Tag: ಬಾಲಯ್ಯ

  • ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ‘ಗಾಡ್ ಆಫ್ ಮಾಸ್’ ನಂದಮೂರಿ ಬಾಲಕೃಷ್ಣ (Nandamuri Balakrishna) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಯ್ಯ ಜನ್ಮದಿನಕ್ಕೆ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಅಖಂಡ-2’ (Akhanda-2) ಟೀಸರ್ ಬಿಡುಗಡೆ ಮಾಡಲಾಗಿದೆ. ನಂದಿ ಮುಖ ಇರುವ ತ್ರಿಶೂಲ ಹಿಡಿದು ಮಾಸ್ ಅವತಾರದಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ.

    ಹಿಮದಿಂದ ಆವೃತವಾದ ಕೈಲಾಸಂ, ಭರ್ಜರಿ ಆಕ್ಷನ್ಸ್, ಎಸ್ ಥಮನ್ ಮ್ಯೂಸಿಕ್ ‘ಅಖಂಡ-2’ ಟೀಸರ್‌ನ ಹೈಲೆಟ್ಸ್ ಆಗಿದೆ. ಸಾಧು ಗೆಟಪ್‌ನಲ್ಲಿ ಎಂಟ್ರಿ ಕೊಡುವ ಬಾಲಯ್ಯ ದುಷ್ಟರನ್ನು ಸಂಹಾರ ಮಾಡುವ ರೀತಿಯೂ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತದೆ. ಇದನ್ನೂ ಓದಿ:

    ಬಾಲಕೃಷ್ಣ ನಟನೆಯ `ಅಖಂಡ’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಬಾಲಯ್ಯ (Balayya) ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವೇ ‘ಅಖಂಡ-2′ ಆಗಿದೆ. `ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಶ್ರೀನು ಅವರೇ `ಅಖಂಡ-2′ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. `ಅಖಂಡ-2′ ಸಿನಿಮಾದಲ್ಲಿಯೂ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:

    ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

    ಅಖಂಡ-2 ಸಿನಿಮಾದ ಚಿತ್ರೀಕರಣ ಸದ್ಯ ಜಾರ್ಜಿಯಾದ ಗ್ರ‍್ಯಾಂಡ್ ಲೊಕೇಲ್ಸ್‌ನಲ್ಲಿ ನಡೆಯುತ್ತಿದೆ. ದಸರಾ ವಿಶೇಷ ದಿನವಾದ ಸೆ. 25ರಂದು ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಇದನ್ನೂ ಓದಿ:

    ಹೈಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್‌ ಫೈಟ್ ಚಿತ್ರಕ್ಕಿರಲಿದೆ.

  • ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಅಜಿತ್ ಕುಮಾರ್, ಬಾಲಯ್ಯಗೆ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

    ಟ ಅಜಿತ್ ಕುಮಾರ್ (Ajith Kumar), ಬಾಲಯ್ಯ, ಸಿಂಗರ್ ಅರಿಜಿತ್ ಸಿಂಗ್, ಶೇಖರ್ ಕಪೂರ್ ಸೇರಿದಂತೆ ಹಲವು ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು (ಏ.28) ಪದ್ಮ ಪ್ರಶಸ್ತಿ ಪ್ರದಾನ (Padma Awards 2025) ಮಾಡಿದ್ದಾರೆ. ಇದನ್ನೂ ಓದಿ:ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?

    ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ತಮಿಳು ನಟ ಅಜಿತ್ ಕುಮಾರ್ ಮತ್ತು ತೆಲುಗು ನಟ ಬಾಲಯ್ಯ (Balayya) ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.

    ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:

    ದಿವಂಗತ ಗಾಯಕ ಪಂಕಜ್ ಉದಾಸ್- ಪದ್ಮಭೂಷಣ

    ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್-ಪದ್ಮಭೂಷಣ

    ಕನ್ನಡದ ನಟ ಅನಂತ್ ನಾಗ್- ಪದ್ಮಭೂಷಣ

    ನಟ ಅಶೋಕ್ ಲಕ್ಷ್ಮಣ್ ಸರಾಫ್- ಪದ್ಮಶ್ರೀ

    ನಟನಾ ತರಬೇತುದಾರ, ರಂಗ ನಿರ್ದೇಶಕ ಬ್ಯಾರಿ ಗಾಡ್ಫ್ರೇ ಜಾನ್-ಪದ್ಮಶ್ರೀ

    ಗಾಯಕ ಜಸ್ಪಿಂದರ್ ನರುಲಾ- ಪದ್ಮಶ್ರೀ

    ಗಾಯಕಿ ಅಶ್ವಿನಿ ಭಿಡೆ-ದೇಶಪಾಂಡೆ-ಪದ್ಮಶ್ರೀ

    ಸಂಗೀತ ಸಂಯೋಜಕ ರಿಕಿ ಗ್ಯಾನ್ ಕೇಜ್-ಪದ್ಮಶ್ರೀ

    ಜಾನಪದ ಗಾಯಕ ಭೇರು ಸಿಂಗ್ ಚೌಹಾಣ್-ಪದ್ಮಶ್ರೀ

    ಭಕ್ತಿ ಗಾಯಕ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ-ಪದ್ಮಶ್ರೀ

    ಜಾನಪದ ಸಂಗೀತಗಾರ ಜೋಯ್ನಾಚರಣ್ ಬಠಾರಿ-ಪದ್ಮಶ್ರೀ

    ಶಾಸ್ತ್ರೀಯ ಗಾಯಕಿ ಕೆ ಓಮನಕುಟ್ಟಿ ಅಮ್ಮ-ಪದ್ಮಶ್ರೀ

    ಗಾಯಕ ಮಹಾಬೀರ್ ನಾಯಕ್ – ಪದ್ಮಶ್ರೀ

    ಮಮತಾ ಶಂಕರ್ – ಪದ್ಮಶ್ರೀ

  • Akhanda 2: ಬಾಲಯ್ಯಗೆ ಆದಿ ಪಿನಿಸೆಟ್ಟಿ ವಿಲನ್

    Akhanda 2: ಬಾಲಯ್ಯಗೆ ಆದಿ ಪಿನಿಸೆಟ್ಟಿ ವಿಲನ್

    ಟ ಬಾಲಯ್ಯ (Balayya) ಅವರು ‘ಅಖಂಡ ಪಾರ್ಟ್ 2’ (Akhanda 2) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ‘ಪಾರ್ಟ್ 2’ ಮತ್ತಷ್ಟು ಚೆನ್ನಾಗಿ ಮೂಡಿ ಬರಬೇಕು ಎಂದು ತೆರೆಮರೆಯಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಹೀಗಿರುವಾಗ ಬಾಲಯ್ಯ ಮುಂದೆ ಖಳನಟನಾಗಿ ಅಬ್ಬರಿಸಲು ಆದಿ ಪಿನಿಸೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

    ತೆಲುಗಿನಲ್ಲಿ ಹೀರೋ ಮತ್ತು ವಿಲನ್ ಎರಡು ಶೇಡ್‌ಗಳಲ್ಲಿ ಗುರುತಿಸಿಕೊಂಡವರು ಆದಿ ಪಿನಿಸೆಟ್ಟಿ. ಈಗ ‘ಅಖಂಡ 2’ ಚಿತ್ರತಂಡಕ್ಕೆ ಅವರು ಎಂಟ್ರಿ ಕೊಟ್ಟಿದ್ದಾರೆ. ಚಿತ್ರೀಕರಣದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಬಾಲಯ್ಯ ಹಾಗೂ ಆದಿ ಇಬ್ಬರ ಜುಗಲ್‌ಬಂದಿಯ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದೆ.‌ ಇದನ್ನೂ ಓದಿ:ಮಾಜಿ ಸಿಎಂ ಪುತ್ರಿಗೆ ವಂಚನೆ- 4 ಕೋಟಿ ಪಂಗನಾಮ ಹಾಕಿದ ಖದೀಮರು

    ಇನ್ನೂ ವಿಲನ್ ಪಾತ್ರ ಸ್ಟ್ರಾಂಗ್ ಇದ್ರೆನೇ ಹೀರೋಗೂ ಗತ್ತು. ಹಾಗಾಗಿ ಸ್ಟಾರ್ ಕಲಾವಿದ ಆದಿ ಅವರನ್ನೇ ತಂಡ ಆಯ್ಕೆ ಮಾಡಿದ್ದಾರೆ. ಬಾಲಯ್ಯ ಸಿನಿಮಾದಲ್ಲಿ ಆದಿ ಇದ್ದಾರೆ ಎಂಬ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ಬಗೆಗಿನ ನಿರೀಕ್ಷೆ ಡಬಲ್‌ ಆಗಿದೆ. ಇದನ್ನೂ ಓದಿ:ಮಹಿಳೆಯ ಚಪ್ಪಲಿ ಎತ್ತಿ ಕೊಟ್ಟ ಧ್ರುವ ಸರ್ಜಾ- ಆ್ಯಕ್ಷನ್ ಪ್ರಿನ್ಸ್ ಸರಳತೆಗೆ ಫ್ಯಾನ್ಸ್ ಫಿದಾ

    ಇನ್ನೂ 2021ರಲ್ಲಿ ತೆರೆಕಂಡ ಅಖಂಡ ಸೂಪರ್ ಸಕ್ಸಸ್ ಕಂಡಿತ್ತು. ಹಾಗಾಗಿ ಇದರ ಸೀಕ್ವೆಲ್ ಶೂಟಿಂಗ್ ನಡೆಯುತ್ತಿದೆ. ಇನ್ನೂ `ಅಖಂಡ 2’ನಲ್ಲಿಯೂ ಪ್ರಗ್ಯಾ ಜೈಸ್ವಾಲ್ ನಾಯಕಿಯಾಗಿದ್ದಾರೆ.

  • ಬಾಲಯ್ಯ ನಟನೆಯ ‘ಡಾಕು ಮಹಾರಾಜ್’ ಟ್ರೈಲರ್ ಔಟ್

    ಬಾಲಯ್ಯ ನಟನೆಯ ‘ಡಾಕು ಮಹಾರಾಜ್’ ಟ್ರೈಲರ್ ಔಟ್

    ತೆಲುಗು ನಟ ಬಾಲಯ್ಯ ನಟನೆಯ ‘ಡಾಕು ಮಹಾರಾಜ್’ (Daaku Maaharaaj) ಟ್ರೈಲರ್ ರಿಲೀಸ್ ಆಗಿದೆ. ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಬಾಲಯ್ಯ ಅಬ್ಬರಿಸಿದ್ದಾರೆ. ನಟನ ನಯಾ ಖದರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಆತ ನನ್ನ ಜೀವನವನ್ನೇ ನಾಶ ಮಾಡಿಬಿಟ್ಟ- ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಪೂನಂ ಕೌರ್

    ಟ್ರೈಲರ್‌ನಲ್ಲಿ ಖಳನಟ ಬಾಬಿ ಡಿಯೋಲ್‌ಗೆ ಠಕ್ಕರ್ ಕೊಟ್ಟು ಬಾಲಯ್ಯ (Balayya) ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಜೊತೆ ಪ್ರಜ್ಞಾ ಜೈಸ್ವಾಲ್, ಊರ್ವಶಿ ರೌಟೇಲಾ ಸೇರಿದಂತೆ ನಟಿಸಿದ್ದಾರೆ.

    ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಊರ್ವಶಿ ಜೊತೆಗಿನ ಬಾಲಯ್ಯ ಸಾಂಗ್ ನೋಡುಗರ ಗಮನ ಸೆಳೆದಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

  • ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ನ್ನಡತಿ ಶ್ರೀಲೀಲಾ (Sreeleela) ಅವರು ಟಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಶ್ರೀಲೀಲಾ ಅವರು ಬಾಲಯ್ಯ ನಿರೂಪಣೆಯ ಶೋಗೆ ಗೆಸ್ಟ್ ಆಗಿ ಹೋಗಿದ್ದರು. ಈ ವೇಳೆ, ಶ್ರೀಲೀಲಾಗೆ ಮದುವೆ ಮಾಡುವ ಹೊಣೆ ನನ್ನದು ಎಂದು ಬಾಲಯ್ಯ ತಿಳಿಸಿದ್ದಾರೆ.

    ಸದ್ಯ ‘ಕಿಸ್ಸಿಕ್’ ಹೀರೋಯಿನ್ ಆಗಿ ಸದ್ದು ಮಾಡುತ್ತಿರುವ ಶ್ರೀಲೀಲಾ ಅವರ ಮದುವೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನಟಿಯ ಕುರಿತು ಬಾಲಯ್ಯ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ‘ಅನ್‌ಸ್ಟಾಪೆಬಲ್ ವಿತ್ ಬಾಲಯ್ಯ’ ಕಾರ್ಯಕ್ರಮಕ್ಕೆ ನವೀನ್ ಪೋಲಿಶೆಟ್ಟಿ ಜೊತೆ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದರು. ಈ ವೇಳೆ, ಶ್ರೀಲೀಲಾ ನನ್ನ ಮಗಳಿದ್ದಂತೆ, ಆಕೆಯನ್ನು ನೋಡಿದರೆ ನನ್ನ ಮಗಳು ನೆನಪಾಗುತ್ತಾಳೆ. ತಂದೆಯ ಸ್ಥಾನದಲ್ಲಿದ್ದು, ಆಕೆಗೆ ಮದುವೆ (Wedding) ಮಾಡಿಸುವ ಜವಾಬ್ದಾರಿ ನನ್ನದು ಎಂದು ಬಾಲಯ್ಯ (Balayya) ಮಾತನಾಡಿದ್ದಾರೆ.

    ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’ ಸಿನಿಮಾದಲ್ಲಿ ಬಾಲಯ್ಯ ಮಗಳಾಗಿ ಶ್ರೀಲೀಲಾ ನಟಿಸಿದರು. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟವಿದೆ. ತೆರೆಯ ಹಿಂದೆ ಕೂಡ ತಂದೆ ಮತ್ತು ಮಗಳಂತೆಯೇ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ನಟಿಯ ಮೇಲೆ ನಂದಮೂರಿ ಬಾಲಕೃಷ್ಣಗೆ ವಿಶೇಷ ಪ್ರೀತಿಯಿದೆ.

    ಅಂದಹಾಗೆ, ಡಿ.5ರಂದು ತೆರೆಕಂಡ ‘ಪುಷ್ಪ 2’ ಸಿನಿಮಾದಲ್ಲಿ ನಟಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇನ್ನೂ ನಿತಿನ್ ಜೊತೆಗಿನ ಶ್ರೀಲೀಲಾ ನಟನೆಯ ‘ರಾಬಿನ್‌ಹುಡ್’ ಸಿನಿಮಾ ಡಿ.25ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ಡಕಾಯಿತನ ಗೆಟಪ್‌ನಲ್ಲಿ ಬಂದ ಬಾಲಯ್ಯ

    ಡಕಾಯಿತನ ಗೆಟಪ್‌ನಲ್ಲಿ ಬಂದ ಬಾಲಯ್ಯ

    ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ನಟನೆಯ ‘ಡಾಕು ಮಹಾರಾಜ್’ (Daaku Maharaaj) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಡಕಾಯಿತನ ಗೆಟಪ್‌ನಲ್ಲಿ ಬಾಲಯ್ಯ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಟೀಸರ್‌ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ತನಗಿಂತ 19 ವರ್ಷ ಚಿಕ್ಕ ಉದ್ಯಮಿ ಜೊತೆ ಅಮೀಷಾ ಪಟೇಲ್‌ ಸುತ್ತಾಟ

    ಇದು ರಾಜ್ಯವೇ ಇಲ್ಲದೇ ಯುದ್ಧ ಮಾಡಿದ ರಾಜನ ಕಥೆ. ಸಾವಿಗೆ ನಡುಕ ಹುಟ್ಟಿಸಿದ ಮಹಾರಾಜನ ಕಥೆಯಿದು ಎಂದು ಬಾಲಯ್ಯ ಅವರ ಪಾತ್ರಕ್ಕೆ ಇಂಟ್ರೊಡಕ್ಷನ್ ನೀಡಲಾಗಿದೆ. ಕಪ್ಪು ಬಣ್ಣದ ಧಿರಿಸಿನಲ್ಲಿ ಡಕಾಯಿತನ ಗೆಟಪ್‌ನಲ್ಲಿ ಖಡಕ್ ಆಗಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಾಬಿ ಡಿಯೋಲ್ (Bobby Deol) ಅವರು ವಿಲನ್ ಆಗಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತನಗಿಂತ 19 ವರ್ಷ ಚಿಕ್ಕ ಉದ್ಯಮಿ ಜೊತೆ ಅಮೀಷಾ ಪಟೇಲ್‌ ಸುತ್ತಾಟ

    ‘ಡಾಕು ಮಹಾರಾಜ್’ (Daaku Maharaaj) ಸಿನಿಮಾ ಮುಂದಿನ ಸಂಕ್ರಾಂತಿ ಜ.12ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ.

  • ‘ಅಖಂಡ 2’ ಚಿತ್ರಕ್ಕಾಗಿ ಬೋಯಪತಿ ಶ್ರೀನು ಜೊತೆ ಕೈಜೋಡಿಸಿದ ಬಾಲಯ್ಯ

    ‘ಅಖಂಡ 2’ ಚಿತ್ರಕ್ಕಾಗಿ ಬೋಯಪತಿ ಶ್ರೀನು ಜೊತೆ ಕೈಜೋಡಿಸಿದ ಬಾಲಯ್ಯ

    ನಂದಮೂರಿ ಬಾಲಕೃಷ್ಣ ‌(Nandamuri Balakrishna) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಮ್ಮೆ ಡೈರೆಕ್ಟರ್ ಬೋಯಪತಿ ಶ್ರೀನು ಜೊತೆ ನಟ ಕೈಜೋಡಿಸಿದ್ದಾರೆ. ಇಂದು (ಅ.16) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ‘ಅಖಂಡ 2’ (Akanda 2) ಮುಹೂರ್ತ ಕಾರ್ಯಕ್ರಮ ಜರುಗಿದೆ. ಇದನ್ನೂ ಓದಿ:ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

    ಬಾಲಯ್ಯ, ಪ್ರಾಗ್ಯಾ ನಟನೆಯ ‘ಅಖಂಡ 2’ ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಿತ್ತು. ಮತ್ತೊಮ್ಮೆ ವಿಭಿನ್ನ ಕಥೆಯ ಮೂಲಕ ಬೋಯಪತಿ ಶ್ರೀನು, ಬಾಲಯ್ಯ ರೆಡಿಯಾಗಿದ್ದಾರೆ. ಸದ್ಯ ‘ಅಖಂಡ 2’ ಚಿತ್ರದ ಕುರಿತು ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ಅದಕ್ಕೆ ತಾಂಡವ ಎಂದು ಅಡಿಬರಹ ನೀಡಲಾಗಿದೆ.

    ಅಂದಹಾಗೆ, 2021ರಲ್ಲಿ ಅಖಂಡ ಸಿನಿಮಾದಲ್ಲಿ ಬಾಲಯ್ಯ ಡಬಲ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಬಾಲಯ್ಯಗೆ ಪ್ರಾಗ್ಯಾ ಜೋಡಿಯಾಗಿ ನಟಿಸಿದ್ದರು. ಈ ಚಿತ್ರ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಇದರ ಸೀಕ್ವೆಲ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

  • ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಅಮ್ಮನ ಜೊತೆ ಪೆದ್ದಮ್ಮನ ಆಶೀರ್ವಾದ ಪಡೆದ ನಟಿ ಆರಾಧನಾ

    ಕನಸಿನ ರಾಣಿ ಮಾಲಾಶ್ರೀ (Malashri) ಮಗಳ ಜೊತೆ ಪೆದ್ದಮ್ಮನ ದರ್ಶನ ಮಾಡಿದ್ದಾರೆ. ಹೈದ್ರಾಬಾದ್‍ನ ಜುಬಲಿ ಹಿಲ್ಸ್‍ನಲ್ಲಿರುವ ಪೆದ್ದಮ್ಮ ದೇವಸ್ಥಾನ ಅಲ್ಲಿನ ಸುಪ್ರಸಿದ್ಧ ದೇವಸ್ಥಾನದಲ್ಲೊಂದು. ಕರ್ನಾಟಕದಲ್ಲಿ ಮೆಜೆಸ್ಟಿಕ್‍ನಲ್ಲಿರುವ ಅಣ್ಣಮ್ಮ ದೇವಿಯ ಮೇಲಿನ ನಂಬಿಕೆಯಂತೆ ಹೈದ್ರಾಬಾದ್‍ನಲ್ಲಿ ಪೆದ್ದಮ್ಮ ದೇವಿಯ ಮೇಲೆ ಭಕ್ತರ ಅಪಾರ ನಂಬಿಕೆ ಇದೆ. ಹೀಗಾಗಿ ಗೌರಿ ಹಬ್ಬದ ದಿನ ಅಲ್ಲಿನ ಪೆದ್ದಮ್ಮನ ದರ್ಶನ ಮಾಡಿದ್ದಾರೆ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ (Aradhana Ram).

    ಬಾಲಯ್ಯರ 50ನೇ ವರ್ಷದ ಸಿನಿಮಾ ಜರ್ನಿ ವಿಶೇಷವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮಕ್ಕೆ ಮಾಲಾಶ್ರೀ ಮಗಳ ಸಮೇತ ಅತಿಥಿಯಾಗಿ ತೆರಳಿದ್ದರು. ಹಲವು ದಿನ ಅಲ್ಲೇ ಉಳಿದಿದ್ದಾರೆ. ಅಷ್ಟಕ್ಕೂ ಆಂಧ್ರನಾಡು ಮಾಲಾಶ್ರೀಯ ತವರುಮನೆ ಕೂಡ. ಹೀಗಾಗಿ ಆಂಧ್ರಕ್ಕೆ ತೆರಳಿದ್ದ ಮಾಲಾಶ್ರೀ ಅಲ್ಲಿನ ಸಹೋದ್ಯೋಗಿ ಆಪ್ತರನ್ನೆಲ್ಲಾ ಭೇಟಿಯಾಗಿದ್ದಾರೆ. ಈ ವೇಳೆ ಅಲ್ಲಿಯೇ ಇರುವ ಪೆದ್ದಮ್ಮ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಇದನ್ನೂ ಓದಿ: `ಡಿ’ಗ್ಯಾಂಗ್ ವಿರುದ್ಧ ಪ್ರಮುಖ ಸಾಕ್ಷ್ಯವಾದ ಮಣ್ಣು – ದೇಶದಲ್ಲೇ ಮೊದಲ ಪ್ರಕರಣ!

    `ಕಾಟೇರ’ ಚಿತ್ರದ ಮೂಲಕ ಮಾಲಾಶ್ರೀ ಮಗಳು ಆರಾಧನಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಬಳಿಕ ಆರಾಧನಾ ಒಳ್ಳೆಯ ಅವಕಾಶಕ್ಕಾಗಿ ಕಾದಿದ್ದಾರೆ. ಈ ನಡುವೆ ಟಾಲಿವುಡ್‍ನಿಂದಲೂ ಆರಾಧನಾಗೆ ಸಿನಿಮಾ ಆಫರ್ ಬರ್ತಿರೋ ಸುದ್ದಿಯಿತ್ತು. ಬಹುಶಃ ಹೈದ್ರಾಬಾದ್‍ಗೆ ತೆರಳಿರುವ ಮಾಲಾಶ್ರೀ ಮಗಳ ಸಿನಿಮಾ ಕರಿಯರ್ ವಿಚಾರವಾಗಿಯೂ ಚರ್ಚಿಸಿರುವ ಸಾಧ್ಯತೆ ಇದೆ. ಹಲವು ಸ್ಕ್ರಿಪ್ಟ್‍ಗಳನ್ನ ಕೇಳಿರುವ ಸುದ್ದಿಯೂ ಬಂದಿದೆ. ಶ್ರೀಘ್ರದಲ್ಲೇ ಆರಾಧನಾ ಟಾಲಿವುಡ್‍ಗೆ ಎಂಟ್ರಿ ಕೊಟ್ರೂ ಆಶ್ಚರ್ಯವೇನಿಲ್ಲ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

  • ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ತೆಲುಗು ಚಿತ್ರರಂಗದ ನಂದಮೂರಿ ಕುಟುಂಬದಿಂದ ಮತ್ತೊಂದು ಕುಡಿ ಸಿನಿರಂಗ ಪ್ರವೇಶಿಸಿದೆ. ನಂದಮೂರಿ ತಾರಕ್ ರಾಮ್ ಮೊಮ್ಮಗ ಹಾಗೂ ಬಾಲಕೃಷ್ಣ (Balayya) ಅವರ ಪುತ್ರ ಮೋಕ್ಷಜ್ಞ (Mokshagna) ತಾತ-ತಂದೆಯಂತೆ ಚಿತ್ರರಂಗದಲ್ಲಿ ಹೆಸರು ಮಾಡುವ ಉತ್ಸಾಹದಿಂದ ಬಣ್ಣ ಹಚ್ಚಿದ್ದಾರೆ. ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಜ್ಞ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಸ್ಟೈಲೀಶ್ ಲುಕ್ ನಲ್ಲಿ ಮೋಕ್ಷಜ್ಞ ಕಾಣಿಸಿಕೊಂಡಿದ್ದು, ಬಾಲಯ್ಯ ಪುತ್ರನ ಎಂಟ್ರಿಯನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.

    ಮೋಕ್ಷಜ್ಞ ಹೊಸ ಸಿನಿಮಾವನ್ನು ‘ಹನುಮ್ಯಾನ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. SLV ಸಿನಿಮಾಸ್ ಹಾಗೂ ಲೆಜೆಂಡ್ ಪ್ರೊಡಕ್ಷನ್ ಬ್ಯಾನರ್ ನಡಿ ದಸರಾ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟಿದ್ದ ನಿರ್ಮಾಪಕ ಸುಧಾಕರ್ ಚೆರುಕುರಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಎಂ ತೇಜಸ್ವಿನಿ ನಂದಮೂರಿ ಚಿತ್ರ ಪ್ರೆಸೆಂಟ್ ಮಾಡುತ್ತಿದ್ದಾರೆ.

    ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ವರ್ಮಾ, ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ನನಗೆ ದೊಡ್ಡ ಜವಾಬ್ದಾರಿಯಾಗಿದೆ. ಬಾಲಯ್ಯ ಅವರು ನನ್ನ ಮೇಲೆ ಹಾಗೂ ಕಥೆ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿ ಕೊಟ್ಟಿದ್ದಾರೆ. ಇದಕ್ಕಾಗಿ ಬಾಲಯ್ಯ ಅವರಿಗೆ ಕೃತಜ್ಞನಾಗಿರುತ್ತೇನೆ. ಈ ಕಥೆ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ. ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ನ ಒಂದು ಭಾಗವಾಗಿದೆ ಎಂದಿದ್ದಾರೆ.

    ಬಾಲಯ್ಯ ಪುತ್ರ ಮೋಕ್ಷಜ್ಞ ಯಾವಾಗ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಾರೆ? ಅವರನ್ನು ಲಾಂಚ್ ಮಾಡುವ ನಿರ್ದೇಶಕ ಯಾರು ಎಂಬ ಪ್ರಶ್ನೆಗಳು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದ್ದವು. ಇದೀಗ ‘ಹನುಮಾನ್’ ಸಿನಿಮಾದ ಮೂಲಕ ಪ್ರಶಾಂತ್, ತಮ್ಮದೇ ಒಂದು ಸಿನಿಮ್ಯಾಟಿಕ್ ಯೂನಿವರ್ಸ್‌ ಅನ್ನು ಕ್ರಿಯೆಟ್ ಮಾಡಿಕೊಂಡಿದ್ದಾರೆ. ನಂದಮೂರಿ ಮೋಕ್ಷಜ್ಞ ಸಿನಿಮಾ ಕೂಡ ಅದೇ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಮೂಡಿಬರಲಿದೆ.

  • ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಯ್ಯ ಪುತ್ರ ಮೋಕ್ಷಜ್ಞ

    ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಬಾಲಯ್ಯ ಪುತ್ರ ಮೋಕ್ಷಜ್ಞ

    ತೆಲುಗಿನ ನಟ ಬಾಲಯ್ಯ (Nandamuri Balakrishna) ಪುತ್ರ ಮೋಕ್ಷಜ್ಞ (Mokshagna) ಆಗಾಗ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಇದೀಗ ಮೋಕ್ಷಜ್ಞ ಇಂದು (ಸೆ.6) ಹುಟ್ಟುಹಬ್ಬ ಹಿನ್ನೆಲೆ ಅವರ ಫಸ್ಟ್ ಲುಕ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ.

    ಸಿನಿಮಾಗೆ ಬೇಕಾದ ಹಾಗೆ ಫಿಟ್ ಆಗಿ ಮೋಕ್ಷಜ್ಞ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಸ್ಲಿಮ್ & ಸ್ಮಾರ್ಟ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸಿಂಬಾ ಎಂದು ಟೈಟಲ್ ಇಡಲಾಗಿದೆ. ಮೋಕ್ಷಜ್ಞಗೆ ‘ಹನುಮಾನ್’ ಡೈರೆಕ್ಟರ್ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡ ‘ಜಿಗ್ರಾ’ ನಟಿ ಆಲಿಯಾ ಭಟ್

    ಇನ್ನೂ ಸಿನಿಮಾಗಾಗಿ ಮೋಕ್ಷಜ್ಞ ಡ್ಯಾನ್ಸ್, ಆ್ಯಕ್ಷನ್ ದೃಶ್ಯಗಳಿಗಾಗಿ ಸಾಕಷ್ಟು ತರಬೇತಿ ಪಡೆದುಕೊಂಡೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೆ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅಕ್ಟೋಬರ್‌ನಲ್ಲಿ ಬಾಲಯ್ಯ ಪುತ್ರನ ಚೊಚ್ಚಲ ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.