Tag: ಬಾಳ್ ಠಾಕ್ರೆ

  • ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ – ಅಡ್ವಾಣಿಗೆ ಅಂದು ಠಾಕ್ರೆ ನೀಡಿದ್ದ ಸಲಹೆಯ ಬಗ್ಗೆ ಉದ್ಧವ್‌ ಮಾತು

    ಮುಂಬೈ: ಮೋದಿಯನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಹಿಂದುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಬಾಳ್ ಠಾಕ್ರೆ ಅವರು ಸಲಹೆ ನೀಡಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

    Uddhav Thackeray

    2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಈ ವೇಳೆ ನಮ್ಮ ತಂದೆ ಮತ್ತು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ 2022ರ ಕೋಮು ಗಲಭೆ ಬಳಿಕ ದಿವಂಗತ ಬಿಜೆಪಿ ಮಠಾಧೀಶ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದರು. ಈ ವೇಳೆ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಮೋದಿಯನ್ನು ಪದಚ್ಯುತಗೊಳಿಸುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರೊಂದಿಗೆ ಮಾತನಾಡಲು ರಾಷ್ಟ್ರ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಲ್‍ಕೆ ಆಡ್ವಾಣಿ ಅವರು ಮುಂಬೈಗೆ ಭೇಟಿ ನೀಡಿದ್ದರು.

    ರ್‍ಯಾಲಿವೊಂದರಲ್ಲಿ ಪಾಲ್ಗೊಂಡು ನಂತರ ಕುಳಿತುಕೊಂಡು ಮಾತನಾಡುತ್ತಿದ್ದೆವು. ಆಗ ಎಲ್‍ಕೆ ಆಡ್ವಾಣಿ ಅವರು ಬಾಳ್ ಠಾಕ್ರೆ ಅವರೊಂದಿಗೆ ಯಾವುದೋ ವಿಚಾರ ಚರ್ಚಿಸಬೇಕು ಎಂದರು. ನಾನು ಮತ್ತು ಬಿಜೆಪಿ ದಿವಂಗತ ನಾಯಕ ಪ್ರಮೋದ್ ಜಿ ಅಲ್ಲಿಂದ ಎದ್ದು ಹೊರಟೆವು. ಆಗ ಎಲ್‍ಕೆ ಆಡ್ವಾಣಿಯವರು ಮೋದಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರ ಅನಿಸಿಕೆಯನ್ನು ಕೇಳಿದ್ದರು. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್‌ ಠಾಕ್ರೆ ತರಾಟೆ

    ಈ ವೇಳೆ ಬಾಳ್ ಠಾಕ್ರೆ ಅವರು ಅಡ್ವಾಣಿ ಅವರಿಗೆ ಮೋದಿಯನ್ನು ಮುಟ್ಟೋಕು ಹೋಗಬೇಡಿ. ಮೋದಿಯನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿದರೆ, ಬಿಜೆಪಿ ಗುಜರಾತ್‍ನನ್ನು ಕಳೆದುಕೊಳ್ಳುತ್ತದೆ ಮತ್ತು ಅದರಿಂದ ಹಿಂದುತ್ವಕ್ಕೆ ಹಾನಿಯಾಗುತ್ತದೆ ಎಂದು  ತಿಳಿಸಿದ್ದರು ಎಂದಿದ್ದಾರೆ.

  • ಶಿವಸೇನೆ ವಿರುದ್ಧ ಗುಡುಗಿದ ಫಡ್ನವೀಸ್ ಪತ್ನಿ

    ಶಿವಸೇನೆ ವಿರುದ್ಧ ಗುಡುಗಿದ ಫಡ್ನವೀಸ್ ಪತ್ನಿ

    ಮುಂಬೈ: ಶಿವಸೇನಾ ಸಂಸ್ಥಾಪಕರಾದ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾದ ಶಿವಸೇನೆ ಸರ್ಕಾರದ ನಿರ್ಧಾರವನ್ನು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಪಡ್ನವೀಸ್ ವಿರೋಧಿಸಿದ್ದಾರೆ.

    ಮುಂಬೈನ ಔರಂಗಾಬಾದ್‍ನಲ್ಲಿ ಬಾಳ್ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡಲು ತೀರ್ಮಾನಿಸಿರುವ ಉದ್ಧವ್ ಠಾಕ್ರೆ ಅವರ ನೇತೃತ್ವದ ಸರ್ಕಾರ, ಇದಕ್ಕಾಗಿ ಸುಮಾರು 1,000 ಮರಗಳನ್ನು ಕಡಿಯಲು ನಿರ್ಧಾರ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಅವರು ಶಿವಸೇನೆಯನ್ನು ಕಪಟಿ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೃತಾ ಪಡ್ನವೀಸ್ ಅವರು, ಬೂಟಾಟಿಕೆ ಎಂಬುದು ಒಂದು ರೋಗ. ಈ ಕಾಯಿಲೆಯಿಂದ ಬಳಲುತ್ತಿರುವ ಶಿವಸೇನೆ ಶೀಘ್ರವೇ ಗುಣಮುಖವಾಗಲಿ. ನಿಮಗೆ ಅಗತ್ಯವಿದ್ದಾಗ ಕಮೀಷನ್‍ಗಾಗಿ ಮರಗಳನ್ನು ಕಡಿಯುವುದು ಕ್ಷಮೆಯೇ ಇಲ್ಲದ ಪಾಪ ಎಂದು ಶಿವಸೇನೆಯನ್ನು ಕಟುವಾಗಿ ಟೀಕಿಸಿದ್ದಾರೆ.

    ಈ ಹಿಂದೆ ಶಿವಸೇನೆ ಮುಂಬೈನ ಆರೆ ಕಲೋನಿಯಲ್ಲಿ ಮೆಟ್ರೋ ಲೈನ್ ಮತ್ತು ಮೂರು ಕಾರ್ ಶೆಡ್‍ಗಳನ್ನು ನಿರ್ಮಿಸಲು ಮರಗಳನ್ನು ಕಡಿದಾಗ ಪರಿಸರ ಕಾಳಜಿಯ ಹೆಸರಿನಲ್ಲಿ ಇದನ್ನು ವಿರೋಧಿಸಿತ್ತು. ಆದರೆ ಈಗ ಮೊದಲ ಬಾರಿಗೆ ಸಿಎಂ ಅಗಿರವ ಉದ್ಧವ್ ಠಾಕ್ರೆ ಅವರು ತಮ್ಮ ತಂದೆಯ ಸ್ಮಾರಕ ನಿರ್ಮಾಣಕ್ಕಾಗಿ ಒಂದು ಸಾವಿರ ಮರಗಳನ್ನು ಕಡಿಯಲು ಮುಂದಾಗಿರುವುದು ಎಲ್ಲೆಡೆ ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.

    ಈ ವಿಚಾರವಾಗಿ ಔರಂಗಾಬಾದ್ ಮೇಯರ್ ನಂದಕುಮಾರ್ ಅವರು, ಈಗಾಗಲೇ ಮಾಧ್ಯಮ ಹೇಳಿಕೆ ನೀಡಿದ್ದು, ಸ್ಮಾರಕಕ್ಕಾಗಿ ಯಾವುದೇ ಮರಗಳನ್ನೂ ಕಡಿಯಲು ಬಿಡುವುದಿಲ್ಲ. ಇಲ್ಲಿ ಕೇವಲ ಠಾಕ್ರೆ ಅವರ ಸ್ಮಾರಕ ಮಾತ್ರ ನಿರ್ಮಾಣ ಮಾಡುತ್ತಿಲ್ಲ. ಸ್ಮಾರಕ ಜೊತೆಗೆ ಉದ್ಯಾನವನವನ್ನು ನಿರ್ಮಿಸುತ್ತಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.