ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಗರದ ಕೆ.ಆರ್ ಮಾರ್ಕೆಟ್ ಬಳಿ ನಡೆದಿದೆ.
ಶಬರೀಶ್ (11) ಮೃತ ಬಾಲಕ. ಕುಟುಂಬದವರ ಜೊತೆ ದ್ವಿಚಕ್ರ ವಾಹನದಲ್ಲಿ ಬಾಲಕ ಹೋಗುತ್ತಿದ್ದ. ಈ ವೇಳೆ ಬಿಎಂಟಿಗೆ ಬಸ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟಿದ್ದಾನೆ.
ಬಾಲಕನ ತಂದೆ ದಿಲೀಪ್ ಕುಮಾರ್ ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿದ್ದಾರೆ. ಕುಟುಂಬ ಸಮೇತರಾಗಿ ಮಾರ್ಕೆಟ್ಗೆ ಹೊರಟಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಬೈಕ್ಗೆ ಬಸ್ ಡಿಕ್ಕಿ ಹೊಡೆದಿದೆ. ಬೈಕ್ನಿಂದ ಬಲಗಡೆಗೆ ಬಿದ್ದ ಬಾಲಕ ಸಾವಿಗೀಡಾಗಿದ್ದಾನೆ.
ಘಟನೆ ಸಂಬAಧ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆಯಲಾಗಿದೆ. ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬಿಎಂಟಿಸಿ ಬಸ್ಗೆ (BMTC bus) ಮತ್ತೊಂದು ಜೀವ ಬಲಿಯಾಗಿದ್ದು, 10 ವರ್ಷದ ಬಾಲಕಿ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಯಲಹಂಕ (Yalahanka) ಕೋಗಿಲು ಕ್ರಾಸ್ ಬಳಿ ನಡೆದಿದೆ.
ಈ ವೇಳೆ ಸ್ಕೂಟರ್ನ ಹಿಂಬದಿ ಕುಳಿತಿದ್ದ ತನ್ವಿ ಕೆಳಕ್ಕೆ ಬಿದ್ದು, ಬಸ್ನ ಚಕ್ರದಡಿ ಸಿಲುಕಿದ್ದಳು. ಆಕೆಯ ಮೇಲೆಯೇ ಬಿಎಂಟಿಸಿ ಬಸ್ನ ಚಕ್ರ ಹರಿದಿದ್ದರಿಂದ ತನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಇದೀಗ ಯಲಹಂಕ ಪೊಲೀಸರು ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಐದು ದಿನದಲ್ಲಿ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ. ಕಳೆದ ಶುಕ್ರವಾರ ಪೀಣ್ಯ 2ನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 25 ವರ್ಷದ ಸುಮಾ ಮೃತಪಟ್ಟಿದ್ದರು. ಇಂದು ಮತ್ತೊಂದು ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದಾರೆ.
ಬೆಂಗಳೂರು: ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್ಗೆ (BMTC Driver) ಮಹಿಳಾ ಪ್ರಯಾಣಿಕರೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ.
ಇದೇ ಬುಧವಾರ ಜೂ. 11ರಂದು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುತ್ತಿದ್ದ ಕೆಎ57, ಎಫ್ 0836 ಬಸ್ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8.40ರ ಹೊತ್ತಿಗೆ ಬಸ್ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿ ಸಮೀಪ ತಲುಪಿದಾಗ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬ ಮಹಿಳೆ, ಬಸ್ ಸ್ಟಾಪ್ ಇಲ್ಲದೇ ಇದ್ರೂ, ಎಲೆಕ್ಟ್ರಾನಿಕ್ ಸಿಟಿ (Electronic City) ರಸ್ತೆಯಲ್ಲಿ ಹೋಗುವಾಗ ಕಚೇರಿ ಮುಂದೆ ಬಸ್ ನಿಲ್ಲಿಸಲು ಹೇಳಿದ್ದಳು. ಇದನ್ನೂ ಓದಿ: ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ
ಟ್ರಾಫಿಕ್ನಿಂದ ಬಸ್ ಡ್ರೈವರ್ ಬಸ್ ನಿಲ್ಲಿಸಿಲ್ಲ. ಆಗ ಹೊಟ್ಟೆ ಹಿಡಿದುಕೊಂಡು ಕಿರುಚಿ, ಅವಾಚ್ಯ ಶಬ್ದಗಳಿಂದ 42 ವರ್ಷದ ಚಾಲಕ ಅತಹರ್ ಹುಸೇನ್ ಅವರನ್ನು ನಿಂದಿಸಿದ್ದಳು. ಬಳಿಕ ಮಹಿಳೆ ಬಲ ಚಪ್ಪಲಿ ತೆಗೆದುಕೊಂಡು ಹೊಡೆದಿದ್ದಾಳೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 121, 131, 132, 352 ಅಡಿಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಒಂಟಿ ಪ್ರಯಾಣಿಕರನ್ನೇ (Passengers) ಟಾರ್ಗೆಟ್ ಮಾಡಿ, ಜ್ಯೂಸ್ ಕುಡಿಸಿ ಮೊಬೈಲ್, ಪರ್ಸ್, ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿಯೊಬ್ಬಳನ್ನು ಬ್ಯಾಟರಾಯನಪುರ ಪೊಲೀಸರು (Byatarayanapura Police) ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಲತಾ ಬಂಧಿತ ಮಹಿಳೆ. ಬಿಎಂಟಿಸಿ ಬಸ್ನಲ್ಲಿ (BMTC Bus) ಒಂಟಿ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳಿ, ಪರಿಚಯ ಮಾಡಿಕೊಂಡು ಜ್ಯೂಸ್ ಕುಡಿಯಲು ಕರೆದುಕೊಂಡು ಹೋಗ್ತಿದ್ದಳು. ಜ್ಯೂಸ್ ಕುಡಿದು ಪ್ರಜ್ಞೆ ಕಳೆದುಕೊಂಡ ತಕ್ಷಣ ಮೊಬೈಲ್, ಪರ್ಸ್, ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದಳು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ
ಈ ಬಗ್ಗೆ ಮಾಹಿತಿ ಪಡೆದ ಬ್ಯಾಟರಾಯನಪುರ ಪೊಲೀಸರು ಆಕೆಯನ್ನ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಠಾಣೆಗೆ ಕರೆತಂದ ಕೆಲವೇ ನಿಮಿಷಗಳಲ್ಲಿ ಹಿಳೆ ವಿಷಪೂರಿತ ಚಾಕೊಲೆಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಹಿಳೆ ಕುಸಿದುಬಿದ್ದ ನಂತರ ಪೊಲೀಸರು ಆಕೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಟ್ರ್ಯಾಕ್ಗೆ ಬಿದ್ದ ಮರ: ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು: ಬಿಎಂಟಿಸಿ (BMTC Bus) ಬಸ್ಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
25 ವಯಸ್ಸಿನ ಮೋನಿಕಾ ಮೃತ ಮಹಿಳೆ. ಬಿಎಂಟಿಸಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಜೊತೆಗೆ ಮಹಿಳೆ ಬಸ್ನ ಬಲಭಾಗಕ್ಕೆ ಬಿದ್ದಿದ್ದಾರೆ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಕಾರು ಬಸ್ಗೆ ಗುದ್ದಿ ರಸ್ತೆಯಲ್ಲಿ ಬಿದ್ದ ಮಹಿಳೆಯ ಮೇಲೆ ಹರಿದಿದೆ. ಘಟನೆಯಲ್ಲಿ ಬೈಕ್ ನಜ್ಜುಗುಜ್ಜಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇಂಟ್ರೆಸ್ಟಿಂಗ್ ಕಳ್ಳತನ ಪ್ರಕರಣಗಳು – ಒಟ್ಟು 7 ಖದೀಮರ ಅರೆಸ್ಟ್!
ಮೋನಿಕಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಕ್ಕೆ ಹೋಗುವಾಗ ಘಟನೆ ಸಂಭವಿಸಿದೆ. ಬಿಎಂಟಿಸಿ ಬಸ್ ಉಲ್ಲಾಳ ಉಪನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಕಡೆ ಹೋಗುವಾಗ ಉಲ್ಲಾಳ ಕೆರೆಯ ಬಳಿ ಅಪಘಾತ ಸಂಭವಿಸಿದೆ.
ಸಿಂಗಲ್ ರೋಡ್ನಲ್ಲಿ ಆತುರವಾಗಿ ಬಂದ ಮಹಿಳೆ ಎದುರುಗಡೆಯಿಂದ ಬರುತ್ತಿದ್ದ ನಮ್ಮ ಬಸ್ ಮುಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾರೆ. ರಸ್ತೆ ಮೇಲೆ ಬಿದ್ದಾಗ ಎದುರುಗಡೆ ಬರುತ್ತಿದ್ದ ಕಾರು ಹರಿದು ಮಹಿಳೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಮ್ಮದೇನು ತಪ್ಪಿಲ್ಲ ಎಂದ ಚಾಲಕ ಸುರೇಶ್ ಹೇಳಿದ್ದಾರೆ. ಘಟನೆ ಸಂಬಂದ ಮೃತ ಮಹಿಳೆ ಮೋನಿಕಾ ಸಂಬಂಧಿಕರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಹಾಗೂ ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಂಗಳೂರು ಪೊಲೀಸ್ ಇತಿಹಾಸದಲ್ಲೇ ಭರ್ಜರಿ ಬೇಟೆ – 6 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
ಬೆಂಗಳೂರು: ಚಲಿಸುತ್ತಿರುವಾಗಲೇ ಬಿಎಂಟಿಸಿ ಚಾಲಕನಿಗೆ (BMTC Bus Driver) ಹೃದಯಾಘಾತ ಕಾಣಿಸಿಕೊಂಡಿದ್ದು, ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಜೀವ ಉಳಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆ ಬಳಿ ಘಟನೆ ನಡೆದಿದೆ. KA51AJ6905 ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕ ವೀರೇಶ್ಗೆ ಏಕಾಏಕಿ ಹೃದಯಾಘಾತ (Heart Attack) ಸಂಭವಿಸಿದೆ. ನಡುರಸ್ತೆಯಲ್ಲೇ ಬಸ್ ಸ್ಲೋ ಆಗಿದ್ದನ್ನ ಕಂಡು ಸಮೀಪದಲ್ಲಿದ್ದ ಟ್ರಾಫಿಕ್ ಪೊಲೀಸರು ಓಡೋಡಿ ಬಂದಿದ್ದಾರೆ.
ಹಲಸೂರು ಟ್ರಾಫಿಕ್ ಪೊಲೀಸ್ (Halasur Traffic Police) ಆರ್. ರಘುಕುಮಾರ್ ಬಸ್ ಬಳಿ ನೋಡಿದಾಗ, ಚಾಲಕ ಎದೆ ಬಿಗಿ ಹಿಡಿದುಕೊಂಡು ಒಂದು ಕಡೆಗೆ ಚಾಲಕ ವಾಲಿದ್ದನ್ನು ನೋಡಿದ್ದಾರೆ. ಬಳಿಕ ಹ್ಯಾಂಡ್ ಬ್ರೇಕ್ ಹಾಕಿ ಬಸ್ ನಿಲ್ಲಿಸಿ, ಚಾಲಕನ್ನು ಕೆಳಗಿಳಿಸಿದ್ದಾರೆ. ನಂತರ ಅಂಬುಲೆನ್ಸ್ಗೂ ಕಾಯದೇ ಅಶೋಕ ನಗರ ಟ್ರಾಫಿಕ್ ಸಿಬ್ಬಂದಿ ಪ್ರಸನ್ನಕುಮಾರ್ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ 45 ಪ್ರಯಾಣಿಕರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿರುವುದು ಸ್ಪಷ್ಟವಾಗಿದೆ: ರಾಮಜನ್ಮಭೂಮಿ ಪ್ರಧಾನ ಅರ್ಚಕ
ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ (NIA) ತಂಡ ಕಲಬುರಗಿಗೆ ಆಗಮಿಸಿದ್ದು, ಕಲಬುರಗಿಯ (Kalaburagi) ರೈಲು ನಿಲ್ದಾಣದಲ್ಲಿ ಪೋಲಿಸರು ತಪಾಸಣೆ ನಡೆಸುತ್ತಿದ್ದಾರೆ.
ರೈಲ್ವೆ ನಿಲ್ದಾಣದ ಆರ್ಪಿಎಫ್ ಠಾಣೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಎನ್ಐಎನ ಮತ್ತೊಂದು ತಂಡ ಹಳೇ ಜೇವರ್ಗಿ ರಸ್ತೆಯಲ್ಲಿ ಲಾಡ್ಜ್ ಗಳನ್ನು ಪರಿಶೀಲನೆ ನಡೆಸುತ್ತಿದೆ.