Tag: ಬಾಲಕೃಷ್ಣ

  • ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಜೊತೆ ಸುತ್ತುತ್ತಿದ್ರು: ಬಾಲಕೃಷ್ಣ ಬಾಂಬ್‌

    ರಾಮನಗರ: ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಗಡಿಯ (Magadi) ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಟಾಕ್ ವಾರ್ ಶುರುವಾಗಿದೆ. ಶಾಸಕ ಎ.ಮಂಜುನಾಥ್ (A.Manjunath) ಬಿಜೆಪಿ (BJP) ಸೇರ್ಪಡೆಗೆ ಮುಂದಾಗಿದ್ರು ಎಂಬ ಮಾಜಿ ಶಾಸಕ ಬಾಲಕೃಷ್ಣ (H.C Balakrishna) ಆರೋಪಕ್ಕೆ ಎ.ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಶುರುವಾಗಿದ್ದು ದಿನೇ ದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ.

    ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಕ್ ಸಮರವೇ ಏರ್ಪಟ್ಟಿದೆ. ಶಾಸಕ ಎ.ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಸಿಪಿ.ಯೋಗೇಶ್ವರ್ (C. P Yogeshwara) ಜೊತೆ ವಿಧಾನಸೌಧ ಸುತ್ತುತ್ತಿದ್ರು ಎಂದು ಮಾಜಿ ಶಾಸಕ ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ನಿಜವೋ ಸುಳ್ಳೊ ಎಂಬುದನ್ನು ಶಾಸಕರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕೋಲಾರದಿಂದಲೇ ಸ್ಪರ್ಧೆ – ಸಿದ್ದರಾಮಯ್ಯ ಅಧಿಕೃತ ಘೋಷಣೆ

    ಮಾಗಡಿ ಶಾಸಕ ಎ.ಮಂಜುನಾಥ್ ಬಿಜೆಪಿ ಸೇರಲು ಸಿ.ಪಿ.ಯೊಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಮಂಜುನಾಥ್ ಶಾಸಕರಾಗಿ ಆಯ್ಕೆಯಾದಾಗ ಯೋಗೇಶ್ವರ್ ಬಳಿ ಮಾತನಾಡಿದ್ದರು. ಬಾಲಕೃಷ್ಣರನ್ನು ಬಿಜೆಪಿಗೆ ಕರೆಸಿ, ನಾನೂ ಬಿಜೆಪಿಗೆ ಬರುತ್ತೇನೆ ಎಂದಿದ್ದಾರಂತೆ. ಬಾಲಕೃಷ್ಣ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. ಈ ಬಗ್ಗೆ ಸಿಪಿ ಯೋಗೇಶ್ವರ್ ನನ್ನ ಬಳಿ ಚರ್ಚಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ. ಅಲ್ಲದೇ ಎ.ಮಂಜುನಾಥ್ ಭಯದಿಂದ ಜೆಡಿಎಸ್‍ನಲ್ಲಿದ್ದಾರೆಯೇ ಹೊರತು ಜೆಡಿಎಸ್ ಮೇಲಿನ ಗೌರವದಿಂದಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ

    ಬಾಲಕೃಷ್ಣ ಆರೋಪಕ್ಕೆ ಶಾಸಕ ಎ.ಮಂಜುನಾಥ್ ತಿರುಗೇಟು ನೀಡಿದ್ದಾರೆ. ಹೌದು ನನಗೆ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ ಆದರೆ ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸ ನಾನು ಮಾಡಲಿಲ್ಲ. ಅವರ ಹಾಗೆ 10 ಕೋಟಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ. ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನನ್ನು ಭೇಟಿ ಆಗಿದ್ದರು. ಪಕ್ಷಕ್ಕೆ ಆಹ್ವಾನಿಸಿದ್ರು, ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಂಗನಾ ರಣಾವತ್ ಗೆ ಪದ್ಮಶ್ರೀ ಪ್ರಶಸ್ತಿ : ಹಿರಿಯ ನಟಿ ಜಯಸುಧಾ ಅಸಮಾಧಾನ

    ಕಂಗನಾ ರಣಾವತ್ ಗೆ ಪದ್ಮಶ್ರೀ ಪ್ರಶಸ್ತಿ : ಹಿರಿಯ ನಟಿ ಜಯಸುಧಾ ಅಸಮಾಧಾನ

    ಪ್ರಶಸ್ತಿಗಳ ವಿಷಯದಲ್ಲಿ ಕೇಂದ್ರ ಸರಕಾರವು ತಾರತಮ್ಯ ಮಾಡುತ್ತಿದೆ ಎಂದು ದಕ್ಷಿಣದ ಖ್ಯಾತ ಹಿರಿಯ ನಟಿ ಜಯಸುಧಾ ಗಂಭೀರ ಆರೋಪ ಮಾಡಿದ್ದಾರೆ. ನೇರವಾಗಿ ಅವರು ಕಂಗನಾ ರಣಾವತ್ ಅವರ ಹೆಸರನ್ನೇ ಪ್ರಸ್ತಾಪಿಸಿ, ‘ಕಂಗನಾ ಹತ್ತು ಸಿನಿಮಾಗಳಲ್ಲೂ ನಟಿಸಿಲ್ಲ. ಅವರ ಯಾವ ಸಾಧನೆಯನ್ನು ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದಾರೆ. ನೂರಾರು ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಕಲಾವಿದರಿಗೆ ಯಾಕೆ ಪದ್ಮಶ್ರೀ’ ಇಲ್ಲವೆಂದು ಹೇಳಿದ್ದಾರೆ.

    ಬಾಲಕೃಷ್ಣ ಅವರು ನಡೆಸಿಕೊಡುವ ‘ಅನ್ ಸ್ಟಾಪಬಲ್ ಸೀಸನ್ 2’ನಲ್ಲಿ ಮಾತನಾಡಿದ ಜಯಸುಧಾ ದಕ್ಷಿಣದವರಿಗೆ ಮತ್ತು ಉತ್ತರದವರಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ‘ಐದತ್ತು ಸಿನಿಮಾಗಳನ್ನ ಮಾಡಿರುವವರಿಗೇ ಪದ್ಮ ಪ್ರಶಸ್ತಿಗಳು ದೊರೆಯುತ್ತವೆ ಅಂತಾದರೆ, ನಾವು ಲೆಕ್ಕಕ್ಕೆ ಇಲ್ಲ ಅವರಿಗೆ’ ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೆ 6 ಸ್ಪರ್ಧಿಗಳ ಎಂಟ್ರಿ: ಕಾದಿದೆ ಮತ್ತೊಂದು ಶಾಕ್

    ಮಹಿಳಾ ನಿರ್ದೇಶಕಿಯರ ಪರವಾಗಿಯೂ ಮಾತನಾಡಿರುವ ಅವರು, ‘ವಿಜಯ ನಿರ್ಮಲಾ ಗಿನ್ನಿಸ್ ದಾಖಲೆ ಬರೆದ ನಿರ್ದೇಶಕಿ. ಈವರೆಗೂ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಹಾಗಾದರೆ ನಾವು ಏನು ಅಂದುಕೊಳ್ಳಬೇಕು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ತಾರತಮ್ಯದ ವಿರುದ್ಧ ಧ್ವನಿ ಎತ್ತಲೇಬೇಕು. ಇಲ್ಲವಾದರೆ, ಇದು ಆಗುತ್ತಲೇ ಇರುತ್ತದೆ ಎಂದು ಟಾಕ್ ಶೋ ನಲ್ಲಿ ನೇರವಾಗಿಯೇ ಮಾತನಾಡಿದ್ದಾರೆ ಜಯಸುಧಾ.

    Live Tv
    [brid partner=56869869 player=32851 video=960834 autoplay=true]

  • ಟಾಲಿವುಡ್ ಸ್ಟಾರ್ ನಟ ಬಾಲಕೃಷ್ಣಗೆ ಕೊರೋನಾ : ಕ್ವಾರಂಟೈನ್ ಆದ ನಟ

    ಟಾಲಿವುಡ್ ಸ್ಟಾರ್ ನಟ ಬಾಲಕೃಷ್ಣಗೆ ಕೊರೋನಾ : ಕ್ವಾರಂಟೈನ್ ಆದ ನಟ

    ದಿನದಿಂದ ದಿನಕ್ಕೆ ಭಾರತದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದೆ. ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ನ ಇಪ್ಪತ್ತೈದಕ್ಕೂ ಹೆಚ್ಚು ಕಲಾವಿದರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಈಗ ಬಹುತೇಕರು ಹುಷಾರಾಗಿದ್ದು, ಇದೀಗ ಟಾಲಿವುಟ್ ಸ್ಟಾರ್ ನಟ ಬಾಲಕೃಷ್ಣಗೆ ಅವರಿಗೆ ಕೊರೋನಾ ವೈರಸ್ ಬಾಧಿಸುತ್ತಿದೆ. ಹಲವು ದಿನಗಳಿಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಬಾಲಕೃಷ್ಣ ಅವರು ಇದೀಗ ಹೋಂ ಕ್ವಾರಂಟೈನ್ ಆಗಿದ್ದಾರೆ.

    ಈ ಕುರಿತು ಮಾತನಾಡಿರುವ ಬಾಲಕೃಷ್ಣ, ‘ನಾನು ಎರಡನೇ ಬಾರಿ ಕೊವೀಡ್ ದಾಳಿಗೆ ತುತ್ತಾಗಿದ್ದೇನೆ. ತೀವ್ರ ಜ್ವರ ಲಕ್ಷಣಗಳು ಕಾಣಿಸಿಕೊಳ್ಳದೇ ಇದ್ದರೂ, ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ, ಮನೆಯಲ್ಲೇ ರೆಸ್ಟ್ ತಗೆದುಕೊಳ್ಳುತ್ತಿದ್ದೇನೆ. ಅಗತ್ಯ ಚಿಕಿತ್ಸೆ ಕೂಡ ಪಡೆಯುತ್ತಿದ್ದೇನೆ. ಆತಂಕ ಪಡುವಂಥದ್ದು ಏನೂ ಇಲ್ಲ. ಆದಷ್ಟು ಬೇಗ ಹುಷಾರಾಗಿ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ

    ಬಾಲಕೃಷ್ಣ ಇದೀಗ ತಮ್ಮ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದರು. ಈ ಸಿನಿಮಾದಲ್ಲಿ ಕನ್ನಡದ ನಟ ದುನಿಯಾ ವಿಜಯ್ ಕೂಡ ವಿಲನ್ ಪಾತ್ರ ಮಾಡುತ್ತಿದ್ದಾರೆ. ವಿಜಯ್ ಅವರಿಗೆ ಇದು ಚೊಚ್ಚಲು ತೆಲುಗು ಸಿನಿಮಾ. ಈಗಾಗಲೇ ಎರಡು ಹಂತದ ಶೂಟಿಂಗ್ ಅನ್ನು ಅವರು ಮುಗಿಸಿದ್ದಾರೆ. ಸದ್ಯ ತಮ್ಮದೇ ನಿರ್ದೇಶನದ ಸಿನಿಮಾದಲ್ಲೂ ವಿಜಯ್ ಭಾಗಿಯಾಗಿದ್ದಾರೆ.

    Live Tv

  • ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ತೆಲುಗು ಸಿನಿಮಾ ರಂಗದ ಲೆಜೆಂಡ್ ನಟ ಬಾಲಕೃಷ್ಣ ಅವರ ಹುಟ್ಟು ಹಬ್ಬಕ್ಕಾಗಿ ಇವರ ನಟನೆಯ 107ನೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಹೇಳಿ ಕೇಳಿ ಬಾಲಕೃಷ್ಣ ಮಾಸ್ ಹೀರೋ, ಟೀಸರ್ ಕೂಡ ಅಷ್ಟೇ ಮಾಸ್ ಆಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ನಲ್ಲಿ ಹೊಡೆದ ಡೈಲಾಗ್ ಇದೀಗ ಟಾಲಿವುಡ್ ನಲ್ಲಿ ವೈರಲ್ ಆಗಿದೆ.

    107ನೇ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆದಿದ್ದು, ನಿರ್ದೇಶಕ ಗೋಪಿಚಂದ್ ಮಲಿನೇನಿ ವಿಶೇಷವಾಗಿ ಟೀಸರ್ ರೆಡಿ ಮಾಡಿದ್ದು, ಬಾಲಕೃಷ್ಣ ಸಾಲ್ಟ್ ಅಂಡ್ ಪೇಪರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ ಲುಕ್ ನಲ್ಲಿ ಕ್ಲಾಸ್ ಡೈಲಾಗ್ ಹೊಡೆದಿದ್ದಾರೆ. ಅದರಲ್ಲೂ ಈ ಟೀಸರ್ ನಲ್ಲಿ ಅಲ್ಲಿನ ಸರಕಾರಕ್ಕೆ ಟಾಂಗ್ ಕೊಟ್ಟಿದ್ದು, ಆ ಡೈಲಾಗ್ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಕೊನೆಗೂ ರಿವೀಲ್ ಆಯಿತು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಫೋಟೋ

    ಈ ಟೀಸರ್ ನಲ್ಲಿ ಬಾಲಯ್ಯ ‘ನಿಮಗೆಲ್ಲ ಗೌರ್ಮೆಂಟ್ ಆರ್ಡರ್.. ನನಗೆ ದೇವರ ಆರ್ಡರ್’ ಎಂದು ಹೇಳುವ ಡೈಲಾಗ್ ಇದೀಗ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದ್ದು, ಇದು ನಿಜವಾಗಿಯೂ ಬಾಲಯ್ಯ ಸರಕಾರಕ್ಕೆ ಕೊಟ್ಟಿರುವ ಟಾಂಗ್? ಎನ್ನುವ ಪ್ರಶ್ನೆಯನ್ನೂ ಅದು ಹುಟ್ಟು ಹಾಕಿದೆ. ಅಲ್ಲದೇ, ಅವರು ಯಾಕೆ ಸರಕಾರಕ್ಕೆ ಈ ರೀತಿ ಟಾಂಗ್ ಕೊಟ್ಟರು ಎನ್ನುವ ಚರ್ಚೆಯನ್ನೂ ಅದು ಹುಟ್ಟು ಹಾಕಿದೆ.

    ಬಾಲಕೃಷ್ಣ ಸಿನಿಮಾದಲ್ಲಿ ಕನ್ನಡದ ದುನಿಯಾ ವಿಜಯ್ ಕೂಡ ನಟಿಸುತ್ತಿದ್ದು, ಎರಡು ಹಂತದ ಶೂಟಿಂಗ್ ಕೂಡ ಅವರು ಮುಗಿಸಿ ಬಂದಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕೆ ದುನಿಯಾ ವಿಜಯ್, ವಿಶ್ ಮಾಡಿದ್ದಾರೆ. ನಟಸಿಂಹ ಎಂದು ಬಿರುದು ಕೂಡ ಕೊಟ್ಟಿದ್ದಾರೆ.

  • ತಮ್ಮದೇ ಹೆಸರಿನ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ

    ತಮ್ಮದೇ ಹೆಸರಿನ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ

    ಟಾಲಿವುಡ್ ನ ಖ್ಯಾತ ನಟ ಬಾಲಕೃಷ್ಣ ಅವರ 107ನೇ ಸಿನಿಮಾದ ಎರಡನೇ ಹಂತದ ಶೂಟಿಂಗ್ ನಡೆದಿದೆ. ಈ ಸಂದರ್ಭದಲ್ಲಿ ಆ ಚಿತ್ರಕ್ಕೆ ಹೆಸರು ಘೋಷಣೆ ಆಗಿದೆ. ಬಾಲಕೃಷ್ಣ ಅವರ ಈ ಚಿತ್ರಕ್ಕೆ ಹಲವು ಶೀರ್ಷಿಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಈ ಸಿನಿಮಾಗೆ ಅಣ್ಣಾಗಾರು ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಬೇರೆ ಹೆಸರು ಇಡುವ ಮೂಲಕ ಕುತೂಹಲ ಮೂಡಿಸಿದೆ ಚಿತ್ರತಂಡ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಸಾಮಾನ್ಯವಾಗಿ ಕಲಾವಿದರು ತಮ್ಮ ಹೆಸರಿನ ಚಿತ್ರಗಳಲ್ಲಿ ನಟಿಸಲು ಉತ್ಸುಕರಾಗಿತ್ತಾರೆ. ಅದೊಂದು ಸೌಭಾಗ್ಯದ ಕ್ಷಣವೆಂದು ಭಾವಿಸುತ್ತಾರೆ. ಹಾಗಾಗಿ ಬಾಲಕೃಷ್ಣ ಅವರ 107ನೇ ಚಿತ್ರಕ್ಕೆ ‘ಜೈ ಬಾಲಯ್ಯ’ ಎಂದು ಹೆಸರಿಡುವ ಮೂಲಕ ಚಿತ್ರತಂಡ ಬಾಲಕೃಷ್ಣ ಅವರು ಗೌರವ ಸೂಚಿಸಿದೆ. ಬಾಲಕೃಷ್ಣ ಅವರ ಅಭಿಮಾನಿಗಳು ಕೂಡ ಈ ಟೈಟಲ್ ಕೇಳಿ ‘ಜೈ ಬಾಲಯ್ಯ’ ಎಂದು ಹಾರೈಸಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಈ ಸಿನಿಮಾದ ವಿಶೇಷತೆ ಅಂದರೆ, ಮೊದಲ ಬಾರಿಗೆ ಈ ಚಿತ್ರದ ಮೂಲಕ ಕನ್ನಡದ ನಟ ದುನಿಯಾ ವಿಜಯ್ ತೆಲುಗು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ವಿಲನ್ ಪಾತ್ರ ಮಾಡಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ನಲ್ಲೂ ವಿಜಯ್ ಪಾಲ್ಗೊಂಡಿದ್ದಾರೆ. ವಿಜಯ್ ಖಡಕ್ ವಿಲನ್ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಲುಕ್ ಕೂಡ ರಿವಿಲ್ ಆಗಿದೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ಬಾಲಕೃಷ್ಣ ನಾಯಕನಾಗಿ ನಟಿಸುತ್ತಿದ್ದರೆ, ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೋಪಿಚಂದ್ ಮೆಲಿನೇನಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.

  • ರಾಜ್ಯದಲ್ಲಿ ಮನುಷ್ಯರು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ: ಬಾಲಕೃಷ್ಣ

    ರಾಜ್ಯದಲ್ಲಿ ಮನುಷ್ಯರು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ: ಬಾಲಕೃಷ್ಣ

    ಹಾಸನ: ಮತಾಂತರ ಕಾಯ್ದೆಗಿಂತ ಮುಖ್ಯವಾಗಿ ರಾಜ್ಯದಲ್ಲಿ ಮಳೆಯಿಂದ ಬೆಳೆ ಹಾಳಾಗಿದೆ. ರಾಗಿ, ಶುಂಠಿ, ಭತ್ತ, ಜೋಳ ಬೆಳೆಗಳು ನಾಶವಾಗಿವೆ, ಮನೆಗಳು ಕುಸಿದು ಬಿದ್ದು ಮನುಷ್ಯರು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚು ಮಹತ್ವವನ್ನು ಕೊಡುತ್ತೇವೆ ಎಂದು ಜೆಡಿಎಸ್ ಶಾಸಕ ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.


    ನಾಳೆಯಿಂದ ಚಳಿಗಾಲದ ಅಧಿವೇಶನ ಆರಂಭದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮತಾಂತರ ಕಾಯ್ದೆಗಿಂತ ಮುಖ್ಯವಾಗಿ ಮಳೆಯಿಂದ ಬೆಳೆ ಹಾಳಾಗಿದೆ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುಬಹುದೆಂಬ ಸಿದ್ಧತೆ ಮಾಡಿಕೊಂಡಿದ್ದಾರೆ. ಏನೇನು ಮಸೂದೆ ಜಾರಿಗೆ ತರುತ್ತಾರೆ ಎಂಬುದರ ಬಗ್ಗೆ ನಮ್ಮ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ಮತಾಂತರ ಕಾಯ್ದೆಗಿಂತ ಮುಖ್ಯವಾಗಿ ಮಳೆಯಿಂದ ಬೆಳೆ ಹಾಳಾಗಿದೆ. ರಾಗಿ, ಶುಂಠಿ, ಭತ್ತ, ಜೋಳ ಬೆಳೆಗಳು ನಾಶವಾಗಿವೆ, ಮನೆಗಳು ಕುಸಿದು ಬಿದ್ದಿವೆ. ಇದಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತೇವೆ. ನಾವು ಬೆಳೆಹಾನಿ ಬಗ್ಗೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ ಎಂದರು. ಇದನ್ನೂ ಓದಿ: ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದ್ರೂ ಕೊಲ್ತಾರೆ: ರಾಹುಲ್ ಗಾಂಧಿ

    ಮತಾಂತರ ನಿಷೇದ ಕಾಯ್ದೆ ಬಗ್ಗೆ ಏನೇನಿದೆ ಅಂಥಾ ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ಭಾಗವಹಿಸುತ್ತೇವೆ. ಅದರ ಬಗ್ಗೆ ಏನೇನು ಡಿಟೇಲ್ಸ್ ತಂದಿದ್ದಾರೆ ಎಂಬ ಮಾಹಿತಿ ನನಗಿಲ್ಲ. ಅದು ಬಂದ ಮೇಲೆ ಪರಿಶೀಲನೆ ಮಾಡುತ್ತೇವೆ. ನಮ್ಮದು ಜಾತ್ಯಾತೀತ ರಾಷ್ಟ್ರ. ಈ ವ್ಯವಸ್ಥೆಯಲ್ಲಿ ನಮ್ಮ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಎಲ್ಲಾ ನಮ್ಮ ರಾಜ್ಯಮಟ್ಟದ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಆನಂತರ ಅದರ ಬಗ್ಗೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ದುರುದ್ದೇಶಪೂರ್ವಕ: ಸಿದ್ದರಾಮಯ್ಯ ಟೀಕೆ

  • ಸಿನಿಮಾ ವೀಕ್ಷಣೆ ವೇಳೆ ಜಾರಿ ಬಿದ್ದು ಯುವಕ ಸಾವು

    ಸಿನಿಮಾ ವೀಕ್ಷಣೆ ವೇಳೆ ಜಾರಿ ಬಿದ್ದು ಯುವಕ ಸಾವು

    ಚಿತ್ರದುರ್ಗ: ಸಿನಿಮಾ ವೀಕ್ಷಣೆ ವೇಳೆ ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಮರ್ಲಹಳ್ಳಿ ನಿವಾಸಿ ಮಾರೇಶ್ (29) ಮೃತ ದುರ್ದೈವಿ. ಮಾರೇಶ್ ತೆಲುಗು ನಟ ಬಾಲಕೃಷ್ಣ ಅಭಿಮಾನಿಯಾಗಿದ್ದನು. ಬಾಲಕೃಷ್ಣ ಅಭಿನಯದ ಅಖಂಡ ಸಿನಿಮಾ ವೀಕ್ಷಿಸಲು ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಭಾಗ್ಯಲಕ್ಷ್ಮಿ ಚಿತ್ರಮಂದಿರಕ್ಕೆ ಆಗಮಿಸಿದ್ದನು. ಥಿಯೇಟರ್‌ನಲ್ಲಿ ಡ್ಯಾನ್ಸ್ ಮಾಡುವಾಗ ಮಾರೇಶ್ ಕಾಲು ಜಾರಿ ಬಿದ್ದಿದ್ದಾನೆ.

    ಕೆಳಗಿದ್ದ ಕಬ್ಬಿಣದ ಸಲಾಖೆ ತಗುಲಿ ಗಂಭೀರ ಗಾಯಗಳಾಗಿತ್ತು. ಕಬ್ಬಿಣದ ಸಲಾಖೆ ಮೇಲೆ ಬಿದ್ದ ಮಾರೇಶ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಯಲ್ಲೇ ಬಾಲಕೃಷ್ಣ ಅಭಿಮಾನಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ- ನಾಲ್ಕೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ

    ಘಟನೆ ಕುರಿತು ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಸಕ ಬಾಲಕೃಷ್ಣ ಆರೋಗ್ಯಕ್ಕಾಗಿ ದೇವರ ಮೊರೆ ಹೋದ ಅಭಿಮಾನಿಗಳು

    ಶಾಸಕ ಬಾಲಕೃಷ್ಣ ಆರೋಗ್ಯಕ್ಕಾಗಿ ದೇವರ ಮೊರೆ ಹೋದ ಅಭಿಮಾನಿಗಳು

    ಹಾಸನ: ಶ್ರವಣಬೆಳಗೂಳ ಕ್ಷೇತ್ರದ ಶಾಸಕ ಬಾಲಕೃಷ್ಣ ಅನಾರೋಗ್ಯಕ್ಕೀಡಾಗಿದ್ದು, ಅವರ ಆರೋಗ್ಯ ವೃದ್ಧಿಗಾಗಿ ಶ್ರವಣಬೆಳಗೊಳದ ಬನ್ನಿಮರದ ಆಂಜನೇಯ ಸ್ವಾಮಿಯವರ ಸನ್ನಿಧಿಯಲ್ಲಿ ಅಭಿಮಾನಿಗಳು, ಬೆಂಬಲಿಗರು ಪೂಜೆ ಸಲ್ಲಿಸಿದ್ದಾರೆ.

    ಕಳೆದ 8 ದಿನದ ಹಿಂದೆ ವಿಪರೀತ ಕೆಮ್ಮಿನಿಂದ ಶಾಸಕ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ಚೇತರಿಕೆ ಆಗಲೆಂದು ಶ್ರವಣಬೆಳಗೊಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜೆಡಿಎಸ್ ಕಾರ್ಯಕರ್ತರು ಶಾಸಕರ ಹೆಸರಿನಲ್ಲಿ ಪೂಜೆ ಮಾಡಿಸಿದರು. ಶಾಸಕರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪರಮ ದೇವರಾಜೇಗೌಡರು, ಹೊಸಹಳ್ಳಿ ರಾಮೇಗೌಡರು, ಪರಮ ಕೃಷ್ಣೇಗೌಡರು, ಸಿ. ಎನ್ ಬಾಲಕೃಷ್ಣ ಬ್ರಿಗೇಡ್ ಅಧ್ಯಕ್ಷರು ರೀತೇಶ್ ಸಾಗರ ಜೆಡಿಎಸ್ ಮುಖಂಡರು ಮತ್ತು ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಈ ಹಿಂದೆ ಟ್ವೀಟ್ ಮಾಡಿದ್ದ ಬಾಲಣ್ಣ, ನಾನು ಅನಾರೋಗ್ಯಕ್ಕೆ ತುತ್ತಾದ ಕಾರಣ ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಕ್ಷೇತ್ರದ ಜನರಿಗೆ ಯಾವುದೇ ರೀತಿಯ ತೊಂದರೆಯಾದರೆ ಅದಕ್ಕೆ ಸ್ಪಂದಿಸಲು ಅಧಿಕಾರಿಗಳಿಗೆ ಮತ್ತು ನನ್ನ ಆಪ್ತ ಸಹಾಯಕರಿಗೆ ಸೂಚಿಸಿದ್ದೇನೆ. ಈ ವರ್ಷ ದೀಪಾವಳಿ ಹಬ್ಬವನ್ನು ಕೂಡ ನಿಮ್ಮ ಜೊತೆ ಆಚರಣೆ ಮಾಡಲು ಆಗುತ್ತಿಲ್ಲ. ಈ ವಿಚಾರಕ್ಕೆ ಬೇಸರವಿದೆ ಎಂದಿದ್ದರು.

  • ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

    ಹಾಸನ: ಜಿಲ್ಲೆಯ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಳೆದ 4 ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದ ಕಾರಣ ಶಾಸಕ ಕೊರೊನಾ ಪರೀಕ್ಷೆ ಮಾಡಿಸಿದ್ದರು. ಆದರೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ನಂತರ ವೈದ್ಯರ ಸಲಹೆ ಮೇರೆಗೆ ಮತ್ತೆ ಸಿಟಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ವೈದ್ಯರು ಹೆಚ್ಚಿನ ಚಿಕಿತ್ಸೆ ಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು ಬೆಂಗಳೂರಿನ ಮಣಿಪಾಲ ಆಸ್ಪತೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕ್ಷೇತ್ರದ ಜನರಿಗೆ ತೊಂದರೆಯಾಗಬಾರದೆಂದು ಬೆಂಗಳೂರಿಗೆ ಬಂದಿರುತ್ತೇನೆ. ಆದಷ್ಟು ಬೇಗನೆ ಗುಣಮುಖನಾಗಿ ಕ್ಷೇತ್ರದ ಜನರ ಕಷ್ಟ-ಸುಖಕ್ಕೆ ಭಾಗಿಯಾಗುತ್ತೇನೆ. ನನ್ನ ಆಪ್ತ ಸಹಾಯಕರ ದೂರವಾಣಿಗೆ ಕರೆಮಾಡಿ ನಿಮ್ಮ ಸಮಸ್ಯೆಗಳಿದ್ದರೆ ತಿಳಿಸಿ ಪರಿಹರಿಸಲು ನಿರ್ದೇಶನ ನೀಡಿರುತ್ತೇನೆ ಎಂದಿದ್ದಾರೆ.

  • ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಹಾಸನ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿಕೊಂಡ ಸೋಂಕಿತರ ಬಳಿ ತೆರಳಿದ ಶಾಸಕ ಬಾಲಕೃಷ್ಣ, ನೀವು ಊರಿಗೆ ಹೋದ ತಕ್ಷಣ ಅಕ್ಕಪಕ್ಕದ ಮನೆಯವರು ಬೇರೆ ರೀತಿ ನಿಮ್ಮನ್ನು ನೋಡಬಹುದು, ಹೀಗಾಗಿ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಕೊರೊನಾ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದಿರುವವರನ್ನು ತಾಲೂಕು ಕೇಂದ್ರದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಬಿಸಿನೀರು, ಮಾಸ್ಕ್ ಸಿಗುತ್ತಿಲ್ಲ. ಕರೆಂಟ್ ಕೂಡ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸೋಂಕಿತರು, ಕ್ವಾರಂಟೈನ್ ಕೇಂದ್ರದಿಂದ ನಮ್ಮನ್ನು ಊರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು.

    ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಲಕೃಷ್ಣ, ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅದನ್ನೆಲ್ಲ ವಿಡಿಯೋ ಮಾಡಿ ವಾಟ್ಸಪ್‍ನಲ್ಲಿ ಹಾಕುತ್ತಾರೆ. ಆರೋಗ್ಯ ಇಲಾಖೆಯವರೇ ಉತ್ತಮ ಸೌಲಭ್ಯ ಕೊಡದೆ ಹಿಂದೆ ಸರಿದರೆ ಹೇಗೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಳಿಹೇಳಿದ್ದಾರೆ. ನಂತರ ಕ್ವಾರಂಟೈನ್‍ನಲ್ಲಿ ಇರುವವರನ್ನು ದಯವಿಟ್ಟು ಅಲ್ಪಸ್ವಲ್ಪ ಲೋಪದೋಷ ಇದ್ದರೆ ಸಹಕರಿಸಿ. ಎಲ್ಲವನ್ನೂ ಸರಿಪಡಿಸಿಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ 6 ಎಲೆಕ್ಟ್ರಿಕಲ್ ಗ್ಯಾಸ್ ಗೀಸರ್ ಗಳು ಮತ್ತು ಬಟ್ಟೆ ತೊಳೆಯುವ ವಾಷಿಂಗ್ ಯಂತ್ರವನ್ನು ತರಿಸಿಕೊಡಲು ವ್ಯವಸ್ಥೆ ಮಾಡಿದ್ದೇನೆ. ಬಲ್ಬ್‌ಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ಎಲ್ಲ ವ್ಯವಸ್ಥೆ ಸರಿಯಾಗಲಿದೆ. ಆಸ್ಪತ್ರೆಯಿಂದ ನೀವು ಗುಣಮುಖರಾದ ರಿಪೋರ್ಟ್ ಕೊಟ್ಟು ಸಹಿ ಮಾಡಿಸಿ ಕಳುಹಿಸಿ ಕೊಡುವವರೆಗೂ ಸಹಕರಿಸಿ ಎಂದಿದ್ದಾರೆ. ಜೊತೆಗೆ ಡ್ರೈ ಪ್ರೂಟ್ಸ್‌ ಹಾಗೂ ಬೇಕರಿ ಪದಾರ್ಥಗಳನ್ನು ತರಿಸಿಕೊಟ್ಟು ಧೈರ್ಯ ತುಂಬಿದ್ದಾರೆ.