Tag: ಬಾಹುಬಲಿ 1

  • ಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ

    ಬಳ್ಳಾರಿಯಲ್ಲಿ ಬಾಹುಬಲಿ ಚಿತ್ರ ವೀಕ್ಷಿಸಿದ ರಾಜಮೌಳಿ

    ಬಳ್ಳಾರಿ: ಭಾರತದ ಸಿನಿ ಇತಿಹಾದಲ್ಲೇ ಹೊಸ ದಾಖಲೆ ನಿರ್ಮಿಸಿದ ಬಾಹುಬಲಿ 2 ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಇಂದು ಪತ್ನಿಯೊಂದಿಗೆ ಬಳ್ಳಾರಿಯಲ್ಲಿ ಚಿತ್ರ ವೀಕ್ಷಣೆ ಮಾಡಿದ್ರು.

    ಬಾಹುಬಲಿ 2 ಚಿತ್ರ ಯಶಸ್ವಿ ಪ್ರದರ್ಶನ ಹಿನ್ನಲೆಯಲ್ಲಿ ಬಳ್ಳಾರಿಯ ವಿಶೇಷ ಸೌಂಡ್ ತಂತ್ರಜ್ಞಾನ ಹೊಂದಿರುವ ರಾಧಿಕಾ ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿದ್ರು.

    ಇದನ್ನೂ ಓದಿ: ಒಂದು ಸಾವಿರ ಕೋಟಿ ಕ್ಲಬ್ ಸೇರಿದ ಬಾಹುಬಲಿ: ಯಾವ ದಿನ ಎಷ್ಟು ಕೋಟಿ ರೂ. ಕಲೆಕ್ಷನ್ ಆಗಿತ್ತು?

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಮೌಳಿ, ಬಾಹುಬಲಿ 2 ಚಿತ್ರ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ಬಗ್ಗೆ ಜನರಿಗೆ ಗೊತ್ತು. ಚಿತ್ರ ಯಶಸ್ವಿಯಾಗಿರುವುದು ಬಹಳ ಸಂತೋಷವಾಗಿದೆ. ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್ ಇಲ್ಲ, ರೆಸ್ಟ್ ಮಾಡುತ್ತಿದ್ದೇನೆ. ನನ್ನ ನಿರೀಕ್ಷೆಯಂತೆ ಚಿತ್ರಕ್ಕೆ ಒಳ್ಳೆಯ ಪ್ರತಿಫಲ ದೊರೆತಿದೆ. ಬಾಹುಬಲಿ ಚಿತ್ರದ ಕಥೆ, ಪಾತ್ರಗಳ ಪ್ರೇರಣೆಯಿಂದಲೇ ನಾನು ಚಿತ್ರ ನಿರ್ಮಾಣ ಮಾಡಿದೆ. ಬಾಹುಬಲಿ 1 ಮತ್ತು ಬಾಹುಬಲಿ 2 ಮೇಕಿಂಗ್ ಉತ್ತಮವಾಗಿದೆ. ಬಾಹುಬಲಿ 2ರ ಮೇಕಿಂಗ್ ನಲ್ಲಿ ಕೆಲವೊಂದು ಅಂಶಗಳು ಗಮನ ಸೆಳೆಯುತ್ತವೆ ಅಂತ ಹೇಳಿದ್ರು.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    ಡಬ್ಬಿಂಗ್ ವಿರುದ್ಧವಾಗಿ ವಾಣಿಜ್ಯ ಮಂಡಳಿಯಲ್ಲಿ ತೀರ್ಮಾನವಿದೆ. ಪ್ರಾದೇಶಿಕ ಭಾಷೆಗಳ ಡಬ್ಬಿಂಗ್ ಗೆ ಅವಕಾಶ ನೀಡಿದ್ರೆ ಒಳ್ಳೆಯದಾಗುತ್ತೆ. ಕಾನೂನು ಎಷ್ಟು ಗಟ್ಟಿಯಾಗಿದ್ರೂ ಪೈರಸಿಯಾಗುತ್ತಿದೆ. ಪೈರಸಿ ಹಾಲಿವುಡ್ ಗೂ ದೊಡ್ಡ ಸಮಸ್ಯೆಯಾಗಿದೆ ಅಂತಾ ರಾಜಮೌಳಿ ಹೇಳಿದ್ರು.

    ಇದನ್ನೂ ಓದಿ: ಬಾಹುಬಲಿಗೆ ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ: ಪ್ರಭಾಸ್

    https://www.youtube.com/watch?v=L65zi8EL5eY&feature=youtu.be

  • ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ

    ಬಾಹುಬಲಿ -2 ಹೇಗಿದೆ? ಯುಎಇ ಸೆನ್ಸಾರ್ ಸದಸ್ಯ ಹೇಳಿದ್ದು ಹೀಗೆ

    ಬೆಂಗಳೂರು: ಈಗಾಗಲೇ ಹಲವು ವಿವಾದಗಳನ್ನು ಎದುರಿಸಿದ್ದ ಬಾಹುಬಲಿ-2 ಚಿತ್ರ ಇನ್ನಷ್ಟೇ ಥಿಯೇಟರ್ ಗೆ ಕಾಲಿಡಲಿದೆ. ಈ ಮೊದಲೇ ಸಿನಿಮಾ ವಿಮರ್ಶಕರೊಬ್ಬರು ಸಿನಿಮಾ ಬಗ್ಗೆ ಟ್ವೀಟ್ ಮಾಡುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ.

    ಹೌದು. ಯುಎಇಯ ಸೆನ್ಸಾರ್ ಮಂಡಳಿ ಸದಸ್ಯ, ಯುಎಇ, ಯುಕೆ, ಭಾರತ ಸಿನಿಮಾ ವಿಮರ್ಶಕ ಉಮೈರ್ ಸಂಧು ಈ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ `ಬಾಹುಬಲಿ 2 ಚಿತ್ರ ಬಾಹುಬಲಿ 1ಕ್ಕಿಂತ ಶೇ. 100ರಷ್ಟು ಚೆನ್ನಾಗಿದೆ. ಬಲ್ಲ ಮೂಲಗಳ ಪ್ರಕಾರ ಈ ಸಿನಿಮಾ ಅತ್ಯದ್ಭುತವಾಗಿದೆಯಂತೆ. ಟಾಲಿವುಡ್ ಮತ್ತು ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸುವ ಸಮಯ ಇದಾಗಿದೆ’ ಅಂತಾ ಹೇಳಿದ್ದಾರೆ.

    ಎಸ್ ಎಸ್ ರಾಜಮೌಳಿ ನಿದೇರ್ಶನದ ಬಹುನಿರಕ್ಷಿತ ಬಾಹುಬಲಿ 2 ಚಿತ್ರ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ. ಸುಮಾರು 250 ಕೋಟಿ ರೂ. ಬಜೆಟ್‍ನ ಈ ಚಿತ್ರದ ಪ್ರಚಾರ ಈಗಾಗಲೇ ಭರ್ಜರಿಯಾಗಿ ನಡೆಯುತ್ತಿದೆ. ಬಾಹುಬಲಿ 1 ಚಿತ್ರದ ಬಿಡುಗಡೆಯ ಬಳಿಕ ಸಾಕಷ್ಟು ಕುತೂಹಲ ಮೂಡಿಸಿರುವ ಬಾಹುಬಲಿ 2 ಚಿತ್ರದ ಬಗ್ಗೆ ಚಿತ್ರತಂಡ ಈವರೆಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

    https://twitter.com/sandhumerry/status/853881283310755840