ಕಿರುತೆರೆಯ ಸೂಪರ್ ಹಿಟ್ ಶನಿ, ನಾಗಿಣಿ ಸೀರಿಯಲ್ ಮೂಲಕ ಮನೆಮಾತಾದ ನಟ ಅರ್ಜುನ್ ರಮೇಶ್ ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಶೋನಲ್ಲಿ ತಮ್ಮ ಇಬ್ಬರ ಪತ್ನಿಯರ ಬಗ್ಗೆ ಜತೆಗೆ ರಿಲೇಷನ್‌ಶಿಪ್ ಕುರಿತು ನಟ ಮಾತನಾಡಿದ್ದಾರೆ.
ನಟ ಅರ್ಜುನ್ ರಮೇಶ್ ಅವರು ರಾಜಕೀಯ, ನಟನೆ ಎರಡರಲ್ಲೂ ಮುಂಚೂಣಿಯಲ್ಲಿರುವ ನಟ. ಅವರು ಬಿಗ್ ಬಾಸ್ ಮನೆಯಲ್ಲಿ ವೈಯಕ್ತಿಕ ವಿಚಾರದಿಂದ ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಅಸಲಿ ಕಥೆಯನ್ನ ಬಿಚ್ಚಿಟ್ಟಿದ್ದಾರೆ. ತಮಗೆ ಎರಡು ಮದುವೆ ಆಗಿದೆ ಎಂದು ಇದನ್ನು ಆರಂಭದಲ್ಲೇ ಹೇಳಿಕೊಂಡಿದ್ದರು. ಈಗ ಅವರು ಒಂದು ಅಚ್ಚರಿಯ ವಿಚಾರ ಹೇಳಿಕೊಂಡಿದ್ದಾರೆ. ಇನ್ನು ಫ್ಲರ್ಟ್ ವಿಚಾರದಲ್ಲಿ ಸಂಜಯ್ ದತ್ ಅವರನ್ನು ಮೀರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ರಾಣಾ ದಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಕು?
ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್ ಅವರನ್ನು ನಾನು ಹಿಂದಿಕ್ಕುತ್ತೇನೆ ಎಂದಿದ್ದಾರೆ ಅರ್ಜುನ್ ರಮೇಶ್. ಈ ಮೂಲಕ ಅವರು ಸಾಕಷ್ಟು ಜನರ ಜತೆ ರಿಲೇಶನ್‌ಶಿಪ್‌ನಲ್ಲಿದ್ದೆ, ಫ್ಲರ್ಟ್ ಮಾಡಿದ್ದೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ನಾನು ಬಿಗ್ ಬಾಸ್‌ಗೆ ಹೋಗುವ ದಿನ ನನ್ನ ಇಡೀ ಕುಟುಂಬದವರು ಅಳೋಕೆ ಶುರು ಮಾಡಿದರು. ಅವರಿಗೆ ನನ್ನ ಬಿಟ್ಟು ಬೇರೆ ಪ್ರಪಂಚ ಇಲ್ಲ. ಮಿಲನ್ ನನ್ನ ಮೊದಲ ಹೆಂಡತಿ. ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್‌ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ನಿಮ್ಮ ಲೈಫ್ ಅರ್ಥ ಏನು ಎಂದು ರವಿಕಾ ಪಾಲಕರು ಒಂದು ದಿನ ಕೇಳಿದರು ಎಂದು ತಮ್ಮ ಹಳೆಯ ಪ್ಲ್ಯಾಶ್ ಬ್ಯಾಕ್ ಸ್ಟೋರಿ ನೆನಪಿಸಿಕೊಂಡಿದ್ದಾರೆ.


ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೇ ಸದ್ದು ಮಾಡುತ್ತಿದೆ. ಅದರಲ್ಲಿಯೂ ದಿನದ ಆರಂಭದಲ್ಲಿಯೇ ಸ್ಪರ್ಧಿಗಳಿಗೆ ಎಲಿಮಿನೇಷನ್ ಎಂಬ ಭಯ ಆರಂಭವಾಗಿದೆ. ಇರುವ ಒಟ್ಟು 16 ಜನ ಸ್ಪರ್ಧಿಗಳಲ್ಲಿ ಈ ವಾರ 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಸೋನು ಗೌಡ, ಸ್ಫೂರ್ತಿ ಗೌಡ, ನಂದಿನಿ, ಆರ್ಯವರ್ಧನ್, ಜಯಶ್ರೀ ಆರಾಧ್ಯಾ, ಜಶ್ವಂತ್, ಕಿರಣ್ ಯೋಗೇಶ್ವರ್ ಮತ್ತು ಅಕ್ಷತಾ ಕುಕ್ಕಿ ಎಲಿಮಿನೇಷನ್ ಆಗಿದ್ದು, ಮೊದಲ ವಾರವೇ ಯಾರು ಮನೆಯ ಆಟಕ್ಕೆ ಅಂತ್ಯ ಹಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.
16 ಸ್ಪರ್ಧಿಗಳಲ್ಲಿ 8 ಜನ ಸ್ಪರ್ಧಿಗಳು ನಾಮಿನೇಟ್ ಆದರೆ ಉಳಿದ 8 ಜನ ಈ ವಾರ ಸೇಫ್ ಆಗಿದ್ದಾರೆ. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಸಾನ್ಯಾ ಐಯ್ಯರ್, ಚೈತ್ರಾ ಹಳ್ಳಿಕೇರಿ, ಲೋಕೇಶ್, ಉದಯ್ ಸೂರ್ಯ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಸದ್ಯ ಸೇಫ್ ಆಗಿದ್ದು, ಇದನ್ನು ಮುಂದುವರೆಸಿಕೊಂಡು ಹೋಗಲು ಇವರುಗಳು ಉತ್ತಮವಾಗಿ ಆಡಬೇಕಿದೆ.
ಬಿಗ್ ಬಾಸ್ ಗ್ರ್ಯಾಂಡ್ ಲಾಂಚ್ ದಿನವೇ ಸೋನು ಗೌಡ ಎಂಟ್ರಿ ನೋಡಿ, ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸುದೀಪ್ ಇರುವ ವೇದಿಕೆಗೆ ಸೋನು ಗೌಡ ಆಯ್ಕೆ ತಪ್ಪು ಎಂದು ವಾಹಿನಿಯ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ಇದೀಗ ಸೋನು ಗೌಡ ನಾಮಿನೇಟ್ ಆಗಿರುವುದನ್ನ ನೋಡಿ, ಈ ವಾರವೇ ಸೋನುಗೆ ಬಿಗ್ ಬಾಸ್ ಮನೆ ಕೊನೆಯಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.



ಕಿರುತೆರೆಯ ದೊಡ್ಡ ಮನೆಯಲ್ಲಿ ಮೊದಲ ಜಗಳ ಶುರುವಾಗಿದೆ. ಸೋನು ಗೌಡ ಮತ್ತು ಸ್ಪೂರ್ತಿ ಗೌಡ ಮಾತಿನ ಚಕಮಕಿ ಜೋರಾಗಿದ್ದು, ಮನೆಯ ವಾತಾವರಣವೇ ಅಲ್ಲೋಲ್ಲ ಕಲ್ಲೋಲವಾಗಿದೆ. ಡೌವ್ ರಾಣಿ ಎಂದಿದ್ದಕ್ಕೆ ಸೋನು ಗೌಡಗೆ ಸ್ಪೂರ್ತಿ ಗೌಡ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:
ಸ್ಪೂರ್ತಿ ಗೌಡ ಮೇಕಪ್ ಮಾಡುತ್ತಿರುವುದನ್ನು ನೋಡಿದ ಸೋನು ಗೌಡ, ಮೇಕಪ್ ಬಗ್ಗೆ ಒಂದಷ್ಟು ಮಾತನಾಡುತ್ತಾರೆ. ಆಗ ನನಗೆ ಮೇಕಪ್ ಗೊತ್ತಿಲ್ಲ ಎಂದ ಸ್ಪೂರ್ತಿ ಗೌಡಗೆ, ಸೋನು ಗೌಡ ಡವ್ ರಾಣಿ ಎಲ್ಲಾ ಗೊತ್ತಿದ್ದು, ಏನು ಗೊತ್ತಿಲ್ಲದ ಹಾಗೆ ಡವ್ ಮಾಡ್ತಿಯಾ ಎನ್ನುತ್ತಾರೆ. ಇದೇ ಮಾತುಗಳು ಇವರ ಜಗಳಕ್ಕೆ ಕಾರಣವಾಗಿವೆ. ಡವ್ ರಾಣಿ ಎನ್ನುವ ಪದ ಬಳಸಿದ್ದಕ್ಕೆ ಸ್ಪೂರ್ತಿ ಗೌಡ ಸಿಟ್ಟಾಗುತ್ತಾರೆ. ಆ ರೀತಿ ಮಾತನಾಡಬೇಡ ಎಂದು ಸಿಟ್ಟಾಗುತ್ತಾರೆ. ಇದೀಗ ಈ ವಿಚಾರವೇ ಜಗಳಕ್ಕೆ ಕಾರಣವಾಗಿದೆ. ಒಬ್ಬರಿಗೊಬ್ಬರು ಮಾತಿನ ಚಾಟಿ ಬೀಸಿದ್ದಾರೆ. ಇದಾದ ಬಳಿಕ ಒಬ್ಬರಿಗೊಬ್ಬರು ಮಾತನಾಡದೇ, ಮುನಿಸಿಕೊಂಡಿದ್ದಾರೆ.
ಇಂಟರ್‌ನೆಟ್‌ನ ಸೆನ್ಸೇಷನ್ ಸ್ಟಾರ್ ಸೋನು ಗೌಡ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾನು ಯಾರು ಟಾಸ್ಕ್ ನೀಡಲಾಗಿತ್ತು. ಈ ವೇಳೆ ಎಲ್ಲಾ ಸ್ಪರ್ಧಿಗಳು ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಹಾಗೆಯೇ ಸೋನು ಗೌಡ ಕೂಡ ತಮ್ಮ ವೀಡಿಯೋ ಲೀಕ್ ಆಗಿದ್ದರ ಬಗ್ಗೆ ಮಾತನಾಡಿದ್ದಾರೆ.
ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ.ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ:
ಇದೀಗ ಆ ವ್ಯಕ್ತಿಯ ಬಳಿ ಸೋನು ಅವರ ಇನ್ನೊಂದು ವಿಡಿಯೋ ಇದೆಯಂತೆ. ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ನನಗೆ ಮುಖ ತೋರಿಸೋಕೆ ಆಗ್ತಾ ಇಲ್ಲ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಅವನ ಬಳಿ ಇದ್ದಿದ್ದು ಎರಡು ವಿಡಿಯೋ. ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಸೋನು ಗೌಡ ಹೇಳಿದ್ದಾರೆ.





ಹುಟ್ಟುಹಬ್ಬಕ್ಕೆ ಸಾಂಗ್ ಹೇಳುವ ಮೂಲಕ ಜನಮನ ಗೆದ್ದ ಪ್ರತಿಭೆ ಕಾಫಿನಾಡು ಚಂದು ಇತ್ತೀಚೆಗೆ ಬಿಗ್‌ಬಾಸ್‌ಗೆ ಹೋಗುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಅವರು ಹೋಗೋದು ಫಿಕ್ಸ್ ಆಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ಕಾಫಿನಾಡು ಚಂದು ಅಭಿಮಾನಿಗಳು ಸಹ ಬಿಗ್‌ಬಾಸ್ ಮನೆ ಒಳಗೆ ಅವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಈ ಬಾರಿ ಚಂದು ಬಿಗ್ ಬಾಸ್‌ಗೆ ಹೋಗಿಲ್ಲ. ಇದನ್ನೂ ಓದಿ: