Tag: ಬಾಲಕ ಸಾವು

  • ಮಣ್ಣು ತುಂಬಿದ ಟ್ರ್ಯಾಕ್ಟರ್‌ ಹರಿದು 5ರ ಮಗು ಸಾವು

    ಮಣ್ಣು ತುಂಬಿದ ಟ್ರ್ಯಾಕ್ಟರ್‌ ಹರಿದು 5ರ ಮಗು ಸಾವು

    ತುಮಕೂರು: ಮಣ್ಣು ತುಂಬಿದ ಟ್ರ್ಯಾಕ್ಟರ್‌ ಹರಿದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ಪಾವಗಡ (Pavagada) ತಾಲೂಕಿನ ತಿಮ್ಮನಹಳ್ಳಿ (Timmanahalli) ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ:ಮುಸ್ಲಿಮರಿಗೆ ಮೀಸಲಾತಿ ಮೋದಿ ಕೊಟ್ರೆ ಸರಿ, ನಾವು ಕೊಟ್ರೆ ತಪ್ಪಾ? – ಯತೀಂದ್ರ

    ಮೃತ ಮಗುವನ್ನು ವರುಣ್ (5) ಎಂದು ತಿಳಿಯಲಾಗಿದೆ.

    ಮನೆಯ ಮುಂದೆ ವರುಣ್ ಆಟವಾಡುತ್ತಿದ್ದ. ಇದೇ ವೇಳೆ ಮಣ್ಣು ತುಂಬಿದ್ದ ಟ್ರ್ಯಾಕ್ಟರ್‌ ಬಂದಿದ್ದು, ಮಗುವಿನ ಮೇಲೆ ಹಾದು ಹೋಗಿದೆ. ಪರಿಣಾಮ ಮಗು ಸಾವನ್ನಪ್ಪಿದ್ದಾನೆ. ವೈಎನ್ ಹೊಸಕೋಟೆ (YN Hosakote) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ:ಸ್ನೇಹಿತರೊಂದಿಗೆ ಈಜಲು ತೆರಳಿದ್ದ SSLC ವಿದ್ಯಾರ್ಥಿ ನೀರುಪಾಲು

  • ಶಂಕಿತ ಡೆಂಗ್ಯೂ ಜ್ವರಕ್ಕೆ 2 ವರ್ಷದ ಮಗು ಬಲಿ

    ಶಂಕಿತ ಡೆಂಗ್ಯೂ ಜ್ವರಕ್ಕೆ 2 ವರ್ಷದ ಮಗು ಬಲಿ

    ದಾವಣಗೆರೆ: ಡೆಂಗ್ಯೂ ಜ್ವರಕ್ಕೆ (Dengue Fever) 2 ವರ್ಷ 11 ತಿಂಗಳ ಮಗು ಬಲಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ (Chennagiri) ತಾಲೂಕಿನ ಚಿಕ್ಕೂಡ (Chikkud) ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ಸಿನಿಮೀಯ ಸ್ಟಂಟ್ ರೀತಿಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

    ಮೃತ ಮಗುವನ್ನು ಚಿಕ್ಕೂಡ ಗ್ರಾಮದ ರಾಜಪ್ಪ ಮತ್ತು ದಿವ್ಯ ದಂಪತಿಯ 2 ವರ್ಷದ 11 ತಿಂಗಳ ನಿರ್ವಾಣ ಕುಮಾರ್ ಎಂದು ಗುರುತಿಸಲಾಗಿದೆ.

    5 ದಿನಗಳಿಂದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ಮಗುವನ್ನು ಜಿಲ್ಲೆಯ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ (Sarji Hospital Shivamogga) ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕವು ಸ್ವಲ್ಪವೂ ಚೇತರಿಕೆ ಕಾಣದೇ ಮಗು ಸಾವನ್ನಪ್ಪಿದೆ. ಗ್ರಾಮದಲ್ಲಿ ಸ್ವಚ್ಚತೆ ಇಲ್ಲದಿರುವುದರಿಂದ ಡೆಂಗ್ಯೂಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ – ಇಂದು ಮಾಜಿ ಸಚಿವ ನಾಗೇಂದ್ರ ಜಾಮೀನು ಭವಿಷ್ಯ

  • ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಬಾಲಕನಿಗೆ ಚಾಕಲೇಟ್ ಕೊಡಿಸಿ ಕೊಲೆ!

    ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ ಪುತ್ರನಿಗೆ ಚಾಕಲೇಟ್ ಕೊಡಿಸಿ ಪ್ರಿಯಕರ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರುಮಠಕಲ್ (Gurumatkal) ತಾಲೂಕಿನ ಕಾಕಲವಾರ (Kakalwar) ಗ್ರಾಮದಲ್ಲಿ ನಡೆದಿದೆ.

    ಮೃತ ಬಾಲಕನನ್ನು 11 ವರ್ಷದ ನರೇಂದ್ರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಟೆಸ್ಟ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ಬರೆದ ಜೋ ರೂಟ್‌

    ಹಲವು ವರ್ಷಗಳಿಂದ ನರೇಂದ್ರನ ತಾಯಿ ಗೋವಿಂದಮ್ಮಳ ಜೊತೆ ಅಬ್ದುಲ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಆರೋಪಿ ಅಬ್ದುಲ್ ಗೋವಿಂದಮ್ಮಳನ್ನು ಓಡಿ ಹೋಗಿ ಮದುವೆಯಾಗೋಣ ಎಂದು ಕರೆದಿದ್ದ. ಆದರೆ ಗೋವಿಂದಮ್ಮ ಮಗನಿಗಾಗಿ ಓಡಿ ಹೋಗಿ ಮದುವೆಯಾಗುವುದನ್ನು ನಿರಾಕರಿಸಿದ್ದಳು. ಆಕೆಯ ಮಗನನ್ನು ಕಿರಾಣಿ ಅಂಗಡಿಗೆ ಕರೆದುಕೊಂಡು ಹೋಗಿ ಚಾಕಲೇಟ್ ಕೊಡಿಸಿದ್ದ. ಬಳಿಕ ಅಲ್ಲಿಂದ ಬಾಲಕನನ್ನು ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದ. ಆಕೆಯನ್ನು ವರಿಸಿಕೊಳ್ಳಲು ಈ ಕೃತ್ಯವನ್ನು ಎಸಗಿದ್ದ.

    ಸೆ.30ರಂದು ಅಬ್ದುಲ್ ಬಾಲಕನನ್ನು ಕೊಲೆ ಮಾಡಿದ್ದು, ಅನುಮಾನಾಸ್ಪದವಾಗಿ ಕಂಡಿದೆ. ತನಿಖೆ ನಡೆಸಿದಾಗ ಕಿರಾಣಿ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿ ಬಾಲಕನನ್ನು ಕರೆದೊಯ್ಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನ ಸಾವು ನಡೆದ 9 ದಿನಗಳ ಬಳಿಕ ಪ್ರಕರಣ ಬೇಧಿಸಿ ಆರೋಪಿಯನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

    ಸದ್ಯ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಂಜು ವೆಡ್ಸ್ ಗೀತಾ 2 : ಮಂಗ್ಲಿ ಹಾಡಿಗೆ ಸೊಂಟ ಬಳುಕಿಸಿದ ರಾಗಿಣಿ

  • ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ!

    ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ!

    ಚಿಕ್ಕಬಳ್ಳಾಪುರ: ಬೀದಿನಾಯಿಗಳ ದಾಳಿಯಿಂದಾಗಿ ಬಾಲಕ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಸಂತೋಷ ನಗರದಲ್ಲಿ ನಡೆದಿದೆ.

    BOY DEAD

    ಕಲಂದರ್ ಖಾನ್ (11) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಇದನ್ನೂ ಓದಿ: ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

    ತಂದೆ ಬಾಬಾಜಾನ್ ಖಾನ್ ಬಳಿಗೆ ಹೋಗುತ್ತಿದ್ದಾಗ ಬಾಲಕನ ಮೇಲೆ ಏಕಾಏಕಿ 20-30 ನಾಯಿಗಳ ಹಿಂಡು ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

    DOGS ATTACK

    ಸಂತೋಷ ನಗರದ ಚಿಕನ್, ಮಟನ್ ಅಂಗಡಿಗಳ ತ್ಯಾಜ್ಯಕ್ಕಾಗಿ ಬಿಡಾಡಿ ನಾಯಿಗಳು ಹಿಂಡು ಹಿಂಡಾಗಿ ಗುಂಪು ಸೇರಲಿವೆ. ಮಾಂಸದಂಗಡಿಗಳಲ್ಲಿ ಆಹಾರಕ್ಕಾಗಿ ಬಂದು ಸೇರಿದ್ದ ನಾಯಿಗಳು ಭಾನುವಾರ ಬಾಲಕನನ್ನು ಬಲಿ ಪಡೆದಿವೆ. ಮಾಂಸದಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆ

    ದಾವಣಗೆರೆ: ನಿನ್ನೆ ನಾಪತ್ತೆಯಾಗಿದ್ದ ಏಳು ವರ್ಷದ ಬಾಲಕ ಶವವಾಗಿ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ದಾವಣಗೆರೆ ನಗರದ ಟಿವಿ ಸ್ಟೇಷನ್ ಕೆರೆಯಲ್ಲಿ ನಡೆದಿದೆ.

    7 ವರ್ಷದ ಗಣ್ಯ ಮೃತ ಬಾಲಕ. ನಗರದ ಚಿಕ್ಕಮ್ಮಣಿ ದೇವರಾಜ್ ಅರಸು ಬಡವಾಣೆಯಯ ನಿವಾಸಿ ಗಣ್ಯ, ನಿನ್ನೆ ಮಧ್ಯಾಹ್ನ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಪಕ್ಕದ ಕೆರೆಯಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.  ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ಶ್ವಾನಗಳ ಹಾವಳಿ – ರೋಗಿಗಳಲ್ಲಿ ಆತಂಕ

    ಬುದ್ಧಿಮಾಂದ್ಯ ಬಾಲಕನಾಗಿದ್ದ ಗಣ್ಯ, ತಮ್ಮ ದೊಡ್ಡಮ್ಮನ ಮನೆಯಿಂದ ತಿರುಗಾಡುತ್ತಾ ಕೆರೆಗೆ ಬಂದು ಬಿದ್ದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಕೆರೆಗೆ ಕಾಂಪೌಂಡ್ ಕಟ್ಟದ ಹಿನ್ನೆಲೆ ಬಾಲಕ ನೀರಿಗೆ ಬಿದ್ದು ಮೃತನಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ:ಕಲಿಕೆಯ ಮೆಟ್ಟಿಲಾಗಿರುವ ಅಂಗನವಾಡಿ ಕೇಂದ್ರವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕು: ಜೊಲ್ಲೆ

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬಾಲಕನ ಮೃತ ದೇಹವನ್ನು ಹೊರತೆಗೆದಿದ್ದಾರೆ. ಇನ್ನೂ ಸ್ಥಳಕ್ಕೆ ಮೇಯರ್ ಹಾಗೂ ಆಯುಕ್ತರು ಬರುವಂತೆ ಜನರು ಆಗ್ರಹಿಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಹುಟ್ಟುಹಬ್ಬದಂದೇ ಪ್ರಾಣಬಿಟ್ಟ ಬಾಲಕ!

    ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಹುಟ್ಟುಹಬ್ಬದಂದೇ ಪ್ರಾಣಬಿಟ್ಟ ಬಾಲಕ!

    ಚಾಮರಾಜನಗರ: ಹುಟ್ಟುಹಬ್ಬ ದಿನದಂದು ಸುಳ್ವಾಡಿ ಮಾರಮ್ಮ ದೇವಿಯ ದರ್ಶನ ಪಡೆಯಲು ಹೋಗಿದ್ದ ಪುಟ್ಟ ಬಾಲಕನೊಬ್ಬ ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಮೃತಪಟ್ಟಿದ್ದಾನೆ.

    ಬಿದರಿಹಳ್ಳಿಯ ಪ್ರೀತಂ (12) ಮೃತ ಬಾಲಕ. ಕೆಲವೊಬ್ಬರು ತಮ್ಮ ಜನ್ಮದಿನದಂದು ಕುಟುಂಬ ಸಮೇತ, ಇಲ್ಲವೇ ಒಬ್ಬರೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಆರೋಗ್ಯ, ಆಯಸ್ಸು ನೀಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹಾಗೆಯೇ ನಿನ್ನೆಯಷ್ಟೇ 12ನೇ ವರ್ಷಕ್ಕೆ ಕಾಲಿಟ್ಟಿದ್ದ ಪ್ರೀತಂ ಕೂಡ ಮಾರಮ್ಮ ದೇವಿ ದೇವಸ್ಥಾನಕ್ಕೆ ಹೋಗಿದ್ದನು. ಜನ್ಮದಿನ ಆಚರಿಸಿಕೊಂಡು ಖುಷಿ ಖುಷಿಯಾಗಿದ್ದ ಬಾಲಕ, ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿಬಿಟ್ಟ. ದೇವರ ಪ್ರಸಾದ ಬಾಲಕನ ಜೀವಕ್ಕೆ ಕುತ್ತು ತಂದುಬಿಟ್ಟಿತು.

    ದೇವಿ ದರ್ಶನಕ್ಕೆ ಹೋಗಿದ್ದ ಪ್ರೀತಂಗೆ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಯಾರಿಸಿದ್ದ ಪ್ರಸಾದ (ತರಕಾರಿ ಬಾತ್)ವನ್ನು ಸೇವಿಸಿದ್ದಾನೆ. ವಾಸನೆ ಬಂದಿದ್ದರೂ ಪುಟ್ಟ ಬಾಲಕ ಅದನ್ನು ಎಸೆಯಬಾರದು ಅಂತ ಸೇವಿಸಿದ್ದಾನೆ. ಪರಿಣಾಮ ಆತನಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಂ ಸಾವನ್ನಪ್ಪಿದ್ದಾನೆ.

    ಮೃತ ದೇಹವನ್ನು ಆಸ್ಪತ್ರೆಯಿಂದ ಹೊರಗೆ ತರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗ ಸಾವು ಕಣ್ಣಾರೆ ಕಂಡ ತಾಯಿ ತಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. ಜನ್ಮ ದಿನದಂದೇ ಪ್ರಾಣ ಬಿಟ್ಟೆಲ್ಲೋ ಅಂತಾ ಪ್ರೀತಂ ಮೃತದೇಹ ಹಿಡಿದು ತಾಯಿ ಅಳುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರದಿದ್ದ ಜನರ ಕಣ್ಣಲ್ಲಿ ನೀರು ತರಿಸುವಂತಿತ್ತು.

    ಪ್ರೀತಂ ತಾಯಿಯ ಕಥೆ ಒಂದು ರೀತಿಯಾದರೆ 15 ವರ್ಷ ಮಕ್ಕಳಾಗದೆ ಓಂ ಶಕ್ತಿಗೆ ಹರಕೆ ಹೊತ್ತು ಪಡೆದುಕೊಂಡ ಮಗುವನ್ನು ಕಳೆದುಕೊಂಡ ತಾಯಿಯ ದುಃಖ ಮುಗಿಲು ಮುಟ್ಟಿತ್ತು. ಶಾಂತರಾಜು ದಂಪತಿಯ ಮಗನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾವೇರಿ ಪ್ರವಾಹ ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ತಂದೆ- ಕೊಚ್ಚಿ ಹೋದ ಮಗ

    ಕಾವೇರಿ ಪ್ರವಾಹ ವೀಕ್ಷಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ತಂದೆ- ಕೊಚ್ಚಿ ಹೋದ ಮಗ

    ಚೆನ್ನೈ: ಕಾವೇರಿ ನದಿಯ ಪ್ರವಾಹ ವೀಕ್ಷಣೆಗೆ ಬಂದು, ಸೆಲ್ಫಿ ಕ್ರೇಜ್‍ನಲ್ಲಿ ಮುಳುಗಿದ್ದ ತಂದೆಯ ಕೈತಪ್ಪಿ ಮಗ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕರೂರ್‍ನ ನಿವಾಸಿ ಬಾಬು ಅವರ ಪುತ್ರ ಧನ್ವಂತ್ (4) ಮೃತಪಟ್ಟ ಬಾಲಕ. ಧನ್ವಂತ್ ತನ್ನ ತಂದೆ ಬಾಬು ಜೊತೆಗೆ ಭಾರೀ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದ್ದ ನದಿಯನ್ನು ವೀಕ್ಷಿಸಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

    ನಡೆದದ್ದು ಏನು?
    ಮಂಗಳವಾರ ಬೆಳಗ್ಗೆ ಧನ್ವಂತ್‍ನನ್ನು ಕರೆದುಕೊಂಡು ಬಾಬು ಕಾವೇರಿ ನದಿ ಪಾತ್ರದ ಪ್ರವಾಹವನ್ನು ವೀಕ್ಷಿಸಲು ವಂಗಲ್ ಮತ್ತು ಮೋಹನೂರ್ ಸೇತುವೆಗೆ ಹೋಗಿದ್ದರು. ಈ ವೇಳೆಯ ಸೇತುವೆಯ 24ನೇ ಕಂಬದ ಬಳಿ ನಿಂತ ಬಾಬು ಧನ್ವಂತ್‍ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆಗ ಧನ್ವಂತ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಭಾರೀ ರಭಸವಾಗಿ ಹರಿಯುತ್ತಿದ್ದ ನೀರಿಗೆ ಬಾಲಕ ತೇಲಿಹೋಗಿದ್ದಾನೆ. ತಂದೆ ಎಷ್ಟೇ ಪ್ರಯತ್ನಿಸಿದರೂ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ.

    ಘಟನಾ ಸ್ಥಳದಿಂದ ಓಡಿದ ಬಾಬು ಸಮೀಪದ ಪೊಲೀಸ್ ಠಾಣೆಗೆ ತೆರಳಿ, ನಡೆದ ಅವಘಡದ ಕುರಿತು ವಿವರಿಸಿದ್ದ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ 15 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಚರಣೆ ಮಾಡಿದರೂ ಧನ್ವಂತ್ ಪತ್ತೆಯಾಗಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    ಶಿವಮೊಗ್ಗ: ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಐದು ವರ್ಷದ ಬಾಲಕ ಬಿದ್ದು ಮೃತಪಟ್ಟ ಘಟನೆ ಜಿಲ್ಲೆ ಸಾಗರದಲ್ಲಿ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

    ಶಿವಪ್ಪ ನಾಯಕ ನಗರದಲ್ಲಿರುವ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಮುನೀಂದ್ರ ಎಂಬವರ ಮಗ ಭುವನ್ (5) ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಡಿಪೋ ಕಂಪೌಂಡ್ ಕಟ್ಟಲು ಗುಂಡಿ ತಗೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ತುಂಬಿದ್ದು, ಸಮೀಪದಲ್ಲಿಯೇ ಆಟವಾಡುತ್ತಿದ್ದ ಭುವನ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾನೆ.

    ತಕ್ಷಣವೇ ಅಲ್ಲಿದ್ದ ಜನರು ಬಾಲಕನನ್ನು ಮೇಲೆದ್ದಾರೆ. ನೀರು ಕುಡಿದು ಹೊಟ್ಟೆ ಭಾರವಾಗಿದ್ದ ಭುವನ್‍ಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ.

    ಗುಂಡಿ ತೆಗೆದು ಸೂಚನಾ ಫಲಕ ಹಾಕುವಲ್ಲಿ ಕಾಮಗಾರಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ನನ್ನ ಮಗನ ಸಾವಿಗೆ ಅವರೇ ಕಾರಣ ಎಂದು ಗುತ್ತಿಗೆದಾರರ ವಿರುದ್ಧ ಮೃತ ಬಾಲಕನ ತಂದೆ ಮುನೀಂದ್ರ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಂಪೌಂಡ್ ನಿರ್ಮಾಣಕ್ಕೆ ಅನೇಕ ಗುಂಡಿಗಳನ್ನು ತೆಗೆಯಲಾಗಿದೆ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವು

    ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವು

    ಹಾವೇರಿ: ಕಾಲು ಜಾರಿ ಕೆರೆಗೆ ಬಿದ್ದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ನಡೆದಿದೆ.

    ಚಂದ್ರು ಪಡೆಪ್ಪನವರ (6) ಮೃತ ಬಾಲಕ. ತಾಯಿ ಜೊತೆಗೆ ಬಾಲಕ ಚಂದ್ರು ಜಮೀನಿಗೆ ಹೋಗಿದ್ದನು. ತಾಯಿ ಕೆಲಸ ಮಾಡುತ್ತಿದ್ದ ವೇಳೆ ಚಂದ್ರು ಕೆರೆ ಕಡೆಗೆ ಹೋದಾಗ ಆಟವಾಡುತ್ತ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ.

    ಸ್ಥಳದಲ್ಲಿ ಮೃತ ಬಾಲಕ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿದ ಆಡೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಮೃತದೇಹ ಮನೆಯೊಳಗೆ ತರದಂತೆ ತಡೆದ ಮಾಲೀಕ- ರಾತ್ರಿಯಿಡೀ ಮಗನ ಶವದೊಂದಿಗೆ ರಸ್ತೆಯಲ್ಲಿದ್ದ ತಾಯಿ

    ಹೈದರಾಬಾದ್: ಮಹಿಳೆಯೊಬ್ಬರು ಮಳೆಯ ನಡುವೆ ರಾತ್ರಿಯಿಡೀ ನಡುರಸ್ತೆಯಲ್ಲಿ ತನ್ನ ಮಗನ ಮೃತದೇಹವನ್ನು ಕಾವಲು ಕಾದ ಮನಕಲಕುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ತೆಲಂಗಾಣ ರಾಜ್ಯ ರಾಜಧಾನಿಯಾದ ಹೈದರಾಬಾದ್‍ನ ಕುಕ್ಕಟ್‍ಪಲ್ಲಿ ಪ್ರದೇಶದ ವೆಂಕಟೇಶ್ವರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ನಾಲ್ಕು ವರ್ಷಗಳ ಹಿಂದೆ ಮೆಹಬೂಬ್‍ನಗರ ಜಿಲ್ಲೆಯಿಂದ ತನ್ನ ಎರಡು ಮಕ್ಕಳೊಂದಿಗೆ ಇಲ್ಲಿಗೆ ಬಂದ ಈಶ್ವರಮ್ಮ, ವೆಂಕಟೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

    ಈಶ್ವರಮ್ಮ ಅವರ ಕಿರಿಯ ಮಗ ಸುರೇಶ್ ಡೆಂಗ್ಯೂ ಜ್ವರದಿಂದ ತೀವ್ರವಾಗಿ ಬಳಲಿ ಬುಧುವಾರ ಸಂಜೆ ಮೃತಪಟ್ಟಿದ್ದ. ಈತನ ಮೃತದೇಹವನ್ನು ಅಂದು ಸಂಜೆ ಆತನ ಕುಟುಂಬಸ್ಥರು ತಾವು ವಾಸವಿದ್ದ ಬಾಡಿಗೆ ಮನೆಗೆ ತಂದಿದ್ದಾರೆ. ಆದರೆ ಮನೆಯ ಮಾಲೀಕ ಮೃತ ದೇಹವನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಲು ಅನುಮತಿಯನ್ನು ನೀಡದೆ ಮನೆಯಿಂದ ಹೊರಹಾಕಿದ್ದಾನೆ. ಶವವನ್ನು ಒಳಗೆ ತೆಗೆದುಕೊಂಡು ಹೋದರೆ ತನ್ನ ಕುಟುಂಬಕ್ಕೆ ಕೆಟ್ಟದ್ದಾಗುತ್ತದೆ ಎಂದು ಮಾಲೀಕ ಜಗದೀಶ್ ಗುಪ್ತಾ ಹೇಳಿದ್ದಾನೆ.

    ಸುರೇಶ್ ತಾಯಿ ಈಶ್ವರಪ್ಪ ಇಲ್ಲಿಮ ರೂಮ್‍ವೊಂದರಲ್ಲಿ ವಾಸವಿದ್ದು, ಉಳಿದಂತೆ ಗುಪ್ತಾ ಹಾಗೂ ಅವರ ಸಂಬಂಧಿಕರೇ ಇಲ್ಲಿ ವಾಸ ಮಾಡುತ್ತಿದ್ದಾರೆ. ಬಾಲಕ ಡೆಂಗ್ಯೂ ಜ್ವರದಿಂದ ಬಳಲಿ ಮೃತಪಟ್ಟಿದ್ದರಿಂದ ಅದರಿಂದ ಇನ್ಫೆಕ್ಷನ್ ಆಗಬಹುದೆಂದು ಗುಪ್ತಾ ಹೇಳಿದ್ದಾನೆ.

    ಹೀಗಾಗಿ ಇಡೀ ರಾತ್ರಿ ಈಶ್ವರಮ್ಮ ಮನೆಯ ಹೊರಗೆ ಮೃತದೇಹದ ಜೊತೆ ಕಾಲ ಕಳೆಯುವಂತಾಗಿದೆ. ಈ ವೇಳೆ ಅಕ್ಕಪಕ್ಕದ ಮನೆಯವರೂ ಕೂಡ ಇದನ್ನ ಪ್ರಶ್ನಿಸಿಲ್ಲ.

    ಮರುದಿನ ಮುಂಜಾನೆ ವಾಕಿಂಗ್ ಮಾಡುತ್ತಿದ್ದವರು ಈಶ್ವರಮ್ಮ ಹಾಗೂ ಅವರ ಹಿರಿಯ ಮಗ ಮೃತದೇಹವನ್ನು ಹಿಡಿದು ಕುಳಿತಿದ್ದನ್ನು ನೋಡಿದ್ದಾರೆ. ನಂತರ ಸಾಕಷ್ಟು ಜನ ಗುಂಪು ಸೇರಿದ್ದಾರೆ. ಬಳಿಕ ಒಂದು ಪೆಟ್ಟಿಗೆಯನ್ನ ತರಿಸಿಮೃತದೇಹವನ್ನ ಅದರಲಿ ಇರಿಸಿದ್ದಾರೆ. ಕೆಲವರು ಅಂತ್ಯಸಂಸ್ಕಾರ್ಕಕಾಗಿ ಹಣ ಸಂಗ್ರಹಿಸಿ ಸಹಾಯ ಮಾಡಿದ್ದಾರೆ.

    ಮನೆಯ ಮಾಲೀಕನ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಸ್ಥಳಿಯರು, ಯಾರ ಮನೆಯಲ್ಲಿ ತಾನೆ ಸಾವು ಸಂಭವಿಸಿಲ್ಲ? ಅಥವಾ ಮುಂದೆ ಸಂಭವಿಸುವುದಿಲ್ವಾ ಎಂದು ಪ್ರಶ್ನಿಸಿದ್ದಾರೆ.