Tag: ಬಿಂದಿ

  • ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿನಿಗೆ ಥಳಿತ – ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

    ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋದ ವಿದ್ಯಾರ್ಥಿನಿಗೆ ಥಳಿತ – ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

    ರಾಂಚಿ: ಹಣೆಗೆ ಬಿಂದಿ (Bindi) ಧರಿಸಿ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು (Student) ಶಿಕ್ಷಕಿಯೊಬ್ಬರು (Teacher) ಥಳಿಸಿದ್ದು, ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ (Dhanbad) ನಡೆದಿದೆ.

    ಘಟನೆಯ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ, ವಿದ್ಯಾರ್ಥಿನಿಯೊಬ್ಬಳು ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋಗಿದ್ದಕ್ಕೆ ಆಕೆಯನ್ನು ಥಳಿಸಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂದು ಟ್ವೀಟ್ (Tweet) ಮೂಲಕ ತಿಳಿಸಿದ್ದಾರೆ. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸಲು ಎನ್‌ಸಿಪಿಸಿಆರ್ ತಂಡವು ಧನ್‌ಬಾದ್‌ಗೆ ತೆರಳಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

    ಧನ್‌ಬಾದ್‌ನ ಟೆತುಲ್ಮರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರು ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಾರ್ಖಂಡ್‌ನ ಧನ್‌ಬಾದ್ ಮಕ್ಕಳ ಕಲ್ಯಾಣ ಸಮಿತಿ (CWC) ಅಧ್ಯಕ್ಷ ಉತ್ತಮ್ ಮುಖರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: ಪುಟ್ಟ ಕಂದಮ್ಮನ ಕುತ್ತಿಗೆ, ಬಲಗೈ ಕೊಯ್ದ ಪಾಪಿ ತಂದೆ!

    ಈ ಕುರಿತು ಮುಖರ್ಜಿ ಟ್ವೀಟ್ ಮಾಡಿದ್ದು, ಇದು ಗಂಭೀರ ವಿಷಯವಾಗಿದ್ದು, ಶಾಲೆಯು ಸಿಬಿಎಸ್‌ಇ ಮಂಡಳಿಗೆ ಸಂಯೋಜಿತವಾಗಿಲ್ಲ. ನಾನು ಜಿಲ್ಲಾ ಶಿಕ್ಷಣ ಅಧಿಕಾರಿಗೆ ಈ ಬಗ್ಗೆ ತಿಳಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬವನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಂಗ್‌ ರೂಟ್‌ನಲ್ಲಿ ಬಂದ ಶಾಲಾ ಬಸ್‌ನಿಂದ ಕಾರಿಗೆ ಡಿಕ್ಕಿ – ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ

    ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ

    ಮುಂಬೈ: ಮಹಿಳಾ ಪತ್ರಕರ್ತೆಯೊಬ್ಬರು ಹಣೆಗೆ ಬಿಂದಿ ಹಾಕದೇ ಇರುವ ಕಾರಣ ಅವರೊಂದಿಗೆ ಮಾತನಾಡಲು ಮಹಾರಾಷ್ಟ್ರದ (Maharashtra) ಕಾರ್ಯಕರ್ತ ಸಂಭಾಜಿ ಭಿಡೆ ( Sambhaji Bhide) ನಿರಾಕರಿಸಿದ್ದಾರೆ.

    ದಕ್ಷಿಣ ಮುಂಬೈನಲ್ಲಿರುವ (South Mumbai) ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) ಅವರನ್ನು ಭೇಟಿಯಾದ ಬಳಿಕ ಹೊರಗೆ ಬರುತ್ತಿದ್ದ ಸಂಭಾಜಿ ಭಿಡೆ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರನ್ನು ಮಾತನಾಡಿಸಲು ಮುಂದಾದ ಪತ್ರಕರ್ತೆ ಜೊತೆಗೆ ಸಂಭಾಷಣೆ ನಡೆಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

    ವೀಡಿಯೊವೊಂದರಲ್ಲಿ ಸಂಭಾಜಿ ಭಿಡೆ ಅವರು ಮರಾಠಿಯಲ್ಲಿ ಬೈಟ್ ತೆಗೆದುಕೊಳ್ಳಲು ಬರುವ ಮಹಿಳಾ ಪತ್ರಕರ್ತೆಗೆ, ತಮ್ಮ ಬೈಟ್ ತೆಗೆದುಕೊಳ್ಳಲು ಬರುವ ಮುನ್ನ ಬಿಂದಿಯನ್ನು ಇಡಬೇಕೆಂದು ಹೇಳಿ, ಆಕೆಯೊಂದಿಗೆ ಮಾತನಾಡಲು ನಿರಾಕರಿಸುತ್ತಾರೆ. ಜೊತೆಗೆ ಮಹಿಳೆಯನ್ನು ಭಾರತಮಾತೆಗೆ ಹೋಲಿಸಿ, ಭಾರತಮಾತೆ ಬಿಂದಿ ಇಡದೇ ವಿಧವೆಯಂತೆ ಕಾಣಿಸಿಕೊಳ್ಳಬಾರದು ಎಂದು ಹೇಳುವುದನ್ನು ಕಾಣಬಹುದಾಗಿದೆ.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಸಂಭಾಜಿ ಭಿಡೆ ಅವರ ಹೇಳಿಕೆಗೆ ವಿವರಣೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ 2018ರಲ್ಲಿ ನಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ತಿಂದು ದಂಪತಿಯೊಬ್ಬರಿಗೆ ಗಂಡು ಮಕ್ಕಳು ಜನಿಸಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಸಂಭಾಜಿ ಭಿಡೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ

    Live Tv
    [brid partner=56869869 player=32851 video=960834 autoplay=true]

  • ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಕನ್ನಡತಿ – ಸ್ವಾತಿ ಹಣೆಯಲ್ಲಿದ್ದ ಬಿಂದಿಗೆ ನೆಟ್ಟಿಗರು ಫಿದಾ

    ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಕನ್ನಡತಿ – ಸ್ವಾತಿ ಹಣೆಯಲ್ಲಿದ್ದ ಬಿಂದಿಗೆ ನೆಟ್ಟಿಗರು ಫಿದಾ

    ವಾಷಿಂಗ್ಟನ್: ನಾಸಾದ ಪರ್ಸೀವರೆನ್ಸ್ ರೋವರ್ ಲ್ಯಾಂಡಿಂಗ್ ಮುನ್ನಡೆಸಿದ ಮಹಿಳೆ ಭಾರತೀಯ ಮೂಲದವರಾಗಿದ್ದಾರೆ. ಇದೀಗ ಇವರು ಹಣೆಗೆ ಬಿಂದಿ ಇಟ್ಟಿರುವ ದೇಸಿ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಕಂಟ್ರೋಲ್ ರೂಂನಲ್ಲಿ ಮಾರ್ಗದರ್ಶನ ನೀಡುತ್ತಿದ್ದ ಸ್ವಾತಿ ಕಪ್ಪು ಬಣ್ಣದ ಬಿಂದಿ ಧರಿಸಿದ್ದರು. ಇದು ಅನೇಕ ಭಾರತೀಯರ ಖುಷಿಗೆ ಕಾರಣವಾಗಿದೆ. ಅಮೆರಿಕದಲ್ಲೇ ಇರಲಿ, ಎಷ್ಟೇ ದೊಡ್ಡ ವಿಜ್ಞಾನಿಯೇ ಆಗಿರಲಿ ಸ್ವಾತಿ ತಾನು ಭಾರತಿಯೇ, ಭಾರತದ ಸಂಸ್ಕøತಿ ಹೊಂದಿದವಳು ಎನ್ನುವುದನ್ನ ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಗಣ್ಯರು ಕೂಡ ಮುಖದ ಮೇಲಿನ ತೇಜಸ್ಸಿನ ಬಿಂದಿಗೆ ಶಹಬ್ಬಾಸ್ ಎಂದಿದ್ದಾರೆ. ನಾಸಾ ಶೇರ್ ಮಾಡಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನಾಸಾ ಕಳುಹಿಸಿದ ಪರ್ಸೀವರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳದಲ್ಲಿ ಇಳಿದಿದೆ. ಈ ರೋವರ್ ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವಾ ಎಂಬ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳುಹಿಸಲಿದೆ. ಈ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಸ್ವಾತಿ ಮೋಹನ್ ಬೆಂಗಳೂರು ಮೂಲದವರಾಗಿದ್ದಾರೆ. ಡಾ. ಸ್ವಾತಿ ಮೋಹನ್ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ನಾಸಾದಲ್ಲಿ ‘ಜಿಎನ್ ಅಂಡ್ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಪರ್ಸೀವರೆನ್ಸ್ ರೋವರನ್ನು ಮಂಗಳ ಗ್ರಹದ ಮೇಲೆ ಇಳಿಸುವ ಜವಾಬ್ದಾರಿ ಸಂಪೂರ್ಣವಾಗಿ ಇವರ ತಂಡದ್ದಾಗಿತ್ತು.

    ಯಶಸ್ವಿಯಾಗಿ ನಿಭಾಯಿಸಿದ ಸ್ವಾತಿ ಅವರ ಬಗ್ಗೆ ಅಮೆರಿಕ, ಭಾರತದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ರೋವರ್ ಯಶಸ್ಸಿನಿಂದ ಫುಲ್ ಖುಷ್ ಆಗಿರುವ ನಾಸಾ, ಕಂಟ್ರೋಲ್ ರೂಂನಲ್ಲಿದ್ದ ಸಿಬ್ಬಂದಿ ಪ್ರತಿಕ್ರಿಯೆಯ ವೀಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆದರೆ ಇವುಗಳಲ್ಲಿ ಸ್ವಾತಿ ಮೋಹನ್ ಹಣೆ ಮೇಲೆ ಇಟ್ಟಿದ್ದ ಬಿಂದಿ ಹೈಲೈಟ್ ಆಗಿದೆ.

  • ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ಬಿಂದಿ ಧರಿಸಿದ್ದಕ್ಕೆ ಮದರಸಾದಿಂದ್ಲೇ ಹೊರಹಾಕಿದ ಆಡಳಿತ ಮಂಡಳಿ!

    ತಿರುವನಂತಪುರಂ: 5ನೇ ತರಗತಿ ಓದುತ್ತಿದ್ದ ಬಾಲಕಿ ಬಿಂದಿ ಧರಿಸಿದ್ದಕ್ಕೆ ಮದರಸಾದಿಂದಲೇ ಹೊರ ಹಾಕಿದ ಘಟನೆ ಉತ್ತರ ಕೇರಾಳ ರಾಜ್ಯದಲ್ಲಿ ನಡೆದಿದೆ.

    ಕಿರು ಚಲನಚಿತ್ರದಲ್ಲಿ 10 ವರ್ಷದ ಬಾಲಕಿ ಬಿಂದಿ ಧರಿಸಿ ಅಭಿನಯಿಸಿದ್ದಕ್ಕಾಗಿ, 5 ನೇ ತರಗತಿಯ ವಿದ್ಯಾರ್ಥಿನಿಯನ್ನು ಮದರಾಸದ ಆಡಳಿತ ಮಂಡಳಿ ಶಾಲೆಯಿಂದಲೇ ಹೊರಹಾಕಿದೆ.

    ಬಾಲಕಿಯನ್ನು ಮದರಸಾದಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಆಕೆಯ ತಂದೆ ಉಮ್ಮರ್ ಮಲಾಯಿಲ್ ರವರು ಘಟನೆ ಕುರಿತು ತಮ್ಮ ಫೇಸ್ಬುಕ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದವರು ಬಾಲಕಿಯ ತಂದೆಗೆ ಬೆಂಬಲ ಸೂಚಿಸಿ, ಮದರಾಸ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಫೇಸ್ಬುಕ್ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಹಾಕಿದ್ದ ಪೋಸ್ಟನ್ನು ಸುಮಾರು 7,500 ಮಂದಿ ಲೈಕ್ ಮಾಡಿ 2,700 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರು.

    https://www.facebook.com/permalink.php?story_fbid=2009935685987809&id=100009141911364

    ಉಮ್ಮರ್ ರವರು ತಮ್ಮ ಫೇಸ್ಬುಕ್‍ನಲ್ಲಿ `ನನ್ನ ಮಗಳು ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಕೌಶಲ್ಯತೆಯನ್ನು ಹೊಂದಿದ್ದಾಳೆ. ಆಕೆ ನೃತ್ಯ, ಹಾಡುಗಾರಿಕೆ ಹಾಗೂ ಅಭಿನಯದಲ್ಲಿ ಆಸಕ್ತಿ ಹೊಂದಿದ್ದು, ಅನೇಕ ಸ್ಪರ್ಧೆಗಳಲ್ಲಿ ಸಹ ಸ್ಪರ್ಧಿಸಿ ಮದರಸಾಗೆ ಹೆಸರು ತಂದಿದ್ದಾಳೆ. ಅವಳ ನಿಷ್ಕಲ್ಮಶ ಪ್ರತಿಭೆಗೆ ಮದರಾಸವು ಅವಮಾನ ಮಾಡಿದೆ. ಆಕೆ ಮಾಡಿದ ತಪ್ಪಾದರೂ ಏನು?’ ಕೇವಲ ಗಂಧದ ಬಿಂದಿ ಧರಿಸಿದ್ದಕ್ಕೆ ಆಡಳಿತ ಮಂಡಳಿ ಮದರಾಸದಿಂದಲೇ ಹೊರಹಾಕಿದೆ ಎಂದು ಮಲಿಯಾಳಂ ಭಾಷೆಯಲ್ಲಿ ಪೋಸ್ಟ್ ಮಾಡಿದ್ದರು.

    ಘಟನೆ ಸಂಬಂಧ ಪ್ರತಿಕ್ರಿಯಿಸಿ ಮದರಸಾ ಆಡಳಿತ ಮಂಡಳಿಯು ಬಿಂದಿ ಧರಿಸಿವುದು ಇಸ್ಲಾಂನಲ್ಲಿ ನಿಷಿದ್ಧವಾಗಿದೆ. ಆದ್ದರಿಂದ ಬಾಲಕಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.