Tag: ಬಾಲ್ಕಿ

  • ಭಾಲ್ಕಿ ಕಣಜಿಯಲ್ಲಿ ಮಾಜಿ ಶಾಸಕ ಮೊಳಕೇರಿ ಮೂರ್ತಿ ಅನಾವರಣ

    ಭಾಲ್ಕಿ ಕಣಜಿಯಲ್ಲಿ ಮಾಜಿ ಶಾಸಕ ಮೊಳಕೇರಿ ಮೂರ್ತಿ ಅನಾವರಣ

    ಬೀದರ್: ಮಾಜಿ ಶಾಸಕ ದಿ.ಕಲ್ಯಾಣರಾವ್ ಮೊಳಕೇರಿ (Kalyan Rao Molakeri) ಅವರ ಮೂರ್ತಿಯನ್ನು (Statue) ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಇಂದು ಭಾಲ್ಕಿ (Bhalki) ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಅನಾವರಣಗೊಳಿಸಿದರು.

    ನಿಧನರಾಗಿ 30 ವರ್ಷ ಕಳೆದರೂ ಕಲ್ಯಾಣರಾವ್ ಮೊಳಕೇರಿ ಅವರು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರು ಜನನಾಯಕ, ದೇಶ ಭಕ್ತ ಆಗಿದ್ದರು ಎಂದು ಬಣ್ಣಿಸಿದರು. ಇದನ್ನೂ ಓದಿ: ಆರೋಪ ಮಾಡಿ ಓಡಿ ಹೋಗುವ ಬಹಳ ಮಂದಿಯನ್ನು ನೋಡಿದ್ದೇನೆ: ಡಿಕೆ ಸುರೇಶ್

    ಕಲ್ಯಾಣರಾವ್ ಆದರ್ಶ ರಾಜಕಾರಣಿ ಆಗಿದ್ದರು. ಅವರ ಕುರಿತು ಕೃತಿ ರಚಿಸಿರುವುದು ಪ್ರಶಂಸನೀಯ ಎಂದು ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ಜನನಾಯಕ ಕಲ್ಯಾಣರಾವ್ ಮೊಳಕೇರಿ ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನುಡಿದರು.

    ಕೃತಿಯಲ್ಲಿ ಲೇಖಕರು ಮೊಳಕೇರಿ ಅವರ ಜೀವನ ಹಾಗೂ ಸಾಧನೆ ಮೇಲೆ ಬೆಳಕು ಚೆಲ್ಲಿದ್ದಾರೆ. ಸಂಕ್ಷಿಪ್ತದಲ್ಲೇ ಸಮಗ್ರ ಮಾಹಿತಿ ಒದಗಿಸಿದ್ದಾರೆ ಎಂದು ಕೃತಿ ಕುರಿತು ಡಾ. ರಾಮಚಂದ್ರ ಗಣಾಪುರ ಹೇಳಿದರು.

    ಕಲ್ಯಾಣರಾವ್ ಅವರು ನಿಸ್ವಾರ್ಥ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಅವರು ನಮ್ಮಿಂದ ಮರೆಯಾಗದಿರಲಿ ಎನ್ನುವ ಕಾರಣಕ್ಕೆ ಕೃತಿ ರಚಿಸಿದ್ದೇನೆ ಎಂದು ಪಂಚಾಕ್ಷರಿ ಪುಣ್ಯಶೆಟ್ಟಿ ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಹೈಕಮಾಂಡ್‍ಗೆ ಬೀದರ್ ಉತ್ತರ, ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್

    ಬಿಜೆಪಿ ಹೈಕಮಾಂಡ್‍ಗೆ ಬೀದರ್ ಉತ್ತರ, ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಟೆನ್ಶನ್

    ಬೀದರ್: ಬಿಜೆಪಿ (BJP) ನಾಯಕರಿಗೆ ಬೀದರ್ (Bidar) ಉತ್ತರ ಹಾಗೂ ಭಾಲ್ಕಿ ಟಿಕೆಟ್ ಆಯ್ಕೆಯ ಭಾರಿ ಒತ್ತಡ ಶುರುವಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಒಬಿಸಿ ಫೈಟ್ ಹೈಕಮಾಂಡ್‍ಗೆ ತಲೆನೋವುವಾಗಿ ಪರಿಣಮಿಸಿದೆ. ಈ ಕಾರಣಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎರಡೂ ಕ್ಷೇತ್ರಗಳ ಟಿಕೆಟ್ (BJP candidates list) ಘೋಷಣೆ ಮಾಡದೇ ನಿರ್ಧಾರವನ್ನು ತಡೆಹಿಡಿಯಲಾಗಿದೆ.

    ಲಿಂಗಾಯತರಿಗೆ ಆದ್ಯತೆ ನೀಡಬೇಕಾ? ಒಬಿಸಿ ಅಭ್ಯರ್ಥಿಗೆ ಟಿಕೆಟ್ ನೀಡಬೇಕಾ? ಹಳಬರಿಗೆ ಕೊಡಬೇಕಾ ಅಥವಾ ಹೊಸ ಮುಖಗಳನ್ನು ಅಖಾಡಕ್ಕಿಳಿಸಬೇಕಾ? ಎಂಬ ಗೊಂದಲದಲ್ಲಿ ಹೈಕಮಾಂಡ್ ಸಿಲುಕಿದೆ. ಹಾಲಿ ಶಾಸಕ ರಹೀಮ್ ಖಾನ್ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ನಾನಾ ರಣತಂತ್ರ ಹೆಣೆಯುತ್ತಿದೆ. ಇದಕ್ಕಾಗಿ ಅಳೆದು ತೂಗಿ ಟಿಕೆಟ್ ನಿರ್ಧರಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಿದೆ ಬಿಜೆಪಿ ಪಟ್ಟಿ: ಈಶ್ವರಪ್ಪ

    ಹಿಂದಿನ ಚುನಾವಣೆಯಲ್ಲಿ (Election) ಪರಾಜಿತರಾಗಿದ್ದ ಸೂರ್ಯಕಾಂತ ನಾಗರಮಾರಪಳ್ಳಿ ಲಿಂಗಾಯತ ಸಮುದಾಯದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಿರಿಯ ಉದ್ಯಮಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ್ ಸಹ ಆಕಾಂಕ್ಷಿಯಾಗಿದ್ದು ಇಬ್ಬರ ನಡುವೆ ಟಿಕೆಟ್‍ಗಾಗಿ ಭಾರಿ ಪೈಪೋಟಿಯಿದೆ. ಒಬಿಸಿಯಿಂದ ಈಶ್ವರ ಸಿಂಗ್ ಠಾಕೂರ್ ಹಾಗೂ ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ ಅವರ ಹೆಸರು ಕೂಡಾ ಆಕಾಂಕ್ಷಿಗಳ ಸಾಲಿನಲ್ಲಿ ಕೇಳಿ ಬರುತ್ತಿದೆ.

    ಭಾಲ್ಕಿಯಲ್ಲಿ ಲಿಂಗಾಯತರಿಗೆ ಇಲ್ಲವೇ ಮರಾಠರಿಗೆ ಟಿಕೆಟ್ ನೀಡುವ ಬಗ್ಗೆ ಗೊಂದಲವಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸಿದೆ. ಲಿಂಗಾಯತ ಪ್ರಕಾಶ್ ಖಂಡ್ರೆ, ಡಿ.ಕೆ ಸಿದ್ರಾಮ್ ಅಥವಾ ಮರಾಠ ಮುಖಂಡ ಡಾ.ದಿನಕರ್‍ಗೆ ಟಿಕೆಟ್ ನೀಡಬೇಕಾ ಎಂಬ ಗೊಂದಲವಿದೆ.

    ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರದ ಟಿಕೆಟ್ ಮಾತ್ರ ಘೋಷಣೆ ಮಾಡಿದ್ದು ಬಸವಕಲ್ಯಾಣದಿಂದ ಶರಣು ಸಲಗರ್‍ಗೆ, ಔರಾದ್‍ನಿಂದ ಪ್ರಭು ಚವ್ಹಾಣ್‍ಗೆ, ಹುಮ್ನಾಬಾದ್‍ನಿಂದ ಸಿದ್ದು ಪಾಟೀಲ್‍ಗೆ ಹಾಗೂ ಬೀದರ್ ದಕ್ಷಿಣದಿಂದ ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಮಾಡಲು ಸಿದ್ಧ, ಆದ್ರೆ ಅದು ಗೌರವಯುತವಾಗಿ ಆಗಬೇಕು: ಶೆಟ್ಟರ್

  • ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ- ಒಬ್ಬ ಸಾವು

    ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ- ಒಬ್ಬ ಸಾವು

    ಬೀದರ್: ಅಂಗಡಿ ಪೂಜೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು, ಓರ್ವ ಕೊಲೆಯಾದ ಘಟನೆ ಭಾಲ್ಕಿ ತಾಲೂಕಿನ ಸಿಕ್ಕಂದರ್‌ಬಾದ್ವಾಡಿ ಗ್ರಾಮದಲ್ಲಿ ನಡೆದಿದೆ.

    ಸಿಕ್ಕಂದರ್‌ಬಾದ್ವಾಡಿ ಗ್ರಾಮದ ಜರೆಪ್ಪ (35) ಕೊಲೆಯಾದ ವ್ಯಕ್ತಿ. ಜರೆಪ್ಪ ಅವರು ಮಂಗಳವಾರ ತನ್ನ ಸ್ನೇಹಿತನ ಅಂಗಡಿ ಪೂಜೆಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಡಿಜೆ ಹಚ್ಚಿ ಸಂಭ್ರಮಿಸುತ್ತಿದ್ದರು. ಇದರಿಂದಾಗಿ ಕೋಪಗೊಂಡ ಗ್ರಾಮದ ಮತ್ತೊಂದು ಗುಂಪಿನ ಯುವಕರು ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜರೆಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜರೆಪ್ಪನ ಸಂಬಂಧಿಕರು ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‍ಗೆ ಕರೆದೊಯ್ಯ ಮುಂದಾಗಿದ್ದರು. ಆದರೆ ಹೈದ್ರಾಬಾದ್‍ಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಜರೆಪ್ಪ ಮೃತಪಟ್ಟಿದ್ದಾರೆ.

    ಗುಂಪು ಘರ್ಷಣೆಯಲ್ಲಿ ವ್ಯಕ್ತಿ ಸಾವನ್ನಪ್ಪಿದರಿಂದ ಸಿಕ್ಕಂದರ್‌ಬಾದ್ವಾಡಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಭೀಗಿ ಭದ್ರತೆ ಮಾಡಲಾಗಿದೆ. ಗ್ರಾಮಕ್ಕೆ ಎಸ್‍ಪಿ ಟಿ.ಶ್ರೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಖಟಕ್ ಚಿಂಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.