Tag: ಬಿಎಂಡಬ್ಲ್ಯೂ ಕಾರ್

  • ರೈಲಿಗೆ ಸಿಕ್ಕಿ ಅಪ್ಪಚ್ಚಿಯಾದ ಬಿಎಂಡಬ್ಲ್ಯೂ ಕಾರ್

    ರೈಲಿಗೆ ಸಿಕ್ಕಿ ಅಪ್ಪಚ್ಚಿಯಾದ ಬಿಎಂಡಬ್ಲ್ಯೂ ಕಾರ್

    – ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಡಿಯೋ
    – ಕಾರ್ ಅಪ್ಪಚ್ಚಿಯಾದ್ರೂ ಬದುಕುಳಿದ್ರು

    ಕ್ಯಾಲಿಫೋರ್ನಿಯಾ: ರೈಲಿಗೆ ಸಿಲುಕಿ ಬಿಎಂಡಬ್ಲ್ಯೂ ಕಾರ್ ಅಪ್ಪಚ್ಚಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಲಾಸ್ ಏಂಜೆಲ್ಸ್ ಪೊಲೀಸ್ ಇಲಾಖೆ ತನ್ನ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ರೈಲ್ವೇ ಗೇಟ್ ಕ್ರಾಸ್ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಹೇಳಿದೆ.

    ದಕ್ಷಿಣ ಲಾಸ್ ಏಂಜೆಲ್ಸ್ ನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಅಪಘಾತ ಸಂಭವಿಸಿದೆ. ಬಲಭಾಗದಿಂದ ಬಂದ ಬಿಎಂಡಬ್ಲ್ಯೂ ಕಾರ್, ರೈಲ್ವೇ ಗೇಟ್ ಪ್ರಯತ್ನಿಸಿದೆ. ಕಾರ್ ರೈಲ್ವೇ ಟ್ರ್ಯಾಕ್ ಮೇಲೆ ಬರುತ್ತಿದ್ದಂತೆ ರೈಲು ಗುದ್ದಿಕೊಂಡು ಮುಂದೆ ಹೋಗಿದೆ. ರೈಲು ಡಿಕ್ಕಿ ಹೊಡೆದ ತೀವ್ರತೆಗೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ.

    ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಪೊಲೀಸರು, ಬಿಎಂಡಬ್ಲ್ಯೂ ಕಾರ್ ಗೆ ರೈಲು ಡಿಕ್ಕಿಯಾಗಿದೆ. ಕಾರ್ ಅಪ್ಪಚ್ಚಿಯಾದ್ರೂ ಚಾಲಯ ಅದೃಷ್ಟಾವಶಾತ್ ಪಾರಾಗಿದ್ದಾನೆ. ಕಾರ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾತದಿಂದ ಪಾರಾಗಿದ್ದಾನೆ. ರೈಲ್ವೇ ಗೇಟ್ ಕ್ರಾಸ್ ಮಾಡುವಾಗ ಟ್ರಾಫಿಕ್ ಸಿಗ್ನಲ್ ಗಮನಿಸಬೇಕು ಎಂದು ತಿಳಿಸಿದ್ದಾರೆ.