Tag: ಬಾಲಮಂದಿರ

  • ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು

    ಬಾಲಕಿಯರ ಮೇಲೆ ಬಾಲಮಂದಿರದ ಅಧೀಕ್ಷಕಿಯಿಂದಲೇ ಹಲ್ಲೆ, ದೌರ್ಜನ್ಯ – ಕ್ರಿಮಿನಲ್ ಕೇಸ್ ದಾಖಲು

    ಚಿಕ್ಕಬಳ್ಳಾಪುರ: ನೊಂದ ಬಾಲಕಿಯರು, ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬಾಳಿಗೆ ಬೆಳಕಾಗಬೇಕಾದ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯೇ ಅವರ ಪಾಲಿಗೆ ವಿಲನ್ ಆಗಿದ್ದಾರೆ. ಬಾಲಕಿಯರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದ, ಅಧೀಕ್ಷಕಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗಿದೆ.

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಸರ್ಕಾರಿ ಬಾಲಕಿಯರ ಮಂದಿರವೊಂದಿದೆ. ಚಿಕ್ಕಬಳ್ಳಾಪುರ ನಗರದ .ಬಿಬಿ ರಸ್ತೆಯಲ್ಲಿ ಮಂದಿರ ಇದೆ. ಇದೆ ಬಾಲಕಿಯರ ಮಂದಿರ ಈಗ ಬಾಲಕಿಯರಿಗೆ ನರಕವಾಗಿದೆ. ಬಾಲಮಂದಿರಕ್ಕೆ ಬರುವ ನೊಂದ ಬಾಲಕಿಯರಿಗೆ ಧೈರ್ಯ ಹೇಳುವುದರ ಬದಲು ಬಾಲಕಿಯರಿಗೆ ಸಕಾಲಕ್ಕೆ ಅನ್ನ ಆಹಾರ ನೀಡದೆ, ದೈಹಿಕ ಕಿರುಕುಳ, ಮಾನಸಿಕ ಕಿರುಕುಳ ದೈಹಿಕ ಹಲ್ಲೆ, ನಡೆಸಿ ಕಿಟಕಿಯ ಸರಳುಗಳಿಗೆ ಕಟ್ಟಿ ಹಾಕುವುದು, ಕೂಡಿ ಹಾಕುವುದು, ಬರೆ ಹಾಕಿರುವ ಪ್ರಕರಣಗಳು ಬಯಲಾಗಿವೆ.

    ಸ್ವತಃ ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ ಬಾಲಕಿಯರಿಗೆ ಸಾಂತ್ವನ ಹೆಳುವುದರ ಬದಲು ಕ್ಷುಲ್ಲಕ ಕಾರಣಕ್ಕೆ ಬಾಲಕಿಯರನ್ನು ಕಿಟಕಿ ಸರಳು, ಕಂಬಗಳಿಗೆ ಕಟ್ಟಿಹಾಕಿ, ರೂಮ್‌ಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ವತಃ ನೊಂದ ಬಾಲಕಿಯರು ಅವಲತ್ತುಕೊಂಡಿದ್ದರು. ಮಾಹಿತಿ ಅರಿತ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೂರು ಆಲಿಸಿ ತನಿಖೆಗೆ ಸೂಚಿಸಿದರು.

    ಆಗ ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರ ಕರ್ಮಕಾಂಡ ಬಯಲಾಗಿವೆ. ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿಯಾಗಿರುವ ಮಮತಾ ಹಾಗೂ ಬಾಲಮಂದಿರದ ಸಹಾಯಕಿ ಸರಸ್ವತಮ್ಮ ಬಾಲಕಿಯರಿಗೆ ಚಿತ್ರಹಿಂಸೆ ನೀಡಿ, ದೈಹಿಕ ಹಲ್ಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕ ಸಂಘದ ಅಧ್ಯಕ್ಷರಾದ ಪಿ.ಎನ್ ರವೀಂದ್ರರವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವತಾಜ್‍ಬಿ, ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಇದರಿಂದ ಮಹಿಳಾ ಠಾಣೆಯ ಪೊಲೀಸರು ಮಮತಾ ಹಾಗೂ ಸರಸ್ವತಿ ವಿರುದ್ಧ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಾಯ್ದೆ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಮಮತಾರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

  • ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ಕಾರವಾರ: ಮದ್ಯವ್ಯಸನಿ ದಂಪತಿ ಬಾಲಮಂದಿರದ ಆವರಣದಲ್ಲಿ ಮೂರು ತಿಂಗಳ ಹಸುಗೂಸನ್ನು ಬಿಟ್ಟು ಹೋದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಬಾಲಕರ ಬಾಲಮಂದಿರ ಆವರಣದಲ್ಲಿ ಮಗು ಅಳುವ ಧ್ವನಿ ಕೇಳಿಸಿದೆ. ಬಾಲಮಂದಿರದ ಮೇಲ್ವಿಚಾರಕರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಗು ಪತ್ತೆಯಾಗಿದೆ. ಬಾಲಮಂದಿರದ ಹೊರಗೆ ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಇಡಲಾಗಿತ್ತು. ಇದನ್ನೂ ಓದಿ: ನಮ್ಮ ಮುಖ್ಯಮಂತ್ರಿ ದುರ್ಬಲರು.. ಅಮಿತ್ ಶಾ ಮಾತಿಗೆ ಕಿಮ್ಮತ್ತಿಲ್ಲ- ಸಿದ್ದರಾಮಯ್ಯ ವ್ಯಂಗ್ಯ

    ತಕ್ಷಣ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ ಬಾಲಮಂದಿರದ ಮೇಲ್ವಿಚಾರಕರು, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷೆ ಅನಿತಾ ಪರ್ವತೇಕರ್ ಮತ್ತು ಸದಸ್ಯೆ ಅಂಜನಾ ಭಟ್ ಅವರಿಗೂ ಮಾಹಿತಿ ನೀಡಿದ್ದಾರೆ.

    ನಂತರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೋಡಿ ಪಾಲಕರನ್ನು ಪತ್ತೆ ಹಚ್ಚಲಾಗಿದ್ದು, ದಂಪತಿಗಳಿಬ್ಬರೂ ಮದ್ಯವ್ಯಸನಿಗಳು ಎಂದು ತಿಳಿದುಬಂದಿದೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರಕ್ಕೆ ಮಗುವನ್ನು ಒಪ್ಪಿಸಲಾಗಿದೆ. ಇದನ್ನೂ ಓದಿ: ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ರೆ, ಅಷ್ಟೂ ಆಸ್ತಿ ದಾನ ಮಾಡ್ತೀನಿ – ಸಿ.ಟಿ ರವಿ

    Live Tv
    [brid partner=56869869 player=32851 video=960834 autoplay=true]

  • ಬಾಲಮಂದಿರದ ಅಪ್ರಾಪ್ತೆ ಅತ್ಯಾಚಾರ ಪ್ರಕರಣ- ಮೂವರ ಬಂಧನ

    ಬಾಲಮಂದಿರದ ಅಪ್ರಾಪ್ತೆ ಅತ್ಯಾಚಾರ ಪ್ರಕರಣ- ಮೂವರ ಬಂಧನ

    ರಾಯಚೂರು: ಜಿಲ್ಲೆಯ ಬಾಲಮಂದಿರದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಾಲಮಂದಿರದ ಸೆಕ್ಯೂರಿಟಿ ಗಾರ್ಡ್ ಸಿದ್ದಯ್ಯ ಬಂಧಿತ ಆರೋಪಿ. ಪ್ರಕರಣದಲ್ಲಿ ಆರೋಪಿಗೆ ಸಹಕಾರ ನೀಡಿದ ಹಿನ್ನೆಲೆ ಅಡುಗೆ ಸಹಾಯಕಿ ಕಮಲಮ್ಮ ಹಾಗೂ ಪ್ರಕರಣದ ಬಗ್ಗೆ ಮಾಹಿತಿ ತಿಳಿದಾಗಲೂ ಕ್ರಮಕ್ಕೆ ಮುಂದಾಗದ ಬಾಲಮಂದಿರದ ಅಧೀಕ್ಷಕ ಸೈಯದ್ ಪಾಷಾ ಅವರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಸಿದ್ದಯ್ಯ ನವಂಬರ್ 11ರಂದು ಬಾಲಮಂದಿರದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಬಗ್ಗೆ ತಿಳಿದ ವಿದ್ಯಾರ್ಥಿನಿಯ ಅಣ್ಣ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಜನವರಿ 30ರಂದು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

    ಪ್ರಕರಣ ದಾಖಲಾಗುತ್ತಿದ್ದಂತೆ ಬಾಲಮಂದಿರಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹಾಗೂ ಎಸ್‍ಪಿ ಡಾ. ಸಿ.ಬಿ.ವೇದಮೂರ್ತಿ ಪರಿಶೀಲನೆ ನಡೆಸಿದ್ದರು. ಬಾಲಮಂದಿರದ ಅಧೀಕ್ಷಕ ಸೈಯದ್ ಪಾಷಾನನ್ನ ಅಮಾನತುಗೊಳಿಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುಪ್ರಸಾದ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರು.

  • ಬಾಲ ಮಂದಿರದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್

    ಬಾಲ ಮಂದಿರದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಸೆಕ್ಯೂರಿಟಿ ಗಾರ್ಡ್

    – ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರು ಅಧಿಕಾರಿಗಳ ಅಮಾನತು

    ರಾಯಚೂರು: ಬೇಲಿಯೆ ಎದ್ದು ಹೊಲ ಮೇಯ್ದಂತೆ ಅನ್ನೋ ಹಾಗೆ ಬಾಲಕಿಯರನ್ನು ರಕ್ಷಣೆ ಮಾಡಬೇಕಾದ ರಾಯಚೂರಿನ ಸರ್ಕಾರಿ ಬಾಲಮಂದಿರದ ಓರ್ವ ಸೆಕ್ಯೂರಿಟಿ ಗಾರ್ಡ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಜಿಲ್ಲೆಯ ಬಾಲಮಂದಿರವೊಂದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದಯ್ಯ ಅತ್ಯಾಚಾರ ಎಸೆಗಿದ ಆರೋಪಿ. ಸಿದ್ದಯ್ಯ ನವೆಂಬರ್ 11ರಂದು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಎಸ್‍ಎಸ್‍ಎಲ್‍ಸಿ ಓದುತ್ತಿರುವ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಬಾಲಕಿಯ ಅಣ್ಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿದ್ದಾರೆ. ಆದರೆ ಈ ದೂರಿನ ಬಳಿಕವೂ ಬಾಲಮಂದಿರ ಅಧಿಕಾರಿಗಳಾದ ಸಯ್ಯದ್ ಪಾಷಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗುರುಪ್ರಸಾದ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ. ಬಳಿಕ ಒತ್ತಡದ ಮೇರೆಗೆ ಕೊನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಯಚೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಬಾಲಮಂದಿರಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಅವರು ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಸಯ್ಯದ್ ಪಾಷಾ ಹಾಗೂ ಗುರುಪ್ರಸಾದ್ ಅವರನ್ನ ಅಮಾನತು ಮಾಡಿದ್ದಾರೆ. ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲಕಿಯರ ಬಾಲಮಂದಿರದಲ್ಲಿಯ ಲೋಪಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಹಾಯಕ ಆಯುಕ್ತರಿಗೆ ಸೂಚಿಸಿದ್ದು, ತನಿಖಾ ತಂಡಗಳನ್ನ ರಚಿಸಲಾಗಿದೆ.

    ಆರೋಪಿ ಸಿದ್ದಯ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಂಡಿರುವುದಾಗಿ ಎಸ್‍ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ. ನಾನಾ ಕಾರಣಕ್ಕೆ ಬಾಲಮಂದಿರ ಸೇರುವ ವಿದ್ಯಾರ್ಥಿನಿಯರಿಗೆ ರಕ್ಷಣೆ ಸಿಗಬೇಕಾದ ಸ್ಥಳದಲ್ಲೇ ರಕ್ಷಣೆ ಇಲ್ಲದಿರುವುದು ದುರಂತವೇ ಸರಿ. ಈಗಲಾದರೂ ಅಧಿಕಾರಿಗಳು ಬಾಲಮಂದಿರದ ವಾತಾವರಣವನ್ನೇ ಬದಲಿಸಬೇಕಿದೆ.

  • ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗ್ಳೂರಿನ ಬಾಲ ಮಂದಿರದ ಊಟದಲ್ಲಿ ಹಲ್ಲಿ – 103 ವಿದ್ಯಾರ್ಥಿಗಳು ಅಸ್ವಸ್ಥ

    ಬೆಂಗಳೂರು: ನಗರದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಿದ್ವಾಯಿ ಆಸ್ಪತ್ರೆ ಬಳಿ ಇರುವ ಬಾಲಮಂದಿರದಲ್ಲಿ ಭಾನುವಾರ ರಾತ್ರಿ ಊಟ ಮಾಡಿದ್ದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಾಸ್ಟೆಲ್ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ಊಟ ಮಾಡಿದ್ದಾರೆ. ಬಳಿಕ 12 ಗಂಟೆಯ ವೇಳೆಗೆ ಒಬ್ಬೊಬ್ಬರಾಗಿ ವಾಂತಿ ಮಾಡಿಕೊಂಡಿದ್ದಾರೆ. ಕೂಡಲೇ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. 103 ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಊಟಕ್ಕೆ ಬಳಸಿದ್ದ ಪದಾರ್ಥಗಳು ಹಳಸಿರಬಹುದಾ ಅಥವಾ ಹಲ್ಲಿ ಬಿದ್ದಿದ್ದರಿಂದ ಈ ರೀತಿ ಆಗಿದೆಯಾ ಎಂಬ ಮಾಹಿತಿಯನ್ನು ಕಲೆ ಹಾಕ್ತಿದ್ದೇವೆ. ಮಕ್ಕಳ ಪರಿಸ್ಥಿತಿ ನೋಡಿ ಇಂದೇ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಎಂದು ಇಂದಿರಾ ಗಾಂಧಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಇಂದಿರಾಗಾಂಧಿ ಆಸ್ಪತ್ರೆಗೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಭೇಟಿ ನೀಡಿದ್ದು, ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

    ಮಕ್ಕಳ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ವಿಜಯ್ ಶಂಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಂಟರ್ ಗ್ರೇಟೆಂಡ್ ಚೈಲ್ಡ್ ಪ್ರೊಟೆಕ್ಟ್ ಸ್ಕೀಂ ನಲ್ಲಿ ಬಾಲಮಂದಿರ ನಡೆಯುತ್ತಿದೆ. ಭಾನುವಾರ ಸಂಜೆ ಅಡುಗೆ ಮಾಡಿ ಮಕ್ಕಳು ರಾತ್ರಿ ಊಟ ಮಾಡಿದ್ದಾರೆ. ನಂತರ ಮಕ್ಕಳು ಅಸ್ವಸ್ಥರಾಗಿದ್ದಾರೆ. ತಕ್ಷಣ 103 ಜನ ಮಕ್ಕಳನ್ನೂ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಅಸ್ವಸ್ಥರಾಗಿದ್ದ ಮೂರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸದ್ಯಕ್ಕೆ 40 ಮಕ್ಕಳು ಚಿಕಿತ್ಸೆಯಲ್ಲಿ ಇದ್ದಾರೆ. ಮಕ್ಕಳನ್ನು ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ. ಅಡುಗೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ ಆಹಾರದ ಮಾದರಿಯನ್ನು ಲ್ಯಾಬ್ ಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಮುಂದಿನ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ಶಂಕರ್ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv