Tag: ಬಿಎಸ್ ಯಡಿಯೂರಪ್ಪ

  • ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು: ಸಿಎಂ ವ್ಯಂಗ್ಯ

    ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು: ಸಿಎಂ ವ್ಯಂಗ್ಯ

    ಉಡುಪಿ: ಅಶಿಸ್ತೇ ಬಿಜೆಪಿ ನಾಯಕರ ಶಿಸ್ತು. ಬಿಜೆಪಿಯಲ್ಲಿ ಶಿಸ್ತು ಇದ್ದದ್ದು ಯಾವಾಗ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಬಾರ್ಕೂರು ಮಹಾಸಂಸ್ಥಾನವನ್ನು ಲೋಕಾರ್ಪಣೆ ಮಾಡಲು ಬಂದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಮತ್ತು ತಂಡ ಪಕ್ಷದೊಳಗೆ ಇದ್ದು ಕತ್ತಿ ಮಸಿಯುತ್ತಿದ್ದಾರೆ. ಅಸಮಾಧಾನ ಯಾವಾಗ ಸ್ಪೋಟಗೊಳ್ಳುತ್ತದೆ ಗೊತ್ತಿಲ್ಲ ಎಂದರು.

    ಉಡುಪಿ ಟಾರ್ಗೆಟ್ ಕೊಡಲು ಬಿಎಸ್ ಯಡಿಯೂರಪ್ಪ ಯಾರು? ಓಟುಹಾಕುವವರು ರಾಜ್ಯದ ಜನ ಎಂದು ಹೇಳಿ ಟಾಂಗ್ ನೀಡಿದರು.

    ಕೆಂಪು ದೀಪ ತೆರವು ಮಾಡಲು ಕೇಂದ್ರ ಆದೇಶ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ ಸಿಎಂಗಳು ಕೆಂಪು ದೀಪ ತೆಗೆದಿದ್ದಾರೆ. ನಾನು ಈ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಹೇಳಿದರು.

    ದೇವೇಗೌಡರ ಜೊತೆ ಮಾತ್ರ ಅಲ್ಲ ಬಿಎಸ್‍ವೈ ಸೇರಿದಂತೆ ಎಲ್ಲರ ಮೇಲೆ ಪ್ರೀತಿಯಿದೆ. ಯಾರೂ ಶಾಶ್ವತ ಶತ್ರುಗಳಿಲ್ಲ- ಇತ್ರರೂ ಇಲ್ಲ. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡಿಗೆ ಬಿಟ್ಟದ್ದು. ಸಚಿವ ಸಂಪುಟ ವಿಸ್ತರಣೆ, ಮೂರು ಎಂಎಲ್‍ಸಿಗಳ ಬಗ್ಗೆ ಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

    ನಾನು ದೇವರ ವಿರುದ್ಧ ಅಲ್ಲ – ಧಾರ್ಮಿಕ ಕಾರ್ಯಕ್ರಮಗಳ ವಿರುದ್ಧವೂ ಅಲ್ಲ. ದೇವರನ್ನು ಹುಡುಕಿಕೊಂಡು ಕಾಶ್ಮೀರದವರೆಗೆ ಹೋಗಲ್ಲ. ನಮ್ಮ ಊರಿನ ದೇವರನ್ನು ಆರಾಧಿಸುತ್ತೇನೆ ಎಂದು ಹೇಳಿದರು.

    ಸಿಎಂಗೆ ಜಿಲ್ಲಾಡಳಿತ ಕೆಂಪು ದೀಪ ಇಲ್ಲದ ಕಾರನ್ನೇ ಸಿದ್ಧಮಾಡಿತ್ತು. ಅದರಲ್ಲೇ ಹೆಲಿಪ್ಯಾಡಿನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಮಾಡಿದರು.

  • ಪ್ರಚಾರದ ವೇಳೆ ಗೀತಾ ಮಹದೇವಪ್ರಸಾದ್ ಕಣ್ಣೀರು ಹಾಕಿದ್ದು ಯಾಕೆ?

    ಪ್ರಚಾರದ ವೇಳೆ ಗೀತಾ ಮಹದೇವಪ್ರಸಾದ್ ಕಣ್ಣೀರು ಹಾಕಿದ್ದು ಯಾಕೆ?

    – ನಾನು ವಚನಭ್ರಷ್ಟನಲ್ಲ, ಯಾವತ್ತೂ ಆಗಲ್ಲ ಬಿಎಸ್‍ವೈ ತಿರುಗೇಟು

    ಚಾಮರಾಜನಗರ: ನಾನು ಸೂಕ್ಷ್ಮ ಸ್ವಭಾವದವಳು. ಹೀಗಾಗಿ ಬಿಜೆಪಿ ಮುಖಂಡರ ಹೇಳಿಕೆಯಿಂದ ನನಗೆ ನೋವಾಗಿದೆ ಅಂತಾ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್‍ವೈ ನನ್ನ ತಲೆ ಮೇಲೆ ಕೈ ಇಟ್ಟು ನಿನ್ನನ್ನು ಅವಿರೋಧ ಆಯ್ಕೆ ಮಾಡುತ್ತೇನೆ ಅಂತಾ ಹೇಳಿದ್ರು. ಆದ್ರೆ ಇದೀಗ ಸುತ್ತೂರು ಸ್ವಾಮಿಜಿಗಳ ಆಶೀರ್ವಾದ ಪಡೆದುಕೊಂಡು ಚುನಾವಣೆಗೆ ಬಂದಿದ್ದೇನೆ. ಬಿಜೆಪಿಯವರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುವ ಗೌರವನಾ ಎಂದು ಪ್ರಶ್ನಿಸಿದ ಅವರು, ನಾನು ಸುಸಂಸ್ಕೃತ ಮನೆಯಿಂದ ಬಂದಿದ್ದೇನೆ. ನಾನೂ ಅವರ ರೀತಿ ಕೀಳು ಮಟ್ಟಕ್ಕೆ ಇಳಿದಿಲ್ಲ, ಇಳಿಯುವುದೂ ಇಲ್ಲ. ನಾನು ನನ್ನ ಗ್ರಾಮ ಬಿಟ್ಟು ಬೇರೆ ಕಡೆ ಬಂದಿಲ್ಲ, ಗುಂಡ್ಲುಪೇಟೆ ಪಟ್ಟಣ ಸಹ ನೋಡಿಲ್ಲ. ಇಂತಹ ಕೆಟ್ಟ ರಾಜಕಾರಣ ಇದೆ ಎಂಬ ಕಾರಣಕ್ಕೆ ನನ್ನ ಪತಿ ನನ್ನನ್ನು ಇಲ್ಲಿಗೆ ಕರೆ ತರುತ್ತಿರಲಿಲ್ಲ ಅಂತಾ ಅವರು ಹೇಳಿದ್ರು.

    ನಾನು ಯಾವತ್ತು ನಾನಾಗಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಬಂದಿರಲಿಲ್ಲ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಇರಬೇಕು. ಆದ್ರೆ ಇಲ್ಲಿ ನನ್ನ ನೆಮ್ಮದಿಯನ್ನು ಕಸಿದಿಕೊಳ್ಳುತ್ತಿದ್ದಾರೆ. ನಾನು ಅಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ, ಮುಂದೆ ಸಹ ಇಳಿಯುವುದಿಲ್ಲ. ದಯಾಮಾಡಿ ಇದನ್ನು ನಿಲ್ಲಿಸಿ. ಜನರ ಒಕ್ಕೊರಲಿನಿಂದ, ಮುಖ್ಯಮಂತ್ರಿಗಳು, ಮುಖಂಡರು, ಸುತ್ತೂರು ಸ್ವಾಮೀಜಿಗಳು ಹೇಳಿದ್ದಕ್ಕೆ ಚುನಾವಣೆಗೆ ನಾನು ನಿಂತಿರೊದು. ನಾನು ನನ್ನ ಗ್ರಾಮ ಬಿಟ್ಟು ಬೇರೊಂದು ಕಡೆಗೆ ಹೋಗುವುದಿಲ್ಲ. ಯಡಿಯೂರಪ್ಪ ಹಾಗೂ ಶೋಭಾ ಅವರು ಬಂದು ನೀನೇ ನಿಲ್ಲಬೇಕು ಎಂದು ಹೇಳಿದ್ದರು. ಅವರನ್ನು ನಾನು ತಂದೆ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಇದಕ್ಕೆ ನನ್ನ ಜನರು 13 ರಂದು ಉತ್ತರ ಹೇಳುತ್ತಾರೆ ಗೀತಾ ಬೇಸರ ವ್ಯಕ್ತಪಡಿಸಿದ್ರು.

    ಬಿಎಸ್‍ವೈ ತಿರುಗೇಟು: ಗೀತಾ ಮಹದೇವಪ್ರಸಾದ್ ಹೇಳಿಕೆಗೆ ಗುಂಡ್ಲುಪೇಟೆ ತಾಲೂಕಿನ ಬೆರಟಹಳ್ಳಿಯಲ್ಲಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮಹದೇವ ಪ್ರಸಾದ್ ತೀರಿಕೊಂಡ ದಿನ ನಾನು ಅವರ ಮನೆಗೆ ಸಾಂತ್ವಾನ ಹೇಳಲು ಹೋಗಿದ್ದೆ. ಅದೊಂದೆ ದಿನ ನಾನೂ ಗೀತಾ ಮಹದೇವಪ್ರಸಾದ್ ಭೇಟಿ ಮಾಡಿದ್ದು. ಸಾವಿನ ಮನೆಯಲ್ಲಿ ಸಾಂತ್ವನ ಹೇಳಬೇಕಾದ್ರೆ ಚುನಾವಣಾ ವಿಚಾರ ಪ್ರಸ್ತಾಪ ಮಾಡೋದಕ್ಕೆ ಆಗುತ್ತ ಎಂದು ಮರುಪ್ರಶ್ನೆ ಹಾಕಿದ್ದಾರೆ.

    ಸುಳ್ಳು ಹೇಳಿಕೆಗಳನ್ನು ನೀಡಿ, ಕಣ್ಣೀರುಹಾಕಿ, ನನ್ನಂತಹ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಿಗೆ ಅಪಮಾನ ಮಾಡಬಾರದು. ನಾನು ವಚನ ಭ್ರಷ್ಟನಲ್ಲ, ಆ ರೀತಿ ಕೆಲಸ ಸಹ ಮಾಡುವುದಿಲ್ಲ. ಸದ್ಯ ಚುನಾವಣೆ ಏರ್ಪಟ್ಟಿದೆ ಹಾಗಾಗಿ ನನ್ನ ಪಕ್ಷದ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೇವಷ್ಟೇ. ಸುತ್ತೂರು ಶ್ರೀಗಳು ಎಲ್ಲರಿಗೂ ಆಶೀರ್ವಾದ ಮಾಡ್ತಾರೆ. ಇತ್ತೀಚೆಗಷ್ಟೇ ನಮ್ಮ ಅಭ್ಯರ್ಥಿ ನಿರಂಜನ ಕುಮಾರ್ ಗೂ ಆಶಿರ್ವಾದ ಮಾಡಿಸಿಕೊಂಡು ಬಂದಿದ್ದೇನೆ. ಅದರ ಅರ್ಥ ಮತ ಹಾಕ್ಸಿ ಅಂತನಾ.? ಗೀತಾ ಮಹದೇವ ಪ್ರಸಾದ್ ಅವರು ಸುತ್ತೂರು ಶ್ರೀಗಳನ್ನ ರಾಜಕೀಯ ಎಳೆತಂದು ಮಾತನಾಡಬಾರದು ಅಂತಾ ಅವರು ವಾಗ್ದಾಳಿ ನಡೆಸಿದರು.

  • ರಮ್ಯಾ ಬಿಜೆಪಿಗೆ ಸೇರ್ಪಡೆಯಾದ್ರೆ ವಿಷ ಸೇವಿಸ್ತೀನಿ: ಮಂಡ್ಯ ಕಾರ್ಯಕರ್ತನಿಂದ ಬಿಎಸ್‍ವೈಗೆ ಪತ್ರ

    ರಮ್ಯಾ ಬಿಜೆಪಿಗೆ ಸೇರ್ಪಡೆಯಾದ್ರೆ ವಿಷ ಸೇವಿಸ್ತೀನಿ: ಮಂಡ್ಯ ಕಾರ್ಯಕರ್ತನಿಂದ ಬಿಎಸ್‍ವೈಗೆ ಪತ್ರ

    ಮಂಡ್ಯ: ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿಗೆ ಸೇರುತ್ತಾರಾ? ಜಿಲ್ಲೆಯ ಬಿಜೆಪಿ ಕಾರ್ಯಕರ್ತರರೊಬ್ಬರು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಬರೆದಿರುವ ಪತ್ರದಿಂದಾಗಿ ಈ ಪ್ರಶ್ನೆ ಈಗ ಎದ್ದಿದೆ.

    ರಮ್ಯಾ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಉಹಾಪೋಹವಿದ್ದು, ಒಂದು ವೇಳೆ ರಮ್ಯಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

    ರಮ್ಯಾ ಅವರು ಈ ಹಿಂದೆ ಬಿಜೆಪಿಯ ವಿರುದ್ಧವಾಗಿ ಮಾತನಾಡಿದ್ದಾರೆ. ನಾವು ಅವರ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದ್ರೆ ಈಗ ರಮ್ಯಾ ಬಿಜೆಪಿ ಸೇರುವ ಬಗ್ಗೆ ಊಹಾಪೋಹ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ರಮ್ಯಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬಾರದು. ಒಂದು ವೇಳೆ ರಮ್ಯಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೆ ಆದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಂಜುನಾಥ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

    https://www.youtube.com/watch?v=gCek89dOw-Q

  • ಈ ಕಾರಣಕ್ಕೆ ಈಗ ಬಿಎಸ್‍ವೈ ಸಿದ್ದು ಟೀಂ ಹಗರಣದ ದಾಖಲೆ ರಿಲೀಸ್ ಮಾಡಲ್ಲ

    ಈ ಕಾರಣಕ್ಕೆ ಈಗ ಬಿಎಸ್‍ವೈ ಸಿದ್ದು ಟೀಂ ಹಗರಣದ ದಾಖಲೆ ರಿಲೀಸ್ ಮಾಡಲ್ಲ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆಂಡ್ ಟೀಂ ದೊಡ್ಡ ಹಗರಣ ಇದೆ. 4 ದಿನದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಅಂತಾ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಈಗ ಎಲ್ಲ ಒಟ್ಟಾಗೋದು ಬೇಡ ಅಂತಾ ಸುಮ್ಮನಿದ್ದೇನೆ. ಈ ಹಗರಣದಲ್ಲಿ ಸಿದ್ದರಾಮಯ್ಯ ಕೈವಾಡ ಇದೆ. ಬಿಡುಗಡೆ ಮಾಡ್ತೀನಿ, ಕಾದು ನೋಡಿ ಅಂತೇಳಿದ್ರು.

    ಆ ಡೈರಿ ಗೋವಿಂದರಾಜುದೇ, ಅವರ ಬೆಡ್ ರೂಂನಲ್ಲಿ ಬೆಡ್ ಕೆಳಗೆ ಡೈರಿ ಸಿಕ್ಕಿದೆ. ಸಿಎಂ ಮನೆಯಲ್ಲಿ ಮಲ್ಕೊಂಡು ಏನ್ ರಿಯಾಕ್ಷನ್ ಕೊಡಬೇಕು ಅನ್ನೋದನ್ನು ಯೋಚನೆ ಮಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

    ಸಹರಾ ಡೈರಿ ಬೇರೆ, ಈ ಡೈರಿ ಬೇರೆ, ಈ ಡೈರಿ ಸುಮಾರು 27-28 ಪೇಜ್ ಇದೆ. ಇದು ಚುನಾವಣೆ ಗಿಮಿಕ್ ಅಲ್ಲ, ಗಿಮಿಕ್ ಆಗಿದ್ರೆ ಚುನಾವಣೆಗೆ ಮೂರು ತಿಂಗಳ ಮುಂಚೆ ರಿಲೀಸ್ ಮಾಡ್ತಿದ್ವಿ. ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ರು.

  • ಉಗಾಂಡದ ಹುಚ್ಚು ಸರ್ವಾಧಿಕಾರಿ ಇದಿ ಅಮೀನ್‍ನಂತೆ ಬಿಎಸ್‍ವೈ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಉಗಾಂಡದ ಹುಚ್ಚು ಸರ್ವಾಧಿಕಾರಿ ಇದಿ ಅಮೀನ್‍ನಂತೆ ಬಿಎಸ್‍ವೈ ವರ್ತಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

    ಬೆಂಗಳೂರು: ನಾನು ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಹಾಕುತ್ತೇನೆ ಎಂದಿದ್ದ ಬಿಎಸ್‍ವೈ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ  ದಿನೇಶ್ ಗುಂಡೂರಾವ್ ಉಗಾಂಡದ ಸವಾರ್ಧಿಕಾರಿ ಇದಿ ಅಮೀನ್‍ಗೆ ಹೋಲಿಕೆ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಸಿಕ್ಕವರನ್ನೆಲ್ಲಾ ಜೈಲಿಗೆ ಹಾಕುತ್ತಿದ್ದ. ಈಗ ಯಡಿಯೂರಪ್ಪನವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಅನ್ನೋದು ಖಾತ್ರಿ ಆಗಿದೆ. ಈಗ ಬಿಎಸ್‍ವೈ ಇದಿ ಅಮೀನ್ ರೀತಿಯಂತೆ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದು, ವೈದ್ಯರ ಬಳಿ ಚೆಕ್ ಅಪ್ ಮಾಡಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದರು.

    ಈಗಲೇ ಜೈಲಿಗೆ ಹಾಕಲಿ: ಅಧಿಕಾರಕ್ಕೆ ಬಂದ 24 ಗಂಟೆಯ ಒಳಗಡೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ನ್ಯಾಯಾಧೀಶರೇ? ಬಿಎಸ್‍ವೈ ಮುಖ್ಯಮಂತ್ರಿ ಆಗುವವರೆಗೂ ಕಾಯುವುದು ಯಾಕೆ ಎಂದು ಪ್ರಶ್ನಿಸಿದ ಅವರು ಕೇಂದ್ರ ಸರಕಾರದ ಇಲಾಖೆಗಳನ್ನು ಬಳಸಿ ಸಿಎಂ ಸಚಿವರ ವಿರುದ್ಧ ದಾಖಲೆಗಳಿದ್ದರೆ ಈಗಲೇ ಸಿಬಿಐ ತನಿಖೆ ನಡೆಸಿ ಜೈಲಿಗೆ ಹಾಕಲಿ ಎಂದು ಸವಾಲು ಹಾಕಿದರು.

    ಬಿಎಸ್‍ವೈ ಬಲಿಪಶು: ಯಡಿಯೂರಪ್ಪರನ್ನು ಬಿಜೆಪಿ ಗುಂಪು ಬಲಿಪಶು ಮಾಡುತ್ತಿದೆ. ಬಿಎಸ್‍ವೈ ವರ್ಚಸ್ಸು ಕುಗ್ಗಿಸಲು ಈ ತರಹ ಹೇಳಿಕೆಗಳನ್ನು ಉದ್ದೇಶಪೂರ್ವಕ ಮಾಡಿಸಲಾಗುತ್ತಿದೆ ಎಂದು ಗುಂಡೂರಾವ್ ಆರೋಪಿಸಿದರು.

    ಕಾನೂನು ಕ್ರಮ: ಐಟಿ ಅಧಿಕಾರಿಗಳು ತನಿಖೆಯ ದಾಖಲೆಗಳನ್ನು ಸೋರಿಕೆ ಮಾಡಿದ್ದಾರೆ. ಐಟಿ ದಾಖಲೆ ಸೋರಿಕೆಯಾದ ಬಗ್ಗೆ ನಮ್ಮಲ್ಲಿ ಆಧಾರ ಇದೆ. ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗ ಮಾಡುತ್ತಿದ್ದು, ಐಟಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

    ಹುಚ್ಚಾಟಗಳಿಗೆ ಉತ್ತರ: ಬಿಜೆಪಿಯ ಹುಚ್ಚಾಟಗಳಿಗೆ ಫೆಬ್ರವರಿ 23 ರಂದು ಕಾಂಗ್ರೆಸ್ ನಿಂದ ‘ಸತ್ಯಮೇವ ಜಯತೇ’ ರ್ಯಾಲಿ ಮಾಡುತ್ತೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಗುವುದು ಹೇಳಿದರು.

  • ಎಸ್‍ಎಂ ಕೃಷ್ಣ ಬಿಜೆಪಿ ಸೇರೋದು ಯಾವಾಗ?: ಬಿಎಸ್‍ವೈ ನೀಡಿದ ಉತ್ತರ ಇದು

    ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ತೊರೆದ ಹಿರಿಯ ಮುಖಂಡ ಎಸ್‍ಎಂ ಕೃಷ್ಣ ಬಿಜೆಪಿ ಸೇರೋ ಬಗ್ಗೆ ಈ ಹಿಂದೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ. ಎಸ್‍ಎಂಕೆ ಬಿಜೆಪಿ ಸೇರುವುದು ಖಚಿತವಿಲ್ಲ ಎಂದು ಬಿಎಸ್‍ವೈ ಹೇಳಿದ್ದಾರೆ.

    ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಬಿಎಸ್‍ವೈ, ಇದರ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಅವರು ಯಾವಾಗ ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ಕೃಷ್ಣರನ್ನು ನಾನಂತೂ ಭೇಟಿಯಾಗಿಲ್ಲ ಅಂದ್ರು.

    ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಂದುವರಿಕೆ ವಿಚಾರವಾಗಿ ಮಾತನಾಡಿದ ಬಿಎಸ್‍ವೈ, ಈಶ್ವರಪ್ಪ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ಅಣ್ಣ ತಮ್ಮಂದಿರಾಗಿ ಒಟ್ಟಾರೆ ಕೆಲಸ ಮಾಡ್ತಿದ್ದೀವಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಪ್ರಯತ್ನ ಮಾಡ್ತಿದ್ದೀವಿ ಅಂದ್ರು.