Tag: ಬಾಹುಬಲಿ 2

  • ದಕ್ಷಿಣದ ಸಿನಿಮಾಗಳನ್ನೇ ಕಾಪಿ ಮಾಡಿದ್ರಾ ‘ಜವಾನ್’ ಶಾರುಖ್ ಖಾನ್

    ದಕ್ಷಿಣದ ಸಿನಿಮಾಗಳನ್ನೇ ಕಾಪಿ ಮಾಡಿದ್ರಾ ‘ಜವಾನ್’ ಶಾರುಖ್ ಖಾನ್

    ನಿನ್ನೆಯಷ್ಟೇ ಶಾರುಖ್ ಖಾನ್ (Shah Rukh Khan) ನಟನೆಯ ಜವಾನ್ (Jawan) ಸಿನಿಮಾದ ಪ್ರಿವ್ಯೂ ರಿಲೀಸ್ ಆಗಿದೆ. ಈ ಪ್ರವ್ಯೂ ದಾಖಲೆಯ ರೀತಿಯಲ್ಲಿ ಜನರಿಗೆ ತಲುಪಿದೆ. ಅದರಲ್ಲೂ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ಈ ಎಲ್ಲದರ ನಡುವೆಯೂ ಈ ಸಿನಿಮಾದ ಕೆಲವ ದೃಶ್ಯಗಳನ್ನು ಬೇರೆ ಬೇರೆ ಸಿನಿಮಾಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಅದರಲ್ಲೂ ದಕ್ಷಿಣದ ಸಿನಿಮಾಗಳಿಗೆ ಹೋಲಿಕೆ ಮಾಡಿ ಟ್ರೋಲ್ ಕೂಡ ಮಾಡಲಾಗುತ್ತಿದೆ.

    ವಿಕ್ರಮ್ ನಟನೆಯ ಅಪರಿಚಿತ್, ಪ್ರಭಾಸ್ ನಟನೆಯ ಬಾಹುಬಲಿ 2 (Baahubali 2), ರಜನಿಕಾಂತ್ ನಟನೆಯ ಶಿವಾಜಿ (Shivaji) ಸಿನಿಮಾಗಳ ಜೊತೆಗೆ ಹಾಲಿವುಡ್ ನ ಡಾರ್ಕ್ ಮ್ಯಾನ್ ಚಿತ್ರಕ್ಕೂ ಹೋಲಿಕೆ ಮಾಡಲಾಗುತ್ತಿದೆ. ನಿನ್ನೆಯಷ್ಟೇ ರಿಲೀಸ್ ಆದ ಜವಾನ್ ಸಿನಿಮಾದ ಪ್ರಿವ್ಯೂನಲ್ಲಿ ಮಗುವನ್ನು ಎತ್ತಿಕೊಳ್ಳುವ ದೃಶ್ಯವಿದೆ. ಅದನ್ನು ಬಾಹುಬಲಿ ಚಿತ್ರಕ್ಕೆ ಹೋಲಿಸಿದರೆ, ಶಾರುಖ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ದೃಶ್ಯವನ್ನು ಬಾಲಿವುಡ್ ನ ಡಾರ್ಕ್ ಮ್ಯಾನ್ ಹಾಗೂ ಮುಖಕ್ಕೆ ಶಾರುಖ್ ಮಾಸ್ಕ್ ಹಾಕಿಕೊಂಡಿರುವ ದೃಶ್ಯವನ್ನು ಅಪರಿಚಿತ್ (Aparichith) ದೃಶ್ಯಕ್ಕೆ ಹಾಗೂ ತಲೆಯಲ್ಲಿ ಕೂದಲು ಇಲ್ಲದ ಶಾರುಖ್ ನನ್ನು ಶಿವಾಜಿ ಚಿತ್ರಕ್ಕೆ ಹೋಲಿಸಿದ್ದಾರೆ.

    ಆದರೆ, ಇದ್ಯಾವುದೂ ಹೋಲಿಕೆ ಅಲ್ಲ ಎಂದು ಶಾರುಖ್ ಅಭಿಮಾನಿಗಳು ವಾದಿಸುತ್ತಿದ್ದಾರೆ. ಶಾರುಖ್ ಯಾವಾಗಲೂ ಸ್ವಂತದ್ದನ್ನು ಮಾಡುವವರು, ಅವರಿಗೆ ಕಾಪಿ (Copy) ಮಾಡುವ ಗುಣವಿಲ್ಲ. ಹೋಲಿಕೆ ಅದು ನಿಮಗೆ ಕಂಡಿರಬಹುದು ಎಂದು ಟ್ರೋಲ್ ಮಾಡುವವರಿಗೆ ಶಾರುಖ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಪೂರ್ತಿ ಸಿನಿಮಾವನ್ನು ವೀಕ್ಷಿಸಿ ಆಮೇಲೆ ಕಾಮೆಂಟ್ ಮಾಡಿ ಎಂದಿದ್ದಾರೆ.

    ಹೇಗಿದೆ ಜವಾನ್ ಪ್ರಿವ್ಯೂ?

    ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ‘ಜವಾನ್’ನ ಪ್ರಿವ್ಯೂ ಇಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸಮಾಜದಲ್ಲಾಗುತ್ತಿರುವ ತಪ್ಪುಗಳನ್ನು ತಿದ್ದುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರಾಮಾಣಿಕ ವ್ಯಕ್ತಿಯ ಕಥೆಯಾಗಿದೆ.  ‘ಜವಾನ್’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆರಂಭದಿಂದಲೂ ಬಹಳ ಕುತೂಹಲವಿತ್ತು. ಇಂದು ಬಿಡುಗಡೆಯಾದ ಟೀಸರ್, ಆ ನಿರೀಕ್ಷೆ ಮತ್ತು ಕುತೂಹಲಗಳನ್ನು ಇನ್ನೊಂದು ಹಂತಕ್ಕೆ ತಲುಪಿಸಿದೆ. ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಚಿತ್ರವು ಆಕ್ಷನ್ ಮತ್ತು ಎಮೋಷನ್ ಗಳನ್ನು ಹದವಾಗಿ ಹಿಡಿದಿಟ್ಟಿದೆ. ಚಿತ್ರದ ಕೆಲವು ಅದ್ಭುತ ಕ್ಷಣಗಳನ್ನು ಹಿಡಿದಿಡುವುದರ ಜೊತೆಗೆ, ‘ಜವಾನ್ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

    ‘ಕಿಂಗ್ ಖಾನ್’ ಅವರ ಧ್ವನಿಯಲ್ಲಿ ಪ್ರಾರಂಭವಾಗುವ ಈ ಪ್ರಿವ್ಯೂ, ನಂತರ ಚಿತ್ರ ಏನಿರಬಹುದು ಎಂದು ಪರಿಚಯಿಸಿಕೊಡುತ್ತದೆ. ಈ ಪ್ರಿವ್ಯೂನ ಒಂದು ವಿಶೇಷತೆಯೆಂದರೆ, ಇದುವರೆಗೂ ನೀವು ನೋಡದೆ ಇರುವ ಶಾರುಖ್ ಅವರನ್ನು ಇಲ್ಲಿ ಹಲವು ಅವತಾರಗಳಲ್ಲಿ ನೋಡಬಹುದು. ಶಾರುಖ್ ಖಾನ್ ಅಲ್ಲದೆ, ಚಿತ್ರದಲ್ಲಿ ನಟಿಸಿರುವ ಹಲವು ಪ್ರತಿಭಾವಂತರ ತುಣುಕುಗಳು ಸಹ ಈ ಪ್ರಿವ್ಯೂನಲ್ಲಿ ಪರಿಚಯಿಸಲಾಗಿದೆ. ರೋಮಾಂಚನಗೊಳಿಸುವ ಆಕ್ಷನ್ ದೃಶ್ಯಗಳು, ಅದ್ದೂರಿ ಹಾಡುಗಳು, ‘ಬೇಕರಾರ್ ಕರಕೇ ಹಮೇ’ ಹಾಡಿಗೆ ಶಾರುಖ್ ಖಾನ್ ಅಭಿನಯ … ಇವೆಲ್ಲವೂ ಈ ಪ್ರಿವ್ಯೂ ಚಿತ್ರದ ಹೈಲೈಟ್ ಗಳಾಗಿದ್ದು, ಚಿತ್ರ ಬಿಡುಗಡೆಗೆ ಕಾಯುವಂತಾಗಿದೆ.

    ದಕ್ಷಿಣ ಭಾರತದ ಜನಪ್ರಿಯ ಮತ್ತು ಯಶಸ್ವಿ ನಿರ್ದೇಶಕರಾದ ಅಟ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ. ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿರುವ ಅನಿರುದ್ಧ್ ಅವರ ಹಿನ್ನೆಲೆ ಸಂಗೀತ ಈ ಪ್ರಿವ್ಯೂನ ಇನ್ನೊಂದು ಹೈಲೈಟ್. ಈ ಪ್ರಿವ್ಯೂನಲ್ಲಿ ಗಮನಸೆಳೆಯುವ ಇನ್ನೊಂದು ಅಂಶವೆಂದರೆ ಅದು ಗ್ರಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿರುವ ರಾಜಕುಮಾರಿ ಅವರು ಹಾಡಿರುವ ‘ದಿ ಕಿಂಗ್ ಖಾನ್ ರಾಪ್’ ಎಂಬ ಹಾಡು.

    ‘ಜವಾನ್’, ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರವಾಗಿದ್ದು, ಅತ್ಯಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ. ಈ ಚಿತ್ರದ ಶಾರುಖ್ ಜೊತೆಗೆ ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ವಿವಿಧ ಭಾಷೆಯ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನಯನತಾರಾ, ವಿಜಯ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಗಿರಿಜಾ ಓಕ್, ಸಂಗೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ದೋಗ್ರಾ, ಸುನಿಲ್ ಗ್ರೋವರ್ ಮತ್ತು ಮುಖೇಶ್ ಛಾಬ್ರಿಯಾ ನಟಿಸಿರುವ ಈ ಚಿತ್ರವು ಎಲ್ಲ ಭಾಷೆಗಳ ಜನರಿಗೂ ತಲುಪವಂತೆ ಚಿತ್ರಿಸಲಾಗಿದೆ.

     

    ಇದಕ್ಕೂ ಮುನ್ನ ಪೋಸ್ಟರ್ ಮತ್ತು ಸಣ್ಣ ಟೀಸರ್ ಮೂಲಕ ಜನರ ಗಮನ ಸೆಳೆದ ಟೀಸರ್, ಈಗ ಪ್ರಿವ್ಯೂ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ನಡಿ ಗೌರಿ ಖಾನ್ ನಿರ್ಮಾಣ ಮಾಡಿದರೆ, ಗೌರವ್ ವರ್ಮ ಸಹ-ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ‘ಜವಾನ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಶೆಟ್ಟಿ ಏನೆಂದು ಕರೀತಾರೆ ಗೊತ್ತಾ?

    ರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರದ ಮೂಲಕ ಕಂಬ್ಯಾಕ್ ಆಗ್ತಿದ್ದಾರೆ. ಈ ನಡುವೆ ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಏನೆಂದು ಕರೆಯುತ್ತಾರೆ ಎಂಬುದನ್ನ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

    ಮಿರ್ಚಿ, ಬಿಲ್ಲಾ, ಬಾಹುಬಲಿ, ಬಾಹುಬಲಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ- ಪ್ರಭಾಸ್ (Prabhas) ಜೋಡಿಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿತ್ತು. ಸಿನಿಮಾ ನೋಡಿದವರು, ತೆರೆ ಹಿಂದೆ ಕೂಡ ಇಬ್ಬರ ನಡುವೆ ಲವ್ವಿ-ಡವ್ವಿ ಇದೆ ಎಂದು ಹೇಳಲಾಗಿತ್ತು. ಈ ಮಧ್ಯೆ ಕೃತಿ ಸನೋನ್ (Kriti Sanon) ಹೆಸರು ಕೂಡ ಪ್ರಭಾಸ್ ಜೊತೆ ತಳುಕು ಹಾಕಿತ್ತು. ಈಗ ಮತ್ತೆ ಬಾಹುಬಲಿ ಜೋಡಿಯ ಮ್ಯಾಟ್ರರ್ ಚಾಲ್ತಿಗೆ ಬಂದಿದೆ.

    ಇತ್ತೀಚಿಗೆ ಅನುಷ್ಕಾ ನಟಿಸಿರುವ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಅನುಷ್ಕಾ- ನವೀನ್ ಪೋಲಿ ಶೆಟ್ಟಿ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪ್ರಭಾಸ್ ಕೂಡ ಚಿತ್ರದ ಟೀಸರ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾದ ಟೀಸರ್ ಮನರಂಜನೆಯನ್ನ ಒಳಗೊಂಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ವಿಶ್ ಮಾಡಿದ್ದಾರೆ. ಇದನ್ನ ನಟಿ ಅನುಷ್ಕಾ ತಮ್ಮ ಖಾತೆ ರೀ ಶೇರ್ ಮಾಡಿ, ಧನ್ಯವಾದ ಪಪ್ಸು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

    ಅನುಷ್ಕಾ- ಪ್ರಭಾಸ್ ನಡುವೆ ಏನು ಸರಿ ಇಲ್ಲಾ ಅದಕ್ಕೆ ದೂರವಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಬೆಂಬಲ ಸೂಚಿಸೋದು ನೋಡಿ, ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ಬಾಹುಬಲಿ 2 ಸಿನಿಮಾಗೆ ಸೆಡ್ಡು ಹೊಡೆದ `ಕಾಂತಾರ’

    ಬಾಹುಬಲಿ 2 ಸಿನಿಮಾಗೆ ಸೆಡ್ಡು ಹೊಡೆದ `ಕಾಂತಾರ’

    ಚಿತ್ರರಂಗದಲ್ಲಿ `ಕಾಂತಾರ'(Kantara Film) ಪರ್ವ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕಾಂತಾರ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೀಗ `ಬಾಹುಬಲಿ 2′ (Bahubali 2) ಚಿತ್ರದ ಕಲೆಕ್ಷನ್ ಮೀರಿಸಿ ಕಾಂತಾರ ಚಿತ್ರ ಗೆದ್ದಿದೆ.

    ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶಿಸಿರುವ `ಕಾಂತಾರ’ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡದ ಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿರ ಮಿರ ಅಂತಾ ಮಿಂಚುತ್ತಿದೆ. ಸದ್ಯ `ಬಾಹುಬಲಿ 2′(Bahubali 2) ಈ ಹಿಂದೆ ಮಾಡಿರುವ ದಾಖಲೆಯನ್ನ `ಕಾಂತಾರ’ ಉಡೀಸ್ ಮಾಡಿದೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    `ಬಾಹುಬಲಿ 2′ 5ನೇ ವಾರಾಂತ್ಯದಲ್ಲಿ 23.30 ಕೋಟಿ ಗಳಿಸಿತ್ತು. ಆದರೆ ಕಾಂತಾರ 5ನೇ ವಾರಕ್ಕೆ 36 ಕೋಟಿ ಕಲೆಕ್ಷನ್ ಮಾಡಿದೆ. ಪ್ರಭಾಸ್ ಚಿತ್ರಕ್ಕೆ ರಿಷಬ್ ಶೆಟ್ಟಿ ಸೆಡ್ಡು ಹೊಡೆದು ಮುನ್ನುಗ್ಗುತ್ತಿದ್ದಾರೆ.

    ಇನ್ನೂ `ಕಾಂತಾರ’ ಚಿತ್ರದ ಕಲೆಕ್ಷನ್‌ಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಒಟ್ಟು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಗಲ್ಲಾಪೆಟ್ಟಿಗೆ ಸಿನಿಮಾ ಹೊಸ ದಾಖಲೆ ಬರೆದಿದೆ.

    Live Tv
    [brid partner=56869869 player=32851 video=960834 autoplay=true]

  • `ಬಾಹುಬಲಿ 2′ ರೆಕಾರ್ಡ್ ಬ್ರೇಕ್ ಮಾಡಿದ ಕಮಲ್ ಹಾಸನ್ ನಟನೆಯ `ವಿಕ್ರಮ್’

    `ಬಾಹುಬಲಿ 2′ ರೆಕಾರ್ಡ್ ಬ್ರೇಕ್ ಮಾಡಿದ ಕಮಲ್ ಹಾಸನ್ ನಟನೆಯ `ವಿಕ್ರಮ್’

    ಕಾಲಿವುಡ್‌ನಲ್ಲಿ ಏಲ್ಲೆಲ್ಲೂ `ವಿಕ್ರಮ್’ ಮೇನಿಯಾ ಜೋರಾಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕಮಲ್ ಹಾಸನ್ ವಿಕ್ರಮಾವತಾರ ತಾಳಿ ರಗಡ್ ಆಗಿ ಕಮ್ ಬ್ಯಾಕ್ ಆಗಿದ್ದಾರೆ. ಕಾಲಿವುಡ್‌ನಲ್ಲಿ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ, `ವಿಕ್ರಮ್’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

    ಸದ್ಯ ಸೌತ್ ಸಿನಿರಂಗದಲ್ಲಿ `ವಿಕ್ರಮ್’ ಆರ್ಭಟ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಲೂಟಿ ಮಾಡುತ್ತಿದೆ. ಗ್ಯಾಪ್‌ನ ನಂತರ ಕಮಲ್ ಹಾಸನ್ ವಿಕ್ರಮ್ ಚಿತ್ರದ ಕಮ್ ಬ್ಯಾಕ್ ಮಾಡಿ, ಕಮಾಲ್ ಮಾಡ್ತಿದ್ದಾರೆ. ಕಮಲ್ ಹಾಸನ್ ರಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದೀಗ ಅಸಲಿ ವಿಚಾರ ಏನು ಅಂದ್ರೆ, ಪ್ರಭಾಸ್ ನಟನೆಯ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ಬ್ರೇಕ್ ಮಾಡಿ, ಅಗ್ರ ಸ್ಥಾನದಲ್ಲಿದೆ.

    ತಮಿಳಿನಲ್ಲಿ ಬಿಗ್ ಓಪನಿಂಗ್ ಪಡೆದಿರೋ `ವಿಕ್ರಮ್’ ಚಿತ್ರ. ರಿಲೀಸ್ 3 ವಾರಗಳು ಕಳೆದರು ಜನ ಥಿಯೇಟರ್‌ನತ್ತು ಮುಗಿಬಿದ್ದು ಚಿತ್ರ ನೋಡ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ 16 ದಿನಕ್ಕೆ 352.17 ಕೋಟಿ ಕಲೆಕ್ಷನ್ ಮಾಡಿ, ನಂಬರ್ ಒನ್ ಸ್ಥಾನಕ್ಕೇರಿದೆ. ಈ ಹಿಂದೆ `ಬಾಹುಬಲಿ 2′ ಮಾಡಿರುವ ಎಲ್ಲಾ ರೆಕಾರ್ಡ್ ವಿಕ್ರಮ್ ಸಿನಿಮಾ ಬ್ರೇಕ್ ಮಾಡಿದೆ. ತಮಿಳುನಾಡಿನಲ್ಲಿ ಒಟ್ಟು 153.65 ಗಳಿಸಿದೆ. ಇನ್ನು ಯಶಸ್ವಿಯಾಗಿ ಚಿತ್ರ ಕಲೆಕ್ಷನ್ ಮಾಡುತ್ತಿದೆ. ಇದನ್ನೂ ಓದಿ: ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    `ಬಾಹುಬಲಿ 2′ ತಮಿಳಿನಲ್ಲಿ ಡಬ್ ಆಗಿ ಮಾಡಿರುವ ಮೋಡಿಗಿಂತ ಈಗ ವಿಕ್ರಮ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ ವಿಕ್ರಮ್ ಚಿತ್ರ ಅಗ್ರ ಸ್ಥಾನ ಪಟ್ಟಕ್ಕೇರಿದೆ.

    Live Tv

  • ಯಶ್ ಸಿನಿಮಾ ಹೊಸ ದಾಖಲೆ: `ಬಾಹುಬಲಿ 2’ಗೆ ಸೆಡ್ಡು ಹೊಡೆದ `ಕೆಜಿಎಫ್ 2′

    ಯಶ್ ಸಿನಿಮಾ ಹೊಸ ದಾಖಲೆ: `ಬಾಹುಬಲಿ 2’ಗೆ ಸೆಡ್ಡು ಹೊಡೆದ `ಕೆಜಿಎಫ್ 2′

    ಶ್ ನಟನೆಯ `ಕೆಜಿಎಫ್ 2′ ಸಿನಿಮಾ ಹೊಸ ದಾಖಲೆ ಬರೆದಿದೆ. ಚಿತ್ರ ರಿಲೀಸ್‌ಗೂ ಮೊದಲೇ ಸಾಕಷ್ಟು ದಾಖಲೆಗಳನ್ನ ಮಾಡಿತ್ತು. ಈಗ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಕಳೆದರು. ಮತ್ತೆ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಅದರಲ್ಲೂ ಬಾಹುಬಲಿ 2ಗೆ ಸೆಡ್ಡು ಹೊಡೆದು ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ.

    kgf 2

    ನ್ಯಾಷನಲ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಗೆಲುವಿನ ನಾಗಲೋಟದಲ್ಲಿದೆ. ಸದ್ಯ ಯಶ್ ಸಿನಿಮಾ ಹೊಸ ದಾಖಲೆ ಬರೆದಿದ್ದು, ಬಾಹುಬಲಿ 2ಗೆ ಸೆಡ್ಡು ಹೊಡೆದು ಮುಂದೆ ಬಂದಿದೆ. ಗಳಿಕೆಯ ವಿಚಾರದಲ್ಲಿ ಬಾಹುಬಲಿ 2 ಚಿತ್ರವನ್ನ ಕೆಜಿಎಫ್ 2 ಇನ್ನು ಮುಟ್ಟಿಲ್ಲ. ಆದರೆ ಟಿಕೆಟ್ ವಿಚಾರದಲ್ಲಿ ಬಾಹುಬಲಿ 2 ಸಿನಿಮಾವನ್ನು ಮೀರಿಸಿದೆ. ಇದನ್ನೂ ಓದಿ: ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    `ಕೆಜಿಎಫ್ 2′ ಟಿಕೆಟ್ ಮಾರಾಟ ಆಗಿರುವ ವಿಚಾರದಲ್ಲಿ ಹೊಸ ಸಮೀಕ್ಷೆ ಹೊರ ಬಿದ್ದಿದೆ. ಟಿಕೆಟ್ ಬುಕ್ ಮಾಡುವಂತಹ ಬುಕ್ ಮೈ ಶೋ ಆಪ್‌ನಲ್ಲಿ ಕೆಜಿಎಫ್ 2 ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಇಲ್ಲಿವರೆಗೂ ತೆರೆಕಂಡಂತಹ ಚಿತ್ರಗಳಲ್ಲಿ ಅತೀ ಟಿಕೆಟ್ ಸೇಲ್ ಆಗಿರುವುದು ಕೆಜಿಎಫ್ 2 ಚಿತ್ರವೇ ಆಗಿದೆ. ಒಟ್ಟು 17.1 ಮಿಲಿಯನ್ ಟಿಕೆಟ್ ಬುಕ್ ಮೈ ಶೋ ಮೂಲಕ ಮಾರಾಟವಾಗಿದೆ.

    `ಕೆಜಿಎಫ್ 2′ 17.1 ಮಿಲಿಯನ್ ಟಿಕೆಟ್ ಸೇಲ್ ಆಗಿದ್ರೆ, `ಬಾಹುಬಲಿ 2′ 16 ಮಿಲಿಯನ್ ಟಿಕೆಟ್ ಸೇಲ್ ಆಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಆರ್‌ಆರ್‌ಆರ್ ಚಿತ್ರವಿದ್ದು 13.4 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಈಗ ಯಶ್ ಸಿನಿಮಾ ಹೊಸ ದಾಖಲೆಗಳ ಸಾಲಿನಲ್ಲಿ ಸೇರುತ್ತಿರೋದನ್ನ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಏಪ್ರಿಲ್ 28 ನನಗೆ ಯಾವಾಗಲೂ ಭಾವನಾತ್ಮಕ ದಿನ: ಪ್ರಭಾಸ್

    ಏಪ್ರಿಲ್ 28 ನನಗೆ ಯಾವಾಗಲೂ ಭಾವನಾತ್ಮಕ ದಿನ: ಪ್ರಭಾಸ್

    ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಅಭಿನಯಿಸಿದ ‘ಬಾಹುಬಲಿ 2- ದಿ ಕನ್‍ಕ್ಲೂಶನ್’ ಚಿತ್ರದ ಬಿಡುಗಡೆಯಾಗಿ ಭಾನುವಾರಕ್ಕೆ ಎರಡು ವರ್ಷವಾಗಿದೆ. ಈ ದಿನ ನನಗೆ ಎಂದಿಗೂ ಭಾವನಾತ್ಮಕವಾಗಿರುತ್ತೆ ಎಂದು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಬಾಹುಬಲಿ-2 ಚಿತ್ರ ವಿಶ್ವದಾದ್ಯಂತ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಈ ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿದ್ದು, ಈ ದಿನ ಎಂದಿಗೂ ನನಗೆ ಭಾವನಾತ್ಮಕವಾಗಿ ಇರುತ್ತದೆ ಎಂದು ಪ್ರಭಾಸ್ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಇಂದಿಗೆ(ಭಾನುವಾರ) ಬಾಹುಬಲಿ 2- ದಿ ಕನ್‍ಕ್ಲೂಶನ್ ಚಿತ್ರದ ಬಿಡುಗಡೆಯಾಗಿ ಎರಡು ವರ್ಷ. ಈ ದಿನ ನನಗೆ ಯಾವಾಗಲೂ ಎಮೋಶನಲ್ ಆಗಿರುತ್ತದೆ. ಎಸ್‍ಎಸ್ ರಾಜಾಮೌಳಿ ಹಾಗೂ ಇಡೀ ಚಿತ್ರತಂಡಕ್ಕ ನಾನು ಕೃತಜ್ಞತೆ ಹೇಳಲು ಬಯಸುತ್ತೇನೆ. ನನ್ನ ಜೊತೆಯಲ್ಲಿ ಇದ್ದ ಎಲ್ಲ ಅಭಿಮಾನಿಗಳಿಗೆ ಪ್ರೀತಿಯ ಅಪ್ಪುಗೆ ನೀಡಲು ಇಷ್ಟಪಡುತ್ತೇನೆ. ಬಾಹುಬಲಿ ಚಿತ್ರವನ್ನು ಬೆಂಬಲಿಸಿ ಅದನ್ನು ಸೂಪರ್ ಹಿಟ್ ಮಾಡಿದಕ್ಕೆ ಧನ್ಯವಾಗಳು ಎಂದು ಪೋಸ್ಟ್ ಮಾಡಿದ್ದಾರೆ.

    ಬಾಹುಬಲಿ-2 ಚಿತ್ರವನ್ನು ಎಸ್.ಎಸ್ ರಾಜಾಮೌಳಿ ನಿರ್ದೇಶನ ಮಾಡಿದ್ದು, ಪ್ರಭಾಸ್ ಜೊತೆ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್ ಮುಂತಾದ ದೊಡ್ಡ ತಾರಾಗಣ ಚಿತ್ರ ಹೊಂದಿತ್ತು.

  • ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಬಾಹುಬಲಿ-2 ಚಿತ್ರದ ದಾಖಲೆಯನ್ನು ಮುರಿದ ಸಂಜು!

    ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗ ಈ ಚಿತ್ರ ‘ಬಾಹುಬಲಿ- 2’ ಚಿತ್ರದ ಒಂದು ದಾಖಲೆಯನ್ನು ಮುರಿದು ಸೂಪರ್ ಹಿಟ್ ಆಗಿ ಓಡುತ್ತಿದೆ.

    ಸಂಜು ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ 120.06 ಕೋಟಿ ರೂ. ಗಳಿಸಿದೆ. ಸಲ್ಮಾನ್ ಖಾನ್ ನಟಿಸಿದ ‘ರೇಸ್-3’ ಚಿತ್ರ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ‘ಪದ್ಮಾವತ್’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಸಂಜು ಚಿತ್ರ ಮುರಿದಿದೆ.

    ರೇಸ್-3 ಬಿಡುಗಡೆಯಾದ ಮೊದಲನೇ ವಾರದಲ್ಲಿ 106.47 ಕೋಟಿ ರೂ. ಗಳಿಸಿದ್ದು, ಪದ್ಮಾವತ್ ಚಿತ್ರ ಬಿಡುಗಡೆಯಾಗಿ ಮೊದಲ ವಾರದಲ್ಲಿ 114 ಕೋಟಿ ರೂ. ಗಳಿಸಿತ್ತು. ಈಗ ಸಂಜು ಚಿತ್ರ ಈ ದಾಖಲೆಯನ್ನು ಮುರಿದು ಭರ್ಜರಿ ಪ್ರದರ್ಶನ ಕಾಣುತ್ತಿದೆ.

    “ಸಂಜು ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿದ್ದಾರೆ. ಶುಕ್ರವಾರ 34.75 ಕೋಟಿ ರೂ., ಶನಿವಾರ 38.60 ಕೋಟಿ ರೂ. ಗಳಿಸಿದರೆ ಭಾನುವಾರ 46.71 ಕೋಟಿ ರೂ. ಗಳಿಸಿ ಒಟ್ಟು 120.06 ಕೋಟಿ ರೂ. ಗಳಿಸಿದೆ ಎಂದು ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

    ತರಣ್ ಆದರ್ಶ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ “ಸಂಜು ಚಿತ್ರ ಮೂರನೇ ದಿನದಲ್ಲಿ ಅತಿ ಹೆಚ್ಚು ಹಣಗಳಿಸಿ ಇತಿಹಾಸವನ್ನು ಬರೆದಿದೆ. ಅಲ್ಲದೇ ಬಾಹುಬಲಿ-2 ಚಿತ್ರದ ದಾಖಲೆಗಳನ್ನು ಮುರಿದಿದೆ. ಬಾಹುಬಲಿ-2 ಹಿಂದಿ ಚಿತ್ರ ಮೂರನೇ ದಿನ 46.50 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಸಂಜು ಮೂರನೇ ದಿನ 46.71 ಕೋಟಿ ರೂ. ಗಳಿಸಿ ಭಾರತದ ಬಾಕ್ಸ್ ಆಫೀಸ್‍ನಲ್ಲಿ ಬೆಂಕಿ ಹಚ್ಚಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಟ ರಣ್‍ಬೀರ್ ಕಪೂರ್, ಸಂಜಯ್ ದತ್ ರವರ ಪಾತ್ರ ನಿರ್ವಹಿಸಿದ್ದಾರೆ. ರಣ್‍ಬೀರ್ ಜೊತೆ ಸೋನಂ ಕಪೂರ್, ಪರೇಷ್ ರಾವಲ್, ದಿಯಾ ಮಿರ್ಜಾ ಮತ್ತು ಅನುಷ್ಕಾ ಶರ್ಮಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಆನೆ ಏರಿದಂತೆ ಸ್ಟಂಟ್- ವಿಡಿಯೋ ವೈರಲ್

    ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಆನೆ ಏರಿದಂತೆ ಸ್ಟಂಟ್- ವಿಡಿಯೋ ವೈರಲ್

    ಬರ್ಲಿನ್: ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

    ಜರ್ಮನಿ ದೇಶದ ರೆನೆ ಕಾಸೆಲೋವ್ಸ್ಕಿ ಈ ಸ್ಟಂಟ್ ಮಾಡಿ ಈಗ ಸುದ್ದಿಯಾಗಿದ್ದಾರೆ. ಅವರು ವೃತ್ತಿಯಲ್ಲಿ ಪ್ರಾಣಿಗಳ ತರಬೇತುದಾರ ಹಾಗೂ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ.

    https://www.instagram.com/p/BioVqftgYar/?utm_source=ig_embed

    https://www.instagram.com/p/BUrZTq8Bbti/?taken-by=rene_casselly

    ದೈತ್ಯ ಆನೆಯೊಂದನ್ನು ಪಳಗಿಸಿ, ಚಾಣಾಕ್ಷತನದಿಂದ ಸಾಹಸ ಮಾಡಿ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆನೆಗೆ ತನ್ನ ಸೊಂಡಿಲಿನಿಂದ ಮೇಲೆತ್ತಲು ತರಬೇತಿ ನೀಡಲು ಹೆಚ್ಚುಕಾಲ ಶ್ರಮಿಸಿದ್ದಾರೆ ಎಂದು ವರದಿಯಾಗಿದೆ.

    ರೆನೆ ಅವರು ಆನೆಯ ಸೊಂಡಿಲಿನ ಸಹಾಯದಿಂದ ಅದರ ಮೇಲೆ ಹತ್ತಿ ನಿಲ್ಲುವ ದೃಶ್ಯ ನೋಡುಗರಲ್ಲಿ ಒಂದು ಕ್ಷಣ ರೊಮಾಂಚನ ಉಂಟುಮಾಡಿದ್ದು ವಿಡಿಯೋ ಈಗ ವೈರಲ್ ಆಗಿದೆ.

  • ಭಾರತದಲ್ಲಿ ಮತ್ತೊಂದು ದಾಖಲೆ ಬರೆದ ಬಾಹುಬಲಿ-2

    ಭಾರತದಲ್ಲಿ ಮತ್ತೊಂದು ದಾಖಲೆ ಬರೆದ ಬಾಹುಬಲಿ-2

    ಮುಂಬೈ: ಎಸ್.ಎಸ್. ರಾಜಮೌಳಿ ನಿರ್ದೇಶನದ ಪ್ರಭಾಸ್ ಅಭಿನಯದ ಬಾಹುಬಲಿ 2 ಚಿತ್ರ ಭಾರತದ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ರೂ. ಹೆಚ್ಚು ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಭಾರತದಲ್ಲಿ ಇದುವರೆಗೆ ಯಾವ ಚಿತ್ರವೂ ಬಾಕ್ಸ್ ಆಫೀಸ್‍ನಲ್ಲಿ 1000 ಕೋಟಿ ರೂ. ಗಳಿಸಿಲ್ಲ. ಈಗ ಬಾಹುಬಲಿ 1 ಸಾವಿರ ರೂ. ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ.

    ಇದನ್ನೂ ಓದಿ: ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಅವರು ಪ್ರಕಾರ ಹಿಂದಿ, ತಮಿಳು, ತೆಲುಗು ಮಲೆಯಾಳಂ ಹೀಗೆ ನಾಲ್ಕು ಭಾಷೆಗಳ ಚಿತ್ರಗಳಿಂದ 1000 ಕೋಟಿ ರೂ. ವನ್ನು ಗಳಿಸಿದೆ. ಇದರಲ್ಲಿ ಹಿಂದಿಯಿಂದ 481 ಕೋಟಿ, ತೆಲುಗು ತಮಿಳು ಮತ್ತು ಮಲೆಯಾಳಂ ಒಟ್ಟು 520 ಕೋಟಿ ರೂ. ಗಳಿಸಿದೆ ಎಂದು ಬಾಲಾ ಟ್ವೀಟ್ ಮಾಡಿದ್ದಾರೆ.

    ಏಪ್ರಿಲ್ 28ರಂದು ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ತಮನ್ನಾ ಮೊದಲಾದವರು ಅಭಿನಯಿಸಿದ್ದಾರೆ.

    ಇದನ್ನೂ ಓದಿ: ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

     

  • ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಬಾಹುಬಲಿ-2 ಚಿತ್ರದಿಂದ ಕರ್ನಾಟಕಕ್ಕೆ ಕೋಟಿ ಕೋಟಿ ಆದಾಯ

    ಬೆಂಗಳೂರು: ಕರ್ನಾಟಕದಲ್ಲಿ ಬಾಹುಬಲಿ-2 ಚಿತ್ರ ಪ್ರದರ್ಶನದಿಂದ ಕೋಟ್ಯಾಂತರ ರೂಪಾಯಿ ಮನರಂಜನಾ ತೆರಿಗೆ ಸಂಗ್ರಹವಾಗಿದ್ದು, ವಾಣಿಜ್ಯ ತೆರಿಗೆ ಇಲಾಖೆ ಫುಲ್ ಖುಷ್ ಆಗಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ರಾಜ್ಯದಲ್ಲಿ ಬಾಹುಬಲಿ-2 ಪ್ರದರ್ಶನದಿಂದ 17 ಕೋಟಿ ರೂಪಾಯಿ ತೆರಿಗೆ ಬಂದಿದೆ. ಬೆಂಗಳೂರು ಒಂದರಲ್ಲೇ 13 ಕೋಟಿ 50 ಲಕ್ಷ ರೂಪಾಯಿ ತೆರಿಗೆ ಸಂಗ್ರಹವಾದ್ರೆ, ಬೆಂಗಳೂರೇತರ 3.50 ಕೋಟಿ ರೂಪಾಯಿ ತೆರಿಗೆ ಕಲೆಕ್ಷನ್ ಆಗಿದೆ. ಅಚ್ಚರಿ ಅಂದ್ರೆ ಬೆಂಗಳೂರಲ್ಲಿ ಚಿತ್ರ ಬಿಡುಗುಡೆಯಾದ ನಾಲ್ಕೇ ದಿನಕ್ಕೆ 7 ಕೋಟಿ 72 ಲಕ್ಷ ರೂಪಾಯಿ ಟ್ಯಾಕ್ಸ್ ಬಂದಿದೆ.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

    ಮಲ್ಟಿಪ್ಲೆಕ್ಸ್ ಶೋಗಳಿಂದ 5 ಕೋಟಿ 63 ಲಕ್ಷ ರೂ. ತೆರಿಗೆ ಸಂಗ್ರಹವಾದರೆ, ಥಿಯೇಟರ್‍ಗಳಿಂದ 2 ಕೋಟಿ 8 ಲಕ್ಷ ರೂಪಾಯಿ ಸಂಗ್ರವಾಗಿದೆ. `ಬಾಹುಬಲಿ-ದಿ ಬಿಗಿನಿಂಗ್’ ನಿಂದ 8 ಕೋಟಿ 94 ಲಕ್ಷ ರೂಪಾಯಿ ಸಂಗ್ರವಾಗಿದ್ರೆ, `ಬಾಹುಬಲಿ – ದಿ ಕನ್‍ಕ್ಲೂಷನ್’ ನಿಂದ ಬರೋಬ್ಬರಿ 17 ಕೋಟಿ ರೂಪಾಯಿ ತೆರಿಗೆ ಕಲೆಕ್ಟ್ ಆಗಿದೆ.

    ಇದನ್ನೂ ಓದಿ: ಬಾಹುಬಲಿ ಪ್ರಭಾಸ್‍ಗೆ ವಧುಬೇಕಾಗಿದೆ!- ಈ ಅರ್ಹತೆ ನಿಮಗಿದ್ರೆ ನೀವು ಟ್ರೈ ಮಾಡಬಹುದು!

    ಇದನ್ನೂ ಓದಿ: ಬಾಹುಬಲಿ ಸಕ್ಸಸ್:  ಕೊಲ್ಲೂರು, ಬಪ್ಪನಾಡು ಕ್ಷೇತ್ರಕ್ಕೆ ಅನುಷ್ಕಾ ಶೆಟ್ಟಿ ಭೇಟಿ
    ಇದನ್ನೂ ಓದಿ: ಮಿರ್ಚಿಗೆ 5 ಕೋಟಿ, ಬಾಹುಬಲಿಗೆ 25 ಕೋಟಿ: ಈಗ ಪ್ರಭಾಸ್ ಕಾಲ್ ಶೀಟ್ ಬೇಕಾದ್ರೆ ನೀವು ಇಷ್ಟು ಕೊಡ್ಬೇಕು