Tag: ಬಾಲಕೃಷ್ಣ

  • ಕ್ವಾರಂಟೈನ್ ನಿಯಮ ಸಡಿಲಿಕೆ- ಬೇಸರ ಹೊರಹಾಕಿದ ಶಿವಲಿಂಗೇಗೌಡ, ಬಾಲಕೃಷ್ಣ

    ಕ್ವಾರಂಟೈನ್ ನಿಯಮ ಸಡಿಲಿಕೆ- ಬೇಸರ ಹೊರಹಾಕಿದ ಶಿವಲಿಂಗೇಗೌಡ, ಬಾಲಕೃಷ್ಣ

    ಹಾಸನ: ಮಹಾರಾಷ್ಟ್ರದಿಂದ ಆಗಮಿಸುವವರು ಸೇರಿದಂತೆ ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡುವ ಬಗ್ಗೆ ಸರ್ಕಾರ ನೀತಿ, ನಿಯಮಗಳನ್ನು ಸಡಿಲಿಸಿರುವ ಬಗ್ಗೆ ಶಾಸಕರಾದ ಶಿವಲಿಂಗೇಗೌಡ ಮತ್ತು ಬಾಲಕೃಷ್ಣ ಆತಂಕ ಹೊರಹಾಕಿದ್ದಾರೆ.

    ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಏಳು ದಿನಕ್ಕೆ ಇಳಿಸಿರುವುದು ಸೂಕ್ತವಲ್ಲ. ಮನೆಗೆ ಕಳುಹಿಸಿದವರಲ್ಲೂ ಪಾಸಿಟಿವ್ ಬರುವ ಸಂದರ್ಭ ಬಂದಿದೆ. ಅಷ್ಟೇ ಅಲ್ಲದೆ ರೋಗ ಲಕ್ಷಣ ಇಲ್ಲದಿದ್ದರೆ ಟೆಸ್ಟ್ ಮಾಡಬೇಡಿ ಎಂಬ ಹೊಸ ಪಾಲಿಸಿ ಆತಂಕ ತಂದಿದೆ. ಇದರಿಂದ ಹಳ್ಳಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆಲವೊಬ್ಬರಿಗೆ ರೋಗ ಲಕ್ಷಣ ಇಲ್ಲದಿದ್ದರೂ ಕೊರೊನಾ ಇದೆ. ಹೀಗಾಗಿ ಹೊರರಾಜ್ಯದಿಂದ ಬಂದವರಿಗೆ ಕನಿಷ್ಟ 14 ದಿನ ಕ್ವಾರಂಟೈನ್ ಮಾಡಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಕೊರೊನಾ ಬಗ್ಗೆ ಏಕ್‍ದಂ ಈ ರೀತಿ ನಿರ್ಧಾರಕ್ಕೆ ಬರಬಾರದಿತ್ತು. ಕೊರೊನಾಗೆ ಈಗ ಹರಡೋ ಶಕ್ತಿ ಇಲ್ಲ ಅಂದ್ರೆ ಒಂದು ಹೇಳಿಕೆ ಕೊಟ್ಟುಬಿಡಿ. ಎಲ್ಲವನ್ನೂ ಓಪನ್ ಮಾಡಿಬಿಡಿ. ಇಷ್ಟೊಂದು ದಿನ ಯಾಕೆ ಕಷ್ಟ ಪಡಬೇಕಿತ್ತು. ಈ ವೈರಾಣುಗೆ ಹೆದರಿ ನಾವು ಇವರು ಹೇಳಿದಂತೆ ಕೇಳಿದ್ದೇವೆ. ಪ್ರಧಾನಿಗಳು ಅವರು ಮನೆಯಲ್ಲೇ ಮಾಸ್ಕ್ ಹಾಕಿದ್ದಾರೆ ಎಂಬ ರೀತಿ ತೋರಿಸಿದರು ಎಂದು ಕಿಡಿಕಾರಿದರು.

    ಈಗ ಸರ್ಕಾರ ಅದೊಂದು ಸಾಮಾನ್ಯ ವೈರಾಣು ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂಬ ಭಾವನೆ ವ್ಯಕ್ತಮಾಡುತ್ತಿದೆ. ಇನ್ನೂ ಸ್ವಲ್ಪ ದಿನ ಈ ಬಗ್ಗೆ ಎಚ್ಚರ ವಹಿಸಬೇಕಿತ್ತು. ಈಗ ಸಾಮಾಜಿಕ ಅಂತರ ಎಲ್ಲ ಮರೆತು ನೇರವಾಗಿ ಹೋಂ ಕ್ವಾರಂಟೈನ್‍ಗೆ ಕಳುಹಿಸಿದರೆ ಹೇಗೆ? ಶಾಲೆಗಳನ್ನು ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು. ಈ ವಿಚಾರದಲ್ಲಿ ದುಡುಕಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

  • ಹೊರರಾಜ್ಯದಿಂದ ಬರೋರನ್ನು 15 ದಿನಕ್ಕೆ ಒಂದು ತಂಡದಂತೆ ಕಳುಹಿಸಿ: ಶಾಸಕ ಬಾಲಕೃಷ್ಣ

    ಹೊರರಾಜ್ಯದಿಂದ ಬರೋರನ್ನು 15 ದಿನಕ್ಕೆ ಒಂದು ತಂಡದಂತೆ ಕಳುಹಿಸಿ: ಶಾಸಕ ಬಾಲಕೃಷ್ಣ

    ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ತುಂಬಾನೇ ಸೂಕ್ಷ್ಮ ತಾಲೂಕಾಗಿದ್ದು, ಇಲ್ಲಿಗೆ ಹೊರರಾಜ್ಯದಿಂದ ಬರುವವರನ್ನು 15 ದಿನಕ್ಕೆ ಒಂದು ತಂಡದಂತೆ ಹಂತ ಹಂತವಾಗಿ ಕಳುಹಿಸಬೇಕೆಂದು ಶಾಸಕ ಸಿ.ಎನ್ ಬಾಲಕೃಷ್ಣ ಮನವಿ ಮಾಡಿದ್ದಾರೆ.

    ಚನ್ನರಾಯಪಟ್ಟಣದಲ್ಲಿ ಒಂದು ಲಕ್ಷ ಮಾಸ್ಕ್, 10 ಸಾವಿರ ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಶಾಸಕರು, ಹೊರರಾಜ್ಯದಿಂದ ಬರುವವರು ನಮ್ಮ ಅಣ್ಣ-ತಮ್ಮಂದಿರಿದ್ದಂತೆ. ಆದರೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ, ನಾಗಮಂಗಲಕ್ಕೆ ಹೋಗುವವರು ಮತ್ತು ಮಂಗಳೂರು, ಕೇರಳಕ್ಕೆ ಹೋಗುವವರು ಇಲ್ಲೇ ಹೋಗುವ ಸನ್ನಿವೇಶ ಇದೆ. ಮುಂಬೈನಿಂದ ಬರುವವರು ಕೂಡ ಇಲ್ಲೇ ಬರುತ್ತಾರೆ. ಇದು ನಮಗೆ ದೊಡ್ಡ ಸಂಕಷ್ಟವಾಗಿದೆ ಎಂದು ಆತಂಕ ಹೊರಹಾಕಿದ್ರು.

    ಈಗಾಗಲೇ ನೂರಕ್ಕೂ ಹೆಚ್ಚು ಜನ ಹೊರ ರಾಜ್ಯದಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದಾರೆ. 1,500 ಜನ ಚನ್ನರಾಯಪಟ್ಟಣಕ್ಕೆ ಬರುವವರಿದ್ದಾರೆ. ಇವರನ್ನೆಲ್ಲ ಒಟ್ಟಿಗೆ ಕಳುಹಿಸಿದ್ರೆ ಪ್ರೊಟೀನ್ ಯುಕ್ತ ಊಟ ಉಪಚಾರ ಕೊಡುವುದು, ವ್ಯವಸ್ಥಿತವಾಗಿ ಕ್ವಾರಂಟೈನ್ ಮಾಡುವುದು ಕಷ್ಟ ಆಗುತ್ತೆ. ಹೀಗಾಗಿ ಹದಿನೈದು ದಿನಕ್ಕೆ ಒಂದು ತಂಡದಂತೆ ಹೊರರಾಜ್ಯದಿಂದ ಜನರನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಶಾಸಕ ಬಾಲಕೃಷ್ಣ ಮನವಿ ಮಾಡಿದ್ರು.

    ಇದೇ ವೇಳೆ ಕೊಬ್ಬರಿ ಬೆಲೆ 14 ಸಾವಿರದಿಂದ 9500 ರೂಪಾಯಿಗೆ ಕುಸಿದಿದೆ. ಆದ್ದರಿಂದ ಕೊಬ್ಬರಿಗೆ ಕನಿಷ್ಟ 5 ಸಾವಿರ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಉತ್ತರ ಕರ್ನಾಟಕದಲ್ಲಿ ‘ಭಾಗ್ಯಶ್ರೀ’ ಈ ವಾರ ರಿಲೀಸ್

    ಬಾಲ್ಯ ವಿವಾಹ ದುಷ್ಪರಿಣಾಮ ಕುರಿತಾದ ಕಾದಂಬರಿ ಆಧಾರಿತ ‘ಭಾಗ್ಯಶ್ರೀ’ ಸಿನಿಮಾ ಈ ವಾರ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

    ಬಾಗಲಕೋಟೆ ಜಿಲ್ಲೆಯವರಾದ ಆಶಾ ಶಾಹಿರ ಬೀಳಗಿ ಹಾಗೂ ಶಾಹಿರ ಬೀಳಗಿ ಬನಶಂಕರಿ ಆಟ್ರ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ತಯಾರಿಸಿದ್ದಾರೆ. ಎಸ್ ಮಲ್ಲೇಶ್ ಅವರ ಕಾದಂಬರಿ ‘ಭಾಗ್ಯಶ್ರೀ’ ಅದೇ ಹೆಸರಿನಲ್ಲಿ ಅವರು ನಿರ್ದೇಶನ ಸಹ ಮಾಡಿದ್ದಾರೆ. ಪ್ರಾರ್ಥನ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಕುಮಾರಿ ಹೀರಾ ಈ ಚಿತ್ರದಲ್ಲಿ ‘ಭಾಗ್ಯಶ್ರೀ’ ಪಾತ್ರವನ್ನು ಮಾಡಿದ್ದಾರೆ.

    ಈ ಚಿತ್ರಕ್ಕೆ ಪದ್ಮಶ್ರೀ ದೊಡ್ಡರಂಗೇ ಗೌಡ ಅವರು ಎರಡು ಹಾಡುಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಒಂದು ವಿಶೇಷವಾದ ಹಾಡು ನಾಲ್ಕೂವರೆ ನಿಮಿಷಗಳ ಕಾಲ ಮೂಡಿಬಂದಿದೆ. ಕಾರ್ತಿಕ್ ವೆಂಕಟೇಶ್ ರಾಗ ಸಂಯೋಜನೆಯಲ್ಲಿ ಮೂರು ಹಾಡುಗಳು ಮೂಡಿಬಂದಿದೆ. ನಿರ್ದೇಶಕ ಮಲ್ಲೇಶ್ ಸಹ ಒಂದು ಗೀತೆಯನ್ನು ರಚಿಸಿದ್ದಾರೆ. ಸಂಜೀವ್ ರೆಡ್ಡಿ ಸಂಕಲನ, ಹೇಮಂತ್ ಕುಮಾರ್ ಛಾಯಾಗ್ರಹಣ ಇರುವ ಈ ಭಾಗ್ಯಶ್ರೀ ಚಿತ್ರದಲ್ಲಿ ಮಂಜುನಾಥ್, ಕೀರ್ತಿ, ಬಾಲಕೃಷ್ಣ, ಕೆ ಜಿ ಎಫ್ ಕೃಷ್ಣೋಜಿ ರಾವ್, ಏಕನಾಥ್, ನಾಗರಾಜ್ ಹಾಗೂ ಇತರರು ತಾರಾಗಣದಲಿದ್ದಾರೆ.

  • ಸಿಎಂಗೆ ರೇವಣ್ಣ ಶನಿಯಾಗಿದ್ದಾರೆ- ಬಾಲಕೃಷ್ಣ

    ಸಿಎಂಗೆ ರೇವಣ್ಣ ಶನಿಯಾಗಿದ್ದಾರೆ- ಬಾಲಕೃಷ್ಣ

    ಮಂಡ್ಯ: ಮುಖ್ಯಮಂತ್ರಿಯವರಿಗೆ ರೇವಣ್ಣ ಶನಿಯಾಗಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವರನ್ನು ಶನಿ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷ ಬಿಟ್ಟಾಗ ರೇವಣ್ಣ, ಶನಿಗಳು ತೊಲಗಿದರು ಅಂದಿದ್ದರು. ಈಗ ಮುಖ್ಯಮಂತ್ರಿ ಅವರಿಗೆ ಯಾರು ಶನಿಯಾಗಿದ್ದಾರೆಂದು ಗೊತ್ತಾಗಿದೆ ಎಂದ ವ್ಯಂಗ್ಯವಾಡಿದರು.

    ರೇವಣ್ಣ ಅವರು ತಮ್ಮ ಇಲಾಖೆ ಅಲ್ಲದೆ ಇತರ ಇಲಾಖೆಯ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನಮ್ಮವರ ರಾಜೀನಾಮೆಗೆ ಇದು ಒಂದು ಕಾರಣ. ರೇವಣ್ಣ ಅವರಿಂದಾಗಿಯೇ ಸರ್ಕಾರ ಈಗ ಬೀಳುವ ಹಂತಕ್ಕೆ ಬಂದಿದೆ ಎಂದು ಅತೃಪ್ತ ಶಾಸಕರು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ.ಈ ಬೆನ್ನಲ್ಲೇ ಮೈತ್ರಿ ಸರ್ಕಾರದ ಪತನಕ್ಕೆ ರೇವಣ್ಣ ಅವರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ಮಾಜಿ ಶಾಸಕ ಬಾಲಕೃಷ್ಣ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.

  • ಬಿಜೆಪಿ ಕುಮ್ಮಕ್ಕಿನಿಂದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ: ಶಾಸಕ ಬಾಲಕೃಷ್ಣ

    ಬಿಜೆಪಿ ಕುಮ್ಮಕ್ಕಿನಿಂದ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ: ಶಾಸಕ ಬಾಲಕೃಷ್ಣ

    ಮುಂಬೈ: ಬಿಜೆಪಿಯವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಶಾಸಕ ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಡಿ.ಕೆ ಶಿವಕುಮಾರ್ ಅವರನ್ನು ಮುಂದೆ ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ವಾಹನದ ಮುಂದೆ ಪೊಲೀಸ್ ವಾಹನ ಇದೆ. ಶಿವಕುಮಾರ್ ಎಲ್ಲಿ ಇರುತ್ತಾರೋ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾವು ಸುಮಾರು 6 ಗಂಟೆಗಳ ಕಾಲ ನಿರಂತರವಾಗಿ ಧರಣಿ ಕುಳಿತ್ತಿದ್ದೆವು. ಬಿಜೆಪಿ ಅವರ ಕುಮ್ಮಕ್ಕಿನಿಂದ ಪೊಲೀಸರು ಹೋಟೆಲ್ ಒಳಗೆ ಬಿಡದೇ ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

    ಮಂಗಳವಾರ ಕೂಡ ಬಿಜೆಪಿಯ ರಾಜ್ಯ ನಾಯಕರು ಶಾಸಕರನ್ನು ಸಂಪರ್ಕಿಸಿದ್ದಾರೆ. ನಾವು ಖಾಸಗಿಯಾಗಿ ವಾಸ್ತವ ಮಾಡಲು ರೂಂ ಬುಕ್ ಮಾಡಿದ್ದೇವೆ. ಆದರೆ ಬಿಜೆಪಿಯವರು ದುರುದ್ದೇಶದಿಂದ ನಮ್ಮ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಸಿದ್ದರು. ಪೊಲೀಸರು ಮೊದಲು ಪಾಸಿಟಿವ್ ಆಗಿದ್ದರು. ಬಳಿಕ ದೂರವಾಣಿ ಕರೆಗಳು ಬಂದ ನಂತರ ಹೋಟೆಲ್ ಮಾಲೀಕರನ್ನು ಹೊರಗಡೆ ಕರೆಸಿ ರೂಂ ಖಾಲಿ ಇಲ್ಲ ಎಂದು ಕ್ಯಾನ್ಸಲ್ ಪತ್ರ ಬರೆಸಿ ನಮಗೆ ನೀಡಿದರು ಎಂದು ದೂರಿದರು.

    ನಮ್ಮ ರಾಜ್ಯದ ವಿರೋಧ ಪಕ್ಷದ ನಾಯಕರು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿ ಈ ರೀತಿ ಮಾಡಿಸಿದ್ದಾರೆ. ಪೊಲೀಸರು ಮೊದಲು ನಮಗೆ ಗೌರವ ನೀಡಿ ನೋಡಿಕೊಂಡರು. ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ವಾಹನದಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ಅವರನ್ನು ಕರೆದುಕೊಂಡು ಹೋದ ಬಳಿಕ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

    ನಮ್ಮ ರಾಜ್ಯದ ಇಬ್ಬರು ಮಂತ್ರಿಗಳು ಹಾಗೂ ಇಬ್ಬರು ಶಾಸಕರು ಕರ್ನಾಟಕದಿಂದ ಬಂದಿದ್ದಾರೆ ಎಂದು ಮಹಾರಾಷ್ಟ್ರದ ಹಲವು ನಾಯಕರು ನಮಗೆ ಸಹಕಾರ ನೀಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಮಾಡುವುದು ನಮ್ಮ ಹಕ್ಕು. ನಾವು ಯಾರಿಗೂ ದೌರ್ಜನ್ಯ ಹಾಗೂ ಒತ್ತಡವನ್ನು ನೀಡಿಲ್ಲ. ಶಾಸಕರನ್ನು ಸ್ನೇಹದಿಂದ ಮಾತನಾಡಬೇಕು ಎಂದು ನಮ್ಮ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲಿಗೆ ಬಂದಿದ್ದೇವೆ. ಪ್ರಜಾತಂತ್ರಕ್ಕೆ ವಿರುದ್ಧವಾಗಿ ಮುಂಬೈ ಆಡಳಿತ ನಡೆದುಕೊಳ್ಳುತ್ತಿದೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.

  • ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಚುನಾವಣಾ ಪ್ರಚಾರದಲ್ಲಿ ಸಚಿವ ರೇವಣ್ಣ, ಬಾಲಕೃಷ್ಣ ಕಣ್ಣೀರು

    ಹಾಸನ: ಚುನಾವಣಾ ಪ್ರಚಾರದ ಭಾಷಣದ ವೇಳೆ ಶಾಸಕ ಬಾಲಕೃಷ್ಣ ಹಾಗೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಕಣ್ಣೀರು ಹಾಕಿದ್ದಾರೆ.

    ಹೊಳೆನರಸೀಪುರದ ಮೂಡಲ ಹಿಪ್ಪೆಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದದಲ್ಲಿ ಬಾಲಕೃಷ್ಣ ಮಾತನಾಡಿ, ದೇವೇಗೌಡರು ಸಂಸತ್ ನಲ್ಲಿ ಕೊನೆ ಭಾಷಣ ಎಂದು ಹೇಳುತ್ತಾ ಕಣ್ಣೀರು ಹಾಕಿದ್ರು. ತವರು ಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗನಿಗಾಗಿ ಬಿಟ್ಟು ಕೊಟ್ಟಿದ್ದಾರೆ. ನಮ್ಮ ತಂದೆಯವರ ತ್ಯಾಗ ದೊಡ್ಡದು, ಮೊಮ್ಮಗನ ಭವಿಷ್ಯದ ದೃಷ್ಟಿಯಿಂದ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆ ಹೇಳಿ ಕಣ್ಣೀರು ಹಾಕಿದರು.

    ಬಾಲಕೃಷ್ಣ ಅವರು ಭಾಷಣದಲ್ಲಿ ತಂದೆಯ ತ್ಯಾಗದ ಬಗ್ಗೆ ಹೇಳುತ್ತಿದ್ದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ರೇವಣ್ಣ ಸಹ ಭಾವುಕರಾಗಿ ಕಣ್ಣೀರು ಹಾಕಿದರು.

    ಮೊಮ್ಮಗನನ್ನು ರಾಜಕೀಯದಲ್ಲಿ ಮುಂದಕ್ಕೆ ತರಬೇಕು ಅನ್ನೋ ಭಾವನೆ ವರ ಮನದಾಳದಲ್ಲಿ ಇದೆ. ಅದನ್ನು ನಾವು ಸ್ವಾಗತ ಮಾಡೋಣ. ಇಂತಹ ರಾಜಕಾರಣಿ ನಮಗೆ ಮತ್ತೆ ಸಿಗುತ್ತಾರೇನ್ರೀ ಎಂದು ಪ್ರಶ್ನಿಸಿ ಬೇಸರಗೊಂಡರು. ಬಾಲಕೃಷ್ಣ ಕಣ್ಣೀರು ಹಾಕುತ್ತಿದ್ದಂತೆ ವೇದಿಕೆಯಲ್ಲೆ ರೇವಣ್ಣ ಕೂಡ ಭಾವುಕರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸರ್ಕಾರದ ಕೈಲಿ ಆಗದ್ದನ್ನ ಸಾಧಿಸಿದ್ರು- ಕೂಡಿಟ್ಟ 30 ಸಾವಿರದಿಂದ ತೂಗುಸೇತುವೆ ಕಟ್ಟಿದ್ರು ಬೆಳ್ತಂಗಡಿಯ ಬಾಲಕೃಷ್ಣ

    ಸರ್ಕಾರದ ಕೈಲಿ ಆಗದ್ದನ್ನ ಸಾಧಿಸಿದ್ರು- ಕೂಡಿಟ್ಟ 30 ಸಾವಿರದಿಂದ ತೂಗುಸೇತುವೆ ಕಟ್ಟಿದ್ರು ಬೆಳ್ತಂಗಡಿಯ ಬಾಲಕೃಷ್ಣ

    ಮಂಗಳೂರು: ಸರ್ಕಾರಗಳಿಗೆ ಎಷ್ಟೇ ಮನವಿ ಮಾಡಿದರೂ ಸಾಧ್ಯವಾಗದ್ದನ್ನ ಬೆಳ್ತಂಗಡಿಯ ಯುವಕನೊಬ್ಬ ಮಾಡಿ ತೋರಿಸುವ ಮೂಲಕ ಇದೀಗ ಪಬ್ಲಿಕ್ ಹೀರೋ ಆಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅತ್ಯಂತ ಕುಗ್ರಾಮ ಪೊಲಿಪು ನಿವಾಸಿ ಬಾಲಕೃಷ್ಣ ಜನರ ವರ್ಷಗಳ ನೋವಿಗೆ ಪರಿಹಾರ ಸೂಚಿಸಿದ್ದಾರೆ. ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಗ್ರಾಮ ದಟ್ಟ ಅರಣ್ಯಗಳ ಮಧ್ಯೆ ಇದೆ. ಶಿಶಿಲ ಪೇಟೆಯೇ ಇಲ್ಲಿನ ಜನರ ವಹಿವಾಟು ಕೇಂದ್ರ. ಆದ್ರೆ, ಮಳೆಗಾಲದಲ್ಲಿ ಹೊಳೆ ಮೈದುಂಬಿಕೊಳ್ಳೋ ಕಾರಣ ಹೊಳೆ ದಾಟೋದೇ ಕಷ್ಟವಾಗಿತ್ತು.

    ನಮ್ಮ ಗ್ರಾಮದ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು ಅಂತ ಪಣತೊಟ್ಟ ಬಾಲಕೃಷ್ಣ, ಯುವಕರನ್ನೆಲ್ಲಾ ಸೇರಿಸಿಕೊಂಡು ತೂಗು ಸೇತುವೆ ನಿರ್ಮಿಸಿದ್ದಾರೆ. ಇದು ಸಣ್ಣ ಸೇತುವೆಯಾದರೂ ಪೊಲಿಪು ಗ್ರಾಮಸ್ಥರಿಗೆ ಸಂಪರ್ಕ ಕೊಂಡಿಯಾಗಿದೆ. ಅಂದ ಹಾಗೆ, ಸಣ್ಣ ಅಂಗಡಿಯಿಟ್ಟುಕೊಂಡಿರುವ ಬಾಲಕೃಷ್ಣ ಅದರಲ್ಲಿ ಬಂದ 30 ಸಾವಿರ ರೂಪಾಯಿ ಕೂಡಿಟ್ಟು ಈ ಕಾರ್ಯಕ್ಕೆ ಬಳಸಿರುವುದಾಗಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.


    ಸುಮಾರು 35 ಮೀಟರ್ ಅಗಲದಲ್ಲಿ ಹರಿವ ಈ ಹೊಳೆಗೆ ಹಿಂದೆಲ್ಲಾ ಗ್ರಾಮದ ನಿವಾಸಿಗಳು ಅಡಿಕೆ ಮರವನ್ನು ಹಾಸಿ, ಸೇತುವೆ ಮಾಡುತ್ತಿದ್ದರು. ಆದರೆ, ಹೊಳೆಯ ನೀರು ಹೆಚ್ಚುತ್ತಿದ್ದಂತೆ ಅಡಿಕೆಯ ಸೇತುವೆ ಕೊಚ್ಚಿ ಹೋಗುತ್ತಿತ್ತು. ಕೆಲವರು ಜಲಸಮಾಧಿಯಾದ ಘಟನೆಗಳೂ ಇವೆ. ಆದ್ರೀಗ, ತನ್ನದೇ ಐಡಿಯಾದಿಂದ ಬಾಲಕೃಷ್ಣ ಸೇತುವೆ ನಿರ್ಮಿಸಿಕೊಟ್ಟಿದ್ದು, ಎಲ್ಲರಿಗೂ ವರದಾನವಾಗಿದೆ ಅಂತ ಶಿಶಿಲ ನಿವಾಸಿ ಕರುಣಾಕರ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=Zqn9Ca6SbW0

  • ಸಿದ್ರಾಮಯ್ಯ ಒಂಟಿಯಲ್ಲ, ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಜೆಡಿಎಸ್ ಟಾರ್ಗೆಟ್: ಚೆಲುವರಾಯಸ್ವಾಮಿ

    ಸಿದ್ರಾಮಯ್ಯ ಒಂಟಿಯಲ್ಲ, ಮಂಡ್ಯದಲ್ಲಿ ಕಾಂಗ್ರೆಸ್ಸಿನಿಂದ ಜೆಡಿಎಸ್ ಟಾರ್ಗೆಟ್: ಚೆಲುವರಾಯಸ್ವಾಮಿ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

    ಸಿದ್ದರಾಮಯ್ಯ ಅವರನ್ನು ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಒಂಟಿಯಲ್ಲ. ಒಂಟಿ ಅಂತಾ ಯಾರಾದ್ರೂ ಅನ್ಕೊಂಡ್ರೆ ಅವರಷ್ಟು ದಡ್ಡರು ಮತ್ಯಾರು ಇಲ್ಲ. ಎಲ್ಲ ಶಾಸಕರು, ಮಾಜಿ ಶಾಸಕರು, ಸಚಿವರು, ಸಂಸದರು ಸಿದ್ದರಾಮಯ್ಯ ಜೊತೆಗಿದ್ದಾರೆ ಅಂದ್ರು.

    ನಾನು ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಲ್ಲ. ಎಂಪಿಗೆ ನಾನು ಸ್ಪರ್ಧಿಸಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ಜೆಡಿಎಸ್ ನವರು ಟಾರ್ಗೆಟ್ ಮಾಡಿದ್ದಾರೆ ಇದು ಸತ್ಯ. ಇದು ಎಲ್ಲ ನಾಯಕರಿಗೂ ಗೊತ್ತಿರೋ ವಿಚಾರವಾಗಿದೆ. ಆದರೂ ನಾವು ಸಹಿಸ್ಕೊಂಡು ಇರಬೇಕಾಗಿದೆ ಅಂದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ ಅಲ್ಲ, ಅವರು ಮಾಸ್ ಲೀಡರ್: ಹೆಚ್.ಎಂ.ರೇವಣ್ಣ

    ಸಿದ್ದರಾಮಯ್ಯ ಮತ್ತೆ ಸಿಎಂ ಅನ್ನೋ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅವರು, ಅವರು ಬೇರೆ ಅರ್ಥದಲ್ಲಿ ಹೇಳಿದ್ದಾರೆ ನೀವು ಬೇರೆಯದಾಗೇ ತಿಳಿದುಕೊಂಡಿದ್ದೀರಿ. ಸರ್ಕಾರದಲ್ಲಿ ಪಕ್ಷದ ಪರವಾಗಿ ಡಿಸಿಎಂ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್ ಇದ್ದಾರೆ. ಎಲ್ಲದರ ಬಗ್ಗೆ ಅವರೇ ಮಾತಾಡ್ತಾರೆ. ಲೋಕಸಭೆಯಲ್ಲಿ ಮೈತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಅಂತ ತಿಳಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ

    ಕಾಂಗ್ರೆಸ್‍ನಲ್ಲಿದ್ದೀವಿ. ಸೋತಿದ್ದೀವಿ, ಅವರು ಗೆದ್ದಿದ್ದಾರೆ. ಮುಂದೆ ನಾವು ಗೆಲ್ತೀವಿ, ಅವರು ಸೋಲ್ತಾರೆ ನೋಡೋಣ ಅಂದ ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ದಬ್ಬಾಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಬಾಲಕೃಷ್ಣ, ಕಾಲಚಕ್ರ ಉರುಳುತ್ತದೆ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ. ಈ ಬಾರಿ ಸೋತಿದ್ದೇನೆ, ಗೆದ್ದವರು ಸೋಲ್ತಾರೆ, ಸೋತೋರು ಗೆಲ್ತಾರೆ ಅಂದ್ರು. ಇದನ್ನೂ ಓದಿ: ನಾನು ಸಿಎಂ ಆಗ್ಬೇಕು ಅನ್ನೋದು ಜನರ ಇಚ್ಛೆ, ನನ್ನ ಆಸೆ ಅಲ್ಲ: ಸಿದ್ದರಾಮಯ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಕಾಲಭೈರವನ ಸನ್ನಿಧಿಯಲ್ಲಿ ರೆಬೆಲ್ ಶಾಸಕರಿಂದ ಅಮಾವಾಸ್ಯೆ ಪೂಜೆ

    ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಂತರ ಇದೀಗ ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ ಹಾಗೂ ಬಾಲಕೃಷ್ಣ ಆದಿಚುಂಚನಗಿರಿ ಕಾಲಭೈರವೇಶ್ವರ ಕ್ಷೇತ್ರಾದಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಜೆಡಿಎಸ್ ಬಂಡಾಯ ಶಾಸಕರು, ಮೊದಲು ಹೋಮದಲ್ಲಿ ಪಾಲ್ಗೊಂಡ್ರು. ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿಗಳೇ ಮುಂದೆ ನಿಂತು ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಾಸಕ ರೇವಣ್ಣ ದಂಪತಿ ಆಗಮಿಸಿ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸಿದ್ರು.

    ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಸತತ ಮೂರು ಅಮವಾಸ್ಯೆ ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ಸಿದ್ಧಿ ಆಗುತ್ತೆ ಎಂಬ ಪ್ರಬಲವಾದ ನಂಬಿಕೆಯಿದೆ. ಹೀಗಾಗಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮೂವರು ಪ್ರತ್ಯೇಕವಾಗಿ ಪತ್ನಿ ಸಮೇತರಾಗಿ ಆಗಮಿಸಿ ಮೂರು ಅಮವಾಸ್ಯೆ ಪೂಜೆ ನೆರವೇರಿಸಿದ್ರು. ರಾಜ್ಯದ ಜನರಿಗೆ ಒಳಿತಾಗಲಿ, ಜೆಡಿಎಸ್ ಅಧಿಕಾರಕ್ಕೆ ಬರಲಿ ಎಂದು ಕಾಲಭೈರವೇಶ್ವರ ಸ್ವಾಮಿಯಲ್ಲಿ ಕೇಳಿಕೊಂಡಿದ್ರು. ಇದೀಗ ಬಂಡಾಯ ಶಾಸಕರು ತಮ್ಮ ಪತ್ನಿ ಸಮೇತರಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.

    ಈ ಹಿಂದೆ ನಾನು ಜೆಡಿಎಸ್ ಪಕ್ಷಕ್ಕೆ, ವರಿಷ್ಠರಿಗೆ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಮುಂದೊಂದು ದಿನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಪ್ರಮಾಣ ಕೂಡ ಮಾಡುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದ್ರು. ಹೀಗಾಗಿ ಪೂಜೆ ನಂತ್ರ ಚಲುವರಾಯಸ್ವಾಮಿ ಪ್ರಮಾಣ ಮಾಡುತ್ತಾರಾ ಎಂಬ ಕುತೂಹಲವೂ ಮೂಡಿದ್ದು, ಬಂಡಾಯ ಶಾಸಕರ ಪೂಜೆ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.

     

  • ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಗೆದ್ದ ಹಣವನ್ನ ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು

    ಕೌನ್ ಬನೇಗಾ ಕರೋಡ್‍ಪತಿಯಲ್ಲಿ ಗೆದ್ದ ಹಣವನ್ನ ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿವಿ ಸಿಂಧು

    ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ, ಪದ್ಮಶ್ರೀ ಪುರಸ್ಕೃತೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಖ್ಯಾತ ಟಿವಿ ಶೋವೊಂದರಲ್ಲಿ ಗೆದ್ದ ಸುಮಾರು 25 ಲಕ್ಷ ರೂಪಾಯಿ ಹಣವನ್ನು ಕ್ಯಾನ್ಸರ್ ಆಸ್ಪತ್ರೆಯೊಂದಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

    ಬಾಲಿವುಡ್ ಹಿರಿಯ ನಟ, ಬಿಗ್ ಬಿ, ಅಮಿತಾಬ್ ಬಚ್ಚನ್ ನಿರೂಪಣೆಯ `ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು, 25 ಲಕ್ಷ ರೂ. ಹಣವನ್ನು ಗೆದ್ದಿದ್ದರು. ಅದನ್ನು ಬಸವತಾರಕಂ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ಸಿಂಧು ದಾನ ಮಾಡಿದ್ದಾರೆ.

    ಆಸ್ಪತ್ರೆಯ ಮುಖ್ಯಸ್ಥ, ಟಾಲಿವುಡ್‍ನ ಖ್ಯಾತ ನಟ ಎನ್.ಬಾಲಕೃಷ್ಣ ಅವರಿಗೆ ಸಿಂಧು 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಕ್ಯಾನ್ಸರ್ ಆಸ್ಪತ್ರೆಗೆ ಹಣ ದಾನ ಮಾಡಿರುವ ಸಿಂಧು ಅವರನ್ನು ಬಾಲಕೃಷ್ಣ ಅಭಿನಂದಿಸಿ ಸಿಂಧು ಮಾಡಿದ ಕಾರ್ಯ ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಿದ್ದಾರೆ.