Tag: ಬಿಎಸ್ ಯಡಿಯೂರಪ್ಪ

  • ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಜಮೀನು ಡಿನೋಟಿಫೈ ಮಾಡಿ BSY ರೀತಿ ಜೈಲಿಗೆ ಹೋಗಲು ಸಿದ್ಧನಿಲ್ಲ: ಡಿಕೆಶಿ

    ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಜಮೀನು ಡಿನೋಟಿಫೈ ಮಾಡಿ BSY ರೀತಿ ಜೈಲಿಗೆ ಹೋಗಲು ಸಿದ್ಧನಿಲ್ಲ: ಡಿಕೆಶಿ

    ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪರಂತೆ (BS Yediyurappa) ಜೈಲಿಗೆ ಹೋಗಲು ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.

    ಭೂಸ್ವಾಧೀನ ವಿರೋಧಿಸಿ ರಾಮನಗರದ (Ramanagara) ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಹೊರಗಡೆಯಿಂದ ಬಂದವನಲ್ಲ. ನಾನು ಕೂಡ ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದು ರೈತರಿಗೆ ತಿಳಿದಿದೆ. ಇದರಿಂದ 16 ಸಾವಿರ ಎಕರೆ ಭೂಮಿ ಹೋಯಿತು. ಟೊಯೋಟೊ ಸೇರಿದಂತೆ ಒಂದಷ್ಟು ಕಂಪನಿಗಳು ಈ ಭಾಗಕ್ಕೆ ಬಂದವು. ಈ ಹಿಂದೆ ಕೈಗಾರಿಕಾ ಪ್ರದೇಶವಾದಾಗ ನನ್ನದೂ ಸಹ 12 ಎಕರೆ ಜಮೀನು ಹೋಗಿದೆ. ಆಗ ಪರಿಹಾರವನ್ನು 8 ಲಕ್ಷಕ್ಕೆ ಮೀರಿ ನೀಡಿಯೇ ಇಲ್ಲ ಎಂದರು. ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

    ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10 ಸಾವಿರ ಕೋಟಿ ರೂ. ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈ ಬಿಡುವ ಹಂತದಲ್ಲಿ ನಾನಿಲ್ಲ. ಕುಮಾರಸ್ವಾಮಿ ಅವರ ಧರ್ಮಪತ್ನಿಯವರು ಹಾಗೂ ಮಗ ಸೇರಿದಂತೆ ಶೇ.70 ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ.30 ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಆದರೆ ನಾನು ನಿಮ್ಮ ಪರವಾಗಿ ಏನು ತೀರ್ಮಾನ ತೆಗೆದುಕೊಳ್ಳಬೇಕು, ಯಾವ ರೀತಿ ಸಹಾಯ ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಗಲಕೋಟೆಯ ಮಹಿಳೆಗೆ ಮದುವೆಯಾಗೋದಾಗಿ ಹೇಳಿ 5.50 ಲಕ್ಷ ವಂಚನೆ – ನೈಜೀರಿಯನ್‌ ಪ್ರಜೆ ಅರೆಸ್ಟ್‌

    ಈ ವೇಳೆ ಶಾಸಕ ಬಾಲಕೃಷ್ಣ ಅವರು ರೈತರ ಪರವಿಲ್ಲ ಎಂದು ಪ್ರತಿಭಟನಾ ನಿರತ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ, ಬಾಲಕೃಷ್ಣ ನಿಮ್ಮ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ನನ್ನ ಹಿಂದೆ ಬಿದ್ದು ರೈತರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹಿಂದೆ ಸಹಿ ಹಾಕಿದವರು ನಿಮ್ಮ ಪರವಾಗಿದ್ದಾರಾ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 1 ಕೋಟಿ ರೂ. ಪರಿಹಾರ ನಿಗದಿ ಮಾಡಿದವರು ನಿಮ್ಮ ಪರವಾಗಿದ್ದಾರಾ? ಅವರುಗಳು ಯಾರೂ ನಿಮ್ಮ ಪರವಾಗಿಲ್ಲ. ರೈತರಿಗೆ ಉತ್ತಮ ಪರಿಹಾರ ದೊರೆಯಬೇಕು ಎಂದು ಹೋರಾಟ ಮಾಡುತ್ತಿರುವ ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ. ನಿಮ್ಮ ಪರವಾಗಿ ಇವರಷ್ಟು ಹೋರಾಟವನ್ನು ಬೇರೆ ಯಾರೂ ಸಹ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ – ಒಟ್ಟು ಆಸ್ತಿ ಎಷ್ಟು?

    ಡಿಎಲ್‌ಎಫ್ ಕಂಪನಿಯವರು ಈ ಪ್ರದೇಶವನ್ನು ತೆಗೆದುಕೊಂಡರು. ಆ ನಂತರ ಇಲ್ಲಿನ ವೃಷಭಾವತಿ ನೀರು ಸೇರಿದಂತೆ ಇತರೆ ಸಂಗತಿಗಳನ್ನು ಗಮನಿಸಿ ನಮ್ಮಿಂದ ಟೌನ್‌ಶಿಪ್ ಮಾಡಲು ಸಾಧ್ಯವಿಲ್ಲ ಎಂದು ಯೋಜನೆ ಕೈ ಬಿಟ್ಟರು. 9,600 ಎಕರೆ ಪ್ರದೇಶದಲ್ಲಿ ಸುಮಾರು 912 ಎಕರೆ ಪ್ರದೇಶವನ್ನು ಕೈಗಾರಿಕೆಗೆ ಎಂದು ನೀಡಲಾಯಿತು. ಎಕರೆಗೆ 1 ಕೋಟಿ ರೂ. ಹಾಗೂ ಅದಕ್ಕಿಂತ ಹೆಚ್ಚು ಪರಿಹಾರ ಹಣವನ್ನು ನಿಗದಿಪಡಿಸಲಾಯಿತು. ಆಗ ಯಾರೂ ಸಹ ವಿರೋಧ ಮಾಡಲಿಲ್ಲ. ಈಗ ಏಕೆ ವಿರೋಧ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾದಗಿರಿ | ಹವಾಮಾನ ಬದಲಾವಣೆ – ಮಕ್ಕಳಲ್ಲಿ ಹೆಚ್ಚಿದ ವೈರಲ್ ಫೀವರ್

    ಕುಮಾರಸ್ವಾಮಿ ಕೃಷ್ಣಾದಲ್ಲಿ ಸಭೆ ನಡೆಸಿ ಭೂಸ್ವಾಧೀನ ಕೈ ಬಿಡುವುದಾಗಿ ತಿಳಿಸಿದ್ದರು. ಅದರಂತೆ ನೀವು ಮಾಡಿ ಎಂದು ರೈತರು ಹೇಳಿದಾಗ, ಅವೆಲ್ಲ ಸುಳ್ಳು. ಯಾರೂ ಸಹ ಭೂಸ್ವಾಧೀನ ಕೈಬಿಡಲಿಲ್ಲ. ಈಗ ಅವರು ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರಿಂದಲೇ ಭೂಸ್ವಾಧೀನವನ್ನು ಬಿಡಿಸಿಕೊಳ್ಳಿ ಎಂದರು. ಬಿಡಿಎಗೆ ಎಂದು ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಈ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿದೆ. ಆ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ನಾನು ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ನೈಸ್ ಯೋಜನೆಯ ಭೂಮಿಯನ್ನು ಏಕೆ ವಜಾ ಮಾಡಲು ಆಗಲಿಲ್ಲ? ಏಕೆಂದರೆ ಕಾನೂನಿನ ಪ್ರಕಾರವೇ ನಾವು ಮುಂದುವರೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ ಬೆನ್ನಲ್ಲೇ ದುಬಾರಿಯಾಗಲಿದೆ ಆರ್‌ಸಿಬಿ ಟಿಕೆಟ್‌ ದರ

  • ಬಿಜೆಪಿಯಲ್ಲಿ `ಅಧ್ಯಕ್ಷ’ ಗೊಂದಲ – ದೆಹಲಿ ಭೇಟಿಗೆ ಬಿಎಸ್‌ವೈ ಚಿಂತನೆ

    ಬಿಜೆಪಿಯಲ್ಲಿ `ಅಧ್ಯಕ್ಷ’ ಗೊಂದಲ – ದೆಹಲಿ ಭೇಟಿಗೆ ಬಿಎಸ್‌ವೈ ಚಿಂತನೆ

    ಬೆಂಗಳೂರು: ಬಿಜೆಪಿಯಲ್ಲಿ (BJP) ಪ್ರತಿಷ್ಠೆ ಸಮರ, ನಾನಾ? ನೀನಾ? ಕದನ ಸದ್ಯಕ್ಕೆ ಶಮನವಾಗುವುದು ಅನುಮಾನ. ಸದ್ಯ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಜಟಾಪಟಿ ನಡೆಯುತ್ತಿದೆ.

    ವಿಜಯೇಂದ್ರ (BY Vijayendra) ವಿರುದ್ಧ ತೊಡೆ ತಟ್ಟಿರುವ ಭಿನ್ನರು ಮತ್ತು ತಟಸ್ಥರು, ಈಗಾಗಲೇ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು/ಮನವಿ ಸಲ್ಲಿಸಿದ್ದಾರೆ. ವಿಜಯೇಂದ್ರ ಬದಲಾವಣೆಗೆ ವಿರೋಧಿ ಬಣ ಪಟ್ಟು ಹಿಡಿದಿದೆ. ಇದೀಗ ಎಲ್ಲರ ದೆಹಲಿ ಪರೇಡ್ ಬಳಿಕ ಕ್ಲೈಮ್ಯಾಕ್ಸ್‌ನಲ್ಲಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟವನ್ನ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ

    ಹೌದು, ಮಗನಿಗಾಗಿ ಕೊನೆ ಹಂತದಲ್ಲಿ ಬಿಎಸ್‌ವೈ (BS Yediyurappa) ಕಸರತ್ತಿಗಿಳಿದಿದ್ದಾರೆ. ಪುತ್ರ ವಿಜಯೇಂದ್ರ ಪರ ದೆಹಲಿ ಪ್ರವಾಸಕ್ಕೆ ರಾಜಾಹುಲಿ ಚಿಂತನೆ ನಡೆಸಿದ್ದಾರಂತೆ. ರಾಜ್ಯಾಧ್ಯಕ್ಷ ಗದ್ದುಗೆ ಉಳಿಸಿಕೊಳ್ಳಲು ಪುತ್ರನಿಗಾಗಿ ಬಿ.ಎಸ್‌ವೈ ಪ್ರತಿತಂತ್ರ ರೂಪಿಸಿದ್ದಾರಂತೆ. ಮಗನ ರಿಪೋರ್ಟ್ ಕಾರ್ಡ್ ಹಿಡಿದು ದೆಹಲಿ ವಿಮಾನ ಹತ್ತಲು ಯಡಿಯೂರಪ್ಪ ಗಂಭೀರವಾಗಿ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆಪ್ತರ ಜೊತೆ ದೆಹಲಿ ಭೇಟಿಯ ಸಾಧಕ-ಬಾಧಕ ಬಗ್ಗೆ ಬಿಎಸ್‌ವೈ ಮಂಥನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

    ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿದರೆ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡುವುದು ಯಡಿಯೂರಪ್ಪ ಅವರ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ ಒಂದೂವರೆ ವರ್ಷದಲ್ಲಿ ವಿಜಯೇಂದ್ರ ಸಾಧನೆ, ಸವಾಲು, ಸಂಘಟನೆ ಕುರಿತ ರಿಪೋರ್ಟ್ ಕಾರ್ಡ್ ಸಹ ತಮ್ಮೊಂದಿಗೆ ಯಡಿಯೂರಪ್ಪ ಒಯ್ಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಪಕ್ಷ ಸಂಘಟನೆಗೆ, ಸರ್ಕಾರದ ವಿರುದ್ಧದ ಹೋರಾಟಕ್ಕೆ ಯಾರೆಲ್ಲ ಸಹಕರಿಸಿದರು? ಯಾರದ್ದೆಲ್ಲ ಅಸಹಕಾರವಿದೆ ಎಂದು ಮಾಹಿತಿ ಕೊಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

    ವಿಜಯೇಂದ್ರ ವಿರುದ್ಧ ಗುಂಪುಗಾರಿಕೆ/ಭಿನ್ನಮತ ಮಾಡಿದವರ ಬಗ್ಗೆಯೂ ರಿಪೋರ್ಟ್‌ನಲ್ಲಿ ಮಾಹಿತಿ ಇರಲಿದೆ. ಇನ್ನೂ ಮುಂದಿನ ಗುರಿಯಾಗಿ ಹೈಕಮಾಂಡ್ ಅಂಗಳದಲ್ಲಿ ಪಕ್ಷ ಅಧಿಕಾರಕ್ಕೆ ತರುವ ಭರವಸೆಯನ್ನೂ ಯಡಿಯೂರಪ್ಪ ಕೊಡಲಿದ್ದಾರೆ. ವಿರೋಧಿ ಬಣದ ದೂರು, ಆರೋಪಗಳಿಗೂ ತಕ್ಕ ಕೌಂಟರ್ ರೆಡಿ ಮಾಡಿಕೊಂಡಿದ್ದಾರೆ. ಭಿನ್ನರು/ತಟಸ್ಥರ ವಿರುದ್ಧ ವರಿಷ್ಠರಿಗೆ ಚಾರ್ಜ್ಶೀಟ್ ಸಲ್ಲಿಕೆಗೂ ಬಿಎಸ್‌ವೈ ಸಜ್ಜಾಗಿದ್ದಾರೆ ಎನ್ನಲಾಗುತ್ತಿದ್ದು, ದೆಹಲಿ ಪ್ರವಾಸದ ಬಗ್ಗೆ ಯಡಿಯೂರಪ್ಪ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ.ಇದನ್ನೂ ಓದಿ: ಬಿಹಾರ ಚುನಾವಣೆಗೆ ನಿತೀಶ್ ಸಜ್ಜು – ಬಿಹಾರದ ಮಹಿಳೆಯರಿಗೆ ಉದ್ಯೋಗದಲ್ಲಿ 35% ಮೀಸಲಾತಿ ಘೋಷಣೆ

  • ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರೇ ಬಾಯಿ ಬಿಡ್ತಾರೆ – ಬಿಎಸ್‌ವೈ

    ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರೇ ಬಾಯಿ ಬಿಡ್ತಾರೆ – ಬಿಎಸ್‌ವೈ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಬ್ಬೊಬ್ಬರಾಗಿಯೇ ಮುಂದಿನ ದಿನಗಳಲ್ಲಿ ಬಾಯಿ ಬಿಡುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ:ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬಾರದು – ಕುಮಾರ್ ಬಂಗಾರಪ್ಪ

    ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಶಾಸಕರಾದ ಬಿ.ಆರ್.ಪಾಟೀಲ್ (BR Patil) ಮತ್ತು ರಾಜು ಕಾಗೆ (Raju Kage) ಆರೋಪಕ್ಕೆ ಬಿಜೆಪಿ (BJP) ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿ.ಆರ್.ಪಾಟೀಲ್ ಅವರು ಮನೆಗಳನ್ನು ಕೊಡುವ ಸಮಯದಲ್ಲಿ ದುಡ್ಡು ಕೊಡದೇ, ಲಂಚ ಕೊಡದೇ ಏನು ಕೆಲಸ ಆಗುವುದಿಲ್ಲ ಎಂದು ಗುರುತರದ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆದರೆ ವಾಸ್ತವದ ಸ್ಥಿತಿ ಹೇಳುವುದಾಗಿ ಹೇಳಿದ್ದಾರೆ. ಸಿಎಂ ಅವರೇ ಬಿ.ಆರ್.ಪಾಟೀಲ್ ಅವರ ಬಾಯಿ ಮುಚ್ಚಿಸುವ ಆತಂಕ ನಮಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

    ಕೇವಲ ರಾಜು ಕಾಗೆ ಮಾತ್ರವಲ್ಲ, ಹೀಗೆ ಹತ್ತಾರು ಜನರು ಈ ರೀತಿ ಹೇಳುತ್ತಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡುತ್ತಾರೆ. ನೀವೇ ಕಾದು ನೋಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಹಗರಣಗಳೇ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ: ಕುಮಾರ್ ಬಂಗಾರಪ್ಪ

  • ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್‌ವೈ

    ಬಿಜೆಪಿ ಕಚೇರಿಗೆ ದಿಢೀರ್ ಭೇಟಿ – ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ ಎಂದ ಬಿಎಸ್‌ವೈ

    ಬೆಂಗಳೂರು: ಬಿಜೆಪಿ (BJP) ಅಸಮಾಧಾನಿತರ ಜೊತೆ ಮಾತುಕತೆ ‌ನಡೆಸಲು‌ ನಾನು ಸಿದ್ಧ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಸಮಾಧಾನಿತರ ಜೊತೆ ಮಾತುಕತೆಗೆ ಪ್ರಹ್ಲಾದ್ ಜೋಷಿ (Prahlad Joshi) ಪ್ರಯತ್ನ ಮಾಡುತ್ತಿರುವುದನ್ನು ಸ್ವಾಗತ ಮಾಡುತ್ತೇನೆ. ನಾನು‌ ಅಸಮಾಧಾನಿತರ ಜೊತೆ ಮಾತುಕತೆಗೆ ಸಿದ್ಧ. ಇನ್ನು ಮುಂದೆ  ಪ್ರತಿನಿತ್ಯ ಬಿಜೆಪಿ ಕಚೇರಿಗೆ ಬೆಳಗ್ಗೆ ಬಂದು ಮಧ್ಯಾಹ್ನ ಹೋಗುತ್ತೇನೆ. ಕಾರ್ಯಕರ್ತರ ಸಮಸ್ಯೆಗಳನ್ನ ಕೇಳುತ್ತೇನೆ. ವಾರದಲ್ಲಿ ಎರಡು ದಿನ‌ ಜಿಲ್ಲಾ ಪ್ರವಾಸವನ್ನೂ ಮಾಡುತ್ತೇನೆ ಎಂದರು.

    ಇದೇ ವೇಳೆ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಕೆ, ಡೆಲ್ಲಿಯಿಂದ ಟಿಕೆಟ್ ತರುತ್ತೇನೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ದೇವೇಗೌಡರಿಗೆ ಮೋದಿ ಅವರ ಮೇಲೆ ‌ನಂಬಿಕೆ ಇದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿ ಹೋಗುತ್ತೇವೆ. ಕಾಂಗ್ರೆಸ್ ಸರ್ಕಾರ ಇಳಿಸಿ ಬಿಜೆಪಿ ಸರ್ಕಾರ ತರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕೆಲವರಿಗೆ ಅತೃಪ್ತಿ ಇರೋದು ಸತ್ಯ – ಬಿವೈವಿ

     

    ಬಹಳ ತಿಂಗಳ ಬಳಿಕ‌ ಬಿಜೆಪಿ ಕಚೇರಿಗೆ ಯಡಿಯೂರಪ್ಪ ಆಗಮಿಸಿದರು.  ದಿಢೀರ್ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟ ಯಡಿಯೂರಪ್ಪ ‌ನಡೆ ಅಚ್ಚರಿ ತಂದಿತ್ತು. ಇನ್ಮುಂದೆ ಬೆಂಗಳೂರಲ್ಲಿ ಇದ್ದರೆ ಬಿಜೆಪಿ ಕಚೇರಿಗೆ ನಿತ್ಯ ಭೇಟಿಯಾಗಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.

    ನೂರಕ್ಕೆ ನೂರು ಸತ್ಯ:
    ಲಂಚದ ಬಗ್ಗೆ ಬಿ.ಆರ್.ಪಾಟೀಲ್ (BR Patil) ಆಡಿಯೋ ವೈರಲ್ ವಿಚಾರವಾಗಿ ಮಾಜಿ‌ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಬಿ.ಆರ್.ಪಾಟೀಲ್ ಹೇಳಿರೋದು ನೂರಕ್ಕೆ ನೂರು ಸತ್ಯ. ಏನೇ ಆಗಬೇಕಾದ್ರೆ ಹಣ ಕೊಟ್ಟು‌ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ ಎಂದು ವಾಗ್ದಾಳಿ ‌ನಡೆಸಿದ್ರು. ಇದನ್ನೂ ಓದಿ: ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರ ಬಾಂಬ್‌; ಜಮೀರ್ ಪಿಎ – ಬಿ.ಆರ್ ಪಾಟೀಲ್‌ರದ್ದು ಎನ್ನಲಾದ ಆಡಿಯೋ ವೈರಲ್‌

    ಬಡವರು ಹಣ ಕೊಟ್ಟು ಮನೆ ತೆಗೆದುಕೊಳ್ಳುವ ದುಸ್ಥಿತಿ ನಿರ್ಮಾಣ ಆಗಿದೆ. ಇದನ್ನು ನಾನು ಹೇಳುತ್ತಿಲ್ಲ. ಬಿ.ಆರ್‌.ಪಾಟೀಲ್ ಅವರೇ ಹೇಳಿದ್ದಾರೆ. ಸರ್ಕಾರ ಈಗಲಾದರೂ ತಪ್ಪನ್ನು  ಒಪ್ಪಿಕೊಂಡು ಸರಿಪಡಿಸಿಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

  • ಬಿಎಸ್‌ವೈ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ, ಉಪರಾಷ್ಟ್ರಪತಿ ಭಾಗಿ

    ಬಿಎಸ್‌ವೈ ಮೊಮ್ಮಗನ ಅದ್ಧೂರಿ ಆರತಕ್ಷತೆಯಲ್ಲಿ ಜೆ.ಪಿ ನಡ್ಡಾ, ಉಪರಾಷ್ಟ್ರಪತಿ ಭಾಗಿ

    ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ಮೊಮ್ಮಗ, ಬಿ.ವೈ ರಾಘವೇಂದ್ರ (BY Raghavendra) ಪುತ್ರ ಸುಭಾಷ್ ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ (ನಿನ್ನೆ) ಶನಿವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡು ನವಜೋಡಿಗಳಿಗೆ ಶುಭಹಾರೈಸಿದರು.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಭಾಷ್ ಹಾಗೂ ಶ್ರಾವಣಾ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಜೆ.ಪಿ ನಡ್ಡಾ, ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar), ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆಂಧ್ರ ಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಪಾಲ್ಗೊಂಡು, ನವ ವಧು-ವರರಿಗೆ ಶುಭ ಹಾರೈಸಿದರು. ದನ್ನೂ ಓದಿ: ಭಾರತಕ್ಕೆ ಗುಡ್‌ನ್ಯೂಸ್: ದೇಶದ ಕಡುಬಡತನ ಪ್ರಮಾಣ 27.1% ರಿಂದ 5.3% ಕ್ಕೆ ಇಳಿಕೆ 

    ಈ ಸಂಭ್ರಮದಲ್ಲಿ ಜಮೀರ್ ಅಹ್ಮದ್, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿ.ವೈ ರಾಘವೇಂದ್ರ ಶಾಲು ಹೊದಿಸಿ ಗೌರವಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಘವೇಂದ್ರ ಪತ್ನಿ ಶಾಲು ಹೊದಿಸಿ ಸ್ವಾಗತಿಸಿದರು. ದನ್ನೂ ಓದಿ: ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

    ಮಾರ್ಚ್ 24ರಂದು ಕಲಬುರಗಿಯಲ್ಲಿ ಬಿಎಸ್‌ವೈ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಬಿವೈ ರಾಘವೇಂದ್ರ ಪುತ್ರ ಸುಭಾಷ್ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣ ಅವರನ್ನು ಭಾನುವಾರ (ಇಂದು) ವರಿಸಲಿದ್ದಾರೆ. ದನ್ನೂ ಓದಿ: ಕಾಮೆಡ್‌-ಕೆ: ಎಕ್ಸಲೆಂಟ್ ಮೂಡುಬಿದಿರೆಗೆ ರಾಷ್ಟ್ರಮಟ್ಟದಲ್ಲಿ ಮೊದಲ ರ‍್ಯಾಂಕ್

  • ಬಿಎಸ್‌ವೈ ಮೊಮ್ಮಗನ ಆರತಕ್ಷತೆಯಲ್ಲಿ ಸಿಎಂ, ಡಿಸಿಎಂ ಭಾಗಿ

    ಬಿಎಸ್‌ವೈ ಮೊಮ್ಮಗನ ಆರತಕ್ಷತೆಯಲ್ಲಿ ಸಿಎಂ, ಡಿಸಿಎಂ ಭಾಗಿ

    ಬೆಂಗಳೂರು: ಬಿಎಸ್ ಯಡಿಯೂರಪ್ಪ (BS Yediyurappa) ಮೊಮ್ಮಗ, ಬಿವೈ ರಾಘವೇಂದ್ರ (BY Raghavendra) ಪುತ್ರ ಸುಭಾಷ್ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಶನಿವಾರ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಭಾಷ್ ಹಾಗೂ ಶ್ರಾವಣಾ ಆರತಕ್ಷತೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಸಂಭ್ರಮದಲ್ಲಿ ಜಮೀರ್ ಅಹ್ಮದ್, ಬೈರತಿ ಸುರೇಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿವೈ ರಾಘವೇಂದ್ರ ಶಾಲು ಹೊದಿಸಿ ಗೌರವಿಸಿದರು. ಶಾಲಿನಿ ರಜನೀಶ್ ಅವರಿಗೆ ರಾಘವೇಂದ್ರ ಪತ್ನಿ ಶಾಲು ಹೊದಿಸಿ ಸ್ವಾಗತಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ – ಪರಿಹಾರ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ಸರ್ಕಾರ

    ಮಾರ್ಚ್ 24ರಂದು ಕಲಬುರಗಿಯಲ್ಲಿ ಬಿಎಸ್‌ವೈ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಬಿವೈ ರಾಘವೇಂದ್ರ ಪುತ್ರ ಸುಭಾಷ್ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ದಂಪತಿಯ ಪುತ್ರಿ ಶ್ರಾವಣ ಅವರನ್ನು ಭಾನುವಾರ ವರಿಸಲಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಬಹಳ ನೊಂದಿದ್ದಾರೆ: ಎಂ.ಸಿ ಸುಧಾಕರ್

  • ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರ ಹೋರಾಟ: ಯಡಿಯೂರಪ್ಪ

    ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನಿರಂತರ ಹೋರಾಟ: ಯಡಿಯೂರಪ್ಪ

    ಬೆಂಗಳೂರು: ಸರ್ಕಾರದ ತಪ್ಪು ನೀತಿಗಳ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ತಿಳಿಸಿದರು.

    ಇಂದು ಬಿಜೆಪಿಯ (BJP) ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳ ಮನೆಯ ಬಳಿ ಹೋದಾಗ ನಮ್ಮನ್ನು ಬಂಧಿಸಬೇಕಿತ್ತು. ಮುಂಚೆಯೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದು ಸರಿಯಲ್ಲ ಎಂದರು. ಇದನ್ನೂ ಓದಿ: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

    ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಮುಖ್ಯಮಂತ್ರಿಗಳ ಮನೆಯ ಹತ್ತಿರ ಬಂದಾಗ ಅರೆಸ್ಟ್ ಮಾಡುತ್ತಿದ್ದೆವು. ಇವತ್ತು ಮುಂಜಾಗ್ರತಾ ಕ್ರಮವೆಂದು ಮುಂಚಿತವಾಗಿಯೇ ಬಂಧಿಸಿದ್ದು ಸರಿಯಲ್ಲ. ರಾಜ್ಯದ ಉದ್ದಗಲಕ್ಕೆ ನಮ್ಮ ಹೋರಾಟ ಮುಂದುವರೆಸಲಿದ್ದೇವೆ. ಜನವಿರೋಧಿ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವವರೆಗೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಗಡಿನಾಡು ಚಾಮರಾಜನಗರದಲ್ಲಿ ಜೋರಾಯ್ತು ‘ಬಂಡೀಪುರ ಉಳಿಸಿ’ ಹೋರಾಟ

  • ಯತ್ನಾಳ್ ಉಚ್ಚಾಟನೆಗೆ ನಾನು ಹೊಣೆ ಅಲ್ಲ: ವಿಜಯೇಂದ್ರ

    ಯತ್ನಾಳ್ ಉಚ್ಚಾಟನೆಗೆ ನಾನು ಹೊಣೆ ಅಲ್ಲ: ವಿಜಯೇಂದ್ರ

    – ನಾನು ಉಚ್ಚಾಟನೆ ಸಂಭ್ರಮಿಸುವ ಮನಸ್ಥಿತಿಯವನಲ್ಲ ಎಂದ ಬಿವೈವಿ

    ಬೆಂಗಳೂರು: ಯತ್ನಾಳ್ (Basanagouda Patil Yatnal) ಉಚ್ಚಾಟನೆಯಲ್ಲಿ ನನ್ನ ಹಾಗೂ ಯಡಿಯೂರಪ್ಪ (BS Yediyurappa) ಅವರ ಪಾತ್ರ ಇಲ್ಲ. ಅದು ನಮ್ಮ ತೀರ್ಮಾನವೂ ಅಲ್ಲ. ನಾವು ಅವರ ಉಚ್ಛಾಟನೆಗೆ ಜವಾಬ್ದಾರರೂ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರದ ವರಿಷ್ಠರು ಯತ್ನಾಳ್ ಅವರಿಗೆ ಹಲವು ಬಾರಿ ನೋಟಿಸ್ ಕೊಟ್ಟು ತಿದ್ದುವ ಕೆಲಸ ಮಾಡಿದ್ದಾರೆ. ನಾನೂ ಕೂಡಾ ಎಲ್ಲವನ್ನು ಸರಿಪಡಿಸಿಕೊಳ್ಳೋಣ ಎಂದು ಯತ್ನಾಳ್ ಅವರಿಗೆ ಹೇಳಿದ್ದೆ. ಸದನ ನಡೆಯುವಾಗ ನಾನೂ ಕೂಡಾ ಅವರನ್ನು ವೈಯಕ್ತಿಕ ಭೇಟಿ ಮಾಡಿ ಮಾತಾಡಿದ್ದೆ, ಭೋಜನಕ್ಕೆ ಆಹ್ವಾನಿಸಿದ್ದೆ. ಯತ್ನಾಳ್ ಜೊತೆಗಿನ ಗೊಂದಲಗಳನ್ನು, ಸಮಸ್ಯೆಗಳನ್ನು ನನ್ನ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಆದರೆ ವಿಧಿಯಾಟ ಇದು. ಹೈಕಮಾಂಡ್‌ನವರು ಎಲ್ಲವನ್ನೂ ತುಲನೆ ಮಾಡಿ ಕೊನೆಗೆ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಉಚ್ಚಾಟನೆಯಿಂದ ಮುಜುಗರ, ಹಿನ್ನಡೆ ಆಗಿಲ್ಲ – ಹೈಕಮಾಂಡ್ ಬಳಿ ಮರಿಪರಿಶೀಲನೆ ಮನವಿ ಮಾಡಲ್ಲ: ಯತ್ನಾಳ್

    ಇನ್ನು ಯತ್ನಾಳ್ ಅವರ ಉಚ್ಚಾಟನೆಯನ್ನು ನಾನು ಸಂಭ್ರಮಿಸಲ್ಲ. ಹಾಗೊಂದು ವೇಳೆ ನನಗೆ ಸಂಭ್ರಮಿಸುವ ಮನಸ್ಥಿತಿ ಇದೆ ಅಂತಾದರೆ ನಾನು ರಾಜ್ಯಾಧ್ಯಕ್ಷ ಆಗಲು ನಾಲಾಯಕ್ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸರ್ಕಾರ ಯಾವುದನ್ನೂ ಉಚಿತವಾಗಿ ನೀಡಬಾರದು, ಉಚಿತ ಎನ್ನುವುದೇ ಅಪಾಯಕಾರಿ: ಆರ್.ವಿ.ದೇಶಪಾಂಡೆ

    ಯತ್ನಾಳ್ ಉಚ್ಚಾಟನೆ ಮರುಪರಿಶೀಲನೆಗೆ ಕೆಲವರ ಆಗ್ರಹ ವಿಚಾರ ಬಗ್ಗೆ ಮಾತನಾಡಿ, ರಾಜ್ಯದ ಅಧ್ಯಕ್ಷ ಆಗಿ ಹೈಕಮಾಂಡ್ ತೀರ್ಮಾನವನ್ನು ಗೌರವಿಸುವುದು ಅಷ್ಟೇ ನನ್ನ ಕೆಲಸ ಅಂತ ಹೇಳುವ ಮೂಲಕ ಮರುಪರಿಶೀಲನೆಗೆ ಒತ್ತಾಯಿಸಲ್ಲ ಅಂತ ಪರೋಕ್ಷವಾಗಿ ಸುಳಿವು ಕೊಟ್ಟರು. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ನಾನು ರಾಜ್ಯದ ಸಿಎಂ ಆಗಲು ಹೊರಟಿಲ್ಲ. ನಾನು ಪಕ್ಷ ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ವರಿಷ್ಠರು ಕೊಟ್ಟಿರುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದರು. ಇನ್ನು ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ವಿಜಯೇಂದ್ರ, ಡಿಕೆಶಿ ಇದ್ದಾರೆಂಬ ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಪ್ರತಿಕ್ರಿಯೆ ಕೊಡಲಿಲ್ಲ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಏನೇ ಆದರೂ ಹೈಕಮಾಂಡ್ ತೀರ್ಮಾನವೆ ಅಂತಿಮ: ಹೆಚ್.ಸಿ ಮಹದೇವಪ್ಪ

  • ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ – ಯತ್ನಾಳ್ ಕಿಡಿ

    ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ – ಯತ್ನಾಳ್ ಕಿಡಿ

    -ಬಿಎಸ್‌ವೈ ಜೀ ಆಪ್ ಚುಪ್ ಬೈಟೊ, ಆಪ್ ಕೀ ಪೋತಾ, ಪೋತಿಕೊ ಸಂಬಾಲೊ ಎಂದು ವ್ಯಂಗ್ಯ

    ನವದೆಹಲಿ: ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ. ಅದ್ರೆ ಸಿದ್ದರಾಮಯ್ಯ, ವಿಜಯೇಂದ್ರ ಅಡ್ಜಸ್ಟ್ಮೆಂಟ್ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಎಂದು ಕಿಡಿಕಾರಿದ್ದಾರೆ.

    ದೆಹಲಿಯಲ್ಲಿ (Delhi) ಮಾತನಾಡಿದ ಅವರು, ನಿನ್ನೆ ನಮ್ಮ ಕೆಲವು ನಾಯಕರು ಕೆಲವರನ್ನು ಭೇಟಿಯಾಗಿದ್ದಾರೆ. ಇಂದು ಲಿಂಗಾಯತ ನಾಯಕರು ಹೈಕಮಾಂಡ್ ಭೇಟಿ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲ ಲಿಂಗಾಯತರು ಬಿಎಸ್‌ವೈ (BS Yediyurappa) ಪರವಾಗಿಲ್ಲ. ಅವರು ಆ ಗೌರವ ಉಳಿಸಿಕೊಂಡಿಲ್ಲ. ವಿಜಯೇಂದ್ರನನ್ನು ಅಧ್ಯಕ್ಷ ಮಾಡುವುದಕ್ಕೆ ನಮ್ಮ ವಿರೋಧವಿದೆ. ಇಬ್ಬರು, ಮೂವರು ಪೇಮೆಂಟ್ ಸ್ವಾಮಿಗಳು ಅವರ ಜೊತೆಗಿದ್ದಾರೆ ಅಷ್ಟೇ. ವಿಜಯೇಂದ್ರ (BY Vijayendra) ಬಿಎಸ್‌ವೈ ಅವರು ನಕಲಿ ಸಹಿ ಮಾಡಿದ್ದಾರೆ. ಆದರೆ ಈ ಕುರಿತು ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ಕಷ್ಟ. ಎಲ್ಲ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ವಿಜಯೇಂದ್ರ ಕರ್ಮಕಾಂಡ, ಹಲ್ಕಾ ಕೆಲಸ ಬಹಳ ಇದೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ನೆತನ್ಯಾಹು ಭೇಟಿ ಬೆನ್ನಲ್ಲೇ ಗಾಜಾದ ಮೇಲೆ ಕಣ್ಣಿಟ್ಟ ಅಮೆರಿಕ – ಟ್ರಂಪ್‌ ಕೊಟ್ಟ ಆಫರ್‌ ಏನು?

    ಬಹಳಷ್ಟು ಲಿಂಗಾಯತ ನಾಯಕರನ್ನು ಮುಗಿಸಿದ್ದಾರೆ. ಬಸವರಾಜ್ ಪಾಟೀಲ್ ಸೇಡಂ, ಬಿ.ವಿ ಶಿವಪ್ಪ, ಸಿದ್ದೇಶ್ವರ್, ಮಲ್ಲಿಕಾರ್ಜುನಯ್ಯ, ಜೊತೆಗೆ ನನ್ನನ್ನು ಸತತವಾಗಿ ಮುಗಿಸುವ ಪ್ರಯತ್ನ ಮಾಡಿದರು,. ರಮೇಶ್ ಜಾರಕಿಹೊಳಿ ರಸ್ತೆಗೆ ಬರಲು ಬಿಡಲ್ಲ ಅಂತಾರೆ. ಏನು ಗೂಂಡಾಗಿರಿ ಮಾಡ್ತಿದ್ದಾರಾ? ಮೂರು ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಂತ್ಯ ಮಾಡಬೇಕು. ಹಿಂದೂಗಳ ಹತ್ಯೆ ಆಯಿತು ಬಿಎಸ್‌ವೈ ಏನಾದರೂ ಮಾಡಿದ್ರಾ? ಶಿವಮೊಗ್ಗದಲ್ಲಿ ಔರಂಗಜೇಬನ ಫೋಟೋ ಹಾಕಿದ್ದಾಗ ಏನು ಮಾಡಿದ್ರು? ಜಮೀರ್ ಅಹಮದ್ ಖಾನ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ನಮ್ಮ ತಂಡದಲ್ಲಿ ಕುಟುಂಬ ರಾಜಕೀಯ ಇಲ್ಲ. ಸಿದ್ದೇಶ್ವರ್, ಲಿಂಬಾವಳಿ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರ ಮನೆಯವರು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ವಿಜಯೇಂದ್ರ ಶಾಸಕರಾಗಿದ್ದಾರೆ. ಅದು ಡಿಕೆಶಿ ಅವರ ಆಶೀರ್ವಾದದಿಂದ ಆಗಿದ್ದಾರೆ. ಮೊದಲ ಬಾರಿ ಶಾಸಕರಾಗಿ ರಾಜ್ಯಾಧ್ಯಕ್ಷರಾಗಿದ್ದಾರೆ. ರಮೇಶ್ ಜಾರಕಿಹೊಳಿ, ಸಿ.ಪಿ ಯೋಗೇಶ್ವರರಿಂದ ಸರ್ಕಾರ ಬಂತು, ಜಾರಕಿಹೊಳಿ ಪಕ್ಷ ಗಟ್ಟಿ ಮಾಡಲು ಬಂದವರು, ವಿಜಯೇಂದ್ರ ಮಾಡಿದ್ದೇನು? ನಕಲಿ ಸಹಿ ಮಾಡಿ ಭ್ರಷ್ಟಾಚಾರ ಮಾಡಿದರು. ಶ್ರೀರಾಮುಲು ನಿಮ್ಮ ಜೊತೆಗಿದ್ದೇನೆ ಎಂದು ಹೇಳಿದ್ದಾರೆ ಎಂದರು.

    ದುಡ್ಡಿನ ಅಹಂಕಾರದಿಂದ ಎಲ್ಲರನ್ನು ಖರೀದಿ ಮಾಡಬಹುದು ಅಂದುಕೊಂಡಿದ್ದಾರೆ. ಎಲ್ಲರನ್ನು ಎಲ್ಲ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ, ನಿನ್ನ ಬಳಿ ದುಡ್ಡು ಇರಬಹುದು, ಚಾರಿತ್ರ‍್ಯ ಇಲ್ಲ. ನಾನು ಅಧ್ಯಕ್ಷನಾಗಲು ಪ್ರಯತ್ನ ಮಾಡುತ್ತಿಲ್ಲ. ಯಾವುದೇ ಸಮುದಾಯದ ನಾಯಕರು ಅಧ್ಯಕ್ಷರಾಗಬಹುದು. ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೆ, ಅವರು ಹೇಳಿದ ತಕ್ಷಣ ನಿಮಗೆ ತಿಳಿಸುತ್ತೇವೆ. ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರ ಬದಲಾವಣೆ ಮಾಡಿದ್ದರೆ ಮುಂದೆ ಏನು ಮಾಡುತ್ತೇವೆ ಎನ್ನುವ ಕುರಿತು ಹೇಳುತ್ತೇನೆ ಎಂದು ಹೇಳಿದರು.

    ಯಡಿಯೂರಪ್ಪ ಹೊಸ ನಾಟಕ ಕಂಪನಿ ತೆಗೆದಿದ್ದಾರೆ. ಹುಷಾರಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಹುಷಾರಿಲ್ಲದವರು ನಿನ್ನೆ ಸಿದ್ದರಾಮಯ್ಯರನ್ನು ಹೇಗೆ ಭೇಟಿ ಮಾಡಿದರು? ಎಲ್ಲರನ್ನು ಕರೆಸಿಕೊಂಡು ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚು ಮೊಮ್ಮಕ್ಕಳಿದ್ದಾರೆ, ಆಟ ಆಡ್ತಾ ಕೂತರೆ ನೂರು ವರ್ಷ ಬದುಕಬಹುದು. ಯಡಿಯೂರಪ್ಪ ಜೀ ಆಪ್ ಚುಪ್ ಬೈಟೊ, ಆಪ್ ಕೀ ಪೋತಾ, ಪೋತಿಕೊ ಸಂಬಾಲೊ ಎಂದು ವ್ಯಂಗ್ಯವಾಡಿದರು.ಇದನ್ನೂ ಓದಿ: ಬೆಂಗಳೂರಿನಲ್ಲಿ ಯಶ್‌ ಜೊತೆ ನಯನತಾರಾ ‘ಟಾಕ್ಸಿಕ್‌’ ಶೂಟಿಂಗ್‌ ಶುರು

     

  • ವಿಜಯೇಂದ್ರ ಯಡಿಯೂರಪ್ಪಗೆ ಹೊರಗೆ ಪೂಜ್ಯ ತಂದೆ, ಮನೇಲಿ ಮುದಿಯಾ ಅಂತಾನೆ – ಯತ್ನಾಳ್

    ವಿಜಯೇಂದ್ರ ಯಡಿಯೂರಪ್ಪಗೆ ಹೊರಗೆ ಪೂಜ್ಯ ತಂದೆ, ಮನೇಲಿ ಮುದಿಯಾ ಅಂತಾನೆ – ಯತ್ನಾಳ್

    ವಿಜಯಪುರ: ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ, ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ ಎಂದು ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ (BY Vijayendra) ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ (BS Yediyurappa) ಜೈಲಿಗೆ ಹೋದದ್ದು, ಅವನಿಂದಲೇ ಹಾಳಾಗಿದ್ದು, ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾನೆ. ತಮ್ಮ ಸ್ವಾರ್ಥಕ್ಕಾಗಿ ಅನೇಕರನ್ನು ಮಣ್ಣಲ್ಲಿ ಇಟ್ಟಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ನಮ್ಮ ವಿರುದ್ಧ ಎರಡು ಹಂದಿಗಳು ಬಿಟ್ಟರೆ ಬೇರೆ ಯಾರೂ ಮಾತನಾಡಲ್ಲ. ಆ ಹಂದಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ವಿಜಯೇಂದ್ರ ಪರ ಹೊಗಳು ಭಟರು ಮಾತ್ರ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

    ನಾನು ಸದಾಕಾಲ ರಮೇಶ್ ಜಾರಕಿಹೊಳಿ ಪರವಾಗಿದ್ದೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ, ಅವನು ಕೂಡ ರಾಜೀನಾಮೆ ಕೊಡಬೇಕು. ಇವನಿಂದಲೇ ಪಾಪ ಸುನೀಲ್ ಕುಮಾರ್ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಅಂತಾ ಇದೆ. ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ. ನಾವು ಉತ್ತರ ಕರ್ನಾಟಕದ ಜನರು ಹೀಗೇ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾಗ ಕೂಡ ನಾನು ಒಬ್ಬನೆ ಹೋಗಿದ್ದೆ. ನಾವು ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಡಾಬಾ, ಬೀಡಾ ಅಂಗಡಿಗೆ ಗುದ್ದಿದ ಬಿಎಂಟಿಸಿ ಬಸ್!