ತನ್ನ ವಿಚಿತ್ರ ಕಾಸ್ಟ್ಯೂಮ್ (Costume) ಗಳಿಂದಲೇ ಹೆಸರಾಗಿರುವ ಉರ್ಫಿ ಜಾವೇದ್ (Urfi Javed), ಎರಡನೇ ಬಾರಿ ಬಿಗ್ ಬಾಸ್ (Big Boss) ಮನೆಗೆ ಹೊಸ್ತಿಲು ತುಳಿದಿದ್ದಾರೆ. ಬಿಗ್ ಬಾಸ್ ಮೂಲಕವೇ ಫೇಮಸ್ ಆಗಿದ್ದ ಉರ್ಫಿ ಆಗ ಮನೆಯಲ್ಲಿ ಇದ್ದದ್ದು ಕೇವಲ ಒಂದೇ ಒಂದು ವಾರ. ಆದರೂ, ಅವರು ಧರಿಸುತ್ತಿದ್ದ ಬಟ್ಟೆಯ ಕಾರಣದಿಂದಾಗಿಯೇ ಜನರನ್ನು ಸೆಳೆದಿದ್ದರು.

ಇದೀಗ ಮತ್ತೆ ಉರ್ಫಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹಿಂದಿ ಓಟಿಟಿಯಲ್ಲಿ (Big Boss Ott) ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಮನೆ ಒಳಗೆ ವಿಚಿತ್ರ ಕಾಸ್ಟ್ಯೂಮ್ ಧರಿಸಿ ಬಂದಿದ್ದ ಉರ್ಫಿ ಕಂಡು ಮನೆಮಂದಿಯೇ ಬೆರಗಾಗಿದ್ದಾರೆ. ನಟ್ಟು, ಬೋಲ್ಟ್ ನಲ್ಲಿ ಬಿಗಿದಿದ್ದ ಬ್ರಾ ಧರಿಸಿಕೊಂಡು ಉರ್ಫಿ ಮನೆ ಪ್ರವೇಶ ಮಾಡಿದ್ದರು. ಜೊತೆಗೆ ಅವರ ಹೇರ್ ಸ್ಟೈಲ್ ಕಲರ್ ಕೂಡ ಕಣ್ಣಿಗೆ ಕುಕ್ಕುತ್ತಿತ್ತು. ಇದನ್ನೂ ಓದಿ:ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

ಈ ಹಿಂದೆ ತಾನು ಬಿಗ್ ಬಾಸ್ ಮನೆಗೆ ಬಂದಾಗ ಆಗಿನ ವಾತಾವರಣ ಹೇಗಿತ್ತು ಎನ್ನುವುದರ ಕುರಿತು ಉರ್ಫಿ ಮಾತನಾಡಿದ್ದಾರೆ. ಆ ಅನುಭವವನ್ನು ಹಲವರ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಕೆರಿಯರ್ ಗೆ ಬಿಗ್ ಬಾಸ್ ಮಾಡಿರುವ ಸಹಾಯದ ಬಗ್ಗೆಯೂ ಉರ್ಫಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಈ ಬಾರಿ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದಾರೆ. ಹಾಗಾಗಿ ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಬಿಂದಾಸ್ ಆಗಿ ಮನೆಯೊಳಗೆ ಕಳೆದಿದ್ದಾರೆ. ತನ್ನನ್ನು ಮೆಚ್ಚುವವರ ಬಗ್ಗೆಯೂ ಹಲವು ಕಾಮೆಂಟ್ ಮಾಡಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]












ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು, ಬಿಗ್ ಬಾಸ್ ಒಟಿಟಿಯಲ್ಲಿ (Bigg Boss Kannada Ott) ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿದ್ದರು. ದೊಡ್ಮನೆಯಿಂದ ಬಂದ ಮೇಲೆ ಮೊದಲು ನೋಡಿದ್ದೆ ಕಾಂತಾರ ಸಿನಿಮಾವಾಗಿದ್ದು, ಚಿತ್ರ ನೋಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ.
ನನ್ನ ಸ್ನೇಹಿತರು `ಕಾಂತಾರ’ ಸಿನಿಮಾ ನೋಡು ಎಂದು ಹೇಳಿದ್ದರು. ಆಗ ನಾನು ಸಿನಿಮಾ ನೋಡುವ ಆಸಕ್ತಿ ಕಳೆದುಕೊಂಡಿದ್ದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹೊರ ಹೋಗಲು ನನಗೆ ಮನಸ್ಸು ಇರಲಿಲ್ಲ. ಎಲ್ಲರು ಹೇಳುತ್ತಿದ್ದಾರೆ ಎಂದು ರಾತ್ರಿ ಶೋಗೆ ಅಕ್ಕನನ್ನು ಕರೆದುಕೊಂಡು ಹೋದೆ. ಸಿನಿಮಾ ಪೂರ್ತಿ ಇರುವುದು ಮಂಗಳೂರು ಭಾಷೆಯಲ್ಲಿ, ಆರಂಭದಲ್ಲಿ ಸಿನಿಮಾ ಏನೂ ಅರ್ಥವಾಗುತ್ತಿರಲಿಲ್ಲ. ಹಾಗೆ ಹೋಗ್ತಾ ಹೋಗ್ತಾ ಸಿನಿಮಾ ಸೂಪರ್ ಆಗಿದೆ. ಚಿತ್ರದ ಕೊನೆ 20 ನಿಮಿಷ ಇದ್ಯಲ್ಲ ಗುರು ಸೂಪರ್ ಎಂದು ವಾಹಿನಿಯ ಸಂದರ್ಶನದಲ್ಲಿ ಸೋನು ಮಾತನಾಡಿದ್ದಾರೆ. ಇದನ್ನೂ ಓದಿ: 

















