Tag: ಬಿಗ್‍ಬಾಸ್ ಒಟಿಟಿ

  • ನಂದಿನಿ ಜಶ್ವಂತ್‍ನಿಂದ ದೂರವಾಗುತ್ತಿರಲು ಸಾನ್ಯಾ ಕಾರಣನಾ?

    ನಂದಿನಿ ಜಶ್ವಂತ್‍ನಿಂದ ದೂರವಾಗುತ್ತಿರಲು ಸಾನ್ಯಾ ಕಾರಣನಾ?

    ನಂದಿನಿ ಬದಲಾಗಿದ್ದು, ಜಶ್ವಂತ್‍ನಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ನೋಡುಗರಿಗೆ ಗೊತ್ತಾಗುತ್ತಿದೆ. ಜಶ್ವಂತ್ ಹೆಚ್ಚು ರಿಪ್ಲೇ ಮಾಡದೆ ಇರುವುದೆಲ್ಲವನ್ನು ಕಂಡಾಗ ಏನೋ ಮಿಸ್ ಹೊಡಿತಿದೆ ಎನಿಸುತ್ತದೆ. ಆದರೆ ಇದಕ್ಕೆಲ್ಲಾ ಕಾರಣ ಸಾನ್ಯಾ ಎಂಬ ಮನದಾಳದ ನೋವಂತು ಹೊರಬಂದಿದೆ.

    ಜಶ್ವಂತ್ ರಾತ್ರಿ ಊಟ ಮಾಡುವಾಗ ನಂದಿನಿಯ ಕೈಹಿಡಿದುಕೊಂಡು ಹೋಲ್ಡ್ ಮೈ ಹ್ಯಾಂಡ್ ಅಂತ ಕೂಡ ಹೇಳಿದ್ದ. ಅದಕ್ಕೆ ನಂದಿನಿ ಪ್ರತಿಕ್ರಿಯಿಸಿ, ನಾನು ಯಾವತ್ತು ಹಿಡಿದ ಕೈಬಿಡುವುದಿಲ್ಲ. ಆದರೆ ಜೀವನ ಪೂರ್ತಿ ಜೊತೆಯಾಗಿರುತ್ತೀನಿ ಎಂದು ಅನ್ನಿಸಿದಾಗ ಮಾತ್ರ ಹ್ಯಾಂಡ್ ಹೋಲ್ಡ್ ಮಾಡಬೇಕು ಎಂದಿದ್ದಳು. ಆಗ ಜಶ್ವಂತ್, ನಂಬಿಕೆ ಇದೆ ಎಂದು ಹೇಳಿದ್ದ. ಇದಕ್ಕೆ ಜೋರು ನಕ್ಕ ನಂದಿನಿ, ನೀನೇ ತಾನೇ ಭವಿಷ್ಯದ ಬಗ್ಗೆ ಗೊತ್ತಿಲ್ಲ ಎಂದವನು ಎಂದಿದ್ದಳು. ಇದೆಲ್ಲ ಮುಗಿದ ಮೇಲೂ ನಂದಿನಿ, ಜಶ್ವಂತ್‍ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಏನೋ ಬೇಸರ ಅವಳ ಮನಸ್ಸನ್ನು ಕಾಡುತ್ತಿದೆ. ನೋವು ಆದರೂ, ದುಃಖ ಬಂದರೂ ಅದನ್ನು ಅದುಮಿಟ್ಟುಕೊಳ್ಳುತ್ತಿದ್ದಾಳೆ. ಅದೇ ಕಾರಣಕ್ಕೆ ಜಶ್ವಂತ್ ಬಿಟ್ಟು, ಸೋನು ಟೀಂನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾಳೆ.

    ಇದಕ್ಕೆ ಉದಾಹರಣೆ ಎಂಬಂತೆ ಮಳೆ ಜೋರು ಸುರಿಯುತ್ತಿತ್ತು. ಆ ವೇಳೆ ಜಯಶ್ರೀ, ರಾಕೇಶ್, ಸೋನು ಕುಳಿತಿದ್ದರು. ಆಗ ಅಲ್ಲಿಗೆ ಬಂದ ನಂದಿನಿ, ಸ್ವಿಮ್ ಮಾಡುವುದಕ್ಕೆ ಸೋನುಳನ್ನು ಕರೆದಳು. ಖುಷಿಯಾಗುವಷ್ಟು ಸ್ವಿಮ್ ಮಾಡಿದಳು. ಅಲ್ಲಿಗೆ ಮಧ್ಯರಾತ್ರಿ 12 ಆಗಿತ್ತು. ನೇರ ಅಡುಗೆ ಮನೆಗೆ ಹೋದಳು. ಅಲ್ಲಿ ರೂಪೇಶ್‍ಗೆ ನಂದಿನಿಯ ಬದಲಾವಣೆ, ಮನಸ್ಸಿನ ನೋವು ಕೊಂಚ ಅರ್ಥವಾಗಿದೆ. ನೀನು ಸಾನ್ಯಾ ಹತ್ತಿರ ಮಾತನಾಡಿಲ್ವಾ ಎಂದಾಗ ಸಾನ್ಯಾ ಹತ್ರ ಅಲ್ಲ ಎಂದು ನಂದು ಮಾತು ಬದಲಾಯಿಸಿದ್ದಾಳೆ. ಇದನ್ನೂ ಓದಿ: ‘ಶ್ಯಾನುಭೋಗರ ಮಗಳಾ’ದ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ

    ಆಗ ರೂಪೇಶ್ ಮತ್ತೆ ಬಲವಂತ ಮಾಡಿ ಕೇಳಿದ್ದಾನೆ. ಅದಕ್ಕೆ ಉತ್ತರ ಕೊಟ್ಟ ನಂದು ಅವನು ಹೊರಗಡೆ ಹೇಗೆ ಇದ್ದ ಆ ರೀತಿ ಇಲ್ಲಿ ಒಳಗಡೆ ಇಲ್ಲ. ಅವನಿಗೆ ಕಂಫರ್ಟ್ ನನ್ನ ಜೊತೆಗಿಂತ ಸಾನ್ಯಾ ಬಳಿ ಇದೆ ಅನಿಸುತ್ತಿದೆ ಎಂದಾಗ ರೂಪೇಶ್ ಸಮಾಧಾನ ಮಾಡಿದ್ದಾನೆ. ಏನು ಗೊತ್ತಾ ನಂಗೆ ಕೆಲವೊಂದು ವಿಚಾರಗಳು ಗೊತ್ತಾಗುತ್ತಿದೆ. ನಿಂಗೆ ಕಂಫರ್ಟ್ ಆಗುತ್ತಾ ಇಲ್ಲ. ನನಗೆ ಬೇಜಾರು ಆಗುತ್ತಾ ಇದೆ. ನನಗೆನೋ ಸಾನ್ಯಾಗೆ ಹೇಳಬೇಕು ಎನಿಸುತ್ತಿದೆ. ನಿನ್ನ ಪರಿಸ್ಥಿತಿ ಅರ್ಥ ಮಾಡಿಕೊಂಡು ಏನಾದರೂ ಮಾಡಬೇಕು ಎನಿಸುತ್ತಿದೆ ಎಂದು ರೂಪೇಶ್ ಹೇಳಿದಾಗ, ಒಂದು ಅವನು ತಾನಾಗಿ ಅರ್ಥ ಆಗಬೇಕು. ಇಲ್ಲ ಅವಳಿಗೆ ಅರ್ಥ ಆಗಬೇಕು. ನಾನು ಈ ದೃಶ್ಯವನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದೇನೆ. ಈಗ ಹೊರಗಡೆಯೂ ಈ ರೀತಿ ಆಗಬಹುದು. ನಾನು ಆ ಹುಡುಗಿಯರ ಬಳಿ ಹೋಗುವುದಕ್ಕೆ ಆಗಲ್ಲ. ನಾನು ಸರಿ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾಳೆ.

    ಒಂದು ಕಡೆ ಅವನು ನಿನ್ನ ಬಾಯ್ ಫ್ರೆಂಡ್, ಇನ್ನೊಂದು ಕಡೆ ಇವಳು ನಿನ್ನ ಬೆಸ್ಟ್ ಫ್ರೆಂಡ್ ಇದೆ ಆಗುತ್ತಾ ಇರೋದು ಎಂದು ರೂಪೇಶ್ ಸಮಾಧಾನ ಅಷ್ಟರಲ್ಲಿ ಅಲ್ಲಿ ಬಂದ ಸಾನ್ಯಾ, ಜಶ್ವಂತ್ ಬಂದು ಹಳೆಯ ಶೋ ಬಗ್ಗೆ ಮಾತು ಪ್ರಾರಂಭಿಸುತ್ತಾರೆ. ರೋಡೀಸ್‍ನಲ್ಲಿದ್ದಾಗಲೂ ತುಂಬಾ ಟ್ರೈ ಮಾಡಿದ್ದೀನಿ. ಆ ಶೋನಿಂದ ಅವರ ಫ್ಯಾಮಿಲಿಯಲ್ಲಿ ನಿನ್ನ ಬಗ್ಗೆ ಬ್ಯಾಡ್ ಓಪಿನಿಯನ್ ಇತ್ತಂತೆ. ಅದನ್ನು ಇನ್ನೂ ಜಾಸ್ತಿ ಮಾಡುವುದಕ್ಕೆ ಇಷ್ಟ ಇಲ್ಲ ಎಂದಿದ್ದ ಎಂದು ಜಶ್ವಂತ್ ಬಗ್ಗೆ ಹೇಳಿದ್ದಾಳೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಆಗ ಮಾತನಾಡಿದ ನಂದಿನಿ, ಫ್ಯಾಮಿಲಿ ಪ್ರೆಶರ್ ಇದೆ. ಇಬ್ಬರಿಗೂ ಫ್ಯಾಮಿಲಿನೇ ಫಸ್ಟ್. ಹಾಗಂತ ನನ್ನ ಜೊತೆ ಇದ್ದ ಕಂಫರ್ಟ್ ಬೇರೆಯವರ ಜೊತೆ ಇದ್ದರೆ ಹೆಂಗ್ ಅನಿಸಿತ್ತೆ ಅಂತ ಇನ್ ಡೈರೆಕ್ಟ್ ಆಗಿ ಸಾನ್ಯಾಗೆ ತಿರುಗೇಟು ನೀಡಿದ್ದಾಳೆ. ಇಲ್ಲಿ ನಾವೂ ಸ್ಟ್ರಾಂಗ್ ಆಗಿ ಇದ್ದರೆ ಅವರನ್ನು ಒಪ್ಪಿಸಬಹುದು. ಎಂಡ್ ಆಫ್ ದಿ ಡೇ ಅವರಿಗೆ ಬೇಕಾಗಿರುವುದು ಏನು ಮಗ ಹ್ಯಾಪಿಯಾಗಿರಬೇಕು. ಹ್ಯಾಪಿಯಾಗಿ ನಾನು ಇಟ್ಟುಕೊಳ್ಳುತ್ತೇನೆ ಎಂದಿದ್ದಾಳೆ.

    ತಡರಾತ್ರಿಯಾದರೂ ಹೀಗೆ ಮುಂದುವರಿದ ಮಾತುಕತೆಯಲ್ಲಿ ನಂದಿನಿ ಡೈರೆಕ್ಟ್ ಆಗಿ ಸಾನ್ಯಾಗೆ ಹೇಳಿದ್ದಾಳೆ. ನಾವಿಬ್ಬರೆ ಡಿಫಿಕಲ್ಟ್ ಮಾಡಿಕೊಳ್ಳುತ್ತಾ ಇದ್ದೀವಿ. ನಾನೇನಾದರೂ ರೂಪಿ ಜೊತೆ ಮಾತನಾಡುವಾಗ ಜಶುನ ಕರೀತಿನಿ. ಆದರೆ ನೀವಿಬ್ಬರು ಮಾತನಾಡುವಾಗ ನಂಗೆ ಆ ಫೀಲ್ ಬರುತ್ತಾ ಇಲ್ಲ. ನೀವಿಬ್ಬರು ಮಾತನಾಡುವಾಗ ಬರಬೇಕು ಎನಿಸುತ್ತಿಲ್ಲ. ಇಟ್ಸ್ ಓಕೆ ಏನಾದರೂ ಮಾತನಾಡಿಕೊಳ್ಳಲಿ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೀನಿ ಅಂದಿದ್ದಾಳೆ. ಇಬ್ಬರು ಒಂದು ಹಗ್‍ನಲ್ಲಿ ಮಾತುಕತೆ ಮುಗಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ಬಾಸ್‌ ಮನೆಯಲ್ಲಿ ನಿಜ ವಯಸ್ಸು ರಿವೀಲ್‌ ಮಾಡಿದ ಸೋನು ಗೌಡ..!

    ಬಿಗ್‌ಬಾಸ್‌ ಮನೆಯಲ್ಲಿ ನಿಜ ವಯಸ್ಸು ರಿವೀಲ್‌ ಮಾಡಿದ ಸೋನು ಗೌಡ..!

    ಸೋನುಳನ್ನು ಚಿಕ್ಕ ಹುಡುಗಿ ಎಂದುಕೊಳ್ಳುವ ಹಾಗೇ ಇಲ್ಲ. ಯಾಕೆಂದರೆ ಆಗಾಗ ಬಹು ದೊಡ್ಡ ಮಾತುಗಳು ಸೋನು ಬಾಯಿಂದ ಬರುತ್ತಲೇ ಇರುತ್ತವೆ. ಅದು ಕೆಲವೊಮ್ಮೆ ಬೀಪ್ ಸೌಂಡ್ ಹಾಕುವಂತ ಮಾತುಗಳು ಬಂದರೆ ಇನ್ನು ಕೆಲವು ಸರಿ ಇದ್ದ ಮನಸ್ಸುಗಳು ಹಾಳಾಗುವ ರೇಂಜಿಗೂ ಬರುತ್ತವೆ. ಇಂದು ಮನೆಯಲ್ಲಿ ಸೋನು ಐ ಆಮ್ ನಾಟ್ ಚಿಕ್ಕ ಹುಡುಗಿ ಎಂದು ಗುಡುಗಿದ್ದಾರೆ.

    ಮನೆಯವರೆಲ್ಲರ ದೂರು ಆಗಾಗ ಒಂದೇ ಆಗಿತ್ತು. ಸೋನು ಅಡುಗೆಗೆ ಸಹಾಯ ಮಾಡಲ್ಲ, ಪಾತ್ರೆ ತೊಳೆಯಲ್ಲ ಎಂದು ಆರೋಪಿಸಿದ್ದರು. ಇದು ಬಿಗ್‍ಬಾಸ್‍ಗೂ ಕೇಳಿಸಿತ್ತು. ಆದರೆ ಇಂದು ಆ ಬಗ್ಗೆಯೇ ಬಿಗ್‍ಬಾಸ್ ವೂಟ್‍ನಲ್ಲಿ ಜನರ ಅಭಿಪ್ರಾಯವನ್ನು ಕೇಳಿತ್ತು. ಈ ವಾರ ಯಾರು ಅಡುಗೆ ಮಾಡಬೇಕು ಎಂಬ ಪ್ರಶ್ನೆ. ಅದಕ್ಕೆ ವೂಟ್‍ನಲ್ಲಿ ಸೋನು ಮಾಡಬೇಕು ಎಂಬ ಉತ್ತರ ಬಂದಿದೆ. ಸೋನು ಏನೋ ತಿಂಡಿ, ಅಡುಗೆ ಮಾಡಲು ಧೈರ್ಯದಿಂದ ಒಪ್ಪಿದ್ದಾರೆ. ಆದರೆ ಸೋನು ಆಡುತ್ತಿದ್ದ ಅವತಾರ ಖಂಡಿತ ಯಾರಿಗೂ ನಂಬಿಕೆಯೇ ಬರುತ್ತಿಲ್ಲ. ಎಲ್ಲರೂ ನಮ್ಮ ಕಥೆ ಮುಗಿಯಿತು ಎಂದು ಕೊಂಡಿದ್ದಾರೆ. ಇದನ್ನೂ ಓದಿ: ಸೋನುಗೆ ಚೈತ್ರಾ ಚಪ್ಪಲಿ ಗಿಫ್ಟ್ ಕೊಟ್ಟಿದ್ಯಾಕೆ..?

    ಅದರ ಜೊತೆಗೆ ಸೋನುಗೆ ತರಕಾರಿ ಕಟ್ ಮಾಡುವುದಕ್ಕೆ ಸಹಾಯ ಮಾತ್ರ ಮಾಡಬೇಕು ಎಂಬುದಾಗಿತ್ತು. ಅಡುಗೆ, ತಿಂಡಿ ಮಾಡುವ ಎಲ್ಲಾ ಅಧಿಕಾರ, ಏನು ಮಾಡಬೇಕು ಎಂಬುದನ್ನು ಸೋನುನೇ ನಿರ್ಧರಿಸಬೇಕು ಎಂಬುದಾಗಿತ್ತು. ಹೀಗಾಗಿ ಮನೆಯವರೆಲ್ಲಾ ಸುಮ್ಮನೆ ಇದ್ದರು. ಜೊತೆಗೆ ರಾಕೇಶ್ ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಸೋನುಗೆ ಬರುತ್ತೆ, ಮಾಡುತ್ತಾರೆ, ಯಾರು ಅವಳನ್ನು ಜಡ್ಜ್ ಮಾಡಬೇಡಿ ಎಂದೇ ಹೇಳಿದ್ದರು. ಬಳಿಕ ಸೋನು ತನಗೆ ಬರುವ ಟೊಮೋಟೋ ಗೊಜ್ಜು ಮತ್ತು ಅನ್ನ ಮಾಡಿದರು. ಒಬ್ಬೊಬ್ಬರೆ ತಿಂಡಿ ಹಾಕಿಕೊಂಡು ತಿನ್ನುವಾಗ ಎಲ್ಲರೂ ಸೋನುರನ್ನು ಹೊಗಳಿದ್ದಾರೆ. ಇದನ್ನೂ ಓದಿ: ಮೊದಲ ಜಗಳ, ವಾದ, ಗಾಯ ಆಗಿದ್ದೇ ಉದಯ್‍ಯಿಂದ – ಬೇರೆಯವರ ಇಮೋಷನ್ ನೋಡಿ ಉದಯ್ ಡಿಸ್ಟರ್ಬ್ ಆಗಿದ್ರಾ?

    ಈ ಮಧ್ಯೆ ಸೋಮಣ್ಣ, ಚೈತ್ರಾ ಮಾತನಾಡುವಾಗ, ಸೋನು ಒಂದು ಮಗು ಥರ. ನನಗೂ ಇಷ್ಟವೇ ಆದರೆ ಆಕೆ ಮಾತನಾಡುವಾಗ ಸ್ವಲ್ಪ ಭಯ ಅಂತ ಚೈತ್ರಾ ಹೇಳಿದ್ದಾರೆ. ಸೋಮಣ್ಣ ಕೂಡ ಸೋನು ಇಷ್ಟ. ಆಕೆಗೆ ಡ್ರಾಮಾ ಎಲ್ಲಾ ಗೊತ್ತಿಲ್ಲ. ಮಾತನಾಡುವ ಸ್ಟೈಲೇ ಆ ರೀತಿ ಎಂದಿದ್ದಾರೆ. ಈ ಎಲ್ಲಾ ಮಾತು ಕಥೆಗಳು ಮುಗಿದ ಬಳಿಕ ಮಧ್ಯಾಹ್ನದ ಅಡುಗೆ ಮಾಡಬೇಕಿತ್ತು. ಅಡುಗೆಯನ್ನು ಸೋನುನೇ ನಿರ್ಧರಿಸಿದ್ದರು. ಅನ್ನ ಮತ್ತು ಬೇಳೆ ಸಾಂಬಾರು ಮಾಡಿದರು. ಮಧ್ಯಾಹ್ನ ತಿಂದವರು ಕೂಡ ಸೇಮ್ ಶಬ್ಬಾಶ್ ಗಿರಿ ನೀಡಿದ್ದಾರೆ. ಆಗ ರೂಪೇಶ್ ಎಲ್ಲಾ ಮಾಡಲು ಬಂದರು ಮಾಡಬೇಕಾಗುತ್ತದೆ ಅಂತ ಡ್ರಾಮಾ ಆಡುತ್ತಿದ್ರಾ? ನೀವು ಒಮ್ಮೆ ಪಾತ್ರೆ ತೊಳೆಯುವುದನ್ನು ನಾನು ನೋಡಬೇಕು ಎಂದಿದ್ದಾರೆ. ಇದಕ್ಕೆ ಸೋನು ಹೇ ಸುಮ್ಮನೆ ಇರಪ್ಪ. ಜನ ಅದಕ್ಕೂ ವೋಟ್ ಮಾಡಿ ಬಿಟ್ಟಾರು. ನೋಡಿ ಇಷ್ಟು ಚೆನ್ನಾಗಿ ಮಾಡಿದ್ದೀನಿ ಅಂತ ಎಲ್ಲರೂ ಮತ್ತೆ ಮತ್ತೆ ಕೇಳಬೇಡಿ ಎಂದಿದ್ದಾರೆ.

    ಮನೆಯವರಿಗೆಲ್ಲಾ ಸೋನು ಕೆಪಾಸಿಟಿ ಅರ್ಥವಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟವನ್ನು ಸೇಮ್ ಮನೆಯ ಊಟದ ರುಚಿಯಲ್ಲಿಯೇ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇದರ ನಡುವೆ ಚೈತ್ರಾ, ಜಯಶ್ರೀ, ಸೋಮಣ್ಣ ಎಲ್ಲರು ಕುಳಿತು ಮಾತನಾಡುವಾಗ, ಅಕ್ಷತಾ ವಿಚಾರವೂ ಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು, ಹಾ ನಾನೇನು ಚಿಕ್ಕ ಹುಡುಗಿ ಅಲ್ಲಮ್ಮ. ದೊಡ್ಡವಳು. ಇನ್ನು ಹದಿನೆಂಟು ವರ್ಷ ಏನು ಅಲ್ಲ ಈಗ 23 ವರ್ಷ ನನಗೂ ಎಲ್ಲವೂ ಅರ್ಥವಾಗುತ್ತದೆ ಎಂದು ಮಾಮೂಲಿ ಒರಟು ಸ್ಟೈಲ್‍ನಲ್ಲಿಯೇ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣದ ಹಿಂದೆ ಬಿದ್ದಿದ್ದ ಆರ್ಯವರ್ಧನ್ ಬಿಗ್‍ಬಾಸ್‍ನಿಂದ ಕಲಿತಿದ್ದೇನು ಗೊತ್ತಾ?

    ಹಣದ ಹಿಂದೆ ಬಿದ್ದಿದ್ದ ಆರ್ಯವರ್ಧನ್ ಬಿಗ್‍ಬಾಸ್‍ನಿಂದ ಕಲಿತಿದ್ದೇನು ಗೊತ್ತಾ?

    ರ್ಯವರ್ಧನ್ ಗುರೂಜಿ ಬಳಿ ಶಾಸ್ತ್ರ ಕೇಳಬೇಕು ಎಂದರೆ ಕೇವಲ ಇನ್ನೂರು, ಮುನ್ನೂರು ರೂಪಾಯಿ ಹಣ ಇದ್ದರೆ ಸಾಲದು. ಜಸ್ಟ್ ಶಾಸ್ತ್ರ ಕೇಳುವುದಕ್ಕೆ ಐದಾರು ಸಾವಿರ ರೂಪಾಯಿ ಹಣ ಇಟ್ಟುಕೊಂಡು ಹೋಗಬೇಕು ಎಂದು ಶಾಸ್ತ್ರ ಕೇಳಲು ಹೋದ ಜನ ಮಾತಾಡಿಕೊಳ್ಳುತ್ತಿದ್ದರು. ಈ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಮಾತಾಡಿದ ಮಾತುಗಳಿಂದ ಎಲ್ಲವೂ ಸತ್ಯವಾಗಿದೆ ಎನಿಸುತ್ತಿದೆ.

    ಆರ್ಯವರ್ಧನ್ ಬಿಗ್ ಬಾಸ್ ಮನೆಯಲ್ಲಿ ಬೇರೆ ಜೀವನದ ಬಗ್ಗೆ ಸಾಕಷ್ಟು ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ತಮ್ಮ ದೇಹ ಸೌಂದರ್ಯ, ಆರೋಗ್ಯದ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಆದರೆ ಇದೀಗ ಮತ್ತೆ ಅದೇ ರೀತಿ ಉಚ್ಛರಿಸಿದ್ದು, ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳುವುದರ ಬಗ್ಗೆಯೂ ಆಲೋಚಿಸಿದ್ದಾರೆ.

    ಈ ವಾರದ ಬೆಸ್ಟ್ ಕಂಟೆಸ್ಟೆಂಟ್ ಆಗಿ ಜನರು ಆರ್ಯವರ್ಧನ್ ಅವರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ನಾಮಿನೇಷನ್‍ನಿಂದಲೂ ಮೊದಲು ಆರ್ಯವರ್ಧನ್ ಅವರನ್ನೇ ಜನರು ಸೇಫ್ ಮಾಡಿದ್ದಾರೆ. ಈ ವೇಳೆ ಭಾವುಕರಾದ ಆರ್ಯವರ್ಧನ್ ಅವರು ಕಿಚ್ಚ ಸುದೀಪ್ ಅವರಿಗೆ ಬಿಗ್‍ಬಾಸ್ ಮನೆಗೆ ಬಂದಿದ್ದು, ನನಗೆ ಬಹಳ ಖುಷಿಯಾಗಿದೆ. ನಾನು ಮನೆಗೆ ಕೇವಲ ಮಲಗುವುದಕ್ಕೆ ಹೋಗುತ್ತಿದ್ದೆ. ಊಟ ಬೇಕಾದಾಗಲೂ ಹೊಟೇಲ್ ನಲ್ಲಿ ತರಿಸಿಕೊಂಡು ಬಿಡುತ್ತಿದ್ದೆ. ಹಾಗಾಗಿ ದುಡ್ಡೆ ಜಗತ್ತು ಎಂದು ಬರೀ ಬಿಸಿನೆಸ್ ಮೇಲೆಯೇ ಅತಿ ಹೆಚ್ಚು ಗಮನ ಕೊಟ್ಟಿದ್ದೆ. ಆದರೆ ಇಲ್ಲಿಗೆ ಬಂದ ಮೇಲೆ ಗೊತ್ತಾಗುತ್ತಿದೆ. ಇದು ನಾಟಕದ ಪ್ರೀತಿಯೋ ಒರಿಜಿನಲ್ ಪ್ರೀತಿಯೋ ಎಂದಿದ್ದಾರೆ.

    ಪ್ರೀತಿ ಬಗ್ಗೆ ಮುಂದುವರೆದು ಮಾತನಾಡಿದ ಆರ್ಯವರ್ಧನ್, ನಾಟಕದ ಪ್ರೀತಿ ಹಾಗೂ ಒರ್ಜಿನಲ್ ಪ್ರೀತಿ ಬಗ್ಗೆ ತಿಳಿದ ಮೇಲೆ, ನಾನು ಇಲ್ಲಿಂದ ಹೋದ ಮೇಲೆ ಹೆಂಡತಿ, ಮಗಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಇದೇ ನಮ್ಮ ಆಸ್ತಿ ಅಂದುಕೊಂಡಿದ್ದೆ. ಮನೆಗೆ ಹೋದರೆ ಹೆಂಡತಿ ನೋಡಿಕೊಳ್ಳಬೇಕು. ಮಗಳಿದ್ದಾಳೆ ಮಗಳಿಗಾಗಿ ದುಡಿಬೇಕು ಎಂದುಕೊಂಡಿದ್ದೆ. ಆ ಮಗಳನ್ನೂ ಪ್ರೀತಿ ಮಾಡಬೇಕು, ಹೆಂಡತಿಯನ್ನು ಪ್ರೀತಿ ಮಾಡಬೇಕು ಎಂದು ಬಂದಿರುವುದೇ ಬಿಗ್‍ಬಾಸ್‍ಗೆ ಬಂದ ಮೇಲೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]