Tag: ಬಿಎನ್‌ಎಸ್

  • 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್ – ಹೆಣ್ಣು ಮಕ್ಕಳಿಬ್ಬರ ಕಾಲೇಜು ಫೀಸ್‌ ಕಟ್ಟಲಾಗದೇ ಕೃತ್ಯಕ್ಕಿಳಿದಿದ್ದ ದಂಪತಿ

    2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್ – ಹೆಣ್ಣು ಮಕ್ಕಳಿಬ್ಬರ ಕಾಲೇಜು ಫೀಸ್‌ ಕಟ್ಟಲಾಗದೇ ಕೃತ್ಯಕ್ಕಿಳಿದಿದ್ದ ದಂಪತಿ

    – ಇತ್ತ ಆಸ್ಪತ್ರೆ ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿ

    ಹೈದರಾಬಾದ್: 2,000 ರೂ.ಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡ್ತಿದ್ದ ದಂಪತಿಯನ್ನು (Hyderabad Couple) ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಆದ್ರೆ ದಂಪತಿಯ ಬಗ್ಗೆ ಅಚ್ಚರಿ ಸಂಗತಿಯೊಂದು ಬೆಳಕಿಗೆ ಬಂದಿದೆ.

    ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ (Two Daughters). ಪತಿ ವೃತ್ತಿಯಲ್ಲಿ ಕ್ಯಾಬ್‌ ಡ್ರೈವರ್‌ ಆಗಿದ್ದರೆ, ಪತ್ನಿ ಗೃಹಿಣಿಯಾಗಿದ್ದಳು. ಮನೆಯಲ್ಲಿ ಆರ್ಥಿಕ ಸಮಸ್ಯೆಯಿದ್ದ ಕಾರಣ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪತಿ-ಪತ್ನಿ ಇಬ್ಬರು ಕೃತ್ಯಕ್ಕೆ ಇಳಿದಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್‌ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!

    ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೃತ್ಯದಲ್ಲಿ ಭಾಗಿ
    ಆರ್ಥಿಕ ಕೊರತೆಯಿಂದ ಮಕ್ಕಳಿಬ್ಬರ ಕಾಲೇಜು ಶುಲ್ಕ (college fees) ಪಾವತಿಸಿರಲಿಲ್ಲ. ಇಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಆಗಿದ್ದರು. ಒಬ್ಬ ಮಗಳು ಬಿ.ಟೆಕ್‌ ವ್ಯಾಸಂಗ ಮಾಡುತ್ತಿದ್ದರು, ಮತ್ತೊಬ್ಬಳು ಮಗಳು ಇತ್ತೀಚಿಗೆ ನಡೆದ intermediate ಪರೀಕ್ಷೆಯಲ್ಲಿ 470ಕ್ಕೆ 468 ಅಂಕ ಗಳಿಸಿ, ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸಿದ್ದಳು. ಈ ನಡುವೆ ಆಟೋ ಚಾಲಕನಾಗಿದ್ದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದ, ಚಿಕಿತ್ಸೆ ಪಡೆಯೋದಕ್ಕೂ ಹಣ ಇರಲಿಲ್ಲ. ಹೀಗಾಗಿ ಸುಲಭವಾಗಿ ಹಣಗಳಿಸಲು ತಮ್ಮ ಲೈಂಗಿಕ ಕೃತ್ಯವನ್ನು ಲೈವ್‌ಸ್ಟ್ರೀಮ್‌ ಮಾಡುವ ಕೆಲಸಕ್ಕೆ ಮುಂದಾದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌; ಟಿಎಂಸಿ ನಾಯಕ ಸೇರಿ ಮೂವರ ಬಂಧನ

    ಹಣ ಗಳಿಸುತ್ತಿದ್ದದ್ದು ಹೇಗೆ?
    ಪರಸ್ಪರ ಒಪ್ಪಿಗೆಯೊಂದಿಗೆ ಕೃತ್ಯಕ್ಕೆ ಇಳಿದಿದ್ದ ದಂಪತಿ ಲೈವ್ ಸ್ಟ್ರೀಮ್‌ಗೆ 2,000 ರೂ. ಪಡೆಯುತ್ತಿದ್ದರು ಮತ್ತು ರೆಕಾರ್ಡ್ ಮಾಡಿದ ಕ್ಲಿಪ್‌ ಅನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದರು. ಹೆಚ್ಚಾಗಿ ಯುವಕರಿಗೆ ಈ ವಿಡಿಯೋಗಳನ್ನು ಸೇಲ್‌ ಮಾಡ್ತಿದ್ದರು. ಇದನ್ನೂ ಓದಿ: ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

    ಸಾಂದರ್ಭಿಕ ಚಿತ್ರ

    ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಅಂಬರ್‌ಪೇಟೆಯ ಮಲ್ಲಿಕಾರ್ಜುನ ನಗರದಲ್ಲಿರುವ ತಮ್ಮ ಮನೆಯಲ್ಲಿ ದಂಪತಿಯನ್ನ ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ದಂಪತಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಮಕ್ಕಳಿಬ್ಬರಿಗೂ ಪೋಷಕರ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್

    ದಂಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • 2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್‌ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!

    2,000 ರೂ.ಗೆ ಸೆಕ್ಸ್ ಲೈವ್‌ಸ್ಟ್ರೀಮ್‌ ಮಾಡಿದ ಹೈದರಾಬಾದ್ ಜೋಡಿ ಅರೆಸ್ಟ್!

    – ರೆಕಾರ್ಡ್‌ ವಿಡಿಯೋವನ್ನ 500 ರೂ.ಗೆ ಸೇಲ್‌ ಮಾಡ್ತಿದ್ದ ದಂಪತಿ

    ಹೈದರಾಬಾದ್‌: 2,000 ರೂ.ಗೆ ಸೆಕ್ಸ್‌ ಲೈವ್‌ ಸ್ಟ್ರೀಮ್‌ (Live Stream) ಮಾಡ್ತಿದ್ದ ಹೈದರಾಬಾದ್‌ ಜೋಡಿಯನ್ನು (Hyderabad couple) ಪೊಲೀಸರು ಬಂಧಿಸಿದ್ದಾರೆ.

    ಸೋಷಿಯಲ್‌ ಮೀಡಿಯಾ (Social Media) ಅಪ್ಲಿಕೇಶನ್‌ನಲ್ಲಿ‌ ಸೆಕ್ಸ್‌ (ಲೈಂಗಿಕ ಕ್ರಿಯೆ) ಕೃತ್ಯವನ್ನ ಲೈವ್‌ ಸ್ಟ್ರೀಮ್‌ ಮಾಡಿದ್ದಕ್ಕಾಗಿ ಹೈದರಾಬಾದ್‌ ಪೊಲೀಸರು 41 ವರ್ಷದ ಪತಿ, 37 ವರ್ಷದ ಪತ್ನಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹಾಡಹಗಲೇ ಹಣ ಎಣಿಸುವಾಗ ಕುತ್ತಿಗೆಗೆ ಚಾಕು ಇಟ್ಟು 2 ಕೋಟಿ ರಾಬರಿ

    ಜೂನ್ 17 ರಂದು ಮಧ್ಯಾಹ್ನ ಅವರ ಮನೆಯ ಟೆರೇಸ್‌ ಮೇಲಿದ್ದಾಗ ಇಬ್ಬರನ್ನೂ ಬಂಧಿಸಲಾಗಿದ್ದು, ಹೈ ಡೆಫಿನಿಷನ್ ಕ್ಯಾಮೆರಾ ಸೇರಿ ಹಲವು ಡಿಜಿಟಲ್‌ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರು | ಲವ್, ಸೆಕ್ಸ್, ದೋಖಾ ಆರೋಪ – ಕೇಸ್ ದಾಖಲಾಗ್ತಿದ್ದಂತೆ ಆರೋಪಿ ಯುವಕ ಎಸ್ಕೇಪ್

    ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಕೃತ್ಯ
    ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿದ್ದ (Cab Driver) ಪತಿ ಸುಲಭವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದ. ಇದಕ್ಕಾಗಿ ಇಬ್ಬರೂ ಒಪ್ಪಿಕೊಂಡು ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಲೈವ್‌ ಸ್ಟ್ರೀಮ್‌ಗೆ ಯುವಕರು, ವೃದ್ಧದಿಂದ 2,000 ರೂ. ಪಡೆಯುತ್ತಿದ್ದರು ಮತ್ತು ರೆಕಾರ್ಡ್‌ ಮಾಡಿದ‌ ಕ್ಲಿಪ್‌ ಅನ್ನು 500 ರೂ.ಗೆ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: 3ನೇ ಪತ್ನಿಯ ಹತ್ಯೆಗೈದು ಗೋಣಿ ಚೀಲದಲ್ಲಿ ಪ್ಯಾಕ್ – ಲಗೇಜ್ ಎಂದು ಸರ್ಕಾರಿ ಬಸ್ಸಲ್ಲಿ ಕಳುಹಿಸಿದ್ದವ 24 ವರ್ಷಗಳ ಬಳಿಕ ಅರೆಸ್ಟ್

    ಸಾಂದರ್ಭಿಕ ಚಿತ್ರ

    ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ ಇಬ್ಬರು ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿದ್ದಾರೆ. ಮಕ್ಕಳಿಬ್ಬರಿಗೂ ಪೋಷಕರ ಈ ಕೃತ್ಯ ತಿಳಿದಿರಲಿಲ್ಲ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದಲೇ ಈ ಕೃತ್ಯಕ್ಕಿಳಿದಿದ್ದ ದಂಪತಿ ಗುರುತು ಮರೆಮಾಚಲು ಮುಖಕ್ಕೆ ಮಾಸ್ಕ್‌ ಧರಿಸಿಕೊಳ್ಳುತ್ತಿದ್ದರು. ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸುಧಾರಿಸಲು 4 ಹಂತದ ಯೋಜನೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್

    ದಂಪತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 (ಎ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್

    ಬೆಂಗಳೂರು ಕಟ್ಟಡ ಕುಸಿತ- ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಮಾಲೀಕ ಅರೆಸ್ಟ್

    ಬೆಂಗಳೂರು: ಬಾಬುಸಾಬ್‌ಪಾಳ್ಯ (Babusapalya) ನಿರ್ಮಾಣ ಹಂತದ ಕಟ್ಟಡ ಬಿದ್ದ ಪ್ರಕರಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕಟ್ಟಡ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಭುವನ್ ರೆಡ್ಡಿ ಬಂಧಿತ ವ್ಯಕ್ತಿ. ಅವಘಡ ಸಂಭವಿಸಿದ ಕಟ್ಟಡ ಭುವನ್ ರೆಡ್ಡಿ ಹೆಸರಿನಲ್ಲಿತ್ತು. ಈತ ಮೊದಲನೇ ಆರೋಪಿ ಮುನಿರಾಜ ರೆಡ್ಡಿಯ ಮಗ. ಹೆಣ್ಣೂರು ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ. ಕಾಂಟ್ರಾಕ್ಟರ್ ಮುನಿಯಪ್ಪನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನಿಯಪ್ಪ 4ನೇ ಮಹಡಿವರೆಗೆ ಕಟ್ಟಡ ನಿರ್ಮಾಣ ಮಾಡಿದ್ದ. ಹೀಗಾಗಿ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಿಎನ್‌ಎಸ್ (BNS), ಬಿಬಿಎಂಪಿ(BBMP) ಆರ್‌ಇಆರ್‌ಎ (RERA) ಆ್ಯಕ್ಟ್ ಹಾಗೂ ರೇರಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಇವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ

    ಈಗ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಆರಕ್ಕೇರಿದೆ. ಮೃತ ತ್ರಿಪಾಲ್‌ನ ಮೃತದೇಹವನ್ನ ಅವಶೇಷಗಳಿಂದ ಸಿಬ್ಬಂಗಳು ಹೊರತೆಗೆದಿದ್ದಾರೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ

    ಬಿಎನ್ ಎಸ್ 105, 125(A) 125(B), 270,3(5) ಬಿಬಿಎಂಪಿ ಆ್ಯಕ್ಟ್ 326, 327,328 RERA (u/s3) ಅಡ್ಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ಯಾವ ಆ್ಯಕ್ಟ್ ಏನು ಹೇಳುತ್ತೆ?
    ಬಿಎನ್‌ಎಸ್ 105 – ಮಾನವ ನರಹತ್ಯೆ
    ಬಿಎನ್‌ಎಸ್ 125(A) – ಇತರರ ಪ್ರಾಣಕ್ಕೆ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟುಮಾಡುವುದು
    ಬಿಎನ್‌ಎಸ್ 125(B)-ನಿರ್ಲಕ್ಷ್ಯದಿಂದ ತೀವ್ರವಾಗಿ ಗಾಯ ಉಂಟುಮಾಡುವುದು
    ಬಿಎನ್‌ಎಸ್ 270- ಸಾರ್ವಜನಿಕ ಉಪದ್ರವ,ಇತರರಿಗೆ ಕಿರಿಕಿರಿ ಉಂಟು ಮಾಡುವುದು
    3(5) – ಅವಘಡ ಮುನ್ಸೂಚನೆ ಇದ್ದರು ಕೂಡಾ ನಿರ್ಲಕ್ಷ್ಯ ವಹಿಸುವುದು
    ಬಿಬಿಎಂಪಿ ಆ್ಯಕ್ಟ್ 326- ಬಿಬಿಎಂಪಿ ಕಾಯ್ದೆ ಉಲ್ಲಂಘನೆ ಬಗ್ಗೆ ಒಂದು ವರ್ಷ ಜೈಲು, 2 ಲಕ್ಷ ದಂಡ
    ಬಿಬಿಎಂಪಿ ಆ್ಯಕ್ಟ್ 327- ಬಿಬಿಎಂಪಿ ನಿಯಮಗಳ ಬಗ್ಗೆ 6 ವರ್ಷ ಜೈಲು,2 ಲಕ್ಷ ದಂಡ
    ಬಿಬಿಎಂಪಿ ಆ್ಯಕ್ಟ್ 328 – ನಿಯಮ ಉಲ್ಲಂಘನೆ ದಂಡ
    RERA (u/s 3)  ಆ್ಯಕ್ಟ್ – ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸದೆ ಇರುವುದು. ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ

  • ಹಾಸನದಲ್ಲಿ ಬಿಎನ್‍ಎಸ್ ಅಡಿ ದಾಖಲಾಯ್ತು ಮೊದಲ ಕೇಸ್

    ಹಾಸನದಲ್ಲಿ ಬಿಎನ್‍ಎಸ್ ಅಡಿ ದಾಖಲಾಯ್ತು ಮೊದಲ ಕೇಸ್

    ಹಾಸನ: ಸಹಜವಾಗಿಯೇ ರಾಜ್ಯದಲ್ಲಿಯೂ 3 ಹೊಸ ಕಾನೂನುಗಳು ಜಾರಿ ಆಗಿವೆ. ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಠಾಣೆಗಳಲ್ಲಿಯೂ ಬಿಎನ್‍ಎಸ್ ಸೆಕ್ಷನ್‍ಗಳ ಅಡಿಯೇ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಈ ಬೆನ್ನಲ್ಲೇ ಹಾಸನ ಗ್ರಾಮೀಣ ಠಾಣೆಯಲ್ಲಿ ಮೊದಲ ಎಫ್‍ಐಆರ್ ದಾಖಲಾಗಿದೆ.

    ವೈದ್ಯ ಶಂಕರೇಗೌಡ ನೀಡಿದ ದೂರಿನ ಮೇಲೆ ಕಾರು ಚಾಲಕ ಸಾಗರ್ ವಿರುದ್ಧ ಅತಿವೇಗ, ನಿರ್ಲಕ್ಷ್ಯದ ಚಾಲನೆ ಆರೋಪದ ಮೇಲೆ ಬಿಎನ್‍ಎಸ್ ಸೆಕ್ಷನ್ 281,106ರ ಅಡಿ ಕೇಸ್ ದಾಖಲಾಗಿದೆ. ಹಾಸನದ ಸೀಗೆಗೇಟ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ವೈದ್ಯ ಶಂಕರೇಗೌಡರ ಅತ್ತೆ ಮೃತಪಟ್ಟಿದ್ರು. ತೀರ್ಥಯಾತ್ರೆ ಮುಗಿಸಿ ವಾಪಸ್ ಬರುವಾಗ ಈ ದುರಂತ ಸಂಭವಿಸಿತ್ತು. ಬಿಎನ್‍ಎಸ್ ಅಡಿ ರಾಜ್ಯದಲ್ಲಿಂದು 63 ಕೇಸ್ ದಾಖಲಾಗಿವೆ.

    ಏನಿದು ಪ್ರಕರಣ..?; ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಕಾರು ಪಲ್ಟಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ ತಾಲೂಕಿನ ಸೀಗೆ ಗ್ರಾಮದ ಬಳಿ ನಡೆದಿದೆ. ಇಂದುಮತಿ (67) ಮೃತ ದುರ್ದೈವಿ. ಅಯೋಧ್ಯೆಗೆ ತೆರಳಿ ವಾಪಸ್ಸಾಗುತ್ತಿದ್ದು ಇಂದುಮತಿ ಪತಿ ಯೋಗೇಶ್ ಎಂಬವರು ಬೆಂಗಳೂರು ಏರ್‌ಪೋರ್ಟ್‍ನಿಂದ ಕಾರಿನಲ್ಲಿ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದರು. ಇದನ್ನೂ ಓದಿ: ಹೊಸ ಕಾನೂನಿನಡಿ ಮೊದಲ ದಿನವೇ ರಾಜ್ಯಾದ್ಯಂತ 63 FIR ದಾಖಲು

    KA-13-P-8779 ನಂಬರ್ ನ ವೆನ್ಯೂ ಕಾರಿನಲ್ಲಿ ಹಳೇಬೀಡಿನಲ್ಲಿರುವ ಮನೆಗೆ ತೆರಳುವಾಗ ಸೀಗೆ ಗ್ರಾಮದ ಬಳಿ ಕಾರು ಪಲ್ಟಿಯಾಗಿ ದುರಂತ ಸಂಭವಿಸಿದೆ. ಪತಿ ಯೋಗೀಶ್ ಹಾಗೂ ಕಾರುಚಾಲಕ ಕಿರಣ್‍ಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಾಸನ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

    ಭಾರತೀಯ ನ್ಯಾಯ ಸಂಹಿತೆಯಡಿ ದೆಹಲಿಯಲ್ಲಿ ಮೊದಲ FIR ದಾಖಲು

    ನವದೆಹಲಿ: ಕೇಂದ್ರ ಸರ್ಕಾರ ಇಂದಿನಿಂದ ದೇಶದಲ್ಲಿ ನೂತನ ಕಾನೂನನ್ನು ಜಾರಿ ಮಾಡಿದ್ದು, ಭಾರತೀಯ ನ್ಯಾಯ ಸಂಹಿತೆ 2023ರ (Bharatiya Nyaya Sanhita) ಅಡಿ ಮೊದಲ ಎಫ್‌ಐಆರ್ (FIR) ದಾಖಲಾಗಿದೆ.

    ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ (BNS) ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ನಿಯಮ ಬಾಹಿರವಾಗಿ ದೆಹಲಿ ರೈಲ್ವೇ ಮೇಲ್ಸೇತುವೆಯಲ್ಲಿ ವ್ಯಾಪಾರ ನಡೆಸಿದ್ದಕ್ಕಾಗಿ ಬೀದಿಬದಿ ವ್ಯಾಪಾರಿಯೊಬ್ಬನ ಮೇಲೆ ಬಿಎನ್‌ಎಸ್ ಸೆಕ್ಷನ್ 285ರ ಅಡಿ ಪ್ರಕರಣ ದಾಖಲಿಸಲಾಗಿದೆ. ಇನ್ನುಮುಂದೆ ಎಲ್ಲಾ ಎಫ್‌ಐಆರ್‌ಗಳನ್ನು ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಲಾಗುತ್ತದೆ. ಇದನ್ನೂ ಓದಿ: ಬಳ್ಳಾರಿ ಗ್ರಾಹಕರ ಜೇಬಿಗೆ ಕತ್ತರಿ – KMFನಿಂದ ಒಂದು ದರ, ಮಾರಾಟಕ್ಕೆ ಮತ್ತೊಂದು ದರ

    ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ. ಇದನ್ನೂ ಓದಿ: ಬ್ರಿಟಿಷರ ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಗುಡ್‌ಬೈ – ಇಂದಿನಿಂದ 3 ದೇಶಿ ಕಾನೂನು ಜಾರಿ

    ಜುಲೈ 1 ರ ಮೊದಲು ದಾಖಲಾಗಿರುವ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲಾಗುತ್ತದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರೀ ಮಳೆಗೆ ಕುಸಿದ ರಸ್ತೆ – ಮೋದಿ ತವರಲ್ಲಿ ಇದೆಂಥಾ ಘಟನೆ ಅಂತ ಕಾಂಗ್ರೆಸ್‌ ತೀವ್ರ ತರಾಟೆ