Tag: ಬಿಕೆ ಹರಿಪ್ರಸಾದ್

  • ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡ್ತಾರೆ: ಬಿಕೆ ಹರಿಪ್ರಸಾದ್‌

    ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡ್ತಾರೆ: ಬಿಕೆ ಹರಿಪ್ರಸಾದ್‌

    – ಆರ್‌ಎಸ್‌ಎಸ್‌ ಟೀಕಿಸುವ ಭರದಲ್ಲಿ ವಿವಾದಾತ್ಮಕ ಮಾತು

    ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಟೀಕಿಸುವ ಭರದಲ್ಲಿ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಹಿಂದೂ ಧರ್ಮದ ಆಚರಣೆ ಬಗ್ಗೆ ನಾಲಗೆ ಹರಿಬಿಟ್ಟಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ (Ganesh Chaturthi) ಡಿಜೆ ಹಾಕಿಕೊಂಡು, ಎಣ್ಣೆ ಹಾಕಿಕೊಳ್ಳುತ್ತಾರೆ. ಎಣ್ಣೆ ಹಾಕಿಕೊಂಡು ಮಸೀದಿ, ಚರ್ಚ್ ಮುಂದೆ ಡ್ಯಾನ್ಸ್ ಮಾಡುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಸೀದಿ, ಚರ್ಚ್‌ ಮುಂದೆ ಮಾಡುವ ಇದು ಯಾವ ಸಾಂಸ್ಕೃತಿಕ ಚಟುವಟಿಕೆ? ಇವರು ಮಾಡಲು ಹೊರಟಿರುವುದೇನು?, ಇದು ಯಾವ ದೇಶಭಕ್ತಿ? ದೇಶಭಕ್ತಿ ಎಂದರೆ ಏನು? ತ್ರಿವರ್ಣ ಧ್ವಜ, ರಾಷ್ಟ್ರ ಗೀತೆ, ಸಂವಿಧಾನಕ್ಕೆ ಕೊಡಬೇಕು. ಆದರೆ ಆರ್‌ಎಸ್‌ಎಸ್‌ ಯಾವತ್ತು ಗೌರವ ನೀಡಿಲ್ಲ ಎಂದು ದೂರಿದರು.

     

    ಆರ್‌ಎಸ್‌ಎಸ್‌ನವರು ದೊಣ್ಣೆ ಹಿಡಿದು ಪಂಥಸಂಚಲನ ಯಾಕೆ ಮಾಡಬೇಕು? ದೊಣ್ಣೆ ಹಿಡಿಯದೇ ಪಂಥಸಂಚಲನ ಮಾಡಲಿ. ಬೇಡ ಎಂದು ಹೇಳಿದವರು ಯಾರು? ಆರ್‌ಎಸ್‌ಎಸ್‌ ನೋಂದಣಿಯಾಗಿರುವ ಸಂಸ್ಥೆಯಲ್ಲ. ಪಥಸಂಚಲನದಲ್ಲಿ ಏನಾದರೂ ಸಮಸ್ಯೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ಪ್ರತಿಬಾರಿ ಆರ್‌ಎಸ್‌ಎಸ್ ಬ್ಯಾನ್ ಆದಾಗಲೂ ಕ್ಷಮೆ ಕೋರಿ ಬ್ಯಾನ್ ತೆಗೆಸಿಕೊಂಡಿದ್ದಾರೆ. ನೋಂದಣಿಯಾಗದೇ ಇದ್ದರೂ ಇವರಿಗೆ ಹಣ ಎಲ್ಲಿಂದ ಬಂತು. ಗುರು ದಕ್ಷಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಪಡೆಯುತ್ತಿದ್ದಾರೆ. ಕಪ್ಪು ಹಣ ಇಲ್ಲೇ ಇದೆ, ಈ ಹಣ ಏನಕ್ಕೆ ಬಳಕೆಯಾಗುತ್ತಿದೆ. ನೂರು ಕೋಟಿ ರೂ. ಮೌಲ್ಯದ ಆರ್‌ಎಸ್‌ಎಸ್ ಕಚೇರಿ ನಿರ್ಮಿಸಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರು.

    ಸೇವಾದಳ ದೊಣ್ಣೆ ಹಿಡಿದು ಪಂಥಸಂಚಲನ ಮಾಡುತ್ತಾ? ಸೇವಾದಳ ತಪ್ಪು ಮಾಡಿದರೆ ಕಾಂಗ್ರೆಸ್ ಹೊಣೆ. ಆರ್‌ಎಸ್‌ಎಸ್ ತಪ್ಪು ಮಾಡಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

  • ಸರ್ಕಾರ ಬುಡಮೇಲು ಮಾಡಲು ಅಮಿತ್ ಶಾ ಸಲಹೆ – ಬಿಜೆಪಿ ನಾಯಕರ ದೆಹಲಿ ಭೇಟಿಗೆ ಹರಿಪ್ರಸಾದ್ ಲೇವಡಿ

    ಸರ್ಕಾರ ಬುಡಮೇಲು ಮಾಡಲು ಅಮಿತ್ ಶಾ ಸಲಹೆ – ಬಿಜೆಪಿ ನಾಯಕರ ದೆಹಲಿ ಭೇಟಿಗೆ ಹರಿಪ್ರಸಾದ್ ಲೇವಡಿ

    ಬೆಂಗಳೂರು: ಬಿಜೆಪಿ (BJP) ನಾಯಕರು ಸರ್ಕಾರವನ್ನು ಬುಡಮೇಲು ಮಾಡುವುದರಲ್ಲಿ ಡಾಕ್ಟರೇಟ್ ಮಾಡಿರುವ ಅಮಿತ್ ಶಾ (Amit Shah) ಸಲಹೆ ಪಡೆದು ಬಂದಿದ್ದಾರೆ ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ಟೀಕಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತಾಡಿದ ಹರಿಪ್ರಸಾದ್, ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಸರಿಯಿಲ್ಲ ಎಂದು ಹೇಳಿ ಬಿಜೆಪಿ ಚರಂಡಿಯಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಿದೆ. ಹಿಂದೂಗಳ ಲ್ಯಾಬೊರೇಟರಿ ಆಗಿದ್ದಂತಹ ದಕ್ಷಿಣ ಕನ್ನಡದಲ್ಲಿ ಶಾಂತಿ ನೆಲಸಲು ಸಿದ್ದರಾಮಯ್ಯ ಅವರ ದಿಟ್ಟ ನಿರ್ಧಾರ ಕಾರಣ. ಈಗ ಅಲ್ಲಿ ಶಾಂತಿ ನೆಲೆಸಿರುವುದರಿಂದ ಬಿಜೆಪಿಗೆ ರೋಟಿ, ಕಪಡಾ, ಮಕಾನ್ ಬಂದ್ ಆಗಿದೆ. ಅದನ್ನು ಪುನರ್ ಸ್ಥಾಪನೆ ಮಾಡಲು ಬೇರೆ ಜಿಲ್ಲೆಯಲ್ಲಿ ಹೋಗಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾಲೆಳೆದರು. ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ

    ನಮ್ಮ ಸರ್ಕಾರ ಬಂದಾಗಿಂದಲೂ ಇಲ್ಲಿಯವರೆಗೆ ಬಿಜೆಪಿ ಬಡವರು, ರೈತರು, ಕಾರ್ಮಿಕರ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಏನಾದರೂ ಚರ್ಚೆ ಮಾಡಿದ್ದಾರಾ? ಯಾವಾಗಲೂ ಪಾಳುಬಿದ್ದ ಸ್ಮಶಾನ, ಪಾಳುಬಿದ್ದ ದೇವಸ್ಥಾನ ಹುಡುಕಿ ರಾಜಕೀಯ ಮಾಡುತ್ತಾರೆ. ಧರ್ಮಸ್ಥಳದಲ್ಲಿ ಆಗುತ್ತಿರುವ ಜಗಳ ಧರ್ಮಸ್ಥಳದ ವಿಚಾರವಾಗಿ ಅಲ್ಲ. ಬಿಜೆಪಿಯಲ್ಲಿರುವ ಸ್ವಯಂ ಸೇವಕ ಸಂಘದ ಅಗ್ರಗಣ್ಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಬಿ.ಎಲ್ ಸಂತೋಷ್ ನಡುವಿನ ಜಗಳ ಧರ್ಮಸ್ಥಳವನ್ನ ಹಾಳು ಮಾಡುತ್ತಿದೆ. ಅಲ್ಲಿ ಶಾಂತಿ ನೆಲೆಸಿರುವುದು ಇವರಿಗೆ ಹಿಡಿಸುತ್ತಿಲ್ಲ. ಏನಾದರೂ ಮಾಡಿ ಕೆದಕಲು ನೋಡುತ್ತಿದ್ದಾರೆ, ಅದು ನಡೆಯಲ್ಲ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ. ಸಂಘ ಪರಿವಾರದ ನಡುವಿನ ಜಗಳದಿಂದಲೇ ಧರ್ಮಸ್ಥಳದಲ್ಲಿ ಗಲಾಟೆ ನಡೆಯುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಭಾರತೀಯನಾಗಿ ಮತ್ತೆ ಹುಟ್ಟಬೇಕು ಅನ್ನೋದು ನನ್ನಾಸೆ: ಮಧು ಬಂಗಾರಪ್ಪ

    ಇನ್ನು ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದ ಬಗ್ಗೆ ಮಾತಾಡಿ, ಇಂಡಿನಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಯಾರು ಅಂತ ಕೇಳಿ. ದಾವಣಗೆರೆಯಲ್ಲಿ ಕಲ್ಲು ತೂರಾಟ ಮಾಡಿದ್ದು ಯಾರು ಅಂತ ಕೇಳಿ. ಅದರ ಬಗ್ಗೆ ಬಹಿರಂಗ ಆದ್ರೆ ಗೊತ್ತಾಗುತ್ತೆ. ಎಲ್ಲಿ ಗಲಭೆಯಾಗುತ್ತಿದೆ ಎಲ್ಲ ಜಾಗದಲ್ಲೂ ಸಂಘ ಪರಿವಾರದವರು ಧರ್ಮದ ಹೆಸರಿನಲ್ಲಿ ಹೋಗಿ ಸೃಷ್ಟಿ ಮಾಡುತ್ತಿದ್ದಾರೆ. ಯಾವ ಯಾವ ಬಿಜೆಪಿ ನಾಯಕರ ಮಕ್ಕಳು, ಕೇಂದ್ರ ಮಂತ್ರಿಗಳ ಮಕ್ಕಳು ಒದೆ ತಿಂದಿದ್ದಾರೆ. ಅಮಾಯಕ ಹೆಣ್ಣು ಮಕ್ಕಳು ದಲಿತರಿಗೆ ಪ್ರಚೋದನೆ ಕೊಟ್ಟು ದುಡ್ಡು ಕೊಟ್ಟು ಬಿಜೆಪಿ ಮಾಡಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡಿರೋದು ಬಿಜೆಪಿ. ಬಿಜೆಪಿ ನಿಯೋಗ ಮದ್ದೂರು ಹೋಗುತ್ತಿರುವುದೇ ಶಾಂತಿ ಕದಡಲು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್‌ ಬಳ್ಳಾರಿಗೆ ಶಿಫ್ಟ್‌ – ಐಜಿಪಿಗೆ ಅಧಿಕಾರ‌ ಕೊಟ್ಟ ಕೋರ್ಟ್

  • ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು: ಬಿಕೆ ಹರಿಪ್ರಸಾದ್

    ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದು ತಪ್ಪು: ಬಿಕೆ ಹರಿಪ್ರಸಾದ್

    – ಆರ್‌ಎಸ್‌ಎಸ್‌ನ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು

    ನವದೆಹಲಿ: ಡಿಸಿಎಂ (DK Shivakumar) ಆಗಿ ಸಂಘದ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೇ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ (RSS) ಪ್ರಾರ್ಥನೆ ಹಾಡಿದ್ದು ತಪ್ಪು. ಅಧ್ಯಕ್ಷರಾಗಿ ಹೇಳಿದ್ರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.

    ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಂತಹ ಹೇಳಿಕೆ ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು ಎಲ್ಲಾರೂ ಇರುತ್ತಾರೆ. ಆರ್‌ಎಸ್‌ಎಸ್, ತಾಲಿಬಾನ್‌ಗಳು ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ, ಹೇಳಿದ್ರೆ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ

    ಮಹಾತ್ಮ ಗಾಂಧಿ ಕೊಂದವರು ಆರ್‌ಎಸ್‌ಎಸ್‌ನವರು. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಯಾರಿಗೆ ಸಂದೇಶ ಕೊಡಲು ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹಲವು ಮುಖಗಳು ಇವೆ. ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕರಣಿ ಅಂತಾ ಹಲವು ಮುಖಗಳಿವೆ. ಗಾಂಧಿ ಕೊಂದ ಸಂಘಟನೆ ಬಗ್ಗೆ ಹೀಗೆ ಹೇಳಿದ್ದಾರೆ. ಇದು ಯಾರಿಗಾದ್ರು ಸಂದೇಶ ಕೊಡುತ್ತಿರಬಹುದು ಎಂದರು. ಇದನ್ನೂ ಓದಿ: ತವರೂರು ಲಕ್ನೋದಲ್ಲಿ ಶುಭಾಂಶು ಶುಕ್ಲಾಗೆ ಭರ್ಜರಿ ಸ್ವಾಗತ

    ಬಿಜೆಪಿಯಿಂದ ಧರ್ಮಸ್ಥಳ ಚಲೋ (Dharmasthala Chalo) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಘಟ್ಟದ ಮೇಲೆ ಮತ್ತು ಕೆಳಗೆ ಇರುವ ಆರ್‌ಎಸ್‌ಎಸ್ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ಈ ಹಿಂದೆ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿಕೆಗಳು ನೋಡಿ. ಸೌಜನ್ಯ ಪ್ರಕರಣದಲ್ಲಿ ತನಿಖೆ ಆಗಬೇಕೆಂದು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರು, ಎಸ್‌ಐಟಿ ಮಾಡಬೇಕು ಅಂತಾ ಹೇಳಿದ್ದು ಬಿಜೆಪಿಯವರೇ. ಸರ್ಕಾರ ಕಾಲಮಿತಿಯೊಳಗೆ ತನಿಖೆ ಮುಗಿಸಬೇಕು. ಎಸ್‌ಐಟಿ ಧರ್ಮಸ್ಥಳ ದೇವಾಲಯ ಅಥವಾ ದೇವಾಲಯದವರನ್ನ ತನಿಖೆ ಮಾಡುತ್ತಿಲ್ಲ, ಬದಲಾಗಿ ಯಾರು ಆ ಬಗ್ಗೆ ಹೇಳಿಕೆ ನೀಡಿದ್ದಾರೋ ಮಾಸ್ಕಮ್ಯಾನ್, ಸಮೀರ್ ಸೇರಿದಂತೆ ಹಲವರ ಬಗ್ಗೆ ತನಿಖೆ ಮಾಡುತ್ತಿದೆ. ರಾಮಾಯಣ ಕಾಲದಲ್ಲಿ ಸೀತೆಯನ್ನ ಪರೀಕ್ಷಿಸಲಾಯಿತು. ಜನರು ಅರ್ಥ ಮಾಡಿಕೊಳ್ಳಬೇಕು, ಹೇಳಿಕೆ ನೀಡಿರುವವರನ್ನ ಮಾತ್ರ ತನಿಖೆ ಮಾಡುತ್ತಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕೀಯಕ್ಕೆ ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಆರ್‌ಎಸ್‌ಎಸ್ ಹಾಗೂ ಘಟ್ಟದ ಮೇಲೆ ಇರುವವರ ಗುಂಪಿನಿಂದ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್

  • ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌: ಬಿಕೆ ಹರಿಪ್ರಸಾದ್‌

    ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌: ಬಿಕೆ ಹರಿಪ್ರಸಾದ್‌

    ನವದೆಹಲಿ: ಆರ್‌ಎಸ್‌ಎಸ್‌ (RSS) ಭಾರತದ ತಾಲಿಬಾನ್‌ (Taliban) ಎಂದು ವಿಧಾನ ಪರಿಷತ್‌ ಸದಸ್ಯ ಬಿಕೆ ಹರಿಪ್ರಸಾದ್‌ (BK Hariprasad) ಕಿಡಿಕಾರಿದ್ದಾರೆ.

    ದೆಹಲಿಯ ಕೆಂಪುಕೋಟೆಯಲ್ಲಿ ಆರ್‌ಎಸ್‌ಎಸ್‌ ಸಂಘಟನೆಯನ್ನು ಮೋದಿ (Narendra Modi) ಹೊಗಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್‌ ದೇಶದದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಶಾಂತಿ ಕದಡುವ ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌ಗಳು ಎಂದು ವಾಗ್ದಾಳಿ ನಡೆಸಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ಯಾರಾದರೂ ಸಂಘಿಗಳು ಭಾಗವಹಿಸಿದ್ದಾರಾ? ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆಯಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಎಲ್ಲಿಂದ ಹಣ ಸಿಗುತ್ತದೆ ಎಂದು ನಮಗೆ ತಿಳಿದಿಲ್ಲ. ದೇಶದಲ್ಲಿ ಕೆಲಸ ಮಾಡಲು ಬಯಸುವ ಯಾವುದೇ ಎನ್‌ಜಿಒ ಸಂವಿಧಾನದ ಪ್ರಕಾರ ನೋಂದಾಯಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ವರ್ಷದ ಅಂತ್ಯಕ್ಕೆ ಮಾರುಕಟ್ಟೆಗೆ ಬರಲಿದೆ ಮೇಡ್ಇನ್ಇಂಡಿಯಾ ಚಿಪ್‌: ಮೋದಿ ಘೋಷಣೆ

     

    ಮುಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಮತ್ತು ಆಗಿನ ವೈಸ್‌ರಾಯ್ ಲಾರ್ಡ್ ಮೌಂಟ್‌ಬ್ಯಾಟನ್ ಅವರು ದೇಶ ವಿಭಜನೆಗೆ ಕಾರಣ ಎಂದು ಎನ್‌ಸಿಇಆರ್‌ಟಿ ಪಠ್ಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಇತಿಹಾಸವನ್ನು ತಿರುಚುವ ಮಾಸ್ಟರ್ಸ್ ಎಂದು ತಿರುಗೇಟು ನೀಡಿದರು.

    ವಿಭಜನೆಗಾಗಿ ಬಂಗಾಳದಲ್ಲಿ ಮೊದಲ ನಿರ್ಣಯವನ್ನು ಮಂಡಿಸಿದವರು ಫಜ್ಲುಲ್ ಹಕ್ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ. ಜಿನ್ನಾ ಮತ್ತು ಸಾವರ್ಕರ್ ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಅಭಿಪ್ರಾಯಪಟ್ಟರು. ಅವರು ಅದಕ್ಕೆ ಕಾಂಗ್ರೆಸ್ ಅನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ

    ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ: ಇಡಿ ದಾಳಿಗೆ ಹರಿಪ್ರಸಾದ್ ಆಕ್ಷೇಪ

    ನವದೆಹಲಿ: ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಭ್ರಷ್ಟಚಾರ ನಡೆದಿದ್ದರೆ (Valmiki Scam) ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಲಿ ಆದರೆ ಅದು ರಾಜಕೀಯ ಪ್ರೇರಿತ ದಾಳಿಯಾಗಬಾರದು ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು ವಾಲ್ಮಿಕಿ ಹಗರಣದಲ್ಲಿ ತಪ್ಪಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಸಚಿವರ ಪಾತ್ರ ಇಲ್ಲ ಎಂದು ಸಾಬೀತಾಗಿದೆ. ಇಡಿ (ED) ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆ. ರಾಜಕೀಯ ಕಾರಣಗಳಿಗೆ ದಾಳಿಯಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರು, ಸಂಸದರ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ: ಪೊನ್ನಣ್ಣ

    ಜಾತಿ ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದ ಬಗ್ಗೆ ಮಾತನಾಡಿದ ಅವರು, ಈಗ ಮಾಡಿರುವ ವರದಿ ಹಳೆಯದಾಗಿದೆ. ಜಯ ಪ್ರಕಾಶ್ ಹೆಗಡೆ ವರದಿ ಅವೈಜ್ಞಾನಿಕ ಎಂದರು. ಆದರೆ ಹೇಗೆ ಎಂದು ಯಾರು ಹೇಳಿಲ್ಲ. ಮುಂದಿನ ದಿನಗಳಲ್ಲಿ ಹೇಗೆ ಸಮೀಕ್ಷೆ ಬರುತ್ತೆ ಎಂದು ಜನರು ಎದುರು ನೋಡುತ್ತಿದ್ದಾರೆ. ಇಂತಹದೇ ಆರೋಪಗಳು ಮುಂದೆಯೂ ಬರಬಹುದು. ಅವೈಜ್ಞಾನಿಕ ಏನು ಎಂಬುದು ಸ್ಪಷ್ಟಪಡಿಸಬೇಕು, ಅದನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ತೆಲಂಗಾಣದಲ್ಲಿ ಸಮೀಕ್ಷೆ ಮಾಡಿ ತೋರಿಸಿದೆ, ಇಲ್ಲೂ ಮಾಡುತ್ತೇವೆ. ಈಗಾಗಲೇ ಸಮೀಕ್ಷೆಯಿಂದ 187 ಕೊಟಿ ನಷ್ಟವಾಗಬಹುದು, ಮುಂದೆ ಹೀಗೆ ಆಗಬಾರದು. ಬಲಾಢ್ಯರಿಗೆ ಮಾತ್ರ ಅನುಕೂಲವಾಗಬಾರದು. ಹಿಂದುಳಿದ ಜನರಿಗೂ ಸಂವಿಧಾನದ ಆಶಯ ತಲುಪಬೇಕು ಎಂದು ಹೇಳಿದರು. ಇದನ್ನೂ ಓದಿ: ವಾಲ್ಮೀಕಿ ಹಗರಣದ 187 ಕೋಟಿ ಹಣ ಒಡವೆ ಅಂಗಡಿ, ಕಾರ್ ಶೋರೂಂ, ಬಾರ್‌ಗೆ ಹೋಗಿದೆ: ಸಿ.ಟಿ.ರವಿ ಆರೋಪ

    ಸಚಿವ ಸಂಪುಟ ಪುನಾರಚನೆ ಸುದ್ದಿ ಎರಡು ದಿನದಿಂದ ಓಡಾಡುತ್ತಿದೆ. ಇದು ಬೆಟ್ಟ ಅಗೆದು ಇಲಿ ಹಿಡಿದಂತೆ ಆಗಲಿದೆ. ಏನು ಆಗಲ್ಲ, ಸರ್ಕಾರ ಆರಾಮವಾಗಿ ನಡೆದುಕೊಂಡು ಹೋಗುತ್ತದೆ. ಸಚಿವ ಸಂಪುಟ ಪುನಾರಚನೆ ಆಗಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರನ್ನ ತೇಜೋವಧೆ ಮಾಡಲು ಇಡಿ ದಾಳಿ: ಅಶೋಕ್ ಪಟ್ಟಣ

  • ಹೈಕಮಾಂಡ್ ಹೇಳಿದ ಮೇಲೂ ಸಿಎಂ ಬದಲಾವಣೆ ಚರ್ಚೆ ಮಾಡೋದು ಸರಿಯಲ್ಲ: ಹರಿಪ್ರಸಾದ್

    ಹೈಕಮಾಂಡ್ ಹೇಳಿದ ಮೇಲೂ ಸಿಎಂ ಬದಲಾವಣೆ ಚರ್ಚೆ ಮಾಡೋದು ಸರಿಯಲ್ಲ: ಹರಿಪ್ರಸಾದ್

    ಬೆಂಗಳೂರು: ಹೈಕಮಾಂಡ್ ಹೇಳಿದ ಮೇಲೂ ಸಿಎಂ (Siddaramaiah) ಬದಲಾವಣೆ ಬಗ್ಗೆ ಮಾತನಾಡಿದರೆ ಹೈಕಮಾಂಡ್ ನಾಯಕರು ಅದರ ಬಗ್ಗೆ ತೀರ್ಮಾನ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ (BK Hariprasad) ತಿಳಿಸಿದ್ದಾರೆ.

    ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಬೇಕು ಎಂಬ ಕೆಲ ಶಾಸಕರ ಹೇಳಿಕೆ ವಿಚಾರಕ್ಕೆ ವಿಕಾಸಸೌಧದಲ್ಲಿ ಮಾತಾಡಿದ ಅವರು, ಶಾಸಕರು ಹೇಳಿರೋ ಬಗ್ಗೆ ನಾನೇನು ಕಾಮೆಂಟ್ ಮಾಡೋಕೆ ಆಗಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಹೀಗಿದ್ದರೂ ಮಾತನಾಡುತ್ತಿದ್ದಾರೆ ಅಂದರೆ ನಾಯಕರೇ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನೇನು ಕಾಮೆಂಟ್ ಮಾಡಲ್ಲ ಎಂದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಜಾತಿ ಸಮೀಕರಣ – ಭಿನ್ನರ ಪಟ್ಟಿಯಲ್ಲಿ ಯಾರಿದ್ದಾರೆ?

    ಪಕ್ಷದ ಶಿಸ್ತು ಅನ್ನೋದು, ಸಿದ್ದರಾಮಯ್ಯ, ಡಿಕೆಶಿ, ಹರಿಪ್ರಸಾದ್ ಅಂತ ಬರಲ್ಲ. ಅಶಿಸ್ತು ಅಂದ್ರೆ ಅಶಿಸ್ತೇ. ಯಾರೇ ಅಶಿಸ್ತು ತೋರಿಸಿದ್ರೆ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಅಆಸಮಿತಿ ಅವರು ಯಾವುದು ಶಿಸ್ತು, ಯಾವುದು ಅಶಿಸ್ತು ಅಂತ ತೀರ್ಮಾನ ಮಾಡಬೇಕು. ಅದೇನು ದೊಡ್ಡ ವಿಚಾರ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೀದರ್ ದರೋಡೆ ಕೇಸ್ – ಗಾಯಗೊಂಡಿದ್ದ ಶಿವಕುಮಾರ್‌ಗೆ ಬಿಜೆಪಿಯಿಂದ 1 ಲಕ್ಷ ಪರಿಹಾರ

  • ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

    ಪೇಜಾವರ ಶ್ರೀ ಬಗ್ಗೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ – ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜ ಆಕ್ರೋಶ

    ಬಾಗಲಕೋಟೆ: ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Udupi Pejawar Vishwa Prasanna Teertha Swamiji) ಕುರಿತಾಗಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ (BK Hariprasad) ನೀಡಿರುವ ಹೇಳಿಕೆ ಖಂಡಿಸಿ ಇಂದು ಬಾಗಲಕೋಟೆಯ (Bagalkot) ಬ್ರಾಹ್ಮಣ ತರುಣ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಜಿಲ್ಲಾಡಳಿತ ಸಭಾಭವನದ ಎದುರು ಜಮಾಯಿಸಿದ ಬ್ರಾಹ್ಮಣ ಸಮಾಜದವರು (Brahmin Community Members) ಬಿ.ಕೆ.ಹರಿಪ್ರಸಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಅವರು ಮಾತನಾಡಿ, ರಾಮಮಂದಿರ (Ram Mandir) ನಿರ್ಮಾಣ ಹೋರಾಟದಲ್ಲಿ ಪೇಜಾವರ ಮಠದ ಹಿರಿಯ ಶ್ರೀಗಳು ನೇತೃತ್ವ ವಹಿಸಿದ್ದರೆ, ಮೂರ್ತಿ ಪ್ರತಿಷ್ಠಾಪನೆಯನ್ನು ಈಗಿನ ವಿಶ್ವಪ್ರಸನ್ನತೀರ್ಥರು ನೆರವೇರಿಸಿದ್ದರು. ಶ್ರೀಮಠಕ್ಕೆ ಭವ್ಯ ಪರಂಪರೆಯಿದ್ದು ಅವರ ಕುರಿತಾಗಿ ಮಾತನಾಡುವಾಗ ಎಚ್ಚರವಹಿಸಬೇಕು ಎಂದು ಆಕ್ರೋಶ ಹೊರ ಹಾಕಿದರು.

    ಬ್ರಾಹ್ಮಣ ಸಮಾಜದ ತ್ರಿಮಸ್ಥ ಸ್ವಾಮೀಜಿ ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಇನ್ನು ಸಮಾಜ ಸಹಿಸುವುದಿಲ್ಲ. ಸಮಾಜದ ಯುವಕರು ಪ್ರತಿಭಟಿಸಲು ಸಜ್ಜಾಗಿದ್ದು, ಮತದಾನದ ಮೂಲಕ ಉತ್ತರ ನೀಡುವುದು ಸಹ ಸಮಾಜಕ್ಕೆ ತಿಳಿದಿದೆ ಎಂದು ಎಚ್ಚರಿಕೆ ನೀಡಿದರು.

    ಪಂಡಿತ್ ರಘೋತ್ತಮಾಚಾರ್ಯ ನಾಗಸಂಪಿಗೆ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಅವರು ಮಾತನಾಡಿ, ಪೇಜಾವರ ಶ್ರೀಗಳು ಎಲ್ಲ ಸಮಾಜದೊಡನೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಗೋಶಾಲೆ, ದೀನದಲಿತರ ಏಳಿಗೆಗೆ ಶ್ರಮಿಸಿದ್ದಾರೆ. ಅಂಥವರ ಬಗ್ಗೆ ರಾಜಕಾರಣಿಗಳು ಮಾತನಾಡುವಾಗ ಎಚ್ಚರದಿಂದ ಇರಬೇಕೆಂದು ಹೇಳಿದರು. ಇದನ್ನೂ ಓದಿ: ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ? – ವಿಶ್ವಪ್ರಸನ್ನ ತೀರ್ಥ ಶ್ರೀ

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ‌ ಮಾತನಾಡಿ, ಬ್ರಾಹ್ಮಣರ ಸಂಖ್ಯೆ ಕಡಿಮೆ ಎನ್ನುವ ಮನೋಭಾವದಲ್ಲಿ ಸಮಾಜದ ಕುರಿತಾಗಿ ಲಘುವಾಗಿ ಮಾತನಾಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಸಮಾಜ ಪರಿವರ್ತನೆಯ ತಾಕತ್ತು ನಮಗಿದೆ. ಸಂದರ್ಭ ಬಂದಾಗ ಉತ್ತರಿಸುತ್ತೇವೆ ಎಂದರು.

    ಬಿ. ಕೆ. ಹರಿಪ್ರಸಾದ್ ತಮ್ಮ ಮಾತನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ‌ ನೀಡಿದರು.

    ಹರಿಪ್ರಸಾದ್‌ ಹೇಳಿದ್ದೇನು?
    ಜಾತಿಗಣತಿ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದ ಪೇಜಾವರ ಶ್ರೀ, ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ (Caste Census) ಮಾಡಿ ಮುಚ್ಚಿಟ್ಟಿದೆ. ಜಾತ್ಯಾತೀತವಾಗಿರುವ (Secular) ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದು ಪ್ರಶ್ನಿಸಿದ್ದರು. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿಗಣತಿ ಎನ್ನುತ್ತೀರಿ. ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದರು.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಹರಿಪ್ರಸಾದ್‌, ಪೇಜಾವರ ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.

     

  • ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ: ಬಿ.ಕೆ.ಹರಿಪ್ರಸಾದ್

    ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ: ಬಿ.ಕೆ.ಹರಿಪ್ರಸಾದ್

    ರಾಯಚೂರು: ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ. ಅವರ ಪ್ರಣಾಳಿಕೆಯಲ್ಲಿ (Manifesto) ಅಮೃತ್ ಕಾಲ್ ಎಂದು ಹೇಳಿದ್ದಾರೆ. ಆದರೆ ಇದು ಅನ್ಯಾಯದ ಕಾಲ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ (BK Hariprasad) ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

    ರಾಯಚೂರಲ್ಲಿ (Raichur) ಮಾತನಾಡಿದ ಅವರು, ಮೋದಿ ಈ ಹಿಂದೆಯೂ ಅಚ್ಛೇ ದಿನ್ ಅಂತಾ ಹೇಳಿದ್ದರು. ಯುವಕರಿಗೆ ಸ್ಕಿಲ್ ಇಂಡಿಯಾ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ಅಂತಾ ಮಾಡಿದರು. ಆತ್ಮನಿರ್ಭರ್ ಅಂತಾ ಹೇಳಿದ್ರೂ ಏನೂ ಉಪಯೋಗ ಆಗಿಲ್ಲ. ಫಾರ್ಮರ್ ಹಬ್, ಹಾರ್ಟಿಕಲ್ಚರ್ ಹಬ್ ಮಾಡುತ್ತೇವೆ ಎಂದಿದ್ದರು. ಆದರೆ ಇದು ಅಮೃತ ಕಾಲ ಅಲ್ಲ, ಇದು ಅನ್ಯಾಯದ ಕಾಲ ಎಂದು ಹರಿಹಾಯ್ದರು. ಇದನ್ನೂ ಓದಿ: ಆಪ್‌ ಮೈತ್ರಿಗೆ ವಿರೋಧ – ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ರಾಜೀನಾಮೆ

    ಜನ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ನಾವು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಐದು ಪ್ರಮುಖ ಅಂಶಗಳೊಂದಿಗೆ ಪ್ರಣಾಳಿಕೆಯನ್ನು ಖರ್ಗೆ ನೇತೃತ್ವದಲ್ಲಿ ಬಿಡುಗಡೆ ಮಾಡಿದೆವು. ಇದು ಯುವಕ, ಮಹಿಳೆ ಸೇರಿದಂತೆ ಎಲ್ಲರಿಗೂ ಉಪಯೋಗವಾಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ

    2021ರ ಬಜೆಟ್‌ನಲ್ಲಿ 35,000 ಕೋಟಿ ವ್ಯಾಕ್ಸಿನ್‌ಗೆ ಇಟ್ಟಿದ್ದೇವೆ ಎಂದರು. ವ್ಯಾಕ್ಸಿನ್‌ಗೆ ದರ ನಿಗದಿಪಡಿಸಿದರು. ಸುಪ್ರೀಂ ಕೋರ್ಟ್ ಸುಮೊಟೊ ಕೇಸ್ ತೆಗೆದುಕೊಂಡಿತ್ತು. ಹೆಲ್ತ್ ಎಮರ್ಜೆನ್ಸಿ ಡಿಕ್ಲೇರ್ ಮಾಡಲಾಗಿದೆ. ಆದರೆ ಅದಕ್ಕೆ ರಿಸರ್ವ್ ಇರುವ ಹಣದ ಮಾಹಿತಿ ಕೊಡಿ, ಉಚಿತವಾಗಿ ಯಾಕೆ ವ್ಯಾಕ್ಸಿನ್ ಕೊಡ್ತಿಲ್ಲ ಎಂದು ಕೇಳಿತ್ತು. ನಂತರ ವ್ಯಾಕ್ಸಿನ್ ಉಚಿತವಾಗಿ ಕೊಟ್ಟರು ಎಂದು ಕಿಡಿಕಾರಿದರು. ಇದನ್ನೂ ಓದಿ: UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್‌ ಮಾಡಿ ಅಶೋಕ್‌ ಕಿಡಿ

    ಬಿ.ಕೆ.ಹರಿಪ್ರಸಾದ್ ಚಲಾವಣೆಯಲ್ಲಿ ಇಲ್ಲದ ನಾಣ್ಯ ಅನ್ನೋ ಜನಾರ್ದನರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಮಾಡಿ 400 ವರ್ಷ ಜೈಲಲ್ಲಿದ್ರೆ ಅವರ ಪ್ರಕಾರ ಚಲಾವಣೆ ನಾಣ್ಯ. ಈ ರಾಜ್ಯವನ್ನು ಲೂಟಿ ಹೊಡೆದು, ಕಳ್ಳತನ ಮಾಡಿ ನಾನು ಜೈಲಿಗೆ ಹೋದವನಲ್ಲ. ಅವರಿಗೆಲ್ಲಾ ಉತ್ತರ ಕೊಡುವುದು ತಪ್ಪು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ – ತನಿಖಾ ವರದಿ ಬಂದ ಮೇಲೆ ಮಾತನಾಡ್ತೀನಿ ಎಂದ ಹೆಚ್‌ಡಿಕೆ

  • ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ

    ಅಂಧ ಭಕ್ತರು ಹೆಚ್ಚಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹುನ್ನಾರ: ಹರಿಪ್ರಸಾದ್ ವಾಗ್ದಾಳಿ

    ನವದೆಹಲಿ: ಅಂಧ ಭಕ್ತರು ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಬಿಜೆಪಿ (BJP) ಮಾಡುತ್ತಿದೆ. ದಕ್ಷಿಣ ಭಾರತದವರು ಅಂಧ ಭಕ್ತರು ಅಲ್ಲ ಎನ್ನುವ ಕಾರಣಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಆರೋಪಿಸಿದ್ದಾರೆ.

    ದೆಹಲಿಯಲ್ಲಿ (New Delhi) ನಡೆಯಲಿರುವ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ಡಿ.ಕೆ ಸುರೇಶ್ (DK Suresh) ಹೇಳಿಕೆ ಬಹಳಷ್ಟು ಚರ್ಚೆಯಾಗುತ್ತಿದೆ. ತೆರಿಗೆ ರೂಪದಲ್ಲಿ ಬರುವ ಹಣ ಹೇಗೆ ವಿಕೇಂದ್ರಿಕರಣಗೊಳ್ಳಬೇಕು ಎಂದು ಫೈನಾನ್ಸ್ ಕಮಿಷನ್ ನಿರ್ಧರಿಸುತ್ತದೆ. ಈಶಾನ್ಯ ರಾಜ್ಯಗಳಿಗೆ ಅನುದಾನದ ಕೊರತೆ ಇದೆ. ಅವರಿಗೆ ಆರ್ಥಿಕ ಸಹಾಯ ಮಾಡುವುದು ನ್ಯಾಯ ಆದರೆ ಉತ್ತರ ಭಾರತದ ಕೆಲವು ರಾಜ್ಯಗಳು ರೋಗಗ್ರಸ್ಥ ರಾಜ್ಯಗಳು ಉತ್ಪಾದನೆ, ಉದ್ಯೋಗ ಸೃಷ್ಟಿ ಮಾಡಿದ್ದರೆ ಈ ರೀತಿಯ ಸಮಸ್ಯೆ ಬರುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸುರೇಶ್ ಮಾತನಾಡಿದ್ದಾರೆ. ಅದನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ಈ ದೇಶವನ್ನು ಒಡೆಯುತ್ತಿರುವುದು ಕಾಂಗ್ರೆಸ್ (Congress) ಅಲ್ಲ ಬಿಜೆಪಿ. ಬಿಜೆಪಿಯವರು ತ್ರಿವರ್ಣ ಧ್ವಜ, ಸಂವಿಧಾನ, ಜಾತ್ಯತೀತ ತತ್ವದ ವಿರೋಧಿಗಳು ಈ ಎಲ್ಲಾ ತತ್ವಗಳ ವಿರುದ್ಧ ಮಾತನಾಡುವ ಇವರಿಗೆ ದೇಶದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಒನ್ ನೇಷನ್ ಒನ್ ರೇಷನ್‌ನಿಂದ ಹಿಡಿದು ಎಲ್ಲ ಒಂದು ಮಾಡಲಾಗುತ್ತಿದೆ. ನಮ್ಮ ಭಾಷೆಗೆ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಲ್ಲ – ಶಶಿ ತರೂರ್‌

    ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಲು ಬರುತ್ತಿದ್ದಾರೆ. ಭಾರತದಲ್ಲಿ ಗುಜರಾತ್ ಒಂದು ರಾಜ್ಯ. ಆದರೆ ಭಾರತ ಎಂದರೆ ಗುಜರಾತ್ (Gujarat) ಅನ್ನೋ ಹಾಗಿದೆ. ದೇಶದಲ್ಲೇ ಗುಜರಾತ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿದೆ. ಕ್ರಿಕೆಟ್‌ನಿಂದ ಹಿಡಿದು ಕಡ್ಲೆಕಾಯಿ ಮಾರುವ ವಿಚಾರದಲ್ಲೂ ಗುಜರಾತ್‌ಗೆ ಆದ್ಯತೆ ನೀಡಿದರೆ ಬಾಕಿ ರಾಜ್ಯಗಳು ದನ ಮೇಯಿಸಲು ಬಂದಿದೆಯಾ? ಗುಜರಾತ್ ಮಾಡೆಲ್ ಅಂದ್ರೆ ಪಂಗನಾಮ ಹಾಕುವುದು ಅಲ್ಲಿರುವ ಬಹುತೇಕ ಉದ್ಯಮಿಗಳು ದೇಶಕ್ಕೆ ನಾಮ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

    ರಾಮಮಂದಿರ (Ram Mandir) ಧಾರ್ಮಿಕ ಕಾರ್ಯಕ್ರಮ ಅಲ್ಲ, ರಾಜಕೀಯ ಕಾರ್ಯಕ್ರಮ. ಕೋಟ್ಯಂತರ ರೂ. ಖರ್ಚು ಮಾಡಿ ಮೋದಿ ಮತ್ತು ದೇವಸ್ಥಾನ ತೋರಿಸಿದರು. ಬಡತನ ಸಮಸ್ಯೆ, ಮಣಿಪುರ ಸಂಘರ್ಷ, ಅತ್ಯಾಚಾರ ಯಾವುದನ್ನು ತೋರಿಸಲಿಲ್ಲ. ಜನರ ತೆರಿಗೆ ದುಡ್ಡನ್ನು ತೋರ್ಪಡಿಕೆಗೆ ಖರ್ಚು ಮಾಡಿದೆ. ಮತ ಬ್ಯಾಂಕ್ ಧ್ರುವೀಕರಣ ಮಾಡಲು ಮಾಡಿದ ರಾಜಕೀಯ ಕಾರ್ಯಕ್ರಮ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

  • ವಿಜಯೇಂದ್ರ ಜೊತೆಗೆ ಮಂಪರು ಪರೀಕ್ಷೆಗೆ ಒಳಪಡಿಸುವುದಾದ್ರೆ ನಾನು ಸಿದ್ಧ: ಬಿ.ಕೆ ಹರಿಪ್ರಸಾದ್

    ವಿಜಯೇಂದ್ರ ಜೊತೆಗೆ ಮಂಪರು ಪರೀಕ್ಷೆಗೆ ಒಳಪಡಿಸುವುದಾದ್ರೆ ನಾನು ಸಿದ್ಧ: ಬಿ.ಕೆ ಹರಿಪ್ರಸಾದ್

    ನವದೆಹಲಿ: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ನನ್ನ ಜೊತೆಗೆ ಲೈವ್ ಆಗಿ ಮಂಪರು ಪರೀಕ್ಷೆಗೆ ಒಳಪಡಿಸುವುದಾದರೆ ನಾನು ಮಂಪರು ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಪರಿಷತ್ ಸದಸ್ಯ, ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಪ್ರತಿ ಸವಾಲು ಹಾಕಿದ್ದಾರೆ.

    ರಾಮಮಂದಿರ (Ram Mandir) ಉದ್ಘಾಟನೆ ವೇಳೆ ಗೋದ್ರಾ ತರಹದ ಘಟನೆ ಸಂಭವಿಸಬಹುದು ಎಂದು ಹೇಳಿಕೆ ನೀಡಿದ ಬಿ.ಕೆ ಹರಿಪ್ರಸಾದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬಿ.ವೈ ವಿಜಯೇಂದ್ರ ಅವರ ಹೇಳಿಕೆಗೆ ನವದೆಹಲಿಯಲ್ಲಿ (New Delhi) ಪ್ರತಿಕ್ರಿಯಿಸಿದ ಅವರು, ಏಕಕಾಲದಲ್ಲಿ ನನ್ನ ಮತ್ತು ವಿಜಯೇಂದ್ರ ಅವರನ್ನು ಪರೀಕ್ಷೆಗೆ ಒಳಪಡಿಸಿ ಎಂದು ಹೇಳಿದರು. ಇದನ್ನೂ ಓದಿ: ಮನೆಯ ಮುಂದೆ ರಾಮಮಂದಿರದ ಪ್ರತಿಕೃತಿ ನಿರ್ಮಿಸಿದ ಎಂಜಿನಿಯರ್

    ಹೊಸ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ಹುಮ್ಮಸ್ಸಿನಲ್ಲಿ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ 40,000 ಕೋಟಿ ಹಗರಣ ನಡೆದಿದೆ ಎಂದು ಬಿಜೆಪಿ ನಾಯಕ ಬಸನಗೌಡ ಯತ್ನಾಳ್ (Basangouda Patil Yatnal) ಹೇಳಿದ್ದಾರೆ. ಹೀಗಾಗೀ ನನ್ನ ಮತ್ತು ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಮಂಪರು ಪರೀಕ್ಷೆ ಲೈವ್ ಆಗಬೇಕು. ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದು ಸವಾಲು ಹಾಕಿದರು. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

    ಮುಂದುವರಿದು ಬಿಜೆಪಿ ನಾಯಕ ಸಿ.ಟಿ ರವಿ  (CT Ravi) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಸಿ.ಟಿ ರವಿ ಮೊದಲನೇ ಬಾರಿಗೆ ಸತ್ಯ ಹೇಳಿದ್ದಾರೆ. ಹೀಗಾಗಿ ಅವರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ. ಬಿಜೆಪಿ ಅವರ ಆಟಗಳು ನಮಗೆ ಗೊತ್ತಿದೆ. ವಿರೋಧ ಪಕ್ಷದ ನಾಯಕರು ನನ್ನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ಆದರೆ ನನ್ನ ಬಂಧನಕ್ಕೂ ಮುನ್ನ ಹೆಚ್‌ಎಂಟಿ ಬಳಿ ಫಿಲ್ಮ್ ಥಿಯೇಟರ್ ಇತ್ತು. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾಕೆ ಅರೆಸ್ಟ್ ಆಗಿದ್ದರು ಅಂತಾ ಮೊದಲು ಹೇಳಿ ಬಿಡಲಿ. ಆಮೇಲೆ ಬೇಕಾದರೆ ನನ್ನನ್ನು ಬಂಧಿಸಲಿ. ನಾನು ಯಾವುದೇ ಕ್ರಿಮಿನಲ್ ಕೇಸ್, ಭ್ರಷ್ಟಾಚಾರದ ಆರೋಪ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ. ರಾಜ್ಯದಲ್ಲಿ ಜನರು ಶಾಂತವಾಗಿರಬೇಕು. ಮುನ್ನೆಚ್ಚರಿಕೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ಇದನ್ನೂ ಓದಿ: ಸಂಸತ್ ದಾಳಿ: ಮೈಸೂರಿನ ಮನೋರಂಜನ್‌ ಸೇರಿ ಐವರಿಗೆ ಮಂಪರು ಪರೀಕ್ಷೆ

     

    ಭಾರತ್ ಜೋಡೊ ನ್ಯಾಯ ಯಾತ್ರೆ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಉದ್ದೇಶಕ್ಕಾಗಿ ಯಾತ್ರೆ ಮಾಡುತ್ತಿಲ್ಲ. ಮೊದಲ ಹಂತದ ಯಾತ್ರೆ ಸಮಯದಲ್ಲಿ ಇದು ಚುನಾವಣೆಗೆ ಸಂಬಂಧಿಸಿಲ್ಲ ಎಂದು ಹೇಳಿದೆ. ದ್ವೇಷ ಮತ್ತು ಅಸೂಯೆ ವಾತಾವರಣ ಸರಿಪಡಿಸಲು ಯಾತ್ರೆ ಕೈಗೊಂಡಿದೆ. ಪ್ರಧಾನಿ ಮೋದಿ (Narendra Modi) ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ. ಲಕ್ಷದ್ವೀಪ ಸೇರಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಜನರ ನೋವಿನ ಬಗ್ಗೆ ಬಿಜೆಪಿ ಅವರಿಗೆ ಅರಿವು ಇಲ್ಲ. ಅವರು ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಗೊತ್ತಿಲ್ಲ. ಇಸ್ರೇಲ್‌ನಲ್ಲಿ (Israel) ಯುದ್ಧ ಆದರೆ ಮೋದಿ ಮಾತನಾಡುತ್ತಾರೆ ಆದರೆ ಮಣಿಪುರದ ಬಗ್ಗೆ ಮಾತನಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 8 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಭಾರತೀಯ ವಾಯುಪಡೆ ವಿಮಾನದ ಅವಶೇಷಗಳು ಪತ್ತೆ – ಇದೇ ವಿಮಾನದಲ್ಲಿದ್ರು ಮಂಗಳೂರಿನ ಯೋಧ

    ಜನಗಣತಿ ವರದಿ (Caste Census) ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿಗಣತಿ ವರದಿ ಅಂತಿಮ ಆಗಿದೆ. ಅದನ್ನು ಶೀಘ್ರವಾಗಿ ಬಹಿರಂಗಗೊಳಿಸಬೇಕು. ಬಳಿಕ ಸಾಧಕ-ಬಾಧಕ ಪರಿಶೀಲಿಸಿ ಬದಲಾಯಿಸಬಹುದು. ಕೆಲವು ಜನರು ವಿರೋಧಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಿರೋಧಿಸುವ ಹಕ್ಕು ಇದೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜ.22ರಂದು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆ – ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ