Tag: ಬಾಲಿ

  • ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ಜ್ವಾಲಾಮುಖಿ ಸ್ಫೋಟ – ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ವಾಪಸ್

    ನವದೆಹಲಿ: ದ್ವೀಪಸಮೂಹದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ (Volcanic Eruption) ದೆಹಲಿಯಿಂದ ಇಂಡೋನೇಷ್ಯಾದ ಬಾಲಿಗೆ (Bali) ತೆರಳುತ್ತಿದ್ದ ಏರ್‌ ಇಂಡಿಯಾ (Air India Flight) ವಿಮಾನವು ದೆಹಲಿಗೆ ವಾಪಸ್‌ ಆಗಿದೆ.

    ದೆಹಲಿಯಿಂದ (Delhi) ಹೊರಟಿದ್ದ ಏರ್ ಇಂಡಿಯಾ ವಿಮಾನ AI2145, ಬಾಲಿಯ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದ ವರದಿಗಳ ಕಾರಣ ದೆಹಲಿಗೆ ಹಿಂತಿರುಗಲು ಸೂಚಿಸಲಾಯಿತು ಎಂದು ವಿಮಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ – 9 ಜನರಿದ್ದ ಇಕೋ ಕಾರು ನೀರುಪಾಲು, ನಾಲ್ವರು ಸಾವು

    ಬುಧವಾರ ದೆಹಲಿಯಿಂದ ಬಾಲಿಗೆ ಏರ್ ಇಂಡಿಯಾ ವಿಮಾನ AI2145 ಹೊರಟಿತ್ತು. ಬಾಲಿಯ ಗಮ್ಯಸ್ಥಾನ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟದ ವರದಿಗಳು ಕೇಳಿಬಂದವು. ಸುರಕ್ಷತೆಯ ದೃಷ್ಟಿಯಿಂದ ದೆಹಲಿಗೆ ಹಿಂತಿರುಗಲು ಸೂಚಿಸಲಾಯಿತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

    ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಸತಿ ಒದಗಿಸಲಾಗಿದೆ. ಟಿಕೆಟ್‌ ಹಣವನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಕೇದಾರನಾಥ ಟ್ರಕ್ಕಿಂಗ್ ದಾರಿಯಲ್ಲಿ ಭೂಕುಸಿತ – ಇಬ್ಬರು ಸಾವು, ಮೂವರಿಗೆ ಗಾಯ

    ಬಾಲಿಯ ಪೂರ್ವದಲ್ಲಿರುವ ಜ್ವಾಲಾಮುಖಿ ಸ್ಫೋಟಗೊಂಡ ನಂತರ ಬುಧವಾರ ಬಾಲಿಗೆ ಹೋಗುವ ಮತ್ತು ಬರುವ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

    5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

    ನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ (Amala Paul)  ಜಾಲಿ ಮೂಡ್‌ನಲ್ಲಿದ್ದಾರೆ. ಪತಿ ಮತ್ತು ಮಗುವಿನೊಂದಿಗೆ ಬಾಲಿಗೆ ನಟಿ ಹಾರಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿಯ (Bali) ಸುಂದರ ತಾಣಗಳಿಗೆ ಭೇಟಿ ನೀಡಿದ್ದಾರೆ. ಪತಿ, ಮಗುವಿನೊಂದಿಗೆ ಕುಳಿತು ಕ್ಯಾಮೆರಾಗೆ ಸುಂದರ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಹೊಸ ಗೆಟಪ್‌ನಲ್ಲಿ ಪ್ರಭಾಸ್- ‘ದಿ ರಾಜಾ ಸಾಬ್’ ಚಿತ್ರದ ಪೋಸ್ಟರ್ ಔಟ್

     

    View this post on Instagram

     

    A post shared by Amala Paul (@amalapaul)

    ಅಂದಹಾಗೆ, ಉದ್ಯಮಿ ಜಗತ್ ದೇಸಾಯಿ (Jagath Desai) ಜೊತೆ ಅಮಲಾ ಕಳೆದ ವರ್ಷ ನವೆಂಬರ್‌ನಲ್ಲಿ ಮದುವೆಯಾದರು. ಈ ವರ್ಷ ಜೂನ್ 11ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು. ಮಗುವಿಗೆ ಇಳೈ ಎಂದು ಹೆಸರಿಟ್ಟಿದ್ದಾರೆ.

    ಇನ್ನೂ ಮದುವೆಯಾಗಿ ಮಗು ಆದ್ಮೇಲೆಯೂ ನಟಿ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಸಿನಿಮಾಗಳಲ್ಲಿ ನಟಿಸಲು ಕಥೆಗಳನ್ನು ಕೇಳ್ತಿದ್ದಾರೆ.

  • ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಮದುವೆಯ ಬಳಿಕ ಪತಿ ಜೊತೆ ಬಾಲಿಯಲ್ಲಿ ಮಾನ್ವಿತಾ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮದುವೆಯ ಬಳಿಕ ಪತಿ ಜೊತೆ ಬಾಲಿಗೆ ಹಾರಿದ್ದಾರೆ. ಬಾಲಿಯಲ್ಲಿ (Bali) ತೆಗೆದ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಗೂಢಚಾರಿ’ ಚಿತ್ರಕ್ಕೆ 6 ವರ್ಷದ ಸಂಭ್ರಮ- ಸೀಕ್ವೆಲ್ ಬಗ್ಗೆ ಹೊರಬಿತ್ತು ಇಂಟರೆಸ್ಟಿಂಗ್‌ ಅಪ್‌ಡೇಟ್

    ನವದಂಪತಿ ಮಾನ್ವಿತಾ ಮತ್ತು ಅರುಣ್ ಜೋಡಿ ಬಾಲಿಯಲ್ಲಿ ಕಾಫಿ ಕಿಚನ್ ಸೇರಿದಂತೆ ಹಲವು ಕಡೆ ಭೇಟಿ ಕೊಟ್ಟಿದ್ದಾರೆ. ಪತಿ ಜೊತೆ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ. ಮದುವೆಯ ನಂತರ ಗೋವಾ, ಥೈಲ್ಯಾಂಡ್ ಸೇರಿದಂತೆ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಈ ಜೋಡಿಯ ಕಲರ್‌ಫುಲ್‌ ಫೋಟೋ ನೋಡಿ, ಇವರ ಮೇಲೆ ಯಾರ್‌ ಕಣ್ಣು ಬೀಳದೇ ಇರಲಿ ಎಂದು ಫ್ಯಾನ್ಸ್‌ ಆಶಿಸುತ್ತಿದ್ದಾರೆ.

    ಅಂದಹಾಗೆ, ಮೇ 1ರಂದು ಅರುಣ್ ಜೊತೆ ಮಾನ್ವಿತಾ ಕಾಮತ್ ಮದುವೆಯಾದರು. ಅಮ್ಮನ ಆಸೆಯಂತೆಯೇ ಅವರು ಮೆಚ್ಚಿದ ಹುಡುಗನನ್ನೇ ನಟಿ ಹೊಸ ಬಾಳಿಗೆ ಕಾಲಿಟ್ಟರು. ಈಗ ವೈವಾಹಿಕ ಜೀವನ ಮತ್ತು ಕೆರಿಯರ್ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

    ಸದ್ಯ ಮಾನ್ವಿತಾ ನಟನೆಯ ‘ರಾಜಸ್ತಾನ ಡೈರೀಸ್’ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದು ಕನ್ನಡದ ಜೊತೆ ಮರಾಠಿಯಲ್ಲೂ ರಿಲೀಸ್ ಆಗಲಿದೆ. ಪೃಥ್ವಿ ಅಂಬರ್ ಜೊತೆ ‘ಹ್ಯಾಪಿಲಿ ಮ್ಯಾರೀಡ್’ ಸಿನಿಮಾದಲ್ಲಿ ನಾಯಕಿಯಾಗಿ ಮಾನ್ವಿತಾ ನಟಿಸಿದ್ದಾರೆ.

  • ಹನಿಮೂನ್ ಫೋಟೋ ಹಂಚಿಕೊಂಡ ಆಮೀರ್ ಪುತ್ರಿ ಇರಾ

    ಹನಿಮೂನ್ ಫೋಟೋ ಹಂಚಿಕೊಂಡ ಆಮೀರ್ ಪುತ್ರಿ ಇರಾ

    ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ಸದ್ಯ ಹನಿಮೂನ್ ಮೂಡ್ ನಲ್ಲಿದ್ದಾರೆ. ಇರಾ ಖಾನ್ ಮತ್ತು ನೂಪುರ್ ಶಿಖರೆ ಹನಿಮೂನ್ (Honeymoon) ಗಾಗಿ ಬಾಲಿಯನ್ನು (Bali) ಆಯ್ಕೆ ಮಾಡಿಕೊಂಡಿದ್ದಾರೆ. ಬಾಲಿಯಲ್ಲಿನ ನೆನಪಿಗಾಗಿ ಒಂದು ಫೋಟೋವನ್ನು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಇರಾ ಖಾನ್ (Ira Khan)- ನೂಪುರ್ ಶಿಖರೆ ಜೋಡಿ ಜ.10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ನಂತರ ಮುಂಬೈನ ಪ್ರತಿಷ್ಟಿತ ರೆಸಾರ್ಟ್‌ವೊಂದರಲ್ಲಿ ಅದ್ದೂರಿ ಆರತಕ್ಷತೆ (Reception) ನಡೆದಿತ್ತು. ಈ ಸಮಾರಂಭಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್ (Sharukh Khan) ದಂಪತಿ ಸೇರಿದಂತೆ ಅನೇಕರು ಭಾಗಿದ್ದರು.

    ಮುದ್ದಿನ ಮಗಳು ಇರಾ ಖಾನ್- ನೂಪುರ್ ಮದುವೆಯ ಬಳಿಕ ಆರತಕ್ಷತೆ ಗ್ರ್ಯಾಂಡ್ ಆಗಿ ಹಮ್ಮಿಕೊಂಡಿದ್ದರು. ನೂಪುರ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ಇರಾ ಕೆಂಪು ಲೆಹೆಂಗಾ ಧರಿಸಿ ಮಿಂಚಿದ್ದರು.‌

    ಇರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಗೌರಿ- ಶಾರುಖ್ ಖಾನ್ ಜೋಡಿ, ರಣ್‌ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ತೆಲುಗು ನಟ ನಾಗಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ ದೇಶ್‌ಮುಖ್, ಅದಿತಿ- ಸಿದ್ಧಾರ್ಥ್ ಜೋಡಿ, ಅನಿಲ್ ಕಪೂರ್, ಹೇಮಾ ಮಾಲಿನಿ, ರೇಖಾ ಸೇರಿದಂತೆ ಅನೇಕರು ಭಾಗಿಯಾಗುವ ಮೂಲಕ ನವಜೋಡಿಗೆ ಶುಭಕೋರಿದ್ದರು.

     

    ಇರಾ ಖಾನ್- ನೂಪುರ್ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ಕಡೆ ಕುಟುಂಬದವರನ್ನು ಒಪ್ಪಿಸಿ ಗುರುಹಿರಿಯರ ಸಮ್ಮುಖದಲ್ಲಿ ಜ.10ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದರು.

  • ಇಸ್ಲಾಮಿಕ್‌ ಪ್ರಾರ್ಥನೆ ಬಳಿಕ ಹಂದಿ ಮಾಂಸ ಸೇವನೆ; ಟಿಕ್‌ಟಾಕ್‌ ಸ್ಟಾರ್‌ಗೆ 2 ವರ್ಷ ಜೈಲು

    ಇಸ್ಲಾಮಿಕ್‌ ಪ್ರಾರ್ಥನೆ ಬಳಿಕ ಹಂದಿ ಮಾಂಸ ಸೇವನೆ; ಟಿಕ್‌ಟಾಕ್‌ ಸ್ಟಾರ್‌ಗೆ 2 ವರ್ಷ ಜೈಲು

    ಜಕಾರ್ತ: ಇಸ್ಲಾಮಿಕ್‌ ಪ್ರಾರ್ಥನೆ (Islamic Prayer) ಬಳಿಕ ಹಂದಿ ಮಾಂಸ ತಿಂದ ಟಿಕ್‌ ಟಾಕ್‌ ಸ್ಟಾರ್‌ ಲೀನಾ ಮುಖರ್ಜಿಗೆ ಇಂಡೋನೇಷ್ಯಾ ನ್ಯಾಯಾಲಯವು (Indonesia Court) 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

    33 ವರ್ಷದ ಮಹಿಳೆಗೆ 2 ವರ್ಷ ಜೈಲು (Jail) ಶಿಕ್ಷೆ ವಿಧಿಸಿದ್ದು, ಇದರೊಂದಿಗೆ 16,245 ಡಾಲರ್‌ (13.47 ಲಕ್ಷ ರೂ.) ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದೇ ಇದ್ದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್‌ ಹೇಳಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    ಟಿಕ್‌ಟಾಕ್‌ ಸ್ಟಾರ್‌ ಲೀನಾ ಮುಖರ್ಜಿ (Lina Mukherjee) ಬಾಲಿಗೆ ಪ್ರವಾಸಕ್ಕೆ ತೆರಳಿದ್ದಳು. ಈ ವೇಳೆ ಬಿಸ್ಮಿಲ್ಲಾ ಪ್ರಾರ್ಥನೆ ಮಾಡಿದ ಬಳಿಕ ಹಂದಿ ಮಾಂಸ ತಿಂದ ವೀಡಿಯೋವನ್ನ ಟಿಕ್‌ಟಾಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದಾದ 6 ತಿಂಗಳ ಬಳಿಕ ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

    ಬಾಲಿಯಲ್ಲಿ 33 ವರ್ಷದ ಲೀನಾ ಮುಖರ್ಜಿ ಅವರು ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್‌ ಆಗುತ್ತಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ, ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿರುವ ಕಾರಣ ಲೀನಾ ಮುಖರ್ಜಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

    ಕೋರ್ಟ್‌ ಹೇಳಿದ್ದೇನು?
    ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ ಒಂದು ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್‌ ನ್ಯಾಯಾಲಯವು ತಿಳಿಸಿದೆ. ಇದನ್ನೂ ಓದಿ: RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ

    ಇಸ್ಲಾಮಿಕ್‌ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ. ಪ್ರವಾದಿ ಮೊಹಮ್ಮದ್‌ ಹೆಸರಿನಲ್ಲಿ ಜನರಿಗೆ ಉಚಿತವಾಗಿ ಮದ್ಯ ಹಂಚುತ್ತಿದ್ದ 6 ಜನರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲ ಮಾಡಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ನನಗಿಲ್ಲ: ಸಮಂತಾ ಪೋಸ್ಟ್

    ಸಾಲ ಮಾಡಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ನನಗಿಲ್ಲ: ಸಮಂತಾ ಪೋಸ್ಟ್

    ಲವು ದಿನಗಳಿಂದ ಸಮಂತಾ  ಬಗ್ಗೆ ಹಣಕಾಸಿನ ವಿಚಾರವೊಂದು ಭಾರೀ ಸದ್ದು ಮಾಡುತ್ತಿತ್ತು. ಅವರು ತಮಗಿರೋ ಮೈಯೋಸಿಟಿಸ್ (Myositis) ಖಾಯಿಲೆ ಚಿಕಿತ್ಸೆಗಾಗಿ ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಮಾಡಿದ್ದಾರೆಂದು, ಆ ಸಾಲವನ್ನು ನಟನೊಬ್ಬನಿಂದ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುಳ್ಳು ಸುದ್ದಿಗೆ ಸಮಂತ ಸ್ಪಷ್ಟನೆಯನ್ನು ನೀಡಿದ್ದಾರೆ. ಸಾಲ ಮಾಡಿ ಚಿಕಿತ್ಸೆ ಪಡೆಯುವಂತಹ ದುಸ್ಥಿತಿಯಲ್ಲಿ ನಾನಿನಲ್ಲ ಎಂದಿದ್ದಾರೆ.

    ‘ನನಗಿರೋ ಕಾಯಿಲೆಗೆ ಚಿಕಿತ್ಸೆ ಪಡೆಯಲು 25 ಕೋಟಿ ರೂಪಾಯಿ ಸಾಲ ಮಾಡಿದ್ದೇನೆ ಎನ್ನುವುದು ಶುದ್ದ ಸುಳ್ಳು. ಚಿಕಿತ್ಸೆಗೆ ಅಷ್ಟು ಹಣದ ಅವಶ್ಯಕತೆಯಿಲ್ಲ. ನಾನು ದುಡಿದ ಹಣದಲ್ಲೇ ಸ್ವಲ್ಪ ಖರ್ಚು ಮಾಡುತ್ತಿದ್ದೇನೆ. ನನಗಿರೊ ಕಾಯಿಲೆ ದೊಡ್ಡದೇನೂ ಅಲ್ಲ. ಸಾವಿರಾರು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೇಕಾಬಿಟ್ಟಿ ಪೋಸ್ಟ್ ಮಾಡುವ ಬದಲು ಆಲೋಚಿಸಿ’ ಎಂದು ಸ್ಯಾಮ್ ಬರೆದುಕೊಂಡಿದ್ದಾರೆ.

    ಏನಿದು ಸುದ್ದಿ?

    ಸಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನೆಂದು ಹೇಳಲಾಗಿತ್ತು.

    ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ ಎನ್ನುವ ಸುದ್ದಿ ಗಿರಕಿ ಹೊಡೆಯುತ್ತಿತ್ತು. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು.

     

    ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ? ಹೀಗೆ ಸಾವಿರ ಸಾವಿರ ಪ್ರಶ್ನೆಗಳು ಮೂಡಿದ್ದವು. ಎಲ್ಲದಕ್ಕೂ ಸಮಂತಾ ಉತ್ತರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಂತಾಗೆ 25 ಕೋಟಿ ರೂ. ಸಾಲ ಕೊಟ್ಟ ನಟನಾರು?: ಅಸಲಿ ಸತ್ಯವೇನು?

    ಸಮಂತಾಗೆ 25 ಕೋಟಿ ರೂ. ಸಾಲ ಕೊಟ್ಟ ನಟನಾರು?: ಅಸಲಿ ಸತ್ಯವೇನು?

    ಮಂತಾ (Samantha) ಅನಾರೋಗ್ಯದಿಂದ ದೂರದ ದೇಶಕ್ಕೆ ಚಿಕಿತ್ಸೆಗಾಗಿ (Treatment) ಹೋಗಿರುವುದು, ಕೆಲವು ತಿಂಗಳಲ್ಲಿ ಅಮೆರಿಕಾಕ್ಕೆ (America) ಹಾರುವುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ಹೊರ ಬಿದ್ದಿರುವ ಸತ್ಯ ದೇವುಡಾ ಎನ್ನುವಂತಿದೆ. ಕಾರಣ ಅದೊಬ್ಬ ಸ್ಟಾರ್ ಭರ್ತಿ 25 ಕೋಟಿ ರೂಪಾಯಿ ಕೊಟ್ಟಿದ್ದಾನಂತೆ. ಚಿಕಿತ್ಸೆಗಾಗಿ ಇಷ್ಟು ಕೋಟಿ ಬೇಕಾ? ಏನಿದರ ಹಿಂದಿನ ಹೂರಣ.

    ಸಮಂತಾ ಈಗ ಬಾಲಿ (Bali) ದ್ವೀಪದಲ್ಲಿದ್ದಾರೆ. ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನೈನ ಸದ್ಗುರು ಬಳಿ ಯೋಗ-ಧ್ಯಾನದಲ್ಲಿ ತೊಡಗಿದ್ದ ಸ್ಯಾಮ್ ಈಗ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿಂದ ನೇರವಾಗಿ ಅಮೆರಿಕಾಕ್ಕೆ ಹಾರಲಿದ್ದಾರೆ. ಅಲ್ಲಿ ಎಷ್ಟು ತಿಂಗಳು ಬೇಕು? ಅದ್ಯಾವ ರೀತಿಯ ಟ್ರೀಟ್‌ಮೆಂಟ್? ಒಂದೂ ಗೊತ್ತಿಲ್ಲ. ಅಷ್ಟರಲ್ಲಿ ಬಡಾ ಖಬರ್ ಸಮಂತಾ ಬ್ಯಾಂಕ್ ಅಕೌಂಟ್‌ನಿಂದ ಹೊರ ಬಿದ್ದಿದೆ. ಬರೋಬ್ಬರಿ 25 ಕೋಟಿ ರೂಪಾಯಿ ಸಾಲ ಪಡೆದಿದ್ದಾರಂತೆ ಕ್ವೀನ್ ಬಿ. ಅದನ್ನು ಸ್ಟಾರ್ ನಟ ಕೊಟ್ಟಿದ್ದಾನಂತೆ. ಇದನ್ನೂ ಓದಿ:‘ರಾ’ ಏಜೆಂಟ್ ಆಗಿ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ‘ಪಾಕ್ ಪ್ರೇಮಿ’ ಸೀಮಾ

    ಖುಷಿ ಹಾಗೂ ಸಿಟಾಡೆಲ್ ಸಿನಿಮಾ ಮುಗಿಸಿ ಒಂದು ವರ್ಷ ಬಣ್ಣದ ಲೋಕದಿಂದ ದೂರ ಎಂದು ಘೋಷಿಸಿದ್ದರು. ಮೈಯೋಸಿಟಿಸ್ ಖಾಯಿಲೆ ಚಿಕಿತ್ಸೆಯೇ ಮೂಲ ಕಾರಣ. ಈ ನಡುವೆ ಒಪ್ಪಿಕೊಂಡಿದ್ದ ಕೆಲವು ಕಮಿಟ್‌ಮೆಂಟ್ ಮುಗಿಸಲು ಆಗಲಿಲ್ಲ. ಹೀಗಾಗಿ ನಂಬಿಕೆ ದ್ರೋಹ ಮಾಡಬಾರದೆಂದು ನಿರ್ಮಾಪಕರಿಂದ ಪಡೆದ ಅಡ್ವಾನ್ಸ್ ಮರಳಿಸಿದ್ದರು ಸಮಂತಾ. ನಿಜಕ್ಕೂ ಎಲ್ಲರೂ ಶಹಬ್ಬಾಶ್ ಎಂದಿದ್ದರು. ಕೈಯಲ್ಲಿದ್ದ ಹಣ ಕೊಟ್ಟು ಈಗ ಸ್ಟಾರ್ ನಟನಿಂದ ಕೋಟಿ ಕೋಟಿ ಸಾಲ ಪಡೆದುಕೊಂಡಿದ್ದಾರೆ. ಇದು ಸತ್ಯವಾ ಸುಳ್ಳಾ?

    ಸಮಂತಾಗೆ ಇಷ್ಟು ಕೋಟಿ ಕೊಟ್ಟಿದ್ಯಾರು? ಅಷ್ಟೊಂದು ಹಣ ಪಡೆದಿದ್ದು ನಿಜವಾದರೆ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ? ಇವೆಲ್ಲ ಬರೀ ಪ್ರಶ್ನೆಗಳು. ಉತ್ತರ ಹೇಳಬೇಕಾದ ಸ್ಯಾಮ್ ದೂರದ ಬಾಲಿಯಲ್ಲಿದ್ದಾರೆ. ಹೈದ್ರಾಬಾದ್‌ನಲ್ಲಿ ಸದ್ಯಕ್ಕೆ ಸಾಲ ಪಡೆದ ಹಣದ್ದೇ ಬೆಂಕಿ ಚರ್ಚೆ. ಹಾಗಿದ್ದರೆ ಸಮಂತಾ ಇಷ್ಟು ವರ್ಷ ಚಿತ್ರರಂಗದಲ್ಲಿ ದುಡಿದ ಹಣ ಏನಾಯಿತು? ನಾಗ್‌ಚೈತನ್ಯ ಈಕೆ ಹಣ ನುಂಗಿ ನೀರು ಕುಡಿದರೆ? ಏನಾಗಲಿದೆ ಸ್ಯಾಮ್ ಭವಿಷ್ಯ ? ಸಾವಿರದ ಪ್ರಶ್ನೆಗಳು ಸಾಲು ಸಾಲು. ಈ ಪ್ರಮಾಣದಲ್ಲಿ ಹಣವನ್ನು ಸಾಲವಾಗಿ ಪಡೆದಿರುವುದು ಅನುಮಾನ ಎನ್ನುತ್ತಾರೆ ಸಮಂತಾ ಹತ್ತಿರದವರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಮತ್ತೆ ಪ್ರೀತಿಯಲ್ಲಿ ಬಿದ್ರಾ ಸಮಂತಾ- ಏನಿದು ಹೊಸ ಕಹಾನಿ?

    ಸೌತ್ ಬ್ಯೂಟಿ ಸಮಂತಾ (Samantha) ಸದ್ಯ ಸಿಂಗಲ್ ಆಗಿ ತಮ್ಮ ಲೈಫ್‌ನ ತಮ್ಮದೇ ಶೈಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಟನೆಯಿಂದ ಬ್ರೇಕ್ ಪಡೆದು ಬಾಲಿಯಲ್ಲಿ ಕಾಲ ಕಾಳೆಯುತ್ತಿದ್ದಾರೆ. ಇದೀಗ ಅವರ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡುತ್ತಿದೆ. ನಾಗಚೈತನ್ಯ ಜೊತೆಗಿನ ಡಿವೋರ್ಸ್ ಮತ್ತೆ ಪ್ರೀತಿಯಲ್ಲಿ ಬಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿದೆ. ಅಷ್ಟಕ್ಕೂ ಏನಾಯ್ತು? ಇಲ್ಲಿದೆ ಡಿಟೈಲ್ಸ್.

    ನಟಿ ಸಮಂತಾ ಮೈಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಆರೋಗ್ಯ ಚೇತರಿಕೆಗಾಗಿಯೇ ಒಂದು ವರ್ಷ ನಟಿ ಬ್ರೇಕ್ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಮೇಲೆ ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾದರು. ‘ಪುಷ್ಪ’ (Pushpa) ಸಿನಿಮಾ ಸಾಂಗ್, ಯಶೋದ ಸಿನಿಮಾದ ಸಕ್ಸಸ್ ಮೂಲಕ ಸದ್ದು ಮಾಡಿದ್ರು. ಇದನ್ನೂ ಓದಿ:ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

    ಈಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಡಿವೋರ್ಸ್ ನಂತರ ಈಗ ಮತ್ತೆ ಪ್ರೀತಿಯಲ್ಲಿ ಸಮಂತಾ ಬಿದ್ದಿದ್ದಾರಾ ಎಂಬ ಗುಮಾನಿ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಆಗಿರೋದು ಸಮಂತಾರ ನಯಾ ಪೋಸ್ಟ್. ಸಮಂತಾ ಪ್ರೀತಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮನ್ನು ಹೆಚ್ಚು ದ್ವೇಷಿಸುವವರನ್ನು ನೀವು ನೋಡುತ್ತೀರಿ, ದ್ವೇಷದ ಮಾತುಗಳನ್ನು ಕೇಳುತ್ತೀರಿ, ಆದರೆ ಈ ಜಗತ್ತಿನಲ್ಲಿ ನಾವು ಕಲ್ಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪ್ರೀತಿ ಇದೆ ಎಂದು ಸಮಂತಾ ನೀಡಿದ ಇನಸ್ಟಾ ಸ್ಟೋರಿ ವೈರಲ್ ಆಗುತ್ತಿದೆ.

    ಆದರೆ ಇದು ಇನ್ನೊಬ್ಬ ವ್ಯಕ್ತಿಗೆ ತಾಗುವಂತೆ ಹಾಕಿದ್ದಾರಾ? ಅಥವಾ ನಿಸರ್ಗವನ್ನು ಆಸ್ವಾದಿಸುತ್ತಾ ತನ್ನ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೋ ಎಂಬುದು ಸ್ಪಷ್ಟವಾಗಿಲ್ಲ. ಅದೇನೇ ಇರಲಿ, ಪ್ರೀತಿಯ ಬಗ್ಗೆ ಸಮಂತಾ ತುಂಬಾ ಪಾಸಿಟಿವ್ ಎಂದು ಈ ಪೋಸ್ಟ್‌ನಿಂದ ತಿಳಿದು ಬಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯಕ್ಕಾಗಿ ಐಸ್‌ಬಾತ್ ಮೊರೆ ಹೋದ ಸಮಂತಾ

    ಆರೋಗ್ಯಕ್ಕಾಗಿ ಐಸ್‌ಬಾತ್ ಮೊರೆ ಹೋದ ಸಮಂತಾ

    ಸೌತ್ ನಟಿ ಸಮಂತಾ (Samantha) ಅವರು ತಮ್ಮ ಆರೋಗ್ಯದ ಚೇತರಿಕೆಗಾಗಿ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದಾರೆ. ಸದ್ಯ ಬಾಲಿಯಲ್ಲಿ (Baali) ಬೀಡು ಬಿಟ್ಟಿರೋ ಸಮಂತಾ, ಎಂಜಾಯ್ ಮಾಡ್ತಾರೆ ಎಂದೆಲ್ಲಾ ಅಭಿಮಾನಿಗಳು ಊಹಿಸಿದ್ದರು. ಆದರೆ ಅಲ್ಲೂ ಕೂಡ ಜಿಮ್ ವರ್ಕೌಟ್ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಸದ್ಯ ಐಸ್‌ಬಾತ್‌ನಲ್ಲಿ ಕುಳಿತಿರುವ ವಿಡಿಯೋ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಕೀರ್ತಿ ಪಾತ್ರಕ್ಕೆ ಗುಡ್ ಬೈ ಹೇಳಿದ ತನ್ವಿ ರಾವ್

    ಸಿನಿಮಾಗೆ ಬ್ರೇಕ್ ನೀಡಿ, ತಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಿರೋ ಸ್ಯಾಮ್ ಈಗ ಬಾಲಿಯಲ್ಲಿದ್ದಾರೆ. ಮಯೋಸಿಟೀಸ್ ಕಾಯಿಲೆಯಿಂದ ಬಳಲುತ್ತಿರೋ ನಟಿ, ಉತ್ತಮ ಆರೋಗ್ಯಕ್ಕಾಗಿ ಏನು ಬೇಕೋ ಅದನ್ನ ಮಾಡ್ತಿದ್ದಾರೆ. ಇದೀಗ ಸಮಂತಾ ತಾವು 4 ಡಿಗ್ರಿ ಸೆಲ್ಶಿಯಸ್‌ನ ಐಸ್‌ಬಾತ್ ತೆಗೆದುಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್‌ಗಳಿಂದ ತುಂಬಿದ ಟಬ್‌ನಲ್ಲಿ ಬರೋಬ್ಬರಿ 6 ನಿಮಿಷ ಕೂತಿದ್ದಾರೆ ಹಾಗಂತ ಖುದ್ದು ಸಮಂತಾನೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಐಸ್‌ಬಾತ್ ಮಾಡುವ ಪದ್ಧತಿ ಇತ್ತೀಚೆಗೆ ತುಸು ಹೆಚ್ಚಾಗಿದೆ. ಹೀಗೆ ವಿಪರೀತ ಕೊರೆಯುವ ನೀರಿನಲ್ಲಿ ಸುಮ್ಮನೆ ಕೂರುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ವ್ಯಾಯಾಮದಿಂದ ದಣಿದ ಮಾಂಸಖಂಡಗಳು ತ್ವರಿತವಾಗಿ ವಿಶ್ರಾಂತ ಸ್ಥಿತಿಗೆ ಹೋಗುತ್ತವೆ ಮತ್ತು ಮತ್ತೊಮ್ಮೆ ವ್ಯಾಯಾಮ ಮಾಡಲು ದೇಹ ಅಣಿಯಾಗುತ್ತದೆ. ಅಲ್ಲದೆ ಇದರಿಂದ ರಕ್ತಪರಿಚಲನೆ ಬೇಗ ಸುಲಲಿತವಾಗಿ ವ್ಯಾಯಾಮದಿಂದ ಎದುರಾಗುವ ಹೃದಯ ಸ್ಥಂಭನ ಸಾಧ್ಯತೆಗಳು ಬಹುಮಟ್ಟಿಗೆ ನಿವಾರಣೆಯಾಗುತ್ತದೆ.

    ದೇಹದ ಮೇಲಿನ ಹಿಡಿತ ಇದರಿಂದ ಹೆಚ್ಚಾಗುತ್ತದೆ. ಕೊರೆಯುವ ನೀರಿನಲ್ಲಿ ಕೂತಾಗ ಆಗುವ ನಡುಕದ ಅನುಭವ, ಉಸಿರಾಟದ ಏರಿಳಿತ, ಹೃದಯ ಬಡಿತಗಳು ಹೆಚ್ಚುತ್ತವೆ. ಹಾಗಾಗಿ ನಿಯಮಿತವಾಗಿ ಐಸ್‌ಬಾತ್ ತೆಗೆದುಕೊಳ್ಳುವುದರಿಂದ ಇವುಗಳನ್ನು ನಿಯಂತ್ರಿಸುವ ಕ್ಷಮತೆ ಹೆಚ್ಚುತ್ತದೆ ಆ ಮೂಲಕ ದೇಹದ ಮೇಲಿನ ವಿಶೇಷವಾಗಿ ಉಸಿರಾಟದ ಮೇಲಿನ ನಿಯಂತ್ರಣ ಹೆಚ್ಚುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ನಟಿ ಐಸ್‌ಬಾತ್ ಮೊರೆ ಹೋಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಟಾಲಿವುಡ್‌ (Tollywood) ನಟಿ ಸಮಂತಾ (Samantha) ಫುಲ್ ಜಾಲಿ ಮೂಡಿನಲ್ಲಿದ್ದಾರೆ. ದೂರದ ಬಾಲಿ ದೇಶದಲ್ಲಿ ಗೆಳೆತಿಯರ ಜೊತೆ ಬೀಡು ಬಿಟ್ಟಿದ್ದಾರೆ. ಹಾಗಂತ ಸಿಕ್ಕಾಪಟ್ಟೆ ಮಜಾ ಮಾಡುತ್ತಿದ್ದಾರೆ. ಕ್ಲಬ್ಬು-ಪಬ್ಬು ಹೀಗೆ ಎಲ್ಲದಕ್ಕೂ ಸಮಯ ಮೀಸಲಿಟ್ಟಿದ್ದಾರೆ ಎಂದು ತಿಳಿದಿದ್ದಾರೆ. ಆದರೆ ಸಮಂತಾ ಅಸಲಿ ಪಾರ್ಟಿ ಹೆಂಗಿರುತ್ತೆ ಗೊತ್ತಾ? ಸಮಂತಾ ಬಿಚ್ಚಿಟ್ಟ ಸತ್ಯ ಇಲ್ಲಿದೆ ನೋಡಿ.

    ಮೈಯೋಸಿಟಿಸ್ (Myositis) ಖಾಯಿಲೆಯಿಂದ ಬಳಲುತ್ತಿರುವ ಸಮಂತಾ ಒಂದು ವರ್ಷ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ. ಯೋಗ-ಧ್ಯಾನ ಮಾಡಿದ್ದು ಗೊತ್ತಿದೆ. ಈಗ ಬಾಲಿಗೆ (Baali) ಹೋಗಿದ್ದಾರೆ. ಜೊತೆಗೆ ಜಿಮ್ ಟ್ರೇನರ್ ಅನುಷ ಇದ್ದಾರೆ. ಮೊನ್ನೆ ಕೆಲವು ಫೋಟೋ ಹಂಚಿಕೊಂಡಿದ್ದರು. ಅದನ್ನು ನೋಡಿ ಎಲ್ಲರೂ ತಿಳಿದಿದ್ದೇನು ಗೊತ್ತೆ? ಸ್ಯಾಮ್ ಫುಲ್‌ ಜೂಮ್‌ನಲ್ಲಿರುತ್ತಾರೆ, ಅಲ್ಲಿ ಎಂಜಾಯ್‌ ಮಾಡುತ್ತಾರೆ. ಆದರೆ ಸಮಂತಾ ಪಾರ್ಟಿ ಹಂಗಿರಲ್ಲ. ಹಿಂಗೆ ಇರುತ್ತೆ ಅಂತಾ ಖುದ್ದು ಅವರೇ ವಿಡಿಯೋ ಮಾಡಿ ಹೇಳಿದ್ದಾರೆ. ಇದನ್ನೂ ಓದಿ:ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್‌

    ಒಂದೊಂದು ದಿನವೂ ಸ್ಟ್ರಾಂಗ್ ಆಗುತ್ತಾ ಹೋಗಬೇಕು.ಅದೇ ನಿಜವಾದ ಪಾರ್ಟಿ ಎಂದಿದ್ದಾರೆ ಸ್ಯಾಮ್. ಅಷ್ಟೊಂದು ಮೈ ನೋಯುವ ಖಾಯಿಲೆ ಇದ್ದರೂ ಇವರು ಮಾಡುವ ವರ್ಕ್ಔಟ್ ನೋಡಿ ನಿಜಕ್ಕೂ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಅದರ ಅರ್ಥ ಇಷ್ಟೇ. ಇದ್ದಷ್ಟು ದಿನ. ಇದ್ದಷ್ಟು ಹೊತ್ತು ಗಟ್ಟಿಮುಟ್ಟಾಗಿರಬೇಕು. ನೋವು ಮರೆತು ಜೀವಿಸಬೇಕು. ಈ ಧ್ಯಾನದಲ್ಲೇ ಇದನ್ನೆಲ್ಲ ಮಾಡುತ್ತಿದ್ದಾರೆ. ಹರಿಸಿದ ಬೆವರಿಗೆ ದೇವರು ಫಲ ಕೊಡದೇ ಇರುತ್ತಾನಾ? ಮುಂದೊಮ್ಮೆ ಸಮಂತಾ ರೋಲ್ ಮಾಡೆಲ್ ಆಗೋದು ಖಚಿತ.

    ಸಮಂತಾ ನಟನೆಯ ಖುಷಿ (Kushi), ಸಿಟಾಡೆಲ್ (Citadel) ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರೋ ಸಮಂತಾ ಬಾಲಿಯಲ್ಲಿ ದಿನ ಕಳೆಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]