Tag: ಬಿಕ್ಷುಕ

  • ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ

    ಭೋಪಾಲ್: ಬಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂ. ಮೌಲ್ಯದ ಮೊಪೆಡ್‍ನ್ನು ಖರಿದಿಸಿದ ಘಟನೆ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದಿದೆ.

    ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಸಾಹು ಎಂಬ ಭಿಕ್ಷುಕ ಅಂಗವಿಕಲನಾಗಿದ್ದಾನೆ. ಈತನಿಗೆ ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು. ತನ್ನ ತ್ರಿಚಕ್ರ ವಾಹನವನ್ನು ಮುಂದಕ್ಕೆ ತಳ್ಳಲು ಪತ್ನಿ ಮುನ್ನಿ ಸಾಹು ಅವಳ ಸಹಾಯ ಪಡೆದುಕೊಳ್ಳುತ್ತಿದ್ದ. ಈ ರೀತಿಯಾಗಿಯೇ ಇಬ್ಬರು ಜೊತೆಗೆ ಭಿಕ್ಷೆ ಬೇಡುತ್ತಿದ್ದರು.

    ಹದಗೆಟ್ಟ ರಸ್ತೆಗಳು ಮತ್ತು ಹವಾಮಾನ ವೈಪ್ಯರೀತ್ಯದಿಂದಾಗಿ ಭಿಕ್ಷೆ ಕೇಳಲು ಇಬ್ಬರು ಆಗಾಗ ತೊಂದರೆ ಆಗುತ್ತಿತ್ತು. ಅಷ್ಟೇ ಅಲ್ಲದೇ ದಿನವಿಡೀ ತ್ರಿಚಕ್ರವಾಹನವನ್ನು ತಳ್ಳಬೇಕಾಗಿರುವುದರಿಂದ ಆತನ ಪತ್ನಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಳು. ಈ ಹಿನ್ನೆಲೆಯಲ್ಲಿ ಸಂತೋಷ್ ಮೊಪೆಡ್ ಖರೀದಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ಪ್ರತಿನಿತ್ಯ ವಾಹನಕ್ಕಾಗಿ ಹಣ ಉಳಿಸಲು ಪ್ರಾರಂಭಿಸಿದರು. ದಂಪತಿ ಬಸ್ ನಿಲ್ದಾಣಗಳು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಪ್ರತಿದಿನ ಸುಮಾರು 300 ರಿಂದ 400 ರೂ.ಗಳನ್ನು ಸಂಪಾದಿಸುತ್ತಿದ್ದರು. ಅಷ್ಟೇ ಅಲ್ಲದೇ ಊಟವನ್ನು ಅಲ್ಲೇ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಉಳಿತಾಯ ಮಾಡಿ 90 ಸಾವಿರ ನಗದು ಸಂಗ್ರಹಿಸಿ ಮೊಪೆಡ್ ಖರೀದಿಸಿದ್ದಾರೆ. ಈಗ, ದಂಪತಿ ಭಿಕ್ಷೆ ಕೇಳುತ್ತಾ ಮೊಪೆಡ್‍ನಲ್ಲಿ ಚಲಿಸುತ್ತಾರೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

  • ಬೆಂಗ್ಳೂರಿನಲ್ಲಿ ಭಿಕ್ಷುಕನಿಗೆ ಕೊರೊನಾ- ಶವ ಪರೀಕ್ಷೆಯಲ್ಲಿ ಸೋಂಕು ಪತ್ತೆ

    ಬೆಂಗ್ಳೂರಿನಲ್ಲಿ ಭಿಕ್ಷುಕನಿಗೆ ಕೊರೊನಾ- ಶವ ಪರೀಕ್ಷೆಯಲ್ಲಿ ಸೋಂಕು ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಅಂತೆಯೇ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೂ ಕೊರೊನಾ ಸೋಂಕು ಹರಡಿದೆ.

    ಇಂದು ಬೆಂಗಳೂರಿನಲ್ಲಿ ಕೊರೊನಾಗೆ ನಾಲ್ವರು ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಇಂದು ಮೃತಪಟ್ಟಿದ್ದಾರೆ. ಆದರೆ ಸೋಮವಾರ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಆಂತಕಕ್ಕೆ ಎಡೆಮಾಡಿಕೊಟ್ಟಿದೆ.

    ಸೋಮವಾರ ನಾಗರಬಾವಿ ಬ್ರಿಡ್ಜ್ ನಿಂದ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವನ್ನಪ್ಪಿದ ವ್ಯಕ್ತಿಯನ್ನು ಬೀದಿ ಬದಿಯ ಭಿಕ್ಷುಕ ಎಂದು ಗುರುತಿಸಲಾಗಿತ್ತು. ಆದರೆ ಆತನ ಹೆಸರು ಮನೆ ವಿಳಾಸ ಹಿನ್ನೆಲೆ ಯಾವುದೂ ಪತ್ತೆಯಾಗಿರಲಿಲ್ಲ. ಆದ್ದರಿಂದ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸೇರಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದರು. ಈಗ ಮೃತ ಭಿಕ್ಷುಕನ ಮರಣ ನಂತರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಹೆಣ ಸಾಗಿಸಿದ ಅಧಿಕಾರಿಗಳಿಗೆ ಟೆನ್ಷನ್ ಶುರುವಾಗಿದೆ.