Tag: ಬಾಲ ಮಂದಿರ

  • ಸರ್ಕಾರಿ ಬಾಲಮಂದಿರದಿಂದ ನಾಲ್ಕು ಮಕ್ಕಳು ನಾಪತ್ತೆ – ದೂರು ದಾಖಲು

    ಸರ್ಕಾರಿ ಬಾಲಮಂದಿರದಿಂದ ನಾಲ್ಕು ಮಕ್ಕಳು ನಾಪತ್ತೆ – ದೂರು ದಾಖಲು

    ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಸರ್ಕಾರಿ ಬಾಲಮಂದಿರದಲ್ಲಿ ನಾಲ್ವರು ಬಾಲಕರು ಕಾವಲುಗಾರರ ಕಣ್ತಪ್ಪಿಸಿ ನಾಪತ್ತೆಯಾಗಿದ್ದಾರೆ.

    ಬಾಲಮಂದಿರದ ಅಧಿಕಾರಿಗಳು ನಾಪತ್ತೆಯಾದ ಬಾಲಕರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ನಗರದ ಹೌಸಿಂಗ್ ಬೋರ್ಡ್‍ನಲ್ಲಿರುವ ಬಾಲಮಂದಿರದಲ್ಲಿ ಪ್ರಸ್ತುತ 24 ಮಕ್ಕಳಿದ್ದಾರೆ. ಆದರೆ, ಅವರಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ಬಾಲಮಂದಿರದಲ್ಲಿ ಸಿಸಿಟಿವಿ ಇದ್ದು, ಕಾವಲುಗಾರರು ಇದ್ದಾರೆ. ಆದರೆ, ಸಿಸಿಟಿವಿ ಹಾಗೂ ಕಾವಲುಗಾರರ ಕಣ್ತಪ್ಪಿಸಿ ಬಾಲಮಂದಿರದ ಹಿಂದಿನ ಗೇಟಿನ ಬೀಗ ಮುರಿದು ಬಿಲ್ಡಿಂಗ್‌ ಪಕ್ಕದಲ್ಲಿದ್ದ ಮರದಿಂದ ಕೆಳಗೆ ಇಳಿದು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

    ನಾಪತ್ತೆಯಾದ ನಾಲ್ವರಲ್ಲಿ ಚಿಕ್ಕಮಗಳೂರು ತಾಲೂಕಿನ ಅಂಬಳೆ ಮೂಲದ ಓರ್ವ ಬಾಲಕ ಪತ್ತೆಯಾಗಿದ್ದಾನೆ. ಆದರೆ, ಉಳಿದ ಮೂವರು ಪತ್ತೆಯಾಗಿಲ್ಲ. ನಾಪತ್ತೆಯಾಗಿರುವವರೆಲ್ಲಾ 12-14 ವರ್ಷದೊಳಗಿನ ಮಕ್ಕಳು. ನಾಲ್ವರು ಹುಡುಗರು ಪರಸ್ಪರ ಮಾತನಾಡಿಕೊಂಡು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಉಳಿದ ಮೂವರು ವಿದ್ಯಾರ್ಥಿಗಳು ಇರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಆದರೆ, ಕನ್ಫರ್ಮ್ ಆಗುತ್ತಿಲ್ಲ. ಬಾಲಕರು ಅವರೇನಾ ಎಂದು ಇರುವ ಜಾಗವನ್ನು ಕನ್ಫರ್ಮ್ ಮಾಡಿಕೊಂಡು ಕರೆದುಕೊಂಡು ಬರಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬಾಲಮಂದಿರದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರಲು ಆಗದೆ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲ ಮಂದಿರದ ಅಧಿಕಾರಿಗಳು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

  • ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಬಾಲ ಮಂದಿರದಲ್ಲಿದ್ದ 35 ವಿದ್ಯಾರ್ಥಿನಿಯರಿಗೆ ಕೋವಿಡ್ ಪಾಸಿಟಿವ್

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳನ್ನು ಓಪನ್ ಮಾಡಲು ಈಗಾಗಲೇ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿರುವ ವೇಳೆಯಲ್ಲಿ ಮಡಿಕೇರಿ ನಗರದ ಬಾಲಕಿಯರ ಬಾಲ ಮಂದಿರದ 35 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ದೃಢಪಡಿಟ್ಟಿದೆ.

    ಬಾಲಮಂದಿರಲ್ಲಿ ಇರುವ ಒಟ್ಟು 47 ವಿದ್ಯಾರ್ಥಿಗಳ ಪೈಕಿ 35 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ದೃಢವಾಗಿದೆ. ಬಾಲ ಮಂದಿರದಲ್ಲಿ ಇಬ್ಬರು ಪಿಯು ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಿ ಬಂದಿದ್ದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿನಿಯರಿಗೆ ಸೋಂಕು ಬಂದಿತ್ತು. ಅವರಿಂದ ಉಳಿದ 33 ವಿದ್ಯಾರ್ಥಿನಿಯರಿಗೆ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಒಟ್ಟೋಟಿಗೆ ಗುಂಪು ಗುಂಪಾಗಿ ವಿದ್ಯಾರ್ಥಿನಿಯರು ಬಾಲಮಂದಿರದಲ್ಲಿರುವುದು ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: 10-14 ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆಯುವುದು ಉತ್ತಮ- ಅಧ್ಯಯನ ವರದಿ

    ಬಾಲ ಮಂದಿರದಲ್ಲಿ ಕೋವಿಡ್ ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಅಗದೇ ಇರುವುದರಿಂದ ಒಂದೇ ಬಾರೀ 33 ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಬಂದಿದ್ದು, ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ತಕ್ಷಣ ಬಾಲ ಮಂದಿರದ ಸಿಬ್ಬಂದಿ ಉಳಿದ ಮಕ್ಕಳಿಗೆ ಬೇರೆ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಡಿದ್ದಾರೆ.  ಇದನ್ನೂ ಓದಿ:ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ 

    ಈಗಾಗಲೇ ಬಾಲಮಂದಿರದ 12 ಸಿಬ್ಬಂದಿಗಳಿಗೂ ಆರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್ ಮಾಡಲಾಗಿದೆ. ಸದ್ಯ ಎಲ್ಲಾ ವಿದ್ಯಾರ್ಥಿಗಳನ್ನು ಬಾಲ ಮಂದಿರದಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಅರೋಗ್ಯ ಇಲಾಖೆ ಒದಗಿಸುತ್ತಿದೆ. ಒಟ್ಟಿನಲ್ಲಿ ಶಾಲೆ ಕಾಲೇಜಿಗೆ ಶುಕ್ರವಾರದಿಂದ ಮಕ್ಕಳನ್ನು ಕಳುಹಿಸಲು ಯೋಚನೆ ಮಾಡಿದ ಪೊಷಕರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

     

  • ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಮಗಳನ್ನು ಮನೆಗೆ ಕರೆದೊಯ್ಯಲೊಪ್ಪದ ತಂದೆ: ಯುವತಿಯ ಜೊತೆ ಪೊಲೀಸರ ಅಮಾನವೀಯತೆ

    ಕಾರವಾರ: ಮೂರು ದಿನಗಳ ಹಿಂದೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ಎಳೆದುಕೊಂಡು ಹೋದ ಘಟನೆ ನಗರದಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮದ ಚಾಂದಿನಿ (17) (ಹೆಸರು ಬದಲಾಯಿಸಲಾಗಿದೆ) ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ. ಚಾಂದಿನಿಯ ತಂದೆ ಜಗದೀಶ್ ಆಕೆಯನ್ನು ಸಾಕಲಾಗದೆ ಏಳು ತಿಂಗಳ ಹಿಂದೆಯೇ ಸ್ವೀಕಾರ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಕಾಣೆಯಾಗಿದ್ದ ಮಗಳು ಪತ್ತೆಯಾಗಿದ್ದರೂ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಜಗದೀಶ್ ಹಿಂದೇಟು ಹಾಕಿದ್ದಾರೆ.

    ನಡೆದದ್ದು ಏನು?: ಚಾಂದಿನಿ, ಜಗದೀಶ್ ನ ಮೊದಲ ಪತ್ನಿಯ ಮಗಳು. ಚಾಂದಿನಿ ಚಿಕ್ಕವಳಿದ್ದಾಗ ತಾಯಿ ಮೃತಪಟ್ಟಿದ್ದಳು. ತಂದೆ ಜಗದೀಶ್ ಮತ್ತೊಂದು ಮದುವೆ ಆಗಿದ್ದಾರೆ. ಇದರಿಂದಾಗಿ ಚಾಂದಿನಿ ನಿಷ್ಕಾಳಜಿಗೆ ಒಳಗಾಗಿದ್ದು, ಮಲತಾಯಿ ಧೋರಣೆಗೆ ತುತ್ತಾದ ಅವಳನ್ನು ಜಗದೀಶ್ 9ನೇ ತರಗತಿಯಲ್ಲಿಯೇ ಬೆಂಗಳೂರಿನ ಬಾಲ ಮಂದಿರಕ್ಕೆ ಸೇರಿಸಿದ್ದರು. ಅಲ್ಲಿ ದೈಹಿಕ ಹಿಂಸೆ ನೀಡುತ್ತಿದ್ದರು ಅಂತಾ ಚಾಂದಿನಿ ತಪ್ಪಿಸಿಕೊಂಡು, ಪುನಃ ಮನೆಗೆ ಬಂದಿದ್ದಾಳೆ.

    ಮನೆಯಲ್ಲಿಯೇ ಇದ್ದು ವ್ಯಾಸಂಗ ಮಾಡುತ್ತಿದ್ದ ಚಾಂದಿನಿ ಜಗದೀಶ್ ನನ್ನು ದ್ವೇಷಿಸಲು ಪ್ರಾರಂಭಿಸಿದ್ದಳು. ನಿತ್ಯವೂ ಮಲತಾಯಿ ಜೊತೆಗೆ ಜಗಳವಾಡುತ್ತಿದ್ದಳು. ಅಷ್ಟೇ ಅಲ್ಲದೆ ಮನೆ ಬಿಟ್ಟು ಸುಮಾರು ದಿನ ಸ್ನೇಹಿತೆಯರ ಮನೆಯಲ್ಲಿ ತಂಗುತ್ತಿದ್ದಳು. ಇದರಿಂದ ಬೇಸತ್ತ ದಂಪತಿ ಆಕೆಗೆ ಮಾನಸಿಕ ಕಾಯಿಲೆಯಿದೆ, ನಮ್ಮಿಂದ ಸಾಕಲು ಆಗುವುದಿಲ್ಲವೆಂದು ಕಾರವಾರದ ಸ್ವೀಕಾರ ಕೇಂದ್ರಕ್ಕೆ ತಂದು ಬಿಟ್ಟಿದ್ದರು. ಪಿಯುಸಿ ಪೂರ್ಣಗೊಳಿಸಿದ್ದು, ಮನೆಯಲ್ಲಿ ಇರುವ ಇಚ್ಛೆಯನ್ನು ತಂದೆಗೆ ಹೇಳಿದ್ದರೂ, ಜಗದೀಶ್ ಆಕೆಯನ್ನು ಮನೆಗೆ ಕರೆದುಕೊಂಡೊಯ್ಯಲು ಒಪ್ಪುತ್ತಿರಲಿಲ್ಲ. ಹೀಗಾಗಿ ಮೂರು ದಿನಗಳ ಹಿಂದೆ ಆಕೆ ಸ್ವೀಕಾರ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಿದ್ದಾಳೆ.

    ಚಾಂದಿನಿ ಕಾಣೆಯಾಗಿರುವ ಕುರಿತು ತಂದೆ ಜಗದೀಶ್ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬುಧವಾರ ರಾತ್ರಿ ಕಾರವಾರದ ಎಂ.ಜಿ.ರೋಡ್‍ನಲ್ಲಿ ಚಾಂದಿನಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಬಂದ ಸ್ವೀಕಾರ ಕೇಂದ್ರದ ಅಧಿಕಾರಿಗಳು, ಮಲ್ಲಾಪುರ ಪೊಲೀಸರು ಹಾಗೂ ಜಗದೀಶ್ ಚಾಂದಿನಿಯನ್ನು ಸ್ವೀಕಾರ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಚಾಂದಿನಿ ಚರಂಡಿಯಲ್ಲಿ ಅರ್ಧ ಗಂಟೆ ಬಚ್ಚಿಟ್ಟುಕೊಂಡಿದ್ದಳು. ಅವಳ ಮನವೊಲಿಕೆಗಾಗಿ ಪೊಲೀಸರು ನಾವು ನಿನ್ನನ್ನು ಸ್ವೀಕಾರ ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಜಗದೀಶ್ ಮಾತ್ರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಸಿದ್ಧರಿರಲಿಲ್ಲ. ಯುವತಿಯ ಪ್ರತಿರೋಧದ ನಡುವೆಯೇ ಮಳೆಯನ್ನು ಲೆಕ್ಕಿಸದೇ ಸ್ವೀಕಾರ ಕೇಂದ್ರದ ಮಹಿಳಾ ಅಧಿಕಾರಿ ಹಾಗೂ ಮಹಿಳಾ ಪೊಲೀಸ್ ಅಮಾನವೀಯವಾಗಿ ಎಳೆದು ಆಟೋದಲ್ಲಿ ಸ್ವೀಕಾರ ಕೇಂದ್ರಕ್ಕೆ ಬಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.