Tag: ಬಾಲಕಿ

  • ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿ ಮುಂದೆ ನಿಂತು ಅಸಭ್ಯ ವರ್ತನೆ

    ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿ ಮುಂದೆ ನಿಂತು ಅಸಭ್ಯ ವರ್ತನೆ

    ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ದೆಹಲಿ-ಡೆಹ್ರಾಡೂನ್ ನಡುವೆ ಸಂಚರಿಸುವ ರೈಲಿನಲ್ಲಿ ನಡೆದಿದೆ.

    ದೆಹಲಿಯಿಂದ ಡೆಹ್ರಾಡೂನ್ ಮಾರ್ಗವಾಗಿ ಚಲಿಸುತ್ತಿದ್ದ ನಂದಾದೇವಿ ಎಕ್ಸ್‍ಪ್ರೆಸ್ ರೈಲಿನಲ್ಲಿ ದುಷ್ಕರ್ಮಿಯೊಬ್ಬ ಬಾಲಕಿ ಮುಂದೆ ಅಸಭ್ಯವಾಗಿ ವರ್ತನೆ ಮಾಡಿ, ಲೈಂಗಿಕ ಕಿರುಕುಳವನ್ನು ನೀಡಿದ್ದಾನೆ. ಈ ದೃಶ್ಯಗಳನ್ನು ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ಲಿ ವಿಡಿಯೋ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ರೈಲಿನ ಮಾಹಿತಿ ಆಕೆ ಕುರಿತಿದ್ದ ಸೀಟ್ ನಂಬರ್ ಸಮೇತ ವಿವರಣೆಯನ್ನು ನೀಡಲಾಗಿದೆ. ಪ್ರಸ್ತುತ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆರವುಗೊಳಿಸಲಾಗಿದೆ.

    ಘಟನೆಯ ಕುರಿತು ಬಾಲಕಿಯ ಕುಟುಂಬ ಸದಸ್ಯರು ವಿಡಿಯೋದಲ್ಲಿ ವಿವರಣೆಯನ್ನು ನೀಡಿದ್ದು, ಆರೋಪಿ ಬಾಲಕಿಯ ಬಳಿ ಹೇಗೆ ವರ್ತಿಸಿದ್ದ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಘಟನೆ ವೇಳೆ ಬಾಲಕಿ ಭಯಗೊಂಡು ತನ್ನ ಕುಟುಂಬ ಸದಸ್ಯರಿಗೆ ಈ ವಿಷಯವನ್ನು ತಿಳಿಸಿಲ್ಲ. ಬಾಲಕಿ ಮಲಗಿದ್ದ ಸಿಟ್‍ನ ಮೇಲಿನ ಬೆರ್ತ್‍ನಲ್ಲಿ ಆರೋಪಿ ಮಲಗಿದ್ದ ಎಂಬ ಮಾಹಿತಿಯನ್ನು ವಿಡಿಯೋದಲ್ಲಿ ನೀಡಲಾಗಿದೆ.

    ಘಟನೆಯ ಕುರಿತು ತನಿಖೆಯನ್ನು ನಡೆಸುತ್ತಿದ್ದು, ಬಾಲಕಿಗೆ ಲಿಖಿತ ದೂರು ನೀಡಲು ಸೂಚಿಸಲಾಗಿದೆ. ಇದರಿಂದ ದುಷ್ಕರ್ಮಿಯ ವಿರುದ್ಧ ತನಿಖೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಉತ್ತರ ರೈಲ್ವೆ ಹಿರಿಯ ಅಧಿಕಾರಿ ನೀರಾಜ್ ಶರ್ಮ ತಿಳಿಸಿದರು.

    ವಿಡಿಯೋದಲ್ಲಿ ದುಷ್ಕರ್ಮಿ ಬಾಲಕಿಯ ಎದುರು ಅಸಭ್ಯವಾಗಿ ವರ್ತಿಸಿರುವುದು ಕಾಣುತ್ತದೆ. ಆರೋಪಿಯು ಸಹ ಇದೇ ರೈಲಿನಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಪ್ರಯಾಣ ಬೆಳೆಸಿದ್ದ. ಘಟನೆ ವೇಳೆ ಎಲ್ಲರೂ ನಿದ್ರೆ ಜಾರಿದ್ದು ಇದೇ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಕೃತ್ಯವನ್ನು ಎಸಗಿದ್ದಾನೆ.

  • ಪೇದೆಯಿಂದಲೇ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ರೇಪ್ ಯತ್ನ

    ಪೇದೆಯಿಂದಲೇ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ರೇಪ್ ಯತ್ನ

    ರಾಮ್ಪುರ್: ನಮಗೆ ತೊಂದರೆ ಆದರೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತೇವೆ. ಆದರೆ ಉತ್ತರ ಪ್ರದೇಶದಲ್ಲೊಬ್ಬ ಪೇದೆ ಬೇಲಿಯೇ ಎದ್ದು ಹೊಲ ಮೇದಂತೆ ಎಂಬಂತೆ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಅಮಾನತುಗೊಂಡಿದ್ದಾನೆ.

    ರಾಮ್ಪುರ ಪ್ರದೇಶದಲ್ಲಿರುವ ಕೇಮ್ರಿ ಪೊಲೀಸ್ ಠಾಣೆಯ ಪೇದೆ ಈ ಕೃತ್ಯವನ್ನು ಎಸಗಿದ್ದು, ಆತನ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈತ ಈ ಕೃತ್ಯ ಎಸಗುವಾಗ ಮದ್ಯಪಾನವನ್ನು ಸೇವಿಸಿ ಅಸ್ವಸ್ಥನಾಗಿದ್ದ ಎಂದು ಶಂಕಿಸಲಾಗಿದ್ದು, ಆತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ.

    ಪೊಲೀಸ್ ಪೇದೆಯ ಈ ಕೃತ್ಯ ಎಸಗುವ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶ ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿದೆ.

  • 7 ವರ್ಷದ ಪಾಕ್ ಬಾಲಕಿಗೆ ಮಿಡಿದ ಸುಷ್ಮಾ ಹೃದಯ

    7 ವರ್ಷದ ಪಾಕ್ ಬಾಲಕಿಗೆ ಮಿಡಿದ ಸುಷ್ಮಾ ಹೃದಯ

    ನವದೆಹಲಿ: ಪಾಕಿಸ್ತಾನದ ಕರಾಚಿ ನಗರದ ನಿವಾಸಿಯಾಗಿರುವ 7 ಬಾಲಕಿಗೆ ಭಾರತದಲ್ಲಿ ಚಿಕಿತ್ಸೆ ನೀಡಲು ವೈದ್ಯಕೀಯ ವೀಸಾವನ್ನು ನೀಡಲಾಗಿದೆ.

    ಈ ಕುರಿತು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದು, ನಾವು 7ರ ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ವೈದ್ಯಕೀಯ ವೀಸಾವನ್ನು ನೀಡುತ್ತಿದ್ದು, ಬಾಲಕಿಯ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

    ತನ್ನ ಮಗಳಿಗೆ ವೈದ್ಯಕೀಯ ನೆರವಿನ ಅಗತ್ಯವಿದ್ದು, ಭಾರತಕ್ಕೆ ಆಗಮಿಸಲು ವೀಸಾವನ್ನು ನೀಡುವಂತೆ ಆಗಸ್ಟ್ ತಿಂಗಳಿನಲ್ಲಿ ಬಾಲಕಿಯ ತಾಯಿ ಸುಷ್ಮಾ ಸ್ವರಾಜ್ ಅವರಲ್ಲಿ ಮನವಿ ಮಾಡಿದ್ದರು.

  • ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಟ್ಟು ನಿಂತ ಆಂಬುಲೆನ್ಸ್

    ಬಾಲಕಿಯನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಟ್ಟು ನಿಂತ ಆಂಬುಲೆನ್ಸ್

    ಮಂಡ್ಯ: ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಕೆಟ್ಟುನಿಂತ ಪ್ರಕರಣ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಹೆಬ್ಬೆರೆಳು ಗ್ರಾಮದ ಬೋರಲಿಂಗಯ್ಯ ಮತ್ತು ಕುಮಾರಿ ದಂಪತಿಯ ಪುತ್ರಿ ನಾಲ್ಕು ವರ್ಷದ ಲಾವಣ್ಯ ತೀವ್ರ ಜ್ವರದಿಂದ ಬಳಲುತ್ತಿದ್ದಳು. ಕಳೆದೆರೆಡು ದಿನದಿಂದ ಜ್ವರ ಬರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ವಾಸಿಯಾಗಿರಲಿಲ್ಲ. ಮಧ್ಯರಾತ್ರಿ ಜ್ವರ ಹೆಚ್ಚಾಗಿದ್ದರಿಂದ ಹೆದರಿದ ಪೋಷಕರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

    ತಕ್ಷಣ ಸ್ಥಳಕ್ಕೆ ಬಂದ ಆಂಬುಲೆನ್ಸ್ ಬಾಲಕಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟಿದೆ. ಆದರೆ ಆಸ್ಪತ್ರೆ ಇನ್ನೂ ನಾಲ್ಕು ಕಿಲೋಮೀಟರ್‍ನಷ್ಟು ದೂರವಿರುವಾಗಲೇ ಆಂಬುಲೆನ್ಸ್ ಕೆಟ್ಟುನಿಂತ ಪರಿಣಾಮ ಪೋಷಕರು ಆಟೋದಲ್ಲಿ ಬಾಲಕಿಯನ್ನು ಕರೆದುಕೊಂಡು ಬಂದು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಂಡ್ಯದಲ್ಲಿ ಸರ್ಕಾರಿ ಆಂಬುಲೆನ್ಸ್ ಗಳು ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಕಳೆದ ಹತ್ತು ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಸೆಪ್ಟೆಂಬರ್ 17 ರಂದು ರೋಗಿಯೊಬ್ಬರನ್ನು ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಇಂಡವಾಳು ಗ್ರಾಮದ ಬಳಿ ಕೆಟ್ಟು ನಿಂತಿತ್ತು. ಆಂಬುಲೆನ್ಸ್ ಗಳು ಪದೇ ಪದೇ ಕೆಟ್ಟು ನಿಲ್ಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

  • 2 ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ

    2 ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ

    ವಿಜಯಪುರ: ಬಹಿರ್ದೆಸೆಗೆ ಹೋಗಿದ್ದ ಎರಡು ವರ್ಷದ ಮಗು ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ನಗರದ ಅಂಬೇಡ್ಕರ್ ನಗರದ ನಿವಾಸಿ ಕರೀಷ್ಮಾ ಎಂಬ ಬಾಲಕಿ ಹುಚ್ಚು ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿ. ಕರೀಷ್ಮಾ ಮನೆಯಿಂದ ಬಹಿರ್ದೆಸೆಗೆಂದು ಬಂದಿದ್ದಾಳೆ. ಈ ಸಂದರ್ಭದಲ್ಲಿ ಬಾಲಕಿ ಮೇಲೆ ಹುಚ್ಚು ನಾಯಿ ಎರಗಿ ಕೈ ಕಾಲು, ಹೊಟ್ಟೆ ಭಾಗ ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ಬಾಲಕಿಯ ಸಹಾಯಕ್ಕೆ ಬಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಅಂಬೇಡ್ಕರ್ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ದಾಳಿಗೆ ನಗರದ ನಿವಾಸಿಗರು ಬೇಸತ್ತಿದ್ದಾರೆ. ಅಲ್ಲದೇ ಈಗಾಗಲೇ ಹುಚ್ಚು ನಾಯಿ ದಾಳಿಯಿಂದ ನಗರದ ನಾಲ್ಕು ಜನ ಗಾಯಗೊಂಡಿದ್ದಾರೆ. ಪದೇ ಪದೇ ನಾಯಿ ದಾಳಿ ಆಗುತ್ತಿರುವುದರ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿದ್ದೇವೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ನಾಯಿಗಳ ದಾಳಿ ತಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬಾಲಕಿಯ ಅನುಮಾನಾಸ್ಪದ ಸಾವು- ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೀನೆಂದು ಪತ್ರ

    ಬಾಲಕಿಯ ಅನುಮಾನಾಸ್ಪದ ಸಾವು- ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದೀನೆಂದು ಪತ್ರ

    ಬೆಂಗಳೂರು: 13 ವರ್ಷದ ಬಾಲಕಿಯ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಆನೇಕಲ್ ತಾಲೂಕಿನ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲವರ್ದನಹಳ್ಳಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಚಂದನಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾವನ್ನಪ್ಪಿದ್ದಾಳೆ. ಆದರೆ ಬಾಲಕಿಯ ತಂದೆಗೆ ಬೆದರಿಕೆ ಹಾಕಿರುವ ರೀತಿಯ ಪತ್ರ ದೊರೆತಿದೆ. ಇದು ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಮಿಸ್ಟರ್ ವಾಸುದೇವ್, ನಿನ್ನ ಮಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದೇನೆ. ನಿನ್ನ ಮಗ ನನಗೆ ಸಿಕ್ಕಿದ್ದು ಜಸ್ಟ್ ಮಿಸ್ ಆಗಿದ್ದು ಅವನನ್ನು ಬಿಡುವುದಿಲ್ಲ ಎಂದು ಪತ್ರದಲ್ಲಿ ಸವಾಲ್ ಹಾಕಲಾಗಿದೆ. ನಿನ್ನ ಇನ್ನಿಬ್ಬರು ಮಕ್ಕಳನ್ನೂ ನಾನು ಬಿಡಲ್ಲ ಅಂತಾ ಅನಾಮಧೇಯ ವ್ಯಕ್ತಿ ಪತ್ರದಲ್ಲಿ ಬರೆದಿದ್ದಾರೆ.

  • ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಲಕಿಯ ತಂದೆಗೆ ರಾಡುಗಳಿಂದ ಹಲ್ಲೆ!

    ಮಗಳನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾಲಕಿಯ ತಂದೆಗೆ ರಾಡುಗಳಿಂದ ಹಲ್ಲೆ!

    ಕಾರವಾರ: ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪ್ರಾಪ್ತ ಬಾಲಕಿಯ ತಂದೆಗೆ ರಾಡುಗಳಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿಯ ಮಾರುತಿ ನಗರದಲ್ಲಿ ನೆಡೆದಿದೆ.

    ಟೌನ್ ಶಿಪ್ ನ ವಾಸಿಂ ಸಲೀಂ ಶೇಖ್ ಎಂಬುವವರೇ ಹಲ್ಲೆಗೊಳಗಾದ ವ್ಯಕ್ತಿ. ಇವರನ್ನು ಹುಬ್ಬಳ್ಳಿಯ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

    ವಾಸಿಂ ಸಲೀಂ ಶೇಖ್ ಅವರು ತನ್ನ ಅಪ್ರಾಪ್ತ ಮಗಳಿಗೆ ಚುಡಾಯಿಸಿದ್ದ ಮಾರುತಿ ನಗರದ ಪೈಜಾನ್ ಅಬ್ದುಲ್ ಮಹಾಬ್ ಮನೆಗೆ ತೆರಳಿ ಬುದ್ಧಿವಾದ ಹೇಳಿ ಬಂದಿದ್ದರು. ಆದರೆ ಇದನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಫೈಜಾನ್ ತನ್ನ ಗೆಳೆಯ ಸೈಭಾಸ್ ನೊಂದಿಗೆ ಸೇರಿ ರಾಡುಗಳಿಂದ ಹಲ್ಲೆ ನೆಡೆಸಿದ್ದಾರೆ.

    ಇದನ್ನು ತಪ್ಪಿಸಲು ಬಂದ ಇಮ್ರಾನ್ ಖಾನ್ ಎಂಬುವರ ಮೇಲೂ ಹಲ್ಲೆ ನೆಡೆಸಿದ್ದಾರೆ. ಈ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಫೈಜಾನ್ ತಲೆಮರೆಸಿಕೊಂಡಿದ್ದು ಪೂಲೀಸರು ಆತನನ್ನು ಹುಟುಕಾಟ ನಡೆಸುತ್ತಿದ್ದಾರೆ.

  • ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿ ಕೊಲೆ!

    ಬೆಳಗಾವಿ: ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಕಾಮುಕ ಆರೋಪಿಯನ್ನು ಉದಪ್ಪ ಗಾಣಿಗೇರ(25) ಎಂಬುವುದಾಗಿ ಗುರುತಿಸಲಾಗಿದೆ.

    ಈತ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಮನೆ ಪಕ್ಕದ ತಿಪ್ಪೆಯಲ್ಲಿ ಹೂತು ಹಾಕಿದ್ದನು. ಇತ್ತ ಬಾಲಕಿ ಕಾಣದಿದ್ದಾಗ ಅಕ್ಕ ಪಕ್ಕದವರನ್ನು ಬಾಲಕಿಯ ಮನೆಯವರು ವಿಚಾರಿಸಿದಾಗ ಈ ಘಟನೆ ನಡೆದಿರೋ ಬಗ್ಗೆ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಈ ಸಂಬಂಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10ನೇ ಕ್ಲಾಸ್ ಬಾಲಕಿಯನ್ನ ಕಿಡ್ನಾಪ್ ಮಾಡಿ 120 ಅಡಿ ಮೇಲಿಂದ ಕಾಲುವೆಗೆ ತಳ್ಳಿದ್ರಂತೆ

    10ನೇ ಕ್ಲಾಸ್ ಬಾಲಕಿಯನ್ನ ಕಿಡ್ನಾಪ್ ಮಾಡಿ 120 ಅಡಿ ಮೇಲಿಂದ ಕಾಲುವೆಗೆ ತಳ್ಳಿದ್ರಂತೆ

    ಶಿವಮೊಗ್ಗ: 10ನೇ ಕ್ಲಾಸ್ ಬಾಲಕಿಯನ್ನ ಅಪಹರಣ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಇಲ್ಲಿನ ಗೋಪಾಳ ಬಡಾವಣೆಯ ಈಶ್ವರಿ ಎಂಬಾಕೆಯನ್ನ ಓಮ್ನಿ ಕಾರ್‍ನಲ್ಲಿ ಕಿಡ್ನಾಪ್ ಮಾಡಿ ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆ ಬಳಿ 120 ಅಡಿ ಮೇಲಿಂದ ತುಂಗಾ ನಾಲೆಗೆ ತಳ್ಳಲಾಗಿದೆ. ಅದೃಷ್ಟಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ.

    ಅಸ್ವಸ್ಥ ಬಾಲಕಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ಹೇಳಿಕೆ ಮೇಲೆ ಆಕೆಯನ್ನು ನಾಲೆಗೆ ದೂಡಿದವರು ಯಾರು ಎಂಬ ಬಗ್ಗೆ ತುಂಗಾ ನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.

  • ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

    ಹುಡುಗನೊಂದಿಗೆ ಮಾತಾಡಿದ್ದಕ್ಕೆ 13 ವರ್ಷದ ಮಗಳನ್ನ ಕೊಂದ ತಂದೆ

     

    ಹೈದರಾಬಾದ್: ಮರ್ಯಾದಾ ಹತ್ಯೆಗೆ ತೆಲಂಗಾಣದಲ್ಲಿ 13 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಹುಡುಗನೊಂದಿಗೆ ಮಾತನಾಡುತ್ತಿದ್ದಳೆಂಬ ಕಾರಣಕ್ಕೆ ತಂದೆಯೇ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಶವಕ್ಕೆ ಬೆಂಕಿ ಇಟ್ಟು, ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಗಿ ತೆಲಂಗಾಣ ಪೊಲೀಸರು ಹೇಳಿದ್ದಾರೆ.

    13 ವರ್ಷದ ರಾಧಿಕಾ ಕೊಲೆಯಾದ ದುರ್ದೈವಿ. ಹೈದರಾಬಾದ್‍ನಿಂದ 130 ಕಿ.ಮೀ ದೂರದಲ್ಲಿರುವ ಚಿಂತಪಲ್ಲಿ ಗ್ರಾಮದಲ್ಲಿ ಈ ಮರ್ಯಾದಾ ಹತ್ಯೆ ನಡೆದಿದೆ. ಬಾಲಕಿ ರಾಧಿಕಾ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ರಾಧಿಕಾ ಯಾವಾಗ್ಲೂ ತುಂಬಾ ಉತ್ಸುಕಳಾಗಿರುತ್ತಿದ್ದಳು. ಹಾಡು ಹೇಳೋದು ಅವಳಿಗೆ ತುಂಬಾ ಇಷ್ಟ ಅಂತ ಆಕೆಯ ಕ್ಲಾಸ್‍ಮೇಟ್‍ಗಳು ಹೇಳಿದ್ದಾರೆ.

    ರಾಧಿಕಾ ತಂದೆ ನರಸಿಂಹ ಕೃಷಿಕನಾಗಿದ್ದು, ತನ್ನ ಮಗಳು ಅದೇ ಗ್ರಾಮದ ಹುಡುಗನೊಬ್ಬನೊಂದಿಗೆ ಆಗಾಗ ಮಾತನಾಡುತ್ತಿದ್ದುದನ್ನು ಗಮನಿಸಿದ್ದ. ಸೆಪ್ಟೆಂಬರ್ 15ರಂದು ಸಂಜೆ ರಾಧಿಕಾ ಶಾಲೆ ಮುಗಿದ ನಂತರ ಮನೆಗೆ ಬಂದು, ಮನೆಯಲ್ಲಿ ಯಾರೂ ಇಲ್ಲವಾದ ಕಾರಣ ಹತ್ತಿರದಲ್ಲೇ ಇದ್ದ ಸಂಬಂಧಿಕರ ಮನೆಗೆ ಹೋಗಿದ್ದಳು.

    ರಾಧಿಕಾ ಪೋಷಕರು ಕೆಲಸ ಮುಗಿಸಿ ಹಿಂದಿರುಗಿದ ನಂತರ ರಾಧಿಕಾ ಅದೇ ಹುಡುಗನೊಂದಿಗೆ ಮಾತನಾಡುತ್ತಿದ್ದುದನ್ನು ನೋಡಿದ್ದರು. ಆ ಹುಡುಗನೊಂದಿಗೆ ಮಾತನಾಡುವ ಸಲುವಾಗೇ ಆಕೆ ಸಂಬಂಧಿಕರ ಮನೆಗೆ ಆಗಾಗ ಹೋಗ್ತಿರ್ತಾಳೆ ಎಂದು ಭಾವಿಸಿ, ಈ ಬಗ್ಗೆ ರಾಧಿಕಾಳನ್ನ ಪ್ರಶ್ನಿಸಿದ್ದರು. ಆಗ ರಾಧಿಕಾ ಹಾಗೇ ಸುಮ್ಮನೆ ಮಾತಾಡುತ್ತಿದ್ದೆವು ಅಷ್ಟೇ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ನರಸಿಂಹ, ಕುಟುಂಬದ ಮರ್ಯಾದೆ ಹಾಳು ಮಾಡುತ್ತಿದ್ದೀಯ ಎಂದು ಕೋಪದಲ್ಲಿ ರಾಧಿಕಾಗೆ ಹೊಡೆಯಲು ಶುರುಮಾಡಿದ್ದ. ಕೋಪದಿಂದ ಆಕೆಯ ಕತ್ತು ಹಿಸುಕಿದ್ದ.

    ನಂತರ ಬಾಲಕಿ ಸತ್ತಿದ್ದಾಳೆಂದು ಭಯಗೊಂಡು ತಾಯಿ ಲಿಂಗಮ್ಮ ಹಾಗೂ ತಂದೆ ನರಸಿಂಹ ಶವಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ನಂತರ ಬಾಲಕಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ದೂರು ದಾಖಲಿಸಿದ್ದರು.

    ಆದ್ರೆ ಮಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕಿ ಕೊಲೆಯಾಗಿರುವುದು ದೃಢಪಟ್ಟಿದೆ. ಬಾಲಕಿಯ ನಾಲಗೆ ಹೊರಗೆ ಚಾಚಿದ್ದರಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

    ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಆ ವ್ಯಕ್ತಿ ಅಕ್ಕಪಕ್ಕ ಓಡಾಡಿ ಇತರೆ ವಸ್ತುಗಳಿಗೂ ಬೆಂಕಿ ಹೊತ್ತಿಕೊಳ್ಳುತ್ತದೆ. ಆದ್ರೆ ರಾಧಿಕಾಳ ದೇಹ ಅರ್ಧ ಸುಟ್ಟಿದ್ದು, ಒಂದೇ ಸ್ಥಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಮೊದಲೇ ಆಕೆಯನ್ನು ಕೊಂದು ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಅನುಮಾನವಿತ್ತು ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಬಾಲಿ ಗಂಗಾರೆಡ್ಡಿ ತಿಳಿಸಿದ್ದಾರೆ.

    ತಂದೆ ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಮಗಳನ್ನು ಕೊಲೆ ಮಡಿರುವುದಾಗಿ ತಂದೆ ಒಪ್ಪಿಕೊಂಡಿದ್ದಾನೆ. ರಾಧಿಕಾಳೊಂದಿಗೆ ಮಾತನಾಡುತ್ತಿದ್ದ ಹುಡುಗ ನನ್ನನ್ನು ನೋಡಿ ಓಡಿಹೋದ. ಕುಟುಂಬದ ಮರ್ಯಾದೆ ಹಾಳುಮಾಡುತ್ತಿದ್ದಾಳೆಂಬ ಕೋಪದಲ್ಲಿ ಆಕೆಯನ್ನು ಕೊಂದೆ ಎಂದು ನರಸಿಂಹ ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

    ನರಸಿಂಹ ಯಾವಾಗ್ಲೂ ಬಾಲಕಿಯನ್ನ ಶಿಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದ. ರಾಧಿಕಾಗೆ ಗಾಯಕಿಯಾಗಬೇಕೆಂಬ ಕನಸಿತ್ತು. ಆಕೆ ಸಂಗೀತ ಕಾರ್ಯಕ್ರಮಗಳನ್ನು ನೋಡಿ ಅದನ್ನು ಅನುಕರಿಸುತ್ತಿದ್ದುದನ್ನು ತಂದೆ ವಿರೋಧಿಸುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಪೊಲೀಸರು ರಾಧಿಕಾ ಪೋಷಕರ ವಿರುದ್ಧ ಕೊಲೆ ಹಾಗು ಸಾಕ್ಷಿ ನಾಶ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.