ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮಾಸ್ ಲೀಡರ್. ನನ್ನ ಮತ್ತು ಅವರ ಸಂಬಂಧ ಹಾಳು ಮಾಡಲು ಉದ್ದೇಶಪೂರ್ವಕವಾಗಿ ಯತ್ನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ (BR Patil) ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ: ಸಿದ್ದರಾಮಯ್ಯ (Siddaramaiah) ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದಾರೆ ಎಂಬ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ (BR Patil) ಸಮರ್ಥಿಸಿಕೊಂಡಿದ್ದಾರೆ.
ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಿಂದ (JDS) ಬಿಟ್ಟು ಬಂದ 8 ಶಾಸಕರಲ್ಲಿ ನಾನು ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ (Congress) ಸೇರಿದ್ದೇವೆ. ಈ ಪೈಕಿ ಕೆಲವರು ಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿದ್ದಾರೆ ಎಂದರು.
ರಾಜ್ಯದಲ್ಲಿ ಅಪಸ್ವರ ಎದ್ದಿದ್ದಕ್ಕೆ ಸುರ್ಜೇವಾಲಾ ಬಂದಿದ್ದರು. ಶಾಸಕರ ನೋವು ಏನಿದೆ ಎಂದು ತಿಳಿದುಕೊಳ್ಳಲು ನನ್ನನ್ನು ಕರೆಸಿದ್ದರು. ನಾನು 45 ನಿಮಿಷ ಮಾತನಾಡಿ ಎಲ್ಲಾ ವಿವರ ನೀಡಿದ್ದೇನೆ. ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ. ಮುಂದೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು.ಇದನ್ನೂಓದಿ: ಸಿದ್ದರಾಮಯ್ಯಲಕ್ಕಿಲಾಟರಿಹೊಡೆದುಬಿಟ್ಟ, ಸಿಎಂಆಗ್ಬಿಟ್ಟ–ಬಿ.ಆರ್ ಪಾಟೀಲ್
ನಾನು ಸಿದ್ದರಾಮಯ್ಯ ರೈತ ಚಳುವಳಿ ಮೂಲಕ ಬಂದಿದ್ದೇವೆ. ನಂಜುಂಡಸ್ವಾಮಿ ಅವರು ಹುರಿದುಂಬಿಸಲಿಲ್ಲ ಎಂದರೆ ಸಿದ್ದರಾಮಯ್ಯ ರಾಜಕೀಯಕ್ಕೆ ಬರುತ್ತಿರಲಿಲ್ಲ. ಕೆಲವರಿಗೆ ಗಾಡ್ ಇದ್ದರೆ ಕೆಲವರಿಗೆ ಗಾಡ್‌ಫಾದರ್ ಇದ್ದಾರೆ. ನನಗೆ ಗಾಡ್ ಇಲ್ಲ, ಗಾಡ್‌ಫಾದರ್ ಇಲ್ಲ, ಸಿದ್ದಾಂತವೇ ನನ್ನ ಗಾಡ್‌ಫಾದರ್ ಎಂದು ವಂಗ್ಯವಾಡಿದರು.
ಸಿಎಂ ಬದಲಾವಣೆ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಡಿಕೆ ಶಿವಕುಮಾರ್ ಸಿಎಂ ಆಗುವುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ನಾಯಕತ್ವದ ವಿಚಾರದ ಬಗ್ಗೆ ಸುರ್ಜೇವಾಲಾ ಮಾತಾಡಿಲ್ಲ. ಸಿದ್ದರಾಮಯ್ಯ ಮೇಲೆ ಕೆಲ ವಿಚಾರ ಅದರಲ್ಲೂ ಅನುದಾನ ನೀಡುವ ವಿಚಾರದಲ್ಲಿ ನನಗೆ ಬೇಸರ ಇದೆ.ಇದನ್ನು ಹೈಕಮಾಂಡ್ ಬಳಿಯೂ ಹೇಳಿಕೊಂಡಿದ್ದೇವೆ ಎಂದರು.
ಬೆಂಗಳೂರು: ಬಹಿರಂಗ ಹೇಳಿಕೆ ನೀಡುವ ಕಾಂಗ್ರೆಸ್ (Congress) ಶಾಸಕರೇ ಹುಷಾರ್. ಕೈ ಕಟ್ಟಿ ಬಾಯಿ ಮುಚ್ಚಿ. ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ. ಹೈಕಮಾಂಡ್ ಆದೇಶದ ಬೆನ್ನಲ್ಲೇ ಕೆಲ ಶಾಸಕರು ಸೈಲೆಂಟ್ ಆಗಿದ್ದು, ಸಿಎಂ, ಡಿಸಿಎಂ ಅಲರ್ಟ್ ಆಗಿದ್ದಾರೆ.
ಭ್ರಷ್ಟಾಚಾರ ಆರೋಪ, ಕಮಿಷನ್ ಕಿತ್ತಾಟ, ಸಚಿವರ ಅಸಹಕಾರದ ಬಗ್ಗೆ ಕಾಂಗ್ರೆಸ್ ಶಾಸಕರ ಅಸಹನೆ ಜೋರಾಗಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಹಾಗಾಗಿ ಮಂಗಳವಾರ ಡೆಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರು ಸಿಎಂ ಮೂಲಕ ವಾರ್ನಿಂಗ್ ಕಾಲ್ ರವಾನಿಸಿದ್ದಾರೆ. ಇವತ್ತು ವೇಣುಗೋಪಾಲ್ ಭೇಟಿ ವೇಳೆಯಲ್ಲೂ ಸಿಎಂಗೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್
ಇದು ಒಳ್ಳೆ ಬೆಳವಣಿಗೆಯಲ್ಲ. ಇದು ಪಕ್ಷದ ಇಮೇಜ್‌ಗೆ ಡ್ಯಾಮೇಜ್, ಸರ್ಕಾರಕ್ಕೂ ಕೆಟ್ಟ ಹೆಸರು. ಮೊದಲು ಬಾಯಿ ಬಂದ್ ಮಾಡಿ ಎಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಈ ನಡುವೆ ಇವತ್ತು ಬಿ.ಆರ್.ಪಾಟೀಲ್ ಕರೆದು ಸಿಎಂ ಎಚ್ಚರಿಕೆ ಕೊಡುವ ಸಾಧ್ಯತೆ ಇದ್ದು, ಜಮೀರ್ ಉಪಸ್ಥಿತಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ ಜುಲೈ ಮೊದಲ ವಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲು ಚಿಂತಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್
ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಗಂಡಸರಿಗೆ ಸಮಸ್ಯೆ ಆಗುತ್ತಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ (RV Deshpande) ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಚೆನ್ನಾಗಿದೆ. ಸಮಸ್ಯೆಯನ್ನು ಸ್ವಲ್ಪ ಸರಿ ಮಾಡಬೇಕು. ಶಕ್ತಿ ಯೋಜನೆಯಿಂದ ಬಸ್‌ನಲ್ಲಿ ಬರೀ ಹೆಂಗಸರೇ ತುಂಬಿರುತ್ತಾರೆ. ಗಂಡಸರ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದ ಬಸ್‌ನಲ್ಲಿ ಗಂಡಸರಿಗೆ ಸಮಸ್ಯೆ ಆಗುತ್ತಿದೆ. ಅಪ್ಪಿತಪ್ಪಿ ಹೆಂಗಸರಿಗೆ ಕೈ ತಾಗಿದರೆ ಏನೆಲ್ಲಾ ಸಮಸ್ಯೆ ಆಗಬಹುದು. ಇದನ್ನು (ಯೋಜನೆ) ಸೀಮಿತಗೊಳಿಸಿದರೆ ಸಮಸ್ಯೆ ಸರಿ ಹೋಗಬಹುದು ಎಂದರು. ಇದನ್ನೂ ಓದಿ: ಕದನ ವಿರಾಮ ಉಲ್ಲಂಘನೆ; ‘ಫ..’ 4 ಪದದ ಆಕ್ಷೇಪಾರ್ಹ ಪದ ಬಳಸಿ ಇಸ್ರೇಲ್-ಇರಾನ್‌ಗೆ ಟ್ರಂಪ್ ತರಾಟೆ
ಶಾಸಕರು ಸಚಿವರನ್ನು ಭೇಟಿಯಾಗಬೇಕು. ಶಾಸಕರ ಸಮಸ್ಯೆ ಇದ್ದರೆ ಅದನ್ನ ಸರಿ ಮಾಡಬೇಕು. ಬಿಆರ್ ಪಾಟೀಲ್ (BR Patil) ಹಿರಿಯರು. ಅವರು ಅಭಿಪ್ರಾಯ ಪಡೆಯಲು ಮಾಧ್ಯಮಗಳಲ್ಲಿ ಹೇಳಬಾರದಿತ್ತು. ಸಿಎಂ ಗಮನಕ್ಕೆ ತಂದು ಈ ತರಹ ಆಗುತ್ತಿದೆ ಎಂದು ಹೇಳಬೇಕಿತ್ತು. ಸಿಎಂಗೆ ಈ ಬಗ್ಗೆ ಮಾಹಿತಿ ಕೊಡಬೇಕಿತ್ತು. ಆಗಲೂ ಸಿಎಂ, ಮಂತ್ರಿಗಳು ಸ್ಪಂದನೆ ಮಾಡದೇ ಹೋದರೆ ಹೀಗೆ ಮಾಡಬಹುದಿತ್ತು. ಸಿಎಂ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತಾಡಬೇಕು. ಇದಕ್ಕೆ ಆಡಳಿತ ವ್ಯವಸ್ಥೆ ಕೆಟ್ಟಿದೆ ಎಂದು ಹೇಳೋದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಾತ್‌ರೂಮಲ್ಲೇ ವ್ಯಕ್ತಿಯ ಬರ್ಬರ ಹತ್ಯೆ – ಕೊಲೆ ಫೋಟೋ ಇನ್ಸ್ಟಾದಲ್ಲಿ ಹಾಕಿ ‘ಜಾಲಿ ಜಾಲಿ’ ಎಂದು ಬರೆದ ಆರೋಪಿ
ಕಲಬುರಗಿ: ನಾನು ಕದನ ಭೂಮಿಯಿಂದ ಓಡಿ ಹೋಗುವವನಲ್ಲ. ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ. ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Housing Corporation) ಹಗರಣದ ಆರೋಪದಿಂದ ಹಿಂದೆ ಸರಿಯಲ್ಲ ಎಂದು ಕಲಬುರಗಿಯಲ್ಲಿ ಶಾಸಕ ಬಿಆರ್ ಪಾಟೀಲ್ (BR Patil) ಸ್ಪಷ್ಟಪಡಿಸಿದರು.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಹೇಳಿರುವ ಹೇಳಿಕೆ ಸರಿಯಾಗಿದೆ ಎಂದು ರಾಜು ಕಾಗೆ ಸಹ ಹೇಳಿದ್ದಾರೆ. ನನಗೂ ಮೊದಲೇ ಆರು ತಿಂಗಳ ಹಿಂದೆಯೇ ಶಾಸಕಾಂಗ ಸಭೆಯಲ್ಲಿ ಏನು ಹೇಳಬೇಕು ಅದನ್ನು ಆಗಲೇ ಹೇಳಿದ್ದಾರೆ. ಇನ್ನೂ ಹಲವರು ಇದರ ಬಗ್ಗೆ ಮಾತನಾಡುವವರಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ನಲ್ಲಿ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ
ಎಂವೈ ಪಾಟೀಲ್ ಏನೋ ಉಲ್ಟಾ ಹೊಡಿದ್ದಿದ್ದಾರೆ ಅಂತೇ, ತಮ್ಮ ಕ್ಷೇತ್ರದದಲ್ಲಿ ಏನು ಆಗಿಲ್ಲವೆಂದು ಹೇಳಿದ್ದಾರಂತೆ. ಆದರೆ, ಅವರ ಕ್ಷೇತ್ರದ ಜನರು ನನಗೆ ಕರೆ ಮಾಡಿದ್ದಾರೆ ಎಂದು ದೂರವಾಣಿ ಕರೆ ಮಾಡಿದವರ ಲಿಸ್ಟ್ ಓದಿದರು. ಇದೇ ವೇಳೆ ಬಿ.ಆರ್.ಪಾಟೀಲ್ ಪಕ್ಕದಲ್ಲಿದ್ದ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಸಹ ಅಸಮಧಾನ ವ್ಯಕ್ತಪಡಿಸಿ, ನನಗೂ ಮಾಹಿತಿ ಇಲ್ಲದೆ, ನನ್ನ ಕ್ಷೇತ್ರದಲ್ಲೂ ಕೆಆರ್‌ಐಡಿಎಲ್ ಕೈಗೊಳ್ಳುವ ಕಾಮಗಾರಿ ಉದ್ಘಾಟನೆಯಾಗುತ್ತಿವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ – ಸಿಎಂ, ಜಮೀರ್ ರಾಜೀನಾಮೆಗೆ ರವಿಕುಮಾರ್ ಆಗ್ರಹ
ಸಿಎಂ ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತ. ಹಿಂದೇ ಯಾವ ರೀತಿ ಪ್ರೀತಿಯಿಂದ ಇದ್ದರೋ, ಈಗಲೂ ಅದೇ ರೀತಿಯ ಪ್ರೀತಿಯಿಂದ ಇದ್ದಾರೆ. ನನಗೆ ಕರೆ ಮಾಡಿ, ರಾಯಚೂರು ಬರಲು ಹೇಳಿದರು. ಆದರೆ, ಅಲ್ಲಿ ಆಹ್ವಾನವಿಲ್ಲ ನಾನು ಬರಲ್ಲ ಎಂದು ಹೇಳಿದ್ದೇನೆ. ಅದಕ್ಕೆ, ದೆಹಲಿ ಹೋಗಿ ಬರುತ್ತೇನೆ. ಆಗ ಬಂದು ಭೇಟಿ ಆಗಲು ಹೇಳಿದ್ದಾರೆ. ಜೂನ್ 25ರಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ
ಕಲಬುರಗಿ: ವಸತಿ ಇಲಾಖೆಯಲ್ಲಿನ ಲಂಚದ (Housing Department Corruption) ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಈಗ ಶಾಸಕ ಬಿಆರ್ ಪಾಟೀಲ್ (BR Patel) ಅವರಿಗೆ ಬುಲಾವ್ ನೀಡಿದ್ದಾರೆ.
ಕಳೆದ ವರ್ಷ ವಾಲ್ಮೀಕಿ (Valmiki Scam) ನಿಗಮದ ಹಗರಣ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರ ಕೂಡ ಉಂಟು ಮಾಡಿತ್ತು. ಈಗ ಬಿ.ಆರ್.ಪಾಟೀಲ್, ತಮ್ಮ ಸರ್ಕಾರದಲ್ಲಿನ ಭ್ರಷ್ಟಾಚಾರ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡಿ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಇದನ್ನೂ ಓದಿ: ಲೇಡಿ ಕಿಲ್ಲರ್‌ನಿಂದ ಇರಾನ್ ನಾಶ – ಇಸ್ರೇಲ್ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!
ವಸತಿ ಇಲಾಖೆ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದ ಬಿ.ಆರ್ ಪಾಟೀಲ್ ಇದೀಗ ಮೈನಾರಿಟಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನ ಬಿಚ್ಚಿಟ್ಟಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನಿಲ್ಲ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದೆ.
ಕಲಬುರಗಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆ ಹಂಚಿಕೆ (Rajiv Gandhi Housing Scheme) ವಿಚಾರದಲ್ಲಿ ಹಗರಣ ನಡೆದಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್ ಪಾಟೀಲ್ (BR Patil) ಅವರ ಆಡಿಯೋವೊಂದು ಕಳೆದ ಮೂರು ದಿನಗಳಲ್ಲಿ ಹಿಂದೇ ವೈರಲ್ ಆಗಿ, ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿತ್ತು. ಇದೀಗ, ನನ್ನ ಕ್ಷೇತ್ರದಲ್ಲಿ ನನಗೆ ತಿಳಿಯದೆ ಕಾಮಗಾರಿಗಳು ನಡೆಯುತ್ತಿವೆ ಎನ್ನುವ ಮೂಲಕ ಬಿ.ಆರ್ ಪಾಟೀಲ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಖುದ್ದು ನನ್ನ ಕ್ಷೇತ್ರದಲ್ಲಿ ನನಗೆ ಗೊತ್ತಿಲ್ಲದೇ ಕೆಲವು ಸರ್ಕಾರಿ ಕಾಮಗಾರಿ ನಡೆಯುತ್ತಿವೆ. ನನ್ನ ಕ್ಷೇತ್ರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗುತ್ತಿದೆ. ಅಲ್ಪಸಂಖ್ಯಾತ ಇಲಾಖೆಯಿಂದ 17 ಕೋಟಿ ರೂ. ಹಣ ಬಂದಿದೆ. ಕಾಮಗಾರಿ ಸಹ ಶುರುವಾಗಿದೆ. ಗುದ್ದಲಿ ಪೂಜೆಗೂ ನನಗೆ ಕರೆಯದೇ, ಶಿಷ್ಟಾಚಾರದ ಉಲ್ಲಂಘನೆ ಮಾಡಲಾಗಿದೆ. ಒಬ್ಬ ಶಾಸಕನಾಗಿ ಹಣ ಬಂದಿರುವುದು, ಕೆಲಸ ಶುರುವಾಗಿರುವುದು ನನಗೆ ತಿಳಿದೇ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೇ, ನನ್ನ ಕ್ಷೇತ್ರದಲ್ಲಿ ಮೌಲಾನ ವಸತಿ ಶಾಲೆ, ಕಾಂಪೌಂಡ್ ಕಟ್ಟಿಸಲಾಗಿದೆ. ಆದರೂ, ಅಲ್ಪಸಂಖ್ಯಾತರ ಇಲಾಖೆಯಿಂದ 17 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರ ಬಗ್ಗೆ ನನಗೆ ಗೊತ್ತೇ ಇಲ್ಲ. ಹಣ ಬಿಡುಗಡೆ ಮಾಡಲಾಗಿದೆ ಎಂದು ನನಗೆ ತಿಳಿಸಿದರೆ, ಕೆಕೆಆರ್‌ಡಿಬಿ ತಂದ ಅನುದಾನ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದೆ. ಆದರೆ ಮೈನಾರಿಟಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಮಾಹಿತಿಯೇ ಇಲ್ಲ ಎಂದರು.
ಆಡಿಯೋ ವೈರಲ್ ಹೇಗಾಯ್ತು ಗೊತ್ತಿಲ್ಲ:
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ಮಾತಾಡಿದ್ದು ನಿಜ. ಸರ್ಫರಾಜ್ ಖಾನ್‌ಗೆ ಒಂದು ಮನವಿ ಮಾಡಲು ಫೋನ್ ಮಾಡಿದ್ದೆ. ಈ ಹಿಂದೇ ಹೇಳಿದ್ದರೂ ಮನೆಗಳು ಮಂಜೂರು ಆಗಿರಲಿಲ್ಲ. ಅದಕ್ಕೆ ಮತ್ತೊಮ್ಮೆ ಫೋನ್ ಮಾಡಿ ಮಾತಾಡಿದ್ದೇನೆ. ನನ್ನ ಫೋನ್‌ನಿಂದಲೇ ಮಾತಾಡಿದ್ದೇವೆ. ಆದರೆ ಆಡಿಯೋ ಲೀಕ್ ಹೇಗಾಯ್ತು ಎಂದು ಗೊತ್ತಿಲ್ಲ. ನಾವು ಲೆಟರ್ ಕೊಟ್ಟು ಸುಸ್ತಾದೆವು. ಮನೆಗಳು ಮಂಜೂರು ಮಾಡಲಿಲ್ಲ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೇಳಿದರು ಲೇಟರ್ ಹೆಡ್ ಕೊಟ್ಟಿದ್ದೆ. ಅವರಿಗೆ ಮನೆ ಕೊಟ್ಟರು. ಈ ವಿಚಾರಕ್ಕಾಗಿ ನಾನು ಫೋನ್ ಮಾಡಿ ಮಾತಾಡಿದ್ದು. ಆಡಿಯೋದಲ್ಲಿ ನಾನು ಯಾರ ಹೆಸರನ್ನ ಉಲ್ಲೇಖ ಮಾಡಿರಲಿಲ್ಲ. ಯಾವ ಸಚಿವರ ಹೆಸರನ್ನ ತೆಗೆದುಕೊಂಡಿಲ್ಲ. ಈ ಕುರಿತು ತನಿಖೆಯಾದರೇ ಆಗಲಿ ನನ್ನದೇನೂ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಆರೋಪಕ್ಕೆ ಯಾಕೆ ಇಷ್ಟು ಮಹತ್ವ:
ಸಚಿವ ಕೃಷ್ಣಾಭೈರೆಗೌಡ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಜನರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದರೆ ಅಷ್ಟು ಗಂಭೀರವಾಗಿ ಚರ್ಚೆಯಾಗಲಿಲ್ಲ. ಅದೇ ನಾನು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ಮಾತಾಡಿದ್ದೇನೆ ಅಷ್ಟೇ. ಇಷ್ಟು ಗಂಭೀರವಾಗಿ ಚರ್ಚೆ ಆಗುತ್ತದೆ ಎಂದು ಗೊತ್ತಿರಲಿಲ್ಲ. ನಾನೇ ಮಾತಾಡಿದ್ದೇನೆ ಎಂದು ಈಗಾಗಲೇ, ಹೇಳಿದ್ದೇನೆ. ಯಾರೋಬ್ಬ ವ್ಯಕ್ತಿ ಹೆಸರು ತೆಗೆದುಕೊಂಡು ನಾನು ಮಾತಾಡಿಲ್ಲ ಎಂದು ಹೇಳಿದರು.
ಆಡಿಯೋ ವೈರಲ್ ವಿಚಾರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಪತ್ರ ಬರೆದಿಲ್ಲ. ಈ ಕುರಿತು ಮಾತನಾಡಲು ಸಿಎಂ ಕರೆದರೆ ಹೋಗುತ್ತೇನೆ. ಇಲ್ಲಿವರೆಗೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನನಗೆ ಕರೆದಿಲ್ಲ. ಕರೆದರೆ ಹೋಗಿ ಮಾತನಾಡುತ್ತೇನೆ ಎಂದರು.
ಬೆಂಗಳೂರು: ವಸತಿ ಇಲಾಖೆಯಲ್ಲಿ (Karnataka Housing Department) ಯಾರು ಲಂಚ ಕೇಳುತ್ತಿದ್ದಾರೆ ಎಂಬುದರ ಬಗ್ಗೆ ಬಿ.ಆರ್. ಪಾಟೀಲ್ (BR Patil) ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಪ್ರತಿಕ್ರಿಯಿಸಿದ್ದಾರೆ.
ವಸತಿ ಇಲಾಖೆಯಿಂದ ಸರ್ಕಾರಿ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಬಿಆರ್ ಪಾಟೀಲರು ಯಾವ ಅರ್ಥದಲ್ಲಿ ಹೇಳಿದ್ದಾರೆ ಮತ್ತು ಭ್ರಷ್ಟಚಾರ ಆರೋಪವನ್ನ ನೇರವಾಗಿ ಹೇಳಿಲ್ಲ. ಯಾರು ಲಂಚ ಕೇಳ್ತಿದಾರೆ ಅಂತಾ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರ ಬಾಂಬ್; ಜಮೀರ್ ಪಿಎ – ಬಿ.ಆರ್ ಪಾಟೀಲ್‌ರದ್ದು ಎನ್ನಲಾದ ಆಡಿಯೋ ವೈರಲ್
ಇದೇ ವೇಳೆ ವಸತಿ ಯೋಜನೆಗಳ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಲ್ಪಸಂಖ್ಯಾತ ಸಮುದಾಯಗಳಿಗೆ ಮನೆ ಇಲ್ಲವೆಂದಾಗ ಕೊಡಬೇಕಾಗುತ್ತದೆ. ಇದರಲ್ಲಿ ಧರ್ಮಾಧರಿತ ಪ್ರಶ್ನೇಯೇ ಬರುವುದಿಲ್ಲ. ನಿರ್ಗತಿಕರಿಗೆ ಮನೆಗಳನ್ನು ನೀಡಬೇಕಾಗುತ್ತದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಉಡುಪಿ | ಹೆಂಡತಿ ಹೆಚ್ಚು ಮೊಬೈಲ್ ಬಳಸ್ತಾಳೆ ಅಂತ ಕಡಿದು ಕೊಂದ ಪತಿ!
ಇದರಲ್ಲಿ 15-20% ಎಂಬ ಪ್ರಶ್ನೆ ಉದ್ಭವ ಆಗುವುದಿಲ್ಲ. ಯಾರಿಗೆ ಮನೆ ಇಲ್ಲ ಅವರಿಗೆ ಮನೆ ನೀಡಬೇಕಾಗುತ್ತದೆ. ಇಲ್ಲಿ ಧರ್ಮಧಾರಿತ ಪ್ರಶ್ನೆಯೇ ಬರುವುದಿಲ್ಲ. ಈವರೆಗೂ ಪರಿಶಿಷ್ಟರರಿಗೆ ಕಡಿಮೆ ನಿವೇಶನ ಇತ್ತು. ಪರಿಶಿಷ್ಟರಿಗೆ ನಿವೇಶನ ಕೊಟ್ಟ ನಂತರ ಅವರ ಸಂಖ್ಯೆ ಕಡಿಮೆ ಆಯ್ತು. ಮುಂದೆ ಅದೇ ರೀತಿ ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪರಂ ಸಮರ್ಥನೆ ಮಾಡಿದರು.
ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆಳಂದ ಶಾಸಕ ಬಿಆರ್ ಪಾಟೀಲ್ (BR Patel) ಅವರ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ನಡೆಸಿ ಸಿಟ್ಟನ್ನು ಶಮನ ಮಾಡಿದ್ದಾರೆ.
ಅನುದಾನ ವಿಚಾರವಾಗಿ ನನಗೆ ಅಸಮಾಧಾನ ಇಲ್ಲ. ಗ್ಯಾರಂಟಿ (Congress Guarantee) ಕೊಟ್ಟ ಕಾರಣ ಅನುದಾನ ಸಿಗುತ್ತಿಲ್ಲ ಎನ್ನುವುದು ನನಗೂ ಗೊತ್ತಿದೆ. ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಸುಮ್ಮನಿದ್ದೆ. ಈಗ ಈ ವಿಚಾರ ಎತ್ತಿದ್ದೇನೆ ಎಂದು ತಿಳಿಸಿದರು.
ನೀವ್ಯಾಕೆ ಆ ಜಾಗವನ್ನು ಕೆಆರ್‌ಐಡಿಎಲ್ ಕೊಟ್ಟಿದ್ದು ಅಂತ ಕೃಷ್ಣಬೈರೇಗೌಡರು ನನಗೆ ಒಬ್ಬರಿಗೆ ಅಷ್ಟೇ ಅಲ್ಲ ಎಲ್ಲಾ ಶಾಸಕರಿಗೆ ಸವಾಲು ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆ ಜೊತೆ ಯಾವುದೇ ಮನಸ್ತಾಪ ಇಲ್ಲ. ತಂದೆಗೆ ಕೊಟ್ಟ ಗೌರವ ಪ್ರಿಯಾಂಕ್ ನನಗೆ ಕೊಡುತ್ತಾರೆ. ಕೃಷ್ಣ ಬೈರೇಗೌಡ ಜೊತೆಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.
ವಿಜಯಪುರ: ಸಿಎಂಗೆ ಬಿಆರ್ ಪಾಟೀಲ್ (BR Patil) ಅವರು ಪತ್ರ ಬರೆದಿದ್ದಾರೆ. ಸಿಎಂ ಅದರ ಬಗ್ಗೆ ನಿರ್ಣಯ ಮಾಡುತ್ತಾರೆ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda)ಹೇಳಿದ್ದಾರೆ.
ತನಿಖೆ ಮಾಡಿ ಎಂಬ ಬಿಆರ್ ಪಾಟೀಲ್ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ಇಲಾಖೆ ನನಗೆ ಸಂಬಂಧಿಸಿದ್ದಲ್ಲ. ನಾನು ಅದರ ಬಗ್ಗೆ ಮಾತ್ರ ಉತ್ತರ ನೀಡಿದ್ದೇನೆ. ತನಿಖೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು ಎಂದು ಹೇಳಿದರು. ಇದನ್ನೂ ಓದಿ: ಮೊದಲ ಬಾರಿಗೆ ಶಾಸಕರಾದವರಿಗೆ ನಿಗಮ-ಮಂಡಳಿ ಸ್ಥಾನ ಇಲ್ಲ: ಡಿಕೆಶಿ