Tag: ಬಾಲಯ್ಯ

  • ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ತೆಲುಗು ಆಕ್ಟರ್ ಶರ್ವಾನಂದ್ (Sharwanand) ಅವರು ಜೂನ್ 3ರಂದು ರಕ್ಷಿತಾ ರೆಡ್ಡಿ (Rakshitha Reddy) ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಶರ್ವಾನಂದ್ ಮದುವೆಯಾದರು. ಇದೀಗ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಟನ ಆರತಕ್ಷತೆ ಜರುಗಿದೆ. ಈ ಸಂಭ್ರಮದಲ್ಲಿ ಸಿನಿ ತಾರೆಯರು ಭಾಗಿಯಾಗಿದ್ದಾರೆ.

    ಟಾಲಿವುಡ್ (Tollywood) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರ್ವಾನಂದ್ ಸಂಚಲನ ಮೂಡಿಸಿದ್ದಾರೆ. ಜಾನೂ, ಮಹಾಸಮುದ್ರಂ, ಓಕೆ ಓಕಾ ಜೀವಿತಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಿನ್ನ ಕಥೆ, ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

    ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾದರು. ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಜೈಪುರ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದ ಶರ್ವಾನಂದ್ ಇದೀಗ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಆಪ್ತರಿಗೆ ರಿಸೆಪ್ಷನ್‌ಗೆ ಆಹ್ವಾನ ನೀಡಿದ್ದರು. ಸೆಲೆಬ್ರಿಟಿಗಳ ದಂಡೇ ನಟನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಸೂಟ್‌ನಲ್ಲಿ ಶರ್ವಾನಂದ್ ಕಾಣಿಸಿಕೊಂಡಿದ್ದರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಶರ್ವಾನಂದ್ ರೆಸೆಪ್ಷನ್ ಸಂಭ್ರಮದಲ್ಲಿ ರಾಮ್ ಚರಣ್ (Ram Charan) ದಂಪತಿ, ಬಾಲಯ್ಯ, ನಟ ವೆಂಕಟೇಶ್, ರಾಣಾ ದಗ್ಗುಭಾಟಿ, ಲಕ್ಷ್ಮಿ ಮಂಚು, ನಿಖಿಲ್ ಸಿದ್ಧಾರ್ಥ್, ನಟಿ ರೀತು ವರ್ಮಾ ಸೇರಿದಂತೆ ಹಲವು ಭಾಗಿಯಾಗಿ, ಶುಭಕೋರಿದರು.

  • ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್: ಬಾಲಯ್ಯನ ವಿಡಿಯೋ ಹಾಕಿ ಹಯಾತಿ ಟಾಂಗ್

    ಐಪಿಎಸ್ ಅಧಿಕಾರಿ ಜೊತೆಗಿನ ಕಿರಿಕ್: ಬಾಲಯ್ಯನ ವಿಡಿಯೋ ಹಾಕಿ ಹಯಾತಿ ಟಾಂಗ್

    ಕಾರು ಪಾರ್ಕಿಂಗ್ ವಿಚಾರವಾಗಿ ಐಪಿಎಸ್ ಅಧಿಕಾರಿ ಜೊತೆ ಕಿರಿಕ್ ಮಾಡಿಕೊಂಡಿದ್ದ ಡಿಂಪಲ್ ಹಯಾತಿ, ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕಾಣುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಐಪಿಎಸ್ ಅಧಿಕಾರಿಯನ್ನು ಸದಾ ಕೆಣುಕುತ್ತಲೇ ಇದ್ದಾರೆ. ಐಪಿಎಸ್ ಅಧಿಕಾರಿಯನ್ನು ಉರಿಸಲೆಂದೇ ಅವರು ಬಾಲಯ್ಯ (Balayya) ನಟನ ಸಿಂಹ ಚಿತ್ರದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನ್ಯಾಯವಾದಾಗೆಲ್ಲ ‘ನೋ ಪೊಲೀಸ್’ ಎನ್ನುವ ಡೈಲಾಗ್ ಇದೆ.

    ತಮಗೆ ಅನ್ಯಾಯವಾಗಿದೆ. ಹಾಗಾಗಿ ನೋ ಪೊಲೀಸ್ ಎನ್ನುವ ಅರ್ಥದಲ್ಲಿ ಅದನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಒಂದು ಕಡೆ ಪೊಲೀಸ್ ಅಧಿಕಾರಿ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಇಳಿಯುತ್ತಿದ್ದರೆ ಮತ್ತೊಂದು ಕಡೆ ಡಿಂಪಲ್ ಹಯಾತಿ (Dimple Hayati) ಖಿನ್ನತೆಗೆ ಜಾರಿದ್ದಾರಂತೆ. ಅಧಿಕಾರಿ ಜೊತೆಗಿನ ಜಗಳದಿಂದಾಗಿ ನಟಿಗೆ ಬೆದರಿಕೆಯ ಕರೆಗಳು ಬರುತ್ತಿದ್ದು, ಅವುಗಳನ್ನು ಎದುರಿಸೋಕೆ ಆಗದೇ ಡಿಂಪಲ್ ಖಿನ್ನತೆಗೆ  (Depression) ಒಳಗಾಗಿದ್ದಾರೆ ಎಂದು ಮಾಧ್ಯಮಗಳ ವರದಿ ಮಾಡಿವೆ.

     

    ಸಿನಿಮಾಗಳಿಗಿಂತ ಕಿರಿಕ್ ಸುದ್ದಿಗಳಿಂದಲೇ ಹೆಚ್ಚೆಚ್ಚು ಸುದ್ದಿ ಮಾಡಿದವರು ಡಿಂಪತ್ ಹಯಾತಿ. ಈ ಹಿಂದೆಯೂ ನಾನಾ ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರು. ಮೊನ್ನೆಯಷ್ಟೇ ಐಪಿಎಸ್ ಅಧಿಕಾರಿ ಜೊತೆ ಡಿಂ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

    ಪೊಲೀಸ್ ಅಧಿಕಾರಿ ರಾಹುಲ್ ಹೆಗ್ಡೆ(Rahul Hegde)- ಸೌತ್ ನಟಿ ಡಿಂಪಲ್ ಹಯಾತಿ ನಡುವಿನ ಜಗಳ ತಾರಕಕ್ಕೇರಿದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿತ್ತಾಟ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೊಲೀಸ್ ಅಧಿಕಾರಿಯ ಕಾರನ್ನು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ನಟಿ ಡಿಂಪಲ್ ಹಯಾತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

    ನಟಿ ಡಿಂಪಲ್ ಹಾಗೂ ಅವರ ಗೆಳೆಯ ವಿಕ್ಟರ್ (Victor) ಹೈದರಾಬಾದ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ಮೆಂಟ್‌ನಲ್ಲಿ ಹೈದರಾಬಾದ್‌ನ ಟ್ರಾಫಿಕ್ ಪೊಲೀಸ್ ಡೆಪ್ಯೂಟಿ ಕಮೀಷನರ್, ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಕೂಡ ವಾಸವಾಗಿದ್ದಾರೆ. ಇವರ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿದೆ. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದಾರೆ.

    ಮೇ ೧೪ರಂದು ಡಿಂಪಲ್ ಹಯಾತಿ ಅವರು ರಾಹುಲ್ ಕಾರಿಗೆ ಡ್ಯಾಮೇಜ್ ಮಾಡಿದ್ದಾರೆ. ಇದು ಉದ್ದೇಶಪೂರ್ವಕವಾಗಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ಸಿಕ್ಕಿದೆ. ಇದನ್ನು ಆಧರಿಸಿ ನಟಿ ಡಿಂಪಲ್ ವಿರುದ್ಧ ರಾಹುಲ್ ಅವರ ಕಾರು ಡ್ರೈವರ್ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಡಿಂಪಲ್ ಹಯಾತಿಗೆ ಸಮನ್ಸ್ ನೀಡಲಾಗಿದೆ.

  • ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.

    ಬಾಲಯ್ಯ (Balayya) ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ಶೂಟಿಂಗ್ ಸ್ಥಳದಲ್ಲಿ ಇದ್ದವರ ಮಾಹಿತಿ ಪ್ರಕಾರ, ಅದು ಕೋಪದಿಂದ ಹೊಡೆದ ಘಟನೆಯಲ್ಲವಂತೆ. ಅಂಥದ್ದೊಂದು ದೃಶ್ಯ ಸಿನಿಮಾದಲ್ಲಿತ್ತು ಎಂದು ಹೇಳಲಾಗುತ್ತಿದೆ. ಬಾಲಯ್ಯ ಕುಟುಂಬದ ಸೊಸೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸೊಸೆಯನ್ನು ಹೊಡೆಯುವಂತಹ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗುತ್ತಿದೆ.

    ಅಷ್ಟಕ್ಕೂ ಶ್ರೀಲೀಲಾ ಅವರೇ ದೃಶ್ಯ ನೈಜವಾಗಿ ಬರಲಿ ಎನ್ನುವ ಕಾರಣಕ್ಕಾಗಿ ಜೋರಾಗಿ ಕೆನ್ನೆಗೆ ಬಾರಿಸಿ ಎಂದು ಬಾಲಯ್ಯನವರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದು ನಿಜವೋ ಯಾವುದು ಸುಳ್ಳು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.

  • ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ

    ನಂದಮೂರಿ ಬಾಲಯ್ಯ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವಣ್ಣ

    ಸ್ಯಾಂಡಲ್‌ವುಡ್ (Sandalwood) ನಟ ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆ ಚಿತ್ರಗಳನ್ನು ಕೂಡ ಒಪ್ಪಿಕೊಳ್ತಿದ್ದಾರೆ. ಹೀಗಿರುವಾಗ ತಮ್ಮ ಫ್ಯಾನ್ಸ್‌ಗೆ ಶಿವಣ್ಣ ಸಿಹಿಸುದ್ದಿ ನೀಡಿದ್ದಾರೆ. ತೆಲುಗಿನಲ್ಲೂ ನಟಿಸುವ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ.

    ರಾಜ್‌ಕುಮಾರ್ ಅವರಿಗೂ ಎನ್‌ಟಿಆರ್ ಅವರ ಸ್ನೇಹ ಸಂಬಂಧ ಚೆನ್ನಾಗಿತ್ತು. ಅದೇ ರೀತಿ ಇದೀಗ ಎನ್‌ಟಿಆರ್ ಪುತ್ರ ಬಾಲಯ್ಯ ಜೊತೆ ಶಿವಣ್ಣ ಒಳ್ಳೆಯ ಒಡನಾಟವಿದೆ. ಹಾಗಾಗಿ ಎನ್‌ಟಿಆರ್ (Ntr) ಅವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಿವಣ್ಣ ಭಾಗಿಯಾಗಿದ್ದರು. ಎನ್‌ಟಿಆರ್- ಬಾಲಯ್ಯ (Balayya) ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡರು. ಬಾಲಯ್ಯ ನನ್ನ ಸಹೋದರನಿದ್ದಂತೆ. ಈ ಹಿಂದೆ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದೆ. ಈಗ ದೊಡ್ಡ ಮಟ್ಟದಲ್ಲಿ ಸಿನಿಮಾವೊಂದನ್ನು ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಇಬ್ಬರೂ ಒಟ್ಟಿಗೆ ನಟಿಸಲು ಯೋಚಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ ಮುಂದೆ ಬಾಲಯ್ಯ ಜೊತೆ ಸಿನಿಮಾ ಮಾಡುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ

    ಶಿವಣ್ಣ ಅವರು ಈಗಾಗಲೇ ಬಾಲಕೃಷ್ಣ ಅವರ ‘ಗೌತಮಿ ಪುತ್ರ ಶಾತಕರ್ಣಿ’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಅದು ಶಿವಣ್ಣ ನಟಿಸಿದ್ದ ಮೊದಲ ಪರಭಾಷೆಯ ಸಿನಿಮಾವಾಗಿತ್ತು. ಬಾಲಯ್ಯ ಅವರ ಮೇಲಿನ ಅಭಿಮಾನದಿಂದಾಗಿ ಆ ಪಾತ್ರದಲ್ಲಿ ನಟಿಸಿದ್ದರು. ಈಗ ಪೂರ್ಣ ಪ್ರಮಾಣದ ಸಿನಿಮಾದಲ್ಲಿ ಒಟ್ಟಿಗೆ ನಟಿಸಲು ಯೋಜನೆ ಮಾಡಿದ್ದಾರೆ.

    ಮಾಹಿತಿಯ ಪ್ರಕಾರ, ಬಾಲಯ್ಯ ಮತ್ತು ಶಿವರಾಜ್‌ಕುಮಾರ್ (Shivarajkumar) ಅವರ ಸಿನಿಮಾವನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರಂತೆ. ಈಗಾಗಲೇ ಕಥೆ ಮಾಡಿಕೊಂಡು ಇಬ್ಬರನ್ನೂ ಸಂಪರ್ಕಿಸಿದ್ದಾರಂತೆ. ಪೂರ್ಣ ಪ್ರಮಾಣದಲ್ಲಿ ಶಿವಣ್ಣ- ಬಾಲಯ್ಯ ಒಟ್ಟಿಗೆ ನಟಿಸಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ನಡೆಯುತ್ತಿದೆ. ತೆಲುಗು ಮತ್ತು ಕನ್ನಡದಲ್ಲಿ 2 ಭಾಷೆಯಲ್ಲೂ ಈ ಸಿನಿಮಾ ಮೂಡಿ ಬರಲಿದೆ.

    ಈಗಾಗಲೇ ಶಿವಣ್ಣ ಅವರು ರಜನಿಕಾಂತ್ ‘ಜೈಲರ್’, ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಕೈಯಲ್ಲಿರಬೇಕಾದರೆ ತೆಲುಗು- ತಮಿಳಿನಿಂದ ಶಿವಣ್ಣಗೆ ಬಂಪರ್ ಆಫರ್‌ಗಳು ಅರಸಿ ಬರುತ್ತಿವೆ.

  • ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಬಾಲಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಲು 5 ಕೋಟಿ ಕೇಳಿದ್ರಾ? ತಮನ್ನಾ ಸ್ಪಷ್ಟನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಅವರು ಸದಾ ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ತಮ್ಮ ಸಿನಿಮಾ ಸಂಭಾವನೆ ವಿಚಾರವಾಗಿ ಗಾಸಿಪ್ ಹಬ್ಬಿದ್ದಕ್ಕೆ ತಮನ್ನಾ ಗರಂ ಆಗಿದ್ದಾರೆ. ಬಾಲಯ್ಯ (Balayya) ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು 5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎನ್ನಲಾದ ಸುದ್ದಿಗೆ ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಭಾವಿಪತಿಗೆ ಸಿಹಿಮುತ್ತು ಕೊಟ್ಟು, ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಪುತ್ರಿ

    ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿರುವ ತಮನ್ನಾ ಭಾಟಿಯಾ ಅವರು ‘ಕೆಜಿಎಫ್’ (KGF) ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಾಯಕಿಯಾಗಿಯೂ ಗೆದ್ದಿದ್ದಾರೆ. ಇತ್ತೀಚೆಗೆ ನಂದಮೂರಿ ಬಾಲಯ್ಯ ಅವರ 108ನೇ ಚಿತ್ರಕ್ಕೆ 5 ಕೋಟಿ ರೂ ಸಂಭಾವನೆ ಡಿಮ್ಯಾಂಡ್ ಮಾಡಿದ್ರು ಎಂಬ ಸುದ್ದಿಗೆ ನಟಿ ತಮನ್ನಾ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ.

    ಬಾಲಯ್ಯ ನಟನೆಯ 108ನೇ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶಕ. ಈ ಸಿನಿಮಾದಲ್ಲಿನ ಒಂದು ಐಟಂ ಸಾಂಗ್‌ನಲ್ಲಿ ಕುಣಿಯುವಂತೆ ತಮನ್ನಾಗೆ ಆಫರ್ ನೀಡಲಾಗಿದೆ ಎಂದು ಗಾಳಿ ಸುದ್ದಿ ಹಬ್ಬಿತ್ತು. ಅಷ್ಟೇ ಅಲ್ಲದೇ, ಆ ಹಾಡಿನಲ್ಲಿ ಡ್ಯಾನ್ಸ್ ಮಾಡಲು ತಮನ್ನಾ ಅವರು ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂದು ಕೂಡ ಗಾಸಿಪ್ ಮಂದಿ ಮಾತನಾಡಿಕೊಂಡಿದ್ದರು. ಅದು ತಮನ್ನಾ ಗಮನಕ್ಕೂ ಬಂದಿದ್ದು, ಸ್ಪಷ್ಟನೆ ನೀಡಿದ್ದಾರೆ.

    ನಿರ್ದೇಶಕ ಅನಿಲ್ ರವಿಪುಡಿ ಅವರ ಜೊತೆ ಕೆಲಸ ಮಾಡುವುದನ್ನು ನಾನು ಯಾವಾಗಲೂ ಎಂಜಾಯ್ ಮಾಡಿದ್ದೇನೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಅವರ ಬಗ್ಗೆಯೂ ನನಗೆ ಸಾಕಷ್ಟು ಗೌರವ ಇದೆ. ಆದರೆ ಅವರ ಸಿನಿಮಾದಲ್ಲಿನ ಹಾಡಿನಲ್ಲಿ ನಾನು ಇರುವುದಾಗಿ ಗಾಸಿಪ್ ಹಬ್ಬಿರುವುದು ನನಗೆ ಬೇಸರ ಮೂಡಿಸಿದೆ. ಆಧಾರ ಇಲ್ಲದ ಆರೋಪ ಮಾಡುವುದಕ್ಕೂ ಮುನ್ನ ನೀವು ಸ್ವಲ್ಪ ರಿಸರ್ಚ್ ಮಾಡಿಕೊಳ್ಳಿ ಎಂದು ನಟಿ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.

  • ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ ಮಗಧೀರನ ಬೆಡಗಿ ಕಾಜಲ್

    ಸೌತ್ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಮದುವೆಯಾಗಿ ಮಗುಯಾದ್ಮೇಲೂ ಅವರ ಚಾರ್ಮ್ ಕಳೆದುಕೊಂಡಿಲ್ಲ. ಇದೀಗ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಕಾಜಲ್ ಮಿಂಚಿದ್ದಾರೆ.

    2020ರಲ್ಲಿ ಉದ್ಯಮಿ ಗೌತಮ್ ಅವರನ್ನು ಕಾಜಲ್ ಮದುವೆಯಾದರು. ಇದೀಗ ಈ ದಂಪತಿಗೆ `ನೀಲ್’ (Neel) ಎಂಬ ಮುದ್ದಾದ ಗಂಡು ಮಗುವಿದೆ. ಆಗಾಗ ನಯಾ ಫೋಟೋಶೂಟ್‌ನಿಂದ ಸದ್ದು ಮಾಡುವ ಕಾಜಲ್ ಇದೀಗ ಹೊಸ ಫೋಟೋಶೂಟ್‌ನಲ್ಲಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಡಾಲಿ ಸಿನಿಮಾಗೆ ವಿಶ್ ಮಾಡಿ, ತೆಲುಗು ಚಿತ್ರ ನೋಡುತ್ತೇನೆ ಎಂದ ರಶ್ಮಿಕಾ ಮಂದಣ್ಣ

    ಹಸಿರು ಮತ್ತು ಕಪ್ಪು ಮಿಶ್ರಿತ ಬಣ್ಣದ ಡ್ರೆಸ್‌ನಲ್ಲಿ ಕಾಜಲ್ ಅಗರ್‌ವಾಲ್ ಕಂಗೊಳಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಚೆಂದದ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ಮದುವೆ (Wedding) ನಂತರ ಕಾಜಲ್ ಮತ್ತೆ ಬಾಲಯ್ಯ (Balayya) ಅವರ 108ನೇ ಸಿನಿಮಾಗೆ ನಾಯಕಿಯಾಗುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಬಾಲಯ್ಯಗೆ ಜೋಡಿಯಾಗಲು 4 ಕೋಟಿ ರೂ. ಜಾರ್ಜ್ ಮಾಡಿದ್ದಾರೆ.

  • ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ಬಾಲಯ್ಯ ಜೊತೆ ನಟಿಸಲಿದ್ದಾರೆ ನಟಿ ಶ್ರೀಲೀಲಾ

    ನ್ನಡತಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್ (Tollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. `ಧಮಾಕ’ (Dhamaka) ಚಿತ್ರದ ಸೂಪರ್ ಸಕ್ಸಸ್ ನಂತರ ಬಾಲಯ್ಯ ಅವರ ಮುಂದಿನ ಚಿತ್ರದಲ್ಲಿ ನಟಿಸಲು ಭರ್ಜರಿ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

    ಕಿಸ್, ಭರಾಟೆ, ಬೈ ಟು ಲವ್, ಕನ್ನಡದ ಚಿತ್ರಗಳ ಮೂಲಕ ಗಮನ ಸೆಳೆದ ನಟಿ ಶ್ರೀಲೀಲಾ ಈಗ ತೆಲುಗು ಸಿನಿಮಾ ರಂಗದಲ್ಲಿ ಬೆಳಗುತ್ತಿದ್ದಾರೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಸೆಡ್ಡು ಹೊಡೆದು ಸಾಲು ಸಾಲು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗುತ್ತಿದ್ದಾರೆ. `ಧಮಾಕ’ (Dhamaka) ಚಿತ್ರದ ಸಕ್ಸಸ್ ನಂತರ ನಟಿಯ ಕೈಯಲ್ಲಿ ಏಳು ಸಿನಿಮಾಗಳಿವೆ.

    ಬಾಲಯ್ಯ (Balayya) ನಟನೆಯ ಚಿತ್ರದಲ್ಲಿ ಶ್ರೀಲೀಲಾ (Sreeleela) ನಟಿಸುತ್ತಾರೆ ಎಂದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಅಧಿಕೃತ ಮಾಹಿತಿ ಹೊರ ಬಿದ್ದಿರಲ್ಲಿಲ್ಲ. ಇದೀಗ ನಟಿ ಶ್ರೀಲೀಲಾ ಪೋಸ್ಟ್ ಶೇರ್ ಮಾಡಿಕೊಳ್ಳುವ ಮೂಲಕ ನಂದಮೂರಿ ಬಾಲಯ್ಯ (Nandamuri Balayya) ಜೊತೆ ನಟಿಸುವ ಬಗ್ಗೆ ಅಧಿಕೃತ ಅಪ್‌ಡೇಟ್ ತಿಳಿಸಿದ್ದಾರೆ.

     

    View this post on Instagram

     

    A post shared by Sreeleela (@sreeleela14)

    ಚಿತ್ರದಲ್ಲಿ ಬಾಲಯ್ಯ ಅವರ ತಂಗಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ. ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಅನಿಲ್ ರವಿಪುಡಿ ನಿರ್ದೇಶನದ NBK 108 ಚಿತ್ರದಲ್ಲಿ ತ್ರಿಷಾ, ಕಾಜಲ್ ಅಗರ್‌ವಾಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  • ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಬಾಲಯ್ಯ ಜೊತೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿಗೆ ಭರ್ಜರಿ ಸಂಭಾವನೆ

    ಸೌತ್ ಬ್ಯೂಟಿ ತಮನ್ನಾ ಭಾಟಿಯಾ(Tamanna Bhatia) ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಂದಮೂರಿ ಬಾಲಕೃಷ್ಣ (Nandamuri Balakrishna) ಜೊತೆ ಸೊಂಟ ಬಳುಕಿಸಲು ದುಬಾರಿ ಸಂಭಾವನೆಯನ್ನೇ (Remuneration) ಮಿಲ್ಕಿ ಬ್ಯೂಟಿ ಡಿಮ್ಯಾಂಡ್ ಮಾಡಿದ್ದಾರೆ.

    ಮಿಲ್ಕಿ ಬ್ಯೂಟಿ ತಮನ್ನಾ ಅವರು 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಇದೀಗ ತಮ್ಮ ಚಾರ್ಮ್ ಕಳೆದುಕೊಳ್ಳದೇ ಬಹುಭಾಷೆಗಳಲ್ಲಿ ನಟಿ ಮಿಂಚ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಮಿಂಚ್ತಿರುವ ತಮನ್ನಾಗೆ ಬಾಲಯ್ಯ (Actor Balayya) ಸಿನಿಮಾದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದೆ. ಹೀಗಿರುವಾಗ ತಮ್ಮ ಸಂಭಾವನೆಯಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೇ ದುಬಾರಿ ಸಂಭಾವನೆಯನ್ನೇ ನಟಿ ಬೇಡಿಕೆಯಿಟ್ಟಿದ್ದಾರೆ.

    ಬಾಲಯ್ಯ-ಅನಿಲ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ತಮನ್ನಾಗೆ ಡ್ಯಾನ್ಸ್ ಮಾಡಲು ಬುಲಾವ್ ಬಂದಿದೆ. ನಟಿ ಕೂಡ ಸೊಂಟ ಬಳುಕಿಸಲು ಓಕೆ ಎಂದಿದ್ದಾರೆ. ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ತಮನ್ನಾ 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಈ ವಿಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದನ್ನೂ ಓದಿ: ಪ್ರಾಣಿ ರಕ್ಷಣೆಗೆ ನಟಿ ಸಂಯುಕ್ತಾ ಅಂಬುಲೆನ್ಸ್‌ ಹೆಲ್ಪ್‌ಲೈನ್‌ಗೆ ಚಾಲನೆ

    ನಾಯಕಿಯಾಗಿ ಡಿಮ್ಯಾಂಡ್‌ನಲ್ಲಿರುವ ನಟಿ ಈಗಾಗಲೇ ಸಾಕಷ್ಟು ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೋ, ಗಣಿ, ಜಾಗ್ವಾರ್, ಜೈ ಲವಕುಶ, ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹೆಜ್ಜೆ ಹಾಕಿ ಮಿಂಚಿದ್ದಾರೆ. ಸದ್ಯ ಬಾಲಯ್ಯ ಜೊತೆ ತಮನ್ನಾ ಐಟಂ ಡ್ಯಾನ್ಸ್ ನ್ಯೂಸ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೆಲುಗಿನ `ವೇದ’ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

    ತೆಲುಗಿನ `ವೇದ’ ಸಿನಿಮಾ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

    ಶಿವರಾಜ್‌ಕುಮಾರ್ (Shivarajkumar) ನಟನೆಯ `ವೇದ’ (Vedha) ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸೂಪರ್ ಹಿಟ್ ಆಗಿದೆ. ಈ ಬೆನ್ನಲ್ಲೇ ಟಾಲಿವುಡ್ (Tollywood) ಅಂಗಳದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿದೆ. ಇವೆಂಟ್‌ಗೆ ಮುಖ್ಯ ಅತಿಥಿಯಾಗಿ ಬಾಲಯ್ಯ (Balayya) ಅವರು ಸಾಥ್ ನೀಡಿದ್ದಾರೆ. ಈ ವೇಳೆ ಅಪ್ಪು ಅವರನ್ನ ನೆನೆದು ಶಿವಣ್ಣ-ಬಾಲಯ್ಯ ಭಾವುಕರಾಗಿದ್ದಾರೆ. ಇದನ್ನೂ ಓದಿ:ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

    ಶಿವಣ್ಣ ಕುಟುಂಬದವರಿಗೂ ಮತ್ತು ಬಾಲಯ್ಯ ಕುಟುಂಬಕ್ಕೂ ಸಾಕಷ್ಟು ವರ್ಷಗಳಿಂದ ಒಳ್ಳೆಯ ಒಡನಾಟವಿದೆ. ಸಿನಿಮಾಗೂ ಮೀರಿ ಆತ್ಮೀಯ ಒಡನಾಟವಿದೆ. ಹಾಗೆಯೇ ಸಿನಿಮಾ ಅಂತಾ ಬಂದಾಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾರೆ. ಈಗ ತೆಲುಗಿನಲ್ಲಿ ಅಬ್ಬರಿಸಲು `ವೇದ’ ಅಬ್ಬರಿಸಲು ʻವೇದʼ ಚಿತ್ರ ರೆಡಿಯಾಗಿದೆ. ಇದೇ ಫೆ.9ಕ್ಕೆ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಹೀಗಿರುವಾಗ ಶಿವಣ್ಣ ಸಿನಿಮಾ ಪ್ರಚಾರ ಕಾರ್ಯಕ್ರಮ ಬಾಲಯ್ಯ ಅವರು ಭಾಗಿಯಾಗಿ ಶಿವಣ್ಣ ಮತ್ತು ಅವರ ಸಿನಿಮಾವನ್ನ ಹಾಡಿ ಹೊಗಳಿದ್ದಾರೆ.

    `ವೇದ’ ಸಿನಿಮಾ ಕನ್ನಡದಲ್ಲಿ ಹಿಟ್ ಆಗಿದೆ. ತೆಲುಗಿನಲ್ಲೂ ಬರುತ್ತಾ ಇದೆ. ನಿಮಗೂ ಇಷ್ಟವಾಗುತ್ತದೆ. ಸಿನಿಮಾ ಒಳ್ಳೆಯ ಮೆಸೇಜ್ ಇದೆ ನೋಡಿ ಎಂದು ಬಾಲಯ್ಯ ಮನವಿ ಮಾಡಿದ್ದಾರೆ.

    ಈ ವೇಳೆ `ವೇದ’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅಪ್ಪು ಕುರಿತ ವೀಡಿಯೋವೊಂದನ್ನ ತೋರಿಸಲಾಗಿದೆ ಈ ವೇಳೆ ಶಿವಣ್ಣ ಕಣ್ಣೀರಿಟ್ಟಿದ್ದಾರೆ. ಅಪ್ಪು ನೋಡಿ ಕೆಲವೊಮ್ಮೆ ಅಳಬಾರದು ಅಂದುಕೊಳ್ಳುತ್ತೇವೆ. ಆ ಮಗು ಮುಖ ನೋಡಿದರೆ ಎಂತಹವರಿಗೂ ಕಣ್ಣಲ್ಲಿ ನೀರು ಬರುತ್ತದೆ. ಅಪ್ಪುಗಿಂತ (Appu) ನಾನು 13 ವರ್ಷ ದೊಡ್ಡವನು. ಅಪ್ಪುದು ಮಗುವಿನಂತಹ ಮನಸ್ಸು, ಅವನು ಸದಾ ನಮ್ಮೋಂದಿಗೆ ಇದ್ದಾನೆ. ಅವನನ್ನು ಸದಾ ಸೆಲೆಬ್ರೇಟ್ ಮಾಡೋಣ. ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿ ಇರುತ್ತಾನೆ ಎಂದು ಶಿವಣ್ಣ ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಮೂರು ಮದುವೆ ಗುಟ್ಟನ್ನು ಬಿಚ್ಚಿಟ್ಟ ನಟ ಪವನ್ ಕಲ್ಯಾಣ್

    ಟಾಲಿವುಡ್ (Tollywood) ಅಂಗಳದಲ್ಲಿ ಪವನ್ ಕಲ್ಯಾಣ್ (Pawan Kalyan) ಮೂರು ಮದುವೆ ಬಗ್ಗೆ ಸಖತ್ ಸುದ್ದಿಯಾಗಿತ್ತು. ನಟನ ವೈಯಕ್ತಿಕ ಜೀವನ ಹಳ್ಳ ಹಿಡಿದಿರುವ ಬಗ್ಗೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು. ಈಗ ಬಾಲಯ್ಯನ (Actor Balayya) ಮುಂದೆ ಮೂರು ಮದುವೆ ಬಗ್ಗೆ ಪವನ್ ಕಲ್ಯಾಣ್ ಓಪನ್ ಆಗಿ ಮಾತನಾಡಿದ್ದಾರೆ. 3 ಮದುವೆ ಗುಟ್ಟನ್ನು ಪವನ್ ಕಲ್ಯಾಣ್ ಬಿಚ್ಚಿಟ್ಟಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ಪವನ್ ಕಲ್ಯಾಣ್, ಸಿನಿಮಾ ಜೊತೆಗೆ ರಾಜಕೀಯದಲ್ಲೂ ಪವನ್ ಬೆಳಗುತ್ತಿದ್ದಾರೆ. ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಇತ್ತೀಚಿಗೆ ಬಾಲಯ್ಯ ಅವರ ನಿರೂಪಣೆಯ ಟಾಕ್ ಶೋವೊಂದರಲ್ಲಿ ನಟ ಪವನ್ ಭಾಗವಹಿಸಿದ್ದಾರೆ. ಮದುವೆ, ರಾಜಕೀಯ (Politics) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

    ಪವನ್ ಕಲ್ಯಾಣ್ ಎಂದಾಕ್ಷಣ ಗಾಸಿಪ್ ಪ್ರಿಯರಿಗೆ ಚರ್ಚೆಗೆ ಗ್ರಾಸವಾಗೋದೇ ಅವರ ಮದುವೆ ಮತ್ತು ಡಿವೋರ್ಸ್ ವಿಚಾರ. ಅದಕ್ಕೆಲ್ಲಾ ಪವನ್ ಕಲ್ಯಾಣ್ ಖಡಕ್ ಉತ್ತರ ಕೊಟ್ಟಿದ್ದಾರೆ. ವೈಯಕ್ತಿಕ ಜೀವನವನ್ನ ರಾಜಕೀಯಕ್ಕೆ ಹೋಲಿಸಿ ಮಾತನಾಡುವವರಿಗೂ ತಿರುಗೇಟು ನೀಡಿದ್ದಾರೆ. ಇದೀಗ ಬಾಲಯ್ಯ ನಡೆಸಿ ಕೊಡುವ ಅನ್‌ಸ್ಟಾಪೆಬಲ್ (Unstoppable Show) ಶೋನಲ್ಲಿ ಮೂರು ಮದುವೆಯಾಗಿದ್ದು ಯಾಕೆ? ಅದೆಲ್ಲ ಹೇಗಾಯಿತು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

    ನಾನು ಜೀವನದಲ್ಲಿ ಮದುವೆಯನ್ನೇ ಆಗಬಾರದು ಎಂದು ಯೋಚಿಸಿದ್ದೆ. ಒಂಟಿಯಾಗಿರಬೇಕು ಎಂದು ಅಂದುಕೊಂಡಿದ್ದೆ, ಈಗ ಹಿಂದುರುಗಿ ನೋಡಿದರೆ ಇದು ನಾನೇನಾ ಅನ್ನಿಸುತ್ತದೆ. ಮೊದಲು ಮದುವೆಯಾದೆ ಹೊಂದಾಣಿಕೆ ಆಗಲಿಲ್ಲ, ಎರಡನೇಯದು ಇದೇ ರೀತಿ ಆಯ್ತು. ಪ್ರತಿ ಬಾರಿಯೂ ಭಿನ್ನಾಭಿಪ್ರಾಯಗಳು ಬೆಳೆಯುತ್ತಿತ್ತು. ಕೊನೆಗೆ ಮೂರನೇ ಬಾರಿ ಮದುವೆಯಾಗಬೇಕಾಯ್ತು. ಮೂರು ಮದುವೆಯಾದೆ ಅಂತಾರಲ್ಲ. ನಾನೇನು ಮೂರು ಮದುವೆಯನ್ನ ಒಟ್ಟಿಗೆ ಆಗಿದ್ದೇನಾ? ಡಿವೋರ್ಸ್ ಪಡೆದ ಬಳಿಕ ತಾನೇ ಮದುವೆ ಆಗಿದ್ದು, ನಾನೇನು ಮದುವೆಯ ವ್ಯಾಮೋಹದಿಂದ ಆಗಿದ್ದಲ್ಲ. ರಾಜಕೀಯದಲ್ಲಿರುವ ಕಾರಣ ಕೆಲವರಿಗೆ ಇದೇ ನನ್ನ ವಿರುದ್ಧದ ಅಸ್ತ್ರವಾಗಿದೆ. ಇದನ್ನೂ ಓದಿ:ಅಭಿಮಾನಿಗೆ ಪ್ರಪೋಸ್ ಮಾಡಿದ `ಪುಷ್ಪ’ ನಟಿ ರಶ್ಮಿಕಾ ಮಂದಣ್ಣ

    ಹೊಂದಾಣಿಕೆಯ ಕೊರತೆಯಿಂದ ಮೂರು ಸಂಬಂಧಗಳು ಮುರಿದು ಬಿತ್ತು. ನಾನು ಒಂದೇ ಸಲಕ್ಕೆ ಮೂರು ಸಲ ಮದುವೆಯಾಗಿಲ್ಲ ಎಂದು ಪವನ್ ಕಲ್ಯಾಣ್‌ ಖಡಕ್ ಉತ್ತರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k