್ಡೆಮನೆ, ಡಾಗ್ ಸತೀಶ್, ಮಂಜು ಭಾಷಿಣಿ ಕಿರುತೆರೆ ನಟಿ ಇನ್ನು ಮುಂತಾದ ಹೆಸರುಗಳು ಕೇಳಿಬಂದಿವೆ. ಆದರೆ, ಇದು ಅಧಿಕೃತ ಪಟ್ಟಿಯಲ್ಲ. ಈ ಪಟ್ಟಿಯಲ್ಲಿರುವ ಹೆಸರುಗಳು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಅಧಿಕೃತವಾಗಿ ಘೋಷಣೆಗೆ ಇನ್ನು ಕೆಲವು ಗಂಟೆಗಳು ಕಾಯಬೇಕಿದೆ.

  • BBK 12 | ದೊಡ್ಮನೆಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ?

    BBK 12 | ದೊಡ್ಮನೆಗೆ ಹೋಗ್ತಾರಾ ನಟಿ ಮೇಘಾ ಶೆಟ್ಟಿ?

    ಬಿಗ್‌ಬಾಸ್ (Bigg Boss Kannada) ಸೀಸನ್ 12ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಸೆ.28ಕ್ಕೆ ಗ್ರ್ಯಾಂಡ್‌ ಓಪನಿಂಗ್ ಆಗಲಿರುವ ಈ ಬಾರಿಯ ಬಿಗ್‌ಬಾಸ್ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಬಿಗ್‌ಬಾಸ್ ಅನೌನ್ಸ್ ಆಗುವ ಮುಂಚೆಯಿಂದಲೇ ಸಾಕಷ್ಟು ಸೆಲಬ್ರಿಟಿಗಳು, ಯೂಟ್ಯೂಬರ್ಸ್‌, ಸೀರಿಯಲ್ ಕಲಾವಿದರ ಹೆಸರುಗಳು ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಆದ್ರೆ ಅಧಿಕೃತವಾಗಿ ಯಾವುದು ಪಕ್ಕಾ ಆಗಿಲ್ಲ. ಇದೇ ಪಟ್ಟಿಯಲ್ಲಿ ನಟಿ ಮೇಘಾ ಶೆಟ್ಟಿ (Megha Shetty) ಅವರ ಹೆಸರು ಕೂಡಾ ಕೇಳಿಬಂದಿತ್ತು.

    ಕಿರುತೆರೆ ಹಾಗೂ ಹಿರಿತೆರೆ ಮೂಲಕ ಖ್ಯಾತಿ ಪಡೆದಿರುವ ನಟಿ ಮೇಘಾ ಶೆಟ್ಟಿ ಈ ಬಾರಿಯ ಬಿಗ್‌ಬಾಸ್ ಮನೆಗೆ ಹೋಗುತ್ತಾರೆ. ಅವರೇ ಮೊದಲ ಸ್ಪರ್ಧಿಯಾಗಿರುತ್ತಾರೆ ಅಂತೆಲ್ಲ ಹಬ್ಬಿಸಲಾಗಿತ್ತು. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಗ್ಲ್ಯಾಮರ್‌ ಗೊಂಬೆ ನಟಿ ಮೇಘಾ ಶೆಟ್ಟಿ ತೆರೆ ಎಳೆದಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ಗೆ ನಾನು ಹೋಗುವುದಿಲ್ಲ. ದಯವಿಟ್ಟು ಗಾಳಿಸುದ್ದಿ ಹಬ್ಬಿಸುವುದನ್ನ ನಿಲ್ಲಿಸಿ ಎಂದು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ಮೇಘಾ ಶೆಟ್ಟಿ ಕಿರುತೆರೆಯ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದು ನಂತರ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ನಿರ್ಮಾಣ ಮಾಡುವ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಹಬ್ಬಿದ್ದ ಬಿಗ್‌ಬಾಸ್ ಮನೆಯ ಸ್ಟೋರಿಗೆ ಇತಿಶ್ರೀ ಹಾಡಿದ್ದಾರೆ. ನಟಿ ಜಾಲತಾಣದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಟ್ರೈಲರ್‌ ಲಾಂಚ್‌ಗೆ ದಿನಾಂಕ, ಸಮಯ ಫಿಕ್ಸ್‌ – ಹೊಂಬಾಳೆ ಫಿಲ್ಮ್ಸ್ಅಧಿಕೃತ ಮಾಹಿತಿ

  • BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

    BBK12 | ಬಿಗ್‌ಬಾಸ್‌ಗೆ ಹೋಗ್ತಾರಾ ಸುಧಾರಾಣಿ – ʻಯಾರ್‌ ಹೇಳಿದ್ದುʼ?

    ಕನ್ನಡದ ಬಿಗ್‌ಬಾಸ್ ಸೀಸನ್ 12ರ (BBK 12) ಪ್ರಸಾರದ ದಿನಾಂಕ ಫಿಕ್ಸ್ ಆಗಿರುವುದರಿಂದ ಮನೆಯೊಳಗೆ ಹೋಗುವ ಸ್ಪರ್ಧಿಗಳ ಕುರಿತು ನಿರೀಕ್ಷೆ ಜೋರಾಗಿದೆ.

    ಕಾರ್ಯಕ್ರಮ ಪ್ರಸಾರವಾಗೋದಕ್ಕೂ ಮುನ್ನವೇ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗುವುದು ಸಾಮಾನ್ಯ. ಅದರಂತೆ ಈ ಬಾರಿಯೂ ದೊಡ್ಮನೆಗೆ ಹೋಗುವ ಸ್ಪರ್ಧಿಗಳ ಸಂಭವನೀಯ ಪಟ್ಟಿ ಮುನ್ನಲೆಗೆ ಬಂದಿದ್ದು ಅದರಲ್ಲಿ ಹಿರಿಯ ನಟಿ ಸುಧಾರಾಣಿ (Actress Sudharani) ಹೆಸರು ಚಾಲ್ತಿಯಲ್ಲಿದೆ.

    ಖ್ಯಾತ ನಟಿ ಸುಧಾರಾಣಿ, ಸುದೀಪ್ (Sudeep) ಜೊತೆಯೂ ನಟಿಸಿದ್ದ ನಟಿ, ಇವರು ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ನಟಿ ಸುಧಾರಾಣಿ ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿದ್ದು, ಹೆಚ್ಚು ಫಾಲವೋರ್ಸ್‌ ಹೊಂದಿರುವ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಗ್‌ಬಾಸ್ ಸೀಸನ್ 12ರ ಹೈಲೈಟ್ ಕಂಟೆಸ್ಟಂಟ್‌ ಎನ್ನಲಾಗುತ್ತಿದೆ.

    ಸಾಮಾನ್ಯವಾಗಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳುವಾಗ ಎಲ್ಲಾ ವಯೋಮಾನ ಹಾಗೂ ಸಿನಿಮಾ, ಸೀರಿಯಲ್, ಸೋಷಿಯಲ್ ಮೀಡಿಯಾ ಎಲ್ಲದರ ಖ್ಯಾತಿಯನ್ನ ಗಣನೆಗೆ ತೆಗೆದುಕೊಳ್ಳಲಾಗುತ್ತೆ. ಅದರಂತೆ ಸುಧಾರಾಣಿ ಅವರಿಗೆ ಆಹ್ವಾನ ಹೋಗಿದೆ ಎನ್ನಲಾಗುತ್ತಿದೆ.

    ಈ ವಿಚಾರವಾಗಿ ಸುಧಾರಾಣಿ ತಮ್ಮ ಇನ್‌ಸ್ಟಾಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೇಳಿದ್ದಾರೆ. ಹೀಗಾಗಿ ಸುಧಾರಾಣಿ ಈ ಮಾತು ಸದ್ಯಕ್ಕೆ ಗೊಂದಲ ಸೃಷ್ಟಿಸಿದ್ದರೂ ಬಿಗ್‌ಬಾಸ್ ಮನೆಯಲ್ಲಿ ಸುಧಾರಾಣಿ ನೋಡುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ.