Tag: ಬಿಎಂಡಬ್ಲ್ಯೂ

  • ಸರಣಿ ಅಪಘಾತ – ಬಿಎಂಡಬ್ಲ್ಯೂ ಸೇರಿ 7 ಕಾರುಗಳಿಗೆ ಡಿಕ್ಕಿ ಹೊಡೆದ ಟಿಪ್ಪರ್

    ಸರಣಿ ಅಪಘಾತ – ಬಿಎಂಡಬ್ಲ್ಯೂ ಸೇರಿ 7 ಕಾರುಗಳಿಗೆ ಡಿಕ್ಕಿ ಹೊಡೆದ ಟಿಪ್ಪರ್

    ಚಿಕ್ಕಬಳ್ಳಾಪುರ: ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಬಳಿ ಟಿಪ್ಪರ್ ಲಾರಿ 7 ಕಾರುಗಳಿಗೆ (Cars) ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ.

    ಘಟನೆಯಲ್ಲಿ ಬಿಎಂಡಬ್ಲ್ಯೂ, ಸ್ಯಾಂಟ್ರೋ, ಎಟಿಯೋಸ್ ಲಿವಾ, ಸ್ವಿಫ್ಟ್, ಇಂಡಿಕಾ, ಥಾರ್ ಕಾರುಗಳಿಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆಗೆ ಬರ್ತಿದ್ದ ಟಿಪ್ಪರ್ ಲಾರಿ ಸಿಗ್ನಲ್‍ನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಒಂದಕ್ಕೊಂದು ಕಾರುಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿಯಾಗಿ 7 ಕಾರುಗಳ ಮುಂಭಾಗ ಹಿಂಭಾಗ ಜಖಂಗೊಂಡಿವೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 32 ಮಂದಿಗೆ ಗಾಯ

    ದೇವನಹಳ್ಳಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಬಳಿಕ ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಹೆದ್ದಾರಿಯಲ್ಲಿ ವಾಹನಗಳು ಸಿಲುಕಿ ಹಾಕಿಕೊಂಡು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್ ಫ್ರೆಂಡ್ ಆದಿಲ್ ಕಡೆಯಿಂದ ರಾಖಿ ಸಾವಂತ್‌ಗೆ ಭರ್ಜರಿ ಗಿಫ್ಟ್

    ಬಾಯ್ ಫ್ರೆಂಡ್ ಆದಿಲ್ ಕಡೆಯಿಂದ ರಾಖಿ ಸಾವಂತ್‌ಗೆ ಭರ್ಜರಿ ಗಿಫ್ಟ್

    ಬಾಲಿವುಡ್‌ನ ವಿವಾದಗಳ ನಟಿ ರಾಖಿ ಸಾವಂತ್ ಇದೀಗ ತನ್ನ ಬಾಯ್ ಫ್ರೆಂಡ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಾಖಿಯ ಹೊಸ ಬಾಯ್ ಫ್ರೆಂಡ್ ಕೆಲ ದಿನಗಳ ಹಿಂದೆ ಬಿಎಂಡಬ್ಲ್ಯೂ ಕಾರ್ ಕೊಟ್ಟು ಸಖತ್ ಸುದ್ದಿಯಾಗಿದ್ದರು. ಈಗ ಮತ್ತೊಮ್ಮೆ ನಟಿ ರಾಖಿಗೆ ದುಬಾರಿ ಗಿಫ್ಟ್ ಕೊಡುವುದರ ಮೂಲಕ ಸುದ್ದಿಯಾಗಿದ್ದಾರೆ.

    ಇತ್ತೀಚೆಗಷ್ಟೇ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ದುರಾನಿ ಜತೆ ಪ್ರೀತಿಯಲ್ಲಿದ್ದು, ಇಬ್ಬರ ಡೇಟಿಂಗ್ ವಿಚಾರಗಳ ಬಗ್ಗೆ ಸ್ವತಃ ರಾಖಿನೇ ಹೇಳಿಕೊಂಡಿದ್ದರು. ಮೈಸೂರು ಮೂಲದ ಆದಿಲ್ ಮುಂಬೈನಲ್ಲಿ ನೆಲೆಸಿದ್ದು, ಕಾರಿನ ಬ್ಯುಸಿನೆಸ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇನ್ನು ಈ ಹಿಂದೆ ಬಿಎಂಡಬ್ಲ್ಯೂ ಕಾರ್ ಅನ್ನು ಪ್ರೇಯಸಿ ರಾಖಿಗೆ ಉದ್ಯಮಿ ಆದಿಲ್ ಪ್ರಪೋಸ್ ಮಾಡಿ ಗಿಫ್ಟ್‌ ಮಾಡಿದ್ದರು. ಈ ಬೆನ್ನಲ್ಲೇ ಮತ್ತೊಂದು ದುಬಾರಿ ಗಿಫ್ಟ್ ಅನ್ನು ರಾಖಿಗೆ ಕೊಟ್ಟಿದ್ದಾರೆ. ದುಬೈನಲ್ಲಿ ರಾಖಿಗೆ ದುಬಾರಿ ಮನೆ ಖರೀದಿಸಿ ಗಿಫ್ಟ್ ಮಾಡಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ರಾಖಿ ಹೇಳಿಕೊಂಡಿದ್ದಾರೆ. ಆದಿಲ್ ಪ್ರೇಯಸಿ ರಾಖಿ ಸಾವಂತ್‌ಗೆ ಮನೆ ಗಿಫ್ಟ್ ಮಾಡಿದ್ದಾರಂತೆ. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆದಿಲ್ ನನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾರೆ. ಈ ಮೊದಲು ನನಗೆ ಬಿಎಂಡ್ಲ್ಯೂ ಉಡುಗೊರೆ ನೀಡಿದ್ದರು. ಅವನ ಪ್ರೀತಿಯೇ ನನ್ನ ಸಂಪತ್ತು. ಅವನ ಪ್ರೀತಿ ನಿಜ. ಅವನು ನಿಷ್ಠಾವಂತ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಸಹಸ್ರಲಿಂಗ ಸನ್ನಿಧಾನಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್

    ಇನ್ನು ಆದಿಲ್ ತನ್ನ ಪ್ರೇಯಸಿ ರಾಖಿ ಸಾವಂತ್ ಬಗ್ಗೆ ಮಾತನಾಡಿ, ಹೆಚ್ಚು ಏನು ಹೇಳುವುದಿಲ್ಲ. ಕಡಿಮೆ ಗ್ಲಾಮರಸ್ ಮತ್ತು ಹೆಚ್ಚು ಕವರ್ ಆಗಿರುವ ಡ್ರೆಸ್ ಹಾಕಬೇಕು ಎಂದು ಭಾವಿಸಬೇಕು ಎಂದು ಹೇಳುತ್ತೀನಿ ಎಂದು ಹೇಳಿದ್ದಾರೆ. ರಾಖಿ ಸಾವಂತ್‌ಗಿಂತ 6 ವರ್ಷದ ಚಿಕ್ಕವರಾದ ಆದಿಲ್ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ರಾಖಿ ಮತ್ತು ರಾಖಿಯ ಬಾಯ್ ಫ್ರೇಂಡ್ ವಿಚಾರ ಬಿಟೌನ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ.

  • ಚಾಲಕ ಮೂತ್ರವಿಸರ್ಜನೆ ಮಾಡಲೆಂದು ನಿಲ್ಲಿಸಿದ ಬಿಎಂಡಬ್ಲ್ಯೂಕಾರನ್ನೇ ಹೊತ್ತೊಯ್ದರು

    ಚಾಲಕ ಮೂತ್ರವಿಸರ್ಜನೆ ಮಾಡಲೆಂದು ನಿಲ್ಲಿಸಿದ ಬಿಎಂಡಬ್ಲ್ಯೂಕಾರನ್ನೇ ಹೊತ್ತೊಯ್ದರು

    – ಇನ್ನೂ 40 ಲಕ್ಷ ಲೋನ್ ಬಾಕಿ ಇತ್ತು

    ನವದೆಹಲಿ: ಮೂತ್ರವಿಸರ್ಜನೆ ಮಾಡಲೆಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ದುಬಾರಿ ಬೆಲೆಯ ಕಾರನ್ನೇ ಖದೀಮರು ಹೊತ್ತೊಯ್ದ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದೆ. ರಿಷಬ್ ಅರೋರ ಎಂಬ ವ್ಯಾಪಾರಿ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ತನ್ನ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದನು. ಈ ಸಂದರ್ಭದಲ್ಲಿ ಆತನಿಗೆ ದಾರಿ ಮಧ್ಯೆ ಸೂಸು ಬಂದಿದೆ. ಹೀಗಾಗಿ ಕೀ ಬಿಟ್ಟು ತನ್ನ ಕಾರನ್ನು ಸೈಡಿಗೆ ಹಾಕಿ ಹೋಗಿದ್ದಾನೆ.

    ದುಬಾರಿ ಕಾರನ್ನು ದರೋಡೆ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಲು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಕೇಂದ್ರ ನೊಯ್ಡಾದ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದ್ದಾರೆ.

    ಅರೋರಾ ದಾರಿ ಮಧ್ಯೆ ಕಾರು ನಿಲ್ಲಿಸಿ ಮೂತ್ರವಿಸರ್ಜನೆ ಮಾಡಲು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಖದೀಮರು ಕಾರನ್ನು ಎಗರಿಸಿದ್ದಾರೆ. ಅಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಚಂದರ್ ವಿವರಿಸಿದ್ದಾರೆ.

    ಇದೊಂದು ಯೋಜಿತ ಕೃತ್ಯವಾಗಿದೆ. ಕಾರು ಮಾಲೀಕನಿಗೆ ಗೊತ್ತಿರುವವರೇ ಕಳ್ಳತನ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುವುದಾಗಿ ಡಿಸಿಪಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಪ್ರಕರಣ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕಾರನ್ನು ಆದಷ್ಟು ಬೇಗ ಚಾಲಕನಿಗೆ ಒಪ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಕುಡಿದು ಚಾಲನೆ ಮಾಡಿದ್ದಕ್ಕಾಗಿ ಚಾಲಕನ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ತಿಳಿಸಿದ್ದಾರೆ.

    ಬೈಕಿನಲ್ಲಿ ಬಂದ ಖದೀಮರು ಈ ಕೃತ್ಯ ಎಸಗಿದ್ದಾರೆ. ಅಲ್ಲದೆ ಅವರು ಹಿಂಬದಿಯಿಂದ ಬಂದು ಗನ್ ಇಟ್ಟು ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಅರೋರಾ ಆರೋಪಿಸಿದ್ದಾನೆ.

    ಈ ದುಬಾರಿ ಕಾರು ರಿಷಬ್ ಬಾವನಾದಾಗಿದ್ದು, ಲೋನ್ ಮಾಡಿ ಕಾರು ಖರೀದಿಸಿದ್ದರು. ಅಲ್ಲದೆ ಕಾರಿನ ಇನ್ನೂ 40 ಲಕ್ಷ ಲೋನ್ ಕಟ್ಟಲು ಬಾಕಿಯಿತ್ತು.

  • ಆಸೆ ಹುಟ್ಟಿಸಿ ಕಾರು ಖರೀದಿಸದ ತಂದೆ – ಜೈಲು ಸೇರಿದ ಮಗ

    ಆಸೆ ಹುಟ್ಟಿಸಿ ಕಾರು ಖರೀದಿಸದ ತಂದೆ – ಜೈಲು ಸೇರಿದ ಮಗ

    ಬೀಜಿಂಗ್: ತಂದೆ ಕಾರ್ ಖರೀದಿಸದ ಹಿನ್ನೆಲೆಯಲ್ಲಿ ಪುತ್ರ ಜೈಲು ಸೇರಿರುವ ವಿಚಿತ್ರ ಘಟನೆ ಚೀನಾದ ಜಿಯಾಂಗ್ ನಗರದಲ್ಲಿ ನಡೆದಿದೆ.

    ಜಿಯಾಂಗ್ ನಗರದ ಬಿಎಂಡಬ್ಲ್ಯೂ ಕಾರ್ ಶೋ ರೂಂನಲ್ಲಿ 22 ವರ್ಷದ ಯುವಕನೊಬ್ಬ ಕಾರನ್ನು ಗೀಚಿದ್ದಾನೆ. ಆದರೆ ತಂದೆ ಕಾರು ಖರೀದಿಸದೆ ಇರುವುದರಿಂದ ಶೋ ರೂಂ ವ್ಯವಸ್ಥಾಪಕರ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಯುವಕನ ಹೆಸರು ಜಿ ಮೌಬಿಂಗ್ ಎಂದು ಜಿಯಾಂಗ್ ನಗರದ ಪೊಲೀಸರು ತಿಳಿಸಿದ್ದಾರೆ. ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಗನಿಗೆ ಐಷಾರಾಮಿ ಕಾರು ಸಿಗುತ್ತದೆ ಎಂದು ತಂದೆ ಭರವಸೆ ನೀಡಿದ್ದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಒಂದು ವರ್ಷ ಕಳೆದರೂ ತಂದೆ ಕಾರು ಖರೀದಿಸಲಿಲ್ಲ. ಇದರ ಕೋಪಗೊಂಡ ಯುವಕ ಬಿಎಂಡಬ್ಲ್ಯೂ ಕಾರ್ ಶೋ ರೂಂಗೆ ಬಂದು ಕಾರಿನ ಮೇಲೆ ಗೀಚಿದ್ದಾನೆ.

    ತಾನು ಗೀಚಿದ ಐಷಾರಾಮಿ ಕಾರು ತುಂಬಾ ಇಷ್ಟವಾಗಿದ್ದು, ಅದನ್ನು ಖರೀದಿಸಲು ಸ್ವಲ್ಪ ಹಣವನ್ನು ಕೂಡಿಸಿ ಇಟ್ಟಿದ್ದಾಗಿ ಜಿ ಮೌಬಿಂಗ್‍ಗೆ ಹೇಳಿಕೊಂಡಿದ್ದಾನೆ. ಘಟನೆಯ ದೃಶ್ಯವು ಶೋ ರೂಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋ ರೂಂ ಮ್ಯಾನೇಜರ್ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಆದರೆ ತಂದೆ ಯುವಕನಿಗೆ ಕಾರು ಖರೀದಿಸಿದ್ದಾರೋ ಇಲ್ಲವೋ ಎಂಬುದು ತಿಳಿದು ಬಂದಿಲ್ಲ.

  • ತಂದೆಯನ್ನು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ!

    ತಂದೆಯನ್ನು ಹೊಚ್ಚ ಹೊಸ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ!

    ನೈಜೀರಿಯಾ: ಶವಪೆಟ್ಟಿಗೆ ಬದಲಾಗಿ ಹೊಚ್ಚ ಹೊಸ 60 ಲಕ್ಷ ರೂ. ಬಿಎಂಡಬ್ಲ್ಯೂ ಕಾರಿನಲ್ಲಿ ತನ್ನ ತಂದೆಯ ಸಮಾಧಿ ಮಾಡುವ ಮೂಲಕ ನೈಜೀರಿಯಾದ ವ್ಯಕ್ತಿಯೊಬ್ಬ ಗೌರವವನ್ನು ತೋರಿದ್ದಾರೆ.

    ಅಜುಬುಕ್ ಎಂಬುವರು ತನ್ನ ತಂದೆಗೆ ಹೊಸ ಬಿಎಂಡಬ್ಲ್ಯೂ ಕಾರನ್ನು ತೆಗೆದುಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು ಆದರೆ ಸಾಧ್ಯ ಆಗಿರಲಿಲ್ಲ. ಕೊಟ್ಟ ಮಾತನ್ನು ಈಡೇರಿಸುವ ಸಲುವಾಗಿ ಉದ್ದೇಶಪೂರ್ವಕವಾಗಿ ಅನಂಬ್ರಾ ರಾಜ್ಯದಲ್ಲಿ ಬಿಎಂಡಬ್ಲ್ಯೂ ಕಾರಿನಲ್ಲಿ ಸಮಾಧಿ ಮಾಡಿದ್ದಾರೆ.

    ಸಮಾಧಿ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

    ಈ ರೀತಿ ಕಾರನ್ನು ಸಮಾಧಿಗೆ ಬಳಸಿರುವುದು ಉಪಯೋಗ ಆಗುವುದಿಲ್ಲ. ಸಮಾಧಿಯಲ್ಲಿ ಹೆಚ್ಚು ಕಾಲ ಕಾರು ಉಳಿಯುವುದಿಲ್ಲ ಎಂದು ಕೆಲವರು ಟ್ಟೀಟ್ ಮಾಡಿದ್ದಾರೆ.

    https://www.youtube.com/watch?v=cHUaK9VmGII

     

  • ಭಯಾನಕ ವಿಡಿಯೋ: 7ನೇ ಫ್ಲೋರ್ ಪಾರ್ಕಿಂಗ್ ಗ್ಯಾರೇಜ್‍ನಿಂದ ಕೆಳಗೆ ಬಿದ್ದ ಬಿಎಂಡಬ್ಲ್ಯೂ- ಚಾಲಕಿ ಸೇಫ್

    ಭಯಾನಕ ವಿಡಿಯೋ: 7ನೇ ಫ್ಲೋರ್ ಪಾರ್ಕಿಂಗ್ ಗ್ಯಾರೇಜ್‍ನಿಂದ ಕೆಳಗೆ ಬಿದ್ದ ಬಿಎಂಡಬ್ಲ್ಯೂ- ಚಾಲಕಿ ಸೇಫ್

    ವಾಷಿಂಗ್ಟನ್: ಪಾರ್ಕಿಂಗ್ ಗ್ಯಾರೇಜ್‍ನಿಂದ ಕಾರ್‍ವೊಂದು 7 ಮಹಡಿ ಕೆಳಗೆ ಬಿದ್ದು ಮತ್ತೊಂದು ವಾಹನಕ್ಕೆ ಗುದ್ದಿ ತಲೆಕೆಳಗಾಗಿ ಬೀಳೋ ಭಯಾನಕ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಕಾರ್ ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮೊದಲಿಗೆ ಕಟ್ಟಡವೊಂದರ ಬಳಿ ಎಸ್‍ಯುವಿ ಕಾರ್‍ವೊಂದು ಬಂದು ಪಾರ್ಕ್ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಕಾರ್ ಇನ್ನೇನು ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಬಿಎಂಡಬ್ಲ್ಯೂ ಕಾರ್ ಏಳು ಮಹಡಿಗಳಿಂದ ಕೆಳಗೆ ಬಿದ್ದಿದೆ. ಬಿಎಂಡಬ್ಲ್ಯೂ ಕೆಳಗೆ ಬಿದ್ದ ರಭಸಕ್ಕೆ ಎಸ್‍ಯುವಿ ಕಾರ್‍ಗೆ ಗುದ್ದಿದ್ದು ಅದು ಮುಂದಕ್ಕೆ ಹೋಗಿದೆ. ಕೆಳಗೆ ಬಿದ್ದ ಬಿಎಂಡಬ್ಲ್ಯೂ ಕಾರ್ ತಲೆಕೆಳಗಾಗಿ ಬಿದ್ದಿದ್ದರಿಂದ ಚಾಲಕಿ ಒಳಗೆ ಸಿಲುಕಿದ್ದರು. ಕೂಡಲೇ ಸ್ಥಳದಲ್ಲಿದ್ದವರು ಓಡಿಬಂದು ಒಳಗೆ ಸಿಲುಕಿದ್ದ ಚಾಲಕಿಯನ್ನು ಹೊರಗೆ ತರಲು ಸಹಾಯ ಮಾಡಿದ್ದಾರೆ.

    ವರದಿಯ ಪ್ರಕಾರ ಬಿಎಂಡಬ್ಲ್ಯೂ ಚಾಲನೆ ಮಾಡುತ್ತಿದ್ದ ಚಾಲಕಿ ಬ್ರೇಕ್ ಪೆಡಲ್ ಬದಲು ಆಕ್ಸಲೇಟರ್ ಮೇಲೆ ಕಾಲಿಟ್ಟಿದಿಂದ ಪಾರ್ಕಿಂಗ್ ಗ್ಯಾರೇಜ್‍ನ ಬ್ಯಾರಿಯರ್‍ಗೆ ಗುದ್ದಿ ಕಾರ್ ಕೆಳಗೆ ಬಿದ್ದಿದೆ. ಘಟನೆಯ ನಂತರ ಚಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವರದಿಯಾಗಿದೆ.

    ಈ ಘಟನೆ ಜುಲೈ 13ರಂದು ನಡೆದಿದೆ. ಆದರೆ ಆಸ್ಟಿನ್ ಪೊಲೀಸ್ ಇಲಾಖೆ ಕಳೆದ ಗುರುವಾರದಂದು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದೆ.

  • ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬಿಎಂಡಬ್ಲ್ಯೂ- ಕಾರ್ ರೇಸರ್ ಅಶ್ವಿನ್, ಪತ್ನಿ ಸಾವು

    ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬಿಎಂಡಬ್ಲ್ಯೂ- ಕಾರ್ ರೇಸರ್ ಅಶ್ವಿನ್, ಪತ್ನಿ ಸಾವು

    ಚೆನ್ನೈ: ಅಂತರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.

    ಚೆನ್ನೈನ ಪಟ್ಟಿನಪಕ್ಕಂ ಪ್ರದೇಶದಲ್ಲಿ ಶನಿವಾರದಂದು ಈ ದುರ್ಘಟನೆ ಸಂಭವಿಸಿದೆ. ಅಶ್ವಿನ್ ಹಾಗೂ ಅವರ ಪತ್ನಿ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯೂ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಬೆಂಕಿಯಿಂದ ಹೊತ್ತಿ ಉರಿದಿದೆ.

    27 ವರ್ಷದ ಅಶ್ವಿನ್ 2012 ಮತ್ತು 2013ರಲ್ಲಿ ಎಲ್‍ಜಿಬಿ ಎಫ್4 ಕ್ಯಾಟಗರಿಯ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಇವರ ಹೆಂಡತಿ 26 ವರ್ಷದ ನಿವೇದಿತಾ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ರು.

    ಘಟನೆಯ ವೀಡಿಯೋವನ್ನ ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಜೋರಾಗಿ ಉರಿಯುತ್ತಿದ್ದರಿಂದ ದಂಪತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ ಎಂಧು ಹೇಳಿದ್ದಾರೆ. ಮಧ್ಯರಾತ್ರಿ ಸುಮಾರು 1.51ರ ವೇಳೆಗೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿದ್ದು, ಅವರು ಬರುವಷ್ಟರಲ್ಲಿ ದಂಪತಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

    ನಾವು ಬಂದಾಗ ಬೆಂಕಿ ಇನ್ನೂ ಉರಿಯುತ್ತಿತ್ತು. ದಂಪತಿ ಒಳಗೆ ಇದ್ದಾರೆ ಎಂದು ಗೊತ್ತಿರಲಿಲ್ಲ. ಸುಮಾರು 16 ನಿಮಿಷಗಳಲ್ಲಿ ಬೆಂಕಿ ನಂದಿಸಿದೆವು. ನಂತರ ಅವರಿಬ್ಬರೂ ಒಳಗೆ ಸಿಲುಕಿಕೊಂಡಿರುವುದು ಗೊತ್ತಾಯಿತು. ಮಹಿಳೆಯ ಕಾಲು ಸಿಲುಕಿಕೊಂಡಿತ್ತು. ಕಾರಿನ ಡ್ರೈವರ್ ಸೀಟ್ ಕೂಡ ಜಖಂಗೊಂಡಿದ್ದರಿಂದ ಅಶ್ವಿನ್ ಅವರಿಗೆ ಚಲಿಸಲು ಸಾಧ್ಯವಾಗಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಬಗ್ಗೆ ತನಿಖೆ ಆರಂಭವಾಗಿದ್ದು, ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.