Tag: ಬಿಆರ್‌ಎಸ್

  • ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    – ಸೋದರ ಸಂಬಂಧಿಗಳಿಂದ ಕುಟಂಬ ನಾಶಕ್ಕೆ ಯತ್ನ ಅಂತ ಕವಿತಾ ಆರೋಪ

    ಹೈದರಾಬಾದ್‌: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಮಾನತುಗೊಂಡ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ. ಕವಿತಾ (K Kavitha) ಮರುದಿನವೇ ಬಿಆರ್‌ಎಸ್‌ ಪಕ್ಷ (BRS Party) ತೊರೆದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ನ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

    ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ (CBI) ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನ ಮಂಗಳವಾರ (ಸೆ.2) ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್‌, ಅಫ್ಘಾನ್‌, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ

    ಬಹಳ ನೋವಾಗಿದೆ
    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ. ಕವಿತಾ ಅವರು, ಬಿಆರ್‌ಎಸ್‌ ಪಕ್ಷದಿಂದ ನನ್ನನ್ನ ಇದ್ದಕ್ಕಿದ್ದಂತೆ ಅಮಾನತುಗೊಳಿಸಿರುವುದು ಬಹಳ ನೋವಿನ ಸಂಗತಿ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದ ಜೊತೆಗೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಕಳುಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಮುಂದುವರಿದು.. ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಕೆಲಸ ಮಾಡಿದೆ ಜೊತೆಗೆ ಬಿಆರ್‌ಎಸ್ ಧ್ವಜ ಧರಿಸಿ ಕಾಂಗ್ರೆಸ್ ವಿರುದ್ಧ ಹೋರಾಟದಲ್ಲೂ ಕೆಲಸ ಮಾಡಿದೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ ಅಂತ ನನಗೆ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಯಾವುದೇ ಹುದ್ದೆ ಮೇಲೆ ದುರಾಸೆ ಇಲ್ಲ, ಬೇರೆ ಯಾವುದೇ ಪಕ್ಷದ ಜೊತೆಗೂ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಸೋದರಸಂಬಂಧಿಯೂ ಆಗಿರುವ ಬಿಆರ್‌ಎಸ್‌ನ ಹಿರಿಯ ನಾಯಕ ಟಿ ಹರೀಶ್ ರಾವ್ ಅವರ ಮೇಲೆ ಇನ್ನಷ್ಟು ಆರೋಪ ಮಾಡಿದರು. ಕಾಂಗ್ರೆಸ್‌ ಸಿಎಂ ರೇವಂತ್‌ ರೆಡ್ಡಿ (Revanth Reddy) ಹಾಗೂ ಹರೀಶ್‌ ರಾವ್‌ರಿಂದ ಕೆಎಸ್‌ಆರ್‌ ಕುಟುಂಬ ನಾಶಪಡಿಸಲು ಯತ್ನಿಸಿದ್ದಾರೆ. ಅದಕ್ಕಾಗಿ ನನ್ನ ತಂದೆ ಕೆಸಿಆರ್ ಮತ್ತು ಅವರ ಸಹೋದರ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರನ್ನ ಗುರಿಯಾಗಿಸಲು ಸಂಚು ರೂಪಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ರೇವಂತ್‌ ರೆಡ್ಡಿ ಅವರು ನನ್ನ ಕುಟುಂಬದ ಕೆಟಿಆರ್ ಮತ್ತು ಕೆಸಿಆರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ರು. ಆದರೆ ಹರೀಶ್ ರಾವ್ ವಿರುದ್ಧ ದಾಖಲಿಸಲಿಲ್ಲ. ಕಾಲೇಶ್ವರಂ (ನೀರಾವರಿ) ಯೋಜನೆ ಶುರುವಾದಾಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು. ಆದ್ರೂ ರೇವಂತ್ ರೆಡ್ಡಿ ಅವರ ವಿರುದ್ಧ ಮಾತನಾಡಲಿಲ್ಲ, ಇದು ಸಂಚು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಹರೀಶ್ ರಾವ್ ಮತ್ತು ಸಂತೋಷ್ ರಾವ್ ನಮ್ಮ ಕುಟುಂಬ ಮತ್ತು ಪಕ್ಷವನ್ನ ನಾಶಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  • ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್‌

    ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್‌

    ಹೈದರಾಬಾದ್: ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಹಾಗೂ ಎಂಎಲ್‌ಸಿ ಕೆ.ಕವಿತಾ (K.Kavitha) ಅವರನ್ನು ಬಿಆರ್‌ಎಸ್‌ನಿಂದ (BRS) ಅಮಾನತು ಮಾಡಲಾಗಿದೆ.

    ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಇದನ್ನೂ ಓದಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ ಅನಾವರಣ

    2014 ರಲ್ಲಿ ಬಿಆರ್‌ಎಸ್ ಅಧಿಕಾರದಲ್ಲಿದ್ದಾಗ ನೀರಾವರಿ ಸಚಿವರಾಗಿದ್ದ ಹರೀಶ್ ರಾವ್ ಅವರು ಅಪಾರ ಆಸ್ತಿಗಳಿಸಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಕಾಂಗ್ರೆಸ್‌ನ ಎ.ರೇವಂತ್ ರೆಡ್ಡಿ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಕವಿತಾ ಗಂಭೀರ ಆರೋಪ ಮಾಡಿದ್ದರು.

    ಮಾಜಿ ರಾಜ್ಯಸಭಾ ಸಂಸದ ಜೆ.ಸಂತೋಷ್ ಕುಮಾರ್ ಅವರ ಹೆಸರನ್ನು ಸಹ ಉಲ್ಲೇಖಿಸಿದ್ದಾರೆ. ಕೆಸಿಆರ್ ಅವರಿಗೆ ಭ್ರಷ್ಟಾಚಾರದ ಕಳಂಕ ಏಕೆ ಬಂತು ಎಂಬುದರ ಕುರಿತು ನಾವು ಯೋಚಿಸಬೇಕು. ಕೆಸಿಆರ್ ಅವರಿಗೆ ಹತ್ತಿರವಿರುವ ಕೆಲವರು ಅವರ ಹೆಸರನ್ನು ಬಳಸಿಕೊಂಡು ಹಲವು ರೀತಿಯಲ್ಲಿ ಲಾಭ ಪಡೆದಿದ್ದಾರೆ. ಅವರ ದುಷ್ಕೃತ್ಯಗಳಿಂದಾಗಿ ಇಂದು ಕೆಸಿಆರ್ ಅವರ ಹೆಸರು ಅಪಖ್ಯಾತಿಗೆ ಒಳಗಾಗುತ್ತಿದೆ ಎಂದು ಕವಿತಾ ಆರೋಪಿಸಿದ್ದರು. ಇದನ್ನೂ ಓದಿ: 232 ಕೋಟಿ ವಂಚನೆ ಪ್ರಕರಣ – ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮ್ಯಾನೇಜರ್‌ ಅರೆಸ್ಟ್‌

  • ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

    ನವದೆಹಲಿ: ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ತೆಲಂಗಾಣ (Telangana) ಸಿಎಂ ರೇವಂತ್ ರೆಡ್ಡಿ (Revanth Reddy) ಕ್ಷಮೆಯಾಚಿಸಿದ್ದಾರೆ.

    ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ನಾನು ದೃಢ ನಂಬಿಕೆಯುಳ್ಳವನು. ವರದಿಗಳಲ್ಲಿ ಬಿಂಬಿಸಲಾದ ಹೇಳಿಕೆಗಳಿಗೆ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಭಾರತ ಸಂವಿಧಾನ ಮತ್ತು ಅದರ ಸ್ವಾತಂತ್ರ‍್ಯದ ನನಗೆ ಗೌರವವಿದೆ ಮತ್ತು ಭವಿಷ್ಯದಲ್ಲಿಯೂ ಗೌರವವಿರುತ್ತದೆ ಆದ್ದರಿಂದ ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ರೇವಂತ್ ರೆಡ್ಡಿ ಹೇಳಿದ್ದೇನು?
    ಮಾಧ್ಯಮಗಳ ಜೊತೆ ಮಾತನಾಡಿದ್ದ ರೇವಂತ್ ರೆಡ್ಡಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ 15 ತಿಂಗಳ ಬಳಿಕ ಜಾಮೀನು ಸಿಕ್ಕಿತ್ತು. ಆಗ ಮುಖ್ಯಮಂತ್ರಿಗಳು ಇದನ್ನು ರಾಜಕೀಯ ನಾಟಕವೆಂದು ಕರೆದಿದ್ದರು. ಈಗ ಕವಿತಾ ಅವರಿಗೆ ಐದೇ ತಿಂಗಳಲ್ಲಿ ಜಾಮೀನು ಸಿಕ್ಕಿರುವ ಕುರಿತು ನನಗೆ ಅನುಮಾನವಿದೆ. ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ (K. Chandrashekar Rao) ನಡುವಿನ ಒಪ್ಪಂದದಿಂದ ಜಾಮೀನು ಸಿಕ್ಕಿರಬಹುದು ಎಂದು ಹೇಳಿಕೆ ನೀಡುವ ಮೂಲಕ ಸುಪ್ರೀಂ ಜಾಮೀನಿನ ಬಗ್ಗೆಯೇ ಅನಮಾನ ವ್ಯಕ್ತಪಡಿಸಿದ್ದರು.

    ಈ ಹೇಳಿಕೆಯ ಬಗ್ಗೆ ಗುರುವಾರ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿ, ಸಂವಿಧಾನಿಕ ಹುದ್ದೆಯಲ್ಲಿರುವ ನೀವು ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯೇ? ನಿಮ್ಮ ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಅನುಮಾನ ಮೂಡುತ್ತದೆ. ರಾಜಕೀಯ ಕಾರಣಗಳಿಗಾಗಿ ನಾವು ಏಕೆ ಆದೇಶವನ್ನು ನೀಡಬೇಕು? ನಿಮ್ಮ ರಾಜಕೀಯ ದ್ವೇಷಗಳ ನಡುವೆ ಏಕೆ ನ್ಯಾಯಾಲಯವನ್ನು ಎಳೆದು ತರುತ್ತೀರಿ ಎಂದು ಪ್ರಶ್ನಿಸಿ ರೇವಂತ್ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.

  • ತೆಲಂಗಾಣದಲ್ಲಿ 1,200ಕ್ಕೂ ಹೆಚ್ಚು ಫೋನ್‌ಗಳ ಕದ್ದಾಲಿಕೆ – ಚಾರ್ಜ್‌ಶೀಟ್‌ ಸಲ್ಲಿಕೆ, ಬಿಆರ್‌ಎಸ್‌ ನಾಯಕರ ಹೆಸರಿಲ್ಲ

    ತೆಲಂಗಾಣದಲ್ಲಿ 1,200ಕ್ಕೂ ಹೆಚ್ಚು ಫೋನ್‌ಗಳ ಕದ್ದಾಲಿಕೆ – ಚಾರ್ಜ್‌ಶೀಟ್‌ ಸಲ್ಲಿಕೆ, ಬಿಆರ್‌ಎಸ್‌ ನಾಯಕರ ಹೆಸರಿಲ್ಲ

    ಹೈದರಾಬಾದ್‌: ತೆಲಂಗಾಣದಲ್ಲಿ (Telangana) ಬಿರುಗಾಳಿ ಎಬ್ಬಿಸಿದ್ದ ಫೋನ್‌ ಟ್ಯಾಪಿಂಗ್‌ (Phones Tapping) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು 1,200ಕ್ಕೂ ಹೆಚ್ಚು ಫೋನ್‌ಗಳನ್ನು ಕದ್ದಾಲಿಕೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಿದ್ದಾರೆ.

    ಆರೋಪಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ಶೇಖರಣಾ ಸಾಧನಗಳನ್ನು ಹಾನಿ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂಬ ವಿಚಾರವನ್ನು ಹೈದರಾಬಾದ್ ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಚಾರ್ಜ್‌ಶೀಟ್‌ನಲ್ಲಿ ಯಾವೊಬ್ಬ ಬಿಆರ್‌ಎಸ್‌ ನಾಯಕರ (BRS Leaders) ಹೆಸರನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಯಿಂದಲೇ ದರ್ಶನ್ ಬ್ಯಾನ್ ಮಾಡಬೇಕು: ರೇಣುಕಾಸ್ವಾಮಿ ತಾಯಿ ಆಕ್ರೋಶ

     

    ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ ಪ್ರಣೀತ್ ರಾವ್, ಹೆಚ್ಚುವರಿ ಅಧೀಕ್ಷಕರಾದ ಭುಜಂಗ ರಾವ್ ಮತ್ತು ತಿರುಪತಣ್ಣ, ಮಾಜಿ ಉಪ ಪೊಲೀಸ್ ಆಯುಕ್ತ (ಟಾಸ್ಕ್ ಫೋರ್ಸ್) ರಾಧಾ ಕಿಶನ್ ರಾವ್ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಮಾಜಿ ವಿಶೇಷ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥ ಪ್ರಭಾಕರ ರಾವ್ ಮತ್ತು ಸ್ಥಳೀಯ ಮಾಧ್ಯಮ ಸಂಸ್ಥೆಯ ಹಿರಿಯ ಉದ್ಯೋಗಿ ಶ್ರವಣ್‌ ಕುಮಾರ್‌ ನಾಪತ್ತೆಯಾಗಿದ್ದಾರೆ.

    ಕಳೆದ ವರ್ಷ ಎ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಚಂದ್ರಶೇಖರ್‌ ರಾವ್‌ ನೇತೃತ್ವದ ಸರ್ಕಾರ ವಿರೋಧಿ ರಾಜಕೀಯ ಪಕ್ಷಗಳ ನಾಯಕರು, ಸೆಲೆಬ್ರಿಟಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಸೇರಿದಂತೆ ಹಲವಾರು ಉನ್ನತ ವ್ಯಕ್ತಿಗಳ ಫೋನ್ ಕದ್ದಾಲಿಕೆ ಮಾಡಲು ಅನುಮತಿ ನೀಡಿದ್ದು ತೆಲಂಗಾಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ತನ್ನ ಫೋನನ್ನೇ  ಕದ್ದಾಲಿಕೆ ಮಾಡಲಾಗಿದೆ ಎಂದು ಹಾಲಿ ಸಿಎಂ ರೇವಂತ್‌ ರೆಡ್ಡಿ ಆರೋಪಿಸಿದ್ದರು.

    ಈ ಸಂಬಂಧ ಮಾರ್ಚ್ 10 ರಂದು ಪ್ರಕರಣ ದಾಖಲಾಗಿದ್ದು, ಹೈದರಾಬಾದ್ ಪೊಲೀಸರು 90 ದಿನಗಳ ಒಳಗಡೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

     

  • ದೆಹಲಿ ಮದ್ಯ ನೀತಿ ಹಗರಣ –  ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌

    ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಅರೆಸ್ಟ್‌

    ಹೈದರಾಬಾದ್‌: ದೆಹಲಿ ಮದ್ಯ ನೀತಿ (Delhi Liquor Scam) ಹಗರಣದಲ್ಲಿ ಜಾರಿ ನಿರ್ದೇಶನಾಲಯ (ED) ಬಿಆರ್‌ಎಸ್‌ ನಾಯಕಿ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಟಿ ಚಂದ್ರಶೇಖರ ರಾವ್‌ (K Chandrachekhar Rao) ಅವರ ಪುತ್ರಿ ಕವಿತಾ (K Kavitha) ಅವರನ್ನು ಬಂಧಿಸಿದೆ.

    ಇಂದು ಕವಿತಾ ಅವರ ಹೈದರಾಬಾದ್‌ ನಿವಾಸದ ಮೇಲೆ ಇಡಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿತ್ತು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಜೆ ವೇಳೆ ವಿಧಾನ ಪರಿಷತ್‌ ಸದಸ್ಯೆಯಾಗಿರುವ  ಕವಿತಾ ಅವರನ್ನು ಬಂಧಿಸಿದ್ದಾರೆ.  ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್‌ ಪಿನ್‌ ಮಾರ್ಟಿನ್‌ ಯಾರು?

    ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಕವಿತಾ ಅವರು 100 ಕೋಟಿ ರೂಪಾಯಿ ಕಿಕ್‌ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.

    ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿತ್ತು. ಇದನ್ನೂ ಓದಿ: ಮಂಡ್ಯದಿಂದ ಮತ್ತೆ ನಿಖಿಲ್‌ ಸ್ಪರ್ಧೆ? – ಮಾರ್ಚ್‌ 25ಕ್ಕೆ ಘೋಷಣೆ ಸಾಧ್ಯತೆ

    ಕೆ.ಕವಿತಾ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ನಂಬರ್‌ಗಳನ್ನು ಬಳಸಿದ್ದಾರೆ. ಪೈಕಿ ಎರಡು ಸಿಮ್‌ಗಳನ್ನು ಹೆಚ್ಚು ಬಳಸಿದ್ದು, ಈ ಬಗ್ಗೆ ಸಂಭಾಷಣೆ ನಡೆಸಲು ಅವರು ಹತ್ತಕ್ಕೂ ಹೆಚ್ಚು ಬಾರಿ IMEI ಅನ್ನು ಬದಲಾಯಿಸಿದ್ದಾರೆ. ತನಿಖೆ ವೇಳೆ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ಗಳಲ್ಲಿ ಡೇಟಾವನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

    ಇಡಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಕೆ ಕವಿತಾ ಅವರ ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್‌ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

    ಏನಿದು ಮದ್ಯ ಹಗರಣ?
    ಪ್ರಕರಣದ ಆರೋಪಿಯಾಗಿರುವ ಮನೀಶ್ ಸಿಸೋಡಿಯಾ ಹಾಗೂ ಇತರರು 2021-22 ರ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅನುಮೋದನೆಯಿಲ್ಲದೇ ಪರವಾನಗಿದಾರರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನೀತಿಯಿಂದ ಲಾಭ ಪಡೆದ ಮದ್ಯ ವ್ಯಾಪಾರಿಗಳು ಸಿಸೋಡಿಯಾ ಆಪ್ತ, ಸಹಚರರಿಗೆ ಕೋಟ್ಯಂತರ ರೂ. ಪಾವತಿ ಮಾಡಿದ್ದಾರೆ ಎಂಬ ಆರೋಪ ಬಂದಿದೆ.

  • ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ತಡೆಗೋಡೆಗೆ ಕಾರು ಡಿಕ್ಕಿ- BRS ಶಾಸಕಿ ಲಾಸ್ಯ ನಂದಿತಾ ದುರ್ಮರಣ

    ಹೈದರಾಬಾದ್:‌ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿಯ (BRS) ಶಾಸಕಿ ಜಿ ಲಾಸ್ಯ ನಂದಿತಾ (G Lasya Nanditha) (37) ದುರ್ಮರಣಕ್ಕೀಡಾಗಿದ್ದಾರೆ.

    ಈ ಘಟನೆ ಇಂದು ಬೆಳಗ್ಗೆ 6.30ರ ಸುಮಾರಿಗೆ ಹೈದರಾಬಾದ್‌ನ (Hyderabad) ಹೊರವಲಯದಲ್ಲಿರುವ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಟಂಚೇರು ಎಂಬಲ್ಲಿ ಸಂಭವಿಸಿದೆ.

    ನಂದಿತಾ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ನಗರಕ್ಕೆ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಎಕ್ಸ್‌ಪ್ರೆಸ್‌ವೇಯ ಎಡಭಾಗದಲ್ಲಿರುವ ಲೋಹದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಶಾಸಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಕಾರು ಚಾಲಕನನ್ನು ಸಮೀಪದ ಪಟಂಚೇರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮಾಜಿ ಸಿಎಂ ಮನೋಹರ್ ಜೋಶಿ ನಿಧನ

    ನಂದಿತಾ ಅವರು ಫೆಬ್ರವರಿ 13 ರಂದು ಬಿಆರ್‌ಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮರ್ರಿಗುಡ ಜಂಕ್ಷನ್‌ನಲ್ಲಿ ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಪಾರಾಗಿದ್ದರು.

    ಬಿಆರ್‌ಎಸ್‌ನ ಮಾಜಿ ಶಾಸಕ ದಿವಂಗತ ಜಿ ಸಾಯಣ್ಣ ಅವರ ಪುತ್ರಿಯಾಗಿರುವ ನಂದಿತಾ ಅವರು ಕಳೆದ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದಿಂದ ಜಿ ವೆನ್ನೆಲ ಅವರನ್ನು ಸೋಲಿಸುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದರು.

  • ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

    ತೆಲಂಗಾಣದಲ್ಲಿ ಬಿಆರ್‌ಎಸ್‌ ಸೋಲು – ತನ್ನನ್ನು ತಾನೇ ಟ್ರೋಲ್‌ ಮಾಡಿಕೊಂಡ ಕೆಸಿಆರ್‌ ಪುತ್ರ

    ಹೈದರಾಬಾದ್: ತೆಲಂಗಾಣದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಆರ್‌ಎಸ್‌ ಪಕ್ಷಕ್ಕೆ ನಿರಾಸೆಯಾಗಿದೆ. ಪಕ್ಷದ ಹೀನಾಯ ಸೋಲನ್ನು ಕೆ.ಚಂದ್ರಶೇಖರ್‌ ರಾವ್‌ ಅವರ ಪುತ್ರ ಹಾಗೂ ಮಾಜಿ ಸಚಿವ ಕೆ.ಟಿ.ರಾಮ ರಾವ್‌ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ ತಮ್ಮನ್ನು ತಾವೇ ಟ್ರೋಲ್‌ ಮಾಡಿಕೊಂಡಿದ್ದಾರೆ.

    ಚುನಾವಣೆ ಫಲಿತಾಂಶಕ್ಕೂ ಮುನ್ನ ಕೆಟಿಆರ್ ಪೋಸ್ಟ್‌ ಮಾಡಿದ್ದ ಹಳೇ ಟ್ವೀಟ್‌ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಹಳೇ ಟ್ವೀಟ್‌ನಲ್ಲಿ, ಕ್ಯಾಮೆರಾದ ಕಡೆಗೆ ಗನ್ ತೋರಿಸುತ್ತಿರುವ ಚಿತ್ರವಿದೆ. ಈ ಹಳೆಯ ಪೋಸ್ಟ್‌ನ ಶೀರ್ಷಿಕೆಯಲ್ಲಿ, “ಹ್ಯಾಟ್ರಿಕ್ ಲೋಡಿಂಗ್ 3.0. ಸಂಭ್ರಮಿಸಲು ಸಿದ್ಧರಾಗಿ” ಎಂದು ಕೆಟಿಆರ್ ಬರೆದುಕೊಂಡಿದ್ದರು. ಇದನ್ನೂ ಓದಿ: ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು: ಮೋದಿ

    ಆದರೆ ಫಲಿತಾಂಶದ ನಂತರ ಸಚಿವರು ತಮ್ಮದೇ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇವನಿಗೆ ವಾಯಸ್ಸಾಗಿದೆ. ಗುರಿ ತಪ್ಪಿದೆ’ ಎಂದು ಬರೆದುಕೊಂಡಿದ್ದಾರೆ. ಪಕ್ಷದ ಸೋಲಿಗೆ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ.

    ಸಚಿವರ ಟ್ವೀಟ್‌ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್, ಎಷ್ಟೋ ಮಂದಿ ಸೋಲನ್ನು ಮನೋಹರವಾಗಿ ಸ್ವೀಕರಿಸುವುದಿಲ್ಲ. ಸೋಲಿನ ನಂತರವೂ ನಿಮ್ಮ ಹಾಸ್ಯಪ್ರಜ್ಞೆಯನ್ನು ನೀವು ಉಳಿಸಿಕೊಂಡಿರುವುದು ಒಳ್ಳೆಯದು’ ಎಂದು ರಿಯಾಕ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಲೋಕ ಸಮರಕ್ಕೆ ಬೂಸ್ಟ್‌ – ಸೆಮಿಫೈನಲ್‌ ಗೆದ್ದ ಮೋದಿ

    ‘ತಮ್ಮನ್ನು ತಾವೇ ಟ್ರೋಲ್‌ ಮಾಡಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮತ್ತೊಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ‘ಬೆಟರ್‌ ಲಕ್‌ ನೆಕ್ಸ್ಟ್‌ ಟೈಮ್‌’ ಎಂದು ಸಚಿವರ ಪೋಸ್ಟ್‌ಗೆ ಕಾಮೆಂಟ್‌ ಹಾಕಿದ್ದಾರೆ.

  • ಚುನಾವಣಾ ಫಲಿತಾಂಶದ ಬಗ್ಗೆ INDIA ಒಕ್ಕೂಟ ಇವಿಎಂ ಮಷಿನ್‌ಗಳನ್ನು ದೂರಿದರೆ ಆಶ್ಚರ್ಯವಿಲ್ಲ: ಅಜಿತ್ ಪವಾರ್

    ಚುನಾವಣಾ ಫಲಿತಾಂಶದ ಬಗ್ಗೆ INDIA ಒಕ್ಕೂಟ ಇವಿಎಂ ಮಷಿನ್‌ಗಳನ್ನು ದೂರಿದರೆ ಆಶ್ಚರ್ಯವಿಲ್ಲ: ಅಜಿತ್ ಪವಾರ್

    ಮುಂಬೈ: ವಿಧಾನಸಭೆ ಚುನಾವಣೆ (Assembly Election) ಫಲಿತಾಂಶದ ಕುರಿತು ಕೆಲವರು ಇವಿಎಂ ಮಷಿನ್‌ಗಳನ್ನು (EVM Machine) ದೂಷಿಸಿದರೆ ಆಶ್ಚರ್ಯವಿಲ್ಲ ಎಂದು ಮಹಾರಾಷ್ಟ್ರ (Maharashtra) ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಹೇಳಿದ್ದಾರೆ.

    ನಾಲ್ಕು ರಾಜ್ಯಗಳ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ (BJP) ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ತೆಲಂಗಾಣದಲ್ಲಿ (Telangana) ಕಾಂಗ್ರೆಸ್ (Congress) ಭಾರೀ ಮುನ್ನಡೆ ಸಾಧಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ. ಇಂಡಿಯಾ (INDIA) ಮೈತ್ರಿಕೂಟದ ಜನರು ಫಲಿತಾಂಶಗಳಿಗಾಗಿ ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರಗಳು) ದೂಷಿಸಲು ಪ್ರಾರಂಭಿಸಿದರೆ ಆಶ್ಚರ್ಯವಿಲ್ಲ ಎಂದರು. ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ: ಸಂಸದ ಮುನಿಸ್ವಾಮಿ

    ನಾನು ಹಿಂದೆ ಸರ್ಕಾರದಲ್ಲಿದ್ದಾಗ, ಇವಿಎಂಗಳನ್ನು ತಿದ್ದುಪಡಿ ಮಾಡುವುದು ಅಸಾಧ್ಯ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಕೇವಲ ಒಬ್ಬ ವ್ಯಕ್ತಿ ಇವಿಎಂಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಈ ಮೂರು ರಾಜ್ಯಗಳಲ್ಲಿ (ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ) ಇವಿಎಂಗಳನ್ನು ದೂಷಿಸಿದರೆ, ತೆಲಂಗಾಣದ ಬಗ್ಗೆ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್‌ ರೆಡ್ಡಿ ಈಗ ಕಾಂಗ್ರೆಸ್‌ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?

    ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಣ ಮತ್ತು ಅವರ ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿ ಬಿಆರ್‌ಎಸ್ (BRS) ಹಿಂದೆ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಅತಿಯಾದ ಆತ್ಮವಿಶ್ವಾಸವನ್ನು ತೋರಿಸಿದ್ದು, ತಮ್ಮ ಪಕ್ಷದ ನೆಲೆಯ ವಿಸ್ತರಣೆಗಾಗಿ ಮಹಾರಾಷ್ಟ್ರಕ್ಕೆ ಬಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಬೃಹತ್ ರ‍್ಯಾಲಿಗಳನ್ನು ನಡೆಸಿದರು ಮತ್ತು ಹಲವಾರು ಭರವಸೆಗಳನ್ನು ನೀಡಿದರು. ಆದರೆ ಅವರನ್ನು ಅವರ ಸ್ವಂತ ರಾಜ್ಯವೇ ತಿರಸ್ಕರಿಸಿದೆ. ಜನರ ತೀರ್ಮಾನವೇ ಸರ್ವೋಚ್ಚ ಎಂದರು. ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್‌ ಶಾಕ್‌

  • Election Results : ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭಾರೀ ಮುನ್ನಡೆ

    Election Results : ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಭಾರೀ ಮುನ್ನಡೆ

    ಹೈದಾರಾಬಾದ್‌: ತೆಲಂಗಾಣದಲ್ಲಿ (Telangana) ಕಾಂಗ್ರೆಸ್‌ಗೆ (Congress) ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.

    ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ (Revanth Reddy) ನಿವಾಸದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಕಾರ್ಯಕರ್ತರು ಸಿಹಿ ಹಂಚುತ್ತಿದ್ದಾರೆ.  ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ಬೆಳಗ್ಗೆ 10:15ರ ಟ್ರೆಂಡ್‌ ಪ್ರಕಾರ ಬಿಆರ್‌ಎಸ್‌ 50, ಕಾಂಗ್ರೆಸ್‌ 60, ಬಿಜೆಪಿ 3, ಎಐಎಂಐಎಂ 5 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. ತೆಲಂಗಾಣದಲ್ಲಿ ಒಟ್ಟು 119 ಸ್ಥಾನಗಳಿದ್ದು ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದೆ.

    ತೆಲಂಗಾಣದಲ್ಲಿ 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ 88 ಸೀಟ್‌ಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು.

  • ತೆಲಂಗಾಣದಲ್ಲಿ ಬಿಆರ್‌ಎಸ್‌-ಕಾಂಗ್ರೆಸ್‌ ನಡುವೆ ಟಫ್‌ ಫೈಟ್‌

    ತೆಲಂಗಾಣದಲ್ಲಿ ಬಿಆರ್‌ಎಸ್‌-ಕಾಂಗ್ರೆಸ್‌ ನಡುವೆ ಟಫ್‌ ಫೈಟ್‌

    ನವದೆಹಲಿ: ಪಂಚರಾಜ್ಯ ಚುನಾವಣೆ ಇಂದಿಗೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿವೆ. ತೆಲಂಗಾಣದಲ್ಲಿ ಅಚ್ಚರಿಯ ಫಲಿತಾಂಶದ ಸುಳಿವು ಸಿಕ್ಕಿದೆ. ಈ ಬಾರಿ ರಾಜ್ಯದಲ್ಲಿ ಆಡಳಿತಾರೂಢ ಬಿಆರ್‌ಎಸ್‌ಗೆ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡಿರುವುದು ಕಂಡುಬಂದಿದೆ.

    199 ವಿಧಾಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಈಗ ತೆಲಂಗಾಣ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ

    ಜನ್‌ಕೀಬಾತ್‌: ಕಾಂಗ್ರೆಸ್‌ 48-64, ಬಿಆರ್‌ಎಸ್‌ 40-55, ಬಿಜಪಿ 7-13
    ಪೋಲ್‌ ಸ್ಟ್ರಾಟಜಿ ಗ್ರೂಪ್: ಕಾಂಗ್ರೆಸ್‌ 49-54, ಬಿಆರ್‌ಎಸ್‌ 53-58, ಬಿಜೆಪಿ 4-6
    ರಿಪಬ್ಲಿಕ್‌ ಟಿವಿ-ಸಿ ವೋಟರ್‌: ಕಾಂಗ್ರೆಸ್‌ 47-59, ಬಿಆರ್‌ಎಸ್‌ 48-60, ಬಿಜೆಪಿ 5

    ತೆಲಂಗಾಣದಲ್ಲಿ 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ 88 ಸೀಟ್‌ಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಬಿಜೆಪಿಯಿಂದ ಟಫ್‌ ಸ್ಪರ್ಧೆ

    ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡು ಬಾರಿಯೂ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಚುನಾವಣೆಯು ಕೆಸಿಆರ್‌ಗೆ ಸುಲಭದ ಹಾರಿಯಾಗಿ ಉಳಿದಿಲ್ಲವೆಂಬ ಸೂಚನೆಯನ್ನು ಸಮೀಕ್ಷೆಗಳು ಹೇಳುತ್ತಿವೆ.