Tag: ಬಾಲಾ

  • ನಿರ್ದೇಶಕ ಬಾಲಾ ನನಗೆ ಹೊಡೆದರು: ಖ್ಯಾತ ನಟಿಯ ಮಮಿತಾ ಆರೋಪ

    ನಿರ್ದೇಶಕ ಬಾಲಾ ನನಗೆ ಹೊಡೆದರು: ಖ್ಯಾತ ನಟಿಯ ಮಮಿತಾ ಆರೋಪ

    ಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ (Bala) ಅವರು ತಮ್ಮ ಸಿನಿಮಾದ ನಟಿಯೊಬ್ಬರ ಮೇಲೆ ಕೈ ಮಾಡಿದ್ದಾರಂತೆ. ಈ ವಿಷಯವನ್ನು ಹೊಡೆತಕ್ಕೆ ಒಳಗಾದ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ತಾವು ಆ ಸಿನಿಮಾದಿಂದ ಹೊರಬರಬೇಕಾಯಿತು ಎಂದಿದ್ದಾರೆ.

    ಪಿತಾಮಗನ್, ಸೇತು, ನಾನ್ ಕಡವುಲ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಬಾಲಾ. ತಮ್ಮ ಸಿನಿಮಾದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯೂ ಆದವರು. ದೇಸಿ ಗುಣದ ಸಿನಿಮಾಗಳ ಜನಕ ಎಂದೆಲ್ಲ ಕರೆಯಿಸಿಕೊಂಡವರು. ಅಂಥ ನಿರ್ದೇಶಕರು ತಮ್ಮದೇ ಸಿನಿಮಾದ ನಟಿಯನ್ನು ಹೊಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಮಲಯಾಳಂ ಮೂಲದ ನಟಿ ಮಮತಾ ಬಿಜು (Mamitha Biju), ವಾನಂಗನ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ಡಾನ್ಸ್ ಮಾಡಬೇಕಿತ್ತಂತೆ. ನುರಿತ ಕಲಾವಿದರ ಜೊತೆ ಸಡನ್ನಾಗಿ ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ಹೊಡದೇ ಬಿಟ್ಟರು ಎಂದಿದ್ದಾರೆ ಮಮಿತಾ.

    ಸೆಟ್ ನಲ್ಲಿ ನಾನು ಕೋಪಿಷ್ಠ. ಬೈದರೆ ಮನಸ್ಸಿಗೆ ತಗೋಬೇಡಿ ಎಂದು ಬಾಲಾ ಅವರು ಮೊದಲೇ ಹೇಳಿದ್ದರೂ, ಅವರು ಬೈದಾಗೊಮ್ಮೆ ಕಿರಿಕಿರಿ ಅನಿಸೋದು. ಆದರೆ, ಅವರು ನನಗೆ ಹೊಡೆದ ಮೇಲೆ ಕೆಲಸ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ ಮಮಿತಾ.

  • ಚಿತ್ರರಂಗದಲ್ಲಿ ಮುಂದುವರೆದ ವಿಚ್ಚೇದನ ಸರದಿ : ದಾಂಪತ್ಯ ಜೀವನಕ್ಕೆ ಸ್ಟಾರ್ ನಿರ್ದೇಶಕ ಬಾಲ ವಿದಾಯ

    ಚಿತ್ರರಂಗದಲ್ಲಿ ಮುಂದುವರೆದ ವಿಚ್ಚೇದನ ಸರದಿ : ದಾಂಪತ್ಯ ಜೀವನಕ್ಕೆ ಸ್ಟಾರ್ ನಿರ್ದೇಶಕ ಬಾಲ ವಿದಾಯ

    ಮಿಳಿನ ಸೂಪರ್ ಸ್ಟಾರ್ ನಿರ್ದೇಶಕ ಬಾಲ ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ತಮಿಳಿನ ಖ್ಯಾತ ನಟ, ರಜನಿಕಾಂತ್ ಅಳಿಯ ಧನುಷ್ ವಿಚ್ಛೇದನದ ಬೆನ್ನೆಲ್ಲೆ ಬಾಲ ನಿರ್ಧಾರ ಸಿನಿಮಾ ರಂಗದವರ ಬಗ್ಗೆ ಅನುಮಾನ ಪಡುವಂತೆ ಮಾಡಿದೆ. ಇದನ್ನೂ ಓದಿ : ರಾಜಮೌಳಿ ಹೊಸ ಸಿನಿಮಾದಲ್ಲಿ ಕಿಚ್ಚ ಸುದೀಪ್ : ಏನಿದು ಹೊಸ ಸುದ್ದಿ?

    ನಿರ್ದೇಶಕ ಬಾಲ ಮತ್ತು ಮುತ್ತು ಮಲಾರ್ 2004 ಜುಲೈ 7ರಂದು ಮಧುರೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಸುಖಿ ದಾಂಪತ್ಯಕ್ಕೆ ಸಾಕ್ಷಿಯಾಗಿ ಮಗಳೊಬ್ಬಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದಂಪತಿಯ ನಡುವೆ ಹೊಂದಾಣಿಕೆ ಆಗದ ಕಾರಣಕ್ಕಾಗಿ ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈಗಾಗಲೇ ನಾಲ್ಕು ವರ್ಷಗಳಿಂದ ಅವರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರಿಂದ ಬೇಗ ವಿಚ್ಛೇದನ ಸಿಕ್ಕಿದೆ. ಮಾರ್ಚ್ 5 ರಿಂದ ಕಾನೂನಾತ್ಮಕವಾಗಿ ಅವರು ಬೇರೆಯಾಗಿದ್ದಾರೆ. ಇದನ್ನೂ ಓದಿ : ಮಾ.11ರ 12:46 ವೇಳೆ ಸೇವ್ ಮಾಡ್ಕೊಳ್ಳಿ: ಕನ್ ಫ್ಯೂಸ್ ಮಾಡಿದ ಉಪೇಂದ್ರ

    ತಮಿಳಿನ ಸೂಪರ್ ಸ್ಟಾರ್ ಗಳಿಗೆ ನಿರ್ದೇಶನ ಮಾಡಿದ ಕೀರ್ತಿ ಬಾಲ ಅವರದ್ದು. ಸದ್ಯ ಸೂರ್ಯ ಅವರಿಗಾಗಿ ಬಾಲ ಹೊಸ ಸಿನಿಮಾವೊಂದನ್ನು ಕೈಗೆತ್ತಿಕೊಂಡಿದ್ದಾರೆ.