Tag: ಬಾಲಕಿ

  • ಬಾಲಕಿ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಮಾಡಿ ಸ್ನೇಹಿತರಿಗೆ ಶೇರ್ ಮಾಡಿದ 57 ವರ್ಷದ ವ್ಯಕ್ತಿ

    ಬಾಲಕಿ ಮೇಲೆ ಅತ್ಯಾಚಾರವೆಸಗಿ, ವಿಡಿಯೋ ಮಾಡಿ ಸ್ನೇಹಿತರಿಗೆ ಶೇರ್ ಮಾಡಿದ 57 ವರ್ಷದ ವ್ಯಕ್ತಿ

    ಮುಂಬೈ: 57 ವರ್ಷದ ವ್ಯಕ್ತಿಯೊಬ್ಬ 13 ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ತನ್ನ ಹೀನ ಕತ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾನೆ.

    ಮುಂಬೈನ ಜೆಜೆ ಮಾರ್ಗ್ ನಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೋ ಗೇಮ್ ಅಂಗಡಿ ನಡೆಸುತ್ತಿದ್ದ ಆರೋಪಿ ತನ್ನ ಅಂಗಡಿ ಮುಂದೆ ಆಟವಾಡ್ತಿದ್ದ ಹುಡುಗಿಯನ್ನ ನೋಡಿದ್ದಾನೆ. ಈ ಸಂದರ್ಭದ ಲಾಭ ಪಡೆದು ಬಾಲಕಿ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿದ್ದಾನೆ. ಇದನ್ನ ಪೋಷಕರಿಗೆ ತಿಳಿಸಿದ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕಿಗೆ ಬೆದರಿಸಿದ್ದಾನೆ.

    ಗೊತ್ತಾಗಿದ್ದು ಹೇಗೆ?: ಸ್ಥಳೀಯ ನಿವಾಸಿಯೊಬ್ಬರಿಗೆ ಮೆಮೊರಿ ಕಾರ್ಡ್ ಬೇಕಿದ್ದ ಕಾರಣ ಆರೋಪಿಯ ಅಂಗಡಿಯಲ್ಲಿ ಡ್ರಾಯರ್ ಹುಡುಕಿದ್ದು, ಅಡಗಿಸಿಟ್ಟಿದ್ದ ಕಾರ್ಡ್ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ವಿಡಿಯೋ ನೋಡಿದ ನಂತರ ಸಂತ್ರಸ್ತ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿದ್ದು, ಬಳಿಕ ಅವರು ದೂರು ದಾಖಲಿಸಿದ್ದಾರೆ.

    ಸಿಕ್ಕಿಬೀಳುವ ಭಯದಲ್ಲಿ ಆರೋಪಿ ಉತ್ತರಾಖಂಡ್‍ಗೆ ಪರಾರಿಯಾಗಲು ಯತ್ನಿಸಿದ್ದ. ಆದ್ರೆ ಫೋನ್ ಕರೆ ಮೂಲಕ ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಆರೋಪಿ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸ್ನೇಹಿತರಿಗೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ನಿಮ್ಮಪ್ಪ-ಅಮ್ಮ ಕರೀತಿದ್ದಾರೆಂದು ಹೇಳಿ ಶಾಲಾ ಬಾಲಕಿಯನ್ನ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಕೊಂದ

    ನಿಮ್ಮಪ್ಪ-ಅಮ್ಮ ಕರೀತಿದ್ದಾರೆಂದು ಹೇಳಿ ಶಾಲಾ ಬಾಲಕಿಯನ್ನ ಕಿಡ್ನಾಪ್ ಮಾಡಿ ಅತ್ಯಾಚಾರವೆಸಗಿ ಕೊಂದ

    ಹೈದರಾಬಾದ್: ಫ್ಯಾಕ್ಟರಿ ನೌಕರನೊಬ್ಬ 6 ವರ್ಷದ ಶಾಲಾ ಬಾಲಕಿಯನ್ನು ಅಪಹರಣ ಮಾಡಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಮುಪ್ಪಿರೆಡ್ಡಿಪಾಳ್ಯದಲ್ಲಿ ಬುಧವರಾದಂದು ನಡೆದಿದೆ.

    ಬಿಹಾರ ಮೂಲದ ಫ್ಯಾಕ್ಟರಿ ನೌಕರರೊಬ್ಬರ ಮಗಳಾದ ಖುಷ್ಬೂ ಕೊಲೆಯಾದ ಬಾಲಕಿ. ಈಕೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬಿಹಾರ ಹಾಗೂ ಇತರೆ ಸ್ಥಳಗಳಿಂದ ಬಂದ ಕಾರ್ಮಿಕರು ಈ ಗ್ರಾಮದಲ್ಲಿ ವಾಸವಿದ್ದು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾರೆ.

    ಬಿಹಾರ ಮೂಲದವನೇ ಆದ ಫ್ಯಾಕ್ಟರಿ ನೌಕರ ರವಿ(25) ಈ ಕೃತ್ಯವೆಸಗಿದ್ದಾನೆ. ಬಾಲಕಿಯನ್ನ ಶಾಲೆಯಿಂದ ಹೊರಗೆ ಕರೆದ ರವಿ, ನಿನ್ನ ತಂದೆ ತಾಯಿ ಕರೆದುಕೊಂಡು ಬರಲು ಹೇಳಿದ್ದಾರೆಂದು ತಿಳಿಸಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.

    ಬಾಲಕಿಯ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ಶೋಧ ಕಾರ್ಯ ನಡೆಸಿ ಮದ್ಯದ ಅಮಲಿನಲ್ಲಿದ್ದ ರವಿಯನ್ನು ಬಂಧಿಸಿದ್ದಾರೆ. ಖುಷ್ಬುಳನ್ನು ರವಿ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದ್ದ ಮತ್ತೊಬ್ಬ ಬಾಲಕಿ ರವಿಯನ್ನು ಗುರುತಿಸಿದ್ದಾಳೆ. ಬಾಲಕಿಯನ್ನು ಅತ್ಯಾಚಾರವೆಸಗಿ ಕೊಂದಿದ್ದಾಗಿ ವಿಚಾರಣೆ ವೇಳೆ ರವಿ ಒಪ್ಪಿಕೊಂಡಿದ್ದಾನೆ. ಆದ್ರೆ ಆತ ಇನ್ನೂ ಮದ್ಯದ ಅಮಲಿನಲ್ಲಿದ್ದ ಕಾರಣ ಕೃತ್ಯವೆಸಗಿದ ನಿರ್ದಿಷ್ಟ ಸ್ಥಳವನ್ನ ಗುರಿತಿಸಲು ಅಸಾಧ್ಯನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಕುಡಿಯುವ ನೀರಿನ ಯೋಜನೆಯಾದ ಮಿಷನ್ ಭಾಗೀರಥ ಗಾಗಿ ಹಾಕಲಾಗಿರೋ ಪೈಪ್‍ನೊಳಗೆ ಈತ ಬಾಲಕಿಯ ಶವವನ್ನ ಹೂತಿದ್ದಾನೆ. ಮೃತದೇಹವನ್ನ ಪತ್ತೆ ಮಾಡಲು ಕೃತ್ಯ ನಡೆದ ಸ್ಥಳದಲ್ಲಿ ಹುಡುಕಲಾಗ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

    ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

    ಹೈದರಾಬಾದ್: ಸೋಮವಾರದಂದು ತೆಲಂಗಾಣದ ಜಯಶಂಕರ್ ಭೂಪಲಪಲ್ಲಿ ಜಿಲ್ಲೆಯ ಗೋರಿ ಕೋತಪಲ್ಲಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

    7 ವರ್ಷದ ರೇಷ್ಮಾ ಮೃತ ಬಾಲಕಿ. ಸೋಮವಾರದಂದು ರೇಷ್ಮಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಕೇಕ್ ಹಾಗೂ ಹೊಸ ಬಟ್ಟೆ ಖರೀದಿಸಲು ತಂದೆ ರಾಜು ಹಾಗೂ ತಾಯಿ ಪ್ರವಲ್ಲಿಕಾ ಅವರ ಜೊತೆ ಭಾನುವಾರದಂದು ಪಾರ್ಕಲ್‍ಗೆ ಹೋಗಿದ್ದಳು. ಸಂಜೆಗೆ ಗ್ರಾಮದಲ್ಲಿ ಕಾರ್ಯಕ್ರಮವೊಂದು ಇದ್ದಿದ್ದರಿಂದ ಅದನ್ನು ನೋಡಲು ರೇಷ್ಮಾ ತಂದೆಯ ಜೊತೆಗೆ ಹೋಗಿದ್ದಳು. ಈ ವೇಳೆ ಜನಜಂಗುಳಿಯಲ್ಲಿ ಕಾಣೆಯಾಗಿದ್ದಳು.

    ಊರೆಲ್ಲಾ ಹುಡುಕಾಡಿದ ಬಳಿಕ ತಂದೆ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ದೂರು ದಾಖಲಿಸಿದ್ದರು. ಸೋಮವಾರ ಬೆಳಗ್ಗೆ ಬಾಲಕಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಆಕೆ ಎಲ್ಲೂ ಪತ್ತೆಯಾಗಿರಲಿಲ್ಲ . ಕೊನೆಗೆ ಗ್ರಾಮದ ಹೊರವಲಯದಲ್ಲಿ ರೇಷ್ಮಾ ಮೃತದೇಹವನ್ನು ನೋಡಿದ ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ರೇಷ್ಮಾ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಅತ್ಯಾಚಾರದ ಬಗ್ಗೆ ಪೊಲೀಸರು ದೃಢಪಡಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಇನ್ನಷ್ಟೇ ಹೊರಬರಬೇಕಿದೆ.

  • ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

    ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

    ದಾವಣಗೆರೆ: 7 ವರ್ಷದ ಬಾಲಕಿ ಪ್ರಾರ್ಥನಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ನಂದಿನಿ ಸೀರಿಯಲ್ ನೋಡಿ ಅದೇ ರೀತಿ ನಟನೆ ಮಾಡಲು ಹೋಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ನೊಂದ ಪೋಷಕರು ಟಿವಿಯನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 11 ನೇ ತಾರೀಖಿನಂದು ನಡೆದ ಘಟನೆಯಿಂದ ಅಘಾತ ಉಂಟಾಗಿರುವ ಮಗುವಿನ ಪೋಷಕರು ಟಿವಿಯ ಮೇಲೆ ತಮ್ಮ ಆಕ್ರೋಶ ತೋರಿಸಿದ್ದಾರೆ. ನಗು ನಗುತ್ತಾ ಮನೆಯ ತುಂಬಾ ಓಡಾಡುತ್ತಿದ್ದ ಮಗು ಈಗ ಕಾಣದ ಲೋಕಕ್ಕೆ ಹೋಗಿದೆ. ಇದೆಕ್ಕೆಲ್ಲ ಕಾರಣ ಈ ಟಿವಿ, ಇದರಿಂದಲೇ ನಮ್ಮ ಮಗು ಸಾವನ್ನಪ್ಪಿದೆ ಎಂದು ಪ್ರಾರ್ಥನಾ ತಂದೆ ಮಂಜುನಾಥ್ ಕಲ್ಲಿನಿಂದ ಒಡೆದು ಹಾಕಿದ್ದಾರೆ.

    ಅಲ್ಲದೇ ಧಾರಾವಾಹಿಯ ನಿರ್ದೇಶಕರ ಮೇಲೆ ಹಾಗೂ ಸಂಬಂಧಪಟ್ಟವರ ಮೇಲೆ ದೂರು ನೀಡಲು ಹಲವು ಮುಖಂಡರು ಹೇಳಿದ್ದರು. ಆದ್ರೆ ಮಗುವಿನ ಪೋಷಕರು ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಕೂಲಿ ಮಾಡಿ ಜೀವನ ಮಾಡುವ ನಮಗೆ ಕೋರ್ಟು ಕಚೇರಿ ಎಂದು ಓಡಾಡಲು ಆಗುವುದಿಲ್ಲ. ಇರೋ ಇಬ್ಬರು ಮಕ್ಕಳನ್ನು ಹುಷಾರಾಗಿ ಸಾಕುತ್ತೇವೆ ಎಂದು ಪೋಷಕರು ಹೇಳುತ್ತಿದ್ದಾರೆ.

    https://youtu.be/ukbXoVNhqR8

  • ಬಹಿರ್ದೆಸೆಗೆಂದು ಕರೆದುಕೊಂಡು ಹೋಗಿ 5ರ ಬಾಲಕಿಯನ್ನ ಸಜೀವವಾಗಿ ದಹಿಸಿದ್ಳು!

    ಬಹಿರ್ದೆಸೆಗೆಂದು ಕರೆದುಕೊಂಡು ಹೋಗಿ 5ರ ಬಾಲಕಿಯನ್ನ ಸಜೀವವಾಗಿ ದಹಿಸಿದ್ಳು!

    ಬೆಳಗಾವಿ: ಐದು ವರ್ಷದ ಪುಟ್ಟ ಬಾಲಕಿಯನ್ನು ಸಂಬಂಧಿ ಮಹಿಳೆಯೇ ಸಜೀವವಾಗಿ ದಹಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಹಿರೇಬೆಳಕಟ್ಟಿ ಗ್ರಾಮದಲ್ಲಿ ಈ ಹೀನ ಕೃತ್ಯ ನಡೆದಿದೆ. ಮೃತ ದುರ್ದೈವಿ ಬಾಲಕಿಯನ್ನು ರಾಜೇಶ್ವರಿ(5) ಎಂದು ಗುರುತಿಸಲಾಗಿದೆ.

    ಬಹಿರ್ದೆಸೆಗೆ ಹೋಗಿ ಬರೋಣ ಅಂತಾ ಬಾಲಕಿಯ ಸಂಬಂಧಿ ನಿರ್ಮಲಾ(32) ಹತ್ತಿ ಹೊಲಕ್ಕೆ ಕರೆದೊಯ್ದಿದ್ದಳು. ಅಲ್ಲಿ ಬಾಲಕಿ ಕುಳಿತಿದ್ದ ವೇಳೆ ತಲೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.

    ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಾಲಕಿಯನ್ನು ಸಜೀವವಾಗಿ ದಹಿಸಿದ್ದಾಳೆ ಅಂತ ತಿಳಿದುಬಂದಿದೆ. ಸದ್ಯ ಆರೋಪಿ ನಿರ್ಮಲಾಳನ್ನು ದೊಡ್ಡವಾಡ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

  • ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ದಾವಣಗೆರೆ: ಖಾಸಗಿ ವಾಹಿನಿಯಲ್ಲಿನ ಧಾರಾವಾಹಿ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಚೈತ್ರಾ ಮತ್ತು ಮಂಜುನಾಥ ದಂಪತಿಯ ಮಗಳು ಪ್ರಾರ್ಥನಾ (7) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹರಿಹರ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನವೆಂಬರ್ 11 ರಂದು ಈ ಘಟನೆ ನಡೆದಿದೆ.

    ಸೆಂಟ್ ಮೇರಿಸ್ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಪ್ರಾರ್ಥನಾ ಪ್ರತಿದಿನ ಮಧ್ಯಾಹ್ನ ಮರುಪ್ರಸಾರ ಆಗುತ್ತಿದ್ದ ನಂದಿನಿ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಳು. ನವೆಂಬರ್ 11 ಶನಿವಾರ ಮನೆಗೆ ಬಂದವಳೇ ಧಾರಾವಾಹಿ ವೀಕ್ಷಿಸಿದ್ದಾಳೆ. ಈ ಧಾರಾವಾಹಿ ನಾಯಕಿ ಪೇಪರ್ ಹಚ್ಚಿಕೊಂಡು ಕುಣಿಯುವುದನ್ನು ನೋಡಿದ್ದಾಳೆ. ನಾಯಕಿ ಕುಣಿಯುವುದನ್ನು ನೋಡಿ ಪ್ರಾರ್ಥನಾ ಬೆಂಕಿ ಹಂಚಿಕೊಂಡಿದ್ದಾಳೆ.

    ಮನೆಯಲ್ಲಿ ದೊಡ್ಡವರು ಇರಲಿಲ್ಲ:
    ಪ್ರಾರ್ಥನಾ ಪೋಷಕರು ಕೆಲಸಕ್ಕೆ ಹೋಗುತ್ತಿದ್ದು, ಅಜ್ಜಿ ಪ್ರಾರ್ಥನಾಳನ್ನು ಪ್ರತಿದಿನ ಶಾಲೆಯಿಂದ ಮನೆಗೆ ಕರೆತರುತ್ತಿದ್ದರು. ಆಕೆಯನ್ನು ಮನೆಗೆ ತಂದು ಬಿಟ್ಟು ಟಿವಿ ಆನ್ ಮಾಡಿ ಹೊರಗಡೆ ಹೋಗಿದ್ದಾರೆ. ಈ ವೇಳೆ ಪ್ರಾರ್ಥನಾ ಬೆಂಕಿ ಹಚ್ಚಿಕೊಂಡಿದ್ದಾಳೆ.

    ಗೊತ್ತಾಗಿದ್ದು ಹೇಗೆ?
    ಬೆಂಕಿ ಹಚ್ಚಿಕೊಂಡು ವಿಲವಿಲನೇ ಒದ್ದಾಡುವುದನ್ನು ಮನೆಯಲ್ಲೇ ಇದ್ದ ಪ್ರಾರ್ಥನಾ ತಂಗಿ ಮತ್ತು ತಮ್ಮ ನೋಡಿದ್ದಾರೆ. ಕೂಡಲೇ ಅವರು ಅಲ್ಲೇ ಹತ್ತಿರದಲ್ಲಿದ್ದ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಈ ವಿಚಾರ ತಿಳಿದು ಅಜ್ಜಿಯು ಮನೆಗೆ ಧಾವಿಸಿ ನಂತರ ಎಲ್ಲರೂ ಸೇರಿ ಆಕೆಯನ್ನು ತಾಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವೇಳೆ ಪರಿಸ್ಥಿತಿ ಗಂಭೀರವಾಗಿರುವುದನ್ನು ನೋಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ನಂತರ ಪ್ರಾರ್ಥನಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರಾರ್ಥನಾ ನವೆಂಬರ್ 12ರಂದು ಮೃತಪಟ್ಟಿದ್ದಾಳೆ.

    ತಡವಾಗಿ ಬೆಳಕಿಗೆ ಬಂದಿದ್ದು ಹೇಗೆ?
    7 ವರ್ಷದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಪೋಷಕರು ಹಲವು ದಿನಗಳಿಂದ ನೋವಿನಲ್ಲೇ ಇದ್ದರು. ಆದರೆ ಇನ್ನು ಮುಂದೆ ಯಾರಿಗೂ ಈ ರೀತಿ ಆಗದೇ ಇರಲಿ. ಅಷ್ಟೇ ಅಲ್ಲದೇ ಪೋಷಕರಿಗೂ ಈ ವಿಚಾರ ತಿಳಿಯಬೇಕು ಎನ್ನುವ ದೃಷ್ಟಿಯಿಂದ ಪ್ರಾರ್ಥನಾ ಪೋಷಕರೇ ಮಾಧ್ಯಮಗಳಿಗೆ ಈ ಸುದ್ದಿಯನ್ನು  ಬುಧವಾರ ತಿಳಿಸಿದ್ದಾರೆ.

     

    https://youtu.be/ukbXoVNhqR8

     

     

  • ಮೂರೂವರೆ ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದ ಕಾಮುಕನಿಗೆ 10ವರ್ಷ ಜೈಲು, 1ಲಕ್ಷ ರೂ. ದಂಡ

    ಮೂರೂವರೆ ವರ್ಷದ ಬಾಲಕಿಯನ್ನು ರೇಪ್ ಮಾಡಿದ್ದ ಕಾಮುಕನಿಗೆ 10ವರ್ಷ ಜೈಲು, 1ಲಕ್ಷ ರೂ. ದಂಡ

    ಪಾಟ್ನಾ: ಮೂರುವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಕಾಮುಕ ಬಿಕೇಶ್ ಕುಮಾರ್ ಅಲಿಯಾಸ್ ಬಾಲುಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಓಂಪ್ರಕಾಶ್ ಶ್ರೀವತ್ಸವ್ ಈ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಸಂತ್ರಸ್ತ ಬಾಲಕಿ ಕುಟುಂಬಕ್ಕೆ 1 ಲಕ್ಷ ರೂ. ದಂಡ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

    ಅಪರಾಧಿ ಬಿಕೇಶ್ ಕಳೆದ 2013ರ ಜುಲೈ 19ರಂದು ಮೂರೂವರೆ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಈ ಘಟನೆ ಬಿಹಾರದ ನಾವಡ ನಗರದಲಲಿ ನಡೆದಿತ್ತು.

    ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಕಾಮುಕ ಆಕೆಯ ಮೇಲೆ ಬಲವಂತವಾಗಿ ಅತ್ಯಾಚಾರಸವೆಗಿದ್ದನು. ಈ ಸಂಬಂಧ ಬಿಕೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು.

  • ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

    ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

    ಕೋಲ್ಕತ್ತಾ: ತಮ್ಮನ ಎದುರೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಕೊಲೆಗೈದ ಆಘಾತಕಾರಿ ಘಟನೆ ನಡೆದಿದೆ.

    ಈ ಘಟನೆ ಲಾಲ್ ಬಂಧ್ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 19 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಘಟನೆ ವಿವರ: 13 ವರ್ಷದ ಬಾಲಕಿ ಇಂದು ಮುಂಜಾನೆ ತನ್ನ 10 ವರ್ಷದ ತಮ್ಮನೊಂದಿಗೆ ಬಹಿರ್ದೆಸೆಗಾಗಿ ಮನೆಯಿಂದ ಹೊರಗಡೆ ಬಂದಿದ್ದಳು. ಈ ವೇಳೆ ಅದೇ ಪ್ರದೇಶದ ಕಾಮುಕ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಾತ್ರವಲ್ಲದೇ ಆಕೆಯ ದುಪ್ಪಟ್ಟದಿಂದಲೇ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ನಡೆದ ಘಟನೆಯನ್ನು ಮೃತಳ ತಮ್ಮ ಬಂಕಾಪುರದ ಎಸ್ ಪಿ ಸುಖೆಂದು ಹಿರಾ ಅವರಿಗೆ ವಿವರಿಸಿದ್ದಾನೆ. ಬಾಲಕ ನೀಡಿದ ಮಾಹಿತಿಯಂತೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತನಿಖೆಯ ವೇಳೆ ಆರೋಪಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.

  • ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಮನೆಯಲ್ಲಿಯ ದೀಪ ಬಿದ್ದು ಸುಟ್ಟಹೋಯ್ತು ಬಾಲಕಿಯ ಕಾಲು-ಚಿಕಿತ್ಸೆಗೆ ಬೇಕಿದೆ ಸಹಾಯ

    ಕಲಬುರಗಿ: ಜಿಲ್ಲೆಯ ತಾಲೂಕಿನ ನ ಸಾವಳಗಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಶಶಿಕಲಾ ಎಂಬ ಬಡದಂಪತಿ ಮಗಳು ಲಕ್ಷ್ಮೀ ಒಂದೇ ಕಾಲಿನ ಆಸರೆಯಲ್ಲಿ ನಡೆಯುತ್ತಿದ್ದಾಳೆ. ಈ ಬಾಲಕಿ 6 ವರ್ಷದವಳಿದ್ದಾಗ ಮನೆಯಲ್ಲಿನ ಚಿಮುಣಿ(ಕ್ಯಾಂಡಲ್) ಕಾಲಿನ ಮೇಲೆ ಬಿದ್ದು ಕಾಲು ಸಂಪೂರ್ಣ ಸುಟ್ಟಿದೆ. ನಂತರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆಗ ಲಕ್ಷ್ಮೀ ಕಾಲಿನ ಆಪರೇಷನ್‍ಗೆ ಒಂದೂವರೆ ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ಆಗುವದ್ದಾಗಿ ವೈದ್ಯರು ತಿಳಿಸಿದ್ದಾರೆ.

    ಆದರೆ ಕೂಲಿ ಮಾಡಿ ಬದುಕುವ ಈ ಕುಟುಂಬಕ್ಕೆ ಯಾರು ಸಹ ನಯಾ ಪೈಸೆ ಸಹಾಯ ಮಾಡಿಲ್ಲ. ಹೀಗಾಗಿ ಈ ಬಾಲಕಿ ಅಂದಿನಿಂದ ಇಂದಿನವರೆಗೆ ಅಂದ್ರೆ 6 ವರ್ಷದಿಂದ ಒಂದೆ ಕಾಲಿನ ಮೇಲೆ ತನ್ನ ಜೀವನ ಕಳೆಯುತ್ತಿದ್ದಾಳೆ. ಇನ್ನು ಲಕ್ಷ್ಮಿಯ ಚಿಕಿತ್ಸೆಯ ಚಿಂತೆ ಮಾಡುತ್ತ ತಂದೆ ಮಲ್ಲಿನಾಥ್ 2 ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಸದ್ಯ ಲಕ್ಷ್ಮಿಯ ತಾಯಿ ತಮ್ಮ ಮೂರು ಮಕ್ಕಳ ಜೊತೆ ಬಾಡಿಗೆ ಮನೆಯಲ್ಲಿ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಾರೆ.

    ಲಕ್ಷ್ಮಿಯ ಕಾಲಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ರೆ, ಸ್ವಲ್ಪ ಪ್ರಮಾಣದಲ್ಲಿ ಗುಣವಾಗಬಹುದು ನಂತರದ ದಿನಗಳಲ್ಲಿ ಲಕ್ಷ್ಮಿ ತನ್ನ ಕಾಲಿನ ಮೇಲೆ ನಿಲ್ಲಬಹುದು ಅಂತಾ ಬಸವೇಶ್ವರ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ರೆ ಈ ಆಪರೇಷನ್ ಮಾಡಿಸಲು ಕನಿಷ್ಟ ಅಂದ್ರು ಒಂದುವರೆಯಿಂದ-ಎರಡು ಲಕ್ಷ ರೂಪಾಯಿ ಹಣ ಬೇಕಾಗುತ್ತದೆ. ಹೀಗಾಗಿ ಯಾರಾದರೂ ದಾನಿಗಳು ಚಿಕಿತ್ಸಾ ವೆಚ್ಚ ಭರಿಸಿದರೆ ಲಕ್ಷ್ಮಿ ಸಹ ತನ್ನ ಕಾಲಿನ ಮೇಲೆ ತಾನು ಇಲ್ಲಬಹುದು. ಯಾರಾದರೂ ದಾನಿಗಳು ಮುಂದೆ ಬಂದು ಲಕ್ಷ್ಮಿಯ ಚಿಕಿತ್ಸಾ ವೆಚ್ಚ ಭರಿಸಿದ್ರೆ ಈ ಬಾಲಕಿ ಸಹ ಇತರೆ ಮಕ್ಕಳಂತೆ ಜೀವಿಸುತ್ತಾಳೆ.

    https://www.youtube.com/watch?v=wvNc5K2BzGc

  • ಪೂಜೆ ಮಾಡಲೆಂದು ಕರೆಸಿ ಪಕ್ಕದ ಮನೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಾಂತ್ರಿಕ

    ಪೂಜೆ ಮಾಡಲೆಂದು ಕರೆಸಿ ಪಕ್ಕದ ಮನೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಾಂತ್ರಿಕ

     

    ಮುಂಬೈ: ಕಳೆದ 5 ವರ್ಷಗಳಿಂದ ಮನೆಯ ಪಕ್ಕ ವಾಸವಿರೋ ಸ್ವಯಂ ಘೋಷಿತ ಮಾಂತ್ರಿಕನೊಬ್ಬ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿ 17 ವರ್ಷದ ಬಾಲಕಿಯ ತಾಯಿಯೊಬ್ಬರು ಇಲ್ಲಿನ ಪೋವೈ ಪೊಲೀಸ್ ಠಾಣೆಯಲ್ಲಿ ಸೋಮವಾರದಂದು ದೂರು ದಾಖಲಿಸಿದ್ದಾರೆ.

    ದೂರಿನ ಪ್ರಕಾರ ಆರೋಪಿ ನಾಗೇಶ್ ಭಂಡಾರಿ ಸಂತ್ರಸ್ತ ಬಾಲಕಿಯ ಎದುರು ಪೂಜೆ ಮಾಡಲೆಂದು ಆಗಾಗ ಆಕೆಯನ್ನು ಮನೆಗೆ ಕರೆಯುತ್ತಿದ್ದ. ಬಾಲಕಿಯ ವರ್ತನೆಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಕಳೆದ ವಾರ ಆರೋಪಿ ಬಾಲಕಿಯನ್ನ ತನ್ನ ಮನೆಗೆ ಕರೆದಾಗ ತಾಯಿಯೂ ಹಿಂಬಾಲಿಸಿ ಹೋಗಿದ್ದಾರೆ. ಆಗ ಆರೋಪಿಯು ಬಾಲಕಿಯನ್ನ ಅಸಭ್ಯವಾಗಿ ಮುಟ್ಟುತ್ತಿದ್ದುದು ನೋಡಿದ್ದಾರೆ.

    ಬಳಿಕ ಮಗಳನ್ನ ವಿಚಾರಿಸಿದಾಗ 2012 ರಿಂದಲೂ ಆಗಾಗ ಆತ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಬಾಲಕಿ ಹೇಳಿದ್ದಾಳೆ. ಹೀಗಾಗಿ ಕೂಡಲೇ ತಾಯಿ ಪೊಲೀಸರ ಬಳಿ ಹೋಗಿ ದೂರು ದಾಖಲಿಸಿದ್ದಾರೆ.

    ಆರೋಪಿಯು ಈ ಕುಟುಂಬದೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಐಪಿಸಿ ಸೆಕ್ಷನ್ 376, 323, 504, 506 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಕ್ರೈಂ ಬ್ರಾಂಚ್ ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೋವೈ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.