ಕನ್ನಡದ ‘ಬಿಂದಾಸ್’ ಚಿತ್ರದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಮದುವೆಯಾಗಿ 2 ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೊಸ ಮನೆ ಗೃಹಪ್ರವೇಶ (House Warming) ಮಾಡಿದ ಸಂಭ್ರಮದಲ್ಲಿದ್ದಾರೆ. ಮನೆಗೆ ಕಾಲಿಟ್ಟಿರುವ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಹೊಸ ಆರಂಭ’ ಎಂದು ಶೀರ್ಷಿಕೆ ನೀಡಿ ಮನೆಯ ಗೃಹಪ್ರವೇಶದ ಚೆಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪತಿ ಜೊತೆ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಹನ್ಸಿಕಾಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಅಂದಹಾಗೆ, ಮದುವೆಯ ನಂತರವೂ ಹನ್ಸಿಕಾ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸುವ ಅವಕಾಶ ಸಿಗದೆ ಇದ್ದರೂ ಬಂದ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಇನ್ನೂ 2022ರಲ್ಲಿ ಉದ್ಯಮಿ ಸೋಹೈಲ್ ಜೊತೆ ಹನ್ಸಿಕಾ ಮದುವೆಯಾದರು. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ ಬಳಿಕ ಹನ್ಸಿಕಾರನ್ನು ಪ್ರೀತಿಸಿ ಸೋಹೈಲ್ ಮದುವೆಯಾದರು.
ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸಂಯುಕ್ತ ಹೆಗ್ಡೆ (Samyukta Hegde) ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು (Birthday) ಥಾಯ್ಲೆಂಡ್ ನಲ್ಲಿ ಆಚರಿಸಿಕೊಂಡಿದ್ದಾರೆ. ಪಾರ್ಟಿ ಮೂಡ್ ನಲ್ಲಿರುವ ಸಂಯುಕ್ತ ಫೋಟೋಶೂಟ್ ವೊಂದನ್ನು ಮಾಡಿಸಿಕೊಂಡಿದ್ದು, ಒಂದು ರೀತಿಯಲ್ಲಿ ಕಥಾ ಸರಣಿಯಂತಿದೆ ಫೋಟೋ ಶೂಟ್.
ಥಾಯ್ಲೆಂಡ್ (Thailand) ನ ಕೋಹ್ ಪಂಗೋನ್ ದ್ವೀಪದಲ್ಲಿ ಅವರು ತಮ್ಮ 25ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ್ದಾರೆ. ಅಷ್ಟೂ ಫೋಟೋಗಳಲ್ಲೂ ಸಂಯುಕ್ತ ಬಿಂದಾಸ್.
ಸಾಮಾನ್ಯವಾಗಿ ಹುಟ್ಟು ಹಬ್ಬದ ದಿನದಂದು ಗ್ರ್ಯಾಂಡ್ ಆಗಿರುವ ಬಟ್ಟೆ ಹಾಕೋದು ಕಾಮನ್. ಆದರೆ, ಆ ಸಂಪ್ರದಾಯವನ್ನು ಸಂಯುಕ್ತ ಮುರಿದಿದ್ದಾರೆ. ತುಂಡುಡುಗೆಯಲ್ಲಿ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೇ ಹುಟ್ಟು ಹಬ್ಬವನ್ನು ಎಂಜಾಮ್ ಮಾಡಿದ್ದಾರೆ.
ಯಾವುದನ್ನೂ ಮುಚ್ಚುಮರೆ ಮಾಡದೇ ಕೇಕು, ವೋಡ್ಕ, ವೈನು, ನಾಯಿ ಹೀಗೆ ಕಾನ್ಸೆಪ್ಟ್ ರೀತಿಯಲ್ಲಿ ತಮ್ಮೊಂದಿಗೆ ಇಟ್ಟುಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ ಸಂಯುಕ್ತ. ಇದೆಲ್ಲ ಏನು ಎಂದು ಹಲವರು ನಟಿಗೆ ಪ್ರಶ್ನೆ ಮಾಡಿದ್ದಾರೆ.
ಕೇಕ್ ನೊಂದಿಗೆ ಶುರುವಾಗುವ ಅವರ ಹುಟ್ಟು ಹಬ್ಬ, ನಾನಾ ಭಾವಗಳನ್ನು ದಾಟಿಕೊಂಡು ಬೀದಿಯ ಎಟಿಎಂ ಬಳಿ ನಶೆಯಲ್ಲಿ ಮುಕ್ತಾಯವಾಗುತ್ತದೆ. ಇಂಥದ್ದೊಂದು ವಿಚಿತ್ರ ಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಕೊಂಡಿದ್ದಾರೆ ಸಂಯುಕ್ತ.
ಈ ಹಿಂದೆಯೂ ಸಂಯುಕ್ತ ಟಾಪ್‌ಲೆಸ್ ವೀಡಿಯೋವೊಂದನ್ನ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ನಿಮ್ಮ ದೇಹ, ನಿಮ್ಮ ಆಸ್ತಿ ಎಂದು ನಟಿ ವೀಡಿಯೋದಲ್ಲಿ ಪಾಠ ಮಾಡಿದ್ದರು
‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಕ್ಷಿತ್ ಶೆಟ್ಟಿಗೆ (Rakshit Shetty) ನಾಯಕಿಯಾಗುವ ಮೂಲಕ ಬಣ್ಣದ ಬದುಕಿಗೆ ಲಗ್ಗೆಯಿಟ್ಟರು. ರಕ್ಷಿತ್, ರಶ್ಮಿಕಾ ಜೊತೆ ಸಂಯುಕ್ತಾ ಕೂಡ ಮೊದಲ ಚಿತ್ರದಲ್ಲೇ ಗಮನ ಸೆಳೆದರು. ಕನ್ನಡ ಸೇರಿದಂತೆ ತೆಲುಗು, ತಮಿಳು ಸಿನಿಮಾದಲ್ಲೂ ನಟಿ ಮಿಂಚಿದ್ರು. ಜಯಂರವಿ, ಪ್ರಭುದೇವ, ಅಂತಹ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ
ಕೆಲ ತಿಂಗಳುಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದಲ್ಲಿ ಸಂಯುಕ್ತಾ ಕಾಲಿಗೆ ಪೆಟ್ಟಾಗಿತ್ತು. ಬಳಿಕ ಸೂಕ್ತ ಚಿಕಿತ್ಸೆಯ ನಂತರ ನಟಿ ಚೇತರಿಸಿಕೊಂಡಿದ್ದಾರೆ. 5 ತಿಂಗಳ ಬೆಡ್ ರೆಸ್ಟ್ ನಂತರ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಕಿರಿಕ್ ಬೆಡಗಿ ಸಂಯುಕ್ತಾ, ದೇಹ ಪ್ರದರ್ಶಿಸಿರುವ ವೀಡಿಯೋ ಶೇರ್ ಮಾಡುವ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡಿದ್ದಾರೆ. ನಟಿ ಟಾಪ್‌ಲೆಸ್ ಆಗಿರುವ ವೀಡಿಯೋ ನೋಡಿ ಅಭಿಮಾನಿಗಳು ದಂಗಾಗಿದ್ದರು.
ನಟಿ ಸಂಯುಕ್ತಾ ಹೆಗ್ಡೆ ಕೈಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇನು ಇಲ್ಲ. ‘ಕ್ರೀಮ್’ (Cream) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಸಂಯುಕ್ತಾ ಒಂದೇ ಸಿನಿಮಾದಿಂದ ಲಾಂಚ್ ಆದ್ರೂ ಕೂಡ ರಶ್ಮಿಕಾ ಅವರಿಗೆ ಸಿಕ್ಕಂತಹ ಯಶಸ್ಸು ಸಂಯುಕ್ತಾಗೆ ಸಿಗಲಿಲ್ಲ. ಒಳ್ಳೆಯ ಕಥೆಗಾಗಿ ನಟಿ ಎದುರು ನೋಡ್ತಿದ್ದಾರೆ.
ಸೌತ್ ಚಿತ್ರರಂಗದ ಮುದ್ದು ಚೆಲುವೆ ಹನ್ಸಿಕಾ ಮೋಟ್ವಾನಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನ `ಮಹಾ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾಗೆ ಈ ಸಿನಿಮಾ ತುಂಬಾನೇ ಸ್ಪೆಷಲ್ ಏಕೆಂದರೆ ಹನ್ಸಿಕಾ ನಟನೆಯ 50ನೇ ಸಿನಿಮಾ ಇದಾಗಿದ್ದು, ಪ್ರಚಾರದಲ್ಲಿ ಕಾರ್ಯದಲ್ಲಿ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ದುಬಾರಿ ಸೀರೆಯುಟ್ಟು ನಟಿ ಮಿಂಚಿದ್ದಾರೆ.
ಬಾಲನಟಿಯಾಗಿ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಪ್ರಸ್ತುತ ನಾಯಕಿಯಾಗಿ ಫಿಲ್ಮಿಂ ದುನಿಯಾದಲ್ಲಿ ಮಿಂಚ್ತಿದ್ದಾರೆ. ಕನ್ನಡದ `ಬಿಂದಾಸ್’ ಚಿತ್ರದಲ್ಲಿ ಪುನೀತ್‌ಗೆ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ರಿಲೀಸ್ ಆಗಿರುವ ತಮಿಳಿನ `ಮಹಾ’ ಚಿತ್ರ ಹನ್ಸಿಕಾ ನಟನೆಯ 50ನೇ ಚಿತ್ರವಾಗಿದೆ. ಹಾಗಾಗಿ ದುಬಾರಿ ಸೀರೆಯಲ್ಲಿ ಧರಿಸಿ ಬಂದಿದ್ದಾರೆ. 71000 ಸಾವಿರದ ಈ ದುಬಾರಿ ಸೀರೆಯಲ್ಲಿ ಮಿರ ಮಿರ ಅಂತಾ ಮಿಂಚಿದ್ದಾರೆ. ನಟಿಯ ಸ್ಯಾರಿಯ ಫೋಟೋ ಜತೆ ಸೀರೆ ಬೆಲೆ ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಸೀರೆಯಲ್ಲಿ ಸಿಂಪಲ್ ಡಿಸೈನ್‌ಯಿದ್ದು, ಕಮ್ಮಿ ತೂಕವಿರುವ ಸೀರೆಯಾಗಿದೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ
ಕಾಫಿ ಮತ್ತು ಕಪ್ಪು ಬಣ್ಣದ ಸ್ಲೀವ್‌ಲೆಸ್ ಸೀರೆಯಲ್ಲಿ ಹನ್ಸಿಕಾ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ `ಮಹಾ’ ಚಿತ್ರದ ಆಡಿಯೋ ಲಾಂಚ್‌ನಲ್ಲಿ 71000 ಸಾವಿರದ ದುಬಾರಿ ಸೀರೆಯಲ್ಲಿ ಬಹುಭಾಷಾ ನಟಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ ಜತೆ ಸೀರೆ ಬೆಲೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
Live Tv
[brid partner=56869869 player=32851 video=960834 autoplay=true]