Tag: ಬಿಆರ್ ಪಾಟೀಲ್

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ – ಸಿಎಂಗೆ ಪತ್ರ ಬರೆದ ಬಿಆರ್‌ ಪಾಟೀಲ್‌

    ಬೆಂಗಳೂರು/ಕಲಬುರಗಿ: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ಇದಕ್ಕೆ ಪೂರಕವಾಗಿ ಹಿರಿಯ ನಾಯಕ ಆಳಂದ ಕ್ಷೇತ್ರದ ಶಾಸಕ ಬಿಆರ್ ಪಾಟೀಲ್ (BR Patel) ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರ ಬರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ (Resignation) ನೀಡುವ ಸುಳಿವು ನೀಡಿದ್ದಾರೆ.

    ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪತ್ರ ಬರೆದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ಪತ್ರದಲ್ಲಿ ಏನಿದೆ?
    2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್‌ಗೆ (KRIDL)ನೀಡಿದ್ದೆ. ಆದರೆ ಕಾರಣಾಂತರಗಳಿಂದ ಅವು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು. ಸಚಿವ ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದರು. ಇದನ್ನೂ ಓದಿ: 3ನೇ ಕಂತಿಗಾಗಿ ಮತ್ತೆ ಬಂದ ಸುರ್ಜೇವಾಲಾ: ಸಿ.ಟಿ ರವಿ

    ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎನ್ನುವ ಅರ್ಥದಲ್ಲಿ ಹೇಳಿಕೆ ಕೊಟ್ಟರು. ಅದಾದ ಮೇಲೂ ಪ್ರಿಯಾಂಕ್ ಖರ್ಗೆ ಕಾಮಗಾರಿಗಳ ಕುರಿತು ಸಭೆ ನಡೆಸಲಿಲ್ಲ. ಇಂಥ ಆರೋಪ ಹೊತ್ತು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ನನ್ನ ಮೇಲೆ ಬಂದ ಆರೋಪದ ಬಗ್ಗೆ ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಬಿಆರ್ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

    ಇಂತಹ ಯಾವ ಪತ್ರವೂ ನನಗೆ ಬಂದಿಲ್ಲ. ಬಂದಿದ್ದರೆ ನೋಡುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ ಇದು ನಕಲಿ ಪತ್ರವಲ್ಲ, ಅಸಲಿ ಪತ್ರ ಎಂದು ಹೇಳಲಾಗುತ್ತಿದೆ.

     

  • ಆಗಸ್ಟ್‌ನಲ್ಲಿ ಬರುವ ಜುಲೈ ತಿಂಗಳ ಕರೆಂಟ್ ಬಿಲ್ ಫ್ರೀ: ಕೆಜೆ ಜಾರ್ಜ್

    ಆಗಸ್ಟ್‌ನಲ್ಲಿ ಬರುವ ಜುಲೈ ತಿಂಗಳ ಕರೆಂಟ್ ಬಿಲ್ ಫ್ರೀ: ಕೆಜೆ ಜಾರ್ಜ್

    ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ (Gruhajyothi) ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಬರುವ ಜುಲೈ ತಿಂಗಳ ಬಿಲ್ ಎಲ್ಲರಿಗೂ ಫ್ರೀ ಸಿಗಲಿದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J.George) ಹೇಳಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದ ನೌಕರರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಮನ್ ಚಾಂಡಿಯವರು ನಿಧನ ಹೊಂದಿದ್ದರಿಂದ ಸಭೆ ಮುಂದೆ ಹೋಗಿದೆ ಅಷ್ಟೇ. ರಾಹುಲ್ ಗಾಂಧಿ (Rahul Gandhi) ಬಾರದ ಕಾರಣ ಸಭೆ ತಾತ್ಕಾಲಿಕವಾಗಿ ಪೋಸ್ಟ್‌ಪೋನ್‌ ಆಗಿದೆ. ಯಾರ ಮೇಲೂ ಯಾರಿಗೆ ಅಸಮಾಧಾನ, ಏನೂ ಇಲ್ಲ ಎಂದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ಯಾರೂ ಕೂಡಾ ಶಾಸಕ ಬಿ.ಆರ್.ಪಾಟೀಲ್ (B.R.Patil) ಅವರ ರಾಜೀನಾಮೆ ಕೇಳಿಲ್ಲ. ಪಾಟೀಲ್ ವಿಚಾರದಲ್ಲಿ ಒಳ್ಳೆಯದ್ದನ್ನೇ ಮಾತನಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಇರಬಹುದು. ಯಾಕೆಂದರೆ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ಆದರೆ ಅದನ್ನು ಪುನಃ ಪ್ರಾರಂಭ ಮಾಡಲು ಆದೇಶ ನೀಡಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ಇರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಆಗುತ್ತದೆ. ಆದರೆ ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದಿಂದ ವರ್ಗಾವಣೆ ದಂಧೆ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ: ಬೊಮ್ಮಾಯಿ

    ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಕಸ್ತೂರಿ ರಂಗನ್ ವರದಿಯ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರ್ಜ್, ರಾಜ್ಯದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಯಾವ ಮಂತ್ರಿ ಮಂಡಲದಲ್ಲೂ ಸೆನ್ಸಿಟಿವ್ ಝೋನ್ ಬಗ್ಗೆ ತೀರ್ಮಾನ ಆಗಿರಲಿಲ್ಲ. ಪ್ರತಿ ಸರ್ಕಾರದ ಅವಧಿಯಲ್ಲೂ ಮುಂದೆ ಹೋಗುತ್ತಿತ್ತು. ಆದರೆ ಈಗ ಸೆನ್ಸಿಟಿವ್ ಝೋನ್ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚನೆಗೆ ಅಧಿಕಾರ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಆ ಸಬ್ ಕಮಿಟಿ ಚರ್ಚೆಯ ಬಳಿಕ ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಲಿದೆ. ಎಕೋ ಸೆನ್ಸಿಟಿವ್ ಝೋನ್ ಅನ್ನು ಎಷ್ಟು ಕಿ.ಮೀ. ಮಾಡಬೇಕು ಎಂದು ತೀರ್ಮಾನವಾಗಿರಲಿಲ್ಲ. ಹಾಗಾಗಿ ಸಬ್ ಕಮಿಟಿಯಲ್ಲಿ ಚರ್ಚೆ ಮಾಡುತ್ತಾರೆ. ಸಬ್ ಕಮಿಟಿಯ ವರದಿ ಬಂದ ಬಳಿಕ ಯಾರಿಗೂ ತೊಂದರೆಯಾಗದಂತೆ ಕ್ಯಾಬಿನೆಟ್‌ನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯ ಆಳಂದದಿಂದ ಸ್ಪರ್ಧಿಸಿದ್ರೆ ಕ್ಷೇತ್ರ ತ್ಯಾಗ ಮಾಡ್ತೀನಿ: ಬಿಆರ್ ಪಾಟೀಲ್

    ಸಿದ್ದರಾಮಯ್ಯ ಆಳಂದದಿಂದ ಸ್ಪರ್ಧಿಸಿದ್ರೆ ಕ್ಷೇತ್ರ ತ್ಯಾಗ ಮಾಡ್ತೀನಿ: ಬಿಆರ್ ಪಾಟೀಲ್

    – ಅವರನ್ನು ಗೆಲ್ಲಿಸಿಕೊಂಡು ಬರೋ ಜವಾಬ್ದಾರಿ ನನ್ನದು

    ಕಲಬುರಗಿ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ್ (BR Patil) ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎನ್ನುವ ಮೂಲಕ ಆಳಂದ (Aland) ಕ್ಷೇತ್ರಕ್ಕೆ ಆಹ್ವಾನವಿಟ್ಟಿದ್ದಾರೆ.

    ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಳಂದ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಬರಿ ನಾಮೀನೇಷನ್ ಫೈಲ್ ಮಾಡಿ ಹೋದರೆ ಸಾಕು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬದಂದು ಮತ್ತೆ ಮುನ್ನೆಲೆಗೆ ಬಂತು ಹಲಾಲ್ ಬಾಯ್ಕಾಟ್ ಅಭಿಯಾನ

    ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾದವರು. ಮತ್ತೊಮ್ಮೆ ಅವಕಾಶ ಸಿಕ್ಕರೆ ಅವರೇ ಸಿಎಂ ಆಗಲಿ. ಸಿದ್ದರಾಮಯ್ಯ ಆಳಂದದಿಂದ ಸ್ಪರ್ಧಿಸಿದರೆ, ನನಗೆ ಹಾಲು ಕುಡಿದಷ್ಟೇ ಸಂತೋಷವಾಗುತ್ತದೆ. ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಡಿನೋಟಿಫಿಕೇಶನ್‌ ಕೇಸ್‌ – ಅಧಿಕ ರಕ್ತದೊತ್ತಡ ಕಾರಣ ನೀಡಿ ಕೋರ್ಟ್‌ ವಿಚಾರಣೆಗೆ ಎಚ್‌ಡಿಕೆ ಗೈರು

  • ಮಾಜಿ ಶಾಸಕ ಬಿ.ಆರ್‌.ಪಾಟೀಲ್‍ಗೆ ಪತ್ರ ಬರೆದು ಕ್ಷಮೆ ಕೇಳಿದ ಡಿಕೆಶಿ

    ಮಾಜಿ ಶಾಸಕ ಬಿ.ಆರ್‌.ಪಾಟೀಲ್‍ಗೆ ಪತ್ರ ಬರೆದು ಕ್ಷಮೆ ಕೇಳಿದ ಡಿಕೆಶಿ

    ಬೆಂಗಳೂರು: ಮೇಕೆದಾಟು (Mekedatu) ಪಾದಯಾತ್ರೆ ವೇಳೆ ಅನುಚಿತ ವರ್ತನೆ ತೋರಿದ ಬಗ್ಗೆ ಮಾಜಿ ಶಾಸಕ ಬಿ.ಆರ್. ಪಾಟೀಲ್‍ಗೆ (B.R Patil) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar)ಪತ್ರ ಬರೆದು ಕ್ಷಮೆ ಕೇಳಿದ್ದಾರೆ.

    ಪತ್ರದಲ್ಲಿ ಏನಿದೆ?: ಮೇಕೆದಾಟು(Mekedatu)ಪಾದಯಾತ್ರೆ ವೇಳೆ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದ್ರೇ, ತಮ್ಮಂತಹ ಹಿರಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದನ್ನು ಕನಸು ಮನಸ್ಸಿನಲ್ಲಿ ಎಣಿಸಲು ಸಾಧ್ಯವಿಲ್ಲ.  ಇಂತಹ ಘಟನೆ ನಡೆದಿರುವುದು ನನಗೆ ಅರಿವಿಲ್ಲ. ಜನರ ನೂಕು ನುಗ್ಗಲು ವೇಳೆ ಏನಾದ್ರೂ ಅಚಾತುರ್ಯ ನಡೆದಿದ್ರೆ ವಿಷಾದಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ತಾವು ಹಿರಿಯ ನಾಯಕರು ಮತ್ತು ಪಕ್ಷ ನಿಷ್ಠೆಗೆ ಮಾದರಿಯಾಗಿರುವವರು. ಅದಲ್ಲದೆ ನನ್ನ ಆತ್ಮೀಯ ಸ್ನೇಹಿತರು ಮತ್ತು ಹಿತೈಷಿಗಳು. ತಮ್ಮ ಬಗ್ಗೆ ನಾನು ಅಪಾರ ಗೌರವ ಮತ್ತು ಅಭಿಮಾನ ಹೊಂದಿರುವುದನ್ನು ತಾವು ಬಲ್ಲಿರಿ. ಹೀಗಾಗಿ ತಮ್ಮ ಜೊತೆಗೆ ನಾನು ಅನುಚಿತವಾಗಿ ವರ್ತಿಸಲು ಸಾಧ್ಯವೇ ಇಲ್ಲ ಎನ್ನುವ ಅರಿವು ಕೂಡಾ ತಮಗೆ ಖಂಡಿತವಾಗಿ ಇದೆ. ಹೀಗಾಗಿ ಗೊತ್ತಿಲ್ಲದೆ ಏನಾದರೂ ಅಂತಹ ಪ್ರಸಂಗ ನಡೆದಿದ್ದರೆ, ಹಿರಿಯರಾದ ತಾವು ಅದನ್ನು ಮನಸ್ಸಿಗೆ ಹಚ್ಚಿಕೊಂಡು ಬೇಸರಿಸಬಾರದು ಎಂದು ವಿನಂತಿಸುತ್ತೇನೆ.

    ತಮಗೆ ತಿಳಿದಿರುವಂತೆ ನಾನು ಪಕ್ಷದ ಅಣತಿಯಂತೆ ಗೋವಾ ಚುನಾವಣೆಯ ಫಲಿತಾಂಶದ ನಂತರ ವಿದ್ಯಮಾನಗಳನ್ನು ನಿರ್ವಹಿಸುವ ಸಲುವಾಗಿ ಗೋವಾದಲ್ಲಿ ಇದ್ದೇನೆ. ಇಲ್ಲಿಂದ ಬಂದ ಬಳಿಕ ತಕ್ಷಣ ತಮ್ಮಲ್ಲಿ ಈ ಕುರಿತು ಮುಖತಃ ಮಾತನಾಡುತ್ತೇನೆ. ದಯವಿಟ್ಟು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬಾರದೆಂದು ಮತ್ತೊಮ್ಮೆ ವಿನಂತಿಸುತ್ತೇನೆ ಎಂದು ಬರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ ಆರ್ ಪಾಟೀಲ್, ಆದ ಅಚಾತುರ್ಯಕ್ಕೆ ಡಿಕೆಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

    ಟೋಪಿ ಕಿತ್ತೆಸೆದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಭವಿಷ್ಯದಲ್ಲಿ ಪಕ್ಷಕ್ಕೆ ಆಗಲಿರುವ ಹಾನಿಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿಕೊಟ್ಟಿದ್ರು. ಈ ವಿಚಾರ ರಾಹುಲ್ ಗಾಂಧಿವರೆಗೂ ಹೋಗಿತ್ತು.

  • ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

    ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

    ಬೆಂಗಳೂರು: ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ. ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ನೋಡಿ. ಆಗ ಗೊತ್ತಾಗುತ್ತದೆ ಜನರ ಸಮಸ್ಯೆ ಏನು ಅಂತ. ನಾವು ಯಾವ ಬೂಟ್, ವಾಚ್ ಬಟ್ಟೆ ಹಾಕ್ತೀವಿ ಅಂತ ಮಾಧ್ಯಮಗಳಿಗೆ ಹೇಳಬೇಕಾ? ಮಾಧ್ಯಮದವ್ರು ಏನ್ ಬೇಕಾದ್ರೂ ಮಾಡಬಹುದಾ ಎಂದು ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

    ವಿಧಾನಸಭೆಯಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು. 19 ವರ್ಷ ನನ್ನ ಜತೆಗಿದ್ದ ಹೆಂಡತಿ ನನ್ನನ್ನು ಪ್ರಶ್ನೆ ಮಾಡುವಂತಹ ಸ್ಥಿತಿ ತಂದಿದ್ದು ಮಾಧ್ಯಮಗಳು. ಕುಮ್ಮಿ, ಸಿದ್ದು, ಯಡ್ಡಿ ಅಂತಾ ತೋರಿಸ್ತಾರೆ. ಕೆಲ ನ್ಯೂಸ್ ಆಂಕರ್ ಗಳನ್ನು ನೋಡಬೇಕು. ಅಯ್ಯೋ… ಎಲ್ಲರೂ ಮುಗಿ ಬೀಳ್ತಾರೆ. ಏಕ ವಚನದಲ್ಲಿ ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿದರು.

    ಇವರೇನು ಬಾಹುಬಲಿಗಳಾ: ಅಳಂದದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಯಾರು ಎಲ್ಲಿ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ಟುಡಿಯೋದಲ್ಲಿ ನಾಲ್ಕು ಗೋಡೆಗಳ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ? ನಾವು ಸದನದಲ್ಲಿ ತೂಕಡಿಸಿದ್ರೂ ಸುದ್ದಿ ಮಾಡ್ತಾರೆ. ನಾವು ಮನುಷ್ಯರಲ್ಲವಾ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲಿ. ಆದ್ರೆ ಸ್ಟುಡಿಯೋದಲ್ಲಿ ಕುಳಿತು ಮಾತಾಡೋದಕ್ಕೆ ಇವರೇನು ಬಾಹುಬಲಿಗಳಾ ಎಂದು ಪ್ರಶ್ನಿಸಿದರು.

    ಮಾಧ್ಯಮದವರನ್ನು ಕಾನೂನು ಮೂಲಕ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಅವರೇ ದೂರುದಾರರು, ಅವರೇ ವಕೀಲರು ಕೊನೆಗೆ ಅವರೇ ಜಡ್ಜ್‍ಮೆಂಟ್ ಕೊಡ್ತಾರೆ ಎಂದು ಆರೋಪಿಸಿದರು.

    ತೇಜೋವಧೆ ಆಗ್ತಿದೆ: ಶಾಸಕ ಸುರೇಶ್ ಗೌಡ ಮಾತನಾಡಿ, ನಮ್ಮನ್ನು ಗೂಂಡಾಗಿರಿ, ರೌಡಿ ಎಂದು ಕರೆಯುತ್ತಾರೆ. ಗೂಂಡಾಗಿರಿ ಎನ್ನುವ ಪದಕ್ಕೆ ಅರ್ಥ ಏನು ಎಂದು ಪ್ರಶ್ನಿಸಿದರು. ಈ ವೇಳೆ ತುಮಕೂರು ಟೋಲ್ ಗಲಾಟೆಯನ್ನು ಪ್ರಸ್ತಾಪಿಸಿದ ಅವರು ಮ್ಯಾನೇಜರ್‍ಗೆ ಬೈಯ್ದು ಬಂದಿದ್ದು ಸತ್ಯ. ಪಬ್ಲಿಕ್ ಟಿವಿಯವರು ನನ್ನ ಪ್ರತಿಕ್ರಿಯೆ ಕೇಳಿದ್ರು. ಆ ಬಳಿಕ ಸುದ್ದಿ ಬೇರೆ ಚಾನೆಲ್ ಗಳಲ್ಲೂ ಬಂತು. ಬೇರೆ ಚಾನೆಲ್‍ಗಳು ನನ್ನ ರೌಡಿ ಶಾಸಕ ಅಂತಾ ತೋರಿಸಿದ್ರು. ನನ್ನ ಮೇಲೆ ತೇಜೋವಧೆ ನಡೆಯುತ್ತಿದೆ ಎಂದು ಹೇಳಿದರು.

    ನಮಗೂ ಗೌರವ ಇಲ್ವಾ: ಶಾಸಕ ರಾಜು ಕಾಗೆ ಮಾತನಾಡಿ, ಕಾಗೆ ಎಲ್ಲಿ ಹುಡುಕಿ ಅಂತಾ ಪದ ಬಳಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಪದ ಬಳಸಿದ್ದಾರೆ. ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು? ನನಗೂ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಕರಡಿ ಹಿಡಿಯುತ್ತೀರಾ. ಹುಲಿ ಹಿಡಿಯುತ್ತೀರಾ? ಕಾಗೆ ಹಿಡಿಯೋದಕ್ಕೆ ಆಗಲ್ವಾ ಅಂತಾ ತೋರಿಸಿದ್ರು. ನಾನು ಅವತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಗ ನನ್ನ ಹೆಣ್ಮಕ್ಕಳು ನನ್ನ ತಡೆದ್ರು. ನಮಗೂ ಮಾನ ಮರ್ಯಾದೆ, ಗೌರವ ಇಲ್ವಾ? ಮಾಧ್ಯಮಗಳ ಮೇಲೆ ನಿಯಂತ್ರಣ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದರು.

    ನಾಚಿಕೆಯಾಗ್ಬೇಕು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾತನಾಡಿ ಮಾಧ್ಯಮದವರ ಮೇಲೆ ಕೂಡ ಸಾಕಷ್ಟು ಆರೋಪ ಗಳು ಇವೆ. ಮಾಧ್ಯಮದಲ್ಲಿ ಇರೋರು ಎಲ್ಲರೂ ಸತ್ಯ ಹರಿಶ್ಚಂದ್ರರಾ? ಆದ್ರೆ ಇದುವರೆಗೂ ಒಂದೇ ಒಂದು ಸುದ್ದಿ ಬಗ್ಗೆ ಬರೆಯೋದಿಲ್ಲ. ಈ ಹಿಂದೆ ಪೆÇಲೀಸರನ್ನು ನಂಬಬಾರದು ಅಂತ ಮಾತು ಇತ್ತು. ಈಗ ನಮ್ಮ ಜೊತೆ ಇದ್ದು, ನಮ್ಮ ಜೊತೆ ಊಟ ಮಾಡಿ, ಬೆಳಿಗ್ಗೆ ನಮ್ಮ ಬಗ್ಗೆಯೇ ಸುದ್ದಿ ಬರೆಯುತ್ತಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರಾ.ಮಾಧ್ಯಮಗಳಿಗೆ ಥೂ ನಾಚಿಕೆಯಾಗಬೇಕು ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

    ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ವೈವಾಹಿಕ ಜೀವನ ಸರಿ ಆಗುತ್ತಿತ್ತು. ಆದರೆ ದೃಶ್ಯ ಮಾಧ್ಯಮದವರೇ ಅವರ ಸಂಬಂಧ ಹಾಳು ಮಾಡಿ, ಗಂಡ ಹೆಂಡತಿ ಬೇರೆ ಬೇರೆ ಮಾಡಿದ್ದಾರೆ. ಪತ್ರಕರ್ತರ ಆಗೋಕ್ಕೆ ಒಂದು ಅರ್ಹತೆ ಹಾಗು ಅನುಭವ ನಿಗದಿ ಮಾಡಬೇಕು ಎಂದು ಅವರು ಹೇಳಿದರು.

    https://www.youtube.com/watch?v=RplFyEPEAN4

  • ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಶಾಸಕ ಬಿಆರ್ ಪಾಟೀಲ್ ಉದ್ಧಟತನ: ಎಂಎಲ್‍ಎ ಸಾಹೇಬ್ರೆ ಇದೇನಾ ನಿಮ್ಮ ಸಂಸ್ಕಾರ?

    ಕಲಬುರಗಿ: ಜನಪ್ರತಿನಿಧಿಗಳಾಗಿದ್ದವರು ನಾವೇನ್ ಮಾಡ್ತಿದ್ದೇವೆ ಅನ್ನೋದನ್ನೇ ಮರೆತು ಬಿಡ್ತಾರೆ. ಅಧಿಕಾರದ ಮದ ಅವರ ಬಾಯಿಂದ ಏನ್ ಬೇಕಾದ್ರೂ ಮಾತಾಡಿಸಿ ಬಿಡುತ್ತೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ.

    ತಮ್ಮ ಮಾಜಿ ಆಪ್ತ ಸಹಾಯಕ ದೇವೇಂದ್ರ ಬಿರಾದಾರ್ ಕಾಮದಾಟದ ವರದಿ ಪ್ರಸಾರ ಮಾಡಿದ್ದಕ್ಕೆ ಆಳಂದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಕೆಂಡದಂತಾ ಕೋಪ ಮಾಡಿಕೊಂಡು ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ರೆಡ್ಡಿಗೆ ಕರೆ ಮಾಡಿ ಸಿಕ್ಕಾಪಟ್ಟೆ ರೇಗಾಡಿದ್ದಾರೆ.

    ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ನಿಂದಿಸಿದ್ರು. ನಿಮ್ಮ ಟಿವಿಯಲ್ಲಿ ಏನ್ ಸುದ್ದಿ ಹಾಕಿದ್ದೀರಾ. ನಿಮ್ಮ ಆಫೀಸಿಗೆ ಬರ್ತೀನಿ ಇರಿ ಅಂತಾ ಬೆದರಿಸಿದ್ರು. ಶಾಸಕರ ಈ ಧಮ್ಕಿ ಬಗ್ಗೆ ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಸುದ್ದಿ ಪ್ರಸಾರ ಮಾಡಿತ್ತು. ನಂತರ ಫೋನ್‍ಗೆ ಬಂದ ಸನ್ಮಾನ್ಯ ಪಾಟೀಲ್ರು ಸಂಜೆ 6 ಗಂಟೆಗೆ ನಾನೇ ಕಲಬುರಗಿಯ ನಿಮ್ಮ ಕಚೇರಿಗೆ ಬರ್ತೇನೆ ಅಂದ್ರು.

    ಕೊನೆಗೆ 1 ಗಂಟೆ ತಡವಾಗಿ ಕಚೇರಿಗೆ ಬಂದ ಶಾಸಕರು ಯಥಾ ಪ್ರಕಾರ ತಮ್ಮ ನಿಂದನಾತ್ಮಕ ಹೇಳಿಕೆಯನ್ನ ಸಮರ್ಥಿಸಿಕೊಂಡ್ರು. ನಾನು ಮನುಷ್ಯ ನಾನು ಉಪ್ಪು ತಿನ್ತೇನೆ. ನನ್ನ ಮಾನನಷ್ಟ ಮಾಡಿ ಟಿಆರ್‍ಪಿಗಾಗಿ ಹೀಗೆಲ್ಲಾ ಮಾಡ್ತೀರಾ ಅಂತ ಹೇಳಿ 10 ನಿಮಿಷವೂ ನಿಲ್ಲದೆ ಅಲ್ಲಿಂದ ನಡೆದೇ ಬಿಟ್ಟರು.

    ಆದ್ರೆ, ನಮ್ಮ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಹಾಗಾಗಿ, ನಮ್ಮ ಪ್ರತಿನಿಧಿ ಅವರ ಬೆನ್ನತ್ತಿ ಹೋದರೂ ಸಹ ಪಾಟೀಲರು ಕ್ಷಮೆಯನ್ನೂ ಕೇಳಲಿಲ್ಲ. ಬದಲಿಗೆ ತಮ್ಮ ನಿಲುವಿಗೆ ಅಂಟಿಕೊಂಡ್ರು.

    ನಮ್ಮ ಪಬ್ಲಿಕ್ ಟಿವಿ ವರದಿಗಾರ ಪ್ರವೀಣ್ ಜೊತೆ ಫೋನಿನಲ್ಲಿ ಮಾತನಾಡುವಾಗ,”ನಾನೇನು ನಿಮ್ಮ ಹೆಂಡ್ತಿ ಹಾಗೂ ಅವರ ಹೆಂಡ್ತಿಯನ್ನು ಗುತ್ತಿಗೆ ತೊಗೊಂಡಿದ್ದೀನಾ? ಬೆಳಗ್ಗೆ ಏನು ನ್ಯೂಸ್ ಮಾಡಿದಿಯಾ? ಒಂದು ಗಂಟೆಯಲ್ಲಿ ನಾನು ಆಫೀಸಿಗೆ ಬರ್ತಿನಿ. ನೀನಿರಬೇಕು ಬಂದು ನೋಡ್ತಿನಿ” ಎಂದು ಅವಾಜ್ ಹಾಕಿದ್ದರು.

    ಈ ವೇಳೆ ನಮ್ಮ ಪ್ರತಿನಿಧಿ ನನ್ನ ಹತ್ತಿರ ನೀವು ಶಿಫಾರಸ್ಸು ಮಾಡಿರುವ ಲೆಟರ್ ಇದೆ. ಬೇಕಾದರೆ ನಾನು ನಿಮಗೆ ಬೇಕಾದ್ರೆ ವಾಟ್ಸಪ್ ಮಾಡುತ್ತೇನೆ ಎಂದು ಹೇಳಿದ್ದಕೆ ಅವಾಚ್ಯ ಶಬ್ಧಗಳಿಂದ ಮಾತನಾಡುವ ಮೂಲಕ ತಮ್ಮ ನೈತಿಕ ಮಟ್ಟವನ್ನು ರಾಜ್ಯದ ಜನತೆಗೆ ತೋರಿಸಿದ್ದಾರೆ.

    ನಮ್ಮ ಕಚೇರಿಗೆ ಬಂದ ಶಾಸಕ ಬಿ.ಆರ್.ಪಾಟೀಲ್ ಏನು ಸಮರ್ಥನೆ ನೀಡಿದ್ರು? ಅದಕ್ಕೂ ಮೊದಲು ವರದಿಗಾರನಿಗೆ ಹೇಗೆ ಬೆದರಿಕೆ ಹಾಕಿದ್ರು ಎನ್ನುವುದಕ್ಕೆ ಇಲ್ಲಿ ವಿಡಿಯೋವನ್ನು ನೀಡಲಾಗಿದ್ದು, ನೀವು ವೀಕ್ಷಿಸಬಹುದು.

    ಇದನ್ನೂ ಓದಿ:  ಕಲಬುರಗಿ: ಕಾಮದಾಟಕ್ಕೆ ಪ್ರಿಯಕರನನ್ನ ಶಾಲೆಗೆ ಕರೆಸಿದ ಶಿಕ್ಷಕಿ!