ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್. ಇದೀಗ ಬಿಗ್ ಬಾಸ್ ಹಿಂದಿ ಒಟಿಟಿ- 3 (Bigg Boss OTT 3) ಮೂಲಕ ಭಾರೀ ಮನರಂಜನೆ ಕೊಡಲು ಸಿದ್ಧವಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಬದಲು ಅನಿಲ್ ಕಪೂರ್ (Anil Kapoor) ನಿರೂಪಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ದೊಡ್ಮನೆ ಆಟಕ್ಕೆ ಯಾರೆಲ್ಲಾ ಸ್ಟಾರ್‌ಗಳು ಸ್ಪರ್ಧಿಗಳಾಗಿ ಬರುತ್ತಾರೆ. ಇಲ್ಲಿದೆ ಮಾಹಿತಿ.

ಜೂನ್ 21ರಿಂದ ಜಿಯೋ ಸಿನಿಮಾ ಒಟಿಟಿಯಲ್ಲಿ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈ ಶೋ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಹಿಂದಿ ಮತ್ತು ತೆಲುಗಿನಲ್ಲಿ ಗುರುತಿಸಿಕೊಂಡಿರುವ ಸಾಯಿ ಕೇತನ್ ರಾವ್ (Sai Ketan Rao) ಬಿಗ್ ಬಾಸ್ ಒಟಿಟಿಗೆ ಬರಲಿದ್ದಾರೆ ಎನ್ನಲಾಗಿದೆ.

ಕಿರುತೆರೆ ನಟಿ ಕಮ್ ಮಾಡೆಲ್ ಆಗಿರುವ ಪೌಲೋಮಿ ಪೋಲೋ ದಾಸ್ ದೊಡ್ಮನೆ ಆಟಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಜನಪ್ರಿಯ ನಾಗಿನ್ (Naagin) ಸೀರಿಯಲ್ಲಿ ಈ ನಟಿ ಅಭಿನಯಿಸಿದ್ದರು. ಇದನ್ನೂ ಓದಿ:‘ಕಲ್ಕಿ’ ಇವೆಂಟ್‌ಗೆ 1,14,000 ಮೌಲ್ಯದ ಡ್ರೆಸ್ ಧರಿಸಿ ಬಂದ ದೀಪಿಕಾ ಪಡುಕೋಣೆ
View this post on Instagram
ಹಾಟ್ ಬೆಡಗಿ ಸನಾ ಖಾನ್ (Sana Khan) ಮತ್ತು ಸನಾ ಮಕ್ಬುಲ್ ಹೆಸರು ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಒಟಿಟಿಗೆ ಇವರು ಕೂಡ ಬರಲಿದ್ದಾರೆ ಎನ್ನಲಾಗಿದೆ.
View this post on Instagram
ಉತ್ತರ ಪ್ರದೇಶದ ಸೋಷಿಯಲ್ ಮೀಡಿಯಾ ಸ್ಟಾರ್ ಶಿವಾನಿ ಕುಮಾರಿ ಮತ್ತು ವಿಶಾಲ್ ಪಾಂಡೆ ಕೂಡ ಇರಲಿದ್ದಾರೆ. ಇನ್ನೂಳಿದಂತೆ ಚಂದ್ರಿಕಾ ಗೇರಾ ದೀಕ್ಷಿತ್, ನಾವೇದ್ ಶೇಖ್, ನೀರಜ್ ಗೋಯತ್, ಸೋನಮ್ ಖಾನ್ ಸೇರಿದಂತೆ ಹಲವರ ಹೆಸರು ಸದ್ದು ಮಾಡುತ್ತಿದೆ. ಎಲ್ಲದಕ್ಕೂ ಉತ್ತರ ಇಂದು ರಾತ್ರಿ ಸಿಗಲಿದೆ.
ಸಲ್ಮಾನ್ ಬದಲು ಅನಿಲ್ ಕಪೂರ್ ಮೊದಲ ಬಾರಿಗೆ ಬಿಗ್ ಬಾಸ್ ಹೋಸ್ಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಹಾಗಾಗಿ ಶೋ ಮೇಲೆ ಸಾಕಷ್ಟು ನಿರೀಕ್ಷೆಯಿದೆ.







ಮೇ 15ರಂದು ಒಟಿಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಒಟಿಟಿ ನಿರೂಪಣೆಗೆ ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಸಾಥ್ ನೀಡುತ್ತಿದ್ದಾರೆ. ಹಾಗಾದ್ರೆ ಯಾರೆಲ್ಲಾ ಈ ಬಾರಿ ಒಟಿಟಿ-3 ಸೀಸನ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಬಾರಿ ಒಟಿಟಿ ಸೀಸನ್‌ನಲ್ಲಿ 16 ಮಂದಿ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ.
ಈ ವರ್ಷದ ಬಿಗ್ ಬಾಸ್ ಸೀಸನ್ 17ರಲ್ಲಿ ವಿಕ್ಕಿ ಜೈನ್ (Vicky Jain) ಅವರು ಅಂಕಿತಾ ಲೋಖಂಡೆ ಜೊತೆ ಜೋಡಿಯಾಗಿ ಎಂಟ್ರಿ ಕೊಟ್ಟಿದ್ದರು. ಮನೆ ಜಗಳ ಬಿಗ್ ಬಾಸ್ ಮನೆಯಲ್ಲೂ ತಾರಕಕ್ಕೇರಿತ್ತು. ಇಬ್ಬರ ಜಗಳ ದೊಡ್ಮನೆಯಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈಗ ಮುನಿಸು ಮರೆತು ಇಬ್ಬರೂ ಒಂದಾಗಿದ್ದಾರೆ.
ಅಂದಹಾಗೆ, ಈ ಬಾರಿ ಒಟಿಟಿ ಸೀಸನ್‌ಗೆ ಸೋಷಿಯಲ್ ಮೀಡಿಯಾ ಸ್ಟಾರ್ ಜಾಸ್ಮಿನ್ ಕೌರ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದು ಹೇಳುವ ಮೂಲಕ ರಾತ್ರೋ ರಾತ್ರಿ ಫೇಮಸ್ ಆದವರು ಜಾಸ್ಮಿನ್ ಕೌರ್. ಅವರು ಬಟ್ಟೆಯ ಗುಣಮಟ್ಟವನ್ನು ವಿವರಿಸುವ ರೀತಿಯಿಂದ ಗಮನ ಸೆಳೆದಿದ್ದಾರೆ.
