Tag: ಬಿಇಓ

  • ಶುಲ್ಕ ಕಟ್ಟಲು ಒತ್ತಡ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ಶುಲ್ಕ ಕಟ್ಟಲು ಒತ್ತಡ ಶಾಲೆಗಳ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ

    ಬೆಂಗಳೂರು: ಖಾಸಗಿ ಶಾಲೆಗಳಿಂದ ಶುಲ್ಕ ಕಟ್ಟಲು ಪೋಷಕರಿಗೆ ಒತ್ತಡ ಮತ್ತು ಕೆಲ ಶಾಲೆಗಳಿಂದ ಫೀಸ್ ಕಟ್ಟಲು ಲೋನ್ ಕೊಡಿಸುತ್ತಿರೋ ವಿಚಾರವಾಗಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.

    ಕಳೆದ ಕೆಲದಿನಗಳಿಂದ ಖಾಸಗಿ ಶಾಲೆಗಳು ಮಕ್ಕಳ ಪೋಷಕರಿಗೆ ಶಾಲಾ ಶುಲ್ಕ ಕಟ್ಟುವಂತೆ ಒತ್ತಡ ಹಾಕುತ್ತಿದ್ದಾರೆ. ಮತ್ತು ಫೀಸ್ ಕಟ್ಟಲು ಲೋನ್ ಕೊಡಿಸುವುದಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಈ ವಿಚಾರವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ ಸುರೇಶ್ ಕುಮಾರ್ ಅವರು, ಫೀಸ್ ಕಟ್ಟಲು ಮತ್ತು ಇತರ ವಿಷಯವಾಗಿ ಕಿರುಕುಳ ನೀಡುತ್ತಿರುವ ಶಾಲೆಗಳ ಬಗ್ಗೆ ಸ್ಥಳೀಯ ಬಿಇಓಗಳಿಗೆ ಪೋಷಕರು ದೂರು ಕೊಟ್ಟರೆ ಸಾಕು. ಅಂತಹ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಯಾವುದೇ ಶಾಲೆಗಳು ಪೋಷಕರಿಗೆ ಶುಲ್ಕ ಕಟ್ಟಲು ಒತ್ತಡ ಹಾಕಬಾರದು. ಕೊರೊನಾ ಪರಿಸ್ಥಿತಿಯಲ್ಲಿ ಪೋಷಕರಿಗೆ ಶುಲ್ಕಕ್ಕೆ ಪೀಡಿಸೋದು ಸರಿಯಲ್ಲ. ಇಂತಹ ಶಾಲೆಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಶುಲ್ಕ ವಸೂಲಿಗಾಗಿ ಖಾಸಗಿ ಶಾಲೆಯ ‘ಲೋನ್’ ದಂಧೆ

    ಸಚಿವರ ಸೂಚನೆ ಬೆನ್ನಲ್ಲೇ ಶುಲ್ಕ ಕಟ್ಟಲು ಒತ್ತಡ ಹಾಕುತ್ತಿರೋ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಎಲ್ಲಾ ಬಿಇಓಗಳಿಗೆ ಆದೇಶ ಹೊರಡಿಸಿದ್ದಾರೆ. ಯಾವುದೇ ಶಾಲೆ, ಶುಲ್ಕ ಪಡೆಯಲು ಒತ್ತಡ ಹಾಕುತ್ತಿದ್ದರು ಅಂತಹ ಶಾಲೆ ಮೇಲೆ ಕ್ರಮ ತೆಗೆದುಕೊಳ್ಳಿ. ಶಾಲೆಗಳ ಮೇಲೆ ಕ್ರಮ ತೆಗೆದುಕೊಂಡ ಬಳಿಕ ಇಲಾಖೆಗೆ ಸಂಪೂರ್ಣ ಮಾಹಿತಿ ನೀಡುವಂತೆ ಬಿಇಓಗಳಿಗೆ ಆಯುಕ್ತರ ಸೂಚನೆ ನೀಡಿದ್ದಾರೆ.

  • ವಿನಾಕಾರಣ ಥಳಿಸಿ ವಿದ್ಯಾರ್ಥಿಗಳಿಗೆ ಹಿಂಸೆ- ಶಿಕ್ಷಕಿಯ ವರ್ಗಾವಣೆ

    ವಿನಾಕಾರಣ ಥಳಿಸಿ ವಿದ್ಯಾರ್ಥಿಗಳಿಗೆ ಹಿಂಸೆ- ಶಿಕ್ಷಕಿಯ ವರ್ಗಾವಣೆ

    ಮೈಸೂರು: ವಿನಾಕಾರಣ ಥಳಿಸಿ ಹಿಂಸೆ ಕೊಡುತಿದ್ದ ಶಿಕ್ಷಕಿಯನ್ನು ವಿದ್ಯಾರ್ಥಿಗಳ ಪೋಷಕರು ಪಟ್ಟು ಹಿಡಿದು ವರ್ಗ ಮಾಡಿಸಿದ್ದಾರೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ಗೀತಾ ಗಾಯಿತ್ರಿ ವರ್ಗಗೊಂಡಿದ್ದಾರೆ. ಎರಡು ದಿನಗಳ ಹಿಂದೆ ಇಬ್ಬರು ವಿದ್ಯಾರ್ಥಿಗಳಿಗೆ ಗೀತಾಗಾಯಿತ್ರಿ ಮನಬಂದಂತೆ ಥಳಿಸಿದ್ದರು. ಈ ವಿಚಾರವಾಗಿ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿ ಶಿಕ್ಷಕಿಯನ್ನ ಬೇರೆಡೆಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿದ್ರು.

    ವರ್ಗಾವಣೆ ಮಾಡದಿದ್ದಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಹೀಗಾಗಿ ಬಿಇಓ ಶಾಲೆಗೆ ಭೇಟಿ ಕೊಟ್ಟ ವಿಚಾರಣೆ ನಡೆಸಿದ ವೇಳೆ ಗೀತಾಗಾಯಿತ್ರಿ ಹಲ್ಲೆ ಮಾಡಿದ್ದು ರುಜುವಾತಾಗಿತ್ತು. ಕೂಡಲೇ ಬಿಇಓ ರವರು ಉಪನಿರ್ದೇಶಕರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews