Tag: ಬಿಇಒ

  • ವರ್ಗಾವಣೆ ಮಾಡಲು 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ BEO ಲೋಕಾಯುಕ್ತ ಬಲೆಗೆ

    ವರ್ಗಾವಣೆ ಮಾಡಲು 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ BEO ಲೋಕಾಯುಕ್ತ ಬಲೆಗೆ

    ಚಿಕ್ಕಮಗಳೂರು: ಶಿಕ್ಷಕರೊಬ್ಬರನ್ನು (Teacher) ಬೇರೊಂದು ಶಾಲೆಗೆ (School) ವರ್ಗಾವಣೆ ಮಾಡಲು 15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲೆಯ ಕಡೂರು ತಾಲೂಕಿನ ಬಿಇಒ (BEO) ಕೆ.ಎನ್.ರಾಜಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಕಡೂರು ತಾಲೂಕಿನ ಜಿ.ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) ನಿಯೋಜನೆ ಮೇರೆಗೆ ಶಿಕ್ಷಕರಾಗಿದ್ದ ರಾಜಪ್ಪರನ್ನ ಗರ್ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಲು ಬಿಇಒ 15 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಗಳವಾರ ಮಧ್ಯಾಹ್ನ ಜಿ.ತಿಮ್ಮಾಪುರ ಗೇಟ್ ಬಳಿ ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ದಾಂಡಿಯಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿ ಸಾವು

    ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ (National Highway) ಜಿ.ತಿಮ್ಮಾಪುರ ಗೇಟ್ ಬಳಿ 15 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾನೆ. ಸಂಜೆವರೆಗೂ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು ನಂತರ ಬಿಇಒ ಕೆ.ಎನ್.ರಾಜಣ್ಣ ಅವರನ್ನ ಚಿಕ್ಕಮಗಳೂರು ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸದೇ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಗೆ ಬಂಧನದ ಭೀತಿ

    ದಾಳಿಯಲ್ಲಿ ವೃತ್ತ ನಿರೀಕ್ಷಕರಾದ ಸಚ್ಚಿನ್ ಮತ್ತು ಬಿ. ಮಲ್ಲಿಕಾರ್ಜುನ್, ಸಿಬ್ಬಂದಿ ಚೇತನ್, ಸಲೀಂ, ಲೋಕೇಶ್, ವಿಜಯಭಾಸ್ಕರ್, ಸವಿನಯ, ರವಿಚಂದ್ರ ಇದ್ದರು.

    Live Tv
    [brid partner=56869869 player=32851 video=960834 autoplay=true]

  • ಮಳೆ; ನಾಳೆ ಬೆಂಗಳೂರು ಪೂರ್ವ ಭಾಗದ ಶಾಲೆಗಳಿಗೆ ರಜೆ

    ಮಳೆ; ನಾಳೆ ಬೆಂಗಳೂರು ಪೂರ್ವ ಭಾಗದ ಶಾಲೆಗಳಿಗೆ ರಜೆ

    ಬೆಂಗಳೂರು: ಬೆಂಗಳೂರು ಪೂರ್ವ ಭಾಗದಲ್ಲಿ ಮಳೆಯ ಅವಾಂತರ ಹೆಚ್ಚಾಗಿದ್ದು, ಬುಧವಾರ (ಸೆಪ್ಟೆಂಬರ್ 7ರಂದು) ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಹಾವಳಿ: ನಾಳೆ ಸಾಫ್ಟ್‌ವೇರ್ ಕಂಪನಿಗಳ ಜತೆ ಸಭೆ

    ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ದಕ್ಷಿಣ ವಲಯ-4ಕ್ಕೆ ಒಳಪಡುವ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಜೆಯನ್ನು ಸರಿದೂಗಿಸಲು ಮುಂದಿನ ಎರಡು ಶನಿವಾರಗಳಂದು ಪೂರ್ಣ ದಿನ ತರಗತಿ ನಡೆಯಲಿದೆ ಎಂದು ಬಿಇಒ ಆದೇಶದಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

    ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

    ಬೆಂಗಳೂರು: ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ? ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ.

    TEXTBOOK

    ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳಬೇಕಿತ್ತಾ? ಇದೆಲ್ಲವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿತ್ತು. ಒಡೆಯರ್ ಬಗ್ಗೆ ಯಾಕೆ ಪಠ್ಯ ಬಿಟ್ಟಿದ್ದರು? ಬೆಂಗಳೂರಿನಲ್ಲಿ ದೇವಸ್ಥಾನ ಇರಲಿಲ್ಲವಾ? ಯಾಕೆ ದೇವಾಲಯದ ಫೋಟೋ ಹಾಕಿಲ್ಲ? ಈಗ ಇದನ್ನ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಅದನ್ನೂ ವಿವಾದಕ್ಕೆ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ

    Text book

    ಗೊಂದಲವಿದ್ದರೆ ನಾನೇ ಪರಿಹಾರ ಮಾಡ್ತೇನೆ: ಮೊದಲು ಟಿಪ್ಪು ಅಂದ್ರು, ಅಮೇಲೆ ಭಗತ್ ಸಿಂಗ್ ಬಗ್ಗೆ ವಿವಾದ ಮಾಡಿದ್ರು, ನಂತರ ಕುವೆಂಪು ಅಂದವರೇ ಈಗ ಬಸವಣ್ಣ ಎನ್ನುತ್ತಿದ್ದಾರೆ. ಸತ್ಯ ಹೊರಗಡೆ ಬಂದಹಾಗೇ ಅವರ ನಿಲುವು ಬದಲಾವಣೆ ಮಾಡ್ತಿದ್ದಾರೆ. ಬೇಕು ಅಂತ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಪಠ್ಯಪುಸ್ತಕದ ಬಗ್ಗೆ ಯಾರಿಗೇ ಗೊಂದಲ ಇರಲಿ. ಸ್ವಾಮೀಜಿಗಳಿಗೆ ಗೊಂದಲ ಇದ್ದರೂ ನಾನೇ ಭೇಟಿ ಮಾಡಿ ಪರಿಹಾರ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಹಳ ಜನ ಸ್ನೇಹಿತರಿದ್ದಾರೆ- ರಾಜಕೀಯ ದಾಳ ಉರುಳಿಸಿದ ಸಿಎಂ

    bc nagesh

    ಪರಿಷ್ಕರಣೆ ಕೆಲಸ ಈಗ ಮುಕ್ತಾಯ ಆಗಿದೆ. ಪದೇ ಪದೇ ಪರಿಷ್ಕರಣೆ ಮಾಡಲು ಆಗೋದಿಲ್ಲ. ಈಗಾಗಲೇ ಶೇ.75 ಪಠ್ಯಪುಸ್ತಕ ಮುದ್ರಣದ ಕಾರ್ಯ ಮುಗಿದಿದೆ. ಶೇ.66 ರಷ್ಟು BEO ಕಚೇರಿಗಳಿಗೆ ತಲುಪಿದೆ. ಕಲಿಕಾ ಚೇತರಿಕೆ ಮುಗಿಯೋ ಒಳಗೆ ಪಠ್ಯ ಪುಸ್ತಕ ತಲುಪಿಸುವ ಪ್ರಯತ್ನ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯೂ ಮಂಗಳೂರು ಕೋರ್ಟ್‌ನಲ್ಲಿ ಮಳಲಿ ವಿಚಾರಣೆ

    ಇದರಲ್ಲಿ ಬಸವಣ್ಣನವರ ಪಠ್ಯ ತೆಗೆದಿಲ್ಲ. ಆದರೆ ಬರಗೂರು ಸಮಿತಿಯಲ್ಲಿ ಏನಿತ್ತು? ಈಗ ಏನು ಸೇರ್ಪಡೆಯಾಗಿದೆ ಎಂಬುದನ್ನು ಚೆಕ್ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

  • ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಗದಗ: ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ ಬಿಇಓ ಅಧಿಕಾರಿಯನ್ನು ಪಾಲಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

    ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್. ಹಳ್ಳಿಗುಡಿಯವರ ಮನೆಗೆ ನುಗ್ಗಿ 6 ಜನ ಪಾಲಕರ ಗುಂಪೊಂದು ಮನಬಂದಂತೆ ಹಲ್ಲೆ ಮಾಡಿದೆ. ಮನೆ-ಮನೆಗೆ ಭೇಟಿ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಹಳ್ಳಿಕೇರಿ ಗ್ರಾಮಕ್ಕೆ ಶಂಕರ್ ಭೇಟಿ ನೀಡಿದ್ದಾರೆ. ಆಗ ರಾತ್ರಿ ವೇಳೆ ಗ್ರಾಮದ ವಿದ್ಯಾರ್ಥಿನಿ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ್ದಾರೆ.

    ಇದನ್ನೇ ಅಪಾರ್ಥ ತಿಳಿದ ಪಾಲಕರು, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ 6 ಜನ ಪಾಲಕರ ತಂಡ ಮುಂಡರಗಿ ಪಟ್ಟಣದ ಅವರ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿರುವ ಕೇತ್ರ ಶಿಕ್ಷಣಾಧಿಕಾರಿ ಶಂಕರ್ ಹಳ್ಳಿಗುಡಿ ಅವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.