Tag: ಬಾಲರಾಮನ ಪ್ರಾಣಪ್ರತಿಷ್ಠಾಪನೆ

  • ಯಾರು ಏನ್ ಬೇಕಿದ್ರೂ ಹೇಳಲಿ, ನಾನು ಅಯೋಧ್ಯೆಗೆ ಹೋಗ್ತೀನಿ: ಹರ್ಭಜನ್ ಸಿಂಗ್

    ಯಾರು ಏನ್ ಬೇಕಿದ್ರೂ ಹೇಳಲಿ, ನಾನು ಅಯೋಧ್ಯೆಗೆ ಹೋಗ್ತೀನಿ: ಹರ್ಭಜನ್ ಸಿಂಗ್

    – ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ದೇವರೇ ಕಾರಣ

    ನವದೆಹಲಿ: ಯಾರಿಗೆ ಅಯೋಧ್ಯೆಯ ರಾಮಮಂದಿರದ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನಾ (Pran Pratishtha) ಸಮಾರಂಭಕ್ಕೆ ಹೋಗಲು ಇಷ್ಟ ಇಲ್ಲವೋ ಅವರು ಹೋಗುವುದು ಬೇಡ. ನಾನು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಭಜನ್ ಸಿಂಗ್ (Harbhajan Singh) ಹೇಳಿದ್ದಾರೆ.

    ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ದೇವರೇ ಕಾರಣ. ನನಗೆ ದೇವರ ಮೇಲೆ ನಂಬಿಕೆ ಇದೆ. ಯಾರಿಗೆ ನಂಬಿಕೆ ಇಲ್ಲವೋ ಅವರು ಹೋಗುವುದು ಬೇಡ. ಕಾಂಗ್ರೆಸ್ ಹೋಗದಿರಲು ನಿರ್ಧರಿಸಿದ್ದು, ಅದು ಅವರ ತೀರ್ಮಾನ. ಒಟ್ಟಿನಲ್ಲಿ ಯಾರು ಏನು ಬೇಕಾದ್ರೂ ಹೇಳಿಕೊಳ್ಳಲಿ ನಾನು ಅಯೋಧ್ಯೆಗೆ ಹೋಗುವುದು ಪಕ್ಕಾ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ

    ಮಹಾಮಂದಿರದದಲ್ಲಿ ರಾಮನ ಪ್ರಾಣ-ಪ್ರತಿಷ್ಠಾ ಸಮಾರಂಭವೂ ಒಂದು ಐತಿಹಾಸಿಕ ದಿನವಾಗಿದೆ. ಈ ಬಗ್ಗೆ ಕಾಂಗ್ರೆಸ್, ಬಿಜೆಪಿಯ ವಿರುದ್ಧ ರಾಜಕೀಯ ಉದ್ದೇಶದ ಆರೋಪ ಮಾಡಿದೆ. ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವುದು ಖುಷಿಯ ವಿಚಾರ ಮತ್ತು ಸರಿಯಾದ ನಡೆಯಾಗಿದೆ. ನಾನು ಈ ಸಮಾರಂಭದಲ್ಲಿ ಖಂಡಿತ ಭಾಗಿಯಾಗುತ್ತೇನೆ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದಿದ್ದಾರೆ.

    ಶ್ರೀರಾಮ ಎಲ್ಲರಿಗೂ ಸೇರಿದವನು. ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವಾಗಿರುವುದು ಬಹಳ ಖುಷಿಯ ವಿಚಾರ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನ ಕೃಪೆಗೆ ಪಾತ್ರರಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಂದಿರದ ಕೆಲಸವಾಗುತ್ತಿದೆ ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.

    ನನಗೆ ಧರ್ಮ ಮತ್ತು ದೇವರಲ್ಲಿ ಕಟ್ಟುನಿಟ್ಟಾದ ನಂಬಿಕೆಯುಳ್ಳವನು, ನಾನು ಪ್ರತಿ ಮಂದಿರ, ಮಸೀದಿ ಮತ್ತು ಗುರುದ್ವಾರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಮ್ಮ ಜೀವಿತಾವಧಿಯಲ್ಲಿ ಆಗುತ್ತಿರುವುದು ಸೌಭಾಗ್ಯವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಕ್ರಿಕೆಟಿಗ ಆರ್.ಅಶ್ವಿನ್‍ಗೆ ಆಹ್ವಾನ

  • ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ- ಹುಬ್ಬಳ್ಳಿಯ ಕರಸೇವಕರ ಸಂಭ್ರಮ

    ಹುಬ್ಬಳ್ಳಿ: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (RamMandir) ಪ್ರಾಣಪ್ರತಿಷ್ಠೆ (Prana Pratishtha) ಸಮೀಪಿಸುತ್ತಿದ್ದಂತೆ ದೇಶದೆಲ್ಲೆಡೆ ಕೋಟ್ಯಂತರ ಹಿಂದೂಗಳ ಮನೆ-ಮನದಲ್ಲಿ ಸಂಭ್ರಮ ಮನೆಮಾಡಿದೆ. ಈ 500 ವರ್ಷಗಳ ಕನಸು ನನಸಾಗುವ ಹೊತ್ತಿನಲ್ಲಿ, ಈ ಹಿಂದೆ ಮಂದಿರಕ್ಕಾಗಿ ಹೋರಾಟ ನಡೆಸಿದ್ದ ಹುಬ್ಬಳ್ಳಿಯ ಕರಸೇವಕರು (Karasevak) ಸಂಭ್ರಮ ಆಚರಿಸಿದ್ದಾರೆ.

    ಇಡೀ ದೇಶವೇ ಶ್ರೀರಾಮಮಯವಾಗಿದೆ. ನೂರಾರು ಕೋಟಿ ಹಿಂದೂಗಳ ಶತಮಾನಗಳ ಕನಸು ಸಾಕಾರಗೊಳುವ ಸಮಯ ಸಮೀಪಿಸುತ್ತಿದೆ. ಈ ಮಂದಿರ ಲಕ್ಷಾಂತರ ಮಂದಿ ಕರಸೇವಕರ ತ್ಯಾಗ ಹಾಗೂ ಹೋರಾಟದ ಫಲವಾಗಿದೆ. ಅದರಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಲು ಅಂದು ತೆರಳಿದ್ದ ಹುಬ್ಬಳ್ಳಿಯ ಕರಸೇವಕರ ಪಾತ್ರವೂ ಪ್ರಮುಖವಾಗಿದೆ. ಇದನ್ನೂ ಓದಿ: ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

    ಹುಬ್ಬಳ್ಳಿ ಗುರುಸಿದ್ದಪ್ಪ ಎಂಬ ಕರಸೇವಕರು ತಮ್ಮ 27ನೇ ವಯಸ್ಸಿನಲ್ಲಿ ಅಯೋಧ್ಯೆಗೆ ತೆರಳಿ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇದೀಗ ಕರಸೇವೆ ಮಾಡಿ ತಾವು ಜೀವಂತವಾಗಿರುವಾಗಲೇ ಮಂದಿರ ನಿರ್ಮಾಣವಾಗುವುದನ್ನು ಕಣ್ತುಂಬಿಕೊಳ್ಳಲು ತಮ್ಮ ಇಳಿವಯಸ್ಸಿನಲ್ಲಿ ಕಾದು ಕುಳಿತಿದ್ದಾರೆ.

    ರೇಣುಕಾ ನಗರದ ಪ್ರಸನ್ನವೆಂಕಟ ಕಟ್ಟಿಯವರು ಸಹ ಒಬ್ಬರು. ಅವರು ಯುವಕರಾಗಿದ್ದಾಗ ಬಾಗಲಕೋಟೆಯಿಂದ ಅಯೋಧ್ಯೆಗೆ ತೆರಳಿದ್ದರು. ಅಲ್ಲದೇ ಅಂದು ಹಮ್ಮಿಕೊಂಡಿದ್ದ ರಾಮಪಾದುಕೆ ಅಭಿಯಾನದ ಪ್ರಮುಖ ರೂವಾರಿ ಸಹ ಆಗಿದ್ದರು. ಕಳೆದ ಮೂವತ್ತು ವರ್ಷಗಳ ಹಿಂದೆ ಅಯೋಧ್ಯೆಯಿಂದ ಪೂಜೆ ಮಾಡಿಸಿ ತಂದ ರಾಮನ ಪಾದುಕೆಗೆ ಇಂದಿಗೂ ಅವರು ನಿತ್ಯ ಪೂಜೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

  • ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

    ಬಾಲರಾಮನಿಗೆ ಅರ್ಪಿಸಲು ಹಲ್ವಾ ತಯಾರಿಸುವ ಕಡಾಯಿ ರೆಡಿ- ಏನಿದರ ವಿಶೇಷ?

    ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ರಾಮ್ ಹಲ್ವಾ (Ram Halwa) ತಯಾರಿಸಲು ನಾಗ್ಪುರದ ಹೆಸರಾಂತ ಬಾಣಸಿಗರೊಬ್ಬರು ಬೃಹತ್ ಗಾತ್ರದ 1,800 ಕೆಜಿಯ ಕಡಾಯಿಯೊಂದನ್ನು ಸಿದ್ಧಪಡಿಸಿದ್ದಾರೆ. ಈ ಕಡಾಯಿಯನ್ನು ಹನುಮಾನ್ ಕಡಾಯಿ (Hanuman Kadhai) ಎಂದು ಅವರು ಕರೆದಿದ್ದಾರೆ.

    ಈ ಕಡಾಯಿ 6.5 ಅಡಿ ಎತ್ತರವಿದ್ದು, 15 ಅಡಿ ವ್ಯಾಸವಿದೆ. ಸುಮಾರು 15,000 ಲೀಟರ್ ಸಾಮಥ್ರ್ಯ ಹೊಂದಿರುವ ಕಡಾಯಿಯಲ್ಲಿ ಸುಮಾರು 7 ಟನ್ ರಾಮ್ ಹಲ್ವಾ ತಯಾರಿಸಲಾಗುತ್ತದೆ. ಇದಕ್ಕಾಗಿ 900 ಕೆಜಿ ರವೆ, 1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ, 2000 ಲೀಟರ್ ಹಾಲು, 2500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪುಡಿಯನ್ನು ಬಳಸಿಕೊಳ್ಳಲಾಗುತ್ತದೆ. ಬಾಲ ರಾಮನಿಗೆ ಹಲ್ವಾವನ್ನು ಅರ್ಪಿಸಿದ ನಂತರ, 1 ಲಕ್ಷದಿಂದ 1.5 ಲಕ್ಷ ಭಕ್ತರಿಗೆ ಪ್ರಸಾದವಾಗಿ ನೀಡಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ರಾಮನ ಪ್ರಾಣಪ್ರತಿಷ್ಠೆಗೆ ದಿನಗಣನೆ- ಸೀತಾ ಮಾತೆಯ ರಕ್ಷಣೆಗೆ ಜಟಾಯು ಹೋರಾಡಿದ್ದ ಸ್ಥಳಕ್ಕೆ ಮೋದಿ ಭೇಟಿ

    ಈ ಕಡಾಯಿಯನ್ನು ಅಯೋಧ್ಯೆಗೆ ಸಾಗಿಸಿ ನಾಗ್ಪುರದ ಗುರುತಾಗಿ ಅಲ್ಲಿಯೇ ಇರಿಸಲಾಗುತ್ತದೆ. 500 ವರ್ಷಗಳ ಭಗವಾನ್ ರಾಮ ತನ್ನ ಮನೆಗೆ ಮರಳುತ್ತಿರುವುದನ್ನು ಸಂಭ್ರಮಿಸಲು ಅಯೋಧ್ಯೆಯಲ್ಲಿ ಈ ಹಲ್ವಾ ತಯಾರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಅಧಿಕಾರಿಗಳು ಜ.26ರ ಬಳಿಕ ತಯಾರಿಸುವಂತೆ ಸೂಚಿಸಿದ್ದಾರೆ. ಈಗ ಜನವರಿ 29-31ರ ಸುಮಾರಿಗೆ ರಾಮ್ ಹಲ್ವಾ ಮಾಡಲಾಗುತ್ತದೆ ಎಂದು ಬಾಣಸಿಗ ವಿಷ್ಣು ಮನೋಹರ್ ಹೇಳಿದ್ದಾರೆ.

    ಜನವರಿ 22 ರಂದು ಬಾಲರಾಮನ ಪ್ರಾಣಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆದಿವೆ. ಈಗಾಗಲೇ ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾಗಿದೆ. ಈ ಮೂಲಕ ಕೋಟ್ಯಂತರ ರಾಮ ಭಕ್ತರ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ

  • ಗಮನ ಸೆಳೆಯುತ್ತಿದೆ ಹರಿಹರದಲ್ಲಿರೋ ರಾಮಮಂದಿರ

    ಗಮನ ಸೆಳೆಯುತ್ತಿದೆ ಹರಿಹರದಲ್ಲಿರೋ ರಾಮಮಂದಿರ

    ದಾವಣಗೆರೆ: ಹಲವು ದಶಕಗಳ ಹೋರಾಟ ಸಾವಿರಾರು ಜನರ ಬಲಿದಾನದ ನಂತರ ಈಗ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ರಾಮನ ಮೂರ್ತಿ ಕೆತ್ತನೆ ಮಾಡಿದ್ದು ಕನ್ನಡಿಗ, ಮೂರ್ತಿಗೆ ಕಲ್ಲು ಬಳಸಿದ್ದು ಕರ್ನಾಟಕದ್ದು. ಜೊತೆಗೆ ಮಂದಿರಕ್ಕೆ 60% ಬಳಸಿದ ಕೆಂಪು ಕಲ್ಲು ಸಹ ಕನ್ನಡದ್ದು. ಕನ್ನಡದ ನೆಲಕ್ಕೂ ಶ್ರೀರಾಮನಿಗೂ ಎಲ್ಲಿಲ್ಲದ ನಂಟು ಕಾಕತಾಳೀಯ ಎಂಬಂತೆ ಹೊಂದಾಣಿಕೆಯಾಗಿದೆ. ಇದಕ್ಕೆ ಕರ್ನಾಟಕದ ನೆಲದಲ್ಲಿಯೇ ಮೂಲ ವಿಗ್ರಹಗಳು ಇದೆ ಎಂಬ ಪ್ರತೀತಿ ಮಾತು ನಿದರ್ಶನ ಇದೆ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಹರಿಹರ ತುಂಗಾಭದ್ರಾ ನದಿ ತಟದಲ್ಲಿರುವ ಶ್ರೀ ರಾಮಮಂದಿರ (Ram Mandir) ಅಲ್ಲಿನ ರಾಮ ಲಕ್ಷ್ಮಣ, ಸೀತಾ ವಿಗ್ರಹಗಳು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.

    ಹರಿಹರದ ತುಂಗಾಭದ್ರಾ (Tungabhadra) ನದಿ ತಟದಲ್ಲಿರುವ ಸದ್ಗುರು ಸಮರ್ಥ ನಾರಾಯಣ ಆಶ್ರಮದಲ್ಲಿರುವ ರಾಮ ಮಂದಿರ ಇದೀಗ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಭಾರತದ ಮೇಲೆ ಬಾಬರ್ ದಾಳಿ ಮಾಡಿದ ಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿನ ಮೂಲ ವಿಗ್ರಹಗಳು ಅಲ್ಲಿಂದ ಸ್ಥಳಾಂತರಗೊಂಡವು ಎಂಬುದು ಇತಿಹಾಸ. ಸ್ಥಳಾಂತರಗೊಂಡ ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳನ್ನು ದಕ್ಷಿಣ ಭಾರತಕ್ಕೆ ತರಲಾಯಿತು ಎಂಬುವುದಕ್ಕೆ ಕೆಲ ದಾಖಲೆಗಳಿವೆ. ಆ ಮೂರ್ತಿಗಳನ್ನ ಅಲ್ಲಿನ ಪುರೋಹಿತರು ಸಮರ್ಥ ನಾರಾಯಣ ಮಹಾರಾಜರ ಪೂರ್ವಿಕರಿಗೆ ಒಪ್ಪಿಸಿದ್ದರು. ಇದೇ ಕಾರಣಕ್ಕೆ ನರ್ಮದಾ ನದಿ ತೀರದಿಂದ ತುಂಗಭದ್ರಾ ತೀರಕ್ಕೆ ತಂದಿದ್ದಾರೆ ಎಂಬುದು ಪ್ರತೀತಿ. ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜರ ಆಶ್ರಮದಲ್ಲಿ ಈ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗ್ತಿದೆ. ಇದನ್ನೂ ಓದಿ: ಮಂಗಳೂರಿನ ಸಂಘ ನಿಕೇತನದಿಂದ ಅಯೋಧ್ಯೆಗೆ ಹೊರಟ ನಮ್ಮನ್ನು ಡೈಮಂಡ್ ಗಂಜ್‌ನಲ್ಲಿ ಬಂಧಿಸಿದ್ರು!

    ಸಮರ್ಥ ನಾರಾಯಣ ಮಹಾರಾಜರು ಬಾಲ ಸನ್ಯಾಸಿಗಳಾಗಿ, ನಂತರ ಸಂಸಾರಿಗಳಾದ್ರು. ಆಗಿನ ಕಾಲದಲ್ಲಿ ಇಡಿ ದೇಶ ಸುತ್ತಿ ಅಯೋಧ್ಯೆಗೂ ಹತ್ತಾರು ಸರಿ ಸುತ್ತಾಡಿ ಬಂದಿದ್ದರು. 1990 ರ ಜುಲೈ 5 ರಂದು ಇವರು ದೇಹ ತ್ಯಾಗ ಮಾಡಿದ್ರು. ವಿಶೇಷ ಅಂದ್ರೆ ಬಾಬ್ರಿ ಮಸೀದಿ ರಾಮ ಮಂದಿರ ಸಂಘರ್ಷದಲ್ಲಿ ಇಲ್ಲಿನ ಸಮರ್ಥ ನಾರಾಯಣ ಮಹಾರಾಜರು ಓರ್ವ ಪ್ರತಿವಾದಿ ಆಗಿದ್ದರು. ಈ ಆಶ್ರಮದಲ್ಲಿ ಇರುವ ಮೂರ್ತಿಗಳು ಇದು ಚರಮೂರ್ತಿಗಳಾಗಿದ್ದು ಅಯೋಧ್ಯೆಯಲ್ಲಿ ಸ್ಥಿರಪೀಠದ ಮೂರ್ತಿಗಳಿವೆ ಎಂಬ ಇತಿಹಾಸವಿದೆ.