Tag: ಬಾಲ್ಕಿನಿ

  • ಬಾಲ್ಕನಿಗೆ ಬರಬೇಡಿ ಎಂದು ಸಲ್ಮಾನ್ ಗೆ ಮನವಿ ಮಾಡಿದ ರಾಖಿ

    ಬಾಲ್ಕನಿಗೆ ಬರಬೇಡಿ ಎಂದು ಸಲ್ಮಾನ್ ಗೆ ಮನವಿ ಮಾಡಿದ ರಾಖಿ

    ಜೀವ ಬೆದರಿಕೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ನಟಿ ರಾಖಿ ಸಾವಂತ್ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನು ನೋಡಲು ಬಾಲ್ಕಿನಿಗೆ ಬರಬೇಡಿ ಎಂದು ರಾಖಿ (Rakhi Sawant) ಮನವಿ ಮಾಡಿದ್ದಾರೆ. ಈ ಹಿಂದೆಯೂ ಜೀವ ಬೆದರಿಕೆ ವಿಷಯದಲ್ಲಿ ಸಲ್ಮಾನ್ ಪರ ನಿಂತಿದ್ದರು ರಾಖಿ ಸಾವಂತ್.

    ಸಲ್ಮಾನ್ ಖಾನ್ ಮನೆ ಮುಂದೆ ನಡೆದ ಗುಂಡಿನ ದಾಳಿಯ ನಂತರ ಅವರ ಕುಟುಂಬ ಸಾಕಷ್ಟು ಆತಂಕ್ಕೆ ಒಳಗಾಗಿದೆ. ಸಲ್ಮಾನ್ ಹತ್ಯೆ ಮಾಡಲು ನಾನಾ ರೀತಿಯ ಕಸರತ್ತುಗಳನ್ನು ದುರುಳರು ಮಾಡುತ್ತಿದ್ದಾರೆ. ಹಾಗಾಗಿ ತಾವಿರುವ ಅಪಾರ್ಟ್ಮೆಂಟ್ ಅನ್ನು ಖಾಲಿ ಮಾಡಲು ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಕುರಿತು ಸಲ್ಮಾನ್ ಸಹೋದರ ಅರ್ಬಾಜ್ ಮಾಹಿತಿ ನೀಡಿದ್ದು, ಅಂತಹ ಯೋಚನೆ ಸದ್ಯಕ್ಕಿಲ್ಲ ಅಂದಿದ್ದಾರೆ.

    ಗುಂಡಿನ ದಾಳಿಯನ್ನು ಮುಂಬೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗಾಗಲೇ ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿದೆ. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದೀಗ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿದ್ದು, ಈ ಇಬ್ಬರನ್ನೂ ಪಂಜಾಬ್ (Punjab) ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ನಡುವೆ ಮುಂಬೈ ಪೊಲೀಸರಿಂದ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ.  ಆರೋಪಿ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನ 20 ವಯಸ್ಸಿನ ರೋಹಿತ್ ತ್ಯಾಗಿ. ಆರೋಪಿಯು, ನಟ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಿಂದ ಬಾಂದ್ರಾ ಪೊಲೀಸ್ ಠಾಣೆಗೆ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

     

    ಕ್ಯಾಬ್ ಡ್ರೈವರ್ ಸಲ್ಮಾನ್ ಖಾನ್ ಅವರ ಮನೆಯಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಬಂದು ಬುಕ್ಕಿಂಗ್ ಬಗ್ಗೆ ಅಲ್ಲಿನ ವಾಚ್‌ಮನ್‌ ಬಳಿ ಕೇಳಿದ್ದಾರೆ. ಮೊದಲು ದಿಗ್ಭ್ರಮೆಗೊಂಡ ವಾಚ್‌ಮನ್, ತಕ್ಷಣ ಬುಕಿಂಗ್ ಬಗ್ಗೆ ಹತ್ತಿರದ ಬಾಂದ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಮುಂಬೈನ ಬಾಂದ್ರಾ ಪೊಲೀಸರು, ಕ್ಯಾಬ್ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು. ಆನ್‌ಲೈನ್‌ನಲ್ಲಿ ಕ್ಯಾಬ್ ಬುಕ್ ಮಾಡಿದ ವ್ಯಕ್ತಿಯ ಮಾಹಿತಿಯನ್ನು ಟ್ರ್ಯಾಕ್ ಮಾಡಿದ್ದಾರೆ. ಕ್ಯಾಬ್ ಬುಕ್ ಮಾಡಿದ ವ್ಯಕ್ತಿ ಘಾಜಿಯಾಬಾದ್‌ನ 20 ವರ್ಷದ ವಿದ್ಯಾರ್ಥಿಯಾಗಿದ್ದು, ರೋಹಿತ್ ತ್ಯಾಗಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಕ್ಯಾಬ್ ಬುಕ್ ಮಾಡಿರುವುದು ಚೇಷ್ಟೆಗಾಗಿ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಿದರು. ನಂತರ ಅವರನ್ನು ಮುಂಬೈಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

  • ಲಾಕ್‍ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆ ವಿಚಾರವನ್ನ ರಿವೀಲ್ ಮಾಡಿದ ರಾಧಿಕಾ

    ಲಾಕ್‍ಡೌನ್ ಸಮಯದಲ್ಲಿ ಗಮನಿಸಿದ ಒಳ್ಳೆ ವಿಚಾರವನ್ನ ರಿವೀಲ್ ಮಾಡಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಲಾಕ್‍ಡೌನ್ ಸಮಯದಲ್ಲಿ ತಾವು ಗಮನಿಸಿದ ಒಳ್ಳೆಯ ವಿಷಯವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಯಾರೂ ಕೂಡ ಮನೆಯಿಂದ ಹೊರಬರುತ್ತಿಲ್ಲ. ಇನ್ನೂ ಸ್ಟಾರ್ ನಟ-ನಟಿಯರು ಕೂಡ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಹೀಗಾಗಿ ಜನರು ಕೂಡ ಮನೆಯಲ್ಲಿದ್ದು ಬೇಸರವಾದಾಗ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಿಗೆ ಬಂದು ಕುಟುಂಬದವರಿಂದ ಕಾಲಕಳೆಯುತ್ತಿದ್ದಾರೆ. ಇದನ್ನು ಗಮನಿಸಿದ ರಾಧಿಕಾ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ರಾಧಿಕಾ ಪಂಡಿತ್ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತುಕೊಂಡಿರುವ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗೆ “ಈ ಲಾಕ್‍ಡೌನ್ ಸಮಯದಲ್ಲಿ ನಾನು ಗಮನಿಸಿದ ಒಂದು ಒಳ್ಳೆಯ ವಿಷಯವೆಂದರೆ, ಅನೇಕ ಜನರು ತಮ್ಮ ಮನೆಯಿಂದ ಹೊರಬಂದು ತಮ್ಮ ಮನೆಯ ಟೆರೇಸ್ ಮತ್ತು ಬಾಲ್ಕನಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಒಂದು ವೇಳೆ ಈ ಲಾಕ್‍ಡೌನ್ ಇಲ್ಲದಿದ್ದರೆ ಟೆರೇಸ್ ಮತ್ತು ಬಾಲ್ಕನಿಗಳನ್ನು ಜನರು ನಿರ್ಲಕ್ಷಿಸುತ್ತಿದ್ದರು” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋ ಕಳೆದ ವರ್ಷ ರಾಧಿಕಾ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ಕ್ಲಿಕ್ಕಿಸಿದ್ದಾಗಿದೆ. ಇತ್ತೀಚೆಗಷ್ಟೆ ರಾಧಿಕಾ ಅವರು ತಮ್ಮ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    https://www.instagram.com/p/B_VEZC4gQka/?igshid=1tjsmqvy6fkso

    ರಾಧಿಕಾ ತಮ್ಮ ಅಪ್ಪ-ಅಪ್ಪ ಐರಾಳನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದರು. ಅದಕ್ಕೆ “ನಾನು ಇಬ್ಬರು ಮಕ್ಕಳನ್ನು ನೋಡಿಕೊಳ್ಳುವ ಜವಬ್ದಾರಿಯನ್ನು ಹೇಗೆ ನಿರ್ವಹಿಸುತ್ತಿದ್ದೇನೆ ಎಂಬ ಬಗ್ಗೆ ಹಲವರು ಕುತೂಹಲ ಹೊಂದಿದ್ದಾರೆ ಎಂಬುದು ನನಗೆ ತಿಳಿದಿದೆ. ಈ ಫೋಟೋದಲ್ಲಿರುವ ಇಬ್ಬರನ್ನು ನೋಡಿ. ಇವರೇ ನನ್ನ ಸೀಕ್ರೆಟ್. ಇವರಿಂದ ನಾನು ವಿಶ್ರಾಂತಿ ಪಡೆಯುತ್ತೇನೆ” ಎಂದಿದ್ದರು.

    ಅಲ್ಲದೇ “ಐರಾ ಮತ್ತು ಜೂನಿಯರ್ ಯಶ್ ಇವರಿಲ್ಲದೇ ಇರಲು ಸಾಧ್ಯವಿಲ್ಲ. ಅವರು ನನಗೆ ಮಮ್ಮಿ, ಅಪ್ಪಾ, ಆದರೆ ಐರಾ ಮತ್ತು ಜೂನಿಯರ್ ಯಶ್‍ಗೆ ಮಿಮಿ ಮತ್ತು ಅಜ್ಜು ಆಗಿದ್ದಾರೆ. ಐರಾ ತಮ್ಮ ಅಮ್ಮಮ್ಮಾನನ್ನು ಮಿಮಿ ಎಂದು ಕರೆಯುತ್ತಾಳೆ. ಯಾಕೆಂದರೆ ನಾನು ನನ್ನ ಅಮ್ಮನನ್ನು ಮಮ್ಮಿ ಎಂದು ಕರೆಯುತ್ತೇನೆ. ಅದನ್ನು ಕೇಳಿಸಿಕೊಂಡು ಐರಾ ಮಿಮಿ ಎಂದು ಕರೆಯುತ್ತಾಳೆ” ಎಂದು ಬರೆದುಕೊಂಡಿದ್ದರು.