Tag: ಬಿಗ್‌ ಬಾಸ್‌ ಒಟಿಟಿ 2

  • Elvish Yadav: ‘ಬಿಗ್ ಬಾಸ್ ಹಿಂದಿ ಒಟಿಟಿ 2’ ವಿನ್ನರ್ ಬಂಧನ

    Elvish Yadav: ‘ಬಿಗ್ ಬಾಸ್ ಹಿಂದಿ ಒಟಿಟಿ 2’ ವಿನ್ನರ್ ಬಂಧನ

    ದಾ ವಿವಾದಗಳಿಂದಲೇ ಸುದ್ದಿಯಾಗುವ ಹಿಂದಿ ಬಿಗ್ ಬಾಸ್ ಒಟಿಟಿ 2 ವಿನ್ನರ್ (Bigg Boss Hindi Ott 2) ಎಲ್ವಿಶ್ ಯಾದವ್ (Elvish Yadav) ಇದೀಗ ಅರೆಸ್ಟ್ ಆಗಿದ್ದಾರೆ. ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ನೋಯ್ಡಾ ಪೊಲೀಸರು ಎಲ್ವಿಶ್‌ರನ್ನು ಬಂಧಿಸಿದ್ದಾರೆ. ಇಂದು ಕೋರ್ಟ್‌ಗೆ ಎಲ್ವಿಶ್‌ರನ್ನು ಹಾಜರಿಪಡಿಸುವ ಬಗ್ಗೆ ನೋಯ್ಡಾ ಡಿಸಿಪಿ ವಿದ್ಯಾಸಾಗರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿಯೇ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ ದೀಪಿಕಾ ಪಡುಕೋಣೆ

    ಪಾರ್ಟಿಯೊಂದರಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ‘ಬಿಗ್ ಬಾಸ್ ಒಟಿಟಿ 2’ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್ (32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿತ್ತು.

    ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • Bigg Boss OTT 2: ಯಾರ ಪಾಲಾಗಿದೆ ಬಿಗ್ ಬಾಸ್ ವಿನ್ನರ್ ಪಟ್ಟ?

    Bigg Boss OTT 2: ಯಾರ ಪಾಲಾಗಿದೆ ಬಿಗ್ ಬಾಸ್ ವಿನ್ನರ್ ಪಟ್ಟ?

    ಲ್ಮಾನ್ ಖಾನ್ (Salman Khan) ನಿರೂಪಣೆಯ ‘ಬಿಗ್ ಬಾಸ್ ಒಟಿಟಿ 2’ (Bigg Boss Ott 2) ಫಿನಾಲೆ ಹಂತ ತಲುಪಿದೆ. ಯಾರಿಗೆ ಗೆಲುವಿನ ಪಟ್ಟ ಯಾರಿಗೆ ಸಿಗಲಿದೆ ಎಂದು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಆಗಸ್ಟ್ 14ರ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ.

    ಬಿಗ್ ಬಾಸ್ ಒಟಿಟಿ ಸೀಸನ್ 2 ಕಾರ್ಯಕ್ರಮ ಈ ಬಾರಿ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿತ್ತು. ಸ್ಪರ್ಧಿಗಳ ಮಧ್ಯೆ ನಡೆದ ರೊಮ್ಯಾನ್ಸ್, ಮಹಿಳಾ ಸ್ಪರ್ಧಿ ಜೊತೆ ಹಿರಿಯ ನಿರ್ದೇಶಕ ಮಹೇಶ್ ಭಟ್ ನಡೆದುಕೊಂಡ ರೀತಿ ಎಲ್ಲವೂ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.

    ಬಿಗ್ ಬಾಸ್ ಆಟಕ್ಕೆ ತೆರೆ ಬೀಳುವ ಹಂತಕ್ಕೆ ಬಂದು ತಲುಪಿದೆ. ಆಗಸ್ಟ್ 14ರ ರಾತ್ರಿ 9 ರಿಂದ ಬಿಗ್ ಬಾಸ್ ಫಿನಾಲೆ (Bigg Boss Finale) ಸ್ಟ್ರಿಮಿಂಗ್ ಆರಂಭ ಆಗಲಿದೆ. ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಸಂಪೂರ್ಣ ಸಂಚಿಕೆಯನ್ನು ನೋಡಬಹುದು. ಇದನ್ನೂ ಓದಿ:ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಗ ಸಮರ್ಜಿತ್ ಗ್ರ್ಯಾಂಡ್ ಎಂಟ್ರಿ

    ಪೂಜಾ ಭಟ್ (Pooja Bhatt) , ಎಲ್ವಿಶ್ ಯಾದವ್, ಮನಿಶಾ ರಾಣಿ, ಅಭಿಷೇಕ್ ಮಲ್ಹಾನ್, ಬಾಬಿಕಾ ಧುರ್ವೆ ‘ಬಿಗ್ ಬಾಸ್ ಹಿಂದಿ ಒಟಿಟಿ’ ಎರಡನೇ ಸೀಸನ್‌ನ ಫೈನಲ್ ಪ್ರವೇಶಿಸಿದ್ದಾರೆ. ಈ ಐವರಲ್ಲಿ ಒಬ್ಬರು ಟ್ರೋಫಿ ಗೆಲ್ಲುತ್ತಾರೆ. ವಿಜೇತರಿಗೆ 25 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಇದರ ಜೊತೆಗೆ ಬಿಗ್ ಬಾಸ್ ಒಟಿಟಿ ಟ್ರೋಫಿಯೂ ಸಿಗಲಿದೆ.

    ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ‘ಜವಾನ್’ (Jawan) ಸಿನಿಮಾದ ಪ್ರಚಾರಕ್ಕಾಗಿ ಶಾರುಖ್ ಖಾನ್- ದೀಪಿಕಾ ಪಡುಕೋಣೆ(Deepika Padukone) ಆಗಮಿಸುತ್ತಾರೆ ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದಲ್ಲಿ ಶಾರುಖ್- ಸಲ್ಮಾನ್ ಇಬ್ಬರನ್ನ ಒಟ್ಟಿಗೆ ಕಣ್ತುಂಬಿಕೊಳ್ಳಬಹುದು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]