Tag: ಬಿಕಾಂ

  • ಅಧರ್ಮದ ಜಗತ್ತನ್ನು  ತೊರೆಯುತ್ತಿದ್ದೇನೆ, ನನ್ನನ್ನು ಹುಡುಕಬೇಡಿ – ಪತ್ರ ಬರೆದು ಬಿಕಾಂ ವಿದ್ಯಾರ್ಥಿ ನಾಪತ್ತೆ

    ಅಧರ್ಮದ ಜಗತ್ತನ್ನು ತೊರೆಯುತ್ತಿದ್ದೇನೆ, ನನ್ನನ್ನು ಹುಡುಕಬೇಡಿ – ಪತ್ರ ಬರೆದು ಬಿಕಾಂ ವಿದ್ಯಾರ್ಥಿ ನಾಪತ್ತೆ

    ಬೆಂಗಳೂರು: ಅಧರ್ಮದ ಜಗತ್ತನ್ನ ತೊರೆದು ಸತ್ಯದ ಕಡೆ ಹೋಗುತ್ತಿದ್ದೇನೆ, ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಬರೆದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ.

    ಮೋಹಿತ್ ಋಷಿ ನಾಪತ್ತೆಯಾದ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ.

    ಜನವರಿ 16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಪುಸ್ತಕದಲ್ಲಿ ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ ಎಂದು  ಬರೆದಿದ್ದಾನೆ. ಇದನ್ನೂ ಓದಿ: ಇಂಗ್ಲಿಷ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಮಕ್ಕಳು – ಸಕಲೇಶಪುರದಲ್ಲಿ ನಾಪತ್ತೆಯಾದವರು ಬೆಂಗಳೂರಲ್ಲಿ ಪತ್ತೆ

    ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ಸದ್ಯ ಉತ್ತರ ಪ್ರದೇಶದ ಪ್ರಯಾಜ್ ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಮೋಹಿತ್ ಪ್ರಯಾಗ್ ರಾಜ್‌ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ಮಾಡಿ ಹುಡುಕಾಡುತ್ತಿರುವ ಪೊಲೀಸರು, ಮೋಹಿತ್ ಪ್ರಯಾಗ್‌ರಾಜ್‌ಗೆ ಹೋಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

    ವಿದ್ಯಾರ್ಥಿಯ ಪೋಷಕರು ಸೋಷಿಯಲ್ ಮೀಡಿಯಾದಲ್ಲಿಯೂ ಫೋಟೋ ಹಾಕಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

  • ಇನ್‍ಸ್ಟಾಗ್ರಾಂನಲ್ಲಿ Sorry ಅಂತಾ ಬರೆದು ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ

    ಇನ್‍ಸ್ಟಾಗ್ರಾಂನಲ್ಲಿ Sorry ಅಂತಾ ಬರೆದು ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ

    ಬೆಂಗಳೂರು: ಇನ್ ಸ್ಟಾ ದಲ್ಲಿ Sorry ಎಂದು ಬರೆದು ಬಿಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಾಗದೇನಹಳ್ಳಿಯಲ್ಲಿ ನಡೆದಿದೆ.

    ಮನೋಜ್(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಂಡ್ಯ ಮೂಲದವನಾಗಿರುವ ಈತ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ. ಅಜ್ಜಿ ಮನೆಯಲ್ಲಿ ಇದ್ದುಕೊಂಡು ಕಾಲೇಜ್‍ಗೆ ಹೋಗ್ತಿದ್ದ. ಆದರೆ ಕೆಲ ದಿನಗಳಿಂದ ಕಾಲೇಜ್‍ಗೆ ಹೋಗದೆ ಒಬ್ಬನೇ ಇರ್ತಿದ್ದನಂತೆ. ಕಳೆದ ಒಂದು ವಾರದಿಂದ ವಾಟ್ಸಪ್ ಸ್ಟೇಟಸ್‍ನಲ್ಲಿ ಸ್ಯಾಡ್ ಸ್ಟೋರಿ ಟೆಕ್ಸ್ಟ್ ಹಾಕಿಕೊಳ್ತಿದ್ನಂತೆ. ಮನೆಯವರು ಸ್ನೇಹಿತರು ಇದ್ಯಾವುದನ್ನು ಗಂಭೀರವಾಗಿ ತಗೊಂಡಿಲ್ಲ. ನಿನ್ನೆ ರಾತ್ರಿ ತನ್ನ ಇನ್ಸ್ಟಾಗ್ರಾಂನಲ್ಲಿ ಸಾರಿ ಅಂತಾ ಬರೆದುಕೊಂಡು ನೇಣಿಗೆ ಕೊರಳೊಡ್ಡಿದ್ದಾನೆ. ಇದನ್ನೂ ಓದಿ: ಸ್ಕೂಲ್ ಮೆಟ್ಟಿಲು, ಕಾಂಪೌಂಡ್, ರಸ್ತೆಯಲ್ಲೆಲ್ಲಾ Sorry- ವ್ಯಕ್ತಿಗಾಗಿ ಪೊಲೀಸರು ಹುಡುಕಾಟ

    ಮನೋಜ್ ಸಾವಿನ ಸುತ್ತ ನೂರೆಂಟು ಅನುಮಾನ: ಮನೋಜ್ ಮನೆಯಲ್ಲಷ್ಟೇ ಅಲ್ಲ, ಕಾಲೇಜಿನಲ್ಲೂ ಒಳ್ಳೆ ವಿದ್ಯಾರ್ಥಿ ಎನಿಸಿಕೊಂಡಿದ್ದ. ಚೆನ್ನಾಗಿ ಓದುತ್ತಿದ್ದ ಮನೋಜ್‍ಗೆ ಏಕಾಏಕಿ ಏನಾಯಿತೋ ಏನೋ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೋಜ್ ಯಾರೊಂದಿಗಾದ್ರು ಪ್ರೀತಿಯಲ್ಲಿ ಬಿದ್ದಿದ್ನಾ..? ಅಥವಾ ಯಾರ ಜೊತೆಗಾದ್ರು ಗಲಾಟೆ ಮಾಡಿಕೊಂಡಿದ್ನಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಕಾಲೇಜು ಗೋಡೆ, ರಸ್ತೆ ಮೇಲೆ Sorry ಬರಹ ಪ್ರಕರಣ- ಕೆಟಿಎಂ ಡ್ಯೂಕ್‍ನಲ್ಲಿ ಬಂದ ಇಬ್ಬರಿಂದ ಕೃತ್ಯ?

    ಕೆಲ ದಿನಗಳ ಹಿಂದೆಯಷ್ಟೇ ಕಾಮಾಕ್ಷಿಪಾಳ್ಯದ ಖಾಸಗಿ ಕಾಲೇಜು ಬಳಿ ಗೋಡೆ, ರಸ್ತೆಗಳ ತುಂಬೆ ಸಾರಿ ಸಾರಿ ಅಂತ ಬರೆಯಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಸಾರಿ ಪ್ರಕರಣ ಬೆಳಕಿಗೆ ಬಂದಿದೆ. ಮನೋಜ್ ಸಾವಿಗೆ ಅಸಲಿ ಕಾರಣ ಏನು ಅಂತ ಪೊಲೀಸರು ತನಿಖೆ ನಡೆಸ್ತಿದ್ದಾರೆ.

  • ಹಸೆಮಣೆ ಏರಿದ ಕೆಲವೇ ನಿಮಿಷದಲ್ಲಿ ಪರೀಕ್ಷೆ ಬರೆದ ವಧು!

    ಹಸೆಮಣೆ ಏರಿದ ಕೆಲವೇ ನಿಮಿಷದಲ್ಲಿ ಪರೀಕ್ಷೆ ಬರೆದ ವಧು!

    ಹಾಸನ: ವ್ಯಾಸಂಗದಲ್ಲಿ ಒಂದು ವರ್ಷ ವ್ಯರ್ಥವಾಗಬಾರದು ಎನ್ನುವ ಕಾರಣಕ್ಕೆ, ಹಸೆಮಣೆ ಏರಿದ ಕೆಲವೇ ಹೊತ್ತಿನಲ್ಲಿ ನವವಧು ಬಿಕಾಂ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

    ಅರಸೀಕೆರೆ ತಾಲೂಕು ಗಂಡಸಿ ನಿವಾಸಿ ನವೀನ್ ಮತ್ತು ಹಾಸನದ ಜಯನಗರ ಬಡಾವಣೆಯ ಶ್ವೇತಾ ಮದುವೆ ಇಂದು ಹಾಸನದಲ್ಲಿ ನೆರವೇರಿತು. ಈ ಜೋಡಿ ಬೆಳಗ್ಗೆ 7.45ರಿಂದ 8.45 ಗಂಟೆಗೆ ಮದುವೆಯಾಗಿ, ಇದನ್ನು ಸ್ಮರಣೀಯವಾಗಿಸುವ ಒಂದೊಳ್ಳೆ ಕೆಲಸ ಮಾಡಿದರು.

    ಮದುವೆಯಾದ ಕೆಲವೇ ಹೊತ್ತಿನಲ್ಲಿ ಶ್ವೇತಾ ಬಿಕಾಂ ಅಂತಿಮ ವರ್ಷದ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆಸಿದ್ದಾಳೆ. ಪತ್ನಿಗೆ ಸಂಪೂರ್ಣ ಸಾಥ್ ನೀಡಿರುವ ವರ ನವೀನ್, ಮದುವೆ ಜೊತೆಯಲ್ಲೇ ಭವಿಷ್ಯವೂ ಮುಖ್ಯ ಹಾಗಾಗಿ ಆಕೆಯ ಇಚ್ಛೆಯಂತೆ ಪರೀಕ್ಷೆ ಬರೆಸಿದ್ದೇನೆ ಎಂದಿದ್ದಾರೆ.

    ನವೀನ್ ಹಾಗೂ ಶ್ವೇತಾ ನಿಶ್ಚಿತಾರ್ಥವು ಕಳೆದ ಮೇ 6ರಂದು ಆಗಿತ್ತು. ಇತ್ತ ಪರೀಕ್ಷೆಯ ದಿನಾಂಕವೂ ನಿಗದಿಯಾಗಿತ್ತು. ಹೀಗಾಗಿ ನವೆಂಬರ್ 18ರಂದು ಮನೆಯವರು ಮದುವೆ ನಿಶ್ಚಯ ಮಾಡಿದ್ದರು. ಆದರೆ ಉಪಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 3ರಂದು ನಡೆಯಬೇಕಿದ್ದ ಕಾರ್ಪೊರೇಟ್ ಅಕೌಂಟ್ ಅಂಡ್ ಲಾ ಪರೀಕ್ಷೆಯನ್ನು ಇಂದಿಗೆ ಮುಂದೂಡಿತ್ತು. ಇದೇ ದಿನ ಮದುವೆ ಇದ್ದರೂ, ಆರತಕ್ಷತೆ ಸೇರಿದಂತೆ ಮದುವೆ ಶಾಸ್ತ್ರಗಳನ್ನು ಬೇಗ ಬೇಗ ಮುಗಿಸಿದ ಮನೆಯವರು ಮತ್ತು ಪುರೋಹಿತರು ಶ್ವೇತಾ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ. ಎಲ್ಲರ ಸಹಕಾರದಿಂದ ಹಾಸನದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ವೇತಾ ಪರೀಕ್ಷೆ ಬರೆದಿದ್ದಾಳೆ.

    ಒಂದು ವರ್ಷ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ನಿದ್ರೆ ಇಲ್ಲದೆಯೂ ಪರೀಕ್ಷೆ ಬರೆದಿದ್ದೇನೆ. ಪರೀಕ್ಷೆ ಕಷ್ಟಕರವಾಗಿರಲಿಲ್ಲ. ಮದುವೆ ದಿನವೇ ಪರೀಕ್ಷೆ ಬರುತ್ತೆ ಅಂತಾ ಅಂದುಕೊಂಡಿರಲಿಲ್ಲ. ಹೊಸ ಅನುಭವ ತುಂಬಾ ಚೆನ್ನಾಗಿತ್ತು. ಪಾಸಾಗುವ ಮಟ್ಟಕ್ಕೆ ಪರೀಕ್ಷೆ ಬರೆದಿದ್ದೇನೆ. ಡಿಸ್ಟಿಂಕ್ಷನ್ ಬರುವ ನನಗೆ ಪಾಸಾಗುವ ವಿಶ್ವಾಸವಿದೆ ಎಂದು ಶ್ವೇತಾ ಪಬ್ಲಿಕ್ ಟಿವಿಗೆ ತಿಳಿಸಿದ್ದಾಳೆ.

    ಪರೀಕ್ಷೆ ಬರೆಯಲು ಸಹಕಾರ ನೀಡಿದ ಪತಿ ಸೇರಿದಂತೆ ಎಲ್ಲರಿಗೂ ಶ್ವೇತಾ ಧನ್ಯವಾದ ತಿಳಿಸಿದ್ದಾಳೆ. ಇದೇ ವೇಳೆ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಂದು ಬಿಟ್ಟು, ಆಕೆ ಹೊರ ಬರುವವರೆಗೂ ಹೊರಗಡೆ ಕಾದು ಕುಳಿತಿದ್ದ ವರ ನವೀನ್ ಮಾತನಾಡಿ, ಬಿಕಾಂ ಮುಗಿದ ಕೂಡಲೇ ಎಂಕಾಂ ಓದಿಸುತ್ತೇನೆ. ಇದು ಒಂದೆಡೆ ಖುಷಿ ಮತ್ತೊಂದೆಡೆ ಸಂಬಂಧಿಕರು ಏನೆಂದುಕೊಳ್ಳುತ್ತಾರೋ ಎನ್ನುವ ಅಳುಕಿದೆ. ಆದರೂ ಭವಿಷ್ಯದ ಹಿತದೃಷ್ಟಿ ಜೊತೆಗೆ ಆಕೆ ಚೆನ್ನಾಗಿ ಓದುವ ಕಾರಣಕ್ಕೆ ಪರೀಕ್ಷೆ ಬರೆಸಿದ್ದೇನೆ ಎಂದರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗುಲ್ಬರ್ಗಾ ವಿವಿಯಿಂದ ಮತ್ತೆ ಯಡವಟ್ಟು- ಬಿಕಾಂ ಪ್ರಶ್ನೆ ಪ್ರತಿಕೆ ಸೋರಿಕೆ

    ಗುಲ್ಬರ್ಗಾ ವಿವಿಯಿಂದ ಮತ್ತೆ ಯಡವಟ್ಟು- ಬಿಕಾಂ ಪ್ರಶ್ನೆ ಪ್ರತಿಕೆ ಸೋರಿಕೆ

    ರಾಯಚೂರು: ಗುಲ್ಬರ್ಗಾ ವಿಶ್ವವಿದ್ಯಾಲಯ ಯಡವಟ್ಟುಗಳ ಮೇಲೆ ಯಡವಟ್ಟುಗಳನ್ನ ಮಾಡುತ್ತಿದೆ. ವಿವಿಯ ಪದವಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಪದೇ ಪದೇ ಸೊರಿಕೆಯಾಗುತ್ತಿವೆ. ಎರಡು ದಿನಗಳ ಹಿಂದೆಯಷ್ಟೇ ಬಿ.ಕಾಂ 3ನೇ ಸೇಮಿಸ್ಟರ್ ನ ಸಂಖ್ಯಾಶಾಸ್ತ್ರ ಪತ್ರಿಕೆ ಲೀಕ್ ಆಗಿತ್ತು. ಈಗ ಪುನಃ ಬಿ.ಕಾಂ. ಮೂರನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದೆ.

    ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಬೇಕಾಗಿದ್ದ `ಸ್ಮಾಲ್ ಬಿಸಿನೆಸ್ ಮ್ಯಾನೇಜ್‍ಮೆಂಟ್’ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆ ರಾಯಚೂರು ಸೇರಿದಂತೆ ವಿವಿ ವಿದ್ಯಾರ್ಥಿಗಳ ವಾಟ್ಸಪ್‍ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ಸ್ಟಾಟಿಸ್ಟಿಕ್ಸ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.

    ಇಂದು ನಡೆಯಬೇಕಾಗಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದರಿಂದ ಸ್ಮಾಲ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಗುಲ್ಬರ್ಗಾ ವಿವಿ ಕುಲಪತಿ ಎಸ್.ನಿರಂಜನ್ ಆದೇಶ ಹೊರಡಿಸಿದ್ದಾರೆ.

     

  • ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಭಿಕ್ಷಾಟನೆ ಮಾಡಿ ಮಕ್ಕಳನ್ನ ಸಾಕ್ತಿರೋ ತಂದೆ, ಸ್ಲಮ್‍ನಲ್ಲಿದ್ರೂ ಕೆಎಎಸ್ ಮಾಡ್ಬೇಕೆಂಬ ಬಿಕಾಂ ವಿದ್ಯಾರ್ಥಿಗೆ ಬೇಕಿದೆ ಸಹಾಯ

    ಬೆಳಗಾವಿ: ಜಿಲ್ಲೆಯ ಸ್ಲಂವೊಂದರ ಯುವಕ ಕೆಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದಾರೆ. ಆದರೂ ಕಿತ್ತು ತಿನ್ನುವ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿದೆ.

    ಬಿಕಾಂ ವಿದ್ಯಾರ್ಥಿಯಾದ ಗಣೇಶ್ ವಿಭೂತಿ ಬೆಳಗಾವಿ ಮಹಾನಗರದ ಕಣಬರ್ಗಿ ಸ್ಲಂನಲ್ಲಿ ಹರಿದು ಹೋದ ಗುಡಿಸಲಿನಲ್ಲಿ ವಾಸವಿದ್ದಾರೆ. ಇವರ ತಂದೆ ಮನೆ ಮನೆಗೆ ತೆರಳಿ ಹಾಡು ಹೇಳಿ ಭಿಕ್ಷೆ ಬೇಡಿ ಬಂದ ಹಣದಿಂದ 5 ಮಕ್ಕಳನ್ನು ಸಾಕುತ್ತಿದ್ದಾರೆ. ತಾಯಿ ಬೇರೆಯವರ ಮನೆಗೆಲಸ, ಪಾತ್ರೆ ತೊಳೆಯುವ ಕೆಲಸ ಮಾಡುವುದರ ಜೊತೆಗೆ ಪೊರಕೆ ಮಾರಲು ಹೋಗುತ್ತಾರೆ. ಕಿತ್ತು ತಿನ್ನುವ ಬಡತನ, ಓದಲು ಆಸಕ್ತಿಯಿದ್ದರೂ ಹಣದ ಕೊರತೆ ಗಣೇಶ್‍ರನ್ನು ಕಾಡುತ್ತಿದೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅವರಿವರ ಸಹಾಯ ಪಡೆದು ಬಿಕಾಂ ಓದುತ್ತಿದ್ದಾರೆ.

    ಐದು ಮಕ್ಕಳಿಗೂ ಊಟ ಕೊಡಿಸುವುದೇ ದೊಡ್ಡ ಸವಾಲಾಗಿರುವಾಗ ನಿನಗೆ ಓದಲು ಹಣ ಎಲ್ಲಿಂದ ತರಲಿ ಎಂದು ಪಾಲಕರು ಅಸಹಾಯಕರಾಗಿದ್ದಾರೆ. ಆದರೆ ನಾನು ಕಷ್ಟಪಟ್ಟು ಓದಿ ಮುಂದೆ ಬರಬೇಕು ಎಂದು ಗಣೇಶ್ ತನ್ನ ಕೆಎಎಸ್ ಗುರಿ ಬಗ್ಗೆ ಹೇಳಿಕೊಳ್ಳುತ್ತಾರೆ.

    ನಮ್ಮ ತಂದೆ ನಮಗೆ ವಿದ್ಯಾಭ್ಯಾಸ ನೀಡಲಿಲ್ಲ. ಅದರ ಬದಲು ತಬಲಾ ,ಹಾರ್ಮೊನಿಯಂ ನೀಡಿದರು. ಆದರೆ ಮಗ ಗಣೇಶ್ ಓದುವಲ್ಲಿ ಆಸಕ್ತಿ ತೋರಿದ್ದಾನೆ ಎಂದು ಗಣೇಶ್ ಅವರ ತಂದೆ ಹೇಳುತ್ತಾರೆ. ಕಂದೀಲು ಬೆಳಕಿನಲ್ಲಿ ಓದಿದ ಗಣೇಶ್ ಹಠ ಮಾತ್ರ ಬಿಟ್ಟಿಲ್ಲ. ಕೆಎಎಸ್ ಮಾಡಿ ತಮ್ಮ ಜನರ ಬದುಕಿಗೆ ಆಸರೆಯಾಗಬೇಕೆಂಬುದೇ ಗಣೇಶ್ ಅವರ ಜೀವನದ ಮುಖ್ಯ ಗುರಿ.

    https://www.youtube.com/watch?v=QMEWBdErnLE