Tag: ಬಾಲಿವುಡ್ ನಟ

  • ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಜೀವನದಲ್ಲಿ ಅನುಭವಿಸಿದ ನರರೋಗದ ನರಕಯಾತನೆ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮಾತನಾಡಿದ್ದಾರೆ.

    `ಟು ಮಚ್’ ಎಂಬ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರದ ಅಸ್ವಸ್ಥತೆಯಿಂದಾಗಿ ಉಂಟಾಗಿದ್ದ ಟ್ರೈಜಿಮಿನಲ್ ನರರೋಗದ ಬಗ್ಗೆ, ತಾವು ಅನುಭವಿಸಿದ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾನ್ಯ ಜೀವನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತ್ತು. ತಿನ್ನುವದರಿಂದ ಹಿಡಿದು ಎಲ್ಲವನ್ನೂ ಕಷ್ಟವನ್ನಾಗಿಸಿತ್ತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: 3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

    2007ರಲ್ಲಿ `ಪಾರ್ಟ್ನರ್’ ಸಿನಿಮಾದ ಸೆಟ್‌ನಲ್ಲಿ ಈ ರೋಗದ ಮೊದಲ ಲಕ್ಷಣ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಟ ಲಾರಾ ದತ್ತ ಅವರು ನನ್ನ ಮುಖದಿಂದ ಕೂದಲೆಳೆಯನ್ನು ಕಿತ್ತಿದ್ದಾಗ ತೀವ್ರವಾಗಿ ನೋವಾಗಿತ್ತು. ಆಗ ನಾನು ಅದನ್ನು ಹಲ್ಲಿನ ಸಮಸ್ಯೆ ಎಂದುಕೊಂಡಿದ್ದೆ. ಆದರೆ ಬಳಿಕ ಆಸ್ಪತ್ರೆಗೆ ತೆರಳಿದಾಗ ಇದು ನರಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಿತು. ಆದರೆ ಅದರ ನೋವು ಎಷ್ಟಿರುತ್ತದೆ ಎಂದರೆ ನಿಮ್ಮ ಶತ್ರುವಿಗೂ ಹಾಗಾಗಬಾರದು ಎಂದುಕೊಳ್ಳುವಷ್ಟು ತೀವ್ರವಾಗಿ ನೋವಾಗುತ್ತದೆ. ಇಂತಹ ನೋವಿನಿಂದ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ನನಗೂ ಕೂಡ ಅಂತಹ ಯೋಚನೆಗಳು ಬಂದಿದ್ದವು. ಆದರೆ ನಾನು ಈ ನೋವನ್ನು ಏಳೂವರೆ ವರ್ಷಗಳ ಕಾಲ ಅನುಭವಿಸಿದ್ದೇನೆ ಎಂದಿದ್ದಾರೆ.

    ಈ ನೋವು ನನ್ನ ದೈನಂದಿನ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಪ್ರತಿ 4-5 ನಿಮಿಷಗಳಿಗೊಮ್ಮೆ ನೋವಾಗುತ್ತಿತ್ತು. ತಿಂಡಿ ತಿನ್ನಬೇಕೆಂದರೆ ನನಗೆ ಒಂದು ಗಂಟೆಗೂ ಅಧಿಕ ಸಮಯಬೇಕಿತ್ತು. ಅಗಿಯಲು ಆಗುತ್ತಿರಲಿಲ್ಲ. ಇದೆಲ್ಲದರ ನಂತರ ನಾನು ಗಾಮಾ ನೈಫ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದು 8 ಗಂಟೆಗಳ ಕಾಲ ನಡೆದಿತ್ತು. ಅದಾದ ಬಳಿಕ ನೋವು ಕಡಿಮೆ ಆಯ್ತು ಎಂದು ಹೇಳಿಕೊಂಡಿದ್ದಾರೆ.

    ಇದೆಲ್ಲದರ ಮಧ್ಯೆಯೂ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಸದ್ಯ `ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಇದನ್ನೂ ಓದಿ: ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

     

  • ಶಾರುಖ್ ಖಾನ್ ಜೊತೆ ನಟಿಸಿದ್ದ ಹಿರಿಯ ನಟ ರಿಯೋ ಕಪಾಡಿಯಾ ನಿಧನ

    ಶಾರುಖ್ ಖಾನ್ ಜೊತೆ ನಟಿಸಿದ್ದ ಹಿರಿಯ ನಟ ರಿಯೋ ಕಪಾಡಿಯಾ ನಿಧನ

    ಚೆಕ್‌ ದೆ ಇಂಡಿಯಾ (Chak De! India), ಹ್ಯಾಪಿ ನ್ಯೂ ಇಯರ್‌ ಹಾಗೂ ಮರ್ದಾನಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಬಾಲಿವುಡ್‌ ನಟ ರಿಯೋ ಕಪಾಡಿಯಾ (66) (Rio Kapadia) ಗುರುವಾರ (ಇಂದು) ನಿಧನರಾಗಿದ್ದಾರೆ ಎಂದು ಸ್ನೇಹಿತ ಫೈಸಲ್‌ ಮಲಿಕ್‌ ತಿಳಿಸಿದ್ದಾರೆ.

    ಕಳೆದ ವರ್ಷ ಕಪಾಡಿಯಾಗೆ ಕ್ಯಾನ್ಸರ್‌ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅವರ ಅಂತ್ಯಕ್ರಿಯೆ ಬುಧವಾರ (ಸೆ.15) ಗೋರೆಗಾಂವ್‌ನ ಶಿವಧಾಮ ಶಂಶಾನ ರುದ್ರ ಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ ಮರಿಯಾ ಫರಾ, ಮಕ್ಕಳಾದ ಅಮನ್‌ ಮತ್ತು ವೀರ್‌ ಅವರನ್ನ ಅಗಲಿದ್ದಾರೆ. ಇದನ್ನೂ ಓದಿ: Exclusive: ಸ್ಪಂದನಾ ಇಲ್ಲ ಅನ್ನೋ ರಾಘು ನೋವು ಮಾಯ ಆಗಲ್ಲ- ನವೀನ್ ಕೃಷ್ಣ ಭಾವುಕ 

    ರಿಯೋ ಕಪಾಡಿಯಾ ಖುದಾ ಹಾಫಿಜ್, ದಿ ಬಿಗ್ ಬುಲ್, ಏಜೆಂಟ್ ವಿನೋದ್ ಸೇರಿದಂತೆ ಹಲವು ಚಿತ್ರಗಳಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಮೇಡ್ ಇನ್ ಹೆವೆನ್-2’ ಸಂಚಿಕೆಗಳಲ್ಲೂ ಕಾಣಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಮಾತ್ರವಲ್ಲದೇ ‘ಸಪ್ನೆ ಸುಹಾನೆ ಲಡಕ್ಪಾನ್ ಕೆ ಮತ್ತು ‘ಸಿದ್ಧಾರ್ಥ್ ತಿವಾರಿ ಅವರ ‘ಮಹಾಭಾರತ’ದಂತಹ ಸೀರಿಯಲ್‌ಗಳಲ್ಲೂ ಪಾತ್ರ ನಿರ್ವಹಿಸಿದ್ದರು. ಇದನ್ನೂ ಓದಿ: ‘ಕಂಬಳ’ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಅನುಷ್ಕಾ ಶೆಟ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಹಾಯ ಹಸ್ತ ಚಾಚಿ ಜನರ ಮನಗೆದ್ದಿರೋ ಸೋನು ಸೂದ್ ವಿರುದ್ಧ ಕೇಸ್..!

    ಸಹಾಯ ಹಸ್ತ ಚಾಚಿ ಜನರ ಮನಗೆದ್ದಿರೋ ಸೋನು ಸೂದ್ ವಿರುದ್ಧ ಕೇಸ್..!

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದವರ ನೆರವಿಗೆ ನಿಂತು ಮನೆ ಮಾತಾಗಿರುವ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಹೌದು. ಅನುಮತಿ ಪಡೆಯದೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಿದ ಹಿನ್ನೆಲೆಯಲ್ಲಿ ಬಿಎಂಸಿ(ಬೃಹನ್ ಮುಂಬೈ ಮುನ್ಸಿಪಲ್ ಕಾಪೋರೇಶನ್) ಈ ಪ್ರಕರಣ ದಾಖಲಿಸಿದೆ. ಸೋನು ಸೂದ್ ಅವರಿಗೆ ಮುಂಬೈನ ಜುಹುವಿನಲ್ಲಿ 6 ಮಹಡಿಯ ಕಟ್ಟಡವಿದೆ. ಈ ಕಟ್ಟಡವನ್ನು ಇತ್ತೀಚೆಗಷ್ಟೇ ಹೋಟೆಲ್ ಆಗಿ ಮಾರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಸಿ ಇದೀಗ ನಟನ ವಿರುದ್ಧ ಜುಹು ಪೊಲೀಸ್ ಠಾಣೆಗೆ ಲಿಖಿತ ದೂರು ದಾಖಲಿಸಿದೆ.

    ಅನುಮತಿ ಇಲ್ಲದೆಯೇ ಕಟ್ಟಡವನ್ನು ಹೋಟೆಲ್ ಆಗಿ ಮಾರ್ಪಡಿಸಲಾಗಿದೆ. 2020ರ ಅಕ್ಟೋಬರ್ 27ರಂದು ಸೋನು ಸೂದ್ ಅವರಿಗೆ ಮೊದಲ ಬಾರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ನವೆಂಬರ್ 27ರವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಟನಿಗೆ ಒಂದು ತಿಂಗಳ ಕಾಲ ಸಮಯ ನೀಡಿದ್ದರೂ ಉತ್ತರಿಸಲಿಲ್ಲ ಎಂದು ಬಿಎಂಸಿ ಅಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ.

    2021ರ ಜನವರಿ 4 ರಂದು ನಟನ ಆಸ್ತಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಅನಧಿಕೃತವಾಗು ಹೆಚ್ಚುವರಿ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ. ಆದರೂ ಇದೂವರೆಗೆ ಯಾವುದೇ ಸೂಚನೆಗಳಿಗೆ ನಟ ಪ್ರತಿಕ್ರಿಯಿಸಿಲ್ಲ ಎಂದು ಕೂಡ ಅಧಿಕಾರಿಗಳು ದೂರಿದ್ದಾರೆ.

    ಸದ್ಯ ಅಧಿಕಾರಿಗಳ ದೂರು ಸ್ವೀಕರಿಸಿರುವ ಪೊಲೀಸರು ಇದೀಗ ನಟನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

  • ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    ಸಹಾಯಕ್ಕಾಗಿ ನಟ ಸೋನು ಸೂದ್‍ಗೆ ಪ್ರತಿನಿತ್ಯ ಬರ್ತಿದೆ 32 ಸಾವಿರ ಮನವಿಗಳು!

    – ನನ್ನ ಕೈಲಾದಷ್ಟು ಸಹಾಯ ಮಾಡ್ತೀನಿ
    – ಮೆಸೇಜ್ ಕಳಿಸಿದವರಲ್ಲಿ ನಟ ಕ್ಷಮೆ

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಭಾರತವನ್ನು ಒಕ್ಕರಿಸಿದ ಬಳಿಕ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕ ಮಾನವೀಯ ಕಾರ್ಯಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರು ಸಂಕಷ್ಟಕ್ಕೀಡಾದವರ ನೆರವಿಗೆ ನಿಲ್ಲುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.

    ವಿದೇಶದಲ್ಲಿರುವ ಭಾರತೀಯರನ್ನು ಹಾಗೆಯೇ ಬಡವರ ಪರ ನಿಂತು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಾವಿರಾರು ಮಂದಿಯ ಕಷ್ಟಕಾಲಕ್ಕೆ ಬೆನ್ನುಲುಬಾಗಿ ನಿಂತು ಸಹಾಯ ಮಾಡಿದ್ದರೂ ನಟ ಇದೀಗ ಜನರ ಮುಂದೆ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಸಹಾಯ ಮಾಡುವಂತೆ ಮನವಿ- ಮೂವರು ಅನಾಥ ಮಕ್ಕಳ ದತ್ತು ಪಡೆದ ಸೋನು ಸೂದ್

    ಹೌದು. ಕಷ್ಟದಲ್ಲಿವರಿಗೆ ನೆರವು ನೀಡುವ ಸಲುವಾಗಿ ಸಹಾಯವಾಣಿ ಆರಂಭಿಸಿದ್ದ ನಟನಿಗೆ ಇದೀಗ ಸಾಮಾಜಿಕ ಜಾಲತಾಂಗಳ ಮೂಲಕ ಅನೇಕ ಮನವಿಗಳು ಬರುತ್ತಿದೆ. ಪ್ರತಿ ದಿನ 32 ಸಾವಿರ ಸಂದೇಶಗಳು ಸಹಾಯ ಮಾಡುವಂತೆ ಬರುತ್ತಿದ್ದು, ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ಸೋನು ಸೂದ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ನಟನಿಗೆ ಸುಮಾರು 1,137 ಇಮೇಲ್, 19 ಸಾವಿರ ಫೇಸ್‍ಬುಕ್ ಮೆಸೇಜ್, 4,812 ಇನ್ಸ್ ಸ್ಟಾಗ್ರಾಂ ಮೆಸೇಜ್, 6,741 ಟ್ವಿಟ್ಟರ್ ನಲ್ಲಿ ಸಹಾಯ ಮಾಡುವಂತೆ ಮನವಿಗಳು ಬರುತ್ತಿವೆ. ಸಹಾಯಕ್ಕಾಗಿ ಇಷ್ಟೊಂದು ಮನವಿಗಳು ಬಂದರೆ ಒಬ್ಬನೇ ವ್ಯಕ್ತಿ ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ?. ಎಲ್ಲರನ್ನೂ ಸಂಪರ್ಕಿಸಲೂ ಸಾಧ್ಯವಿಲ್ಲ. ಆದರೂ ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ನಟ ಭರವಸೆ ನೀಡಿದ್ದಲ್ಲದೆ, ಒಂದು ವೇಳೆ ನಿಮ್ಮ ಮೆಸೇಜ್ ನೋಡಿಲ್ಲ ಎಂದರೆ ದಯವಿಟ್ಟು ಕ್ಷಮಿಸಿಬಿಡಿ ಎಂದು ತಿಳಿಸಿದ್ದಾರೆ.

    ಕಳೆದ ಬುಧವಾರ ಕರ್ನಾಟಕದ ವರಲಕ್ಷ್ಮಿ ಎಂಬಾಕೆ ನಟನ ಬಳಿ ತನಗೊಂದು ತರಕಾರಿ ಅಂಗಡಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ನಟ, ಹೊಸ ಅಂಗಡಿಯೊಂದಿಗೆ ನಿಮ್ಮ ಬೆಳಗ್ಗಿನ ದಿನ ಪ್ರಾರಂಭವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.

  • ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್

    ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಬಾಲಿವುಡ್ ನಟ ಸೋನು ಸೂದ್ ಬಸ್ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

    ಸೋನು ಸೂದ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಸಿನಲ್ಲಿ ಒಟ್ಟು ಹತ್ತು ಬಸ್‍ಗಳ ವ್ಯವಸ್ಥೆ ಮಾಡಿ ಸೋಮವಾರ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ಊಟದ ಕಿಟ್‍ಗಳನ್ನು ನೀಡಿ ಕನ್ನಡಿಗರ ಬಗ್ಗೆ ಕಾಳಜಿ ತೋರಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಷ್ಣುವರ್ಧನ ಸಿನಿಮಾದ ನಟ ಸೋನು ಸೂದ್, “ಪ್ರತಿಯೊಬ್ಬರು ತಮ್ಮ ಕುಟುಂಬ, ಆತ್ಮೀಯರೊಂದಿಗೆ ಇರಲು ಇಷ್ಟಪಡುತ್ತಾರೆ. ಆದ್ದರಿಂದ ವಲಸಿಗರು ಮನೆಗೆ ತಲುಪಲು ಸಹಾಯ ಮಾಡಲು ಮಹಾರಾಷ್ಟ್ರ-ಕರ್ನಾಟಕ ರಾಜ್ಯ ಸರ್ಕಾರಗಳಿಂದ ಅನುಮತಿ ಕೋರಿದ್ದೆ. ಅದರಂತೆ ವಲಸೆ ಕಾರ್ಮಿಕರನ್ನು ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

    “ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲು ಅಗತ್ಯ ದಾಖಲೆಗಳನ್ನು ಒದಗಿಸಿದರು. ವಲಸೆ ಕಾರ್ಮಿಕರು ಪುಟ್ಟ ಮಕ್ಕಳು, ವೃದ್ಧ ಪೋಷಕರನ್ನು ಕರೆದುಕೊಂಡು ರಸ್ತೆ ಮಾರ್ಗವಾಗಿ ಹೋಗುವುದನ್ನು ಕಂಡು ನನಗೆ ನೋವಾಗಿತ್ತು. ಹೀಗಾಗಿ ಅವರ ಸಹಾಯಕ್ಕೆ ನಿಂತೆ. ಇತರ ರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಮುಟ್ಟಿಸುವ ನನ್ನ ಕೆಲಸವನ್ನು ಮುಂದುವರಿಸುತ್ತೇನೆ” ಎಂದು ಸೋನು ಸೂದ್ ಹೇಳಿದ್ದಾರೆ.

    46 ವರ್ಷದ ನಟ ಪಂಜಾಬ್‍ನಾದ್ಯಂತ 1,500ಕ್ಕೂ ಹೆಚ್ಚು ಪಿಪಿಇ ಕಿಟ್‍ಗಳನ್ನು ವೈದ್ಯರಿಗೆ ನೀಡಿದ್ದರು. ಅಷ್ಟೇ ಅಲ್ಲದೆ ವೈದ್ಯಕೀಯ ಸಿಬ್ಬಂದಿಯ ವಸತಿಗಾಗಿ ಅವರ ಮುಂಬೈ ಹೋಟೆಲ್ ಅನ್ನು ನೀಡಿದ್ದಾರೆ.

  • ನನ್ನ ಸಾವಿಗೆ ಯಾರೂ ಕಾರಣರಲ್ಲ – ಒಂದೂವರೆ ಪುಟ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

    ನನ್ನ ಸಾವಿಗೆ ಯಾರೂ ಕಾರಣರಲ್ಲ – ಒಂದೂವರೆ ಪುಟ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ನಟ

    ಮುಂಬೈ: ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಒಂದೂವರೆ ಪುಟ ಡೆತ್‍ನೋಟ್ ಬರೆದು ಬಾಲಿವುಡ್ ನಟ ಹಾಗೂ ಜೋರ್ ಕಾ ಜತ್ಕ ರಿಯಾಲಿಟಿ ಶೋ ವಿನ್ನರ್ ಕುಶಾಲ್ ಪಂಜಾಬಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಂದು ಕುಶಾಲ್ ಪಂಜಾಬಿ ತಮ್ಮ ಮುಂಬೈ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರನ್ನು ಮುಂಬೈನ ಬಾಬಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರು ಕುಶಾಲ್ ಪಂಜಾಬಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕುಶಾಲ್ ಪಂಜಾಬಿ ಅವರ ನಿವಾಸದಲ್ಲಿ ಪೊಲೀಸರಿಗೆ ಒಂದೂವರೆ ಪುಟದ ಡೆತ್‍ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    https://www.instagram.com/p/BsEzuU6h3kU/?utm_source=ig_embed

    ಕುಶಾಲ್ ಪಂಜಾಬಿ ಅವರು, ಇಂಗ್ಲಿಷ್ ನಲ್ಲಿ ಒಂದೂವರೆ ಪುಟದ ಡೆತ್‍ನೋಟ್ ಬರೆದಿದ್ದು, ಆದರಲ್ಲಿ ತನ್ನ ಆಸ್ತಿಯ ಶೇ.50 ರಷ್ಟು ಭಾಗ ತನ್ನ ತಂದೆ-ತಾಯಿ ಮತ್ತು ಸಹೋದರಿಯರಿಗೆ ಹಂಚಿಕೆಯಾಗಬೇಕು ಮತ್ತು ಉಳಿದ ಶೇ.50 ರಷ್ಟು ಆಸ್ತಿ ನನ್ನ ಮೂರು ವರ್ಷದ ಮಗ ಕಿಯಾನ್‍ಗೆ ಸೇರಬೇಕು ಎಂದು ಬರೆದಿದ್ದಾರೆ.

    ಕುಶಾಲ್ ಪಂಜಾಬಿಯವರು, 2015 ರಲ್ಲಿ ತನ್ನ ಯೂರೋಪಿಯನ್ ಗೆಳತಿ ಅಡ್ರೆ ಡೊಲ್ಹೆನ್ ಅವರ ಜೊತೆ ಮದುವೆಯಾಗಿದ್ದು, ಈ ಜೋಡಿಗೆ ಮೂರು ವರ್ಷದ ಕಿಯಾನ್ ಹೆಸರಿನ ಮಗನಿದ್ದಾನೆ. ವರದಿಯ ಪ್ರಕಾರ ಕುಶಾಲ್ ಪಂಜಾಬಿಯವರು ಕಳೆದ ಕೆಲ ದಿನಗಳಿಂದ ಆರೋಗ್ಯ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಅವರು ಮದುವೆಯಾಗಿ 4 ವರ್ಷಗಳಾಗಿದ್ದು, ಅದರಲ್ಲು ಕೌಟುಂಬಿಕ ಕಲಹಗಳು ಇದ್ದು, ಅದರಿಂದಲು ಕುಶಾಲ್ ನೊಂದಿದ್ದರು ಎನ್ನಲಾಗಿದೆ.

    https://www.instagram.com/p/BxuYrAdJ1VJ/?utm_source=ig_embed

    ಕುಶಾಲ್ ಪಂಜಾಬಿಯವರು ಕೊನೆಯದಾಗಿ ತನ್ನ ಮಗನ ಫೋಟೋವನ್ನು ಇನ್‍ಸ್ಟಾಗ್ರಾಮ್‍ಗೆ ಹಾಕಿಕೊಂಡಿದ್ದು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತಾನು ಮತ್ತು ಮಗ ಕಿಯಾನ್ ಇರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ಸ್ಟೋರಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • ಕಿಲಾಡಿಯನ್ನ ಭೇಟಿಯಾಗಲು 900 ಕಿ.ಮೀ ನಡೆದು ಬಂದ ಯುವಕ

    ಕಿಲಾಡಿಯನ್ನ ಭೇಟಿಯಾಗಲು 900 ಕಿ.ಮೀ ನಡೆದು ಬಂದ ಯುವಕ

    – ಪ್ಲೀಸ್ ಹೀಗೆ ಮಾಡ್ಬೇಡಿ ಎಂದ ಅಕ್ಷಯ್

    ಮುಂಬೈ: ನಟ ಹಾಗೂ ನಟಿಯ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಲು ಯುವಕನೊಬ್ಬ 900 ಕೀ.ಮೀ ನಡೆದುಕೊಂಡು ಬಂದಿದ್ದಾನೆ.

    ಹೌದು. ಪರ್ಬತ್ ಎಂಬ ಯುವಕ ಅಕ್ಷಯ್ ಕುಮಾರ್ ನನ್ನು ಭೇಟಿಯಾಗಲೆಂದೇ ದ್ವಾರಕಾದಿಂದ ಮುಂಬೈವರೆಗೆ ನಡೆದುಕೊಂಡೇ ಬಂದಿದ್ದಾನೆ. ಮುಂಬೈಗೆ ತಲುಪಲು ಆತ 18 ದಿನ ತೆಗೆದುಕೊಂಡಿದ್ದು, ಇಂದು ನಟನನ್ನು ಭೇಟಿಯಾಗುವ ಮೂಲಕ ತನ್ನ ಕನಸನ್ನು ನನಸು ಮಾಡಿದ್ದಾನೆ.

    ಈ ವಿಚಾರವನ್ನು ಅಕ್ಷಯ್ ಕುಮಾರ್ ಅವರು, ಪರ್ಬತ್ ಜೊತೆಗಿನ ಸೆಲ್ಫಿಯೊಂದಿಗೆ ಟ್ವೀಟ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಟ್ವೀಟ್ ನಲ್ಲಿ, ಇಂದು ನಾನು ಪರ್ಬತ್ ಅವರನ್ನು ಭೇಟಿಯಾಗಿದ್ದೇನೆ. ಆತ ದ್ವಾರಕಾದಿಂದ ಸುಮಾರು 900 ಕಿ.ಮೀ ನಡೆದುಕೊಂಡೇ ಬಂದಿದ್ದಾನೆ. 18 ದಿನ ನಡೆದು ಮುಂಬೈಗೆ ಸೇರಬೇಕು. ಭಾನುವಾರ ನನ್ನನ್ನು ಭೇಟಿಯಾಗಬೇಕೆಂದು ಯೋಜನೆ ಹಾಕಿಕೊಂಡಿದ್ದನು. ಅಂತೆಯೇ ಇಂದು ನಾನು ಅವನಿಗೆ ಸಿಕ್ಕಿದ್ದೇನೆ ಎಂದಿದ್ದಾರೆ.

    ಅಲ್ಲದೆ ಅಕ್ಷಯ್ ಕುಮಾರ್ ಅವರು ಪರ್ಬತ್ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಯುವಕ ಅಷ್ಟು ದೂರ ನಡೆದುಕೊಂಡು ಬಂದಿರುವುದರ ಬಗ್ಗೆ ರಿವೀಲ್ ಮಾಡಿದ್ದಾನೆ. ನಾನು ಫಿಟ್ ಆಗಿದ್ದೇನೆ. ನಡೆಯುವ ಬಗ್ಗೆ ಜನರಿಗೆ ಒಂದು ಒಳ್ಳೆಯ ಸಂದೇಶ ರವಾನಿಸಬೇಕು ಎನ್ನುವ ನಿಟ್ಟಿನಲ್ಲಿ ದ್ವಾರಕಾದಿಂದ ಇಲ್ಲಿಗೆ ನಡೆದುಕೊಂಡೇ ಬಂದಿದ್ದೇನೆ. ಆರೋಗ್ಯದ ದೃಷ್ಟಿಯಿಂದ ನಾವೆಲ್ಲರೂ ಹೆಚ್ಚು ನಡೆಯಬೇಕು ಎಂದಿದ್ದಾನೆ.

    ತನ್ನ ನೆಚ್ಚಿನ ನಟನನ್ನು ಭೇಟಿಯಾದ ಪರ್ಬತ್ ಸಂತಸ ವ್ಯಕ್ತಪಡಿಸಿದ್ದಾನೆ. ಬಳಿಕ ಯುವಕನಿಗೆ ನಟ ಇಂತಹ ಕೆಲಸಗಳನ್ನು ಮಾಡಲು ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ. ಸಮಯವನ್ನು ನಿಮಗೋಸ್ಕರ ಮೀಸಲಿಡಿ. ಒಳ್ಳೆಯ ಕೆಲಸಗಳನ್ನು ಮಾಡಿ. ಇದರಿಂದ ನಾನು ಖುಷಿ ಪಡುತ್ತೇನೆ. ಪರ್ಬತ್ ನಿಮಗೆ ಶುಭವಾಗಲಿ ಎಂದು ಹೇಳಿದ್ದಾರೆ.

  • ಕನ್ನಡ ಚಿತ್ರದ ಬಗ್ಗೆ ಬಾಲಿವುಡ್ ನಟನ ಜೊತೆ ಮಾತನಾಡಿದ್ರು ಕ್ರಿಕೆಟಿಗ ಶ್ರೀಶಾಂತ್

    ಕನ್ನಡ ಚಿತ್ರದ ಬಗ್ಗೆ ಬಾಲಿವುಡ್ ನಟನ ಜೊತೆ ಮಾತನಾಡಿದ್ರು ಕ್ರಿಕೆಟಿಗ ಶ್ರೀಶಾಂತ್

    ಮುಂಬೈ: ಭಾನುವಾರದಿಂದ ಬಿಗ್ ಬಾಸ್-12 ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಶ್ರೀಶಾಂತ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಶಾಂತ್ ಎಂಟ್ರಿ ಕೊಡುವ ಮೊದಲು ಕನ್ನಡ ಚಿತ್ರದ ಬಗ್ಗೆ ಭಾಯ್‍ಜಾನ್ ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ.

    ಶ್ರೀಶಾಂತ್ ನಾನು ಸಿನಿಮಾದಲ್ಲಿ ನಟಿಸಿದ್ದೇನೆ ಎಂದರು. ಇದನ್ನು ಕೇಳಿ ಸಲ್ಮಾನ್ ಸಿನಿಮಾನಾ ಎಂದು ಆಶ್ಚರ್ಯಪಟ್ಟರು. ಈ ವೇಳೆ ಶ್ರೀಶಾಂತ್, ಹೌದು. ನಾನು ಸೌತ್ ಸಿನಿಮಾ ಕೆಂಪೇಗೌಡ-2 ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿಭಾಯಿಸಿದ್ದೇನೆ. ಹಾಗಾಗಿ ನಾನು ದಪ್ಪಗಾಗ ಬೇಕಾಯಿತ್ತು ಎಂದು ಶ್ರೀಶಾಂತ್, ಸಲ್ಮಾನ್ ಖಾನ್ ಬಳಿ ಹೇಳಿದರು.

    ಸದ್ಯ ಸಲ್ಮಾನ್ ಖಾನ್ ಜೊತೆ ಶ್ರೀಶಾಂತ್ ಕೆಂಪೇಗೌಡ-2 ಚಿತ್ರದ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜಗ್ಗೇಶ್ ವಿಡಿಯೋ ಶೇರ್ ಮಾಡಿ ತಮ್ಮ ಸಹೋದರ ಕೋಮಲ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಶ್ರೀಶಾಂತ್ ಮಾತನಾಡಿದ ವಿಡಿಯೋವನ್ನು ನಟ ಜಗ್ಗೇಶ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಕೋಮಲ್ ನಟಿಸಿರುವ ಕೆಂಪೇಗೌಡ-2 ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಬಗ್ಗೆ ಸಲ್ಮಾನ್ ಖಾನ್‍ಗೆ ಬಿಗ್‍ಬಾಸ್‍ಗೆ ಆಯ್ಕೆಯಾದ ಸಂದರ್ಭದಲ್ಲಿ ಶ್ರೀಶಾಂತ್ ಸಲ್ಮಾನ್‍ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು. ನಿಮ್ಮ ಶುಭಹಾರೈಕೆ ಇರಲಿ ಕೋಮಲ್‍ಗೆ” ಎಂದು ಟ್ವೀಟ್ ಮಾಡಿದ್ದರು.