Tag: ಬಾಲಿವುಟ್

  • ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯೋದು ಹೇಗೆ? : ರಾಖಿ ಸಾವಂತ್ ಪಾಠ

    ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯೋದು ಹೇಗೆ? : ರಾಖಿ ಸಾವಂತ್ ಪಾಠ

    ನಸಲ್ಲೂ ಬೆಚ್ಚಿ ಬೀಳಿಸುತ್ತಿದೆ ಟೊಮ್ಯಾಟೋ ದರ.  ಬೆಲೆ ಗಗನಕ್ಕೇರಿ ಹಲವು ದಿನಗಳೇ ಕಳೆದರೂ, ಈ ಹೊತ್ತಿಗೂ ದರ ಇಳಿಯುತ್ತಿಲ್ಲ. ಟೊಮ್ಯಾಟೋ ಕುರಿತಾಗಿ ಸಾಕಷ್ಟು ಜೋಕ್ ಗಳು ಹುಟ್ಟಿಕೊಂಡಿವೆ. ಟೊಮ್ಯಾಟೋ ಕಾಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಬೌನ್ಸರ್ ಹಾಕಿ ಕಾಯುವಲ್ಲಿಗೆ ವಿಡಿಯೋಗಳು ಹರಿದಾಡುತ್ತಿದೆ. ಆದರೆ ಬಾಲಿವುಡ್ (Bollywood) ನಟಿ ರಾಖಿ ಸಾವಂತ್ , ಈ ಕುರಿತು ತಲೆ ಕೆಡಿಸಿಕೊಂಡಿಲ್ಲ.

    ಹೌದು, ರಾಖಿ ಸಾವಂತ್ ((Rakhi Sawant)) ಟೊಮ್ಯಾಟೋ ಬೆಲೆ ಗಗನಕ್ಕೇರಿದ ಕುರಿತಾಗಿ ತಲೆಬಿಸಿ ಮಾಡಿಕೊಂಡಿಲ್ಲ. ಬದಲಾಗಿ ಕೇವಲ ಹದಿನೈದೇ ದಿನದಲ್ಲಿ ಟೊಮ್ಯಾಟೋ ಬೆಳೆಯುವುದು ಹೇಗೆ ಎನ್ನುವುದನ್ನು ಕಲಿತಿದ್ದಾರೆ. ಅದನ್ನು ವಿಡಿಯೋ ಮಾಡಿ, ಇತರರಿಗೂ ಟೊಮ್ಯಾಟೋ ಬೆಳೆಯುವಂತೆ ವಿನಂತಿಸಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ

    ಮೊದಲು ಪುಟ್ಟದೊಂದು ಪಾಟ್ ತಗೆದುಕೊಂಡು ಅದರಲ್ಲಿ ಕಾಲು ಭಾಗ ಮಣ್ಣು ತುಂಬಿದ್ದಾರೆ. ಆ ಮಣ್ಣಿನಲ್ಲಿ ನಾಲ್ಕೈದು ಟೊಮ್ಯಾಟೋ ಹಾಕುತ್ತಾರೆ. ಅದರ ಮೇಲೆ ಟೊಮ್ಯಾಟೋ ಗಿಡಿ ನೆಡುತ್ತಾರೆ. ಅದು ಕೇವಲ 15 ದಿನದಲ್ಲಿ ಟೊಮ್ಯಾಟೋ (Tomato) ಕೊಡುತ್ತದೆ ಎಂದು ಅವರು ಹೇಳುತ್ತಾರೆ. ಈ ಗಿಡವನ್ನು ಆರೈಕೆ ಮಾಡಲೆಂದು ಒಬ್ಬ ಹುಡುಗನನ್ನು ರಾಖಿ ನೇಮಿಸಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

     

    ಹದಿನೈದು ದಿನಕ್ಕೆ ಟೊಮ್ಯಾಟೋ ಬೆಳೆ (Crop) ಬರತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಖಿ ರಂಪಾಟ ಮಾಡದೇ ಮೊದಲ ಬಾರಿಗೆ ವಿಡಿಯೋ ಮಾಡಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಜೊತೆಗೆ ಟೊಮ್ಯಾಟೋ ಬೆಳೆಯನ್ನು ಆರೈಕೆ ಮಾಡಲು ನೇಮಿಸಿಕೊಂಡಿರುವ ಹುಡುಗನ ಸಂಬಳದಲ್ಲಿ ಅದೆಷ್ಟೋ ಕೆಜಿ ಟೊಮ್ಯಾಟೋ ಖರೀದಿಸಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್!

    ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್!

    ಚಂಡೀಗಢ: ಸಹೋದರಿ ಮಾಳವಿಕಾ ಸೂದ್ ಪಂಜಾಬ್ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಿವುಡ್ ನಟ ಸೋನು ಸೂದ್ ತಿಳಿಸಿದ್ದಾರೆ.

    ಚಂಡೀಗಢದಿಂದ ಸುಮಾರು 170 ಕಿಮೀ ದೂರದಲ್ಲಿರುವ ಮೊಗಾ ಎಂಬಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಸಹೋದರಿ ಮಾಳವಿಕಾ ಸೂದ್ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವುದು ಮಾತ್ರ ಇನ್ನೂ ಗೌಪ್ಯವಾಗಿದೆ. ಇದನ್ನೂ ಓದಿ:     ಹಸು ಸಗಣಿ, ಗೋಮೂತ್ರ ಆರ್ಥಿಕತೆ ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್

    ಸೂದ್ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‍ಜೀತ್ ಸಿಂಗ್ ಚನ್ನಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಕೇಜ್ರಿವಾಲ್ ಅವರೊಂದಿಗಿನ ಭೇಟಿ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ರಾಜಕೀಯ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ವದಂತಿಗಳನ್ನು ಹುಟ್ಟುಹಾಕಿತು. ಆದರೆ ಈ ವೇಳೆ ಸೂನು ಸೂದ್ ಅವರು ನಾವು ಸದ್ಯಕ್ಕೆ ನಾವು ಯಾವುದೇ ರಾಜಕೀಯವನ್ನು ಚರ್ಚಿಸಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಇದೀಗ ಅವರ ಸಹೋದರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಯಾವ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ಸೋನು ಸೂದ್ ಅವರು ಕೊರೊನಾ ಲಾಕ್‍ಡೌನ್‍ನಲ್ಲಿ ಸಿಲುಕಿ ಅಸಹಾಯಕರಾಗಿರುವ ನೂರಾರು ವಲಸಿಗರನ್ನು ಅವರ ಸ್ವಂತ ರಾಜ್ಯಕ್ಕೆ ಕರೆದೊಯ್ಯಲು ಬಸ್‍ಗಳು, ರೈಲು ಮತ್ತು ವಿಮಾನಗಳನ್ನು ಸಹ ವ್ಯವಸ್ಥೆ ಮಾಡಿದರು. ಈ ವರ್ಷದ ಆರಂಭದಲ್ಲಿ ಎರಡನೇ ಅಲೆ ವೇಳೆ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಕೊರೊನಾ ಲಸಿಕೆಯನ್ನು ನೀಡುವಲ್ಲಿ ಸಹಾಯ ಮಾಡಿದ್ದರು.

  • ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ ಅಕ್ಷಯ್ ಕುಮಾರ್

    ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ ಅಕ್ಷಯ್ ಕುಮಾರ್

    ಮುಂಬೈ: ಅಕ್ಷಯ್ ಕುಮಾರ್ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಮನರಂಜನೆ ಜೊತೆ ಒಂದೊಳ್ಳೆಯ ಸಂದೇಶ ಇರುತ್ತದೆ. ಇದೀಗ ಒಲಿಂಪಿಕ್ಸ್ ಜಾವಲಿನ್ ಎಸೆತದಲ್ಲಿ ಚಿನ್ನ ಗೆದ್ದ ಕ್ರೀಡಾಪಟು ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ್ದಾರೆ.

     

    ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ನೀರಜ್ ಚೋಪ್ರಾ ಅವರು ಭಾರತವನ್ನು ಪ್ರತಿನಿಧಿಸಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ನೀರಜ್ ಚೋಪ್ರಾ ಬಯೋಪಿಕ್‍ಗೆ ನಟ ಅಕ್ಷಯ ಕುಮಾರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮೀಮ್‍ಗಳು ಹರಿದಾಡಿದ್ದವು. ಆದರೆ ಈ ವಿಚಾರದಲ್ಲಿ ಅಕ್ಷಯ್ ಕುಮಾರ್ ನೀಡಿದ ಹೇಳಿಕೆ ಭಿನ್ನವಾಗಿದೆ. ಇದನ್ನೂ ಓದಿ: ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಆರ್ಹರಿದ್ದಾರೆ: ಮುರುಗೇಶ್ ನಿರಾಣಿ

    ಅಕ್ಷಯ್ ಕುಮಾರ್ ಹಲವು ಬಯೋಪಿಕ್‍ನಲ್ಲಿ ನಟಿಸಿದ್ದಾರೆ ಕೂಡ. ಈ ಎಲ್ಲಾ ಕಾರಣಕ್ಕೆ ಯಾವುದೇ ವ್ಯಕ್ತಿ ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಆ ವ್ಯಕ್ತಿಯ ಬಯೋಪಿಕ್‍ನಲ್ಲಿ ಅಕ್ಷಯ್ ನಟಿಸುತ್ತಾರೆ ಎನ್ನುವ ವಿಚಾರವಾಗಿ ಸುದ್ದಿಯಾಗಿತ್ತು. ಈ ಕುರಿತಾಗಿ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

    ನೀರಜ್ ಚೋಪ್ರಾ ಬಯೋಪಿಕ್‍ಗೆ ಅಕ್ಷಯ್ ತರಬೇತಿ ಆರಂಭಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ಸಾಕಷ್ಟು ಫನ್ನಿ ಎಂದು ನನಗನ್ನಿಸುತ್ತದೆ. ವೈರಲ್ ಆದ ಫೋಟೋ ನನ್ನ ಮೊದಲ ಚಿತ್ರ ಸೌಗಂಧ್ ಹಾಡೊಂದರಲ್ಲಿ ಬರುವ ದೃಶ್ಯ ಅದು. ನೀರಜ್ ಸುಂದರವಾಗಿದ್ದಾರೆ. ನನ್ನ ಬಯೋಪಿಕ್‍ನಲ್ಲಿ ಯಾರಾದರೂ ನಟಿಸಬೇಕು ಎಂದರೆ ಅದು ನೀರಜ್ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ. ಈ ಮೂಲಕವಾಗಿ ಅಕ್ಷಕುಮಾರ್ ನೀರಜ್ ಚೋಪ್ರಾಗೆ ತಮ್ಮ ಬಯೋಪಿಕ್‍ನಲ್ಲಿ ನಟಿಸುವ ಆಫರ್ ನೀಡಿದ್ದಾರೆ.

  • ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ದಿಶಾ ಪಟಾನಿ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

    ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ಬೀಚ್‍ನಲ್ಲಿ ಕುಳಿತು ಫೊಟೋ ಪೋಸ್ ಕೊಟ್ಟ ಹಾಟ್ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಿಶಾ ಪಟಾನಿಯ ಇನ್‍ಸ್ಟಾಗ್ರಾಮ್‍ನಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬೀಚ್‍ನಲ್ಲಿ ಬಿಕಿನಿ ಧರಿಸಿ ದಿಶಾ ಪಟಾನಿ ತೆಗೆಸಿಕೊಂಡಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.

     

    View this post on Instagram

     

    A post shared by disha patani (paatni) (@dishapatani)

    ಎಂ.ಎಸ್. ಧೋನಿ, ರಾಧೆ ಸಿನಿಮಾ ಖ್ಯಾತಿಯ ದಿಶಾ ಪಟಾನಿಗೆ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಕೊರೊನಾ ಹಾವಳಿಯಿಂದಾಗಿ ಶೂಟಿಂಗ್‍ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಈ ನಡುವೆ ಹಾಟ್ ಫೋಟೋಶೂಟ್ ಪೋಸ್ ಕೊಟ್ಟ ಫೋಟೋಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

     

    View this post on Instagram

     

    A post shared by disha patani (paatni) (@dishapatani)

    ಉತ್ತರಾಖಂಡ ಮೂಲದ ದಿಶಾ ಪಟಾನಿ ಹುಟ್ಟಿದ್ದು ಉತ್ತರ ಪ್ರದೇಶದ ಬರೇಲಿಯಲ್ಲಿನ ರಜಪೂತ್ ಮನೆತನದಲ್ಲಾಗಿದೆ. ದಿಶಾ ಪಟಾನಿ ಅವರ ತಂದೆ ಪೊಲೀಸ್ ಆಫೀಸರ್ ಆಗಿದ್ದಾರೆ. ದಿಶಾ ಪಟಾನಿ ಮೊದಲು ಅಭಿನಯಿಸಿದ ಸಿನಿಮಾ ತೆಲುಗು ಭಾಷೆಯ ಲೋಫರ್. ವರುಣ್ ತೇಜ ಜೊತೆ ನಾಯಕಿಯಾಗಿ ದಿಶಾ ಅಭಿನಯಿಸಿದ ಈ ಸಿನಿಮಾ ಆಕೆಗೆ ಭಾರೀ ಹೆಸರು ತಂದುಕೊಟ್ಟಿತು.

     

    View this post on Instagram

     

    A post shared by disha patani (paatni) (@dishapatani)

    ಎಂ.ಎಸ್. ಧೋನಿ, ಅನ್‍ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಜೋಡಿಯಾಗಿ ನಟಿಸಿದ ದಿಶಾ ಪಟಾನಿಗೆ ಆ ಸಿನಿಮಾ ದೊಡ್ಡ ಬ್ರೇಕ್ ನೀಡಿತು. ಜಾಕಿ ಚಾನ್ ಅವರ ಕುಂಗ್ ಫು ಯೋಗ ಸಿನಿಮಾದಲ್ಲಿ ದಿಶಾ ಪಟಾನಿ ಸೋನು ಸೂದ್‍ಗೆ ಜೊತೆಯಾಗಿ ನಟಿಸಿದ್ದಾರೆ. ಬಾಘಿ ಸಿನಿಮಾದಲ್ಲಿ ಟೈಗರ್ ಶ್ರಾಫ್ ಜೊತೆ ತೆರೆ ಹಂಚಿಕೊಂಡಿದ್ದ ದಿಶಾ ಪಟಾನಿ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗಳ ಮೂಲಕವಾಗಿ ಸುದ್ದಿ ಮಾಡುವ ದಿಶಾ ಪಟಾನಿ ಇದೀಗ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

  • ಸಿಹಿ ತಿನ್ನಲು ನಾಚ್ಕೋಬೇಡಿ, ನಮ್ಮ ವಿರಾಟ ಸೇವೆ ಲಭ್ಯ- ಝೊಮ್ಯಾಟೋ

    ಸಿಹಿ ತಿನ್ನಲು ನಾಚ್ಕೋಬೇಡಿ, ನಮ್ಮ ವಿರಾಟ ಸೇವೆ ಲಭ್ಯ- ಝೊಮ್ಯಾಟೋ

    – ಝೊಮ್ಯಾಟೋ ಪದಗಳಲ್ಲೇ ಆಟವಾಡಿದೆ ಎಂದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಾಯಿಯಗ್ತಿರುವ ಕುರಿತು ವಿರುಷ್ಕಾ ದಂಪತಿ ಸುದ್ದಿ ಹಂಚಿಕೊಳ್ಳುತ್ತಿದ್ದಂತೆ ಹೆಚ್ಚು ಚರ್ಚೆ ಆರಂಭವಾಗಿದೆ. ಅದರಲ್ಲೂ ನೆಟ್ಟಿಗರು ಈ ಕುರಿತು ವಿವಿಧ ಬಗೆಯ ಪೋಸ್ಟ್ ಹಾಗೂ ಸಾಲುಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆನ್‍ಲೈನ್ ಆಹಾರ ಮಾರಾಟ ಜಾಲತಾಣ ಝೊಮ್ಯಾಟೋ ಸಹ ಈ ಕುರಿತು ವಿಭಿನ್ನವಾಗಿ ಪೋಸ್ಟ್ ಮಾಡುವ ಮೂಲಕ ಗಮನಸೆಳೆದಿದೆ.

    ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ನಾವೀಗ ಮೂವರು ಎಂಬ ಸಾಲುಗಳನ್ನು ಬರೆಯುವ ಮೂಲಕ ಈ ಸುದ್ದಿಯನ್ನು ತಿಳಿಸಿದ್ದರು. ಇದಾದ ಬೆನ್ನಲ್ಲೇ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ವಿವಿಧ ರೀತಿಯ ಪೋಸ್ಟ್‍ಗಳನ್ನು ಹಾಕುವ ಮೂಲಕ ತಮ್ಮ ನೆಚ್ಚಿನ ಕ್ರಿಕೆಟರ್ ಹಾಗೂ ನೆಚ್ಚಿನ ನಟಿಗೆ ಶುಭ ಕೋರುತ್ತಿದ್ದಾರೆ.

    ಅದೇ ರೀತಿ ಇದೀಗ ಝೊಮ್ಯಾಟೋ ಟ್ವೀಟ್ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಶುಭ ಕೋರಿದೆ. ಟ್ವೀಟ್ ಮಾಡಿರುವ ಝೊಮ್ಯಾಟೋ, ಇದು ನಿಜವಾಗಲೂ ಶುಭ ಸುದ್ದಿ. ಸಿಹಿ ತಿನ್ನಲು (ಶರ್ಮಾನಾ) ನಾಚಿಕೊಳ್ಳಬೇಡಿ, ನಿಮಗಾಗಿ ನಮ್ಮ ‘ವಿರಾಟ’ ಸೇವೆ ಲಭ್ಯವಿರುತ್ತೆ ಎಂದು ಬರೆದಿದೆ. ಈ ಟ್ವೀಟ್ ಕುರಿತು ಸಹ ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲವರು ತಮಗಿಷ್ಟದ ಆಹಾರ ಖಾದ್ಯಗಳನ್ನು ಹೆಸರಿಸಿ ಕಮೆಂಟ್ ಮಾಡುತ್ತಿದ್ದಾರೆ.

    https://twitter.com/ZomatoIN/status/1298889729874767872

    ವಿರುಷ್ಕಾ ದಂಪತಿ ಗುಡ್ ನ್ಯೂಸ್ ನೀಡಿದ ಬಳಿಕ ಇಬ್ಬರ ಹೆಸರು (ಶರ್ಮಾ ಮತ್ತು ವಿರಾಟ) ಬಳಸಿ ಝೊಮ್ಯಾಟೋ ಶುಭಾಶಯ ತಿಳಿಸಿದೆ. ಇನ್ನು ವಿಶ್ ನೋಡಿದ ನೆಟ್ಟಿಗರು ಝೊಮ್ಯಾಟೋ ಪದಗಳಲ್ಲೇ ಆಟವಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ 1,500ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಅಲ್ಲದೆ ವಿವಿಧ ಜೋಕ್‍ಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಮೂರು ವರ್ಷದ ನಂತರ ಅನುಷ್ಕಾ ಅವರು ಗರ್ಭಿಣಿಯಾಗಿದ್ದಾರೆ. ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿರುವ ಕೊಹ್ಲಿ ಹಾಗೂ ಅನುಷ್ಕಾ, ನಾವು ಈಗ ಮೂವರು, ಜನವರಿಯಲ್ಲಿ ಡೆಲಿವರಿ ಎಂದು ಬರೆದುಕೊಂಡಿದ್ದಾರೆ.

    2017ರ ಡಿಸೆಂಬರ್ 11ರಂದು ಇಟಲಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಗಿದ್ದರು. ಇಟಲಿಯಿಂದ ಬಂದ ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಗೆ ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿದ್ದರು. ದೆಹಲಿ ಬಳಿಕ ಮುಂಬೈನ ಸೆಂಟ್ ರೀಜಿಸ್ ನಲ್ಲಿ ಮಗದೊಮ್ಮೆ ಆರತಕ್ಷತೆ ಆಯೋಜನೆ ಮಾಡಲಾಗಿತ್ತು. ಮುಂಬೈನಲ್ಲಿ ಬಾಲಿವುಡ್ ತಾರೆಯರು ಮತ್ತು ಕೊಹ್ಲಿ ಸ್ನೇಹಿತರು ಆಗಮಿಸಿ ವಧು-ವರರಿಗೆ ಶುಭ ಕೋರಿದ್ರು.

  • ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನವದೆಹಲಿ: ಬಾಲಿವುಟ್ ನಟಿ, ಡ್ಯಾನ್ಸರ್ ಎಲಿ ಅವ್ರಾಮ್ ಮುಖ, ಕೈ-ಕಾಲು ಸೇರಿ ಈಡೀ ದೇಹಕ್ಕೆ ಬೀಟ್‍ರೂಟ್ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    29 ವರ್ಷದ ನಟಿ ಎಲಿ ಅವ್ರಾಮ್‍ಗೆ ಚರ್ಮದ ಚಿಕಿತ್ಸೆಗಾಗಿ ಮೈತುಂಬ ಬೀಟ್‍ರೂಟ್ ಜ್ಯೂಸ್ ಅನ್ನು ಹಚ್ಚಿಕೊಳ್ಳಲು ಅವರ ಮನೆಯ ಸಹಾಯಕಿ ಸಲಹೆ ನೀಡಿದ್ದಳು. ಇದರಿಂದಾಗಿ ಮೈತುಂಬ ಬೀಟ್‍ರೂಟ್ ಜ್ಯೂನ್ ಅನ್ನು ಹಚ್ಚಿಕೊಂಡ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಬಿಕಿನಿಯಲ್ಲಿರುವ ಫೋಟೋಗಳನ್ನು ತಮ್ಮನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಎಲಿ ಅವ್ರಾಮ್, ‘ಇದು ಬೀಟ್‍ರೂಟ್ ಅಂಗಡಿ’ ಎಂದು ಶೀರ್ಷಿಕೆ ಹಾಕಿದ್ದಾರೆ. ಜೊತೆಗೆ “ಬೀಟ್‍ರೂಟ್‍ನ ಪ್ರೀತಿಗಾಗಿ. ಇದು ಮನೆಯಲ್ಲಿ ನನ್ನ ಸಹಾಯಕಿ ಉಷಾ ಕಲ್ಪನೆ. ಈ ಅಲಂಕಾರ ನೋಡಿ ಅವಳು ನನ್ನನ್ನು ಅನ್ಯಲೋಕದವಳು ಎಂದು ಕರೆದಳು” ಎಂದು ಬರೆದುಕೊಂಡಿದ್ದಾರೆ.

    ಎಲಿ ಅವ್ರಾಮ್ ಫೋಟೋಗಳಿಗೆ 99 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲ ನೆಟ್ಟಿಗರು ತಮ್ಮದೇ ರೀತಿಯಲ್ಲಿ  ಕಮೆಂಟ್ ಮಾಡಿದ್ದಾರೆ.

    ಡ್ಯಾನ್ಸಿಂಗ್ ಕೌಶಲ್ಯದಲ್ಲಿ ಸಖತ್ ಹೆಸರು ಮಾಡಿರುವ ಎಲಿ ಅವ್ರಾಮ್ ಅನೇಕ ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ನಿರೂಪಿಸಿದ ರಿಯಾಲಿಟಿ ಟಿವಿ ಶೋ ಬಿಗ್‍ಬಾಸ್‍ನ ಏಳನೇ ಆವೃತ್ತಿಯಲ್ಲಿ ಎಲಿ ಅವ್ರಾಮ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಝಲಕ್ ದಿಕ್ಲಾ ಜಾ ಸೀಸನ್ 7ರ ಸ್ಪರ್ಧಿಯೂ ಆಗಿದ್ದಾರೆ. ಕಳೆದ ವರ್ಷ, ಅವರು ಟೈಪ್ ರೈಟರ್ ಮತ್ತು ಇನ್‍ಸೈಡ್ ಎಡ್ಜ್-2 ನಂತಹ ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/CAz1kmMggFm/?utm_source=ig_embed

  • ನಟ ಇರ್ಫಾನ್ ಖಾನ್ ವಿಧಿವಶ

    ನಟ ಇರ್ಫಾನ್ ಖಾನ್ ವಿಧಿವಶ

    ಮುಂಬೈ: ತಾಯಿ ಸಾವನ್ನಪ್ಪಿದ ಕೇವಲ 5 ದಿನಗಳಲ್ಲೇ ಬಾಲಿವುಟ್ ನಟ ಇರ್ಫಾನ್ ಖಾನ್ ಕೂಡ ವಿಧಿವಶರಾಗಿದ್ದಾರೆ.

    ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇರ್ಫಾನ್ ಖಾನ್ (53) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಶನಿವಾರವಷ್ಟೇ ಅವರ ತಾಯಿ ತೀರಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆ ಇರ್ಫಾನ್ ಖಾನ್ ಅವರು ತಾಯಿಯ ಅಂತಿಮ ಸಂಸ್ಕಾರಕ್ಕೆ ಹೋಗಿರಲಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಿಮ ದರ್ಶನ ಪಡೆದಿದ್ದರು.

    ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಅಸ್ಪತ್ರೆಯ ಐಸಿಯುನಲ್ಲಿ ಇರ್ಫಾನ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದರು. ಈ ಕುರಿತು ಮಾಹಿತಿ ನೀಡಿದ್ದ ವೈದ್ಯಾಧಿಕಾರಿಗಳು, ಕೊಲೊನ್ ಇನ್‍ಫೆಕ್ಷನ್‍ನಿಂದಾಗಿ ಇರ್ಫಾನ್ ಅವರನ್ನು ಅಬ್ಸರ್ವೇಶನ್‍ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ.

    ಇರ್ಫಾನ್ ಅವರಿಗೆ ನ್ಯೂರೋಎಂಡೋಕ್ರೈನ್ ಗಡ್ಡೆ ಇರುವುದು 2018ರಲ್ಲೇ ತಿಳಿದಿತ್ತು. ಇದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಶನಿವಾರ ಅವರ ತಾಯಿ ಸಾಯಿಬಾ ಬೇಗಂ ಅವರನ್ನು ಕಳೆದುಕೊಂಡಿದ್ದ ಅವರು ವಿಡಿಯೋ ಕಾಲ್ ಮೂಲಕ ಅವರಿಗೆ ಅಂತಿಮ ನಮನ ಸಲ್ಲಿಸಿದ್ದರು.

  • ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ನವದೆಹಲಿ: ತಮ್ಮ ಭಾವನೆಗಳನ್ನು ಬಹಿರಂಗಪಡಿಸುವ ಮೂಲಕ ಆಗಾಗ ಸುದ್ದಿಯಾಗುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇದೀಗ ಫೇಸ್‌ಬುಕ್ ಪೋಸ್ಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಬಾಲಿವುಟ್ ನಟ, ನಟಿಯರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಕುರಿತು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಟ, ನಟಿಯರೊಂದಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಹ ಪ್ರಧಾನಿ ಮೋದಿಯವರ ಮನೆಗೆ ತೆರಳಿದ್ದರು. ಆಗ ತಮ್ಮನ್ನು ಇತರ ನಟರಂತೆ ಆಧರಿಸಿಲ್ಲ, ತಾರತಮ್ಯ ಎಸಗಲಾಗಿದೆ ಎಂದು ಪರೋಕ್ಷವಾಗಿ ಎಸ್‌ಪಿಬಿ ಅಸಮಾಧಾನ ಹೊರ ಹಾಕಿದ್ದಾರೆ.

    https://www.facebook.com/SPB/posts/2672550912802732

    ಎಲ್ಲರ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಹೊರಗೆ ತೆಗೆದುಕೊಂಡು, ಟೋಕನ್ ನೀಡಿ ಕಳುಹಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಿವುಡ್ ತಾರೆಯರಿಗೆ ಮಾತ್ರ ಹೇಗೆ ಮತ್ತು ಏಕೆ ಮೊಬೈಲ್ ಒಳಗೆ ಕೊಂಡೊಯ್ದು, ಸೆಲ್ಫಿ ತೆಗೆಯಲು ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಎಸ್‌ಪಿಬಿಯವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

    ರಾಮೋಜಿ ರಾವ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಇವರಿಂದಲೇ ನಾನು ಅಕ್ಟೋಬರ್ 29ರಂದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಮನೆಯಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ನಾನು ಹಾಜರಾಗಲು ಸಾಧ್ಯವಾಯಿತು. ಮನೆಯ ಆವರಣದೊಳಗೆ ಪ್ರವೇಶಿಸುವುದಕ್ಕೂ ಮುನ್ನ ನಮ್ಮ ಸೆಲ್‌ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಬಳಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಟೋಕನ್‌ಗಳನ್ನು ನೀಡಲಾಯಿತು. ಆದರೆ ಆ ದಿನ ಪ್ರಧಾನ ಮಂತ್ರಿಯೊಂದಿಗೆ ನಟ, ನಟಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದನ್ನು ನೋಡಿ ದಿಗ್ಬ್ರಾಂತನಾದೆ. ಥಿಂಗ್ಸ್ ದ್ಯಾಟ್ ಮೇಕ್ ಯು ಗೋ ಹೂಂ????? ಎಂಬ ಸಾಲುಗಳನ್ನು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಹಾಗೂ ಅಭಿಯಾನವನ್ನು ಉತ್ತೇಜಿಸಲು ‘ಚೇಂಜ್ ವಿಥಿನ್’ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಏರ್ಪಡಿಸಿದ್ದರು. ಇದರಲ್ಲಿ ಶಾರುಖ್ ಖಾನ್, ಅಮಿರ್ ಖಾನ್ ಹಾಗೂ ಚಿತ್ರೋದ್ಯಮದ ಹಲವು ಗಣ್ಯರು ಸೇರಿದಂತೆ ತಾರೆಯರು ಭಾಗವಹಿಸಿದ್ದರು.

    ದಕ್ಷಿಣ ರಾಜ್ಯಗಳ ಏಕೈಕ ಪ್ರತಿನಿಧಿಯಾಗಿ ತೆಲುಗು ನಿರ್ಮಾಪಕ ದಿಲ್ ರಾಜು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ರಾಮ್ ಚರಣ ಅವರ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕಾಮಿನೇನಿ ಈ ಕುರಿತು ಧ್ವನಿ ಎತ್ತಿ ದಕ್ಷಿಣ ರಾಜ್ಯಗಳಿಗೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದ್ದರು. ಈ ಕುರಿತು ಚಿತ್ತ ಹರಿಸುವಂತೆ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದರು.

  • ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    – ಕೃತ್ಯದಲ್ಲಿ ಬಿ ಗ್ರೇಡ್ ಬಾಲಿವುಡ್ ನಟಿಯರೂ ಭಾಗಿ
    – ಸಹಕರಿಸಿದ್ದಕ್ಕೆ ಎನ್‍ಜಿಒಗಳಿಗೆ ಸರ್ಕಾರದ ಗುತ್ತಿಗೆ

    ಭೋಪಾಲ್: ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳು, ಗಣ್ಯ ವ್ಯಕ್ತಿಗಳನ್ನು ಬಾಲಿವುಡ್‍ನ ಕೆಲವು ಬಿ-ಗ್ರೇಡ್ ನಟಿಯರು ಸೇರಿದಂತೆ 40ಕ್ಕೂ ಅಧಿಕ ಕಾಲ್ ಗರ್ಲ್ಸ್‌ ಸೇರಿ ಹನಿಟ್ರ್ಯಾಪ್ ಎಸಗಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

    ಈ ಕೃತ್ಯಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜ್ಯ ರಾಜ್ಯಪಾಲರು ಸೇರಿದಂತೆ ಹಲವು ಅಧಿಕಾರಿಗಳು ಗಣ್ಯ ವ್ಯಕ್ತಿಗಳು ಬಲಿಪಶುಗಳಾಗಿದ್ದಾರೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ರಾಜಿ ಮಾಡಿಕೊಳ್ಳುವ ವೇಳೆ ಹಾಗೂ ಸೆಕ್ಸ್ ನಡೆಸುವ ವೇಳೆ ಚಿತ್ರೀಕರಿಸಿರುವ 92 ಎಚ್‍ಡಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಈವರೆಗೆ ಎರಡು ಲ್ಯಾಪ್‍ಟಾಪ್‍ಗಳು ಮತ್ತು ಹಲವಾರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬ್ಲ್ಯಾಕ್‍ಮೇಲ್ ಹಾಗೂ ಸುಲಿಗೆ ದಂಧೆ ಆರೋಪದ ಮೇಲೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ.

    ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಸಂಜೀವ್ ಶಮಿ ನೇತೃತ್ವದ ಪೊಲೀಸರ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಕಾಲ್ ಗರ್ಲ್ಸ್‌ ಚಿತ್ರೀಕರಿಸಿದ ಸ್ಥಳದಲ್ಲಿ ವಿಡಿಯೋಗಳನ್ನು ಹೊಂದಿರುವ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಈ ಪ್ರಕರಣದ ತನಿಖೆ ನಡೆಸಲು ಡಿ.ಶ್ರೀನಿವಾಸ್ ಅವರ ಜಾಗಕ್ಕೆ ಸಂಜೀವ್ ಶಮಿಯವರನ್ನು ನೇಮಿಸಲಾಗಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‍ವರ್ಗಿಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಈ ಕುರಿತು ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

    ಹನಿಟ್ರ್ಯಾಪ್ ಹೇಗೆ?
    ಈ ಹನಿಟ್ರ್ಯಾಪ್ ಕಿಂಗ್‍ಪಿನ್ ಶ್ವೇತಾ ಸ್ವಾಪ್ನಿಲ್ ಜೈನ್ ಆಗಿದ್ದು, ಈಕೆ ಉನ್ನತ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿ, ಆರಂಭದ ಸಂವಾದದ ನಂತರ ಅವರನ್ನು ಲೈಂಗಿಕತೆಗೆ ಆಹ್ವಾನಿಸುತ್ತಿದ್ದಳು. ಇದಕ್ಕಾಗಿ ಅಥಿತಿ ಗೃಹ ಅಥವಾ 5 ಸ್ಟಾರ್ ಹೋಟೆಲ್‍ಗಳಿಗೆ ಆಹ್ವಾನಿಸುತ್ತಾಳೆ. ವ್ಯಕ್ತಿಯು ಒಂದು ಬಾರಿ ಲೈಂಗಿಕತೆ ನಡೆಸಿದ ನಂತರ ಆ ವಿಡಿಯೋವನ್ನು ಮೊಬೈಲ್ ಅಥವಾ ಸೀಕ್ರೆಟ್ ಕ್ಯಾಮರಾ ಮೂಲಕ ಚಿತ್ರೀಕರಿಸಲಾಗುತ್ತದೆ. ಈ ಕುರಿತು ಶ್ವೇತಾಳ ಪತಿ ಸ್ವಾಪ್ನಿಲ್ ಜೈನ್ ನಿಂದ 6 ಹಾರ್ಡ್ ಡಿಸ್ಕ್ ಗಳನ್ನುವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಕೆಲವು ಬಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮುಂಬೈ ಅಥವಾ ದೆಹಲಿಗೆ ಅಧಿಕೃತ ಪ್ರವಾಸಕ್ಕೆಂದು ತೆರಳಿದಾಗ ಅವರನ್ನು ಟಾರ್ಗೆಟ್ ಮಾಡಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲ ಮಾಡೆಲ್ ಹುಡುಗಿಯರು ಹಾಗೂ ಬಾಲಿವುಡ್ ನಟಿಯರನ್ನು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಎಸ್‍ಐಟಿ ಅಧಿಕಾರಿಗಳು ಇಂತಹ ವಿಡಿಯೋಗಳನ್ನು ವಶಪಡಿಸಿಕೊಂಡ ನಂತರ ಯಾವ ನಟಿ ಎಂದು ಬಹಿರಂಗವಾಗಲಿದೆ.

    ವಿಚಾರಣೆಯ ಸಮಯದಲ್ಲಿ ಶ್ವೇತಾ ಈ ಕುರಿತು ಮಾಹಿತಿ ನೀಡಿ, ಒಮ್ಮೆ ಮಂತ್ರಿ ಅಥವಾ ಕಾರ್ಯದರ್ಶಿ ಹನಿ ಟ್ರ್ಯಾಪ್‍ನಲ್ಲಿ ಸಿಕ್ಕಿಬಿದ್ದಾಗ ನಾನು ನಡೆಸುತ್ತಿರುವ ಎನ್‍ಜಿಓಗೆ ಸರ್ಕಾರದ ಕಾಂಟ್ರ್ಯಾಕ್ಟ್ ಕೊಡಿಸುವ ಪ್ರಯತ್ನ ನಡೆಸಿದ್ದೆ. ಪತಿ ನಡೆಸುತ್ತಿರುವ ಎನ್‍ಜಿಓಗೆ ಭೋಪಾಲ್ ಮುನ್ಸಿಪಲ್ ಕಾರ್ಪೋರೇಶನ್‍ನಿಂದ 8 ಕೋಟಿ ರೂ.ಗಳ ಗುತ್ತಿಗೆ ನೀಡಲಾಗಿದೆ ಎಂದು ಶ್ವೇತಾ ಒಪ್ಪಿಕೊಂಡಿದ್ದಾಳೆ. ಪಿಡಬ್ಲ್ಯೂಡಿ, ವಸತಿ, ಸಮಾಜ ಕಲ್ಯಾಣ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳ ಗುತ್ತಿಗೆಗಳನ್ನು ನೀಡಲಾಗಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿಯೊಬ್ಬರು ಪೋಶ್ ಭೋಪಾಲ್‍ನ ಮಿನಾಲ್ ರೆಸಿಡೆನ್ಸಿಯಲ್ಲಿ ಒಂದು ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.

    ಶ್ವೇತಾ ಜೈನ್ ಜೊತೆಗೆ ಎಸ್‍ಐಟಿ ಬಂಧಿಸಲ್ಪಟ್ಟ ಮತ್ತೊಬ್ಬ ಮಹಿಳೆ ಆರತಿ ದಯಾಳ್ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿದ್ದು, ನಾನೂ ಸಹ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕದಲ್ಲಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಈ ಅಧಿಕಾರಿಗಳು ನನಗೆ ಒಂದು ಫ್ಲ್ಯಾಟ್‍ನ ವ್ಯವಸ್ಥೆ ಸಹ ಮಾಡಿದ್ದರು ಎಂದು ಸಹ ಒಪ್ಪಿಕೊಂಡಿದ್ದಾಳೆ. ಆರತಿ ಈ ಫ್ಲ್ಯಾಟ್ ಆಕ್ರಮಿಸಿಕೊಂಡ ನಂತರ ಅದನ್ನೇ ಅಕ್ರಮಗಳ ಅಡ್ಡ ಮಾಡಿಕೊಂಡಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ಎಂಜಿನಿಯರ್‍ಗಳು ರಾಜಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿನ ಫ್ಲ್ಯಾಟ್‍ನ ಕೋಣೆಗಳಲ್ಲಿ ಸಹ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದೆವು. ಸ್ಟಿಂಗ್ ಆಪರೇಷನ್ ನಡೆಸಲು ಕಾಲ್ ಗಲ್ರ್ಸ್ ನೇಮಿಸಿಕೊಳ್ಳುತ್ತಿದ್ದೆವು. ಮಂತ್ರಿಗಳನ್ನು ಸೆಳೆಯಲು ಕೆಲವು ಸಂದರ್ಭಗಳಲ್ಲಿ ಬಿ ಗ್ರೇಡ್ ಬಾಲಿವುಡ್ ನಾಯಕಿಯರು ಹಾಗೂ ಮಾಡೆಲ್‍ಗಳನ್ನು ತೊಡಗಿಸಿಕೊಳ್ಳುತ್ತಿದ್ದೆವು ಎಂದು ಮಾಹಿತಿ ಬಹಿರಂಗಪಡಿಸಿದ್ದಾರೆ.

    ದಂಧೆಯ ಮಾಸ್ಟರ್ ಮೈಂಡ್ ಶ್ವೇತಾಳಂತೆಯೇ ಆರತಿ ಸಹ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಂದ ಹೆಚ್ಚು ಹಣ ಪಡೆಯಲು ಎನ್‍ಜಿಓವನ್ನು ಸ್ಥಾಪಿಸಿದ್ದಳು. ವಿರಳ ಸಂದರ್ಭಗಳಲ್ಲಿ ಮಾತ್ರ ಸ್ಪೈ ಕ್ಯಾಮರಾ ಬಳಸುತ್ತಿದ್ದೆವು, ಹೆಚ್ಚಿನ ಸಂದರ್ಭಗಳಲ್ಲಿ ಎನ್‍ಜಿಓ ಮೂಲಕ ಸರ್ಕಾರದ ಹಣವನ್ನು ಸುಲಭವಾಗಿ ವರ್ಗಾಯಿಸುವಾಗ ಕ್ಯಾಮರಾ ಬಳಸುತ್ತಿದ್ದೆವು ಎಂದು ಇಬ್ಬರು ತಿಳಿಸಿದ್ದಾರೆ.

    ಲ್ಯಾಬ್‍ಗಳಲ್ಲಿ ವಿಡಿಯೋಗಳನ್ನು ಪರೀಕ್ಷಿಸಿದ ನಂತರ, ಬ್ಲ್ಯಾಕ್‍ಮೇಲ್ ಮಾಡಿದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಗಣ್ಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಈ ಪ್ರಕರಣವೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಈ ಹನಿ ಟ್ರ್ಯಾಪ್ ಪ್ರಕರಣದ ಸೂತ್ರಧಾರೆ ಶ್ವೇತಾ ಜೈನ್ 2013 ಮತ್ತು 2018ರ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಳು.