Tag: ಬಿಎಂಟಿಸಿ ನೌಕರ

  • ಕೆಲಸದಿಂದ ವಜಾ –  ಮನನೊಂದು ಬಿಎಂಟಿಸಿ ನೌಕರ ಆತ್ಮಹತ್ಯೆ

    ಕೆಲಸದಿಂದ ವಜಾ – ಮನನೊಂದು ಬಿಎಂಟಿಸಿ ನೌಕರ ಆತ್ಮಹತ್ಯೆ

    ರಾಯಚೂರು: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಡೆದಿದೆ.

    ಬಿಎಂಟಿಸಿ ನೌಕರನಾಗಿದ್ದ ವಿನೋದ್ ಕುಮಾರ್ ಪತ್ರಿ (42) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮನೆಯಲ್ಲಿ ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಬಿಎಂಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿದ್ದ ವಿನೋದ್ ಕಳೆದ ವರ್ಷ ನೌಕರಿಯಿಂದ ವಜಾಗೊಂಡ ಹಿನ್ನೆಲೆ ಖಿನ್ನತೆಗೆ ಒಳಗಾಗಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಅವರನ್ನು ಈ ಹಿಂದೆ ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕೆ ಕಳೆದ ಮಾರ್ಚ್‍ವಜಾಗೊಳಿಸಲಾಗಿತ್ತು. ಮರಳಿ ಕೆಲಸ ಸಿಗದ ಹಿನ್ನೆಲೆ ಮನನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ರೆಮ್‍ಡಿಸಿವಿರ್ ಸಿಗದೆ ಬಿಎಂಟಿಸಿ ನೌಕರ ಸಾವು

    ರೆಮ್‍ಡಿಸಿವಿರ್ ಸಿಗದೆ ಬಿಎಂಟಿಸಿ ನೌಕರ ಸಾವು

    ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರು ಸಾವನ್ನಪ್ಪಿದ್ದು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

    ಜ್ವರದಿಂದ ಬಳಲುತ್ತಿದ್ದ ಹನೂರು ತಾಲೂಕು ಬಸಪ್ಪನದೊಡ್ಡಿ ಗ್ರಾಮದ ಬಿಎಂಟಿಸಿ ನೌಕರ ರಾಜಪ್ಪ ಅವರು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರಿಗೆ ಐಸಿಯುನಲ್ಲಿ ಕೇವಲ ಆಕ್ಸಿಜನ್ ಕೊಟ್ಟಿದ್ದಾರೆಯೇ ಹೊರತು ರೆಮ್‍ಡೆಸಿವಿರ್ ಚುಚ್ಚು ಮದ್ದು ಸೇರಿದಂತೆ ಸಮರ್ಪಕ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರರು ಆರೋಪಿಸಿದ್ದಾರೆ.

    ವೈದ್ಯರನ್ನು ಕೇಳಿದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ವೈದ್ಯಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ಮೇಲೆ ಮೃತದೇಹವನ್ನು ಬೇಗನೆ ಕೊಟ್ಟಿಲ್ಲ ಹಾಗೂ ಲಗೇಜನ್ನು ಕೊಡದೆ ಸತಾಯಿಸುತ್ತಿದ್ದಾರೆ. ಯುವಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನಿಮ್ಮ ಅಕ್ಕ, ತಂಗಿ, ತಂದೆ, ತಾಯಿ ಎಲ್ಲರನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ಶವ ಕೇಳಿದರೆ ಪ್ರೋಟೊಕಾಲ್ ಅಂತಾರೆ ಎಂದು ಅಣ್ಣನನ್ನು ಕಳೆದುಕೊಂಡ ನಾಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

  • ಅಪಘಾತಕ್ಕೀಡಾಗಿ ಲಾರಿಯ ಹಿಂಬದಿ ಚಕ್ರದಲ್ಲಿ ಸಿಲುಕಿದ ಬೈಕ್!

    ಅಪಘಾತಕ್ಕೀಡಾಗಿ ಲಾರಿಯ ಹಿಂಬದಿ ಚಕ್ರದಲ್ಲಿ ಸಿಲುಕಿದ ಬೈಕ್!

    – ಬಿಎಂಟಿಸಿ ನೌಕರ ದುರ್ಮರಣ

    ಚಿಕ್ಕಬಳ್ಳಾಪುರ: ಬೃಹತ್ ಗಾತ್ರದ ಗ್ರಾನೈಟ್ ಕಲ್ಲು ದಿಮ್ಮೆ ಹೊತ್ತು ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ರ ಮಂಚನಬಲೆ ಗ್ರಾಮದ ಸೇತುವೆ ಬಳಿ ನಡೆದಿದೆ.

    ಮೃತ ವ್ಯಕ್ತಿ ಗುಡಿಬಂಡೆ ತಾಲೂಕು ಮದ್ದರೆಡ್ಡಿಹಳ್ಳಿಯ ನಿವಾಸಿ ನಾಗೇಶ್ ಎಂದು ತಿಳಿದುಬಂದಿದೆ. ಇವರು ಬಿಎಂಟಿಸಿ ನೌಕರರಾಗಿದ್ದು, ಕರ್ತವ್ಯಕ್ಕೆ ಹಾಜರಾಗಲು ಸ್ವಗ್ರಾಮದಿಂದ ಬೆಂಗಳೂರಿಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ಅಪಘಾತದ ರಭಸಕ್ಕೆ ಬೈಕ್ ಲಾರಿಯ ಹಿಂಬದಿಯ ಚಕ್ರದಲ್ಲೇ ಸಿಲುಕಿ ಹಾಕಿಕೊಂಡಿದ್ದು, ನಾಗೇಶ್ ನಡುರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಲಾರಿಯ ಹಿಂಬದಿಯಲ್ಲಿ ಯಾವುದೇ ಇಂಡಿಕೇಟರ್ ಗಳು ಇಲ್ಲದೆ ಕತ್ತಲಲ್ಲೇ ಸಾಗುತ್ತಿದ್ದುದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

    ಅಪಘಾತದ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.