Tag: ಬಾಲ್ಕನಿ

  • 4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    ಚೆನ್ನೈ: ಕೆಲದಿನಗಳ ಹಿಂದೆ ಪುಟ್ಟ ಕಂದಮ್ಮವೊಂದು ಅಪಾರ್ಟ್‌ ಮೆಂಟ್‌ನ ಬಾಲ್ಕನಿಯಿಂದ ಸನ್ ಶೇಡ್ ಮೇಲೆ ಬಿದ್ದಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಈ ಮಿರಾಕಲ್ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹೌದು. ಆಕಸ್ಮಿಕವಾಗಿ ತನ್ನ ಕೈಯಿಂದ ಜಾರಿ ಮಗು ಅಪಾರ್ಟ್‌ ಮೆಂಟ್‌ ಬಾಲ್ಕನಿಯಲ್ಲಿ (Apartment Balcony) ಬಿದ್ದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಿಂದನೆ ವ್ಯಕ್ತವಾಗಿದ್ದರಿಂದ ಮನನೊಂದು ಟೆಕ್ಕಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರಿನ (Coimbatore) ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಸಾವಿನ ದಾರಿ ಹಿಡಿದಿದ್ದಾರೆ.

    ರಮ್ಯಾ (Techie Ramya) ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವೇ ಕಾದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಅಂದು ನಡೆದಿದ್ದೇನು..?: ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾದರು.

    ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು.

    ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • 5ನೇ ತರಗತಿಯ ಬಾಲಕಿಗೆ ಕತ್ತರಿಯಿಂದ ಚುಚ್ಚಿ, ಬಾಲ್ಕನಿಯಿಂದ ಎಸೆದ ಶಿಕ್ಷಕಿ

    5ನೇ ತರಗತಿಯ ಬಾಲಕಿಗೆ ಕತ್ತರಿಯಿಂದ ಚುಚ್ಚಿ, ಬಾಲ್ಕನಿಯಿಂದ ಎಸೆದ ಶಿಕ್ಷಕಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಆಘಾತಕಾರಿ ಘಟನೆಗಳು ನಡೆಯುವುದು ಮುಂದುವರಿಯುತ್ತಲೇ ಇವೆ. 5ನೇ ತರಗತಿಯ ಬಾಲಕಿಯೊಬ್ಬಳನ್ನು (Girl) ಆಕೆಯ ಶಿಕ್ಷಕಿಯೇ (Teacher) ಕತ್ತರಿಯಿಂದ (Scissors) ಚುಚ್ಚಿ, ಬಾಲ್ಕನಿಯಿಂದ (Balcony) ಎಸೆದಿರುವ ಕ್ರೂರ ಘಟನೆ ಶುಕ್ರವಾರ ನಡೆದಿದೆ.

    ದೆಹಲಿಯ ನಿಗಮ್ ಬಾಲಿಕಾ ವಿದ್ಯಾಲಯದಲ್ಲಿ ಇಂದು ಬೆಳಗ್ಗೆ 11:15ರ ವೇಳೆಗೆ ಈ ಆಘಾತಕಾರಿ ಘಟನೆ ನಡೆದಿದೆ. ಬಾಲಕಿ ವಂದನಾ ಮೇಲೆ ಆಕೆಯ ಶಿಕ್ಷಕಿ ದಾಳಿ ನಡೆಸಿ, ಬಾಲ್ಕನಿಯಿಂದ ಹೊರ ದಬ್ಬಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ ಆರೋಪಿ ಶಿಕ್ಷಕಿ ಗೀತಾ ದೇಶ್ವಾಲ್ ಬಾಲಕಿ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಶಾಲೆಯ ಮತ್ತೊಬ್ಬ ಶಿಕ್ಷಕಿ ಮಧ್ಯಪ್ರವೇಶಿಸಿ ಬಾಲಕಿಯನ್ನು ಹೊಡೆಯುವುದನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಬಾಲಕಿ ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಇದನ್ನೂ ಓದಿ: ಇಎಂಐ ಕಟ್ಟು ಎಂದಿದ್ದಕ್ಕೆ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಳ ಮೇಲೆ ಬಿಸಿ ಎಣ್ಣೆ ಎರಚಿದ

    ತಕ್ಷಣವೇ ಸ್ಥಳೀಯರು ಒಟ್ಟಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಬಾರಾ ಹಿಂದೂ ಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೊಲೀಸರು ಆರೋಪಿ ಶಿಕ್ಷಕಿಯನ್ನು ಬಂಧಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನಾಧರಿಸಿ ಶಿಕ್ಷಕಿ ವಿರುದ್ಧ ಪೊಲೀಸರು ಭಾರತೀಯ ದಂಡಸಂಹಿತೆ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯ ಕುಡಿದು ಸತ್ತವರಿಗೆ ಪರಿಹಾರ ಕೊಡಲ್ಲ – ಸಿಎಂ ನಿತೀಶ್ ಕುಮಾರ್

    Live Tv
    [brid partner=56869869 player=32851 video=960834 autoplay=true]

  • ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಬಾಲ್ಕನಿಯಲ್ಲಿ ಬೆತ್ತಲೆಯಾಗಿ ಪೋಸ್ ನೀಡಿದ ಮಹಿಳೆಯರು ಅರೆಸ್ಟ್

    ಅಬುದಾಬಿ: ದುಬೈನ ಬಾಲ್ಕನಿಯೊಂದರ ಮೇಲೆ ಬೆತ್ತಲೆಯಾಗಿ ನಿಂತು ಪೋಸ್ ನೀಡಿದ ಮಹಿಳೆಯರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

    ವೈರಲ್ ಆಗಿರುವ ಫೋಟೋ ಹಾಗೂ ವೀಡಿಯೋದಲ್ಲಿ, ಶನಿವಾರ 12ಕ್ಕೂ ಹೆಚ್ಚು ಮಹಿಳೆಯರು ಮರೀನಾ ಸಮೀದಲ್ಲಿರುವ ಬಾಲ್ಕನಿಯಲ್ಲಿ ಹಾಡಹಗಲಲ್ಲೇ ಬೆತ್ತಲೆಯಾಗಿ ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಮುಸ್ಲಿಂಮರೆ ಹೆಚ್ಚಾಗಿರುವ ಯುಎಇಯಲ್ಲಿನ ಈ ಘಟನೆ ಮುಸ್ಲಿಂಮರ ಸಂಪ್ರದಾಯಕ್ಕೆ ಧಕ್ಕೆಯನ್ನುಂಟು ಮಾಡಿರುವುದು, ಆಘಾತಕಾರಿ ಸಂಗಾತಿಯಾಗಿರುವುದರಿಂದ ಇದೀಗ ಅಧಿಕಾರಿಗಳನ್ನು ಕೆರಳಿಸಿದೆ. ವೀಡಿಯೋ ಪೊಲೀಸರ ಗಮನಕ್ಕೆ ಬರುತ್ತಿದ್ದಂತಯೇ ಇದೀಗ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ.

    ಈ ಘಟನೆ ಇದೀಗ ವಿಶ್ವದ್ಯಾಂತ ಭಾರೀ ಸದ್ದು ಮಾಡುತ್ತಿದ್ದು, ಸದ್ಯ ದುಬೈ ಪೊಲೀಸರು ಬಂಧಿತ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

  • ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಅತ್ಯಾಚಾರ

    – ಸೆಕೆ ಎಂದು ಬಾಲ್ಕನಿ ಬಾಗಿಲು ತೆರೆದಿದ್ದೇ ತಪ್ಪಾಯ್ತು
    – ಲಾಕ್‍ಡೌನ್‍ನಿಂದ ರಾಜಸ್ಥಾನದಲ್ಲಿ ಪತಿ ಲಾಕ್

    ಭೋಪಾಲ್: ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್‍ ಆಗಿದೆ. ಈ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ಫ್ಲಾಟ್‍ಗೆ ನುಗ್ಗಿ ದೃಷ್ಟಿ ವಿಶೇಷ ಚೇತನ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಶಹಪುರ ಪ್ರದೇಶದಲ್ಲಿ ನಡೆದಿದೆ.

    53 ವರ್ಷದ ಬ್ಯಾಂಕ್ ವ್ಯವಸ್ಥಾಪಕಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ದೃಷ್ಟಿ ವಿಶೇಷ ಚೇತನ ಸಂತ್ರಸ್ತೆ ಕಳೆದ ಕೆಲವು ದಿನಗಳಿಂದ ಫ್ಲಾಟ್‍ನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.

    ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಪತಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.

    ಶುಕ್ರವಾರ ಮುಂಜಾನೆ ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.

    ನಂತರ ಆರೋಪಿ ಫ್ಲಾಟ್ ಬಾಗಿಲು ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಫೋನ್ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆ ಕಿರುಚಿಕೊಂಡಿದ್ದಾರೆ. ತಕ್ಷಣ ನೆರೆಯವರು ಬಂದು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಪೋಷಕರ ಸಣ್ಣ ಬೇಜವಾಬ್ದಾರಿತನದಿಂದ 9ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

    ಲಕ್ನೋ: 4 ವರ್ಷದ ಬಾಲಕಿಯೊಬ್ಬಳು 9ನೇ ಮಹಡಿಯಲ್ಲಿದ್ದ ತನ್ನ ಮನೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರೋ ದಾರುಣ ಘಟನೆ ಉತ್ತರಪ್ರದೇಶದ ಇಂದೆರಾಪುರಂನಲ್ಲಿ ನಡೆದಿದೆ.

    ಇಲ್ಲಿನ ಸನ್‍ರೈಸ್ ಸೊಸೈಟಿಯಲ್ಲಿ 9ನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಿಂದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಸೊಸೈಟಿಯ ಇತರೆ ನಿವಾಸಿಗಳು ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಳು.

    ಬಾಲ್ಕನಿಯಲ್ಲಿ ಇಡಲಾಗಿದ್ದ ಸ್ಟೂಲ್ ಈ ದುರ್ಘನೆಗೆ ಕಾರಣವೆಂದು ಹೇಳಲಾಗಿದೆ. ಸೊಸೈಟಿಯ ಫ್ಲಾಟ್ ನಂಬರ್ 1001ರಲ್ಲಿ ಮನೀಷ್ ಸಚ್‍ದೇವಾ ಎಂಬವರು ಕುಟುಂಬದೊಂದಿಗೆ ವಾಸವಿದ್ದಾರೆ. ಸೋಮವಾರ ಸಂಜೆ ಮನೀಷ್ ಪತ್ನಿ ಟ್ಯೂಷನ್ ಕ್ಲಾಸ್ ತೆಗೆದುಕೊಳ್ಳಲು ಹೊರಗಡೆ ಹೋಗಿದ್ದರು. ಈ ವೇಳೆ ಬಾಲಕಿ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಳು. ಬಾಲಕಿ ಸ್ಟೂಲ್ ಮೇಲೆ ಹತ್ತಿ ಕೆಳಗೆ ಇಣುಕಿ ನೋಡಿದ್ದಾಳೆ. ಹೀಗೆ ಮಾಡುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ.

    ಬಾಲಕಿ ಸಾವಿಗೆ ಪೋಷಕರ ಬೇಜವಾಬ್ದಾರಿತನವೇ ಪ್ರಾಥಮಿಕ ಕಾರಣ ಎಂದು ಹೇಳಲಾಗಿದೆ. ಬಾಲಕಿ ಸಾವಿನಿಂದ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇಲ್ಲ.

    ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪ್ರತ್ಯಕ್ಷದರ್ಶಿಗಳು ಹಾಗೂ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‍ಗಳನ್ನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • `ಗಾಯಿತ್ರಿ’ ಹಾರರ್ ಕನ್ನಡ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿಜವಾಗಿ ಆಗಿದ್ದು ಏನು?

    `ಗಾಯಿತ್ರಿ’ ಹಾರರ್ ಕನ್ನಡ ಸಿನಿಮಾ ನೋಡಿದ ಪ್ರೇಕ್ಷಕನಿಗೆ ನಿಜವಾಗಿ ಆಗಿದ್ದು ಏನು?

    ಬೆಂಗಳೂರು: ಗಾಯಿತ್ರಿ ಚಿತ್ರ ನೋಡುತ್ತಿದ್ದ ವಿಜಿ ಎಂಬಾತ ಬಾಲ್ಕನಿಯಿಂದ ಬಿದ್ದಿಲ್ಲ. ಆತ ಕುಳಿತ ಸ್ಥಳದಿಂದಲೇ ಕುಸಿದು ಬಿದ್ದಿದ್ದಾನೆ ಎಂದು ಮೇನಕಾ ಚಿತ್ರ ಮಂದಿರ ಮಾಲೀಕರಾದ ವಿಶ್ವನಾಥ್ ತಿಳಿಸಿದ್ದಾರೆ.

    ಗಾಯಿತ್ರಿ ಚಿತ್ರ ನೋಡುತ್ತಿದ್ದ ಪ್ರೇಕ್ಷಕ ಸಿನಿಮಾ ನೋಡಿ ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ತಂಡದಲ್ಲಿ ಕೆಲಸ ಮಾಡಿದ ವ್ಯಕ್ತಿ ಇವತ್ತು ಸೆಕೆಂಡ್ ಕ್ಲಾಸ್ ನಲ್ಲಿ ಕುಳಿತುಕೊಂಡಿದ್ದ. ಬಾಲ್ಕನಿಯಿಂದ ಆತ ಬಿದ್ದಿಲ್ಲ. ಅಪಸ್ಮರ ಬಂದು ಕುಳಿತ ಸ್ಥಳದಿಂದಲೇ ಆತ ಕೆಳಗೆ ಬಿದ್ದಿದ್ದಾನೆ. ಈಗ ಆತನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದರು.

    ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಬಂದಿದೆ ಎನ್ನುವ ಪ್ರಶ್ನೆಗೆ, ಬಾಲ್ಕನಿಯಿಂದ ಆತ ಬೀಳಲೇ ಇಲ್ಲ. ನಮ್ಮಲ್ಲಿ ಸಿಸಿಟಿವಿ ದೃಶ್ಯವಿದೆ. ಕುಳಿತಲ್ಲಿಂದ ಬಿದ್ದ ಕೂಡಲೇ ಆತನನ್ನು ಆಂಬುಲೆನ್ಸ್ ಮೂಲಕ ಕೆಸಿ ಜನರಲ್ ಆಸ್ಪತ್ರಗೆ ದಾಖಲಿಸಲಾಗಿದೆ. ಬಾಲ್ಕನಿಯಿಂದ ಬಿದ್ದಿದ್ದಾನೆ ಎನ್ನುವ ಸುದ್ದಿ ಸುಳ್ಳು ಅದು ಗಿಮಿಕ್ ಎಂದು ವಿಶ್ವನಾಥ್ ಹೇಳಿದರು.

    ಚಿತ್ರದ ನಿರ್ಮಾಪಕಿ ಭಾರತಿ ಅವರು ಪ್ರತಿಕ್ರಿಯಿಸಿ, ಸಿನಿಮಾ ಶೂಟಿಂಗ್ ವೇಳೆ ಆತ ಭಯ ಆಗುತ್ತದೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಆತ ಕ್ಲೈಮಾಕ್ಸ್ ಪಾತ್ರದಲ್ಲೂ ಅಭಿನಯಿಸಿದ್ದ. ಆತನಿಗೆ ಏನಾಯ್ತು ಎನ್ನುವ ಮಾಹಿತಿ ತಿಳಿದಿಲ್ಲ ಎಂದು ಅವರು ತಿಳಿಸಿದರು.

    ಸತ್ಯ ಸಾಮ್ರಾಟ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಚೇತನ್, ಶೋಭಾರಾಣಿ, ನಯನಾ ಕೃಷ್ಣ, ಸ್ಮೈಲ್ ಶಿವು, ರೋಹಿತ್, ಪೂಜಾ, ರಂಜಿತಾ, ಲೋರ್ಡ್ ತೆಲಾಸ್, ಶೋಭರಾಜ್, ರಾಣಿ, ಥ್ರಿಲ್ಲರ್ ವೆಂಕಟೇಶ್, ಮೋಹನ್ ಜುನೇಜ, ದುಬೈ ರಫೀ ಅಭಿನಯಿಸಿದ್ದಾರೆ.

    ಮನೆಯೊಂದರಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಸುತ್ತ ಚಿತ್ರಕತೆ ಇದ್ದು, ಒಂದು ಬಂಗಲೆಯಲ್ಲಿ ಮೂರು ಜನ ಅತಿಥಿಗಳಾಗಿ ಹೋಗುತ್ತಾರೆ. ಅಲ್ಲಿ ಮೂವರು ಹೆಣ್ಣು ಮಕ್ಕಳು ವಾಸವಿರುತ್ತಾರೆ. ಬಂಗಲೆಯಲ್ಲಿ ನಡೆಯುವ ನಿಗೂಢ ಘಟನೆಗಳೇ ಈ ಚಿತ್ರದಲ್ಲಿ ತೋರಿಸಲಾಗಿದೆ.

    https://www.youtube.com/watch?v=WrXipJv38bo