Tag: ಬಾಲಕೃಷ್ಣ

  • ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾದ್ರೂ ಕಾಂಗ್ರೆಸ್‌ನಲ್ಲಿ ಈಗ ಗೆರಿಲ್ಲಾ ವಾರ್‌

    ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾದ್ರೂ ಕಾಂಗ್ರೆಸ್‌ನಲ್ಲಿ ಈಗ ಗೆರಿಲ್ಲಾ ವಾರ್‌

    ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾಗಿದ್ದರೂ ಗೆರಿಲ್ಲಾ ವಾರ್ ಬಿಸಿ ಜೋರಾಗಿದೆ. ರಾಜಣ್ಣ ಆಂಡ್ ಸನ್ ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದು, ಸಿಎಂ ಗೇಮ್ ಅಸಲಿ ಆಟ ಚಾಲೂ ಆಗಿದೆ. ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಪವರ್ ಗೇಮ್ ವಾರ್ ಶುರುವಾಗಿದೆ. ಅದರ ಭಾಗವಾಗಿಯೇ ಡಿಕೆಶಿ ವಿರುದ್ಧ ರಾಜಣ್ಣ (Rajanna), ರಾಜಣ್ಣ ಪುತ್ರ ರಾಜೇಂದ್ರ (Rajendra) ವಾಕ್ಸಮರಕ್ಕೆ ಇಳಿದಿದ್ದಾರೆ.

    ತಂದೆ, ಮಗನ ವಾಕ್ಸಮರಕ್ಕೆ ಡಿಕೆ‌ ಶಿವಕುಮಾರ್ (DK Shivakumar) ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಡಿಕೆಶಿ ಆಪ್ತ ಮಾಗಡಿ ಬಾಲಕೃಷ್ಣ (Magadi Balakrishna) ಗಂಭೀರವಾದ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡುತ್ತಿದ್ದಾರೆ. ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ  ಇದನ್ನೂ ಓದಿ:  ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

    ಸಿಎಂ ಸ್ಥಾನಕ್ಕಾಗಿ ಬಿಜೆಪಿ ಕದ ತಟ್ಟುತ್ತಾರೆ ಎನ್ನುವ ಮೂಲಕ ಡಿಕೆಶಿ ವಿರುದ್ದ ರಾಜಣ್ಣ ನಿರ್ಣಾಯಕ ಯುದ್ಧ ಸಾರಲು ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಿಎಂ ಆಗಲು ಬಿಜೆಪಿಗೆ ಹೋಗುತ್ತಾರೆ ಎನ್ನುವುದೇ ಎನ್ನುವುದೇ ಸದ್ಯಕ್ಕೆ ರಾಜಣ್ಣ ಪಾಲಿನ ಸೆಪ್ಟೆಂಬರ್ ಅಸ್ತ್ರ ಎನ್ನಲಾಗುತ್ತಿದೆ.  ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ಡಿಕೆಶಿ ಆರ್‌ಎಸ್‌ಎಸ್‌ ಎಸ್ ಗೀತೆ ಹಾಡಿದ್ದು, ಸಾಫ್ಟ್ ಹಿಂದುತ್ವದ ಇಮೇಜ್ ಬಿಲ್ಡ್ ಆಗಿರುವುದು ಎಲ್ಲವೂ ಸದ್ಯಕ್ಕೆ ರಾಜಣ್ಣ ಪಾಲಿನ ರಾಜಕೀಯ ಅಸ್ತ್ರ. ಸೆಪ್ಟೆಂಬರ್ ಕ್ರಾಂತಿ ಅಂದ್ರೆ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಜೆಪಿ ಬಾಗಿಲು ತಟ್ಟುತ್ತಾರೆ ಎಂಬ ಅಭಿಯಾನ ಜೋರಾಗಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

    ಸಿಎಂ, ಡಿಸಿಎಂ ಇಬ್ಬರದ್ದೂ ಕಾದು ನೋಡಿ ಬಡಿಯುವ ತಂತ್ರ ಆಗಿದ್ದು, ಇಬ್ಬರಿಂದಲೂ ರಹಸ್ಯ ಪ್ಲ್ಯಾನ್ ಜೋರಾಗಿದೆ. ಹಾಗಾಗಿ ಸೆಪ್ಟೆಂಬರ್ ಕ್ರಾಂತಿ ಮಾತುಗಳಲ್ಲಷ್ಟೇ , ರಾಜಕೀಯ ಕ್ರಾಂತಿ ಸಂಕ್ರಾಂತಿ ಬಳಿಕವಷ್ಟೇ ಎಂಬ ಮಾತುಗಳಿದ್ದು ಕೇಳಿಬಂದಿದೆ. ಅಲ್ಲಿ ತನಕ ಪವರ್ ಶೇರ್ ಗೆರಿಲ್ಲಾ ವಾರ್ ಯಾವ ಹಂತ ತಲುಪಲಿದೆ ಎನ್ನುವುದೇ ಸದ್ಯದ ಕುತೂಹಲ.

  • ಸಿದ್ದರಾಮಯ್ಯ ಬಳಿಕ ಡಿಕೆಶಿ ಸಿಎಂ – ಶಾಸಕ ಬಾಲಕೃಷ್ಣ

    ಸಿದ್ದರಾಮಯ್ಯ ಬಳಿಕ ಡಿಕೆಶಿ ಸಿಎಂ – ಶಾಸಕ ಬಾಲಕೃಷ್ಣ

    ಬೆಂಗಳೂರು: ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರು ಸಿಎಂ ಆಗ್ತಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ (Balakrishna) ಹೇಳಿದರು.

    ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ‌ ಪವರ್‌ ಶೇರಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ – ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಅಲರ್ಟ್

    ಶಾಸಕರು ಚರ್ಚೆ ಮಾಡುತ್ತಿಲ್ಲ, ಮಾಧ್ಯಮಗಳಲ್ಲಿ ಚರ್ಚೆ ಆಗ್ತಿದೆ. ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆಶಿ ಆವರು ಸಿಎಂ ಆಗ್ತಾರೆ, ಸಿದ್ದರಾಮಯ್ಯ ಬಳಿಕ ಅವರೇ ಆಗಬೇಕಲ್ವಾ? ಸಿಎಂ ಅಭ್ಯರ್ಥಿ ಬೇರೆ ಯಾರಿದ್ದಾರೆ? ಆದ್ರೆ ಈ ಅವಧಿಯಲ್ಲೇ ಆಗ್ತಾರ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಪ್ರಶ್ನೆ ಮಾಡಿದರು.

    ಒಕ್ಕಲಿಗರ ಸಂಘದಿಂದ ಡಿಕೆಶಿ ಸಿಎಂ ಮಾಡಲು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೊ ಹೇಳಿದ್ರು ಅಂದ ಮಾತ್ರಕ್ಕೆ ಹೇಳಿದವರನ್ನೆಲ್ಲಾ ಸಿಎಂ ಮಾಡೋದಕ್ಕೆ ಆಗಲ್ಲ. ಅವರು ಜಾತಿ ಅಭಿಮಾನದಿಂದ ಹೇಳಿದ್ದಾರೆ. ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಮಾಡ್ತಾರೆ ಎಂದರು. ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

  • ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ನಟಿಯ ಜೊತೆ ಖ್ಯಾತ ನಟ ಬಾಲಕೃಷ್ಣ ದುರ್ವರ್ತನೆ: ಭಿನ್ನ ಪ್ರತಿಕ್ರಿಯೆ

    ತೆಲುಗಿನ ಹೆಸರಾಂತ ನಟ ಬಾಲಕೃಷ್ಣ (Balakrishna) ‘ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಸಿನಿಮಾ ಇವೆಂಟ್ ವೇಳೆ ನಟಿ ಜೊತೆ ದುರ್ವರ್ತನೆ ತೋರಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೇದಿಕೆಯ ಮೇಲೆ ಬಂದ ಬಾಲಕೃಷ್ಣ ನಟಿ ಅಂಜಲಿಯನ್ನು (Anjali) ತಳ್ಳಿದರು. ಕ್ಷಣ ಹೊತ್ತು ಅಂಜಲಿ ಶಾಕ್‍ ಒಳಗಾಗಿ ಆಮೇಲೆ ಸುಧಾರಿಸಿಕೊಳ್ಳುತ್ತಾರೆ. ಈ ವಿಡಿಯೋ ಕುರಿತು ಪರ ವಿರೋಧ ಚರ್ಚೆ ಶುರುವಾಗಿತ್ತು.

    ಬಾಲಕೃಷ್ಣ ವೇದಿಕೆಗೆ ಬರುವ ಮುಂಚೆ ವೇದಿಕೆಯ ಮುಂಭಾಗದಲ್ಲಿ ಕೂತಿದ್ದರು. ಅಲ್ಲಿ ಅವರಿಗೆ ಕುಡಿಯಲು ಮದ್ಯ ಇಡಲಾಗಿತ್ತು. ಮದ್ಯವನ್ನು ನೀರಿನೊಂದಿಗೆ ಬೆರೆಸಿದ್ದ ಬಾಟಲ್ ಪತ್ತೆಯಾಗಿತ್ತು. ಹಾಗಾಗಿ ಕುಡಿದು ಬಾಲಕೃಷ್ಣ ಅವರು ಆ ರೀತಿ ನಡೆದುಕೊಂಡಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು.

     

    ಈ ಕುರಿತಂತೆ ಸಿನಿಮಾ ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದು, ಬಾಲಕೃಷ್ಣ ಅವರು ಕುಡಿದಿರಲಿಲ್ಲ. ಗ್ರಾಫಿಕ್ಸ್ ಮಾಡಿ ಬಾಟಲ್ ಇಡಲಾಗಿದೆ ಎಂದಿದ್ದಾರೆ. ನಟಿ ಅಂಜಲಿ ಕೂಡ ಪ್ರತಿಕ್ರಿಯೆ ನೀಡಿ, ಬೇಕು ಅಂತ ಬಾಲಕೃಷ್ಣ ಅವರು ನನ್ನನ್ನು ತಳ್ಳಿಲ್ಲ. ಅದೊಂದು ಫನ್ನಿ ಸನ್ನಿವೇಶ ಎಂದಿದ್ದಾರೆ. ಈ ಇಬ್ಬರೂ ಬಾಲಕೃಷ್ಣ ಪರವಾಗಿಯೇ ಮಾತನಾಡಿದ್ದಾರೆ.

  • ಶಾಸಕ ರವಿಶಂಕರ್‌ ಷಡ್ಯಂತ್ರದಿಂದ ರೇವಣ್ಣ ಅರೆಸ್ಟ್‌: ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌

    ಶಾಸಕ ರವಿಶಂಕರ್‌ ಷಡ್ಯಂತ್ರದಿಂದ ರೇವಣ್ಣ ಅರೆಸ್ಟ್‌: ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌

    ಹಾಸನ: ಕೆಆರ್‌ ನಗರದ ಕಾಂಗ್ರೆಸ್‌ ಶಾಸಕ ಡಾ. ರವಿಶಂಕರ್‌ (RaviShankar) ಅವರ ಚಿತಾವಣೆಯಿಂದ ಹೆಚ್‌ಡಿ ರೇವಣ್ಣ (HD Revanna) ಮೇಲೆ ಅಪಹರಣ ಪ್ರಕರಣ (Kidnap Case) ದಾಖಲಾದ ಬಳಿಕ ಬಂಧನ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌ ಗಂಭೀರ ಆರೋಪ ಮಾಡಿದ್ದಾರೆ.

    ಹಾಸನದಲ್ಲಿ ಇಂದು ಜೆಡಿಎಸ್ ಜಿಲ್ಲಾಧ್ಯಕ್ಷ,ಮಾಜಿ ಶಾಸಕ ಲಿಂಗೇಶ್‌ ಮತ್ತು ಶ್ರವಣಬೆಳಗೊಳ ಶಾಸಕ  ಸಿ.ಎನ್.ಬಾಲಕೃಷ್ಣ ಅವರು ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?

     

    ವಿಶೇಷ ತನಿಖಾ ತಂಡವನ್ನು (SIT) ಸರ್ಕಾರ ರಚನೆ ಮಾಡಿದ ದಿನವೇ ಒಂದು ಪ್ರಕರಣ ದಾಖಲಾಗುತ್ತದೆ. ಈ ಪ್ರಕರಣದಲ್ಲಿ ಏನು ಇಲ್ಲ. ಸುಲಭವಾಗಿ ಜಾಮೀನು (Bail) ಸಿಗುತ್ತದೆ ಎಂಬ ಕಾರಣಕ್ಕೆ ಮೇ 2 ರಂದು ಕೆ.ಆರ್‌ನಗರ ಶಾಸಕರು ಷಡ್ಯಂತ್ರ ಮಾಡಿ ರೇವಣ್ಣ ಮೇಲೆ ಅಪಹರಣ ಕೇಸ್‌ ಕೊಟ್ಟಿದ್ದಾರೆ. ಈ ಪ್ರಕರಣದ ನಂತರ ಎಸ್‌ಐಟಿ ಬಂಧಿಸಿದೆ ಎಂದು ಲಿಂಗೇಶ್‌ ದೂರಿದರು.

    ಸಿ.ಎನ್.ಬಾಲಕೃಷ್ಣ ಮಾತನಾಡಿ, ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಹಿಂದೆ ಯಾರಿದ್ದಾರೆ? ಆತನ ಜೊತೆ ಟೇಬಲ್‌ ಸಭೆ ಮಾಡಿದವರು ಯಾರು? ರಾಜ್ಯ ಮಟ್ಟದಲ್ಲಿ ದೊಡ್ಡ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆದು ಸತ್ಯಾಂಶ ಆದಷ್ಟು ಬೇಗ ಹೊರಬರಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: T20 ವಿಶ್ವಕಪ್‌ ಟೂರ್ನಿ ಮೇಲೆ ಉಗ್ರರ ಕರಿನೆರಳು – ಪಾಕ್‌ನಿಂದ ಭಯೋತ್ಪಾದಕ ದಾಳಿ ಬೆದರಿಕೆ!

     

    ಪೆನ್ ಡ್ರೈವ್‌ ವಿಚಾರವನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ರೇವಣ್ಣ ಅವರು ಎಲ್ಲಿಯೂ ಅಡಗಿ ಕುಳಿತ್ತಿಲ್ಲ. ಕೇಸ್ ದಾಖಲಾದಾಗಿನಿಂದ ಅವರು ಕ್ಷೇತ್ರದಲ್ಲಿ ಇದ್ದಾರೆ. ರೇವಣ್ಣ ಅವರನ್ನು ಬಂಧನ ಮಾಡುವ ಅವಶ್ಯಕತೆ ಇರಲಿಲ್ಲ. ಅವರು ಹಿರಿಯ ನಾಯಕರು, ಮಾಜಿ ಸಚಿವರಾಗಿರುವ ಕಾರಣ ವಿಚಾರಣೆಗೆ ಕರೆಯಬಹುದಿತ್ತು. ಅವರು ಎಲ್ಲಾ ರೀತಿಯ ತನಿಖೆಗೆ ಸಹಕಾರ ಮಾಡುತ್ತಿದ್ದು ರೇವಣ್ಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

     

  • ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

    ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

    ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಆಗುತ್ತೆ ಎಂಬ ಶಾಸಕ ಬಾಲಕೃಷ್ಣ (Balakrishna) ಹೇಳಿಕೆ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.

    ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಶಾಸಕರಾದ ಸ್ವರೂಪ್, ಸುರೇಶ್ ಬಾಬು, ಕರೆಮ್ಮ ನಾಯಕ್ ಒಳಗೊಂಡ ನಿಯೋಗ ಮುಖ್ಯ ಚುನಾವಣೆ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಮುಂಚೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಗ್ಯಾರಂಟಿ ಹಿನ್ನಲೆ ಜನ ಕಾಂಗ್ರೆಸ್ ಅವರನ್ನ ಆಯ್ಕೆ ಮಾಡಿದ್ರು. ಇತ್ತೀಚೆಗೆ ಶಾಸಕ ಬಾಲಕೃಷ್ಣ ಹೇಳಿಕೆ ಬಹಿರಂಗವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದೇ ಹೋದರೆ ಗ್ಯಾರಂಟಿ ರದ್ದು ಮಾಡೋ ಬಗ್ಗೆ ಮಾತಾಡಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಲವಾರು ಸಮಯದಲ್ಲಿ ಗ್ಯಾರಂಟಿ ಮುಂದಿಟ್ಟುಕೊAಡು ಬ್ಲ್ಯಾಕ್‌ಮೇಲ್ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ. ಇದು ಖಂಡನೀಯ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕೂಡಲೇ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ

    ದೇಶ ವಿಭಜನೆ ಕುರಿತ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಮಾತನಾಡಿ, ಡಿ.ಕೆ.ಸುರೇಶ್ ಅವರದ್ದು ಅಸೂಕ್ಷ್ಮ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರೋರು ಹೀಗೆ ಮಾತಾಡೋದು ಸರಿಯಲ್ಲ. ಸಂಸದರ ಇಂತಹ ಬಾಲಿಶ ಹೇಳಿಕೆ ಖಂಡನೀಯ. ಭಾರತವನ್ನು ಎರಡು ಭಾಗ ಮಾಡೋ ಹೇಳಿಕೆ ಕೊಟ್ಟರೆ ಇದಕ್ಕೆ ಏನ್ ಹೇಳಬೇಕು ಎಂದು ಕಿಡಿಕಾರಿದರು.

    ಯಾರೇ ಜನಪ್ರತಿನಿಧಿಗಳಾದರೂ ಮುಂದೆ ಹೀಗೆ ಮಾತಾಡಬಾರದು. ಕೇಂದ್ರದಿಂದ ಅನುದಾನ ಬರುವಲ್ಲಿ ಅನ್ಯಾಯವಾಗಿದ್ರೆ ಕಾಂಗ್ರೆಸ್ ನಾಯಕರು ಮೋದಿ ಅವರ ಸಮಯ ಪಡೆದು ಅವರ ಬಳಿ ವಿಷಯ ಪ್ರಸ್ತಾಪ ಮಾಡಿ ಮನವರಿಕೆ ಮಾಡಿಕೊಡಲಿ. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ಆಗೋದು ಹಣಕಾಸು ಆಯೋಗದ ನಿರ್ಣಯದ ಮೇಲೆ. ಹಣಕಾಸು ಆಯೋಗದ ರಿಪೋರ್ಟ್ ಮೇಲೆ ಕೇಂದ್ರ ಸರ್ಕಾರ ಅನುದಾನ ನಿರ್ಧಾರ ಮಾಡುತ್ತೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಕೊಟ್ಟಿರುವ ಅನುದಾನ ಎಷ್ಟು ಅಂತ ಕಾಂಗ್ರೆಸ್ ಅವರು ತೆಗೆಯಲಿ. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಜಾಸ್ತಿ ಅನುದಾನ ಕೊಟ್ಟಿದೆ. ಮೋದಿ ಸಮಯ ಪಡೆದು ಅವರ ಬಳಿ ಹೋಗಿ ಮಾತಾಡಿ. ಅದು ಬಿಟ್ಟು ಹೀಗೆ ದೇಶ ವಿಭಜನೆ ಮಾತಾಡೋದು ಸರಿಯಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ

    ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದಕ್ಕೆ ಮಂಡ್ಯದ ಜನರೇ ಉತ್ತರ ಕೊಡ್ತಾರೆ. ಇವರ ಹೇಳಿಕೆಗಳಿಗೆ ಜನರು ಉತ್ತರ ಕೊಡೋ ಸಮಯ ದೂರ ಇಲ್ಲ. ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಈ ಬಾರಿ ಮಂಡ್ಯದಲ್ಲಿ ಜನರು ಜೆಡಿಎಸ್ ಕೈ ಹಿಡಿಯುತ್ತಾರೆ. ಚಲುವಣ್ಣನ ಬಗ್ಗೆ ನಾನು ಮಾತಾಡೊಲ್ಲ ಎಂದು ಕೌಂಟರ್ ಕೊಟ್ಟರು.

  • ಕಾಂಗ್ರೆಸ್ ಘೋಷಣೆಗಳು ಬೋಗಸ್ ಭರವಸೆ: ರೇಣುಕಾಚಾರ್ಯ

    ಕಾಂಗ್ರೆಸ್ ಘೋಷಣೆಗಳು ಬೋಗಸ್ ಭರವಸೆ: ರೇಣುಕಾಚಾರ್ಯ

    – ಮಂತ್ರಾಕ್ಷತೆ ಕೊಟ್ಟಿದ್ದು ಲೋಕ ಕಲ್ಯಾಣಕ್ಕಾಗಿ

    ಬೆಂಗಳೂರು: ಕಾಂಗ್ರೆಸ್ (Congress) ಘೋಷಣೆ ಮಾಡಿರುವ ಭರವಸೆಗಳು ಬೋಗಸ್ ಭರವಸೆಗಳು ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ವಾಗ್ದಾಳಿ ನಡೆಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಘೋಷಣೆ ಮಾಡಿರುವ ಭರವಸೆಗಳು ಬೋಗಸ್. ಅವರು ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದಿದ್ದಾರೆ. ಕೇವಲ 5 ಭರವಸೆಯಲ್ಲ ಸಾಕಷ್ಟು ಭರವಸೆ ಕೊಟ್ಟಿದ್ದಾರೆ. ಅವೆಲ್ಲವೂ ಬೋಗಸ್ ಭರವಸೆಗಳು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆಶಿ ಒತ್ತಾಯ

    ಅನ್ನಭಾಗ್ಯ ಯೋಜನೆಯಲ್ಲಿ ಮೋಸ ಆಗಿದೆ. ಗೃಹಲಕ್ಷ್ಮೀ 60% ಮಹಿಳೆಯರಿಗೆ ತಲುಪಿಲ್ಲ. ಯುವನಿಧಿ 5 ಲಕ್ಷ ಎಂದಿದ್ದರು, ಆದರೆ 3 ಸಾವಿರ ಜನರು ಮಾತ್ರವೇ ನೋಂದಣಿ ಆಗಿದ್ದಾರೆ. ಯುವನಿಧಿ ಸಹ ಫೇಲ್ಯೂರ್ ಆಗಿದೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಗೃಹಜ್ಯೋತಿ ಸಹ ಸಮಸ್ಯೆ ಆಗಿದೆ. ನುಡಿದಂತೆ ಈ ಸರ್ಕಾರ ಎಲ್ಲಿ ನಡೆದಿದೆ ಎಂದು ಅವರು ಪ್ರಶ್ನಿಸಿದ್ದಾರೆ.

    ಬಾಲಕೃಷ್ಣ ಬ್ಲ್ಯಾಕ್‍ಮೇಲ್ ಕೃಷ್ಣ, ಮತದಾರರಿಗೆ ಬ್ಲಾಕ್‍ಮೇಲ್ ಮಾಡ್ತೀರಾ? ಮಂತ್ರಾಕ್ಷತೆ ಕೊಟ್ಟಿದ್ದು ಲೋಕ ಕಲ್ಯಾಣಕ್ಕಾಗಿ ಮಾಡಿದ್ದು. ವೋಟ್‍ಗಾಗಿ ಕೊಟ್ಟಿದ್ದಲ್ಲ. ಜನರಿಗೆ ಒಳ್ಳೆಯದಾಗ್ಲಿ ಎಂದು ಮಂತ್ರಾಕ್ಷತೆ ಕೊಟ್ಟಿದ್ದು. ಈ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಭರವಸೆಗೆ ನಾವು ವಿರುದ್ಧವಾಗಿ ಇಲ್ಲ. ಆದರೆ ನಿನ್ನೆಯ ಹೇಳಿಕೆ ತೀವ್ರವಾಗಿ ಖಂಡಿಸುತ್ತೇನೆ. ಗ್ಯಾರಂಟಿ ಕೊಡಲಾಗದೇ ಇದನ್ನ ಸಿಎಂ ಹಾಗೂ ಡಿಸಿಎಂ ಅವರು ತಮ್ಮ ಶಾಸಕರ ಬಾಯಲ್ಲಿ ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಜನರು ನಿಮಗ್ಯಾಕೆ ಬೆಂಬಲ ಕೊಡಬೇಕು? ಇಷ್ಟು ವರ್ಷ ದೇಶ ಆಳಿಲ್ವಾ? ಹಾಳ್ ಮಾಡಿಲ್ವಾ? ಏನ್ ಗುತ್ತಿಗೆ ಪಡೆದಿದ್ದಾರೆ? ಮತ್ತೊಮ್ಮೆ ಮೋದಿ ಎಂದು ಜನ ಮಾತನಾಡುತ್ತಿದ್ದಾರೆ. ದೇಶದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಕೇಂದ್ರದಲ್ಲಿ ಕೊಟ್ಟ ಭರವಸೆ ಎಲ್ಲಾ ಈಡೇರಿಸಿದ್ದೇವೆ. ಬಾಲಕೃಷ್ಣ ಮತದಾರರಿಗೆ ಬ್ಲಾಕ್‍ಮೇಲ್ ಮಾಡ್ತಿದ್ದಾರೆ. ಲೋಕಸಭಾ ಚುನಾವಣೆಯವರೆಗೂ (2024 Lok Sabha Elections) ಇವರ ಭರವಸೆ ಅಷ್ಟೇ. ಅದು ಅರೆ ಬರೆ ಬೆಂದ ಯೋಜನೆಗಳು. ಅಭಿವೃದ್ಧಿ ಇಲ್ಲ ಎಂದು ನಿಮ್ಮ ಶಾಸಕರೇ ಹೇಳ್ತಿದ್ದಾರೆ. ಜನರು ನಿಮಗೆ ಬುದ್ಧಿ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ಜನ ಮತ ಹಾಕಿಲ್ಲ ಎಂದರೆ ಗ್ಯಾರಂಟಿ ಅವಶ್ಯಕತೆ ಇಲ್ಲಾ ಎಂದರ್ಥ: ಕಾಂಗ್ರೆಸ್ ಶಾಸಕ

  • ಹೆಚ್‍ಡಿಕೆ ಮಾಜಿ ಸಿಎಂ ಆಗಿ ಚಿಲ್ಲರೆ ರೀತಿ ಮಾತಾಡ್ತಾರೆ: ಬಾಲಕೃಷ್ಣ

    ಹೆಚ್‍ಡಿಕೆ ಮಾಜಿ ಸಿಎಂ ಆಗಿ ಚಿಲ್ಲರೆ ರೀತಿ ಮಾತಾಡ್ತಾರೆ: ಬಾಲಕೃಷ್ಣ

    ರಾಮನಗರ: ಕುಮಾರಸ್ವಾಮಿಯವರು (HD Kumaraswamy) ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡ್ತಾರೆ. ಸಿಎಂ, ಡಿಸಿಎಂ ಹಾಗೂ ಸಚಿವರು ಕಳೆದ ಐದು ತಿಂಗಳಿಂದ ಯಾವುದೇ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎಂಬ ಬಾಲಿಶ ಹೇಳಿಕೆ ಕೊಡುತ್ತಾರೆ ಎಂದು ಶಾಸಕ ಬಾಲಕೃಷ್ಣ (HC Balakrishna) ವಾಗ್ದಾಳಿ ನಡೆಸಿದ್ದಾರೆ.

    ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್‍ಡಿಕೆ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ಅವರಿಗೆ ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ. ಅವರು ದೇವೇಗೌಡರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳಿ. ದೇವೇಗೌಡರು ದುಡ್ಡು ತಿಂದಿಲ್ಲ ಎಂದು ಬಂದು ಪ್ರಮಾಣ ಮಾಡ್ತಾರಾ? ಅವರ ಕುಟುಂಬದವರು ದುಡ್ಡು ತಿಂದಿಲ್ಲ ಎಂದರೆ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಮಾಡಿದ್ರೆ ಕತ್ತರಿ ಅವ್ರ ಹೊಟ್ಟೆಯಲ್ಲೇ ಸಿಕ್ಕಿಕೊಳ್ಳುತ್ತೆ – ಬಿಜೆಪಿಗೆ ಶಿವರಾಜ್ ತಂಗಡಗಿ ತಿರುಗೇಟು

    ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು. ಸರಿ ನಾವೆಲ್ಲರೂ ಕಳ್ಳರೇ ಎಂದು ಒಪ್ಪಿಕೊಳ್ಳುತ್ತೇವೆ. ನಾನು ಸತ್ಯಹರಿಶ್ಚಂದ್ರ, ನಾವೇನು ತಿಂದಿಲ್ಲ ಎಂದು ಕುಮಾರಸ್ವಾಮಿ ಆಣೆ ಮಾಡಲಿ. ಆಣೆ ಮಾಡಲು ಅವರು ಇವರನ್ನು ಕರೆಯುವುದಲ್ಲ. ನೀವು ಮೋದಿ ಕರೆಯಿರಿ ಎಂದರೆ ಕರೆಯೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.

    ಇನ್ನೂ ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ, ಅಭಿವೃದ್ಧಿಗಾಗಿ ಬದಲಾವಣೆ ಅನಿವಾರ್ಯವಾಗಿದೆ. ಹೆಚ್‍ಡಿಕೆ ಉಪವಾಸ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಹುಲಿ ಉಗುರು ಲಾಕೆಟ್‌ ಕೇಸ್‌ – ವರ್ತೂರು ಸಂತೋಷ್‌ಗೆ ಜಾಮೀನು ಮಂಜೂರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ- ಬಾಲಕೃಷ್ಣ ಸವಾಲು ಸ್ವೀಕರಿಸಿದ ಹೆಚ್‍ಡಿಕೆ

    ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ- ಬಾಲಕೃಷ್ಣ ಸವಾಲು ಸ್ವೀಕರಿಸಿದ ಹೆಚ್‍ಡಿಕೆ

    ಬೆಂಗಳೂರು: ಧರ್ಮಸ್ಥಳಕ್ಕೆ (Dharmasthala) ಬರಲು ನಾನು ಸಿದ್ಧ ಎಂದು ಹೇಲುವ ಮೂಲಕ ಮಾಗಡಿ ಶಾಸಕ ಬಾಲಕೃಷ್ಣ (MLA Balakrishna) ಸವಾಲನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಗಡಿ ಶಾಸಕ ಬಾಲಕೃಷ್ಣ ಸವಾಲು ಸ್ವೀಕಾರ ಮಾಡ್ತೀನಿ. ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ. ನಮ್ಮ ಕುಟುಂಬ ಯಾರ ಬಳಿಯೂ ಹಣ ತೆಗೆದುಕೊಂಡಿಲ್ಲ. ಚುನಾವಣೆ ಮಾಡೋವಾಗ ನಮ್ಮ ಮನೆಯಿಂದ ಹಣ ಖರ್ಚು ಮಾಡಿಲ್ಲ ಅಂತ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ನಾನು ಮಾಡಿದ ಕೆಲಸಕ್ಕೆ ವಂತಿಕೆ ಕೊಟ್ಟಿರೋದು. ನೀನು ನನ್ನ ಜೊತೆ ಕೆಲಸ ಮಾಡಿದ್ದೀಯಾ..?. 30 ಮಂತ್ರಿಗಳನ್ನ ಕರೆದುಕೊಂಡು ಬಾ. ವರ್ಗಾವಣೆಯಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಬಂದು ಪ್ರಮಾಣ ಮಾಡ್ಲಿ ಎಂದು ಪ್ರತಿ ಸವಾಲೆಸೆದರು.

    5 ತಿಂಗಳಲ್ಲಿ ಸರ್ಕಾರದ ಅವಧಿಯಲ್ಲಿ ವರ್ಗಾವಣೆಯಲ್ಲಿ ಯಾರು ಹಣ ತೆಗೆದುಕೊಂಡಿಲ್ಲ ಅಂತ ಸಿಎಂ, ಡಿಸಿಎಂ ಸೇರಿ 30 ಜನ ಮಂತ್ರಿಗಳು ಬಂದು ಆಣೆ ಮಾಡಲಿ. ಸಿದ್ದರಾಮಯ್ಯ ಕಾಲದಲ್ಲಿ ವರ್ಗಾವಣೆಗೆ ಹಣ ಪಡೆದಿದ್ದಾರೆ. ಚುನಾವಣೆ ನಡೆಸಿದ್ದೇನೆ. ಆದರೆ ವರ್ಗಾವಣೆಯಲ್ಲಿ ಹಣ ವಸೂಲಿ ಮಾಡಿ ಪಕ್ಷ ಕಟ್ಟಿಲ್ಲ. ನಮ್ಮ ನಡವಳಿಕೆ ನೋಡಿ ಕೊಟ್ಟ ದೇಣಿಗೆಯಲ್ಲಿ ಚುನಾವಣೆ ಮಾಡಿದ್ದೇನೆ. ನಾನು ಆಸ್ತಿ ಖರೀದಿ ಬಗ್ಗೆ ಡಿಸಿಎಂ ಮಾತಾಡ್ತಾರೆ. ದೇವೇಗೌಡರನ್ನ ಕೇಳಿ ಅಂತಾರೆ. ರಾಜ್ಯದ ಜನರಿಗೆ ಹೇಳ್ತೀವಿ. ದೇವೇಗೌಡರು ಒಂದು ದಿನ ಅವರ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಿಲ್ಲ. ನಾವು ಈಗ ಆಸ್ತಿ ಮಾಡಿಲ್ಲ. ತಪ್ಪು ದಾರಿಯಲ್ಲಿ ಹಣ ಸಂಪಾದನೆ ಮಾಡಿಲ್ಲ. ತಪ್ಪಾಗಿ ಹಣ ಮಾಡಿದ್ರೆ ತನಿಖೆ ಮಾಡಿ ವಶಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

    ಬಾಲಕೃಷ್ಣ ಹೇಳಿದ್ದೇನು..?: ಕುಮಾರಸ್ವಾಮಿ (HD Kumaraswamy) ಏನೇನೋ ಅರ್ಥವಿಲ್ಲದಂತೆ ಮಾತಾಡ್ತಾರೆ. ಯಾರ ಜಮೀನು ಮೌಲ್ಯ ವೃದ್ಧಿ ಮಾಡಿಕೊಳ್ತಾರೆ.? ಕುಮಾರಸ್ವಾಮಿ ಜಮೀನು ಇಲ್ಲವಾ..? ಕುಮಾರಸ್ವಾಮಿ ಕುಟುಂಬ ಏನು ಸತ್ಯ ಹರಿಶ್ಚಂದ್ರ ಕುಟುಂಬನಾ?. ಸರ್ಕಾರದ ಒಂದು ರೂಪಾಯಿ ದುಡ್ಡನ್ನ ನಾನು ಮತ್ತು ನನ್ನ ಕುಟುಂಬ ಬಳಸಿಕೊಂಡಿಲ್ಲ ಅಂತ ಕುಮಾರಸ್ವಾಮಿ ಧರ್ಮಸ್ಥಳದ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದ್ದರು.

    ಪೊಲೀಸರ ವರ್ಗಾವಣೆಯನ್ನು ಬಿಟ್ಟಿಲ್ಲ. ಪೊಲೀಸರ ವರ್ಗಾವಣೆಯಲ್ಲೂ ಅವರ ಕುಟುಂಬ ದುಡ್ಡು ತೆಗೆದುಕೊಂಡಿದೆ. ಎಲ್ಲರೂ ಗಾಜಿನ ಮನೆಯಲ್ಲಿ ಇರೋದು. ಯಾರು ಕೂಡ ಸತ್ಯ ಹರಿಶ್ಚಂದ್ರರು ಇಲ್ಲ. ಅವಕಾಶ ಸಿಗದೇ ಇರೋನು ಸತ್ಯ ಹರಿಶ್ಚಂದ್ರ ಅಷ್ಟೆ. ಅವಕಾಶ ಸಿಕ್ಕಾಗ ಎಲ್ಲರೂ ಮಾಡಿದ್ದಾರೆ. ಕುಮಾರಸ್ವಾಮಿ ಯಾಕೆ ತಾಜ್ ನಲ್ಲಿ ಇದ್ದರು. ಕುಮಾರಸ್ವಾಮಿ ತಾಜ್ ವೆಸ್ಟ್ ಅಂಡ್ ನಲ್ಲಿ ಇದ್ದಿದ್ದು ಡೀಲ್ ಮಾಡಿಕೊಳ್ಳೋಕೆ. ಸಿದ್ದರಾಮಯ್ಯ ಇದ್ದರು ಅದಕ್ಕೆ ನಾನು ತಾಜ್‍ನಲ್ಲಿ ಇದ್ದೆ ಅಂತಾರೆ. ಕಾವೇರಿಗೆ ಯಾಕೆ ಕಾಯಬೇಕು. ಬೇರೆ ಬಂಗಲೆ ಇರಲಿಲ್ಲವಾ ಎಂದು ಪ್ರಶ್ನಿಸುವ ಮೂಲಕ ಹೆಚ್‍ಡಿಕೆ ವಿರುದ್ಧ ಕಿಡಿಕಾರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ಸೌಂದರ್ಯವಿದ್ದರೂ ಅವಕಾಶವಿಲ್ಲ ಎಂದ ಹನಿ ರೋಸ್ ಫ್ಯಾನ್ಸ್

    ನ್ನ ಬ್ಯೂಟಿಯಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಹನಿ ರೋಸ್ (Honey Rose) ಗೆ ಅವಕಾಶಗಳೇ ಇಲ್ಲವಂತೆ. ಸಖತ್ ಬೋಲ್ಡ್ ಆಗಿರುವಂತಹ ಪಾತ್ರಗಳನ್ನು ಮಾಡಿದರೂ ಅವರಿಗೆ ಅವಕಾಶ ಯಾಕೆ ಹುಡುಕಿಕೊಂಡು ಬರುತ್ತಿಲ್ಲ ಎನ್ನುವುದು ಅವರ ಅಭಿಮಾನಿಗಳ ಚಿಂತೆಯಾಗಿದೆ.

    ಸದಾ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಾಕುತ್ತಾ, ಅಭಿಮಾನಿಗಳ ಕಾಮೆಂಟ್ ಗಳನ್ನು ಎಂಜಾಯ್ ಮಾಡುವ  ಹನಿ ರೋಸ್, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.  ಬಾಲಕೃಷ್ಣ (Balakrishna) ಜೊತೆ ನಟಿಸಿದ್ದ ವೀರ ಸಿಂಹ ರೆಡ್ಡಿ ಚಿತ್ರ ಭಾರೀ ಗೆಲುವು ಕಂಡಿದೆ. ಆದರೂ, ಹನಿಗೆ ಅವಕಾಶವಿಲ್ಲವಂತೆ.

    ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ. ಆದರೂ, ಸಿನಿಮಾ ರಂಗ ನಿಮ್ಮನ್ನು ಗುರುತಿಸುತ್ತಿಲ್ಲವಲ್ಲ ಯಾಕೆ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಾನೆ. ನಿಮ್ಮನ್ನು ಕೇವಲ ಐಟಂ ಸಾಂಗ್ ಗೆ ಮಾತ್ರ ಸೀಮಿತ ಮಾಡಿದ್ದಾರಾ ಎನ್ನುವ ಪ್ರಶ್ನೆಯನ್ನೂ ಹಾಕಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಹನಿ ರೋಸ್ ಅವಕಾಶಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳೇ ನಟಿಗೆ ಎದುರಾಗಿವೆ. ನಿರ್ದೇಶಕರ ಜೊತೆ ಕಿರಿಕ್ ಏನಾದರೂ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಅವಕಾಶಗಳು ನಿಮ್ಮಿಂದ ದೂರವಾಗುತ್ತಿದ್ದಾವಾ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತ ಪಡಿಸಿದ್ದಾರೆ.

    ಸೌಂದರ್ಯದ ಗಣಿಯೇ ಆಗಿರುವ ಹನಿಗೆ ತೂಕ ಇಳಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದಾರೆ. ತೂಕ ಇಳಿಸಿಕೊಂಡರೆ ನಿರ್ದೇಶಕರು ನಿಮ್ಮನ್ನು ಕರೆಯಬಹುದು ಅನಿಸತ್ತೆ. ಅದೊಂದು ಸಲ ಟ್ರೈ ಮಾಡಿ ಎಂದು ಕೆಲವರು ಬಿಟ್ಟಿ ಸಲಹೆ ನೀಡಿದ್ದಾರೆ.

  • ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

    ಆಣೆ-ಪ್ರಮಾಣದ ಪಾಲಿಟಿಕ್ಸ್ ; ಕರ್ಪೂರ ಹಚ್ಚಿ ಪ್ರಮಾಣ ಮಾಡಿದ ಮಾಗಡಿ ಶಾಸಕರ ಪತ್ನಿ

    ರಾಮನಗರ: ವಿಧಾನಸಭಾ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ಶಾಸಕ ಎ. ಮಂಜುನಾಥ್ (A Manjunath) ಪತ್ನಿ ಲಕ್ಷ್ಮಿಆಣೆ ಪ್ರಮಾಣದ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಗಡಿ (Magadi) ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಆರೋಪ – ಪ್ರತ್ಯಾರೋಪದ ಜೊತೆಗೆ ಆಣೆ ಪ್ರಮಾಣದ ಪಾಲಿಟಿಕ್ಸ್ ಕೂಡಾ ಜೋರಾಗಿದೆ. ಕಮಿಷನ್‌ ಆರೋಪದ ಬೆನ್ನಲ್ಲೇ ಬಾಲಕೃಷ್ಣ (Balakrishna) ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿ ಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ.

    ಗುತ್ತಿಗೆದಾರರ ಜೊತೆ ಹಾಲಿ ಶಾಸಕ ಎ.ಮಂಜುನಾಥ್ ಪತ್ನಿ ಪಾಲುದಾರಿಕೆ ಮಾಡಿದ್ದಾರೆ. ಗುತ್ತಿಗೆದಾರರ ಬಳಿ ಕಮಿಷನ್ ಪಡೆಯುತ್ತಿದ್ದಾರೆ. ಕಾರ್ಯಕರ್ತನಿಗೂ ಒಂದು ಸಣ್ಣ ಸಹಾಯ ಮಾಡಿಲ್ಲ ಎಂದು ಬಾಲಕೃಷ್ಣ ಗಂಭೀರ ಆರೋಪ ಮಾಡಿದ್ದರು. ನಾನು ಕಾರ್ಯಕರ್ತರಿಗೆ ಗುತ್ತಿಗೆ ನೀಡಿ ಕೆಲಸ ಮಾಡಿಸುತ್ತೇನೆ. ಆದರೆ ಅಮ್ಮವ್ರು ತಾ.ಪಂ ಸದಸ್ಯನಿಗೆ ಕಾಂಟ್ರಾಕ್ಟ್ ನೀಡಿ ಕಮಿಷನ್ ಪಡೆದಿದ್ದಾರೆ. ಇದ್ಯಾವುದು ನಿಮಗೆ ಗೊತ್ತಿಲ್ವಾ ಎಂದು ಟೀಕಿಸಿದರು. ಇದರಿಂದ ಬಾಲಕೃಷ್ಣ ವಿರುದ್ಧ ರೊಚ್ಚಿಗೆದ್ದ ಶಾಸಕ ಎ.ಮಂಜುನಾಥ್ ಪತ್ನಿಕಿಡಿಕಾರಿದ್ದಾರೆ. ದೇವರ ಮುಂದೆ ಕರ್ಪೂರ ಹಚ್ಚಿ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಮಲ ಹುಟ್ಟುವುದು ಕೆಸರಲ್ಲಿ, ಅರಳಿದ ಮೇಲೆ ಮುದುಡಲೇ ಬೇಕು – ಸುರೇಶ್‌ಗೌಡ

    ಮಾಗಡಿಯ ಇತಿಹಾಸ ಪ್ರಸಿದ್ಧ ರಂಗನಾಥ ಸ್ವಾಮಿ ದೇವಾಲಯಕ್ಕೆ ಬೆಂಬಲಿಗರ ಜೊತೆ ಆಗಮಿಸಿದ ಶಾಸಕ ಎ.ಮಂಜುನಾಥ್ ಪತ್ನಿ ಲಕ್ಷ್ಮಿ, ಅಲ್ಲಿ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಹೇಳಿದ್ದೆಲ್ಲವೂ ಸುಳ್ಳು. ನಾನು ಯಾವ ಕಮಿಷನ್ ವ್ಯವಹಾರದಲ್ಲಾಗಲಿ, ಕಾಂಟ್ರ್ಯಾಕ್ಟ್ ವ್ಯವಹಾರದಲ್ಲಾಗಲೀ ಭಾಗಿಯಾಗಿಲ್ಲ. ನಾನು ಭಾಗಿಯಾಗಿದ್ದರೆ ನನಗೆ ಭಗವಂತ ರಂಗನಾಥಸ್ವಾಮಿ ಶಿಕ್ಷೆ ಕೊಡಲಿ. ಇಲ್ಲವಾದಲ್ಲಿ ನನ್ನ ಮೇಲೆ ಅನಗತ್ಯ ಆರೋಪ ಅಪವಾದ ಮಾಡುತ್ತಿರುವವರನ್ನು ಭಗವಂತ ರಂಗ ಶಿಕ್ಷಿಸಲಿ ಎಂದು ಹೇಳಿ ರಂಗನಾಥಸ್ವಾಮಿ ದೇವಾಲಯ ಮುಂದೆ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ಆರೋಪ ಮಾಡಿ ಶಾಪ ಹಾಕಿಸಿಕೊಂಡು ಉದ್ಧಾರ ಆಗಿರೋದು ಚರಿತ್ರೆನೇ ಇಲ್ಲ. ಎಲ್ಲವನ್ನೂ ದೇವರು‌ ನೋಡಿಕೊಳ್ತಾನೆ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಲಕ್ಷ್ಮಿ ಮಂಜುನಾಥ್‌ ಗುಡುಗಿದ್ದಾರೆ. ಇದನ್ನೂ ಓದಿ: ರಸ್ತೆ ಕಿತ್ತುಬಂದಿಲ್ಲ, ನ್ಯೂನತೆ ಸರಿ ಮಾಡಲಾಗುತ್ತಿದೆ: ಪ್ರತಾಪ್‌ ಸಿಂಹ