Tag: ಬಿಎಸ್ ವೈ

  • `ಗಂಧದಗುಡಿ’ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ

    `ಗಂಧದಗುಡಿ’ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ನಟಿಸಿದ ಕೊನೆಯ ಸಿನಿಮಾ `ಗಂಧದಗುಡಿ'(Gandadagudi) ಚಿತ್ರವನ್ನ ಮಾಜಿ ಸಿಎಂ ಯಡಿಯೂರಪ್ಪ ವೀಕ್ಷಿಸಿದ್ದಾರೆ. ಅಪ್ಪು ಕನಸಿನ ಸಿನಿಮಾ `ಗಂಧದಗುಡಿ’ ಪುತ್ರ ರಾಘವೇಂದ್ರ(Raghavendra) ಜೊತೆ ವೀಕ್ಷಿಸಿದ್ದಾರೆ.

    ಕರ್ನಾಟಕ ರತ್ನ ಪುನೀತ್ ನಟನೆಯ `ಗಂಧದಗುಡಿ’ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. `ಜೇಮ್ಸ್’ ಸೂಪರ್ ಡೂಪರ್ ಹಿಟ್ ಆದ್ಮೇಲೆ ಗಂಧದಗುಡಿಗಾಗಿ ಕಾಯುತ್ತಿದ್ದ ಫ್ಯಾನ್ಸ್, ಅಪ್ಪು ಕನಸಿನ ಸಿನಿಮಾ ನೋಡಿ ಖುಷಿಪಟ್ಟಿದ್ದರು. ಇದೀಗ ಮಾಜಿ ಸಿಎಂ ಯಡಿಯೂರಪ್ಪ(Bs Yediyurappa) ಶಿವಮೊಗ್ಗದ ಶಿವಪ್ಪನಾಯಕ ಸರ್ಕಲ್‌ನಲ್ಲಿರುವ ಭಾರತ್ ಸಿನಿಮಾಸ್ ಮಾಲ್‌ಗೆ `ಗಂಧದಗುಡಿ’ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಪುತ್ರ ರಾಘವೇಂದ್ರ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: `ಗಂಧದಗುಡಿ’ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಯಡಿಯೂರಪ್ಪ 

    ಸಿನಿಮಾ ವೀಕ್ಷಿಸಲು ಬಂದ ವೇಳೆ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇನ್ನೂ `ಗಂಧದಗುಡಿ’ಯಲ್ಲಿ ಅಪ್ಪು ನೈಜ ನಟನೆ ನೋಡಿ ಮಾಜಿ ಸಿಎಂ ಯಡಿರೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನೆಮಂದಿಯೆಲ್ಲರೂ ಕುಳಿತು ಈ ಚಿತ್ರಕ್ಕೆ ಸಾಥ್ ನೀಡಿ ಎಂದಿದ್ದಾರೆ. ಎಲ್ಲರೂ ವೀಕ್ಷಿಸಿ ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏರ್​ಸ್ಟ್ರೈಕ್​​ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್‍ವೈ ಹೇಳಿಕೆ

    ಏರ್​ಸ್ಟ್ರೈಕ್​​ನಿಂದ 22 ಸೀಟ್ ಗೆಲ್ತೇವೆ – ಪಾಕಿಸ್ತಾನದಲ್ಲೂ ಡಿಬೇಟ್ ಆಯ್ತು ಬಿಎಸ್‍ವೈ ಹೇಳಿಕೆ

    ಇಸ್ಲಾಮಾಬಾದ್: ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತನಾಮರಾಗಿದ್ದಾರೆ.

    ಏರ್​ಸ್ಟ್ರೈಕ್​​ನಿಂದ 22 ಲೋಕಸಭಾ ಸೀಟ್ ಗೆಲ್ತೇವೆ ಅಂದಿರೋದನ್ನು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ (ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್‌) ಪಕ್ಷ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. 22 ಸೀಟ್ ಗೆಲ್ಲೋ ಸಲುವಾಗಿ ಇಷ್ಟು ಪ್ರಾಣಗಳ ಜೊತೆ ಬಿಜೆಪಿ ಚೆಲ್ಲಾಟ ಆಡ್ತಿದೆ. ಯುದ್ಧ ಅನ್ನೋದು ಚುನಾವಣೆಯ ಆಯ್ಕೆನಾ ಎಂದು ಪ್ರಶ್ನಿಸಿದೆ.

    ಅಲ್ಲದೆ, ಪಾಕಿಸ್ತಾನದ ಚಾನೆಲ್‍ಗಳಲ್ಲಿ ಕೂಡ ಈ ಕುರಿತು ಡಿಬೇಟ್ ಆಗಿದೆ. ಇದು ಬಿಜೆಪಿ ಹೈಕಮಾಂಡ್ ನಾಯಕರಿಗೆ ತೀವ್ರ ಮುಜುಗರ ತಂದಿದೆ. ಈ ಕೂಡಲೇ ಕೇಂದ್ರ ಸಚಿವ ವಿಕೆ ಸಿಂಗ್, ಬಿಎಸ್‍ವೈಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಎಸ್‍ವೈ ಹೇಳಿಕೆಯಿಂದ ಭಿನ್ನವಾಗಿರಲು ಬಯಸುತ್ತೇನೆ. ಕೇವಲ ಹೆಚ್ಚುವರಿ ಸೀಟ್ ಗೆಲ್ಲಲು ಇಷ್ಟೆಲ್ಲ ಮಾಡ್ತಿಲ್ಲ. ಇದು ದೇಶವನ್ನು ಕಾಪಾಡಿಕೊಳ್ಳುವ ಕ್ರಮ ಎಂದಿದ್ದಾರೆ.

    ಇತ್ತ ಆರ್‍ಎಸ್‍ಎಸ್ ಸಹ, ಸೇನೆಯ ಕಾರ್ಯಾಚರಣೆಯನ್ನು ರಾಜಕೀಯದೊಂದಿಗೆ ಬೆಸೆಯಬೇಡಿ ಅಂತ ಖಡಕ್ ವಾರ್ನಿಂಗ್ ಕೊಟ್ಟು ಸ್ಪಷ್ಟನೆ ಕೇಳಿದೆ.

    ಬಿಎಸ್‍ವೈ ಹೇಳಿದ್ದೇನು..?
    ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.

    https://www.youtube.com/watch?v=-HDTIgjGwJg

    https://www.youtube.com/watch?v=LLIlyAySnxg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಜೆಡಿಎಸ್ ಷಡ್ಯಂತ್ರ: ಬಿಎಸ್‍ವೈ

    ಬೆಂಗಳೂರು: ಸಿಎಂ ಕುಮಾರಸ್ವಾಮಿಯವರ ಹೇಳಿಕೆಗಳನ್ನು ಗಮನಿಸಿದರೆ ತಮ್ಮ ರಾಜಕೀಯ ಲಾಭಕ್ಕಾಗಿ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ.

    ಸಿಎಂ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕಕ್ಕೆ ಹಿರಿಯರು ರಕ್ತ ಹರಿಸಿದ್ದಾರೆ. ಉತ್ತರ ಕರ್ನಾಟಕದ ಜನತೆಯನ್ನ ಸವತಿ ಮಕ್ಕಳಂತೆ ಸಿಎಂ ಕಾಣುತ್ತಿದ್ದಾರೆ. ನಿಮ್ಮ ಸಾಲಮನ್ನಾ ಮಾಡಲು ನೀವೇನು ನಮಗೆ ವೋಟ್ ಹಾಕಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದು, ಸಿಎಂ ಅವರ ದುರಂಹಕಾರದ ಮಾತಾಗಿದೆ. ಸಿಎಂರವರ ಹೇಳಿಕೆಗಳನ್ನು ಗಮನಿಸಿದರೆ, ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತ್ರ ರೂಪಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಮತ್ತೆ ಮಾಧ್ಯಮಗಳ ಮೇಲೆ ಸಿಎಂ ಎಚ್‍ಡಿಕೆ ಉಗ್ರ ಪ್ರತಾಪ

    ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧ ಹರಿಹಾಯ್ದ ಅವರು, ಈ ಹಿಂದೆ ವೀರಶೈವ – ಲಿಂಗಾಯತ ಪ್ರತ್ಯೇಕತೆ ಮಾಡಲು ಕಾಂಗ್ರೆಸ್ ಕೈ ಹಾಕಿತ್ತು. ಈಗ ಜೆಡಿಎಸ್ ರಾಜ್ಯ ಪ್ರತ್ಯೇಕ ಮಾಡುವ ಹುನ್ನಾರ ಮಾಡ್ತಿದೆ. ದೇವೇಗೌಡರ ಈ ತಂತ್ರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಪ್ರತ್ಯೇಕ ರಾಜ್ಯ ಹೋರಾಟ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ ಎಂದು ತಿಳಿಸಿದರು.

    ಮಂಗಳವಾರ ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ. ಹೀಗಾಗಿ ಹೋರಾಟಗಾರರ ಮನವೊಲಿಸಲು ನಾನು ಬೆಳಗಾವಿಗೆ ತೆರಳುತ್ತೇನೆ. ರಾಜ್ಯವನ್ನು ವಿಭಜಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

  • ಶೋಭಾ ಕರಂದ್ಲಾಜೆಗಿಲ್ಲ ಯಶವಂತಪುರ ವಿಧಾನಸಭೆ ಟಿಕೆಟ್- ಬಿಎಸ್‍ವೈ ಸ್ಪಷ್ಟನೆ

    ಶೋಭಾ ಕರಂದ್ಲಾಜೆಗಿಲ್ಲ ಯಶವಂತಪುರ ವಿಧಾನಸಭೆ ಟಿಕೆಟ್- ಬಿಎಸ್‍ವೈ ಸ್ಪಷ್ಟನೆ

    ಬೆಂಗಳೂರು: ಯಶವಂತಪುರ, ಬಾದಾಮಿ ಮತ್ತು ವರುಣಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ ಯಶವಂತಪುರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಸ್ಪರ್ಧಿಸ್ತಾರೆ ಅನ್ನೋ ಸುದ್ದಿ ಹಬ್ಬಿದೆ.

    ಆದ್ರೆ ಇದೀಗ ಕೇಸರಿ ಸಾರಥಿ ಬಿಎಸ್‍ವೈ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆವರು, ಶೋಭಾ ಕರಂದ್ಲಾಜೆಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಲ್ಲ. ನಾನು ಮತ್ತು ಶ್ರೀರಾಮುಲು ಮಾತ್ರ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತೇವೆ ಅಂತ ಹೇಳಿದ್ದಾರೆ.

    ಬೇರೆ ಯಾವುದೇ ಸಂಸದರಿಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲ. ಈಗಾಗಲೇ ನಮ್ಮ ಪಾರ್ಟಿ ಒಂದು ಪಾಲಿಸಿ ಮಾಡಿದೆ. ಹಾಗಾಗಿ ಕರಡಿ ಸಂಗಣ್ಣಗೂ ಟಿಕೆಟ್ ಇಲ್ಲ, ಶೋಭಾಗೂ ಇಲ್ಲ. ಯಶವಂತಪುರದಲ್ಲಿ ಶೋಭಾಗೆ ಟಿಕೆಟ್ ಕೊಟ್ಟರೆ 100ರಷ್ಟು ಗೆಲ್ತಾರೆ. ಆದ್ರೆ ಹೈಕಮಾಂಡ್ ನಿರ್ಧಾರ ಮಾಡಿರೋದ್ರಿಂದ ಅವರ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಕೊಪ್ಪಳ: ಪರವಾನಗಿ ಇಲ್ಲದೇ ಬಿ.ಎಸ್.ಯಡಿಯೂರಪ್ಪ ಕರೆತಂದಿದ್ದ ಕಾರನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ನಗರದಲ್ಲಿ ರೈತ ಸಂವಾದ ಕಾರ್ಯಕ್ರಮಕ್ಕೆ ಬಿಎಸ್‍ವೈರನ್ನು ಹೆಲಿಪ್ಯಾಡ್‍ನಿಂದ ಸಂವಾದ ಸ್ಥಳಕ್ಕೆ ಪರವಾನಗಿ ಇಲ್ಲದ ಕಾರಲ್ಲಿ ಕರೆತಲಾಗಿತ್ತು. ಕಾರು ತಡೆಯಲು ಹೋದಾಗ ಕಾರು ಚಾಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

    ಕಾರಿನ ಹಿಂಬದಿ ನಂಬರ್ ಪ್ಲೇಟಿನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹಾಕಲಾಗಿತ್ತು. ಪ್ರಕರಣ ಸಂಬಂಧ ಚುನಾವಣಾ ಅಧಿಕಾರಿಗಳು, ಪರಶುರಾಮ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

    ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದು, ಸಣ್ಣ- ಪುಟ್ಟ ಗೊಂದಲಗಳ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಿಎಸ್ ವೈ ರಾಜ್ಯ ಸುತ್ತಲಿದ್ದು, ಮೊದಲನೇ ದಿನವಾದ ಮಂಗಳವಾರ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರ ಸಂವಾದ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕಷ್ಟ- ನಷ್ಟಗಳನ್ನು ಕೇಳಿ ತಿಳಿದುಕೊಂಡ್ರು.

  • ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಬಿಎಸ್ ವೈ ಜೊತೆ ಶೀರೂರು ಶ್ರೀ ಮಾತುಕತೆ- ಸ್ವಾಮೀಜಿಯನ್ನು ಭೇಟಿ ಮಾಡಲಿರುವ ಮಧ್ವರಾಜ್

    ಉಡುಪಿ: ಜಿಲ್ಲೆಯ ಶ್ರೀಕೃಷ್ಣಮಠದ ಶೀರೂರು ಶ್ರೀ ಅವರು ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಶ್ರೀಗಳ ಜೊತೆ ಮಾತನಾಡಿದ್ದಾರೆ. ಅಲ್ಲದೇ ಸಚಿವ ಮಧ್ವರಾಜ್ ಭೇಟಿ ಮಾಡೋದಾಗಿ ಹೇಳಿದ್ದಾರೆ.

    ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡೋದು ದೊಡ್ಡ ಸುದ್ದಿಯಾಗಿದೆ. ಉಡುಪಿಯ ಉಪ್ಪೂರಿನಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಶೀರೂರು ಶ್ರೀಗಳ ಹೇಳಿಕೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು. ಇದನ್ನೂ ಓದಿ: ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

    ಸ್ವಾಮೀಜಿ ನನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಿಳಿದಿದ್ದೇನೆ. ಅವರ ಅಸಮಾಧಾನದ ಬಗ್ಗೆ ಶೀರೂರು ಶ್ರೀಗಳ ಜೊತೆ ಚರ್ಚೆ ಮಾಡುತ್ತೇನೆ. ನನಗೆ ಶೀರೂರು ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ ಎಂದರು. ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅವರಿಗೆ ಆಗಿರುವ ನೋವಿನ ಬಗ್ಗೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಹೇಳಿದರೆ ನಾನು ಖಂಡಿತಾ ಸ್ಪರ್ಧೆ ಮಾಡುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಈ ಬಾರಿ ಉಡುಪಿಯಿಂದ ಸ್ಪರ್ಧಿಸುವುದಾಗಿ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರು ನಿನ್ನೆ ಘೋಷಿಸಿದ್ದರು. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಫೋನ್ ಮೂಲಕ ಮಾತುಕತೆ ಮಾಡಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ಬಗ್ಗೆ ಶೀರೂರು ಶ್ರೀಗಳ ಅಸಮಾಧಾನವನ್ನು ವರಿಷ್ಠರು ಆಲಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ನಾಯಕ ಉದಯ ಕುಮಾರ್ ಶೆಟ್ಟಿ ಫೋನ್ ಮೂಲಕ ಉಭಯ ನಾಯಕರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಿದ್ದರು. ಬಿಎಸ್ ವೈ ಮತ್ತು ಶೋಭಾ ಕರಂದ್ಲಾಜೆ ಮುಖತಃ ಭೇಟಿಯಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  • ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಬಿಎಸ್‍ವೈ ವಾರ್ನಿಂಗ್!

    ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಬಿಎಸ್‍ವೈ ವಾರ್ನಿಂಗ್!

    ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

    ಯಾರೊಬ್ಬರು ಸಮುದಾಯಗಳನ್ನು ಕೆರಳಿಸುವ ಹೇಳಿಕೆ ನೀಡಬಾರದು. ನಾನು ಅಂತಹ ಯಾವುದೇ ಹೇಳಿಕೆಗಳನ್ನು ಒಪ್ಪುವುದಿಲ್ಲ. ಅನಂತ ಕುಮಾರ್ ಹೆಗ್ಡೆಗೆ ನಾನು ಇಂತಹ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ ಅಂತ ಖಾಸಗಿ ವಾಹಿನಿಯೊಂದರಲ್ಲಿ ಬಿಎಸ್‍ವೈ ಹೇಳಿದ್ದಾರೆ.

    ಇತ್ತೀಚಿಗಷ್ಟೇ ಅನಂತ್ ಕುಮಾರ್ ಹೆಗ್ಡೆ ಎಲ್ಲಿವರೆಗೂ ಇಸ್ಲಾಂ ಬೇರುಗಳನ್ನು ಕೀಳುವುದಿಲ್ಲವೋ ಅಲ್ಲಿವರೆಗೂ ಭಯೋತ್ಪಾದನೆ ಬೇರ್ಪಡೆ ಅಸಾಧ್ಯ ಅಂತ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳನ್ನು ನೀಡಬಾರದು. ಈ ಬಗ್ಗೆ ಸಂಸತ್‍ನಲ್ಲಿ ಈಗಾಗಲೇ ಕ್ಷಮೆಯಾಚಿಸಿದ್ದಾರೆ ಅಂತ ಬಿಎಸ್‍ವೈ ಸ್ಪಷ್ಟಪಡಿಸಿದ್ರು.

  • ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿಎಸ್‍ವೈ- ವೇದಿಕೆಯಲ್ಲೇ ಪ್ರಧಾನಿ ಮೋದಿಗೆ ಮಾತು ಕೊಟ್ಟ ಬಿಎಸ್‍ವೈ

    ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿಎಸ್‍ವೈ- ವೇದಿಕೆಯಲ್ಲೇ ಪ್ರಧಾನಿ ಮೋದಿಗೆ ಮಾತು ಕೊಟ್ಟ ಬಿಎಸ್‍ವೈ

    ಬೆಂಗಳೂರು: ನಗರದ ಅರಮೆನೆ ಮೈದಾನದಲ್ಲಿ ನಡೆಯುತ್ತಿರೋ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ತಮ್ಮ ಭಾಷಣದುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ.

    ಪ್ರಧಾನಿ ಮೋದಿ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ ಪರಿವರ್ತನಾ ಯಾತ್ರೆಗೆ ದೊಡ್ಡ ಜನರನ್ನ ಸೇರಿಸಲು ಸಾಧ್ಯವಾಯ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತಾ ಸಂಕಲ್ಪ ತೊಟ್ಟು ಜನರು ಬಂದಿದ್ದಾರೆ. ಸಿದ್ದರಾಮಯ್ಯ ಭ್ರಷ್ಟಚಾರ ಮುಚ್ಚಿಹಾಕಲು ಎಸಿಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳು ನಡೆದಿವೆ. 3,500 ರೈತರು ಆತ್ಮಹತ್ಯೆ ಮಾಡಿಕೊಂಡರು ಸಿಎಂ ಸಿದ್ದರಾಮಯ್ಯ ಗಾಢ ನಿದ್ರೆಯಲ್ಲಿದ್ದಾರೆ. ಪ್ರಧಾನಿ ಮೋದಿ ದೇಶವನ್ನ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

    ಮೋದಿ ಕಾರ್ಯಸಾಧನೆಯನ್ನು ಇಡೀ ವಿಶ್ವವೇ ಮೆಚ್ಚಿದೆ. ಜಗತ್ತೇ ಒಂದು ಕುಟುಂಬ ಎಂಬುದು ಪ್ರಧಾನಿ ಮನಸ್ಥಿತಿ. ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಎಸಗಿದೆ. ಕೃಷ್ಣ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನ ನೀಡುತ್ತೇವೆ. ಮೋದಿ ಜೊತೆ ಹೆಜ್ಜೆ ಹಾಕಲು ರಾಜ್ಯದಲ್ಲಿ ಸರ್ಕಾರ ಬೇಕಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗ್ತಿದೆ ಅಂದ್ರು.

    ಕೊಡುವ ಕೈ ಮೋದಿ ಇರುವಾಗ ತೆಗೆದುಕೊಳ್ಳುವ ಕೈ ಇಲ್ಲ. ಪ್ರಧಾನಿ ಮೋದಿಯವರ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ಮಾಂಸ ತಿಂದ್ರು ಅಂತಾ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಗೆ ಭಾರತ ರತ್ನ ನೀಡಲು ಬಾರದ ಕಾಂಗ್ರೆಸ್‍ಗೆ ಧಿಕ್ಕಾರ. ಹೀಗಾಗಿ ದೀನ ದಲಿತರು ಒಂದೇ ಒಂದು ಮತವನ್ನು ಕಾಂಗ್ರೆಸ್ ಗೆ ಕೊಡಬಾರದು ಎಂದು ಹೇಳಿದರು.

    ನಮ್ಮ ಸರ್ಕಾರ ಬೆಂಗಳೂರಿಗೆ ಸಬ್ ಅರ್ಬನ್ ಕೊಟ್ಟ ಸರ್ಕಾರವಾಗಿದೆ. ಸೂಲಿಗಿತ್ತಿ ನರಸಮ್ಮನವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರೋದು ಹೆಮ್ಮೆಯ ಸಂಗತಿಯಾಗಿದೆ. ಪ್ರಧಾನಿ ಕನಸನ್ನ ನನಸು ಮಾಡುತ್ತೇನೆಂಬ ಭರವಸೆ ಕೊಟ್ಟಿದ್ದೇನೆ. ಕಾಂಗ್ರೆಸ್ ಮುಕ್ತ ಭಾರತಬನ್ನಾಗಿ ಮಾಡೇ ಮಾಡುತ್ತೇವೆ. 3 ತಿಂಗಳಲ್ಲಿ ಮನೆಮಠ ಬಿಟ್ಟು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮ ಪಡುತ್ತೇನೆ. ಬಿಜೆಪಿ 150 ಸೀಟ್ ಗೆಲ್ಲಿಸಲು ಕೈ ಜೋಡಿಸಿ ಎಂದು ಬಿಎಸ್ ವೈ ಇದೇ ವೇಳೆ ಮನವಿ ಮಾಡಿಕೊಂಡರು ಅಂದ್ರು.

    ಕಾರ್ಯಕ್ರಮಕ್ಕೆ ಮೋದಿಯವರ ಆಗಮನವಾಗುತ್ತಿದ್ದಂತೆಯೇ ಕಾರ್ಯಕರ್ತರು ಜೈಕಾರ ಹಕಿದ್ರು. ಮೋದಿ ವೇದಿಕೆ ಹತ್ತುತ್ತಿದ್ದಂತೆಯೇ ಹಿಂದೆ ಇದ್ದ ಎಸ್.ಎಂ.ಕೃಷ್ಣರನ್ನು ಬಿಸೆ ವೈ ಅವರು ಕೈ ಹಿಡಿದು ಮುಂದೆ ಕರೆತಂದ್ರು. ಅದನ್ನು ಗಮನಿಸಿದ ಮೋದಿಯವರು ಮೊದಲು ಕೃಷ್ಣರಿಗೆ ನಮಸ್ಕರಿಸಿ ಮಾತನಾಡಿಸಿದ್ರು. ಬಳಿಕ ಮೋದಿಯವರಿಗೆ ಬಿಸೆ ವೈ ಹೂವಿನ ಹಾರ, ಶಾಲು ಹೊದಿಸಿ, ಕೆಂಪೇಗೌಡ ಸ್ಮರಣಿಕೆ ನೀಡಿ ಗೌರವಿಸಿದ್ರು.

  • ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್‍ವೈ ಪ್ರಶ್ನೆ

    ಜ.25ರ ಬಂದ್ ಅವಶ್ಯಕತೆಯಿಲ್ಲ, ಮೈಸೂರ್ ಗೂ ಮಹದಾಯಿಗೂ ಏನ್ ಸಂಬಂಧ- ಬಿಎಸ್‍ವೈ ಪ್ರಶ್ನೆ

    ಮೈಸೂರು: ಮಹದಾಯಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಜನವರಿ 25 ರಂದು ನಡೆಸುತ್ತಿರುವ ಕರ್ನಾಟಕ ಬಂದ್ ಅವಶ್ಯಕತೆ ಇಲ್ಲ. ಮೈಸೂರು ಭಾಗಕ್ಕೂ ಮಹಾದಾಯಿ ಬಂದ್ ಗೂ ಏನ್ ಸಂಬಂಧ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಶ್ನಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಜನವರಿ 25 ರಂದು ಮೈಸೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಮುಕ್ತಾಯವಾಗುತ್ತದೆ. ಅಂದು ಮೈಸೂರಿನಲ್ಲಿ ಬಂದ್ ನಡೆದರೆ ಯಾತ್ರೆ ಯಶಸ್ವಿ ಕಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಬಿಎಸ್ ವೈ ಮೈಸೂರು ಭಾಗದಲ್ಲಿನ ಬಂದ್ ಔಚಿತ್ಯವನ್ನೇ ಪ್ರಶ್ನೆ ಮಾಡಿಬಿಟ್ಟರು ಅಂತ ಹೇಳಲಾಗುತ್ತಿದೆ.

    ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಬಂದ್ ಇದು. ಅವರಾಗಿಯೇ ಅವರು ಬಸ್ ನಿಲ್ಲಿಸಿ ಕಿತಾಪತಿ ಮಾಡುತ್ತಿದ್ದಾರೆ. ಇಷ್ಟಾದರೂ 25 ರಂದು ಬಿಜೆಪಿಯ ಪರಿವರ್ತನಾ ಸಮಾವೇಶ ನಡೆದೇ ನಡೆಯುತ್ತೆ ಎಂದು ಸ್ಪಷ್ಟಪಡಿಸಿದ ಅವರು, ಬಂದ್ ಗೆ ಬಿಜೆಪಿಯ ಬೆಂಬಲ ಇದೆ ಎಂದು ಹೇಳೋಲ್ಲ. ಆದರೆ ಮಹಾದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.

    ನಿಜವಾಗಿಯೂ ಹೋರಾಟದ ಅನಿವಾರ್ಯ ಇರೋದು ಕಾಂಗ್ರೆಸ್ ವಿರುದ್ಧ. ನೀರು ಕೊಡುತ್ತೇವೆಂದು ಗೋವಾ ಸಿಎಂ ಹೇಳಿದ್ದಾರೆ. ಅದಕ್ಕೆ ಅಲ್ಲಿನ ಕಾಂಗ್ರೆಸ್ ನಿಂದ ವಿರೋಧ ಇದೆ. ಇದರ ವಿರುದ್ಧ ಕಾಂಗ್ರೆಸ್ ಯಾಕೆ ಪ್ರತಿಭಟನೆ ಮಾಡ್ತಿಲ್ಲ ಎಂದು ಬಿಎಸ್‍ವೈ ಪ್ರಶ್ನಿಸಿದರು.

    ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸ್ ಬಲ ಪ್ರಯೋಗದ ಮೂಲಕ ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಹೊರಟಿದೆ. ಮೈಸೂರಿನ ಪೊಲೀಸ್ ಠಾಣೆಗಳು ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಬಿಜೆಪಿ ಮುಖಂಡ ಗೋಕುಲ್ ರನ್ನು ವಿನಾಕಾರಣ ಬಂಧಿಸಿ ತೊಂದರೆ ಕೊಡಲಾಗಿದೆ. ಈ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.

    ಬಿಜೆಪಿ ಶಾಸಕರ ಪಕ್ಷಾಂತರ ವಿಚಾರದ ಪ್ರಶ್ನೆಗೆ, ಯಾರು ಯಾವ ಪಕ್ಷದಲ್ಲಿ ಬೇಕಾದರೂ ಇರಲಿ. ಯಾವ ಪಕ್ಷಕ್ಕೆ ಬೇಕಾದರೂ ಸೇರಿಕೊಳ್ಳಲಿ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಜನ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಿಎಸ್‍ವೈ ವಿರುದ್ಧ ಸಿನಿಮಾ-`ಮೂರೂ ಬಿಟ್ಟುವರು ದೇವರಿಗೆ ದೊಡ್ಡವರು’ ಫಿಲ್ಮ್ ಟೈಟಲ್

    ಬಿಎಸ್‍ವೈ ವಿರುದ್ಧ ಸಿನಿಮಾ-`ಮೂರೂ ಬಿಟ್ಟುವರು ದೇವರಿಗೆ ದೊಡ್ಡವರು’ ಫಿಲ್ಮ್ ಟೈಟಲ್

    ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊತ್ತಲ್ಲೇ ಬಿಜೆಪಿ ಸಿಎಂ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಿನಿಮಾ ಶಾಕ್ ಸಿಕ್ಕಿದೆ. ಮಾಜಿ ಡಿಸಿಎಂ ಈಶ್ವರಪ್ಪ ಆಪ್ತ ವಿನಯ್, ಬಿಎಸ್‍ವೈ ವಿರುದ್ಧವೇ ಸಿನಿಮಾ ಮಾಡಲು ಹೊರಟಿದ್ದಾರೆ.

    `ಮೂರೂ ಬಿಟ್ಟುವರು ದೇವರಿಗೆ ದೊಡ್ಡವರು’ ಎಂಬ ಟೈಟಲ್ ಸಿನಿಮಾ ಇರಿಸಲಾಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ. ಶೋಭಾ ಪಾಲಿಟಿಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

    ತೆರೆ ಮೇಲೆ ವಿನಯ್ ಹೀರೋ ಆಗಿ ಮಿಂಚಲಿದ್ದರೆ, ರಾಯಚೂರಪ್ಪ ಪಾತ್ರಕ್ಕೆ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಬಣ್ಣ ಹಚ್ಚೋ ಸಾಧ್ಯತೆಯಿದೆ ಎನ್ನಲಾಗಿದೆ. ಕವಿ ರಾಜೇಶ್, ಮಾರುತಿ ಜಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

    ಕಥಾ ನಾಯಕ ವಿನಯ್ ರಾಜಕೀಯ ನಾಯಕನ ಜೊತೆ ಕೆಲ್ಸ ಮಾಡ್ಕೊಂಡಿರುತ್ತಾನೆ. ಆದ್ರೆ ಆ ವ್ಯಕ್ತಿ ದೊಡ್ಡ ನಾಯಕನಾಗಿ ಬೆಳೀತಾನೆ ಅಂತಾ ಕೊಲೆಗೆ ಸಂಚು ರೂಪಿಸ್ತಾರೆ. ಅಪಾಯದಿಂದ ಪಾರಾದ ಹೀರೋ ತನ್ನ ಎದುರಾಳಿ ರಾಜಕಾರಣಿಗಳನ್ನು ರಾಜಕೀಯದಿಂದಲೇ ನಿವೃತ್ತಿಯಾಗುವಂತೆ ಮಾಡ್ತಾನೆ ಅನ್ನೋದು ಕಥೆ.

    ಇನ್ನೊಂದು ವಾರದಲ್ಲಿ ಈ ಸಿನಿಮಾದ ಫಸ್ಟ್‍ಲುಕ್ ರಿಲೀಸ್ ಆಗಲಿದೆ ಎಂಬುವುದಾಗಿ ಮೂಲಗಳಿಂದ ತಿಳಿದುಬಂದಿದೆ.