Tag: ಬಾಲಯ್ಯ

  • ದುನಿಯಾ ವಿಜಯ್ ಮತ್ತು ಬಾಲಯ್ಯ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್

    ದುನಿಯಾ ವಿಜಯ್ ಮತ್ತು ಬಾಲಯ್ಯ ನಟನೆಯ ಚಿತ್ರಕ್ಕೆ ಟೈಟಲ್ ಫಿಕ್ಸ್

    `ಸಲಗ’ ಭರ್ಜರಿ ಸಕ್ಸಸ್ ನಂತರ ಭೀಮನ ಅವತಾರವೆತ್ತಿ ಟಾಲಿವುಡ್ ಲೆಜೆಂಡ್ ಬಾಲಯ್ಯ ಜತೆ ಅಖಾಡಕ್ಕೆ ಇಳಿದಿದ್ದಾರೆ. ಬಾಲಯ್ಯ ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ ಪವರ್‌ಫುಲ್ ಟೈಟಲ್ ಕೂಡ ಫಿಕ್ಸ್ ಆಗಿದೆ.

    ದುನಿಯಾ ವಿಜಯ್ ಅಭಿನಯದ `ಸಲಗ’ ಸೂಪರ್ ಸಕ್ಸಸ್ ನಂತರ ಇದೀಗ `ಭೀಮ’ ಚಿತ್ರದ ನಿರ್ದೇಶನದ ಜವಬ್ದಾರಿ ಕೂಡ ಕೈಗೆತ್ತಿಕೊಂಡಿದ್ದಾರೆ. ನಟನಾಗಿ ಕಮ್ ನಿರ್ದೇಶಕನಾಗಿ ಪಳಗಿರೋ ವಿಜಯ್‌ಗೆ ತೆಲುಗು ಚಿತ್ರರಂಗ ರೆಡ್ ಕಾರ್ಪೆಟ್ ಹಾಕಿ ಕರೆಯುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಚಿತ್ರಕ್ಕೆ ದುನಿಯಾ ವಿಜಯ್ ಪ್ರಮುಖ ಪಾತ್ರಕ್ಕೆ ಜೀವ ತುಂಬ್ತಿದ್ದಾರೆ. ಬಾಲಯ್ಯ ನಟನೆಯ ಹೊಸ ಸಿನಿಮಾಗೆ `ಅಣ್ಣಗಾರು’ ಅನ್ನೋ ಪವರ್‌ಫುಲ್ ಟೈಟಲ್ ಇಡಲಾಗಿದೆ.

    `ಅಖಂಡ’ ಬ್ಲಾಕ್ ಬಸ್ಟರ್ ಸಕ್ಸಸ್ ನಂತರ ಎಂದೂ ಮಾಡಿರದ ಡಿಫರೆಂಟ್ ಪಾತ್ರದಲ್ಲಿ ಬರಲು ಬಾಲಯ್ಯ ಸಜ್ಜಾಗಿದ್ದಾರೆ. ಇನ್ನು ಗೋಪಿಚಂದ್ ಮಲಾನೇನಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಬಾಲಯ್ಯ ನಟನಯೆ 107ನೇ ಚಿತ್ರಕ್ಕೆ `ಅಣ್ಣಗಾರು’ ಟೈಟಲ್ ಕೂಡ ಫಿಕ್ಸ್ ಫೈನಲ್ ಆಗಿದೆ. ಬಾಲಯ್ಯಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಇದನ್ನೂ ಓದಿ: ಕಾಜಲ್ ಜೊತೆ ಶಾರುಖ್ ಖಾನ್ ಮತ್ತೆ ರೊಮ್ಯಾನ್ಸ್

    `ಅಣ್ಣಗಾರು’ ಪವರ್‌ಫುಲ್ ಟೈಟಲ್ ಮೂಲಕ ಬಾಲಯ್ಯ ಮತ್ತು ದುನಿಯಾ ವಿಜಯ್ ಬರುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದಿಂದ ಟೈಟಲ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಲೆಜೆಂಡರಿ ಆಕ್ಟರ್ ಬಾಲಯ್ಯ ಮತ್ತು ದುನಿಯಾ ವಿಜಯ್ ನಟನೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

  • ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಜತೆ ನಟಿಸಲ್ಲ ಅಂದ ಕನ್ನಡತಿ

    ಖಂಡ ಸಿನಿಮಾದ ನಂತರ ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವ ನಂದಮೂರಿ ಬಾಲಕೃಷ್ಣ ಜತೆ ಹೊಸ ಸಿನಿಮಾದಲ್ಲಿ ನಟಿಸಲಾರೆ ಎಂದಿದ್ದಾರಂತೆ ಕನ್ನಡದ ಹುಡುಗಿ, ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಕೃತಿ ಶೆಟ್ಟಿ. ಇನ್ನೂ ಹದಿನೆಂಟರ ಆಸುಪಾಸಿನಲ್ಲಿರುವ ಈ ನಟಿಯು ಬಾಲಯ್ಯನವರ ವಯಸ್ಸಿನ ಕಾರಣಕ್ಕಾಗಿ ನಟಿಸಲು ನಿರಾಕರಿಸಿರುವುದು ಭಾರೀ ಸುದ್ದಿ ಮಾಡಿದೆ. ಇದನ್ನೂ ಓದಿ : ಮಹಾಶಿವರಾತ್ರಿಗೆ ಶಿವಾಜಿ ಸುರತ್ಕಲ್ ಪೋಸ್ಟರ್

    “ನಂದಮೂರಿ ಅವರಿಗೆ ವಯಸ್ಸಾಗಿದೆ. ನನಗಿನ್ನೂ ಹದಿನೆಂಟರ ಹರೆಯ. ವಯಸ್ಸಿನ ಭಾರೀ ಅಂತರ ಇರುವ ನಟರ ಜತೆ ಈಗಲೇ ಕೆಲಸ ಮಾಡಿದರೆ, ನನ್ನ ಕೆರಿಯರ್  ತೊಂದರೆ ಆಗುತ್ತದೆ. ಹಾಗಾಗಿ ನಾನು ಬಾಲಯ್ಯ ಅವರ ಚಿತ್ರದಲ್ಲಿ ನಟಿಸಲಾರೆ” ಎಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ತುದಿಗಾಲಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಕೃತಿ ಕೈಗೊಂಡಿದ್ದಾರೆ ಎನ್ನಲಾದ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೃತಿ ಜಾಗಕ್ಕೆ ಸದ್ಯ ಶ್ರುತಿ ಹಾಸನ್ ಬಂದಿದ್ದಾರಂತೆ. ಇದನ್ನೂ ಓದಿ : ಜೇಮ್ಸ್ ಟ್ರೇಡ್ ಮಾರ್ಕ್ ಹಾಡಿಗೆ ಪುನೀತ್ ಭರ್ಜರಿ ಸ್ಟೆಪ್: ಭಾವುಕರಾದ ಅಭಿಮಾನಿಗಳು

    ಕನ್ನಡತಿ ಕೃತಿ ಶೆಟ್ಟಿ ಈ ಸಿನಿಮಾದಿಂದ ಹೊರ ನಡೆದಿದ್ದರೂ, ಮತ್ತೋರ್ವ ಕನ್ನಡದ ನಟ ದುನಿಯಾ ವಿಜಯ್, ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ವಿಜಯ್ ಗೆ ಇದು ತೆಲುಗಿನಲ್ಲಿ ಮೊದಲ ಸಿನಿಮಾ. ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದ್ದು, ಸದ್ಯ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

  • ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಟ ಬಾಲಯ್ಯ: ವಿಡಿಯೋ ನೋಡಿ

    ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ನಟ ಬಾಲಯ್ಯ: ವಿಡಿಯೋ ನೋಡಿ

    ಹೈದರಾಬಾದ್: ಟಾಲಿವುಡ್ ಸ್ಟಾರ್ ಕಮ್ ಶಾಸಕ ಬಾಲಕೃಷ್ಣ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸೆಲ್ಫೀ ತೆಗೆದುಕೊಳ್ಳಲು ಮುಂದಾದ ತಮ್ಮ ಅಭಿಮಾನಿಯೊಬ್ಬರಿಗೆ ಎಲ್ಲರೂ ನೋಡನೋಡ್ತಿದ್ದಂತೆ ಕಪಾಳಕ್ಕೆ ಹೊಡೆದು ಹಿಂದಕ್ಕೆ ತಳ್ಳಿದ್ದಾರೆ.

    ಆಂಧ್ರಪ್ರದೇಶದ ನಂದ್ಯಾಳ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಈ ವೇಳೆ ತೆಲಗು ದೇಶಂ ಪಾರ್ಟಿ (ಟಿಡಿಪಿ) ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಾಲಯ್ಯ ಅಭಿಮಾನಿಯೊಬ್ಬರಿಗೆ ಸಾರ್ವಜನಿಕವಾಗಿ ಕಪಾಳಕ್ಕೆ ಹೊಡೆಯುವ ಮೂಲಕ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

    ಟಾಲಿವುಡ್ ಸ್ಟಾರ್ ಆಗಿರುವ ನಂದಮುರಿ ಬಾಲಕೃಷ್ಣಯ್ಯ ಅಭಿಮಾನಿಗಳಿಂದ ಬಾಲಯ್ಯ ಎಂದು ಕರೆಸಿಕೊಳ್ಳುತ್ತಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ರಂಗದಲ್ಲಿ ಗುರುತಿಸಿಕೊಂಡಿರುವ ಬಾಲಯ್ಯ ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಳಿಯನಾಗಿರುವ ಬಾಲಯ್ಯ ಉಪಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

    ಈ ಹಿಂದೆಯೂ ಸಿನಿಮಾ ಶೂಟಿಂಗ್ ನಲ್ಲಿ ಬಾಲಯ್ಯ ತಮ್ಮ ಸಹಾಯಕರೊಬ್ಬರಿಗೆ ಕಪಾಳಕ್ಕೆ ಹೊಡೆಯುವ ಮೂಲಕ ಸುದ್ದಿಯಾಗಿದ್ದರು.

    https://www.youtube.com/watch?v=NUMlV27hJkE